ಒಟ್ಟು 43 ಕಡೆಗಳಲ್ಲಿ , 23 ದಾಸರು , 40 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ತುಳಸಿ ಜಯ ತುಳಸಿ ಜಯ ಜಯಾ ಜಯತು ತುಳಸಿ ಶ್ರೀ ಕೃಷ್ಣನ ಅರಸಿ ಜಯತು ಜಯತು ಜಯ ಶುಭಕರಿ ಪ. ಪಾಲಗಡಲನು ಮಥಿಸೆ ಶ್ರೀಲೋಲ ಅಮೃತವನ್ಹಂಚೆ ಬಾಲ ಶ್ರೀ ಕೃಷ್ಣನ ಲೋಲ ಲೋಚನದಿ ಬಾಲೆ ನೀನುದಿಸಲುತ್ಸವದಿಂದ ಸುರರೆಲ್ಲ ಮೇಲೆ ಅಂಬರದಿಂದ ಪುಷ್ಪವೃಷ್ಟಿಯನು ಕರೆಯೆ ಜಯ ಜಯ ವಾದ್ಯದಿ 1 ದ್ವಿಜರೆಲ್ಲ ವೇದ ಘೋಷದಿ ನಿನ್ನ ಸ್ತುತಿಸಲು ಅಜಭವಾದಿಗಳೆಲ್ಲ ಸ್ತೋತ್ರವನು ಗೈಯ್ಯೆ ಭುಜಗಭೂಷಣಸಖನು ತ್ರಿಜಗವಂದಿತ ನಿನ್ನ ಭಜಕ ಜನರಾಪ್ತ ಶ್ರೀ ಕೃಷ್ಣ ವರಿಸಿದನೆ ಜಯ ಜಯ ಕಲ್ಯಾಣಿ 2 ದೇವಸ್ತ್ರೀಯರು ಬಂದು ದೇವ ಉಡುಪ ತಂದು ದೇವಕಿತನಯನ ಸಹಿತ ನಿನ್ನ ಪಾವನದರಿಶಿಣ ಕುಂಕುಮ ಪರಿಮಳ ಗಂಧದಿ ದೇವಿ ಪುಷ್ಪಮಾಲೆಯ ಪೂಜಿಸಿದರು ಸತಿ 3
--------------
ಸರಸ್ವತಿ ಬಾಯಿ
ಶ್ರೀ ಹರಿದಾಸವೃಂದ ಸ್ತೋತ್ರ (ಕೋಲು ಪದ) ಶ್ರೀ ಪುರಂದರದಾಸರು ಪರಮೇಷ್ಟಿ ಪಿತನಾಜ್ಞೆ ಧರಿಸಿ ಬಂದ ವರಸುರ ಮೌನಿಯವತಾರಿ ಕೋಲೆ | ವರಸುರ ಮೌನಿಯವತಾರಿಯಾದ ಪುರಂದರದಾಸರ ಬಲಗೊಂಬೆ ಕೋಲೆ 1 ಶ್ರೀ ವಿಜಯದಾಸರು ಪುಟ್ಟ ಬದರಿಯಲ್ಲಿ ಪುಟ್ಟಿ ಪುರಂದರ ಶ್ರೇಷ್ಟದಾಸರ ದಯಾಪಾತ್ರ ಕೋಲೆ | ಶ್ರೇಷ್ಟದಾಸರ ದಯಪಾತ್ರರಾದ ವಿಜಯ ವಿಠಲದಾಸರ ಬಲಗೊಂಬೆ ಕೋಲೆ 2 ಶ್ರೀ ಗೋಪಾಲದಾಸರು ನಾಗಭೂಷಣಸುತ ನಾಗಾಶ್ಯವಂಶಜ ಭಾಗವತಾಗ್ರಣಿ ಭಾಗಣ್ಣ ಕೋಲೆ | ಭಾಗವತಾಗ್ರಣಿ ಭಾಗಣ್ಣದಾಸರಿಗೆ ಬಾಗಿ ನಮಿಸಿ ಪ್ರಾರ್ಥಿಪೆ ಕೋಲೆ 3 ಶ್ರೀ ಜಗನ್ನಾಥ ದಾಸರು ಬಂದ ಸಹ್ಲಾದನಂಶಜ ಕೋಲೆ | ಬಂದ ಸಹ್ಲಾದನಂಶದ ಮಾನವಿ ಮಂದಿರ ದಾಸರಿಗೆ ವಂದಿಪೆ ಕೋಲೆ 4 ಶ್ರೀ ಪ್ರಾಣೇಶದಾಸರು ಶ್ರೀ ಗುರು ರಂಗವೊಲಿದ ಭಾಗವತರ ಛಾತ್ರ ದಾಗಿ ಶ್ರೀ ಹರಿಯ ಬಣ್ಣಿಸಿ ಕೋಲೆ | ಛಾತ್ರರಾಗಿ ಶ್ರೀಹರಿಯ ಬಣ್ಣಿಸಿದಂಥ ಲಿಂಗ ಸೂಗೂರ ದಾಸರಿಗೆ ವಂದಿಪೆ ಕೋಲೆ 5 ಪ್ರಾಣೇದಾಸರ ಸೂನುವೆನಿಸಿದ ಮಾನವಿ ರಾಯರ ಸೇವಿಸಿ ಕೋಲೆ | ಮಾನವಿ ರಾಯರ ಸೇವಿಸಿದಂಥ ಗುರು ಪ್ರಾಣೇಶದಾಸರ ಬಲಗೊಂಬೆ ಕೋಲೆ 6 ಶ್ರೀ ಶ್ರೀಶಪ್ರಾಣೇಶದಾಸರು ಗಂಧದ ಕೊರಡು ಪೆಟ್ಟು ತಿಂದು ಮಾವಂದಿರಿಂದ ಛಂದಾಗಿ ತತ್ವವರಿದಂಥ ಶ್ರೀ ರಘು | ನಂದನ ದಾಸರಿಗೆ ವಂದಿಪೆ ಕೋಲೆ 7 ಶ್ರೀ ಶೇಷದಾಸರು ಇಳೆಯೊಳು ಚಿಂತರವೇಲಿ ವಾನರೇಂದ್ರನ ಸಲೆ ಸೇವಿಸುತ ವಲಿಸಿದ ಕೋಲೆ | ಸಲೆ ಸೇವಿಸುತ ವಲಿಸಿದ ಗುರು ಪ್ರಥಮ ಶಿಲೆ ಶೇಷದಾಸರ ಬಲಗೊಂಬೆ ಕೋಲೆ 8 ಪಾರ್ಥಿವ ವರ್ಷದಿ ಪಾರ್ಥಸಾರಥಿ ಭವ್ಯ ಮೂರ್ತಿಯ ಮುದದಿ ಸ್ಥಾಪಿಸಿ ಕೋಲೆ | ಮೂರ್ತಿಯ ಮುದದಿ ಸ್ಥಾಪಿಸಿದಂಥ ಪೂರ್ವ ಪಾರ್ಥಾಹಿಪಾರ್ಯರ ಪ್ರಾರ್ಥಿಪೆ ಕೋಲೆ 9 ಪರಿವಾರ ಸಹಿತ ಚರಿಸುತ ಕೋಲೆ | ಪರಿವಾರ ಸಹಿತ ಚರಿಸುತ ಅಸಿಘ್ಯಾಳು ಪುರವಾಸ ದಾಸರಿಗೆ ಶರಣೆಂಬೆ ಕೋಲೆ 10 ಶ್ರೀ ಗುರು ಜಗನ್ನಾಥದಾಸರು ಸ್ವಾಮಿರಾಯರ ವಲಿಸಿ ಸ್ವಾಮಿರಾಯನಿಗೊಲಿದು ಸ್ವಾಮಿ ಶ್ರೀಹರಿಯ ಮಹಿಮೆಯ ಕೋಲೆ ಸ್ವಾಮಿ ಹರಿಯ ಮಹಿಮೆ ಪೇಳಿದ ಕೋಸಿಗಿ ಸ್ವಾಮಿರಾಯಾರ್ಯರ ಬಲಗೊಂಬೆ ಕೋಲೆ 11 ಶ್ರೀ ಇಂದಿರೇಶದಾಸರು (ತಿರುಪತಿ ಶ್ರೀ ಹುಚ್ಚಾಚಾರ್ಯರು) ಅಚ್ಭ ಸದ್ಭಕ್ತಿಯಲಿ ಅಚ್ಯುತಕೃಷ್ಣನ ಅರ್ಚಿಸಿ ವಿಧ ವಿಧ ಮೆಚ್ಚಿಸಿ ಕೋಲೆ | ಅರ್ಚಿಸಿ ವಿಧ ವಿಧ ಮೆಚ್ಚಿಸಿದಂಥ ಜ್ಞಾನಿ ಹುಚ್ಚಾಚಾರ್ಯರನ ಬಲಗೊಂಬೆ ಕೋಲೆ 12 ಶ್ರೀ ಭೀಮಸೇನಾಚಾರ್ಯರು ಕೊಪ್ಪರ ಶ್ರೀಮತ್ ಕಾರ್ಪರಕ್ಷೇತ್ರಧಾಮ ನರಸಿಂಹನ ನೇಮ ಪೂರ್ವಕದಿ ಪೂಜಿಸಿ ಕೋಲೆ | ನೇಮ ಪೂರ್ವಕದಿ ಪೂಜಿಸಿದಂಥ ಪೂಜ್ಯ ಭೀಮಸೇನಾರ್ಯಋ ಬಲಗೊಂಬೆ ಕೋಲೆ 13 ಶ್ರೀ ರಾಘಪ್ಪದಾಸರು ಮರುತನ ಪ್ರತ್ಯಕ್ಷಗೈದು ತನ್ನ ಗುರುತು ತೋರದೆ ಚರಿಸಿದ ಕೋಲೆ | ಗುರುತು ತೋರದೆ ಚರಿಸಿದ ರಘುಪತಿ ಚರಣ ಕಿಂಕರಗೆ ಶರಣೆಂಬೆ ಕೋಲೆ 14 ನೂರಾರು ಶಿಷ್ಯಪರಿವಾರ ಸಹಿತರಾಗಿ ಶೌರಿಕಥಾಮೃತ ಸವಿಯುತ ಕೋಲೆ | ಶೌರಿಕಥಾಮೃತ ಸವಿದಂಥ ಶ್ರೀ ರಘುವೀರನ ದಾಸರಿಗೆ ನಮಿಸುವೆ ಕೋಲೆ 15 ಗೋವಿಂದದಾಸರ ಭಾವಕ್ಕೆ ಮೆಚ್ಚಿ ದೇವನ ಮಹಿಮೆ ತೋರಿದ ರಾಘವಾಖ್ಯ ಕೋವಿದರಾಗ್ರಣಿಯ ಬಲಗೊಂಬೆ ಕೋಲೆ 16 ಶ್ರೀ ಗೋವಿಂಧದಾಸರು ಎಳೆಯತನದಿ ವಿದ್ಯ ಕಲಿಯದೆ ಹರಿನಾಮ ಬಲದಿಂದ ಜ್ಞಾನಿಗಳಿಸಿದ ಕೋಲೆ | ಬಲದಿಂದ ಜ್ಞಾನಗಳಿಸಿ ಅಸಿಷ್ಯಾಳು ನಿಲಯ ದಾಸರಿಗೆ ವಂದಿಪೆ ಕೋಲೆ 17 ಮಾವನ ವೈರಿಯಾದ ಮಾವರನ ಮನದಿ ಮಾವನನಂತೆಂದು ಭಾವಿಸಿ ಕೋಲೆ | ಮಾವನಂತೆಂದು ಭಾವಿಸಿ ಸ್ತನಿಸಿದ ಗೋವಿಂದದಾಸರ ಬಲಗೊಂಬೆ ಕೋಲೆ 18 ಬಂದ ವಿಪ್ರರಿಗೆ ಸಂದರುಶನದಿಂದ ವಂದಿಸಿ ಪರಮಾನಂದವ ಬಡು ಗೋ ವಂದಿಸಿ ದಾಸರಿಗೆ ವಂದಿಪೆ ಕೋಲೆ 19 ಲೇಸು ಭಕ್ತಿಯಿಂದ ದಾಸರ ಕವನ ಸುಧೆ ಪ್ರಾಶನಗೈದು ಸಂತತ ಕೋಲೆ | ಪ್ರಾಶನಗೈದು ಸಂತತ ಅಶಿಷ್ಯಾಳು ವಾಸದಾಸರಿಗೆ ಶರಣೆಂಬೆ ಕೋಲೆ 20 ಜಾಗರ ಶಿಷ್ಯ ಶ್ರೀ ಐಕೂರಾಚಾರ್ಯರು ಏಕಾಂತದಲಿ ಕುಳಿತು ಶ್ರೀಕಾಂತನ್ನ ವಲಿಸಿ ಲೋಕಾಂತರದಲಿ ಚರಿಸಿದ ಕೋಲೆ | ಲೋಕಾಂತರದಲಿ ಚರಿಸಿದ ನಮ್ಮಗುರು ಐಕೂರಾಚಾರ್ಯರಿಗೆ ಶರಣೆಂಬೆ ಕೋಲೆ 21 ಹುಟ್ಟಿದು ಒಂದೂರು ಮೆಟ್ಟಿದ್ದು ಬಹು ಊರು ಕಟ್ಟ ಕಡೆಯಲಿ ಹರಿಯೂರು ಕೋಲೆ | ಕಟ್ಟ ಕಡೆಯಲ್ಲಿ ಹರಿ ಊರು ಸೇರಿದಂಥ ಶ್ರೇಷ್ಟ ಸದ್ಗುರುಗಳ ಬಲಗೊಂಬೆ ಕೋಲೆ 22 ಹಾದಿ ಇದೆಂದು ಬೋಧಿಸಿದಂಥ ನಮ್ಮ ಮಾಧವೇಶಾಚಾರ್ಯರ ಬಲಗೊಂಬೆ ಕೋಲೆ 23 ಚತುರ ವಿಂಶತಿ ವರನುಡಿಗಳಿಂದೆಸೆಯುವ ರತುನ ಹಾರದ ಕೋಲುಪದ ಕೋಲೆ | ರತುನ ಹಾರದ ಕೋಲುತದ ನಿತ್ಯಪರಿಸುವರಿಗೆ ಶಾಮಸುಂದರವಿಠಲ ಮುದವೀವÀ ಕೋಲೆ 24
--------------
ಶಾಮಸುಂದರ ವಿಠಲ
ಶ್ರೀಹರಿ ಮೂಜಗದೊಳು ನೀನು ತೇಜವುಳ್ಳವನಾಗಿ ಪ ಕಾಲದಿ ನಿನ್ನಯ ಮೇಲಿಹ ನಿರ್ಮಾಲ್ಯ ಮಾಲೆಯನೆಲ್ಲ ವಿಸರ್ಜಿಸಿ ತೊಳೆದು ನೀಲಮಾಣಿಕ ವಜ್ರಮಯವಾದ ಪೀಠದ ಮೇಲೆ ವಾಲಗವಾಗಿ ಲೀಲೆಯ ತೋರುತ1 ಮೊದಲು ಸಂಕಲ್ಪಿಸಿ ತುಳಸಿ ಶ್ರೀಗಂಧದಿ ಉದಕ ಶುದ್ಧವ ಮಾಡಿ ಅದರೊಳು ಬಳಿಕ ವಿಧಿಸಿಯೆ ಮತ್ತೇಳು ನದಿಯನುಚ್ಚರಿಸಲು ಒದಗಿ ಬಾರೆಲೊ ಕರಚರಣ ಮಜ್ಜನಕೀಗ 2 ಮಾನಸದಘ್ರ್ಯವು ಆಚಮನಗಳು ನಾನಾ ಪಂಚಾಮೃತ ಫಲವಭಿಷೇಕವು ಗಾನ ಸೂಕ್ತಗಳಿಂದ ಮಧುಪರ್ಕಾದಿಗಳು 3 ವಸ್ತ್ರವಾಭರಣವು ಯಜ್ಞಸೂತ್ರವ ತೊಡಿಸಿ ಚಿತ್ರವಾಗಿಹ ಗಂಧ ಅಕ್ಷತೆವಿಡಿಸಿ ಪತ್ರಪುಷ್ಪವು ಶ್ರೀತುಳಸಿ ಮಾಲೆಗಳಿಂದ ಸ್ತೋತ್ರವು ಸಾಹಸ್ರನಾಮಗಳಾಯಿತು 4 ಧೂಪಮಾಧ್ರೂಪಯ ದೀಪದ ದರುಶನವು ಆದಷ್ಟು ಸರ್ವೋಪಚಾರಗಳು ಕದಳಿ ನಾರಿಕೇಳÀವು ಪರಿ ನೈವೇದ್ಯ ದಯಾಪರಮೂರ್ತಿ 5 ಆಗರದೊಳು ಬೆಳೆದ ನಾಗವಲ್ಲಿಯ ದಳ ಪೂಗಿಯಫಲ ಸಹ ನಾಗಶಯನಗಿಟ್ಟು ಬೇಗದಿ ಮಂಗಳ ಪದಗಳ ಹೇಳಿ ಲೇ ಸಾಗಿ ಎತ್ತುವ ಅಮೋಘದಾರತಿಗಳ 6 ಮಾಡಿದ ಪೂಜೆಯ ನೋಡಿ ಕರುಣದಿಂದ ಬೇಡಿದಿಷ್ಟವನೀಯೊ ರೂಢಿಯ ಒಡೆಯ ಪಾಡಿ ಪೊಗಳುವೆ ನಿನ್ನ ಪಂಥ ಬೇಡೆನ್ನೊಳು ಅನುದಿನ ವರಾಹ ತಿಮ್ಮಪ್ಪ 7
--------------
ವರಹತಿಮ್ಮಪ್ಪ
ಸಂಚಿತ ಪ್ರಾರಬ್ಧ ಕ್ರಿಯಮಾಣಾ | ಪ್ರಪಂಚದಿ ಈಡ್ಯಾಡೋ ಪ ಸ್ಥೂಲಕೆ ಭೋಗಕೆ ಸಾಕ್ಷಿಯು ಸೂಕ್ಷ್ಮವು | ಕಾರಣದಲಿ ಸಾಕ್ಷೀ || ಭೋಗಾಪೇಕ್ಷೆಯು ಸೂಕ್ಷ್ಮವು ನೀನಿತುದುಹ ಕಾರಣ ಲಕ್ಷೀ 1 ಸ್ಪರ್ಶದಿ ಶಬ್ದವು ಶಬ್ದಾಸ್ಪರ್ಶವಿದು | ರೂಪವು ತೋರಿತು ರೂಪವು ರಸದಲಿ || ಗಂಧದಿ ಕಾಣಿಸಿತೊ 2 ಕರ್ಮದಿ ರೂಪವು ರೂಪದಿ ಕರ್ಮವು | ಕರ್ಮರೂಪಕ್ಕೇ ||ವ್ಯಾಪಕ ಭವತಾರಕನೆಂದರಿಯದೆ ಕಲಾಪವ್ಯಾಕೀ ಮನಕೆ 3
--------------
ಭಾವತರಕರು
ಸಲ್ಲದೋ ಎಲೋ ಮಾಯಿ ಸಲ್ಲದೊ ಎಲೊ ಮಾಯಿ ಎಲ್ಲಾ ಒಂದೆಂಬೋದು ಸೊಲ್ಲನಾಡಲು ಯಮ ಕೊಲ್ಲದಲೆ ಬಿಡಾ ಪ ಉಕ್ಕಿನ ಮಳಿಯ ರೋಮರೋಮದಲಿ ಬಡಿದು ಬೆಸಸಿ ಸದಾ ಗಂಡುತಗಲಿ ಗಟ್ಟಿ ಪಕ್ಕಿಯ ತಿವಿದು ಪಾಶದಲಿ ಬಿಗಿದು ಕಾ ಲಿಕ್ಕಿ ನೆಲಕೆ ವರಿಸಿ ಕೆಂಪಗೆ ಕಾಸಿ ಇಕ್ಕಳದಲಿ ಉಚ್ಚಿ ಕರುಳು ಬೈಲಿಗೆ ಹಾಕಿ ಪೊಕ್ಕಳಿಗೆ ತೇಳಾರು ಪೊಗಿಸಿ ಕಟ್ಟಿ ಕರ ಹೊಯಿದು ನಕ್ಕು ಯಮದೂತರು ನಿನ್ನ ಬಾಧಿಪÀರು 1 ನಿನ್ನ ಕಾಲಲಿ ಒದ್ದೊದ್ದು ಹೆಡಗುಡಿಯನು ಕಟ್ಟಿ ಗಾರ್ಧಭದ ಲದ್ದಿಯೊಳಡಿಗಿಸಿ ಸುತ್ತ ಉರಿಯನಿಕ್ಕಿ ಮದ್ದು ಮೈಯಿಗೆ ಮುಚ್ಚಿ ಮುದದಿಂದ ಬೇಯಿಸಿ ಹದ್ದು ಕಾಗೆಗೆ ನಿನ್ನ ಯೆಡೆ ಮಾಡುವರು ಅ ಮೇಧ್ಯವ ತಿನಿಸುವರು ಅರಗಲ್ಲಿಗೆ ಉದ್ದಿ ಉರುಳ ಬಿಡುವರು ಕೆಂಡದ ಮೇಲೆ ವೊದ್ದಿಸಿ ಪರಿಪರಿ ಭಂಗವಪಡಿಸುವರು 2 ವೈತರಣಿಯೊಳಗದ್ದಿ ಅದ್ರಿಯ ಹರಿ ಮಾತು ಪೊರಡದಂತೆ ಮಾಡಿ ಮುದ್ರೆ ಬಾಯಿಗೆ ಹಾಕಿ ತೂತು ಮೈಯಿಗೆ ತಂತಿಯ ಪೋಣಿಸಿ ಪೂತಿ ಗಂಧದೊಳು ಹೊರಳಿಸಿ ತಡಿಯದೆ ಯಾತಣೆಯಿಂದ ಬಿಸುಟು ಮೊಟ್ಟೆಯ ಕಟ್ಟಿ ಮೂತರ ಕುಡಿಸುವರು ಮೀಸಿಯನು ಕಿತ್ತಿ ಘಾತಿಸಿ ನೋಡುವರು ಮಹಾ ಪಾತಕನೆಂದು ವಿಧಿಯ ಮೇಲೆ ಗುದ್ದೋರು 3 ಹೆಡತಲೆಯಿಂದ ನಾಲಿಗೆಯ ತೆಗೆದು ಕ ಕ್ಕಾಡಿ ಮಾಡಿ ನವನಾರು ಸಂದುಗಳು ಸುಟ್ಟು ಕೈಕಾಲನು ಕಟ್ಟಿಸಿ ಸಾಸವಿ ಸುಣ್ಣ ತೊಡೆದು ಬೋರಿಗೆಯಿಂದ ಬಡಿದು ಬಸಿಗೆ ಹಾಕಿ ಒಡಲೊಳು ಸೀಸವರೆದು ಮರದ ಬೇಲೆಯಲಿ ಹೊಡೆದು ಸರ್ರನೆ ಸೀಳೋರು ಕುರಿಯಂತೆ ಕಡಿದು ಈ ಬಗೆ ಮಾಡೋರು ಕೀವಿನ ಮಡುವಿನೊಳಗೆ ಇಟ್ಟು ತಲೆಮೆಟ್ಟಿ ಕುಣಿವರೊ 4 ಮೂಗನು ಕೊಯಿದು ಕವಡಿಯ ಪೋಣಿಸಿ ಚೆ ನ್ನಾಗಿ ಅತ್ತರಾಟದಲ್ಲಿ ತಲೆಕೆಳಕಾಗಿ ಜೋಲುವಂತೆ ಝೋಲಿಯ ಹೊಡೆದು ಮಾತುಗಾಲೆ ನಿನ್ನ ತೂಗಹಾಕಿ ಬಾಗಿಸಿ ಇನ್ನೊಮ್ಮೆ ಬೊಗಳೆಂದು ಕುಡಕಾಸಿ ವೇಗನೆ ಬರೆ ಇಡುವರು ದು:ಖದ ಸಾಗರ ಉಣಿಸುವರು ಬೆಕ್ಕಿನಂತೆ ಕೂಗಲು ಕೇಳಿ ಸೈರಿಸದಲೆ ಇಪ್ಪರು 5 ಘಾಯವಡೆದಲ್ಲಿ ಇರಿದು ಉಪ್ಪನೆ ತುಂಬಿ ಬಾಯಿವರಳು ಮಾಡಿ ಭತ್ತವ ಥಳಿಸಿ ಕ್ರೂ ರಾಯುಧ ಕಿವಿಗೆ ಬಿರಿಯಿಟ್ಟು ಬಂಧಿಸಿ ಖೋಯೆಂದು ಕೆಡಹಿ ಬೊಬ್ಬಿರಿಯೇ ಚಿಂದಿ ಮಾಡಿ ನಾಯಿಗಳಿಂದ ಕಚ್ಚಿಸಿ ಸೂಜೀಯ ಆಯಕ್ಕೆ ಊರುವರು ಮರಕ್ಕೆ ಕಟ್ಟಿ ಊಯಾಲೆ ಆಡುವರು ಇಪ್ಪತ್ತೆಂಟು ನಾಯಕ ನರಕದಲ್ಲಿಟ್ಟು ತೆಗೆಯುವರು6 ಪರಿ ಬಾಧಿಗೆ ಇರೆ ನರಕ ನರಕದಲ್ಲಿ ಹೂಳಿ ಉಬ್ಬಸಗೈಸಿ ಉರ ಕಾಲದಲ್ಲಿಟ್ಟು ತರುವಾಯ ತೆಗೆದು ಪಾ ಮರ ದುರುಳನೆಂದು ಮಿಡುಕಿಸಿ ಮಹಾನಿತ್ಯ ನರಕದೊಳಗೆ ನೂಕಿ ಕಡೆಗಾಣದಂತೆ ವರಲುತಿರೆ ನಗುವರು ನಿರ್ಮಲವಾದ ಮರುತ ಮತದವರು ಪ್ರತಿದಿನ ಸಿರಿಪತಿ ವಿಜಯವಿಠ್ಠಲನ ನಂಬದ ಮಿಥ್ಯಾ 7
--------------
ವಿಜಯದಾಸ
ಹರಿಯ ಚರಣ ನಿರುತ ಸ್ಮರಿಸಲೊ ಮೂಢ ಮನುಜ ನಿತ್ಯ ಪಾಡಿ ಭಜಿಸು ನರಕಭಯ ವಿಮುಕ್ತನಾಗೆಲೋ ಪ ಹಿಂಡುಬಳಗ ಕೂಡಿಹಾಕಿದಿ ಆಸಕ್ತನಾಗಿ ಬಂಡಿಹೊನ್ನು ಘಳಿಸಿ ಹೊಳಿದಿ ಬಗೆಬಗೆಯಲಿಂಡು ಬಂಡÀ ಬೆಳಸಿ ತುಂಡಗ್ವಾಣದಿ ತುಂಡಿನೇಗ ಜವನಭಟರು [?] ಬೆನ್ನ ಬಿಡವು 1 ಪಗಲು ಹರಟಿಯೊಳಗೆ ಪೋದಿತು ಆಯುಷ್ಯದೊಳಗೆ ಮಿಗಿಲು ರಾತ್ರಿ ವಿಷಯಗಳೆಯಿತು ಸುಗಂಧದ್ರವ್ಯ ಸೊಗಸಿನಿಂದ ಮೈಯ್ಯ ಮುಸುಕಿತು ಜಗದಿ ಘೂಳೆಯಂತೆ ಮೆರೆದಿ ಸೊಗಸಿನಂಗ ತೊಲಗಿತಲ್ಲಿ 2 ದುಷ್ಟತನಕೆ ದಾರಿ ಕೊಡದಿರು ಲೋಕದಲಿ ನೀನು ಭ್ರಷ್ಟನಾಗದೆ ತುಷ್ಟಿಯಿಂದಿರು ಕಷ್ಟಸುಖಗಳ್ಹರಿಗೆಯರ್ಪಿಸಿ ಸೃಷ್ಟಿಪರ ನರಸಿಂಹವಿಠಲನಷ್ಟ ವಿಧದಿ ಪೂಜೆಗೈದು ಇಷ್ಟ ಮುಕ್ತಿ ಸುಖ ಪಡೆಯೋ 3
--------------
ನರಸಿಂಹವಿಠಲರು
ಹುಡುಕಿ ನೋಡೆಲೋ ನಿನ್ಯಾರೆಂದು ಧೃಢಚಿತ್ತಕÉ ತಂದು ಪ ಮಲಮೂತ್ರದ ಬೀಡು ಹೊಲೆಯ ಸಂಸಾರದೊಳೀಡು ಗುರುಚರಣಕೆ ಕೂಡು 1 ಏಸು ದುರ್ಗಂಧದೊಳು ನೀ ಬೆಳಿದೆ ಸೂತಕದಿಂದಿಳಿದೆ ಆಶಾಪಾಶದಲಿ ದಿನವನು ಕಳೆದೆ ಮಾಯೆಯೊಳು ಸಳಿದೆ 2 ಅಂತರಾತ್ಮನ ನೆಲೆಯ ಹುಡುಕು ಇದಕ್ಯಾತಕೆ ತುಡುಕು ಶಾಂತ ಶ್ರೀ ವಿಮಲಾನಂದನ ಹುಡುಕು ಅಜ್ಞಾನವ ಬಿಡುಕು 3
--------------
ಭಟಕಳ ಅಪ್ಪಯ್ಯ
296ಆಡಿದನೋಕುಳಿಯ ನಮ್ಮ ರಂಗ !ಆಡಿದನೋಕುಳಿಯ ಪ.ಕುಂದದ ಕಸ್ತುರಿಯ-ಅಳಿ-|ಗಂಧದ ಓಕುಳಿಯ ||ಬಂದರು ಹೊರಗಿನ ನಾರಿಯರಾಡುತ|ಚೆಂದದ ಜೀಕುಳಿಯ 1ಪÀಟ್ಟಿ ಮಂಚದ ಮೇಲೆ-ನಮ್ಮ ರಂಗ |ಇಟ್ಟ ಮುತ್ತಿನ ಹಾರಬಟ್ಟ ಕುಚಕೆ ಕಣ್ಣಿಟ್ಟು ಒಗೆದನು |ಕುಟ್ಟಿದನೋಕುಳಿಯ 2ಆರು ಹತ್ತು ಸಾವಿರ-ಗೋಪ |ನಾರಿಯರನು ಕೂಡಿ ||ಮಾರನಯ್ಯ ಶ್ರೀಪುರಂದರವಿಠಲ |ಹಾರಿಸಿ ಜೀಕುಳಿಯ 3
--------------
ಪುರಂದರದಾಸರು
ಜಯ ಜಯವೆಂದರುಸುರರುಇಂಥ ವೈಭವದಾಟ ಕಾಣುತಲೆಅಮರರುಪ.ಗಂಧದ ಓಕುಳಿಯನ್ನೇಕಲೆಸಿತಂದು ಮಂದಗಮನೆಯರೆಲ್ಲ ಜೀಕುಳಿತುಂಬಿಇಂದಿರೇಶನ ಮ್ಯಾಲೆ ಸುರಿಸಿಆನಂದ ದಿಂದಲೆ ಕೈ ಹೊಡೆದು ಚಪ್ಪಳಿಸಿ 1ಕೇಶರ ದೋಕುಳಿಯತುಂಬಿಸರ್ವೇಶನೀ ಚಿಮ್ಮುವ ಕುಚಗಳ ಅಪ್ಪಿಕೊಂಬೆಈ ಸುಖ ನೀ ಎಲ್ಲೆ ಕಾಂಬೆಆಭಾಸ ಮಾಡಲುಅದು ನೀ ಒಪ್ಪಿಕೊಂಬೆ 2ಬತ್ತಲೆ ಜಲವ ಪೊಕ್ಕಿಹರುಸೀರೆ ಎತ್ತಿಕೊಂಡ್ಹೋಗಿ ಪುಗಡೆನ್ಹಾಕುವರುಎತ್ತಿಕರವಜೋಡಿಸುವರುಮರವಸುತ್ತಿ ಚಪ್ಪಾಳೆಯನಿಕ್ಕಿ ಸಿದಿಯಲ್ಲೊ ನೀನು 3ಚಂದದ ಸೀರೆಯನುಟ್ಟುಗಂಧ ಕಸ್ತೂರಿ ಕುಂಕುಮ ಕೇದಗೆಯನಿಟ್ಟುಆನಂದವ ಬಟ್ಟರು ಅಷ್ಟುಗೋವಿಂದನಂಘ್ರಿ ಕಮಲದಿ ಮನಸಿಟ್ಟು 4ಅವರಒಲ್ಲಭರೆಲ್ಲ ಸೊಲ್ಲುಗಳೆತ್ತದ್ಹಾಂಗೆಚಲ್ವನ ಪ್ರಾರ್ಥಿಸಿದರೆಲ್ಲಹೀಂಗೆರಮಿನಲ್ಲನ ದಯದಿಂದ ಇದ್ದರು ಮೊದಲಿನ್ಹಾಂಗೆ 5
--------------
ಗಲಗಲಿಅವ್ವನವರು
ನಿಲ್ಲಬೇಕಯ್ಯಾ ನೀನು ಕೃಷ್ಣಯ್ಯಾನಿಲ್ಲಬೇಕಯ್ಯಾ ನೀನು ಪನಿಲ್ಲಬೇಕಯ್ಯಾ ನೀಮಲ್ಲಮರ್ದನಸಿರಿವಲ್ಲಭಎನ್ನ ಹೃದಯದಲಿ ಸತತಅ.ಪಸುಪ್ಪಾಣಿಮುತ್ತಿಟ್ಟು ನೋಡುವೆ ನಿನ್ನಚಪ್ಪಾಳಿ ತಟ್ಟುತ ನಾ ಪಾಡುವೆ ||ಅಪ್ಪ ಶ್ರೀ ಕೃಷ್ಣ ನಿನ್ನನೆತ್ತಿ ಮುದ್ದಿಸಿಕೊಂಬೆಸರ್ಪಶಯನ ಕೃಪೆ ಮಾಡೆಂದು ಬೇಡುವೆ 1ಚೆಂದದ ಹಾಸಿಗೆ ಹಾಸುವೆಪುನಗುಗಂಧದ ಕಸ್ತೂರಿಯ ಪೂಸುವೆ ||ತಂದು ಮುದದಿ ಮುತ್ತಿನ ಹಾರ ಹಾಕುವೆಅಂದದಿಂದಲಿ ನಿನ್ನನೆತ್ತಿ ಮುದ್ದಿಸಿಕೊಂಬೆ 2ನೀಲದ ಕಿರೀಟವನಿಡುವೆ ಬಲುಬಾಲಲೀಲೆಗಳನು ಪಾಡುವೆ ||ಚೆಲ್ವ ಶ್ರೀಪುರಂದರವಿಟ್ಠಲರಾಯನೆನಿಲ್ಲು ಎನ್ನ ಮನದಲಿ ಒಂದೇ ಗಳಿಗೆ 3
--------------
ಪುರಂದರದಾಸರು