ಸುವ್ವಿ ಶ್ರೀ ದೇವಿರಮಣ ಸುವ್ವಿ ಸರ್ಪರಾಜಶಯನ
ಹರಣ ಸುವ್ವಿ ನಾರಾಯಣ ಪ
ಭವ್ಯಚರಿತ ದುರಿತವಿಪಿನ ಹವ್ಯವಾಹನ ಭವೇಂದ್ರಾದಿ
ಸೇವ್ಯಮಾನ ಸುಪ್ರಸಿದ್ಧ ಸುಲಭsÀ ಮೂರುತಿ
ಅವ್ಯಯಾಮಿತ ಸುಖಾತ್ಮ ದಿವ್ಯ ಮಹಿಮೆ ತುತಿಪೆ
ಸುವಿವೇಕಿಗಳಿಗೆ ಕೊಡುವುದಮಿತ ಮೋದವ 1
ವಾಸವಾದ್ಯಮರ ವಾರಾಶಿ ಶಾರದೇಂದು ಮಧ್ವ
ದೇಶಿಕಾರ್ಯ ಚಿತ್ತ ಸಿಂಹಪೀಠಮಧ್ಯಗ
ದೇಶಕಾಲ ವ್ಯಾಪ್ತ ಸರ್ವೇಶ ಸಾರ್ವಭೌಮ ಶ್ರೀಮ
ಹೀ ಸಮೇತ ಕೃಷ್ಣ ಕೊಡಲಿ ಎಮಗೆ ಮಂಗಳ 2
ಕಮಲ ಸಂಭವನ ವೇದ ತಮನು ಒಯ್ಯತಿರಲು ಲಕ್ಷ್ಮೀ
ಶರಧಿ ಮಥನದಿ
ಕಮಠ ರೂಪಿನಿಂದ ಸುರರಿಗಮೃತವಿತ್ತು ಕಾಯ್ದ ಅಖಿಳ
ಸುಮನಸೇಂದ್ರ ಸ್ವಾಮಿ ಕೊಡಲಿ ಎಮಗೆ ಮಂಗಳ 3
ಕನಕ ಲೋಚನನ ಸದೆದು ಮನುಜಸಿಂಹ ವೇಷನಾದ
ದ್ಯುನದಿ ಪಡೆದು ಜನನಿ ಕಡಿದು ವನವ ಚರಿಸಿದ
ಜನಪ ಕಂಸನ್ನೊದೆದು ತಿರಿಪುರವನಿತೆಯರ ಸುವ್ರ್ರತ
ವಿನುತ ಕಲಿ ದೇವರಾಜ ಎಮ್ಮ ಸಲಹಲಿ 4
ಪಾಹಿ ಪಾವನ ಚರಿತ್ರ ಪಾಹಿ ಪದ್ಮ ಪತ್ರನೇತ್ರ
ನಿಗಮ ಗಾತ್ರ ಮಾಂ
ಪಾಹಿ ಸಜ್ಜನಸುಮಿತ್ರ ಪಾಹಿ ದೋಷದೂರ ಸುಗುಣ
ಪಾಹಿ ಜಗನ್ನಾಥ ವಿಠಲ ಜಯ ತ್ರಿಧಾಮಗ 5