ಮನೋದಣಿಯಾ ಕುಲಮಣಿಯಾ ಪ
ಎಳೆಬಿಸಿಲೊಳು ಥಳ ಥಳಿಸುವಾ ಬೆಳಗಿನಾ|
ಬಳದ ಒಬ್ಬುಳಿಯಂತೆ ದಿನಮಣಿಯಾ|
ಕಳೆಶತ ಮಡಿಯೊಳು ಹೊಳೆವ ರನ್ನಮುಕುಟಾ|
ಝಳ ಝಳಿಸುವ ರಳ ಕಾವಳಿ ದೋರಣಿಯಾ 1
ಚಲಾಚಲ ಭೂತಾವಳಿಗಳ ಸಲಹುವ
ಭ್ರೂಲಲಿತ ಮೃಗಮದಾಂಕಿತದ ಫಣಿಯಾ|
ವಿಮಲತರ ಕಮಲದೆಸಳ ಸುಗಂಗಳ|
ನಾಸಿಕ ಸಂಪಿಗಿ ನೆನಿಯಾ 2
ಎಳೆನಗೆ ಚುಬುಕಾಗ್ರ ಚೆಲುವಾ ಕುಂದರದನಾ|
ಇಳೆಯೊಳು ಕಾಣೆ ಕುಂಡಲಕ ಎಣಿಯಾ|
ಕದಪು ವದನ ಮೋಹನಾರಾಯ|
ಒಲಿವ ಮಹಿಪತಿ ಜನ ಪ್ರಭು ಗುಣಖಣಿಯಾ 3