ಒಟ್ಟು 427 ಕಡೆಗಳಲ್ಲಿ , 53 ದಾಸರು , 339 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವಭೂತ ಬಡಕೊಂಡಿತೆಲೊ ನಿನಗೆ ದೇವ ಕೇಶವನಂಘ್ರಿಧ್ಯಾಸವೆ ಮರೆದಿ ಪ ಸತಿಸುತರ ಮಮತೆಂಬ ವ್ಯಥೆ ಭೂತ ಬಡಿಯಿತೆ ಅತಿ ವಿಷಯಲಂಪಟದ ದುರ್ಮತಿಭೂತ ಹಿಡಿಯಿತೆ ಅತಿ ಸಿರಿಯಭೂತ ನಿನ್ನ ಮತಿಗೆಡಿಸಿತೇನೆಲೊ ರತಿಪತಿಪಿತನಂಘ್ರಿಸ್ತುತಿಯನೆ ಮರೆತಿ 1 ಸೂಳೆಯರ ಗಾಳ್ಯೆಂಬ ಹಾಳುಬವ್ವ ತಾಕಿತೇ ಕೀಳು ಸಂಸಾರದ ಮಹ ಗೋಳು ಭೂತ್ಹಿಡೀತೇ ಸಾಲಿಗರ ಭಯಭೂತ ನಾಲಿಗೆಯ ಸೆಳೆಯಿತೇ ನೀಲಶಾಮನ ಭಜನಫಲವೆ ಮರೆತೆಲ್ಲೊ 2 ಪೋದವಯ ಪೋಯಿತು ಆದದ್ದಾಗ್ಹೋಯಿತು ಪಾದದಾಸರಕೂಡಿ ಶೋಧಮಾಡಿನ್ನು ಭೂಧವ ಶ್ರೀರಾಮನ ಪಾದವನು ನಂಬಿ ಭವ ಬಾಧೆ ಗೆಲಿದಿನ್ನು ಮುಕ್ತಿ ಹಾದಿಯ ಕಾಣೊ 3
--------------
ರಾಮದಾಸರು
ಆಸೆನೀಗೋ ಹೇಸಿಮನವೆ ಕೇಶವನಂಘ್ರಿ ದಾಸನಾಗೊ ಪ ಸಕಲಭೋಗಭಾಗ್ಯ ಬರುವ ಅಖಿಲ ಸುಖದು:ಖಂಗಳೆಲ್ಲ ಭಕುತಿದಾರ್ಯಗರ್ಪಿಸಿ ಹರಿ ಭಕುತಿಯಿಂದಪಮೃತ್ಯು ಗೆಲಿಯೊ 1 ವಂದನೆ ಸ್ತುತಿ ಮಾನ ಮನ್ನಣೆ ಬಂದು ಕುಂದು ನಿಂದೆಯೆಲ್ಲ ಮಂದರಾದ್ರಿಯ ನಿಲಯಗೆಂದಾ ನಂದದಿಂ ಭವಬಂಧ ಗೆಲಿಯೊ 2 ಪೊಡವಿಸುಖಕೆ ಮೋಹಿಸದೆ ನೀ ಕೆಡುವಕಾಯಮೋಹ ತೊಡೆದು ಒಡೆಯ ಶ್ರೀರಾಮನಂಘ್ರಿ ಕಮಲ ಧೃಢದಿ ಭಜಿಸಿ ಮುಕ್ತಿ ಪಿಡಿಯೊ 3
--------------
ರಾಮದಾಸರು
ಇತ್ತ ಬಾರೊ ಒಲವುತ್ತ ಬಾರೊಹತ್ತವತಾರದ ಚಿತ್ರಚಾರಿತ್ರ ಎನ್ನತ್ತ ಬಾರೊಪ. ಒದ್ದು ಶಕಟನ ಮುರಿದ ಶಿಶುವೆ ನೀನೆದ್ದು ಬಾರೊ ಅ-ಳದ್ದು ಬ್ರಹ್ಮಾಂಡವ ಸೀಳ್ದ ಮಹಿಮೆಸಾಲದ್ದೆÉ ಬಾರೊಕದ್ದು ಬೆಣ್ಣೆನೇಕೆ ಮೆದ್ದೆ ದಾರಿದ್ರವೆ ಮುದ್ದೆ ಬಾರೊ ಆಡು-ತಿದ್ದ ಮಕ್ಕಳ ನೀನು ಗುದ್ದಿ ದೂರನು ತರುತಿದ್ದೆ ಬಾರೊ 1 ಹಿಂದೆ ಬಾಯೆಂದರೆ ಮುಂದೆ ಬಾಹೆ ಗೋವಿಂದ ಬಾರೊ ಎನ್ನ ಕಂದ ಬಾಯೆಂದರೆ ಮುಂದೆ ನಿಲುವೆ ಮುಕುಂದ ಬಾರೊಬಂದೆನ್ನ ಮುಂದೆ ನೀ ನಿಂದಿರು ನಿತ್ಯಾನಂದ ಬಾರೊಎಂದೆಂದು ಭಕುತರ ಹೊರೆದಿಹ ಕಾರುಣ್ಯಸಿಂಧು ಬಾರೊ 2 ಮಂಥನ ಮಾಡಲು ನಿಂತೆÀ ಕಡೆಗೋಲ ನೇಣಾಂತೆ ಬಾರೊಸಂತರಿಗನುದಿನ ಸಂತೋಷವೀವ ನಿಶ್ಚಿಂತ ಬಾರೊಅಂತವಿಲ್ಲದ ಮಾರಾಂತನ ಗೆಲಿದ ಕೃತಾಂತ ಬಾರೊಅಂತಿಂತೆನದೆ ಮಾಕಾಂತ ಹಯವದನನನಂತ ಬಾರೊ3
--------------
ವಾದಿರಾಜ
ಇಂದರೆ ರಮಣಾ ಇಟ್ಟಾಂಗಿರಬೇಕು ಪ ಒಮ್ಮಿಗೆ ಕದಶನ ಶಾಖಾ ಆಹಾರವ ನೀಡುವನು ಒಮ್ಮಿಗೆ ಷೆಡ್ರಸದ್ದನ್ನವ ಸಾರುಣಿಸುವನು 1 ಒಮ್ಮಿಗೆ ಜೀರ್ಣ ಕಂಥಾಧಾರಿಯೆನಿಸುವನು| ಒಮ್ಮಿಗೆ ದಿವ್ಯಾಂಬರಗಳ ನುಡಿಸಿ ನೋಡುವನು 2 ಒಮ್ಮಿಗೆ ಧರಿಯಲಿ ತೋಳತಲೆದಿಂಬದಲಿಡುವಾ| ಒಮ್ಮಿಗೆ ಪರ್ಯಾಂಕಾಸನ ಸಂಪದ ಕೊಡುವಾ 3 ಒಮ್ಮಿಗೆ ಕವಡಿ ಲಾಭಕ ಕೃತ-ಕೃತ್ಯೆಯೆನಿಸುವನು ತಂದೆ ಮಹಿಪತಿ-ಕಂದಗ ಸಾರಿದ ನಿಜ ಖೂನಾ 4 ತಂದೆ ಮಹೀಪತಿ-ಕಂದಗ ಸಾರಿದ ನಿಜ ಖೂನಾ| ದ್ವಂದ್ವ ಗೆಲಿದು ಸ್ವಾನಂದದಲಿರುವವನೇ ಜಾಣಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇಂದು ಸಾರ್ಥಕವಾಯ್ತು ಹಿಂದೆ ಮಾಡಿದ ಪೂಜೆ ಪ ಬಂದು ಗುರುವರ್ಯರ ಬೃಂದಾವನವ ನೋಡಿ ಅ.ಪ ಮಂಗಳತರಂಗಿಣಿಯ ತಂಗಾಳಿ ಸೇವಿಸುತ ತುಂಗ ಫಣಿಶಾಯಿಯ ಅಪಾಂಗಪಾತ್ರರ ಕಂಡು1 ಜ್ಞಾನ ವೈರಾಗ್ಯ ಭಕ್ತಿಗಳ ಮೂರ್ತಿಗಳಂತೆ ನಾನಾಭರಣ ಸೇವೆ ಅರ್ಪಿಸಿದವರ ಕಂಡು 2 ಸ್ವಾಂತವನು ಗೆಲಿದು ಪ್ರಸನ್ನ ಮಾನಸರಾಗಿ ಶಾಂತಿಯನು ಪಡೆದ ಏಕಾಂತ ಭಕುತರ ನೋಡಿ 3
--------------
ವಿದ್ಯಾಪ್ರಸನ್ನತೀರ್ಥರು
ಇದುಸ್ನಾನ ಇದುಸ್ನಾನ ಇದುಸ್ನಾನವಯ್ಯ ಸದಮಲಜ್ಞಾನಿಗಳು ಮನವೊಪ್ಪಿ ಮಾಡ್ವ ಪ ಇಟ್ಟು ಹಂಗಿಸದ್ದೆ ಸ್ನಾನ ಕೊಟ್ಟು ಕುದಿಯದ್ದೆ ಸ್ನಾನ ಕೊಟ್ಟದ್ದು ಕೊಡುವುದೇ ಶಿಷ್ಟ ತುಂಗಾಸ್ನಾನ ನಿಷ್ಠರಾಡದ್ದೆ ಸ್ನಾನ ದುಷ್ಟಸಂಗಳಿವುದೇ ಸ್ನಾನ ಶಿಷ್ಟಜನಸಂಗವೇ ನಿಜ ಕೃಷ್ಣಾಸ್ನಾನ 1 ಭವ ಅದು ಸ್ನಾನ ಕ್ಷೀರಸಾಗರ ಸ್ನಾನ ರಾಗನೀಗ್ವುದೆ ಸ್ನಾನ ಜಾಗರಣ ಸದಾಸ್ನಾನ ಭಾಗವತರೊಲುಮೆ ನಿಜ ಭಾಗೀರಥೀಸ್ನಾನ 2 ಮರೆವ ತರಿವುದೆ ಸ್ನಾನ ಅರಿವು ತಿಳಿವುದೆ ಸ್ನಾನ ಪರಮಜ್ಞಾನ ನಿಜ ಸುರಗಂಗಾಸ್ನಾನ ಕರುಣ ಪಡೆವುದೆ ಸ್ನಾನ ಮರಣಗೆಲಿವುದೆ ಸ್ನಾನ ಹರಿದಾಸರೊಡನಾಟ ಸರಸ್ವತೀ ಸ್ನಾನ 3 ವಾದನೀಗ್ವುದೆ ಸ್ನಾನ ಭೇದ ಅಳಿವುದೆ ಸ್ನಾನ ಮಾಧವನ ಕಥಾಶ್ರವಣ ಸದಾ ಯಮುನಾ ಸ್ನಾನ ವೇದವನರಿವುದೆ ಸ್ನಾನ ಬೋಧಪಡೆವುದೆ ಸ್ನಾನ ಸಾಧುಸಜ್ಜನಸೇವೆ ಗೋದಾವರೀಸ್ನಾನ 4 ನೇಮನಿತ್ಯವೆ ಸ್ನಾನ ತಾಮಸ್ಹರಣವೆ ಸ್ನಾನ ಕಾಮತೊಳೆವುದೆ ನಿಜ ಭೀಮಾನದೀಸ್ನಾನ ಕ್ಷೇಮಸಾಗರ ತ್ರಿಭೂಮಿಯೊಳಧಿಕ ಶ್ರೀ ರಾಮನಡಿಭಕುತಿಮುಕ್ತಿ ಹೇಮಾನದೀಸ್ನಾನ 5
--------------
ರಾಮದಾಸರು
ಇನ್ನಾರೆ ತಿಳಿದು ನೋಡು ಮನರಾಯಾ | ನಿನ್ನ ಕಣ್ಣದೆರೆದು ಸ್ವ ಹಿತದ ಉಪಾಯಾ ಪ ನಾನಾ ಜನ್ಮದಲ್ಲಿ ಬಂದು ಧರೆಯಲ್ಲಿ ಸುಖ | ವೇನು ಪಡೆದಿ ಹರಿಯ ಸ್ಮರಣೆ ಮರೆದಿಲ್ಲಿ 1 ಶರಗೊಡ್ಡಿ ಬೇಡಿಕೊಂಬೆ ನಾನೀಗಾ | ಸ್ಥಿರವಾದರಿಲ್ಲ ದೂರ ಶಿವಯೋಗಾ 2 ಇಂದು ನಾಳೆವೆನ್ನಬೇಡಿ ನಿಶ್ಚಯಾ ನಿನಗ | ಮುಂದ ಮತ್ತ ದೊರೆಯದಿದ ನರದೇಹಾ 3 ತಂದೆ ಮಹಿಪತಿಸ್ವಾಮಿ ದಯದಿಂದ | ನಂದವ ಪಡೆದು ಗೆಲಿಯೋ ಭವದಿಂದಾ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇನ್ಯಾಕೆ ದೇವಿ ಮುನಿಸು ಮಾತಾಡೇ| ನಿನ್ನ ಹಿಡಿದ ಛಲ ಗೆಲಿಸಿದ ಬಳಿಕ ಪ ಘನ ಮಳೆಗರವ ಜೀಮ್ಯೂತಮ್ಯಾಲೇ|ತಾ| ಮುನಿಪ ಕೋಪದಿ ಪೋಗುತಲಿಹ| ಮನ ದೊಳಗಿದ್ದ ಚಾತಕನಂತೆ ನಿನ್ನ ಮ್ಯಾಲೆ| ವನರುಹ ನೇತ್ರ ನಾ ಮುನಿದುದು ಕಾಣೆ 1 ಸಂಗತಿಲ್ಲದೆ ನಿನ್ನಾಂಗ ನಟ್ಟುಳಿಯಿಂದ| ಭಂಗ ಗೊಂಡಿಹುದು| ತುಂಗ ಪಯೋಧರೆನ್ನಂಗ ತೋಷಿಸುವ ತಾ| ಲಿಂಗನ ಗೈಯೆ ನೀ ಮಂಗಳವದನೇ 2 ನಿನ್ನಿಂದಾಗಲಿ ಮತ್ತ ನನ್ನಿಂದಾಗಲಿ ಇನ್ನು ಮುನ್ನಾದ ಮನದ ಗಂಟು ಬಿಟ್ಟು| ಪನ್ನಗವೇಣಿ ಮಾತಾಡೇ ಸದ್ಗುಣದ ಸಂ| ಪನ್ನೇ ಮಹಿಪತಿ ಸುತಗೊಲಿದ ಶ್ರೀದೇವಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಈತ ಅಂಜನೆಸುತನು ಭೀಮರಾಯನು ಪ. ಈತ ರಾಮರ ಬಂಟನು ಈತ ಕೋಟಿಲಿಂಗವನ್ನು ರೋಮರೋಮದಿ ಧರಿಸಿದವನು ಈತ ಲೋಕ ಪ್ರಖ್ಯಾತನು ಭೀಮರಾಯನು ಅ.ಪ. ಪುಟ್ಟಿದಾಗಲೆ ಗಗನಮಂಡಲವನ್ನು ಮುಟ್ಟಿ ರವಿಯನು ತುಡುಕಿ ಹನುಮರಾಯನು 1 ವಂಚನಿಲ್ಲದೆ ಮಾಡಿದ ವನವ ಕಿತ್ತನು ಭೀಮರಾಯನು 2 ಲಂಕಿಣಿಯನೆ ತುಡುಕಿ ಮಾಯಾಜಾಲವ ಶಂಕೆಯಿಲ್ಲದೆ ಗೆಲಿದ ಭೀಮರಾಯನು 3 ವೀರರ ಗೆಲಿದ ಶೂರನು ಭೀಮರಾಯನು 4 ಲೆಕ್ಕವಿಲ್ಲದೆ ಖಳರ ಗೆಲಿದು ಬಂದು ಕೊಕ್ಕನೂರೊಳುನಿಂತನು ಭೀಮರಾಯನು 5
--------------
ಹೆಳವನಕಟ್ಟೆ ಗಿರಿಯಮ್ಮ
ಈತನೀಗ ವಾತಜಾತನು ತನ್ನ ಪ ತÁತಗಾಗಿ ದನುಜಕುಲವಘಾತಿಸಿದ ವನೌಕಸಾರ್ಯಅ.ಪ. ಅಂಬುಧಿಯ ಲಂಘಿಸಿ ಭರದಿಲಂಬ ಶಿಖರದಲ್ಲಿ ಧುಮುಕಿಸಂಭ್ರಮದಿಂದ ಲಂಕೆಗೆ ಪೋಗಿಅಂಬುಜಾಕ್ಷಿಯನರಸಿದಾತ1 ಧರಣಿಸುತೆಯ ಚರಣಕೆರಗಿಕರುಣಿ ರಾಮನುಂಗುರವಿತ್ತುಕರದಿ ದಾನವರನು ಸವರಿಶರಧಿಯನುತ್ತರಿಸಿದಾತ 2 ಕಡಲ ತಡಿಯೊಳಿರ್ದ ಕಪಿಗ-ಳೊಡನೆ ರಾಮನಂಘ್ರಿಗೆರಗಿಮಡದಿ ಚೂಡಾರತುನವಿತ್ತುಕಡು ಕೃತಾರ್ಥನೆನಿಸಿಕೊಂಡ 3 ದುರುಳ ಕೌರವನನುಜನುರವಕರದಿ ಸೀಳಿ ರಕ್ತವ ಸುರಿದುನರಸಿಂಹನಿಗೆ ಅರ್ಪಿಸಿದಧರೆಗೆ ಭೀಮನೆನಿಸಿದಾತ 4 ಇಳೆಯೊಳಿದ್ದ ಮಧ್ಯಗೇಹನಕುಲದಿ ಜನಿಸಿ ಶುದ್ಧವಾದನಳಿನನಾಭನ ಒಲುಮೆಯಿಂದಮಲಿನರನ್ನು ಅಳಿದ ಧೀರ 5 ಇಪ್ಪತೊಂದು ಕುಮತಗಳನುಒಪ್ಪದಿಂದ ಗೆಲಿದು ಭಕ್ತಕಲ್ಪವೃಕ್ಷನೆನಿಸಿ ಮೆರೆದಸರ್ಪಶಯನನ ನಿಜವ ತೋರ್ದ6 ಧರಣಿ ಮಂಡಲದೊಳಗೆ ಭೂಮಿಸುರರ ಗಣಕೆ ಶಾಸ್ತ್ರಾಮೃತವಎರೆದು ಕೃಷ್ಣನ ಇರವ ತೋರಿವರ ಬದರಿಯೊಳ್ ನಿಂದ ಧೀರ7
--------------
ವ್ಯಾಸರಾಯರು
ಈತನೇ ಲೋಕಗುರು ವೇದವಿಖ್ಯಾತ ಪ. ಭೂತಳದಿ ಶ್ರೀರಾಮದೂತನೆಂಬಾತಅ.ಪ. ಅಖಿಳ ಉದಧಿ ಲಂಘಿಸಿದಇಂದೀವರಾಕ್ಷಿಗೆ ವಂದಿಸಿ ಮುದ್ರಿಕೆಯನಿತ್ತುಬಂದು ರಾಮರ ಪಾದಕೆರಗಿ ನಿಂದಾತ 1 ಅರ್ಜುನಗೆ ಅಣ್ಣನಾಗಿ ಅಂದು ದುರ್ಯೋಧನನಲಜ್ಜೆಯನೆ ಕೆಡಿಸಿ ಷಡ್ರಥಿüಕರನು ಗೆಲಿದಮೂಜ್ಜಗವು ಮೆಚ್ಚಲು ಮುನ್ನ ಮಾಗಧನ ಸೀಳಿದಸಜ್ಜನಪ್ರಿಯ ಭೀಮಸೇನನೆಂಬಾತ2 ಮೂರಾರು ಎರಡೊಂದು ಮೂಢಮತಗಳ ಜರಿದುಸಾರ ಮಧ್ವಶಾಸ್ತ್ರವನು ಸಜ್ಜನರಿಗೊರೆದುಕೂರ್ಮ ಶ್ರೀ ಹಯವದನನ ಪೂರ್ಣ ಸೇವಕನಾದಧೀರ ಮಧ್ವಾಚಾರ್ಯ ಲೋಕದೊಳು ಮೆರೆದ 3
--------------
ವಾದಿರಾಜ
ಎಚ್ಚರಾದರು ದೇವಗಣರಿಂದು ನಮ್ಮ ಲಕ್ಷ್ಮೀರಮಣ ಕೃಷ್ಣ ರಥವನೇರುವನೆಂದು ಪ. ಶಿಂಶುಮಾರ ಚಕ್ರದಂಶಮಕರ ತಿ- ಗ್ಮಾಂಶು ಸಂಕ್ರಮಿಸುವ ಸಮಯದಲಿ ಕಂಸಮರ್ದನ ಯದು ವಂಶಾಬ್ಧಿ ಚಂದ್ರ- ವಿಪಾಂಗಗಮನನಾಗಿ ವೀಧಿಗೆ ಬಹನೆಂದು 1 ಕಂದನ ಸಂಭ್ರಮ ತಂದೆಗೆ ಸುಖಕರ- ವೆಂದು ಪೇಳುವ ಮಾತ ನಿಜವ ದೋರಿ ಮಂದರಧರ ಮನ್ಮಥನ ಕೇತು ಬೆಳಗುವಾ- ನಂದದಿ ರಥವೇರುತ್ತಿಂದು ಬರುವನೆಂದು 2 ಮೋಕ್ಷದಾಯಕ ಕಮಲಾಕ್ಷ ಕೃಷ್ಣನ ಸ- ತ್ಕಟಾಕ್ಷ ಸಂಪಾದಿಪಪೇಕ್ಷೆಯಲಿ ತ್ರ್ಯಕ್ಷಾಧ್ಯಕ್ಷಲೋಕಾಧ್ಯಕ್ಷರೆಲ್ಲರು ಕೂಡಿ ಪಕ್ಷಿವಾಹನನನ್ನು ಈಕ್ಷಿಪ ತವಕದಿ 3 ಪೃಥೆಯ ಕುಮಾರನ ರಥವ ನಡಸುತತಿ- ರಥರನು ಗೆಲಿಸಿ ಸಾಮ್ರಾಜ್ಯವಿತ್ತ ಕಥೆಯ ಕೇಳ್ಪರ ಮನೋರಥಗಳ ಕೊಡುವ ಮ- ನ್ಮಥನ ಜನಕ ಮುಕ್ತಿ ಪಥವ ತೋರುವನೆಂದು 4 ಸಿದ್ಧಿ ವಿಘ್ನಮುಖ ದೋಷಭೇಷಜ ಭಕ್ತಿ ಸಿದ್ಧ ಜಪರಿಗೆ ಸಿದ್ಧಿಸುವನೆಂದು ಮಧ್ವಮುನಿಯು ತಂದಿಲ್ಲಿರಿಸಿ ಪೂಜಿಸಿದಂಥ ಸಿದ್ಧಾಂತವೇದ್ಯನಿರುದ್ಧನಿಲ್ಲಿಹನೆಂದು 5 ಧಾರುಣಿಯೊಳಗಿನ ವಿಷ್ಣುಭಕ್ತರ ಸಂಘ ಸೇರಿ ಸಂತೋಷದಿ ಜಯವೆನಲು ಪಾರಿವ್ರಾಜರು ಕೂಡಿ ಪರತತ್ವ ನುಡಿಯೆ ಸ- ರ್ಪಾರಿಯನೇರಿ ಸಮೀರೇಡ್ಯಬಹನೆಂದು 6 ಮಾಯಿಜನರ ಮುರಿದೊತ್ತುತ ತತ್ವರ- ಸಾಯನ ಸುಧೆಯ ಸಜ್ಜನರಿಗಿತ್ತು ವಾಯುಮುನಿಯು ಪ್ರತಿಷ್ಠೆಯ ಗೈದ ಪುರುಷಾರ್ಥ ದಾಯಕ ವೆಂಕಟರಾಯನೀತನೆಯೆಂದು 7
--------------
ತುಪಾಕಿ ವೆಂಕಟರಮಣಾಚಾರ್ಯ
ಎಣಿಸಲೆನ್ನಳವೆ ನಿನ್ನ ಮಹಿಮೆಗಳ ಗುಣಗಣನುತ ನಾಮ ಕೋದಂಡರಾಮ ಪ. ಲಲನೆ ಧರಿತ್ರಿಯ ಪೊರೆದೆ ಛಲದಿ ಹಿರಣ್ಯಕಶಿಪುವ ಸಂಹರಿಸಿದೆ ಇಳೆಯಾಪೇಕ್ಷಿಸಿದೆ ಬಲಿಯ ಭಂಜಿಸಿದೆ 1 ದುರುಳ ರಾಯರ ತರಿದೆ ಹರನ ಬಿಲ್ಲ ಮುರಿದೆ ನರಗೆ ಸಾರಥಿಯಾಗಿ ಮೆರೆದೆ ತರುಣಿಯರ ವ್ರತ ಗೆಲಿದೆ ತುರಗವನೇರಿ ಶರಣಾಗತರನ್ನು ಪೊರೆವುದು ನಿನ್ನ ಬಿರುದೆ 2 ಕರುಣಾಸಾಗರ ನಿನ್ನ ಚರಣಸೇವೆಗೆ ಎನ್ನ ಕರುಣಿಸು ಗುಣಸಂಪನ್ನ ಸ್ಮರನಜನಕÀ ಚೆನ್ನ ಧರಣಿಜೆಯ ಮೋಹನ್ನ ಸ್ಥಿರವಾದ ಲಕ್ಷ್ಮೀಶ ಕರುಣಿಸೊ ಹಯವದನ 3
--------------
ವಾದಿರಾಜ
ಎಂಥ ಶೂರನೊ ರಾಮ ಎಂಥ ಧೀರನೊ ಪ ಕಂತುಹರನ ಧನುವನೆತ್ತ ಪಂಥದಿಂದ ಮುರಿದು ಬಿಸುಟ ಅ.ಪ. ಹಲವು ಶೂರರಾಜರದನು ಚಲಿಸಲಾಗದ ಧನುವ ಸುಲಭದಿಂದಲೆತ್ತಿ ಮುರಿದು ಲಲನೆ ಸೀತೆಯೊಲಿಸಿದವನು 1 ಸಕಲ ಕ್ಷತ್ರಿಯರನು ಗೆಲಿದು ಪ್ರಕಟನಾದ ಪರಶುರಾಮ ಶಕುತಿಯನ್ನು ತಾನು ಪರಮ ಯುಕುತಿಯಿಂದ ಗೆಲಿದು ಬಂದ 2 ಸಾಲು ಶಿರನ ಕೀಟವೆಂದು ಬಾಲದಲ್ಲಿ ತಂದ ವೀರ ವಾಲಿಯನೇಕ ಬಾಣದಲಿ ಲೀಲೆಯಿಂದಲಿರಿದ ಜಾಣ 3 ಹತ್ತನಾಲ್ಕು ಲೋಕಗಳನು ಸುತ್ತಿಗೆಲಿದು ಖ್ಯಾತನಾದ ಹತ್ತು ತಲೆಯ ದುಷ್ಟನನ್ನು ಕತ್ತು ಕಡಿದು ಕೆಡಹಿದವನು 4 ರಾಸಿ ದೈತ್ಯರನ್ನು ಕೊಂಡು ದೇಶವನ್ನು ಉದ್ಧರಿಸಿದ ವಾಸವಾದಿ ಸುರನುತ ರಂ- ಗೇಶವಿಠಲರೇಯನವನು 5
--------------
ರಂಗೇಶವಿಠಲದಾಸರು
ಎನಗೆ ನೀ ಬಂಧು ಎಂದೆಂದು ದಯಾಸಿಂಧುಪ. ತಮನ ಕೊಂದೆ ಶ್ರುತಿತತಿಯ ನೀ ತಂದೆ ಕೂ-ರುಮನಾಗಿ ಗಿರಿಯನೆತ್ತಿದೆಕ್ಷಮೆಯ ಪೊತ್ತೆ ಹಿರಣ್ಯಕನ ಕಿತ್ತೆ ತ್ರಿವಿ-ಕ್ರಮನಾಗಿ ಬೆಳೆದೆ ತ್ರೈಲೋಕ್ಯವನಳೆದೆ 1 ರಾಯರಾಯರ ಗೆಲಿದೆ ರಾವಣಬಲವನು ಮುರಿದೆ ಉ-ಪಾಯದಿ ಗೋವಳನಾದೆಸ್ತ್ರೀಯರ ಕೆಡಿಸಿದೆ ಕಲಿಯಾಗಿ ಕೊಲಿಸಿದೆಕಾಯಜನ ತಾತ ಕಾಮಿತಫಲದಾತ 2 ಸಿರಿ ಹಯವದನ ಪಾವನ್ನಪರಿಪೂರ್ಣ ಶಶಿವರ್ಣನಿರುತ ನಿನ್ನವನ್ನ ಕಾಯಬೇಕೆನ್ನ 3
--------------
ವಾದಿರಾಜ