ಒಟ್ಟು 39 ಕಡೆಗಳಲ್ಲಿ , 29 ದಾಸರು , 38 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸತ್ಯಬೋಧರಾಯಾ ಪಾಲಿಸು (ನಿನ್ನ) ಭೃತ್ಯರ ನನ ಜೀಯಾ ಸ್ತುತ್ಯ ಸುಕಾಯ ಪ ದೂರ ನೋಡದಲೆನ್ನ ಗುರುವರ ಪಾರಗೈಪುದು ಮುನ್ನ ಶ್ರೀ ರಮಾರಮಣನಾರಾಧಕರೊಳು ಧೀರ ನಿನಗೆ ಸರಿಯಾರಿಹರಯ್ಯ 1 ಮತ್ತನಾಗಿಹೆ ನಾನು ಭವದಲಿ ಸತ್ತು ಹುಟ್ಟುತಲಿಹೆನು ಚಿತ್ತಕೆ ತರದಲೆನ್ನವಗುಣಗಳ ಮತ್ತೆ ಕೈಪಿಡಿಯುತಲೆತ್ತುವುದು 2 ಶರಣು ಶರಣು ದೊರೆಯೆ ಕರುಣದಿ ಪೊರೆದನ್ಯರನರಿಯೇ ಸಿರಿ ಮಧುಕರನಾಗಿರುತಿಹ 3
--------------
ಹನುಮೇಶವಿಠಲ
ಸಮಾಧಿಯೊಳು ನೋಡೊ ನಮ್ಮವ ರಮಾಪತಿ ನಿನ್ನೊಳಗಿರುತಿಹನೂ ಪ ಮಮೇಕ ಶರಣಂಬೆನ್ನುತಲೀ ಉಮಾಪತಿ ಗುಣ ನೀನಹುದೆನುತ 1 ಅನುದಿನ 2 ಪತಿ ಗುಣಹಾರಾ ತ್ರಿ ಗುಣಾಕಾರಾ ಅಸ್ಮದ್ದೇಶಿಕನೂ ಕಾಣಿರಿ ತುಲಸೀರಾಮನೆ ನಿರ್ಗುಣ 3
--------------
ಚನ್ನಪಟ್ಟಣದ ಅಹೋಬಲದಾಸರು
ಕಂಡೆ ಕರುಣನಿಧಿಯ | ಗಂಗೆಯ |ಮಂಡೆಯೊಳಿಟ್ಟ ದೊರೆಯ |ರುಂಡಮಾಲೆ ಸಿರಿಯ | ನೊಸಲೊಳು |ಕೆಂಡಗಣ್ಣಿನ ಬಗೆಯ | ಹರನ ಪಗಜಚರ್ಮಾಂಬರನ | ಗೌರೀ |ವರಜಗದೀಶ್ವರನ |ತ್ರಿಜಗನ್ಮೋಹಕನ | ತ್ರಿಲೋಚನ |ಭುಜಗಕುಂಡಲಧರನ | ಹರನ 1ಭಸಿತ ಭೂಷಿತ ಶಿವನ | ಭಕ್ತರ | ವಶದೊಳಗಿರುತಿಹನ |ಪಶುಪತಿಯೆನಿಸುವನ | ಧರೆಯೊಳು |ಶಶಿಶೇಖರ ಶಿವನ | ಹರನ 2ಕಪ್ಪುಗೊರಳ ಹರನ | ಕಂ | ದರ್ಪಪಿತನ ಸಖನ |ಮುಪ್ಪುರಗೆಲಿದವನ | ಮುನಿನುತ |ಸರ್ಪಭೂಷಣ ಶಿವನ | ಹರನ 3ಕಾಮಿತ ಫಲವೀವನ | ಭಕುತರ | ಪ್ರೇಮದಿಂ ಸಲಹುವನ |ರಾಮನಾಮಸ್ಮರನ ರತಿಪತಿ| ಕಾಮನ ಗೆಲಿದವನ | ಶಿವನ4ಧರೆಗೆ ದಕ್ಷಿಣ ಕಾಶೀ | ಎಂದೆನಿಸುವ |ವರಪಂಪಾವಾಸಿತಾರಕಉಪದೇಶಿ |ಪುರಂದರವಿಠಲ ಭಕ್ತರ ಪೋಷೀ | ಹರನ5
--------------
ಪುರಂದರದಾಸರು
ಕೆಟ್ಟೆನಲ್ಲೊ ಹರಿಯೆ |ಸಿಟ್ಟು ಮಾಡಿ ಎನ್ನ ಬಿಟ್ಟು ಕಳೆಯ ಬೇಡ ಪಬಂದೆನು ನಾ-ತಂದೆ-ತಾಯಿಗಳುದರದಿ |ಒಂದನೂ ಅರಿಯದೆ ಬಾಲಕತನದೊಳು ||ಮುಂದುವರಿದ ಯೌವನದೊಳು ಸತಿ-ಸುತ-|ರಂದವ ನೋಡುತ ನಿನ್ನ ನಾ ಮರೆತೆನೊ 1ಸ್ನಾನ-ಸಂಧ್ಯಾನವು ಹೀನವಾಯಿತು ಬಹು-|ಮಾನವಿಲ್ಲದೆ ಕುಲಹೀನರಾಶ್ರಯದಿಂದ ||ಙ್ಞÕನಿಗಳೊಡನಾಟವಿಲ್ಲದೆ ಮನದೊಳು |ದಾನ-ಧರ್ಮದ ಬಟ್ಟೆಯಂತೆಂದು ಮರೆತನು 2ಮೊದಲೆ ಬುದ್ದಿಯು ಹೀನ ಅದರೊಳು ವೃದ್ಧಾಪ್ಯ |ಕದನವು ದಶದಿಕ್ಕಿನುದಯದ ರಾಯರ ||ಎದೆನೀರು ಬತ್ತಿತು ಅದರಿಂದ ನಿನ್ನಯ |ಪದಪದ್ಮಯುಗಳದ ತುದಿಯ ನಾ ಮರೆತೆನು 3ಮೂಢನಾದೆನು ನಿನ್ನ ಬೇಡಿಕೊಳ್ಳದೆ ನಾನು |ಕಾಡೊಳಗಾಡುವ ಮೃಗದಂತೆ ಜೀವಿಸಿ ||ಗೂಡೊಳಗಿರುತಿಹ ಗೂಬೆಯ ತೆರನಂತೆ |ಮಾಡದೆ ನಿನ್ನಯ ಸ್ಮರಣೆಯ ಮರೆತೆನು 4ಬುದ್ದಿಹೀನನು ನಾನು ಉದ್ದರಿಸೆಲೊ ದೇವಮುದ್ದು ಶ್ರೀಪುರಂದರವಿಠಲನೆನ್ನ ||ಬುದ್ದಿಯೊಳಡಗಿಯೆ ತಿದ್ದಿಟ್ಟು ನಡೆಸಯ್ಯ |ಪೊದ್ದುವೆ ನಿನ್ನಯ ಚರಣಾರವಿಂದವ 5
--------------
ಪುರಂದರದಾಸರು
ತ್ವರಿತಾ ಬಾರಯ್ಯ ಹೇ ಶ್ರೀಯರಸ ವೆಂಕಟ ದೀನ |ಸುರತರುವೆ ದೇವೇಶವರಾಹಭೂಧರಧಾಮ|ಕರುಣಾ ಪಯೋದಧೆ ಸರ್ವ ರಕ್ಷಿ ಕಂಧರದೊಳ- |ಗಿರುತಿಹ ನರಗಜ ವದನನೇ ಪಇಳಿಪತಿಗಳ ಕೂಡ ಕಲಹ ಮಾಡಿ ತೋರೆಂದುಅಂಗಲಾಚಲಾ ಕುಂತೀದೇವಿ |ಗೊಲಿದಾಸೆ ಪೂರ್ತಿಸಿ ಅನಿಲಜನಾಗ ನಿನ್ನ ತೇರೊ-ತ್ತಲು ಹಿಂದಕ್ಕೆ ನೀ ನಗು- |ತ್ತಲೆ ಮುಂದಕ್ಕೆ ಬಂದಿ ದೂರಲಾಘವವಾದಿಂದಂದೀಗಹಲವು ಜನರು ಬಹು |ಬಲುವಿಂದ ರಥವನೆಳೆದರೂ ಬಾರದಿದುಖಲು ಸೋಜಿಗವೆಲೆ |ಹಲಧರನನುಜ ಕಡಲ ಮನೆ ಕಾರವಡಲ ರವಿದಶ ಧರಖಳವಿಪಿನದ್ವಿದಲ 1ಬರಬೇಡವೆಲವೊ ನಮ್ಮ ಮಂದಿರಾಕೆಂದು ಬಹಳಾ ಬೈ-ದರೂ ಮುದದಿಂದ ಗೋಪಿ- |ಯರ ಸದ್ಮಕೆ ಪೋಗುವೆಜರಿದುನಿನ್ನನು ತಾನಾತರಳನ ಕಾಯ್ವೆನೆಂದಾ |ನರನ ತಪ್ಪೆಣಿಸದೆ ಕರೆಯದಲೆ ಪೋದೆ ನಿ-ನ್ನರಮನೆಯ ತನಕಲಿ |ಎರಡೇ ಘಳಿಗೆಯೊಳು ಪರಿಪರಿ ಭಕುತ ಜನರುಗಳು ಬಿನ್ನೈ-ಪರು ಬೀದಿಗಳೊಳು |ಮೆರೆಯುತಲೀಗಲೆ ಸರಸರ ಬರುವದುಪರಮಾಯಾಸವೇ 2ಮೀನಾಕ್ಷಿ ಯಶೋದೆ ನಿನ್ನನು ಪೊತಾನೆಂದುನುಣ್ಣನೆ ತೊಟ್ಟಿಲೊಳಿಟ್ಟು |ತಾ ನುಡಿಯಲು ಜೋಗುಳಾನು ಕೇಳ್ವೆ ಕಿವಿಗೊಟ್ಟುನಾನಾಗಮ ಸಮ್ಮತ |ಗಾನ ಮಾಳ್ಪುದು ವಿದ್ವಾಂಸಾನೀಕವೀಗ ನಿನ್ನಧ್ಯಾನಕೆ ಬಾರದೆಯೇನು |ನಿನ್ನ ಬಗೆ ತಾನರಿಯಳು ಶ್ರೀಮಾನಿನಿಖಗವಹಶ್ರೀನಿಧೆ ಮೂರೊಂದು |ಹಾನಿರಹಿತ ಗದಾಪಾಣಿ ಹರಿಯೇ ಶ್ರೀ-ಪ್ರಾಣೇಶ ವಿಠಲನೆ 3
--------------
ಪ್ರಾಣೇಶದಾಸರು
ಯೋಗಿಯ ಭಾವವು ಆರಿಗು ತಿಳಿಯದುಯೋಗಿಯೆಂದೆನಿಪುದು ಸುಖವೋ ದುಃಖವೋಪನಾದವ ಸಾಧಿಸಿ ನಾದವ ಭೇದಿಸಿನಾದಾನಂದದಲಿ ಮುಳುಗಿರ್ದುನಾದಾಮೃತವನು ಸವಿಸವಿದುಂಬುವನಾದ ಮೂರುತಿಯವ ನರನೋ ಹರನೋ1ಅಂತರ್ಲಕ್ಷ್ಯ ಬಹಿರ್ಲಕ್ಷ್ಯವನೊಂದನು ತರಿಸಿದೆ ಸಮನಿಸುತಿರ್ದುಸಂತತ ಪೂರ್ಣಾನಂದದಿ ಮುಳುಗಿ ನಿ-ರಂತರ ಸುಖಿಪುದು ಉರಿಯೋ ಸಿರಿಯೋ2ಬಯಲಾಟವ ನೋಡಿ ಬಯಲೆಲ್ಲವ ಮಾಡಿಬಯಲ ಬಗೆಗೆ ತಾ ಓಲಾಡಿಬಯಲಿಗೆ ಬಯಲು ಬಯಲಾಗಿರುತಿಹಬಯಲಾನಂದವು ಭಯವೋ ಜಯವೋ3ಮೂರವಸ್ಥೆಯ ಮೂವರಿಗೊಪ್ಪಿಸಿಬೇರೆ ಸಾಕ್ಷ್ಯಗೆ ತಾನಿರುತಿದ್ದುತೋರುವುದೆಲ್ಲ ತನ್ನತನವೆಂದರಿತುಶೂರನಾಗಿರುವುದು ಗೆಲುವೋ ಒಲವೋ4ಗುರುಕೀಲನೆ ನೋಡಿ ಗುರುವೆಲ್ಲವ ಮಾಡಿಗುರುಲೀಲೆ ಯಂತಿರುತಿದ್ದುಗುರುಚಿದಾನಂದ ಮೂರುತಿಯ ಕೂಡಿರುತಿಹಗುರುತರ ತಾನದು ದೊರೆಯೋ ಚರಿಯೋ5
--------------
ಚಿದಾನಂದ ಅವಧೂತರು
ಶ್ರೀ ನರಸಿಂಹ ಸ್ತೋತ್ರ11ವಂದಿಸು ನರಹರಿಯ ಮನವೆ ವಂದಿಸು ನರಹರಿಯವಂದ್ಯವಂದ್ಯನು ಬಹು ಸುಂದರ ಸುಖಮಯಇಂದಿರರಸ ಅರವಿಂದ ಸುನಾಭನ ವಂದಿಸು ನರಹರಿಯ ಪಸಿಂಧುಸಂಚರ ಬಹು ಸುಂದರ ಗಿರಿಧರತಂದನು ವಸುಧೆಯ ಕಂದನ ಕಾಯ್ದ ಪುರಂದರವರದ ಮುನೀಂದ್ರ ಕುಮಾರ ಕಪೀಂದ್ರಗÉ ಒಲಿದಮರೇಂದ್ರಗೆ ಬೋಧಿಸಿನಿಂದ ದಿಗಂಬರಕುಂಭಿಣಿಸುರನುತಮಂದರಗಿರಿ ಎತ್ತಿ ಸಿಂಧುವಿಂದಲಿ ಬಂದುಅಂಧ ಮೂಢರ ತನ್ನ ಅಂದ ಮೋಹದಿಕಟ್ಟಿದಾನ್ತ ಸುರರಿಗೆಲ್ಲ ಚಂದ ಸುಧೆಯನಿತ್ತಇಂದಿರಾಕಾಂತನನಂತ ಸುಗುಣಗಳಚಿಂತಿಸಿ ಯೋಗ್ಯದಿ ಕಂದದ ಪ್ರೇಮದಿವಂದಿಸು ನರಹರಿಯ 1ವೇದಾಂತರ್ಗತಬಾದರಾಯಣಹರಿಪಾದಾರಾಧಕಮೋದಸುತೀರ್ಥರಪಾದಾವಲಂಬಕ ಸಾಧು ಸುಮೇಧರಹೃದಯಾಕಾಶದಿ ಪದುಮದ ಮೂಲದಿಸದಮಲಾತ್ಮನಾದಿತ್ಯನುಪೋಲುವಿಧವಿಧಭಾಸದಿ ಪದೆ ಪದೆ ನೋಡುತವಿಧಿಯ ತಾತನ ಬಹುಮೋದಸುಗುಣಗಳಮುದದಲಿ ಚಿಂತಿಪಕೋವಿದಹಿರಿಯರಪಾದಸುಪಾಂಶುವ ನಿಯಮದಿ ಪೊಂದಿ ನೀಪದುಮೇಶನ ನಿನ್ನ ಹೃದಯದಿ ಚಿಂತಿಸಿವಂದಿಸು ನರಹರಿಯ 3ನಿಜಸುಖಮಾರ್ಗದಿ ಭಜಕ ಬಾಲಕ ಪೋಗೆಅರ್ಜಿತ ದ್ವೇಷದಿ ಮೂರ್ಜಗ ಶತ್ರುಗಜಾದಿಗಳಿಂ ಹೆಜ್ಜೆಜ್ಜೆಗೆ ಬಾಧಿಸೆಧೂರ್ಜಟಸೇವ್ಯ ಜನಾರ್ಧನ ನರಹರಿಗರ್ಜಿಪ ವದನನು ಸಜ್ಜನಪಾಲಕಅಜಸುರರೆಲ್ಲರು ತೇಜೋಮಯ ಅತಿಜ್ವಲಿಸುವ ನಖದಿಂ ದುರ್ಜನ ರಾಜನಜೋಜ್ಜೆಯ ಛೇದಿಸಿ ಭಜಕಗೆ ವರವಿತ್ತುಸೃಜ್ಯಾಸೃಜ್ಯರ ಪ್ರಾಜÕನ ಮರೆಯದೆವಂದಿಸು ನರಹರಿಯ 3ಸೃಷ್ಟ್ಯಾಧೀಶನದೃಷ್ಟನಾಗಿರುತಿಹಸೃಷ್ಟಾಸೃಷ್ಟ ಪ್ರವಿಷ್ಟಾಸೃಷ್ಟನುಶಿಷ್ಟರ ಇಷ್ಟ ಸುದೃಷ್ಟಿಯ ಬೀರುತಶಿಷ್ಟರ ಬಹು ವಿಧ ಕಷ್ಟಗಳಳಿದುಅಭೀಷ್ಟಗಳೀವನು ದುಷ್ಟರ ಶಿಕ್ಷಿಪಭ್ರಷ್ಟಜನರಿಗಿವ ಸ್ಪಷ್ಟನಾಗುವನಲ್ಲಶ್ರೇಷ್ಠೋತ್ತಮಪರಮೇಷ್ಠಿಜನಕನಿವಕಾಷ್ಟಾಗ್ನಿಯವೊಲ್ ಅದೃಷ್ಟಾದೃಷ್ಟನುದುಷ್ಟದೂರ ವಾಸಿಷ್ಠ ಶ್ರೀ ಕೃಷ್ಣನುತಿಷ್ಟನು ನಿನ್ನೊಳುತ್ಕøಷ್ಟನೆಂದರಿತುವಂದಿಸು ನರಹರಿಯ 4ಸರಿಪರರಿಲ್ಲದ ಸಿರಿಯರಸನಚಾರುಚರಣಾರಾಧನ ಪರಸುಖವೀವುದುಸಿರಿದೊರೆ ಸುಹೃದನು ಸಿರಿಸಹ ಮೆರೆಯುತಅರಿತ ಸುಜನರನು ಪೊರೆವನು ದಯದಿಮೊರೆಯನು ಲಾಲಿಸಿ ಪೊರೆದನು ಗರ್ಭವಮರೆತು ನಾರಾ ಎಂದ ನರಸುರಗೊಲಿದನುಪೊರೆದನು ದಯದಿ ನರಾಧಮ ಎನ್ನನುಕರಿವರ ದ್ರೌಪದಿವರದ ವಿಖ್ಯಾತನುಸರಸಿಜಭವತಾತ ಪ್ರಸನ್ನ ಶ್ರೀನಿವಾಸಪೊರೆವನು ನೆನೆವರ ಸಿರಿಭೂದೊರೆಯೆಂದುವಂದಿಸು ನರಹರಿಯ 5
--------------
ಪ್ರಸನ್ನ ಶ್ರೀನಿವಾಸದಾಸರು
ಹರಿನಾಮವೆ ಜಯ ಮಂಗಳವು |ಶ್ರೀ ಹರಿನಾಮವೆಶುಭಮಂಗಳವು ||ಹರಿನಾಮವ ದಿನ ಸ್ಮರಿಸುವ ಸುಜನರ-ದುರಿತರಾಶಿಗಳೆಲ್ಲ ತರಿಯುವಮಾಧವ1ಉರಗಶಯನವರಪರಮೇಶನಸಖ|ಗರುಡಗಮನಸಿರಿಯರಸನೆಂದೆನಿಸಿದಹರಿ2ನಾರದಮುನಿ ಹರಿನಾರಾಯಣನೆಂದು |ಭಾರಿ ಭಜನೆ ಗೈವ | ಮಾರಜನಕನೆಂಬಹರಿ3ಅಜಾಮಿಳನಂತ್ಯದಿ | ಭುಜಗಶಯನನೆಂದು |ಭಜಿಸಲು ಸಲಹಿದವಿಜಯಸಾರಥಿಯಾದಹರಿ4ಸರಸಿಯೊಳ್ ಮೊರೆಯಿಟ್ಟು | ಮರುಗುವ ಗಜವನು |ಗರುಡನ ಹೆಗಲೇರಿ ಪಿಡಿದು ರಕ್ಷಿಸಿದಂಥ5ಶೇಷಗಿರಿಯ ಮೇಲೆ ವಾಸವಾಗಿರುತಿಹ |ದಾಸ ಜನರ ಪ್ರಿಯ | ದೋಷರಹಿತನೆಂಬ6ವೃಂದಾವನದೊಳಾ | ನಂದದೊಳಾಡುವ |ಸುಂದರಕರಗೋವಿಂದನೆಂದಿನಿಸಿದಹರಿ7
--------------
ಗೋವಿಂದದಾಸ