ನಿನ್ನಂಥ ಕರುಣಿಗಳಿನ್ನುಂಟೆ ಭುವಿಯಲ್ಲಿ _ ಧನ್ವಂತರೇ ಪ
ಚೆನ್ನ ಪ್ರಸನ್ನ ನೀನಾಗುತ ಇವಗಿನ್ನುಘನ್ನ ರೋಗವ ಕಳೆದುನ್ನುತ ಸುಖವೀಯೋ ಅ.ಪ.
ಉಪಟಳ - ಕತ್ತರಿಸು ಶೀಘ್ರದೀಹಸ್ತ ಕಲಶಾಮೃತ - ಸ್ರವಿಸಿ ವೇಗದಿ ಅಪಮೃತ್ಯುವ ಹರಿಸಯ್ಯ - ಭಕ್ತಳ ಭರ್ತುವಿನ1
ಆರ್ತರುದ್ಧಾರಿಯೆ - ಭಕ್ತರ ಪರಿಪಾಲಕರ್ತ ಸಂಹರ್ತ - ಮೂರ್ಜಗಕೆಲ್ಲ ನೀನೇನಿತ್ಯಾನಿತ್ಯದ - ಜಗಕೆಲ್ಲ ಸ್ವಾಮಿಯೆಭೃತ್ಯಳ ಮಾಂಗಲ್ಯ - ಘಟ್ಟಿಯೆಂದೆನಿಸೋ 2
ಪ್ರಾಣ ಗುರು ಜಯ - ವಿಠಲ ದಾಸಿಯಪ್ರಾಣನಾಥನ ಪ್ರಾಣ - ಉಳಿಸುವುದೆನುತಪ್ರಾಣ - ಪ್ರಾಣನೆ ಎನ್ನ - ಬಿನ್ನಪವ ಜಗತ್ರಾಣ ಗುರು ಗೋವಿಂದ ವಿಠಲ - ಸಲ್ಲಿಸೋ 3