ಒಟ್ಟು 48 ಕಡೆಗಳಲ್ಲಿ , 6 ದಾಸರು , 47 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೇಟೆಯ ನಾಡಿದನೇ | ಶ್ರೀ ಗುರು | ಬೇಟೆಯ ನಾಡಿದನೇ | ಭವದ ಮ | ಮಹಾಟವಿಯೊಳಗಿದ್ದ ಮನವೆಂಬ ಮೃಗದಾ ಪ ಬೋಧ ಕೊಳಲವ | ಸ್ವಾನಂದದಲಿ ಸುಸ್ವರದಲಿ | ತಾನೂದಿ ನಾದವ ಕಿವಿಯೊಳೂಡಿಸಿ ಸು | ಮ್ಮಾನದೀ ನಿಲುವಂತೆ ಮರುಳು ಮಾಡಿದ ಗುರು 1 ಪರಿ ಸಾಧನದಿಂದಲಿ ನವವಿಧ | ಪರಿಯಾದ ಭಕ್ತಿಯ ಪಾಶವನು | ಕೊರಳಿಗೆ ಸಂದಿಸಿ ದೃಢದಿಂದ ಪುನರಪಿ | ಹರಿದಾಡದಂದದಿ ನೆಲೆಗೊಳಿಸಿ ಗುರು 2 ಭಯದಿಂದ ಬೆದರಿ ಭಜ್ಜರಿಕೆಯ ಹಿಡಿದಿರೆ | ಶ್ರಯ ಸುಖದಾಯಕ ನಿಜ ಕರದೀ | ದಯದಿಂದ ಅಭಯವನಿತ್ತು ಬೋಳೈಸಿ ನಿ| ರ್ಭಯ ಮಾಡಿ ಭ್ರಾಂತಿಯ ಚಿಂತಿ ಹರಿಸಿ ಗುರು3 ಸವಿ ಸವಿ ನಾಮಾಮೃತ ಆಹಾರವನಿಕ್ಕಿ | ಜವದಿಂದ ಹೃದಯ ಭೂ ವನದೊಳಗೆ | ತವಕದಿ ವಿಶ್ರಾಂತಿ ಸ್ಥಳದಲಿ ನಿಲ್ಲಿಸಿ | ಅವನಿಲಿ ಸತ್ವ ಚರನ ಬಳಿಯಲ್ಲಿಟ್ಟು ಗುರು4 ಜನವನ ವಿಜನದೊಳಗ ತಾನೇ ತಾನಾಗಿ | ಅನುಮಾನ ಕಳೆಸಿದಾ ಅಂಜುವನಾ | ಅನುದಿನ ಸುಖದೊಳಿಪ್ಪಂತೆ ಮಾಡಿ | ದನು ನಂದನ ನಿಜ ಸಹಕಾರಿ ಮಹಿಪತಿ ಘನಗುರು5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭಕುತರ ರಿಣಕಂಜಿ ಅಡಗಿದರೇ | ಅಖಿಳದಿ ಬಿಡುವರೇ ಪ್ರಕಟಿಸಿ ಬಾ ರಂಗಯ್ಯಾ ಪ ಕತ್ತಲೆಯೊಳು ಹೆಜ್ಜೆ ದೋರದೇ ತಿರುಗುತಾ | ಮತ್ತೆ ದೊಡ್ಡ ಬೆಟ್ಟದಾ ಮರಿಲ್ಯಾಡುತಾ | ಅತ್ತಿತ್ತ ನೋಡದೆವೆ ಝುಡಪಿನೊಳಗ ಹೊಕ್ಕು | ಉತ್ತಮ ನರಮೃಗದಂತಡವಿಯ ಸೇರಿ1 ಬಡತನ ದೋರಲೆಂದು ಯಾಚಕನಾದರೇನು | ಕಡಲ ಬೊರಿಯಾ ಮನೆ ಮಾಡಿರಲೇನು | ಜಡೆಗಟ್ಟ ನಾರ ಸೀರೆನುಟ್ಟು ಉಪವಾಸ ಮಾಡಿ | ಗಿಡವೇರಿ ಮಡುಹೊಕ್ಕು ಕಳವಿಲಿ ತಿರುಗುತಾ 2 ಮುನಿಯಂತೆ ದಿಗಂಬರ ರೂಪವ ತಾಳಲೇನು | ಜನದ ಕಲಿಕೀ ಮಾತು ಕಡೆಗಾಣುದೇ | ಘನಗುರು ಮಹಿಪತಿ ಸುತ ಪ್ರಭು ನಿನ್ನೊಳಿದ್ದಾ | ಸಂತೈಸಿ ಶರಣರ ರಕ್ಷಿಸಯ್ಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭಾವಜ್ಞರ ಪಾದವನೇ ಪಿಡಿಯೋ ಭಾವಜನಯ್ಯನ ಸೇವೆಯ ಪಡೆಯೋ ಪ ಘನಗುರು ಹಿರಿಯರ ಕಾಲಿಗೆ ಎರಗೋ ಘನ ಮಹಿಮನ ಪಾದಕೆ----ಗೋ 1 ಪಂಡಿತ ಆರ್ಯರ ಪೂಜಿಸು ಇಲ್ಲೆ ಪುಂಡರೀಕಾಕ್ಷನ ಭಜಿಸಿ ಪಾದವನು ಪಿಡಿಯೋ 2 ನಿಜ 'ಹೆನ್ನವಿಠ್ಠಲನ್ನ’ ನೀನಾಗ ಕೂಡೊ 3
--------------
ಹೆನ್ನೆರಂಗದಾಸರು
ಭಾವನೆ ಬಲಿದನಕಾ ಒಣಭಕ್ತಿಯ ಮಾಡಿದರೇನು | ದೇವದೇವೋತ್ತಮನಾಪಾದ ಸುಮ್ಮನೆ ಸಿಲ್ಕುವದೇನು ಪ ಸಂಜಿವನಿಲ್ಲದಲೇ ಸಾವಿರ ಗಿಡ ಮೂಲಿಕಿದ್ದೇನು | ರಂಜಕ ತಾನಿಡದೇ ಯಂತ್ರದಿಗುರಿವಡ್ಡಿರಲೇನು 1 ಸೂರಿಯನುದಯಿಸದೇ ಕನ್ನಡಿ ಕಣ್ಣುಗಳಿದ್ದೇನು | ಗುರುರಾಯನ ಕರುಣಾ ಪಡಿಯದೆ ಮಂತ್ರ ಕಲಿತೇನು 2 ಅನುಭವಿಸದೇ ಸುಖವಾ ಜ್ಞಾನದ ಮಾತಾಡಿದರೇನು | ಘನಗುರು ಮಹಿಪತಿ ಸ್ವಾಮಿಯ ನೆನಯದೆ ಜನುಮವೇನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮನಗೊಂಡವರಲ್ಲಿ ಘನಗೊಳ್ಳಿ ಜ್ಞಾನಾಗಮ್ಯದ ಧ್ರುವ ಮುನಿಜನರಾರಾಧಿಸುವ ನಿಧಾನ ಅನಿಮಿಷದಲಿ ನೋಡುವ ತ್ರಾಣ ಉನ್ಮನಲಿಹ ಧನ 1 ಜಾಣನೇ ಮಾಡಿಕೊಂಬನು ಪರೀಕ್ಷೆ ಸ್ವಾನುಭವದಲಿ ಪ್ರತ್ಯಕ್ಷ ಅನುದಿನದಲಿಹುದ ದಕ್ಷ ಘನಗುರು ಕಟಾಕ್ಷ 2 ಮಹಿಪತಿಸ್ವಾಮಿಯು ಪರಬ್ರಹ್ಮ ಖೂನಮಾಡವಗಿದು ಸಂಭ್ರಮ ಅನಂದೋಬ್ರಹ್ಮ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮುತ್ತು ಕೊಳ್ಳಿರೋ ಉತ್ತುಮರೆಲ್ಲ ಧ್ರುವ ಜ್ಞಾನ ಸಮುದ್ರಲಿನ್ನು ಧ್ಯಾನವೆಂಬ ಸಿಂಪಿನೊಳು ಘನಗುರುಕರುಣದ ಮಳಿಯಾದ ಮುತ್ತು ಕೊಳ್ಳಿರೋ 1 ಪಿಂಡ ಬ್ರಹ್ಮಾಂಡವೆಂಬ ಗಡ್ಡೆಯೊಳಿನ್ನು ಪುಟ್ಟಿ ಭಕ್ತಿಭಾವ ಹಡಗದೊಳು ಬಂದ ಮುತ್ತು ಕೊಳ್ಳಿರೋ 2 ಸಾಧುಸಜ್ಜನರೆಂಬ ಮುತ್ತಿನ ಜೋಹರೇರ ಕೈಯ ನಿಜಹಸ್ತಸ್ಪರ್ಶವಾದು ನೀವು ಮುತ್ತು ಕೊಳ್ಳಿರೋ 3 ಅತ್ತಲಿತ್ತಲಾಗದೆ ಈ ಮುತ್ತು ಜತನಮಾಡಿ ನಿಮ್ಮ ಚಿತ್ತ ಮನದೊಳು ಇಟ್ಟುಕೊಳ್ಳಿರೋ 4 ತನುಮನಧನವನರ್ಪಿಸಿಕೊಂಡಿಹ ಮುತ್ತು ಮಹಿಪತಿ ಇಹರಪವಸ್ತು ಮುತ್ತು ಕೊಳ್ಳಿರೋ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಯಾಕ ಸ್ಮರಸದೀ ಮನಸಿಗೇ ಪ ಯಾಕ ಸ್ಮರಸದೀ ಮನಸಿಗೆ | ಲೋಕದೊಳು ತನ್ನ ಸುಖಗೆ | ಮಾಕಾಂತ ನಡಿಗಳ ಮರೆಹೊಕ್ಕು | ವಿ ವೇಕ ಸೌಖ್ಯ ಪಡಿಯದೀಗ 1 ಉತ್ತಮ ಸಂಗವ ನೆರೆಮಾಡಿ ತನ್ನ | ಚಿತ್ತದ ಚಂಚಲ ನೀಡ್ಯಾಡೀ | ನಿತ್ಯದಿ ಗುರು ಹಿರಿಯರ ಶೇವೆಯಲಿ| ಹೊತ್ತು ಸಾರ್ಥಕ ಕಳಿಯದು ನೋಡು 2 ಸಣ್ಣ ದೊಡ್ಡವರಿಂದ ಭಲರೇಯಾ ಯಂದು | ಮನ್ನಿಸಿಕೊಳ್ಳದೇ ಅವರ ಕೈಯ್ಯಾ | ಕುನ್ನಿಯ ಛೀ ಸುಡು ಸುಡು ಯಂದು | ನಿನ್ನ ಜನ್ಮಕೆನಿಸುವದು ಬಲು ಕುಂದು 3 ವಿಹಿತವೇ ಅಹಿತವೆಂದು ಬಗೆವದು ತನ್ನ | ಸ್ವಹಿತವೇ ಅಹಿತೆಂದಾಚರಿಸುವುದು | ಇಹಪರ ಲೋಕಕ ಸಲ್ಲದು ಆಗಿ | ಕುಹಕ ಬುದ್ಧಿಯಿಂದಲೇ ಬಾಳುದು 4 ಜನಲಜ್ಜಾ ಮನಲಜ್ಜಾ ವೆರಡಿಲ್ಲಾ ಇದ | ಕೇನೋ ಮುಂದಣಗತಿ ಶಿವಬಲ್ಲಾ | ಅನುಮಾನ ವಿಲ್ಲಿದರೊಳು ಕಂಡು ಕೇಳಿ | ಘನಗುರು ಮಹಿಪತಿ ಜನ ಸೊಲ್ಲಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಕಲಾಗಮ ಪೂಜಿತ ಏಕೋ ದೇವನೀತ ಏಕಾಕ್ಷರ ಬ್ರಹ್ಮೀತ ಹಂಸನಾಥ 1 ರವಿಕೋಟಿ ತೇಜನೀತ ಸಂವಿತ ಸುಖ ಸಾಕ್ಷಾತ ಪವಿತ್ರ ಪ್ರಣವನೀತ ಹಂಸನಾಥ 2 ಯತಿ ಮುನಿವಂದಿತ ಪಿತಾಮಹನ ಪಿತ ಅತಿಶಯಾನಂದನೀತ ಹಂಸನಾಥ 3 ಸನ್ಮಾತ್ರ ಸದೋದಿತ ಉನ್ಮನ ವಿರಹಿತ ಚಿನ್ಮಯನಹುದೀತ ಹಂಸನಾಥ 4 ಅನುದಿನ ಸಾಕ್ಷಾತ ಘನಗುರು ಶ್ರೀಕಾಂತ ಹಂಸನಾಥ 5 ವಿಶ್ವ ವ್ಯಾಪಕನೀತ ವಿಶ್ವರೂಪ ನಿರ್ಮಿತ ವಿಶ್ವಾತ್ಮನಹುದೀತ ಹಂಸನಾಥ 6 ಇಡದು ತುಂಬಿಹನೀತ ಮೂಢಮಹಿಪತಿ ದಾತ ಒಡಿಯನಹುದೀತ ಹಂಸನಾಥ7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸತ್ಸಂಗ ವಿಡಿಯೋ ಮನುಜಾ ಪ ಹರಿಕಥಾ ಶ್ರವಣದಿ ಮನ ಜಡಿಯೋ | ದುರಿತಾಂಕುರ ಕಡಿಯೋ 1 ಘನಗುರುರಾಯನ ಕರುಣವ ಪಡಿಯೋ | ಅನುಭವಾಮೃತ ಕುಡಿಯೋ 2 ಮಹಿಪತಿಸುತ ಪ್ರಭು ನಾಮವ ನುಡಿಯೋ | ಸ್ವಹಿತದಲೀ ನಡಿಯೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸುಮ್ಮನಹುದು ನೋಡಿ ಸ್ವಾತ್ಮ ಸುಖದನುಭವ ಹಮ್ಮಳಿದು ತನ್ನೊಳು ತಾ ತಿಳಿಯದನಕ ಧ್ರುವ ಏನು ಕೇಳಿದರೇನು ಏನು ಹೇಳಿದರೇನು ಖೂನದೋರದು ತಾನು ಸ್ವಾನುಭವದ ನಾನೆಂಬುದೆನಲಿಕ್ಕೆ ಏನು ಮಾಡಿದರೇನು ಜ್ಞಾನ ಗಮ್ಯವಸ್ತು ತಾನೊಲಿಯದನಕ 1 ಕನಸು ಮನಸಿನ ಕಲಿಯು ಕಲಿತು ಕೆಟ್ಟಿರಲಿಕ್ಕೆ ಅನುಮಾನಗಳಿಯದಪಭ್ರಂಶಗಳಿಗೆ ಅನುದಿನದಲಾಶ್ರಯಿಸಿ ಘನಗುರು ಶ್ರೀಪಾದವನು ನೆನೆನೆನೆದು ಸುಖವು ನೆಲೆಗೊಳ್ಳದನಕ 2 ಮಹಾ ಮಹಿಮೆಯುಳ್ಳ ಗುರುದಯ ಪಡಕೊಂಡು ಮನೋಜಯಸುದಲ್ಲದೆ ಘನಮಯ ಹೊಳೆಯದು ಮಹಿಪತಿಯ ಸ್ವಾಮಿ ಸದ್ಗುರು ಭಾನುಕೋಟಿ ತೇಜ ಬಾಹ್ಯಾಂತ್ರ ಪರಿಪೂರ್ಣ ತಾನಾಗದನಕ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸುಮ್ಮನಹುದೆ ಬ್ರಹ್ಮಾನಂದದ ಸುಖವು ಧ್ರುವ ಘನಗುಡುವದೆ ನೆನದಾಗಲಿ ಖೂನದೋರುದು ಆವಾಗಲಿ ಜನರಂಜನಿ ಶೀಲೆ 1 ತನುವುತನ್ನಲ್ಲಿರಕ್ಕೆ ಪೂರ್ಣ ಘನಗುರುವಿಗೆ ತಾ ಅರ್ಪಿಸಿತೇನ ಜನಮಾಡುವುದು ಈ ಸಾಧನ ಅನುಮಾನದ ಖೂನ 2 ಅನುದಿನ ಹೊರಳ ಗುರು ಪಾದದಲಿ ನೀನೆ ಗತಿ ಎಂದೆನುತಲಿ ನೆನೆವನು ಬಾಯಲಿ 3 ಗುರುಗುಣಕೆ ಮೂರ್ಹಾದ್ಹೊಚ್ಚಿರಲಿ ತೋರಬಲ್ಲುದೆ ಸುಙÁ್ಞ ನದ ಕೀಲಿ ಬರಿಯ ಮಾತಿನ ಭಕ್ತಿಲಿ ಅರವಾಗುವದೆ ನೆಲಿ 4 ಠಕ್ಕ ತನಕೆ ಸಿಲ್ಕುದೆ ಸದ್ವಸ್ತು ಲೆಕ್ಕವಿಲ್ಲದೆ ಅಮೋಲಿಕಮಾತಿಲ್ಯಾಕೋ ಮಹಿಪತಿ ಭಾವವಿತ್ತು ಅಕ್ಕಿಸಿದೋ ಬೆರ್ತು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸುಮ್ಮನೆ ದೊರಕೊಂಬುದೆ ಬ್ರಹ್ಮಾನಂದದ ಮೂರ್ತಿಯ ನೇಮಿಸಿ ನೋಡದೆ ಧ್ರುವ| ಕಣ್ಣುಗಳಾಡಗುಡದೆ ಕಣ್ಣಿನೊಳಗಿಟ್ಟುಕೊಂಡು ಕಣ್ಣುಕಂಡುಡುಗಾಣದೆ ಘನ ಗುರುಮೂರ್ತಿಯ 1 ಮನಗಲ್ಪನೆಗ್ಹರಿಯಗೊಡದೆ ಮನಸಿನೊಳಿಟ್ಟುಕೊಂಡು ಮನಗುಂಡು ನೆಲಿಯುಗೊಳ್ಳದೆ ಘನಗುರು ಶ್ರೀಪಾದ 2 ಹೃದಯದಲಿ ನೆಲಿಯುಗೊಂಬನೆ ಮಹಿಪತಿಗುರುಸ್ವಾಮಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಾಮಿ ನಮ್ಮ ದೇವದತ್ತ ಬ್ರಹ್ಮಾನಂದ ಅವಧೂತ ಸಮಸ್ತಜನದಾತ ಬ್ರಹ್ಮಾದಿಗಳೊಂದಿತ ಧ್ರುವ ಕುಡಲಿಕ್ಕೆ ತಾ ಉದಾರಿ ಬಲು ದೊಡ್ಡ ಉಪಕಾರಿ ಕಡೆಗಾಣಿಸುವ ಧೊರಿ ನಿಜ ನೀಡುತಿಹ್ಯ ಸಾರಿ ಬಡವರಿಗೆ ಆಧಾರಿ ಭಕ್ತಜನ ಸಹಕಾರಿ ಪರಿ ಮಾಡುತಿಹ್ಯ ಮನೋಹರಿ 1 ಬೀರುತಿಹ್ಯ ನಿಜನೋಡಿ ಕರದಲ್ಲಭಯ ನೀಡಿ ಗುರುತಿಟ್ಟಿದೆ ಸೂರ್ಯಾಡಿ ಶರಣರು ನಿಜಗೂಡಿ ಅರುವ್ಹೆ ಅಂಜನ ಮಾಡಿ ಕುರುವ್ಹೆದೋರುದಿದರಡಿ ಧರೆಯೊಳಿದೆ ಕೊಂಡಾಡಿ ಗುರುನಾಥನೆಂದು ಪಾಡಿ 2 ಅನಾಥ ಬಂಧುನೀತ ದೀನದಯಾಳು ಸಾಕ್ಷಾತ ಅನುದಿನದೆ ಪ್ರಖ್ಯಾತ ಘನಗುರು ಶ್ರೀನಾಥ ಮನೋಭಾವ ಪೂರಿತ ಎನಗುಳ್ಳ ದೇವದತ್ತ ದಾತ ಭಾನುಕೋಟಿ ಉದಿತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹಾದಿಯ ಕೊಡುಹರಿ ಪರಗತಿಯಾ ಸಾಧಿಸಿ ಬಂದೇ ಕೇಳಿ ಕೀರುತಿಯಾ ಪ ಕ್ಷಿತಿಯೊಳು ಭರತ-ಖಂಡದ ದೇಶದ ಪತಿತರ ತಾಂಡೆಯದ ನಾಯಕನು ಮತಿ ಹೀನ ಕಾಮಕ್ರೋಧರಾಗಿಹ ಪುಂಡರು ಪಥ ನಡೆಗುಡಿಸರು ಅತಿಬಲರು 1 ಆದಿಲಿ ಅಜಮಿಳಾ ತಾಂಡ್ಯ ಹೋದ ಬಳಿಕಾ ಹಾದಿ ಮುಗ್ಗಿತಿ ಕಡೆ ಬಹುದಿನದೀ | ಸಾದರಲೆನಗನಿ ಅಭಯವ ಕೊಟ್ಟರ | ಭೇದಿಸಿ ಜನರನು ನೆರಹುವೆನು 2 ಏನಾರೆ ಗೋಣಿಗೆ ಭಾವದ ಲಹರೆ ಕÉೂಂಡು ಮಾನು ಭಾವರ ಪ್ಯಾಟಿ ಹೋಗಿಸುವುದು ಘನಗುರು ಮಹಿಪತಿ ನಂದನ ಸಾರಥೀ ದೀನ ವತ್ಸಲನೆಂಬ ಬಿರುದಹುದು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮುಕ್ತನಾದೆನೋ ನಿನ್ನ ಮರೆತು ನೆನೆಯಲಿ ಮುನ್ನಮುಕ್ತನಾಗುವುದೇನು ಗುರುನೀ ಮುಟ್ಟಿಲಿಕೆಂದುಪಪಾಶವೆಂಟು ಹರಿದು ಪರಿದು ತ್ರಿಗುಣಂಗಳಕ್ಲೇಶಪಂಚಕವು ಕೆಡೆದುಪೋದುವುಆಸೆ ಮೂರೆಂಬುವು ಆಕ್ಷಣ ಉರಿದವುಘಾಸಿಯಾದವು ಸಪ್ತವ್ಯಸನ ಗಳಿಗೆಯೊಳು1ನಾಲ್ಕು ಕರಣಂಗಳು ನಾಸ್ತಿಕವಾದುವುಬೇಕೆಂಬ ತ್ರಯತಾಪ ಬೆಳೆನಿಂತವುಪೋಕರಾದವು ಷಡುವರ್ಗ ಷಡಪುಗೆಟ್ಟುಹೋಕೆಮರೆತವುದುರ್ಭಾವಹೊಲಬುದಪ್ಪಿ2ಕನಕಪರುಷ ಮುಟ್ಟೆಕನಕಪರುಷವಾಗದುಘನಗುರುವಿನ ಮುಟ್ಟೆ ಗುರುವಹನುಚಿನುಮಯ ಚಿದಾನಂದ ಚಿದ್ರೂಪನಾದವರಿಗೆಜನನ ಮರಣಗಳೆಂಬ ಜನಿತವೆಲ್ಲಿಹುದಯ್ಯ3
--------------
ಚಿದಾನಂದ ಅವಧೂತರು