ಒಟ್ಟು 39 ಕಡೆಗಳಲ್ಲಿ , 12 ದಾಸರು , 38 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವರದ ನಿನ್ನ ರೂಪ ಶ್ರೀ ನಿರುತ ನೋಡುವರೆ ಶ್ರೀ ಸರಸಿಜಭವ ಸಕಲ ಪ ಸುರರು ಮನುಗಳು ಮುನೀಶ್ವರರು ಶ್ರುತಿತತಿ ಯರು ದಿಗ್ವರರು ತಾಕ್ಷ್ರ್ಯಕನ ಮತ[ದವರು] ಅ.ಪ ಪರಭಕ್ತರಿಗೆ ದುಸ್ತರವಾದೊಡೆಯು ಕಾಡುವರಿಷಡ್ವರ್ಗವನೂ ತೊರೆದು ಹೃದಯದಿ ತೀರ್ಥ ಚರಣಾರವಿಂದಗಳಿಂ ನಿರಿಸಿ ಪೂಜಾತಪವನುರೆ ಚರಿಸಿ ವ್ರತಗಳಿಂ1 ಧರೆಯನಳೆದಂಗವೇನಯ್ಯ ಅಂದು ನರನಿಂಗೆ ತೋರಿದುದೆ ಜೀಯಾ ಶರಣರುಗಳೊದೆಯುವ ಕಾಯಾ ನಿನ್ನ ನಿರುಗೆಯನು ತೋರಿಸಲು ಒಡೆಯ ಕಾಣ 2 ಅರಿಯಬರುವುದಿಲ್ಲೀ ಚಿತ್ರಮಯ ಅಲ್ಪ ನರನರಿತರಿಯದವನು ನೆಲೆಯಾ ನೋಡ ಮಾಯಾ ವೇಲಾ ಪುರಿವಾಸ ವೈಕುಂಠ ಚೆನ್ನಕೇಶವರಾಯಾ 3
--------------
ಬೇಲೂರು ವೈಕುಂಠದಾಸರು
ವ್ಯರ್ಥವಾಯಿತಲ್ಲ ಜನ್ಮವು ಸಾರ್ಥಕಾಗಲಿಲ್ಲ ಪ ಅರ್ಥದಾಸೆಯಲಿ ಪೃಥ್ವಿಯೊಳಗೆ ಸುತ್ತಿಮತ್ತನಾಗಿ ಬಲು ಕೃತ್ಯಗಳನು ಮಾಡಿಅ ಹರಿಯ ನೆನಯಲಿಲ್ಲ ಹರುಷದಿ ಗರುವ ಪುಟ್ಟಿತಲ್ಲಪರಮ ಮೂಢರಲಿ ನಿರುತ ಸಂಗವ ಮಾಡಿಗುರು ಹಿರಿಯರ ದಯ ದೊರೆಯದೆ ಸುಮ್ಮನೆ1 ಏನು ಪೇಳಲೇನು ಎನಗೆ ಹೀನ ಬಿಡದು ಮುನ್ನಶ್ವಾನಗಿಂತಲು ಬಲು ಮಾನಗೆಟ್ಟು ನಾದೀನನಾಗಿ ಮನೆಮನೆಗಳ ತಿರುಗಿ 2 ಭಾಗವತರ ಪಾದಕ್ಕೊಂದಿನ ಬಾಗಿ ನಡೆಯಲಿಲ್ಲರಾಗುರಂಗು ಭಕ್ತಿ ಭಾವದೊಳುಬೀಗಿ ಚೆನ್ನಕೇಶವನನು ನೆನೆಯದೆ 3
--------------
ಕನಕದಾಸ
ಶ್ರೀ ರಾಮ ರಘುರಾಮ ಭಾರ್ಗವ ರಾಮಾ ವಿರಚಿತ ಕಾಮ ಮೇಘ ಶ್ಯಾಮ ರಾಮಾ ರಾಮಾ ಪ ದಶರಥ ರಾಮ ಶ್ರೀರವಿಕುಲ ಸೋಮಾ ದಶರೂಪಧರ ರಾಮ ಕೌಸಲೆ ರಾಮಾ ರಾಮಾ 1 ಸಾಮಗಾನ ಪ್ರೇಮ ಕಾಂಚನ ಧಾಮಾ ರಾಮ ನಿಸ್ಸಿಮಾ ಶ್ರೀ ಹಲಧರ ರಾಮಾ ರಾಮಾ 2 ರಾಮ ಸೀತಾರಾಮ ಸದ್ಗುಣಧಾಮಾ ರಾಮ ಶ್ರೀ ಚೆನ್ನಕೇಶವನೆಂಬ ರಾಮಾ ರಾಮಾ 3
--------------
ಕರ್ಕಿ ಕೇಶವದಾಸ
ಶ್ರೀರಾಮರ ಪೂಜಿಸಲಿಲ್ಲ - ಮೈಮರೆತೆನಲ್ಲ ಪ ಬಾಲತ್ವದಲಿ ಬಲು ಲೀಲೆಯಿಂದಲಿ ನಾನುಕಾಲವ ಕಳೆದೆನಲ್ಲ - ಮೈಮರೆತೆನಲ್ಲ 1 ಸತಿಸುತರೆ ಎನಗೆ ಗತಿಯೆಂದು ತಿಳಿದು ನಾನುಮತಿಗೆಟ್ಟು ಭ್ರಾಂತನಾದೆನಲ್ಲ - ಮೈಮರೆತೆನಲ್ಲ 2 ಹೊನ್ನ ಗಳಿಸಿ ಪರರಿಗೆ ಅನ್ನವಿಕ್ಕಲಿಲ್ಲಚೆನ್ನಕೇಶವನ ನಂಬಲಿಲ್ಲ - ಮೈಮರೆತೆನಲ್ಲ3
--------------
ಕನಕದಾಸ
ಹರಿಯೇ ನಿನ್ನಯ ಭಕ್ತಿಯದರವೊಂದುಳಿದು ನಾ ಸಿರಿಯರಸನೆ ನಿನ್ನೊಳನ್ಯ ಕೇಳೆನು ರಂಗಾ ಪ ಪತಿ ಬೇಡ ಸುತೆ ಬೇಡ ಸತತ ಶ್ರೀ ಹರಿ ನಿನ್ನ ದ್ಯಾನವ ಕೊಡಲೋ 1 ಭವ ಬೇಡ ಪತಿತ ಪಾವನ ನಿನ್ನ ಸ್ತೋತ್ರವ ಕಲಿಸೋ 2 ಕರಿ ಬೇಡ ಹಣ ಬೇಡ ಮನೆ ಬೇಡ ಸಿರಿ ಚೆನ್ನಕೇಶವನ ಮಹಿಮೆಯ ತಿಳಿಸೋ 3
--------------
ಕರ್ಕಿ ಕೇಶವದಾಸ
ಹಿರಣ್ಯಾ ಸುರಹರÀನೇ ಪ ದುರುಳ ದೈತ್ಯನು ಧಾರುಣಿಯನು ಬಾಧಿಸಲಾಗ ಹಿರಣ್ಯನ ಕೊಂದು ದೇವಿಯನು ಪಾಲಿಸಿದೇ 1 ತರಳ ಪ್ರಲ್ಹಾದನು ಮೊರೆಯಿಡುತಿರಲಾಗ ನರಸಿಂಹರೂಪದಿ ಬಂದು ಪಾಲಿಸಿದೇ 2 ಕನಕಾಸುರನು ತನ್ನ ಕಂದನ ಕೆಣಕಲು ದನುಜನ ಬಗೆದ ಶ್ರೀ ಚೆನ್ನಕೇಶವನೇ 3
--------------
ಕರ್ಕಿ ಕೇಶವದಾಸ
ಮಗನೆಂದಾಡಿಸುವಳು | ಮೊಗ ನೋಡಿ ನಗುವಳು ಪಜಗದುದ್ಧಾರನ ಮೊಗ ಮೊಗದೊಳಿರಿಸಿಕೊಂಡು ಅ.ಪಕಾಲಲಂದುಗೆ ಗೆಜ್ಜೆ ತೋಳ ಮಣಿಯು ದಂಡೆಫಾಲದ ಅರಳೆಲೆಯು ಕುಣಿಯೆನೀಲದುಡುಗೆಯಿಟ್ಟ ಬಾಲನೆ ಬಾರೆಂದುಪಾಲುಣಿಸುವ ಪುಣ್ಯವೆಂತು ಪಡೆದಳಯ್ಯ 1ಬಣ್ಣದ ಸರಗಳಿಡೆ ರನ್ನದ ನೇವಳಹೊನ್ನ ಘಂಟೆಯು ಘಣ ಘಣರೆನಲುಪನ್ನಗಶಯನನೆ ಕುಣಿಯೊಮ್ಮೆ ಕುಣಿಯೆಂದುಕುಣಿಸಿ ನಗುವ ಪುಣ್ಯವೆಂತು ಪಡೆದಳಯ್ಯ 2ಕುಕ್ಷಿಯೊಳೀರೇಳು ಜಗವನು ಸಲಹುವರಕ್ಷಿಪರುಂಟೆ ತ್ರೈಜಗದೊಳಗೆಪಕ್ಷಿವಾಹನ ನೀನು ಅಂಜಬೇಡೆನುತಲಿರಕ್ಷೆಯಿಡುವ ಪುಣ್ಯವೆಂತು ಪಡೆದಳಯ್ಯ 3ಶಂಕ ಚಕ್ರಗದಾ ಪದುಮಧಾರಕನಪಂಕಜಮಿತ್ರಶತಕೋಟಿ ತೇಜನನುಸಂಖ್ಯೆಯಿಲ್ಲದ ಆಭರಣಗಳ ತೊಡಿಸಿ ಅಲಂಕರಿಸುವ ಪುಣ್ಯವೆಂತು ಪಡೆದಳಯ್ಯ 4ಸಾಗರಶಯನು ಭೋಗೀಶನ ಮೇಲೆಯೋಗನಿದ್ದೆಯೊಳಿಪ್ಪ ದೇವನನುಆಗಮನಿಗಮಗಳರಸ ಕಾಣದ ವಸ್ತುತೂಗಿ ಪಾಡುವ ಪುಣ್ಯವೆಂತು ಪಡೆದಳಯ್ಯ 5ಪನ್ನಗಶಯನ ಉನ್ನಂತ ಮಹಿಮನಸನ್ನುತಭಕುತರ ಸಲಹುವನಪನ್ನಗಾರಿವಾಹನದೇವರ ದೇವಚೆನ್ನಕೇಶವನ ಪಡೆದಳಯ್ಯಾ * 6
--------------
ಪುರಂದರದಾಸರು
ಸ್ವಾಮಿಪರಾಕುಮಹಾಸ್ವಾಮಿ ಸಜ್ಜನಪ್ರೇಮಿಪ.ಕ್ಷೀರಸಾಗರಶಯನ ನಿವಾಸಾಪಾರಗುಣಗಣಾಶ್ರಯಪಾರಮೇಷ್ಠಿ ಪ್ರಮುಖಾಮರಪೂಜಿತಚಾರುಪದಾಬ್ಜದ್ವಯ ದನು-ಜಾರಿ ಧನಂಜಯಪ್ರಿಯ ಮದವಾರಣಕೃತನಿರ್ಭಯ ನಮ್ಮದೂರನುಲಾಲಿಸುಚಿನ್ಮಯ ಜಯ1ದುಷ್ಟ ನಿಶಾಚರರಟ್ಟುಳಿಘನಕಂಗೆಟ್ಟುದು ಸುರಮುನಿಗಣ ಆಭ್ರಷ್ಟರು ಮಾಡುವ ನಿಷ್ಠುರಕೆ ಮೈಗೊಟ್ಟೆವು ಸಂಕರ್ಷಣ ನಾವಿ-ನ್ನೆಷ್ಟೆಂಬುದು ದುರ್ಗುಣವಶ ಬಿಟ್ಟೆವು ಸುರಪಟ್ಟಣ ನಮ್ಮಕಷ್ಟವು ಪದಕರ್ಪಣ ಪರಾಯಣ 2ಅಂತರಂಗ ಬಹಿರಂಗ ಭ್ರಷ್ಟದನುಸಂತತಿ ಸಂತತಿ ಭಾರಿ ಬಲುಭ್ರಾಂತಿವಿಜ್ಞಾನವಿತಾನಧುರೀಣರ್ಸಂತಾಪಿಪರು ಮುರಾರಿ ನಮ್ಮಸಂತೈಸೈ ಗಿರಿಧಾರಿ ಶ್ರೀಕಾಂತ ಕೃಪಾರ್ಣವಶೌರಿಜಗ-ದಂತ ವಿಹಾರಿ ನಿರಂತ ಪರಂತಪ 3ಚೆನ್ನಕೇಶವ ಚರಾಚರಾತ್ಮ ಚೈತನ್ಯರೂಪ ಶ್ರೀರಂಗ ನಮ್ಮಬಿನ್ನಪಲಾಲಿಸುತ್ರಿಭುವನವನ್ನುಸನ್ನುತಶುಭಾಂಗ ಸ-ರ್ವೋನ್ನತ ಮಹಿಮತರಂಗದುರಿತಾನ್ವಯತಿಮಿರಪತಂಗ ಸುಪ್ರಸನ್ನಸದೋದಿತವಿಹಂಗತುರಂಗ4ನೀಲೇಂದೀವರ ಶ್ಯಾಮಲ ಕೋಮಲಕಾಲನಿಯಾಮಕ ಪ್ರಾಣ ನಿನ್ನೋಲಗ ಸೇವಕರಾಳಿಯೂಳಿಗವ ಕೇಳು ತ್ರಿಲೋಕತ್ರಾಣನತಪಾಲ ಪರೇಶ ಪುರಾಣ ಶ್ರೀಲೋಲ ವಿಗತ ಪರಿಮಾಣ ಹೃದ-ಯಾಲಯಮಣಿ ಲಕ್ಷ್ಮೀನಾರಾಯಣ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ