ಎಂಥಾದ್ದು ರಾಮನ ರೂಪಿನ್ನೆಂಥಾದ್ದು ಪ
ಎಂಥಾದ್ದು ಶ್ರೀರಾಮನ ರೂಪಾ
ನಿಂತು ಭಜಿಪತ್ಯಾನಂದಗೊಳಿಪಾ
ಸಂತ ಕುಮುದ ಮಿತ್ರನು ತಾನೆನಿಪಾ ಆಹಾ
ಚಿಂತಿಪರ ಜಗತ್ರತ್ತಿವಾಸರು ನಿರುತದಿ
ಅಂತರಂಗದ ಜ್ಞÁನ ಚಕ್ಷು ಗೋಚರ ರೂಪಿನ್ನೆಂಥದ್ದು1
ಸುಷ್ಟವಾದನಿಷ್ಟಗಳು ಎಷ್ಟು ಬಳಲಿಪವು ಪಗಲಿರುಳು
ಕಷ್ಟಬಡುತಿಹವಷ್ಟಾಂಗಗಳು ಆಹಾ
ದೃಷ್ಟಗೋಚರ ಸ್ವಾಮಿ ಕಷ್ಟಕಳೆದು ನಮ್ಮ
ನಿಷ್ಟಪೊಯ್ದೋಡಿಸೆ ತುಷ್ಟಗೊಳಿಪ ರೂಪಿನ್ನೆಂಥಾದು 2
ಸ್ಥಿರಮೂರ್ತಿ ನೀನಹುದಲ್ಲೆ ಸುರವೃಂದಕೆ ನೀ ಚೆಂದನಲ್ಲೆ
ಮರುಳು ಮನುಜ ನಾನು ಮರೆದು ಬಳಲಿಪೆನು
ಕರವ ಮುಗಿವೆ ತೋರಂಥಾದು 3