ಒಟ್ಟು 36 ಕಡೆಗಳಲ್ಲಿ , 17 ದಾಸರು , 36 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಗಳುಹಿಂಗದಿರಲಿ ಎನ್ನ ನಿನ್ನಮಂಗಳಾಂಘ್ರಿ ಸರೋಜಂಗಳಲ್ಲಿ ಕೃಷ್ಣ ಪ.ಕ್ಷಿತಿಯನಳೆದ ಋಷಿಸತಿಯರಘ ಕಳೆದಶ್ರುತಿಸಾರಸ್ತುತಿಗೊಮ್ಮೆಗತಿ ಗೂಢದೊಲಿದಯತಿ ಮುನಿಜನ ದೇವತತಿಗಳ ಮನದಿಪ್ರತಿಕ್ಷಣ ತಟಿತದೀಧಿತಿಯುಳ್ಳ ಪದದಿ 1ಜಗದಘಹರಿಯೆಂಬ ಮಗಳನು ಪಡೆದಮಿಗಿಲಾದ ಕ್ರತುಕರ್ತನಿಗೆ ಒತ್ತಿ ಪೊರೆದಖಗವರಾದನ ಕರಯುಗಳೊಳು ಮೆರೆದವಿಗಡಾಹಿ ಮೌಳಿಯೋಳ್ ಧಿಗಿಲೆಂಬ ಪದದಿ 2ಶ್ರೀ ಚಕ್ಷುಚಕೋರ ಪೂರ್ಣಚಂದ್ರ ನಖದನೀಚಹಿಕೇತುವ ನಾಚಿಸಲೆಸೆದಶ್ರೀಚೆನ್ನ ಪ್ರಸನ್ವೆಂಕಟಾಚಲದೊಳಿದ್ದೆನ್ನಾಚರಣೆಗಕ್ಷಯ ಸೂಚಿಪ ಪದದಿ 3
--------------
ಪ್ರಸನ್ನವೆಂಕಟದಾಸರು
ಕರವೊಡ್ಡಿ ಬೇಡುವೆನು ಕಮಲದಳನೇತ್ರಕರುಣದಲಿ ಸಲಹೆನ್ನ ಕಾಮಹರ ಮಿತ್ರ ಪಕಾಯದಲಿ ಬಲವಿಲ್ಲ ಕಂಗಳಿಗೆ ಸುಖವಿಲ್ಲಕೈಯ್ಯೊಳಗೆ ಹಣವಿಲ್ಲ ಬಾಯಬಲವಿಲ್ಲಕಾಯವಿದು ನೀನಿಟ್ಟ ಮಾಯಪಾಶಕೆ ಸಿಕ್ಕಿಹೇಯವಾದುದು ಸಲಹೋ ಹೇ ಲಕ್ಷ್ಮೀರಮಣ 1ಕಾಲನಾಳುಗಳೆಮ್ಮ ಕಾಲಕೈಗಳಕಟ್ಟಿಕಾಲದಂಡದಿ ಬಡಿದು ಕಾಲನೆಡೆಗೈದೂಕಾಲಮೇಘದ ತೆರದಿ ಕಾಲನಂತೆ ಘರ್ಜಿಸುವಕಾಲದಲಿ ಕಾಯ್ವವರ ಕಾಣೆ ನಾಳಿನಲೀ 2ಕರಿರಾಜನನು ಕಾಯ್ದೆ ಕಂಬದಲಿ ಮೈತೋರ್ದೆಖರ ದೂಷಣ ನಿನ್ನ ಕರದಿ ಶಿರ ವರಿದೀಕರುಣದಿಂದಲಿ ದ್ರೌಪದಿಯ ಸೆರಗಿಗಕ್ಷಯವಿತ್ತೆಕರವಿಡಿದು ಸಲಹೆನ್ನ ಕಲುಶ ಸಂಹಾರಾ 3ಕಂದನಪರಾಧವನು ತಂದೆ ಕ್ಷಮಿಸುವ ತೆರದಿಕಂದುಕುಂದುಗಳೆನ್ನೊಳಿರಲು ನೀ ಕ್ಷಮಿಸಿಕಂದನಂದದಿ ನೋಡಿಕಂದರ್ಪಜನಕನೆಚಂದದಲಿ ಸಲಹೊ ಗೋವಿಂದದಾಸನನೂ 4
--------------
ಗೋವಿಂದದಾಸ
ನಿನ್ನ ಧ್ಯಾನ ಶುಭಮೂಹೂರ್ತ ನಿನ್ನ ಭಜನ ಶುಭದಿನವು ಪನಿನ್ನ ನಾಮ ಜಯಕಾರವು ನಿನ್ನ ಸ್ಮರಣ ಶುಭತಿಥಿಯುನಿನ್ನ ಸ್ತುತಿಯೆ ಶುಭಕಾಲ ಅನ್ಯ ಎಲ್ಲಪುಸಿಮಾಧವದೇವಅಪನಿತ್ಯನಿರುಪಮ ನಿನ್ನ ನಿತ್ಯದಲ್ಲಿ ಪೊಗಳುವುದೆಉತ್ತಮ ಶುಭವಾರವುಚಿತ್ತಜಪಿತ ನಿನ್ನ ಚಿತ್ತದಲಿ ನೆನೆಯುವುದೆಅತ್ಯಧಿಕ ಪಕ್ಷಮಾಸವುಮೃತ್ಯುದೂರನೆ ನಿನ್ನ ಸತ್ಕಥೆಯನಾಲಿಪುದೆ ನಕ್ಷತ್ರ ಶುಭಕರಣವುಭಕ್ತವತ್ಸಲ ನಿನ್ನ ಭಕ್ತಿಯಿಂ ಪಾಡುವುದೆನಿತ್ಯಅಮೃತಯೋಗವು ನಿಜವು1ದಿವನಿಶೆಯ ಇಡದೊಂದೆಸವನೆ ನಿನ್ನರಸುವುದೆರವಿಚಂದ್ರ ಭೌಮ್ಯ ಒಲವುಭವಪರಿಹರ ಸಿರಿಧವ ನಿನ್ನ ಸಚ್ಚರಿತಕವಿಗುರುಸೌಮ್ಯ ಬಲವುಬುವಿಯರಸ ನಿನ್ನಸಮ ಸುವಿಲಾಸ ಲೀಲೆ ಕೇಳಾವುದಮಿತ ಶನಿಬಲವುಭುವಿಜಪತಿ ಭಕ್ತಿಯ ಭವಭವದಿ ರಾಹುಕೇತುನವಗ್ರಹಂಗಳ ಬಲವು ಗೆಲವು 2ಕರಿಧ್ರುವರ ಪೊರೆದ ತವಪರಮ ಬಿರುದುಗಳನ್ನುಸ್ಮರಿಸುವುದೆ ಭವದೂರವುಹರದಿಗಕ್ಷಯವಿತ್ತ ವರದ ನಿನ್ನಡಿ ದೃಢವುಸ್ಥಿರಶಾಂತಿ ಸುಖಸಾರವುಸುರಗಣಕೆ ಸೌಖ್ಯವನು ಕರುಣಿಸಿದ ನಿಮ್ಮ ಮೊರೆಪರಲೋಕ ನಿಜಸ್ವಾದವುವರದ ಶ್ರೀರಾಮ ನಿಮ್ಮ ಚರಣದಾಸತ್ವದೆವರಮುಕ್ತಿ ಕೈಸಾಧ್ಯವು ಸ್ಥಿರವು 3
--------------
ರಾಮದಾಸರು
ಪೂರ್ವಜನ್ಮದಲಿ ನಾ ಮಾಡಿದಾ ಭವದಿಂದಉರ್ವಿಯೊಳು ಜನಿಸಿದೆನೊ ಕೃಷ್ಣ ಪಕಾರುಣ್ಯನಿಧಿಯನ್ನ ಕಾಯಬೇಕಯ್ಯಹರಿವಾರಿಜನಾಭನೇ ಮುದ್ದುಕೃಷ್ಣ ಅ.ಪಹುಟ್ಟಿದಂದಿಂದಿಗೂ ಸುಖವ ನಾ ಕಾಣದಲೆಕಷ್ಟನಾದೆನು ಕೇಳೊ ಕೃಷ್ಣತೊಟ್ಟಿಲಿನ ಶಿಶು ತಾಯ ಬಿಟ್ಟ ತೆರನಂತೆ ಕಂಗೆಟ್ಟು ಸೊರಗಿದೆನಯ್ಯ ಕೃಷ್ಣಮುಟ್ಟಲಮ್ಮರು ಎನ್ನಸತಿಸುತರು ಬಾಂಧವರುಅಟ್ಟಿ ಎಳೆಯುತ್ತಿಹರೋ ಕೃಷ್ಣಕಷ್ಟ ದಾರಿದ್ರ್ಯವನು ಪರಿಹರಿಸದಿರೆ ದೂರುಮುಟ್ಟುವುದು ನಿನಗಯ್ಯ ಕೃಷ್ಣ 1ಕಾಶಿಯಾವಾಸವನು ಬಯಸಿ ಬಹುದಿನದಿಂದಆಸೆಯೊಳಗಿದ್ದೆನಯ್ಯ ಕೃಷ್ಣಗಾಸಿಯನು ಮಾಡದಲೆ ದೋಷವನು ಪರಿಹರಿಸೊಸಾಸಿರನಾಮದ ಕೃಷ್ಣಹೇಸಿಕೆಯೊಳಿರ್ದ ಸಂಸಾರವೆಂಬುವ ಮಾಯಪಾಶದಿಂದಲಿ ಬಿಗಿದರೇ ಕೃಷ್ಣಕಂಸಮರ್ದನನೆ ನೀ ಕಾಯಬೇಕಯ್ಯಹರಿವಾಸುದೇವನೆ ಮುದ್ದು ಕೃಷ್ಣ 2ಲೋಕದೊಳಗೆನ್ನನು ಪೋಲ್ಪ ಪಾಪಿಗಳನ್ನುನೀ ಕಂಡು ಬಲ್ಲೆಯಾ ಕೃಷ್ಣಸಾಕಿನ್ನು ಎನಗೊಂದು ಗತಿಯ ತೋರಿಸಿ ಸದ್ವಿವೇಕಿಯನೆ ಮಾಡಯ್ಯ ಕೃಷ್ಣರಾಕೇಂದುಮುಖಿ ದ್ರೌಪದಿಯಮಾನವಕಾಯ್ದೆಆಕೆಗಕ್ಷಯವಿತ್ತೆ ಕೃಷ್ಣ ಪಿನಾಕಿಸಖಪುರಂದರವಿಠಲನೆ ಉಡುಪಿಯ ವಾಸಸಾಕಿ ಸಲಹೈ ಎನ್ನ ಕೃಷ್ಣ
--------------
ಪುರಂದರದಾಸರು
ವಿಠ್ಠಲನಾಮ ಸ್ಮರಣೆಯನನುದಿನಬಿಟ್ಟಿರಲಾಗದು ಮನವೇಪದುಷ್ಟ ವಚನವನು ಜಿಹ್ವೆಯೊಳೆಂದಿಗುಪಠಿಸಲು ಬೇಡವೋ ಮನವೇಅ.ಪಧಾರುಣಿಯೊಳುನರಶಾರೀರದಿ ಬಂದುಕ್ರೂರ ಕೃತ್ಯಗಳ ಮಾಡದಿರುಘೋರಪಾಪಿ ಅಜಾಮಿಳನನು ಕಾಯ್ದಾನಾರಾಯಣನನು ಮರೆಯದಿರೂ1ತಿಳಿದು ತಿಳಿದು ನೀ ಮರುಳನಾಗದಿರುಕಲಿಸಂಸಾರದಿ ಸುಖವಿಲ್ಲಾಹಳುವದಿ ಧ್ರುವನಿಗೆ ಒಲಿದ ಮಹಾತ್ಮನಸ್ಮರಿಸೈ ಕುಶಲದ ಮಾತಲ್ಲಾ2ಕಾಲನ ಬಾಧೆಗೆ ಸಿಲುಕುವ ಕಾರ್ಯವಮೇಲು ಉಲ್ಲಾಸದಿಂದೆಸಗದಿರೂಬಾಲ ಪ್ರಹ್ಲಾದನ ಪಾಲ ನರಸಿಂಹನಲೀಲೆಯೊಳಾದರು ಮರೆಯದಿರೂ3ದುಃಖ ಸಂತೋಷಕೆ ಹಿಗ್ಗದೆ ಕುಗ್ಗದೆರಕ್ಕಸ ವೈರಿಯ ಧೇನಿಪರೆದುಃಖಿಸೆ ದ್ರೌಪದಿ ಸೆರಗಿಗಕ್ಷಯವಿತ್ತರುಕ್ಮಿಣಿಯರಸನು ಪೊರೆವಖರೆ4ವ್ರತನಿಷ್ಠೆಗಳೆಂಬ ನೇಮವಿದ್ಯಾತಕೊವ್ಯಥೆಯೊಂದೆದೆಯೊಳಗಿರುತಿರಲುರತಿಪತಿಪಿತಗೋವಿಂದನ ಧ್ಯಾನದಿನುತಿಸಲು ಸುಲಭ ಸಾಯುಜ್ಯಗಳೂ5xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'
--------------
ಗೋವಿಂದದಾಸ
ಸ್ಮರಿಸು ಮನವೆ ಸ್ಮರಿಸು ಸ್ಮರನ ಪಿತನದುರಿತಭವಭಯಸಮೂಹದೂರಮಾವರನಪ.ಒಬ್ಬ ಬಾಲನಯ್ಯನ ಒದೆದಒಬ್ಬ ಬಾಲಗಟವಿಲೊಲಿದಒಬ್ಬ ಬಾಲನ ಅಪ್ಪಿ ರಾಜ್ಯವ ಒಬ್ಬ ಬಾಲಗಿತ್ತುಒಬ್ಬ ಬಾಲೆಯುಂಗುಟದಿ ಪೆತ್ತಒಬ್ಬ ಬಾಲೆಯುಂಗುಟದಿ ಪೊತ್ತಒಬ್ಬ ಬಾಲೆಗಕ್ಷಯ್ಯೆಂದು ಕುಕ್ಷಿಲೊಬ್ಬ ಬಾಲಪನ 1ಇಬ್ಬರ ಮೂರುಸಾರೆಲಳಿದಇಬ್ಬರಿಹ ಭೂಜವ ಮುರಿದಇಬ್ಬರೊಗ್ಗೂಡಿ ಬೆಳೆದು ಹನ್ನಿಬ್ಬರ ಬಡಿದಇಬ್ಬರ ಕಾರಾಗಾರ ತಗಿದಇಬ್ಬರುಪ್ಪು ಬೇಡಲಿ ಸದೆದಇಬ್ಬರಿಂದೈದಿ ಹೋಳಮಯ್ಯನ ನಿಬ್ಬರಿಸಿದನ 2ಮೂರು ಮನೆಯೊಳಗಿಹನಮೂರುಮಾತಿಗೆ ಹೊಂದದವನಮೂರು ಮೈಯನ ಕೃತ ಸೇವೆಗೆ ಮೂರು ರೂಪಾದನಮೂರು ಪೊಳಲ ಹಗೆಕಾರನಮೂರುವೆಂಬನುರುಹಿದನಮೂರಾಂತಕ ಪ್ರಸನ್ವೆಂಕಟ ಮೂರು ಲೋಕೇಶನ 3
--------------
ಪ್ರಸನ್ನವೆಂಕಟದಾಸರು