ಪುಣ್ಯದ ಹಾದಿಯ ಪೇಳ್ವೆ ಪೇಳಿದಂದದಲಿರೆ ಪುಣ್ಯಲೋಕವು ನಿನಗಣ್ಣಪುಣ್ಯವ ಕೆಡುಗೊಡದಲೆ ನೀನು ನಡೆದರೆ ಪುಣ್ಯ ಪುರುಷನಹೆಯಣ್ಣ ಪ
ಬಿಸಿಲೊಳಗಿದ್ದವರ ನೀನು ನೆರಳಿಗೆ ಕರೆದರೆ ಬಹಳ ಸುಖವು ನಿನಗಣ್ಣಹಸಿದು ಬಂದವರಿಗೆ ತುತ್ತನಿಕ್ಕಲು ನಿನಗೆ ಅರಕೆಯಿಲ್ಲದ ಅನ್ನವಣ್ಣ 1
ನೀರಡಸಿದವರಿಗೆ ನೀರನ್ನು ಎರೆದರೆ ನಿನಗೆಂದು ಕಷ್ಟವಿಲ್ಲಣ್ಣದಾರಿ ತಪ್ಪಿದವರಿಗೆ ದಾರಿಯ ತೋರಿಸೆ ಧಾವತಿ ನಿನಗಿಲ್ಲವಣ್ಣ 2
ಮನೆಯಿಲ್ಲದವರಿಗೆ ಮನೆಯ ಕೊಟ್ಟೊಡೆ ನಿನಗೆ ಮುಂದಿಹುದು ಮನೆಯಣ್ಣಇನಿತು ವಸ್ತ್ರವಿಲ್ಲದವಗೆ ವಸ್ತ್ರವನು ಕೊಡೆ ಏನು ವಿಪತ್ತು ನಿನಗಾಗದಣ್ಣ 3
ಬಡವರನು ಮುಂದಂತೆ ತಂದರು ನೀನೀಗ ಬಲವಂತನಾಗುವೆಯಣ್ಣನುಡಿಯಲು ಒಳ್ಳೆಯ ವಾಕ್ಯವ ನೀನೀಗ ನೋಯದಂತಿರುವೆ ಮುಂದಣ್ಣ4
ವನಗುಡಿ ಕೆರೆಬಾವಿ ಧರ್ಮ ಮಳಿಗೆ ಹಾಕೆ ಒಲಿವನು ಶಿವನು ನಿನಗಣ್ಣಘನ ಚಿದಾನಂದ ಸತ್ಪುರುಷರ ಸೇರಲು ಘಟ್ಟಿ ಮುಕ್ತಿಯು ನಿನಗಣ್ಣ5