ಒಟ್ಟು 151 ಕಡೆಗಳಲ್ಲಿ , 43 ದಾಸರು , 126 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಜಾನನಂ ಲೋಕನುತಂ | ಸ್ಮರಾಮಿ ಗೌರಿಕೃತ ಸುತಂ ಸನ್ನುತ ಭಕ್ತಾಶಯದಂ ಪ ಸನಕಾದಿ ಸ್ತುತಂ ಹಿತಂ | ಶುಭಪ್ರದರತಂ ಮತಂ ಅ.ಪ ಕಲ್ಪಭೂಜಂ ಸಾನುಜಂ | ಪಾಶಧರ ಸಾಮಜಂ ಪ್ರಸನ್ನ ಚತುರ್ಭುಜಂ | ಕಾರ್ತಿಕೇಯ ಮಹಾಗ್ರಜಂ ಪರಶಿವ ಕಾಮಿತ ತನುಜಂ | ಫಣಿಬಂಧಯುತಂ ಸೇವ್ಯ ಮಹಾಗಣೇಶ ಪಿತರಜಂ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಗಿರಿರಾಜಕುಮಾರಿ ದೇವಿಪರಮ ಮಂಗಳಗೌರಿಪರಮ ಪಾವನೆ ಶ್ರೀಹರಿ ಸೋದರಿಸುರರಿಪು ಮಧುಕೈಟಭ ಸಂಹಾರಿಶ್ರೀಕರಿ ಗೌರಿ ಹಸೆಗೇಳು ಹಸೆಗೇಳು 1 ಕುಂಭಸಂಭವವಿನುತೆ ದೇವೀಶಾಂಭವಿ ಶುಭಚರಿತೆಜಂಭಭೇದಿ ಮುಖ ಸುರವರಪೂಜಿತೆಕಂಬುಕಂಠಿ ಶುಭಗುಣಗಣ ಶೋಭಿತೆಲೋಕೈಕಮಾತೆಹಸೆ2 ಸರಸಿಜದಳನಯನೆ ದೇವಿಸರಸಕುಂದರದನೆಸರ್ವಮಂಗಳೆ ಸರ್ವಾಭರಣೆಸುರಮುನಿ ಪರಿಭಾವಿತೆ ಶುಭಚರಣೆಕರಿರಾಜಗಮನೆ ಹಸೆ 3 ನಿರ್ಜರ ಪರಿವಾರೆಮಣಿಮಯಹಾರೆ ಹಸೆ4 ಪನ್ನಗನಾಭವೇಣಿ ದೇವಿಸುನ್ನತೆ ರುದ್ರಾಣಿ ಕನ್ನಡಿಗದಪಿನ ಶಿವೆ ಶರ್ವಾಣಿಲೋಕೈಕ ಜನನಿ ಹಸೆ 5 ಶುಭ ಲೀಲೆಮೃಗಮದ ತಿಲಕ ವಿರಾಜಿತೆ ಪಾಲೆಕುಂಕುಮನಿಟಿಲೆ ಹಸೆ 6 ಪಂಕಜ ಸಮಪಾಣಿ ಶ್ರೀ ಹರಿ-ಣಾಂಕವದನೆ ವಾಣಿಅಂಕಿತಮಣಿಗಣ ಭೂಷಣ ಭೂಷಣಿಶಂಕರೀ ಕೆಳದಿಪುರವಾಸಿನಿಪಾರ್ವತಿ ಕಲ್ಯಾಣಿ ಹಸೆ 7
--------------
ಕೆಳದಿ ವೆಂಕಣ್ಣ ಕವಿ
ಗೌರಿ ಗಜಮುಖನ ಮಾತೆ | ಗುಣಗಣ ಭರಿತೆ ಶೌರಿ ಸಖನಂಗಸಂಗೀ ಸಂಪೂರ್ತೆ ಪ ಶುಭ ತನು ವಾರಿಜನೇತ್ರಳೆ ವೀರಸತಿಯೆ ದಯವಾರಿಧಿ ಪಾಲಿಸು ಅ.ಪ. ತುಂಗ ಮಂಗಳೇ ದೇವಿ | ಕಲಿಗೆ ಭೈರವೀ ರಂಗಾನ ನವವಿಧಿ ಭಕ್ತಿ ಸಂಗ ನೀಡುವಿ ಹಿಂಗದೆ ಪೊರಿಯೆ ತಾಯೇ | ಭಕ್ತ ಸಂಜೀವೆ ತಿಂಗಳ ಮುಖಿವರಗರಿವೆ | ನಮ್ಮ ಶಂಭುವೆ ಭಂಗಬಟ್ಟೇನು ನುಂಗುವ ಭವದೊಳು ಮಂಗಳ ಕರುಣಾಪಾಂಗದಿ ನೋಡೆನ್ನ ಭವ ಭಯ ಗಂಗೆಯ ಧರನಂಘ್ರಿ- ಭೃಂಗಳೆ ಬೋದಯಾಕಂಗಳೆ ಕರುಣಿಸು 1 ಇಂದ್ರಾದಿ ಸುರಗುರುವೆ | ದೇವ ತರುವೆ ಪರಿ ನಿನ್ನ ಬೇಡುವೆ ಕುಂದನೆಣಿಸದಲೆ ಶಿವ ಶಂಕರಿ ಕಾವೆ ಸಂದೇಹ ಕಳಿ ವಿಭುವೆ | ವೀರಜತನುವೆ ನೊಂದವನಾ ಮ್ಯಾಲ್ಹೊಂದಿಸು ಕರುಣವ ಮಂದಸ್ಮಿತೆ ಮುಕುಂದನ ಮನದಲಿ ವಂದಿಸು ಅನಿಮಿತ್ತ ಬಂಧುವೆ ರಕ್ಷಿಸು 2 ಕಸ್ತೂರಿ ಕುಂಕುಮ ಫಾಲೆ | ರನ್ನಾದ ಓಲೆ ವಸ್ತುಗಳಿಟ್ಟ ಹಿಮವಂತನ ಬಾಲೆ ಶಿಸ್ತಿನ ಶುಭ್ರಾಂಬರಧಾರೆ ವನಮಾಲೆ ಮಸ್ತಕದ ಕಿರೀಟ ವದನೆ ತಾಂಬೂಲೆ ಸಿರಿ ಹಸ್ತಗಳಿಟ್ಟೆನ್ನ ದುಸ್ತರದ ಹಾದಿಗಳಸ್ತಮಮಾಳ್ಪುದು ವಿಸ್ತರ ಮಹಿಮ ಜಯೇಶವಿಠಲ ವಸ್ತುವ ನೀಡಮ್ಮ ಹಸ್ತಿಯ ಗಮನೆ 3
--------------
ಜಯೇಶವಿಠಲ
ಗೌರಿಗೆ ಶುಭದಾರತಿಯನು ರಚಿಪೆ ಪ ಜೀವನದಾಯಕಿಗೆ ಶುಭದಾರತಿಯನು ರಚಿಪೆ 1 ಪ್ರಿಯಭಾಮಿನಿಗೆ ಶುಭದಾರತಿಯನು ರಚಿಪೆ 2 ಶುಭದಾರತಿಯನು ರಚಿಪೆ 3 ಶ್ಯಾಮಕಲಾಂಬಿಕೆ ಶಿವಸುಂದರಿಗೆ ಶುಭದಾರತಿಯನು ರಚಿಪೆ 4 ಮಾನಿನಿ ಮಾಘದ ಮಂಗಳೆಗೆಶುಭದಾರತಿಯನು ರಚಿಪೆ 5
--------------
ಬೇಟೆರಾಯ ದೀಕ್ಷಿತರು
ಗೌರಿದೇವಿ ಪದಕೇ | ನಾರೇರು | ಆರುತಿಯನು ಬೆಳಗೀ ಪ ಭೂರಿ ಕರುಣಿಗೇಅ.ಪ. ಸತಿ | ಪೋಷಿಸು ಸನ್ಮತಿ 1 ಮುರ ವೈರೀರಂಗನ ಶುಭಗುಣ | ಹಿಂಗದೆ ಪಾಡುವಮಂಗಳ ಮನವೀವ | ಶೃಂಗರ ಕಾಯೇ 2 ಪತಿ ಗುರು ಗೋವಿಂದ ವಿಠ್ಠಲನಾವರನಾಮ ನುಡಿಸಲು | ಪರಮ ಸಮರ್ಥಳುಶಿರಬಾಗಿ ನಮಿಸುವ | ಶರಣರ ಪಾಲಿಪ 3
--------------
ಗುರುಗೋವಿಂದವಿಠಲರು
ಗೌರಿನಂದನ ಗಜವಂದನ ಗೌರಿನಂದನ ಸೂರಿ ವಿಘ್ನಹರಣ ಪ. ಯೋಗಿವರ್ಯ ಗುರುವೆ ಬಾಗಿ ಬಿನ್ನವಿಸುವೆ ಭಾಗವತರ ಸಂಗವಾಗಲಂತರಂಗ 1 ಲೋಕೈಕಶರಣ್ಯ ಲೇಖಕಾಗ್ರಗಣ್ಯ ಏಕದಂತ ಶಾಂತ ಶ್ರೀಕರ ನಿಶ್ಚಿಂತ 2 ಅನಘ ಲಕ್ಷ್ಮೀನಾರಾಯಣ ಪದಾಬ್ಜಭ್ರಮರ ಪ್ರಣತಕಲ್ಪಭೂಜ ಪಾಹಿ ವಿಘ್ನರಾಜ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಗೌರಿನಂದನ ಗಜವಂದನ ಗೌರಿನಂದನ ಸೂರಿ ವಿಘ್ನಹರಣ ಪ. ಯೋಗಿವರ್ಯ ಗುರುವೆ ಬಾಗಿ ಬಿನ್ನವಿಸುವೆ ಭಾಗವತರ ಸಂಗವಾಗಲಂತರಂಗ 1 ಲೋಕೈಕಶರಣ್ಯ ಲೇಖಕಾಗ್ರಗಣ್ಯ ಏಕದಂತ ಶಾಂತ ಶ್ರೀಕರ ನಿಶ್ಚಿಂತ 2 ಅನಘ ಲಕ್ಷ್ಮೀನಾರಾಯಣ ಪದಾಬ್ಜಭ್ರಮರ ಪ್ರಣತಕಲ್ಪಭೂಜ ಪಾಹಿ ವಿಘ್ನರಾಜ 3
--------------
ತುಪಾಕಿ ವೆಂಕಟರಮಣಾಚಾರ್ಯ
ಗೌರೀದೇವಿ ಮಾತಾಡೇ ಎನ್ನ ಮೌನದ ಗೌರೀ ಯಾತಕಚಲಮನ ಸೋತವನೊಡನೆ ಮಾತಾಡೇ ಗೌರಿ ಮಾತಾಡೇ ಪ ನಸುನಗೆ ಮುಖವಿದು ಬಾಡಿ ಕೆಂದುಟಿಯು ಎಸೆದಿರಲು ನಾನೋಡಿ ವಸುಧೆಯೊಳಗೆ ನಾ ಜೀವಿಸಲಾರೆ ಘಸಘಸವ್ಯಾತಕೆ ತುಂಬಿತÀು ಅರಗಿಣಿ 1 ಕ್ಷಣ ಬಿಟ್ಟಿರಲಾರೆ ಅಮ್ಮ ಷಣ್ಮುಖ ಗಣಪರ ತಾಯೆ ನೀ ಬಾರೇ ವಸುಧೆಯೊಳಗೆ ನಾ ಜೀವಿಸಲಾರೆ ಘಸಘಸವ್ಯಾತಕೆ ತುಂಬಿತು ಅರಗಿಣಿ 2 ಕ್ರೋಧವ್ಯಾತಕೆ ಎನ್ನೊಳು ಗೌರೀ ಏನಪ- ರಾಧವು ಇದ್ದರು ತಾಳೇ ಪಾದ ಕಿಂಕಿಣಿಯೇ ಆದರಿಸುವೆ ನಾ ಆದರಿಸುವೆನೇ 3
--------------
ಶ್ರೀದವಿಠಲರು
ಚೂಡನಾಥೇಶ ನೋಡು ಕರುಣದಿ ಎನ್ನ ಪ ಮಾಡಿ ಸಲಹೊ ಮನ್ಮಥ ಸಂಹರನೆ ಅ.ಪ ಸೀತಾಪತಿನಾಮಾತಿಶಯವನತಿ ಪ್ರೀತಿಲಿ ಗೌರಿಗೆ ನೀ ತಿಳುಹಿಸಿದೆ 1 ಕುಪಥಗಳ ಬಿಡಿಸಿ ಸುಪಥವ ತೋರೊ 2 ಧರೆಯೊಳು ನೂತನಪುರದಿ ನೆಲೆಸಿರುವ ಗುರುರಾಮವಿಠಲಗೆ ಪರಮಮಿತ್ರನೆ 3
--------------
ಗುರುರಾಮವಿಠಲ
ಜಗದಂಬಿಕೆ ಪೊರೆ | ಭವಾನಿ | ಅಘಸಂಹರೆ | ಲೋಕೈಕ ಮಾತೆ ಪ. ಪರಮ ಪಾವನೆ | ಗೌರಿ ಮನೋಹರೆ || ಪರಮೇಶ್ವರಿ | ಕರುಣಾಕರೆ ಶ್ರೀಅ.ಪ. ಸುಂದರಾಂಗಿಯೆ || ಚಂದದೀ ಪೊರೆ | ಚಂದ್ರಚೂಡಪ್ರಿಯೆ1 ಆದಿಶಕ್ತಿ ದೇವಿ ಆದಿನಾರಾಯಣಿ | ಮೋದದೀ ಪೊರೆ | ಮೋದದಾಯಕಿಯೆ2 ಶಂಖಚಕ್ರಧರೆ | ಕಿಂಕರಪ್ರಿಯಕರೆ || ವೆಂಕಟೇಶನಾ | ಸೋದರಿ ಶಂಕರಿ3
--------------
ವೆಂಕಟ್‍ರಾವ್
ಜನನಿ ರುದ್ರಾಣಿ ರಕ್ಷಿಸು ಎನ್ನ ಜಗದೀಶನ ರಾಣಿ ಪ. ವನಜಭವಸುರಮುನಿಕುಲಾರ್ಚಿತೆ ಕನಕವರ್ಣಶರೀರೆ ಕಮಲಾ- ನನೆ ಕರುಣಾಸಾಗರೆ ನಮಜ್ಜನ- ಮನಮುದಾಕರೆ ಮಾನಿತೋದ್ಧರೆ ಅ.ಪ. ಆದಿಕೃತಾಯುಗದಿ ಪ್ರತಿಷ್ಠಿತ- ಳಾದೆ ಧರಾತಳದಿ ಆದಿತೇಯರ ಬಾಧಿಸುವ ದಿತಿ- ಜಾಧಮರ ಭೇದಿಸಿದೆ ಸಜ್ಜನ- ರಾದವರ ಮನ್ನಿಸಿದೆ ತ್ರೈಜಗ- ದಾದಿಮಾಯೆ ವಿನೋದರೂಪಿಣಿ 1 ಖಂಡ ಪರಶುಪ್ರೀತೆ ನಿಖಿಲಬ್ರ- ಹ್ಮಾಂಡೋದರಭರಿತೆ ಚಂಡಮುಂಡವೇತಂಡದಳನೋ- ದ್ದಂಡಸಿಂಹೆ ಅಖಂಡಲಾರ್ಚಿತೆ ಪಾಂಡುತನುಜ ಕೋದಂಡ ವಿತರಣೆ ಚಂಡಿಕೇ ಕರದಂಡಲೋಚನಿ2 ಸಿಂಧೂರ ಸಮಯಾನೆ ಸರಸ ಗುಣ- ವೃಂದೆ ಕೋಕಿಲಗಾನೆ ಸುಂದರಾಂಗಿ ಮೃಗೇಂದ್ರವಾಹಿನಿ ಚಂದ್ರಚೂಡಮನೋಜ್ಞೆ ಸತತಾ- ನಂದಪೂರ್ಣೆ ಮುನೀಂದ್ರನುತೆ ಸುಮ- ಗಂಧಿ ಗೌರಿ ಶಿವೇ ಭವಾನಿ 3 ಲಂಬೋದರಮಾತೆ ಲಲಿತ ಜಗ- ದಂಬಿಕೆ ಗಿರಿಜಾತೆ ಕಂಬುಕಂಠಿ ಕಾದಂಬನೀಕು- ರುಂಬಜಿತಧಮ್ಮಿಲ್ಲೆ ತವ ಪಾ- ದಾಂಬುಜವ ನಾ ನಂಬಿದೆನು ಎನ- ಗಿಂಬು ಪಾಲಿಸೆ ಶುಂಭಮರ್ದಿನಿ 4 ಘನವೇಣುಪುರವಾಸೆ ಸರ್ವಾರ್ಥದಾ- ಯಿನಿ ತ್ರೈಜಗದೀಶೆ ಸನಕನುತೆ ಶ್ರೀಲಕ್ಷುಮಿನಾರಾ- ಯಣಭಗಿನಿ ಶ್ರೀಮಹಿಷಮರ್ದಿನಿ ಮನಮಥಾಮಿತರೂಪೆ ಕಾತ್ಯಾ- ಯಿನಿ ನಿರಾಮಯೆ ಮಂಜುಭಾಷಿಣಿ 5
--------------
ತುಪಾಕಿ ವೆಂಕಟರಮಣಾಚಾರ್ಯ
ಜ್ಜನನಿ ಪೊರೆಯೆ ರುದ್ರಾಣಿ ಪ. ಅಘಸಂಹಾರಿಣಿ | ಮೃಗಪತಿವಾಹಿನಿ || ಅಗಣಿತಗುಣಮಣಿ | ಭಗವತಿ ಶ್ರೀ ಜಗ ಅ.ಪ. ಸಿರಿ ಕಾತ್ಯಾಯಿನಿ | ಗೌರಿ ಭವಾನಿ || ಪರಮಪಾವನೆ | ಪರಮೇಶ್ವರಿ ಜಗ 1 ಶುಂಭಧ್ವಂಸಿ | ನಿಶುಂಭನಿಷೂದಿನಿ || ಅಂಬುಜಮುಖಿ ಮೂ | ಕಾಂಬಿಕೆ ಶ್ರೀ ಜಗ 2 ಗಾನವಿನೋದಿನಿ | ದಾನವ ಮಥಿನಿ || ದೀನಜನಾವಳಿ | ಪಾಲಿನಿ ಶ್ರೀ ಜಗ 3 ಜಟಾಮುಕುಟಸುರ|ತಟನೀಧರಸತಿ || ನಿಟಿಲಾಂಬಕಿ ಶ್ರೀ | ಕಟಿಲೇಶ್ವರಿ ಜಗ 4
--------------
ವೆಂಕಟ್‍ರಾವ್
ತರಣಿ ಪಾವಕ ಶಶಿ ನೇತ್ರಗಳುಪರಶುಮೃಗಂಗಳ ಧರಿಸಿರೆ ಕರಗಳು ವರದಾಭಯಗಳಲೊಪ್ಪಿರಲು 1ವಾಮವ ಗೌರಿಗೆ ಕೊಟ್ಟಿರಲು ಸಾಮಜಕೃತ್ತಿಯ ಹೊದ್ದಿರಲುಭೀಮನು ಮೂರ್ತಿಯ ಬೇಡಲು ಕೊಡಲು ಕಾಮನ ನೋಟದಿ ಕೆಡಹಿರಲು 2ಧರೆಯೊಳು ದಕ್ಷಿಣ ಕಾಶಿಯಲಿ ುರೆ ಗಂಗಾಧರ ರೂಪಿನಲಿತಿರುಪತಿ ವೆಂಕಟ ವರ ನಾಮದಲಿ ಮೆರೆವೆ ಮಹೇಶ್ವರ ಮಹಿಮೆಯಲಿ 3ಓಂ ಕೋಟಿಸೂರ್ಯಸಮಪ್ರಭಾಯ ನಮಃ
--------------
ತಿಮ್ಮಪ್ಪದಾಸರು
ತಾತ್ವಿಕ ಹಿನ್ನೆಲೆಯ ಪದಗಳು ಗೌರಿವರನೆ ಕಾಯೊ ಎನ್ನ ಧಾರುಣಿಯೊಳು ರಾಯಕುಪ್ಪಿಸುಸದನ ಪ ಮೂರುಲಿಂಗ ಸ್ವರೂಪದಲಿಯನ್ನ ಮೂರು ತಾಪಗಳ ನೋಡಿಸಿ ಕರುಣದಲಿ ಮೂರು ಸಾಧನವ ನೀಡುತಲಿ ಬಿಂಬಾ ಮೂರುತಿಯನುಮನದಿ ಕಾಂಬುವಂದದಲಿ 1 ಕರುಣಾ ಕಟಾಕ್ಷದಿ ನೋಡೋ ಸದಾ ಕರಿವರದನ ಗುಣಗಳನೆ ಕೊಂಡಾಡೋ ಹರಿ ಭಕುತರ ಸಂಗ ನೀಡೋ ಭವ ಶರಧಿಯಿಂದೆನ್ನನುದ್ಧರಿಸಿ ಕಾಪಾಡೋ 2 ಪಂಚಬಾಣನಗೆಲಿದಧೀರಾ ದ್ವಿ ಪಂಚ ಕರಣಗಳಿಂ ಮಾಡಿಸು ಸದ್ವ್ಯಾಪಾರಾ ಪಂಕಜ ಮಧುಕರ 3
--------------
ಕಾರ್ಪರ ನರಹರಿದಾಸರು
ದಯವು ಏತಕೆ ಬಾರದೌ ದೇವಿ ಭಯವಿಮೋಚನೆ ಭಕ್ತ ಸಂಜೀವಿ ಪ ಚರಣಕಮಲಕ್ಕೆ ಶಿರವ ಬಾಗಿದೆನೆ ಸೆರಗನೊಡ್ಡಿ ಪರಮಭಕ್ತಿಲಿ ಬೇಡಿಕೊಂಡೆನೆ ಕರುಣಭರಿತ ಮೊರೆಯ ಕೇಳ ದಿರು ವಿಜಯವಾಣಿ ಪರಮಕಲ್ಯಾಣಿ ಸರಿಯೆ ನಿನಗಿದು ಶರಣಜನರ ಕರುಣಾಕರಿ ಅಂಬ ಪರತರ ಬಿರುದು ಇದೆಯೇನೆ 1 ಮಾರಮರ್ದನರಸಿ ಗಂಭೀರೆ ಶಾರದಾಂಬೆಯೆ ಮೂರುಲೋಕಂಗಳಿಗೆ ಆ ಧಾರಿ ಪಾರಮಹಿಮೆಯೆ ತೋರು ಕರುಣವ ಬೇಗ ವರಗೌರಿ ಮರೆಯದಿರು ಶೌರಿ ಚಾರು ಚರಿತವ ಪಾಡಿ ಬೇಡುವೆ ಸಾರಮನದಿಷ್ಟ ಪೂರೈಸಿದ ರೌದ್ರಿ 2 ಸ್ವಾಮಿ ರಾಮನನಾಮಮಹಿಮರತಿ ನೀ ಮನವ ಸೋತಿ ಪ್ರೇಮದಿಂದಲಿ ತ್ರಿಜ ಗನ್ಮಾತೆ ವಿಮಲಚರಿತೆ ಪ್ರೇಮಮಂದಿರೆ ಭಕ್ತ ವರದಾತೆ ಅಮರಾದಿವಿನುತೆ ಹೈಮವತಿ ನಿನ್ನ ನಂಬಿ ಭಜಿಸುವೆ ಕ್ಷೇಮಪಾಲಿಸೆನ್ವ್ಯಾಧಿ ಕಳೆದು ನಾಮರೂಪರಹಿತೆ ವಿಮಲೆ ಅಮಿತಮಹಿಮಳೆ ಮಮತೆದೋರೆ 3
--------------
ರಾಮದಾಸರು