ಒಟ್ಟು 234 ಕಡೆಗಳಲ್ಲಿ , 57 ದಾಸರು , 229 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂ||ಇಂದುವಿನ ವಾರದರ್ಚನೆಸಂದುದು ನಿನ್ನಡಿಗಳಿಂಗೆ ಗ್ರಹಗತಿ ಸೂಚಿಸೆಹಿಂದಣ ಕರ್ಮದ ಫಲವನುಸಂದೇಹವು ಬಿಡದು ಬಿಡಿಸು ವೆಂಕಟರಮಣನೆದುರಿತವನು ಪರಿಹರಿಸು ಸ್ಥಿರಭಕ್ತಿುರಿಸುತಿರುಪತಿಯ ಸ್ಥಿರವಾಸ ಶ್ರೀ ವೆಂಕಟೇಶ ಪಭಯವಾಗುತಿದೆ ದೇವ ಭಯಬಡಿಸುತಿರೆ ಕರ್ಮಭಯವಿಲ್ಲದಿರುವದೆಂತುಭಯನಿವಾರಕನಾಮ ಭಯತಿಮಿರ ರವಿಯಹುದುಭಯ ಹೋಗಿ ಸ್ಥಿರವಾಗಿ ಮನ ನಿಲ್ಲದಿಹುದು 1ಪರಮ ಯೋಗ್ಯನಿಗೊಂದು ಪಿರಿದಾದ ದುಃಖವಿದೆಪರಿಹರಿಸದಾವ ವಿಧದಿಕರಗಿ ಕಂದುತಲಿರಲು ಬಿರಿಸು ಕರ್ಮದ ಗತಿಯುನರಹರಿಯೆ ಮಹಿಮೆಯನು ನೆರೆ ತೋರಿಸೀಗ 2ಭಜನೆಯನು ಮಾಡಿದರೆ ಭಜನೆ ಕಾಮನೆಯಾಗಿನಿಜ ದೊರಕದೆಂಬ ಭಯವುಭಜಿಸಿ ಪಾಪವ ಕಳೆಯೆ ಭಜನೆಯದಕಾಗುವುದುಭಜನೆ ದೇಹದಿ ನಿಂದು ಭವ ತಾನು ನಿಲ್ಲುವುದು 3ಕರ್ಮಕೀ ಪರಿ ಬಲವು ಧರ್ಮವಾಗಿರೆ ಬಲಿತುಕರ್ಮವೇ ಬೆಳೆಯುತಿಹುದುಮರ್ಮವರಿತರು ಬಿಡದು ಹೆಮ್ಮೆಯದು ಬಲ್ಲವಿಕೆಧರ್ಮ ಬರುವದು ನಿನಗೆ ಕರ್ಮವಿದ ಕಡೆಗೊಳಿಸು 4ಇಚ್ಛೆುಂದಿದ ಸೃಜಿಪೆ ುಚ್ಛೆುಂ ಪರಿಹರಿಪೆಇಚ್ಛೆಯೇ ತೋರುತಿಹುದುಇಚ್ಛೈಸಿ ನಿನ್ನಡಿಯನಚ್ಯುತನೆ ಭಜಿಪರಿಗೆ 5ತುಚ್ಛವಾದೀ ಕರ್ಮ ಬಿಚ್ಚದಿಹುದೇನುಗರ್ವ ಬರುವದು ಜನಕೆ ಸರ್ವಗತನೆನಿಸಿದರೆನಿರ್ವಹಿಪೆನೆನಲು ಹೀಗೆಸರ್ವೇಶ ನೀನೊಲಿದು ಸರ್ವದೋಷವ ಕಳೆಯೆಗರ್ವವೆಡೆಗೊಳ್ಳದೈ ಪೂರ್ವದವನೆನಿಸು 6ಸೂತ್ರವನು ನಿರ್ಮಿಸಿದೆ ಸೂತ್ರ ನಿನ್ನಾಧೀನಸೂತ್ರಕ್ಕೆ ಶಕ್ತಿಯೆಂತುಯಾತಕೀ ಕರ್ಮಗತರನು ಮಾಡಿ ಜನರುಗಳ ಪಾತಕರು ಹೊರಗೆಂದು ಯಾತನೆಯ ಮಾಳ್ಪೆ 7ಮೃಷೆಯೆಂದ ಮಾತ್ರದಲಿ ಮೃಷೆಯಾಗದೀ ದುಃಖವಿಷಮವೇ ಬಳಲಿಸುವದುವಿಷವು ಮೊದಲಾಗಿ ತದ್ವಿಷಮ ಕರ್ಮದಿ ಹರವುವಿಷಮವಿದು ನಿನ್ನ ನಿಜದಲಿ ತೊಲಗದೆಂತು 8ಕರುಣಾಕರನೆ ನೀನು ಗುರುಮುಖದಿ ಕರ್ಮಗಳಬರಸೆಳೆದು ಬಯಲಮಾಡೆಮರೆವೆಯಾವರಣವಿರಬೇಕೆ ತಿರುಪತಿವಾಸವರದ ಶ್ರೀ ವಾಸುದೇವಾರ್ಯ ವೆಂಕಟರಮಣ 9ಓಂ ಪಾರ್ಥಸಾರಥಯೇ ನಮಃ
--------------
ತಿಮ್ಮಪ್ಪದಾಸರು
ಕಂತುಪಿತ ಕರುಣಾಕರ ನಿನ್ನ ಚಿಂತೆಯೊಳಗಿರಿಸಿ ಸಲಹಯ್ಯಾ ಜನಾರ್ದನಾ ಪ ಉಣ್ಣದುರಿಯುವಮನವ ನಿನ್ನಡಿದಳಿರನೆಳಲ ತಣ್ಣಸದಲಿರಿಸಿ ಸಲಹಯ್ಯ ಜನಾರ್ದನಾ 1 ವಿಪ್ರ ವಧೆಯಿಂದಲಾದಡಂ ವಿರಚಿಸಿದ ಲಾವಿಕವೆಂದದನೆ ಬಯಸಿ ಬಯಸೀ ದೇವ ಮನಕನವರತ ನಿನ್ನ ಪದ ತೀರ್ಥದಾ ಜೀವನವನಿತ್ತು ಸಲಹಯ್ಯಾ 2 ಭೂಮಿಯದು ಬುಧದಾನ ಸುರದಾನವಾದಡಂ ಆ ಮಹಿಯ ತನ್ನತ್ತ ಸೆಳೆವೆನೆಂದೂ ಕಾಮಿಸುವ ಮನಕೆ ನಿನ್ನಮಲಪಾದಾಂಬುಜವ ಸೀಮೆಯೊಳಗಿರಿಸು ವೈಕುಂಠ ಜನಾರ್ದನಾ 3
--------------
ಬೇಲೂರು ವೈಕುಂಠದಾಸರು
ಕತ್ತೆಯು ನೀನಲ್ಲ ಕರುಣಾಕರನಹೆ ಕತ್ತೆಯಾಗಬೇಡ ಕತ್ತೆಸತ್ಯ ಚಿದಾನಂದ ನೀನರೆ ಮರೆತರೆ ಕತ್ತೆನೀನಾಗುವೆ ಕತ್ತೆ ಪ ಬೊಂಬೆಗೆ ಪ್ರಾಣವನಿಟ್ಟು ದೇವರು ಎಂಬೆ ದೇವರು ಅವು ಕತ್ತೆಬೊಂಬೆಗೆ ಪ್ರಾಣ ಪ್ರತಿಷ್ಠೆಯ ಮಾಡಲು ನೀನಾರು ಹೇಳಲೋ ಕತ್ತೆಬೊಂಬೆ ಸತ್ತವಲ್ಲೊ ಪ್ರಾಣ ತೆಗೆದುಕೊಳ್ಳೆ ನೀರ ಮುಳುಗು ನೀನು ಕತ್ತೆಬೊಂಬೆ ಚೇತನ ಸಾಕ್ಷಾತ್ಕಾರವೆ ಇರೆ ದೇವ ನೀನೆಂತಲ್ಲ ಕತ್ತೆ 1 ಹಿಂದಣ ಪುರಾಣ ಹೇಳುವೆ ನೀನೀಗ ನಿನ್ನ ಪುರಾಣವೆಲ್ಲೊ ಕತ್ತೆಬಂದವನಾರೋ ಹೋಗುವನಾರೋ ಎಂಬುದು ತಿಳಿಯಲಿಲ್ಲ ಕತ್ತೆಬಂದೆಯೋ ಅವಿದ್ಯೆ ದೆಸೆಯಿಂದ ರೂಪಿಗೆ ಜೀವ ನೀನೆನಿಸಿ ಕತ್ತೆಎಂದು ಎಂದಿಗೂ ನೀ ಬ್ರಹ್ಮವೆ ಸತ್ಯವು ಯೋಚನೆ ಬಿಡು ನೀ ಕತ್ತೆ 2 ನಮಕ ಚಮಕ ಅಭಿಷೇಕ ಮಾಡುವಿ ಏನಂತ ಮಾಡುವಿ ಕತ್ತೆಸಮನಿಸಲಿಲ್ಲ ವೇದಾಂತದರ್ಥವು ನಿನಗೆ ಸುಡು ನಿನ್ನ ತಿಳಿವಿಗೆ ಕತ್ತೆಕಮಲಮುಖಿಯ ಸುತರನು ನೀನು ನಂಬುವೆ ಪ್ರಪಂಚ ಸತ್ಯವೇನೋ ಕತ್ತೆಭ್ರಮಣಕ್ಕೆ ಸಿಲುಕಿ ನಾನಾ ಭಂಗಪಡುವೆ ಭಾವಿಸಿ ತಿಳಿನೀ ಕತ್ತೆ 3 ಕನಸಿನನುಭವದಂತೆ ಪ್ರಾರಬ್ಧ ತೋರುವುದು ದೇಹದಾರಿಗಳಿಗೆ ಕತ್ತೆಚಿನುಮಯಾತ್ಮಕನಲ್ಲಿ ಪ್ರಾರಬ್ಧ ತೋರಿಯೆ ತನಗೆ ತಾನಡಗುವುದು ಕತ್ತೆನಿನಗದು ಏನಿಲ್ಲ ಮನಸಿನ ಭ್ರಾಂತಿಯೆನಲನುಭವಿಸುವೆ ಕತ್ತೆ 4 ಪಾದ ತಿಳಿ ತತ್ತ್ವಮಸಿಯನ ಕತ್ತೆಬಂಧಿಸಿ ಆಧಾರ ಚಕ್ರವನೇರು ಏರಿ ನಿಂತು ಭ್ರೂಮಧ್ಯದಿ ಕತ್ತೆಮುಂದೆ ಹರಿಯ ನೋಡು ಸಹಸ್ರಾರದ ಪೀಠ ಛಂದದಿ ಅಡರ್ಮೇಲೆ ಕತ್ತೆಸುಂದರ ಚಿದಾನಂದ ನಾಗಿಯ ಥಳಥಳ ಬೆಳಕಲ್ಲಿ ಬೆಳಕಾಗೊ ಕತ್ತೆ5
--------------
ಚಿದಾನಂದ ಅವಧೂತರು
ಕಮಲ ಲೋಚನನೆ ಎನ್ನತಡಿಯ ಸೇರಿಸೊ ತರಣಿಶತಕೋಟಿ ತೇಜ ಪ ಕಾಕು ಇಂದ್ರಿಯಗಳೆಂಬ ಕಟುಕರಿಗೆ ನಾ ಸಿಲುಕಿಮೇಕೆಯಂದದಿ ಬಾಯಿ ಬಿಡುತಿಪ್ಪೆನುಸಾಕಾರ ರೂಪ ಸರ್ವೋತ್ತಮನೆ ನೀ ಕರುಣಾಕರನೆಂಬ ಪೆಂಪುಂಟಾದಡೀಗೆನ್ನ 1 ಕೇಸರಿ ಎಂಬಛಲ ಬಿರುದು ತಾಳ್ದ ದೇವರ ದೇವ ನೀನೆನ್ನ 2 ಹಾದಿಗಾಣದೆ ತೊಲಗಿ ಪೋಪೆನೆಂದರೆ ಭಾವಬೂದಿಯೊಳಗಾಡಿ ಮುಳುಗಾಡುತಿಹೆನೊಭೂಧರನ ತಾಳ್ದ ಕೂರ್ಮಾವತಾರನೆ ಬಾಡದಾದಿಕೇಶವರಾಯ ಬೆನ್ನಲೆತ್ತಿಕೊಂಡು 3
--------------
ಕನಕದಾಸ
ಕರುಣಾಕರ ಕೃಷ್ಣ ಪ ಮರೆಯದೆ ಕಾಯೊ ಮೊರೆಯಿಡುವೆ ದೇವ ಅ.ಪ. ಸರಸಿಜಾಕ್ಷಸ್ವಾಮಿ ಮೆರೆದ ಸಭೆಯೊಳು ಕರುಣದಿ ಕಾಯ್ದೆಯೊ 1 ಅನಿಮಿತ್ತ ಬಂಧುವೆ ಹರೆ ಅನುದಿನ ಎನ್ನ ಮಾನ ನಿನ್ನಾಧೀನ 2 ಕರಿಗಿರೀಶÀ ಶ್ರೀಶ ದುರುಳನ ಬಾಧೆಯ ಪರಿಹರಿಸೋ ದೇವ 3
--------------
ವರಾವಾಣಿರಾಮರಾಯದಾಸರು
ಕರುಣಾಕರ ದೇವಾ ಶೀತಾ ಚರನೋಕೆ ಕೇಶವಾ ಪ ಪಾತಕಾರಿ ವೋಂ ಪ್ರಸನ್ನಹನುಮನೆ ಪ್ರೀತಿಯೊಳಿರಿಸೆನ್ನಂ ನುತಿಸುವನಾ ನಿನ್ನಂ ಶರಣಂ 1 ಲಂಕಾಪುರದೀ ಕಿಂಕಿಣಿಧಾರಿ ಲಂಕಿಣಿಕೆ ಸಂಹಾರಿ ವಾಹನ ಹೌರ ಬ್ರಹ್ಮಚಾರಿ ಶರಣ ಕರು 2 ಪರಾಂಧಮ ತುಮ ಪ್ರಹ್ಲಾದಾರ್ಚಿತ ಪರಂದೇಹಿ ಸನ್ನಾಸಿ ಗೀರ್ವಾಣಭಾಷಿ | ಶರಣಂ 3
--------------
ಚನ್ನಪಟ್ಟಣದ ಅಹೋಬಲದಾಸರು
ಕರುಣಾಕರ ದೇವಾಧಿ ದೇವಾ ತವ ಪಾದವ ಪ ನೆರೆನಂಬಿದೆ ಜವನಂಜಿಕೆ ಜವದಿ ಓಡಿಸೋ 1 ಮುರಭಂಜನಾ ನರಸಾರಥಿಯೇ ಶಿರಬಾಗಿ ನಾ ಪ್ರಾರ್ಥಿಸುವೆ 2 ಶ್ರೀಶಾಮಸುಂದರ ವಿಠಲಾ ಅಸುರಾಂತಕ ಪಶುಪಾಲಕ 3
--------------
ಶಾಮಸುಂದರ ವಿಠಲ
ಕರುಣಾಕರ ಧರಣೀಧರೇಂದ್ರ ಪ ದಶರಥಸುಪುತ್ರ ಶಶಧರ ಸುವಕ್ತ್ರ ಪಶುಪತಿಮಿತ್ರನೆ ಪೊರೆಯೊ ಎನ್ನನು 1 ವನರುಹದಳಾಕ್ಷ ದನುಭುಜವಿಪಕ್ಷ ಮುನಿಜನ ಸುರಕ್ಷ ರಕ್ಷಿಸೆನ್ನನು ದೇವನೆ 2 ಸುರಜನ ಸುಪೋಷ ಖರಹರ ಸುರೇಶ ನಿರತವು ನಾ ನಿನ್ನ ನಮಿಸುವೆನೈ ಹರೇ 3 ದಾನವಖಂಡನ ಧೇನುಪುರೀಶನೆ ಮಾನವ ಪುಂಗವ ದೇವನೆ ಪೊರೆಯೈ 4
--------------
ಬೇಟೆರಾಯ ದೀಕ್ಷಿತರು
ಕರುಣಾಕರ ಪರಮೇಶ್ವರ ಗುರುತಮ ಕಲ್ಯಾಣಧಾಮ ಪ. ಸುರುಚಿರ ಪೀತಾಂಬರಧರ ನರಕೇಸರಿ ಕರಿವರವರದ ನಮೋ ನಮಃ ಅ.ಪ. ಮಂದರಧರ ಮಧುಸೂದನ ವೃಂದಾವನಸಂಚರಣ ಚಂದ್ರಕೋಟಿಸದೃಶಾನನ ವಂದನೀಯ ನಂದಕುಮಾರವ್ರಜೇಶ್ವರ 1 ಭುಜಗಶಯನ ಭೂತಭಾವನ ಭಜಕಜನೋದ್ಧರಣನಿಪುಣ ಕುಜನಜನಾರಣ್ಯದಹನ ವಾಹನ ಮೋಹನ2 ಮಾತರಿಶ್ವಸಖ ಲೋಕೈಕ ನಾಥ ಲಕ್ಷ್ಮೀನಾರಾಯಣ ವೀತಭಯ ವಿಧಾತ ರುಕ್ಮಿಣೀ- ಪ್ರೀತ ತ್ರಿಗುಣಾತೀತನೆ ಫಲ್ಗುಣಸೂತನೆ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಕರುಣಾಕರ ಪರಮೇಶ್ವರ ಗುರುತಮ ಕಲ್ಯಾಣಧಾಮ ಪ. ಸುರುಚಿರ ಪೀತಾಂಬರಧರ ನರಕೇಸರಿ ಕರಿವರವರದ ನಮೋ ನಮಃ ಅ.ಪ. ಮಂದರಧರ ಮಧುಸೂದನ ವೃಂದಾವನಸಂಚರಣ ಚಂದ್ರಕೋಟಿಸದೃಶಾನನ ವಂದನೀಯ ನಂದಕುಮಾರವ್ರಜೇಶ್ವರ 1 ಭುಜಗಶಯನ ಭೂತಭಾವನ ಭಜಕಜನೋದ್ಧರಣನಿಪುಣ ಕುಜನಜನಾರಣ್ಯದಹನ ವಾಹನ ಮೋಹನ 2 ಮಾತರಿಶ್ವಸಖ ಲೋಕೈಕ ನಾಥ ಲಕ್ಷ್ಮೀನಾರಾಯಣ ವೀತಭಯ ವಿಧಾತ ರುಕ್ಮಿಣೀ- ಪ್ರೀತ ತ್ರಿಗುಣಾತೀತನೆ ಫಲ್ಗುಣಸೂತನೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಕರುಣಾಕರ ಭಕ್ತ ಪಾರಾಯಣ ಸತ್ಯನಾರಾಯಣ ಪ ಭಕ್ತಿ ಭಾವದೆ ನಿನ್ನ ಸೇರಿದೆನು ವ್ರತ ಮಾಡಿದೆನು ಸತ್ಯ ದೇವನೆ ಕೃಪೆ ತೋರುವುದು ವರ ನೀಡುವುದು ಸತ್ಯ ದೇವೇಶನೆÀ ಬೇಡುವೆನು ನುತಿ ಮಾಡುವೆನು 1 ಗಂಧ ಪುಷ್ಪಾಕ್ಷತೆ ದೀಪಗಳಿಂ ಪಂಚಫಲಂಗಳಿಂ ಇಂದಿರೇಶನೆ ನಿತ್ಯ ಭಾವಿಸಿದೆ ವಂದಾರು ಮಂದಾರ ಪಾಲಿಸೆನ್ನನು ಬೇಡಿಕೊಂಬೆನು 2 ಮೌನೀಶ ವಂದ್ಯನೆ ಸರ್ವೇಶನೆ ದೀನಪಾಲಕನೆ ಸುಜ್ಞಾನ ಭಾವಿಪುದು ನಿಜತೋರುವುದು ದಯೆಯಿಂದ ಬಹು ವಿಧದಿಂದ 3
--------------
ಬೇಟೆರಾಯ ದೀಕ್ಷಿತರು
ಕರುಣಾಕರನೀತ ಕರಿಭಯ ಹರಿದಾತ ಹರಿಪರಂದೈವೀತ ಗುರುನಾಥ ಧ್ರುವ ಮೂರುಗುಣರಹಿತ ಮೂರುಲೋಕ ವಂದಿತ ಮುರಹರನಹುದೀತ ಗುರುನಾಥ 1 ಸುರಜನ ಪೂಜಿತ ಪರಮಾನಂದಭರಿತ ತಾರಕನಹುದೀತ ಗುರುನಾಥ 2 ಪತಿತಪಾವನೀತ ಪಿತಾಮಹನ ಪಿತ ದಾತನಹುದೀತ ಗುರುನಾಥ 3 ಅನುದಿನ ಸಾಕ್ಷಾತ ದೀನದಯಾಳುನೀತ ಗುರುನಾಥ 4 ಭಕ್ತವತ್ಸಲನೀತ ಶಕ್ತಸದ್ಗುರುನಾಥ ಮುಕ್ತಿದಾಯಕನೀತ ಗುರುನಾಥ 5 ಜನವನದೊಳಗೀತ ಮನೋಭಾವಪೂರಿತ ಆನಂದೋ ಬ್ರಹ್ಮನೀತ ಗುರುನಾಥ6 ಗುಹ್ಯಕೆ ಗುಹ್ಯನೀತ ಬಾಹ್ಯಂತ್ರ ಸದೋದಿತ ಮಹಾಮಹಿಮನೀತ ಗುರುನಾಥ 7 ಇಹಪರ ನಮಗೀತ ಮಹಿಪತಿ ಪ್ರಾಣನಾಥ ಸಹಾಕರನಹುದೀತ ಗುರುನಾಥ 8
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕರುಣಾಕರಾ ಕಮಲಾರಮಣ ಕರಿರಾಜ ಬಂಧನ ಹರಣಾ ಸುರ ಬ್ರಹ್ಮ ಮುಖಾರ್ಚಿತ ಚರಣಾ ಶರಣಾಗೆಲೋ ದೀನೋದ್ಧರಣಾ ಪ ಅತಿಸುಂದರ ನಂದ ಕುಮಾರಾ ಸುತ ನಾಗೈ ತಂದನು ಮಾರಾ ಅತನೇ ಕುಸುಮದ ಶರೀರಾ ಸುತ ಸದ್ಗುಣ ಗಣ ಮಂದಾರಾ ಪ್ರತಿಯುಗದಲಿ ಧರಿಸೈವತಾರಾ ಕ್ಷಿತಿಯೊಳು ಪಾಲಿಪ ಸುರನಿಕರಾ 1 ಜಲಧಿ ಯೊಳಗೆರಡು ರೂಪಾದೆ ಸಲೆ ವೇದಾಮೃತವನು ತಂದೆ ಬಲಿದೀ ಕ್ರೂರಾಂಗವ ವಿಡಿದೆ ಇಳೆಸಲೆ ಪ್ರಲ್ಹಾದರ ಹೊರೆದೆ ನೆಲೆ ಪ್ರಥಮಾಶ್ರಮದಲಿ ನಿಂದೇ ಬಲಿ ಜಮದಗ್ನ್ಯರ ತೋಷಿಸಿದೆ 2 ಎರಡನೆ ವರ್ಣದೊಳಗೆ ಜನಿಸಿ ಸುರ ಪಾಂಡವರೇಳಿಗೆ ಬಲಿಸಿ ನೆರೆ ಅಂತ್ಯಯುಗದಿ ಅವತರಿಸಿ ಪುರಹರ ದ್ವಿಜರಭಿಮತ ಸಲಿಸಿ ಗುರು ಮಹಿಪತಿ ಪ್ರಭು ಕರುಣಿಸಿ ಹೊರಿಯೋ ನಿನ್ನೆಚ್ಚರ ನಿಲಿಸಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕರುಣಾರಸಮಾರ್ಜಿತ ಸಂತಾಪಂ ಪ ಮುನಿಮಾನಸ ಪೂಜಿತ ನಿರ್ಲೇಪಂ ವನರುಹಾಸನ ಮುಖ್ಯ ವಂದಿತ ಗೌರವಂ ನರ ಪುಂಗವಂ ಮನುಕುಲಾರ್ಚಿತ ಪಾದಪಂಕಜ ರಾಘವಂ ಸುರಧೇನುವಂ 1 ಶೋಭಿತ ಪಾವನ ಕೀರ್ತಿಯುತಂ ಪಶುಪತಿ ಪ್ರಿಯಮವ್ಯಯಂ ಸುರಪೂಜಿತ ಗುಣಭೂಷಿತಂ ಶಶಧರಾನನೆ ಜಾನಕೀ ಪ್ರಿಯ ಭಾಸುರಂ ಕರುಣಾಕರಂ 2 ಖರದೂಷಣ ಶಾಸಕ ದೇವಂ ಶರಣಾಗತ ಸಂರಕ್ಷಣ ನಿರತಂ ಚರಣಪಲ್ಲವನುನ್ನ ದುಂದುಭಿಕಾಯಂ ಅಕ್ಷಯಂ ಅದ್ವಯಂ ಸುರವರಂ ವರಧೇನುನಾಮಕ ನಗರನಾಯಕಂ ಹಾಯಕಂ 3
--------------
ಬೇಟೆರಾಯ ದೀಕ್ಷಿತರು
ಕರುಣಿಸಲಾರೆಯಾ ಇನ್ನಷ್ಟು ನೀ ಸಿರಿಪತಿಯಾ ಪ ಕರುಣಿಸಲಾರೆಯಾ ಕರುಣಾಕರನೆಂಬೊಬಿರುದನುಳಿಸಿಕೊಳ್ಳಲಾರೆಯಾ ನೀನರಿಯಾ ಅ.ಪ. ಬುವಿಯೊಳು ನಿನ್ನ ದಯವಿರದಿರೆ ಕಣಲವಸಹ ಸರಿಯದಯ್ಯಾಭವದೊಳು ದೇವ ನಿನ್ನ ಕೃಪೆಯಾಗಲುಜವದೊಳೀಗಿನ ಸುಖ ಸ್ರವಿಸಿ ಪೋಗುವದಯ್ಯಾ 1 ಈಗೆಲ್ಲ ನಿನ್ನದಯೆದಿಂದೀ ಬಾಳ್ವೆಸಾಗಿದೆ ಬಲ್ಲೆನಯ್ಯಾಹೋಗಿಸಿ ಸಂಸಾರ ಬೇಗುದಿಯನು ನೀನುಬೇಗ ನಿನ್ನ ಧ್ಯಾನಭೋಗವ ನೀಡಯ್ಯಾ 2 ತುಷ್ಟಿಹೊಂದಲು ನೀ ಜೀಯಾ ಕಷ್ಟದ ಪರಿಯಾನಷ್ಟಮಾಡಲು ಅರಿಯಾಸೃಷ್ಟಿಯ ಜೀವಿಗದೃಷ್ಟ ಎಷ್ಟೆಷ್ಟೆಂಬಸ್ಪಷ್ಟ ಸಂಕಲ್ಪವ ಬದಲಿಸಲರಿಯಾ 3 ಎಲ್ಲವು ನಿನ್ನಧಿವಲ್ಲವೇ ಹರಿಯೇಸಲ್ಲದ ಅನುಮಾನಖುಲ್ಲ ದೈವವ ತಿರುವ ಬಲ್ಲೆಯಲ್ಲವೇ ನೀನುಬಲ್ಲೇಕೆ ಮನವನು ಕಲ್ಲು ಮಾಡಿದೆಯಾ 4 ಶರಣೆಂಬ ಜನ ಕೈಯ್ಯಾ ಎಂದೂ ಬಿಡದೆಪೊರೆಯುವೆ ಎಂಬರಯ್ಯಾಧರೆಯೊಳು ಗದುಗಿನ ವೀರನಾರಾಯಣಮರೆಯದೆ ಸಲಹಯ್ಯಾ ಕೇಳ್ವೆನ್ನ ಮೊರೆಯಾ 5
--------------
ವೀರನಾರಾಯಣ