ಸ್ವಾಮಿ ನೀನಹುದೋ ಶ್ರೀಗುರು ಸಾರ್ವಭೌಮ
ನೇಮದಿಂದಲಿ ಹೊರೆವ ದಯಗುಣನಿಸ್ಸೀಮ ಧ್ರುವ
ಜಗತ್ರಯಕ ಜೀವಭಗತ ಜನಕಾವ
ಸುಗಮ ಸುಪಥವೀವ ಸುಗುಣ ಶ್ರೀದೇವ 1
ದಾತ ದೀನದಯಾಳು ನೀನಹುದು ಶ್ರೀನಾಥ2
ನಿಜದಾಸರ ಪಕ್ಷ ಸುಜನರ ಸಂರಕ್ಷ
ಗಜವರ ಸಮೋಕ್ಷ ಭಜಕರಿಗೆ ಸುಭಿಕ್ಷ 3
ತೇಜೋಮಯ ಸಾಂದ್ರ ನಿಜಸುಖ ಸಮುದ್ರ
ರಾಜಾಧಿರಾಜ ಮಹಾ ರಾಜರಾಜೇಂದ್ರ 4
ಶರಣಜನಪಾಲ ಸಿರಿಯ ಸುಖಲೋಲ
ತಗಳ ಮಹಿಪತಿ ಸ್ವಾಮಿ ನೀನಹುದೊ ಕೃಪಾಲ 5