ಒಟ್ಟು 41 ಕಡೆಗಳಲ್ಲಿ , 20 ದಾಸರು , 35 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯಜಯ ಶ್ರೀ ರಾಮ ನಮೋ |ಜಯ ಜಯ ಶ್ರೀ ಕೃಷ್ಣ ನಮೋ ಪ.ಸಿರಿಯರಸನು ಶೃಂಗಾರವ ಮಾಡಿ |ಸಿರಿಗಂಧವನೆ ಹಣೆಗಿಟ್ಟು ||ತರುಣ ತುಳಸಿ ವನಮಾಲೆಯ ಧರಿಸಿ |ಹರಿತುರುಕಾಯಲು ಹೊರಗೆ ಹೊರಟನು1ಹೊತ್ತು ಹೋಯಿತುತುರು ಬಿಡಿಯೆನ್ನುತ |ಸಾತ್ತ್ವತ ನುಡಿದನು ಗೋಪಿಯೊಡನೆ ||ತುತ್ತುರು ತುತ್ತುರು ತುರುತುರುಯೆನ್ನುತ |ಒತ್ತಿ ಸ್ವರಗಳನು ಪೊಂಗೊಳಲೂದುತ 2ವನಿತೆ ಸಟ್ಟುಗದೊಳು ಅಕ್ಕಿಯ ತೊಳಸಿ |ಒನಕೆಯಿಂದಓಗರ ಹದನೋಡಿ ||ಮಿನುಗುವ ಸೀರೆಯ ತಲೆಗೆ ಸುತ್ತಿಕೊಂಡು |ವನಕೆ ಹೋಗಲೆಂದು ಹೊರಗೆ ಹೊರಟಳು 3ಹರಿಸ್ವರವೆನ್ನುತ ಒಬ್ಬಳುಕೇಳಿನೆರೆಮನೆಗೆ ಹೋಗಿ ಕಡ ಕೇಳಿದಳು ||ಒರಳು ಕೊಡುವಿರಾ ಅರಸಿನ ಅರೆದು |ಮರಳಿ ಬೇಗ ತಂದೀವೆನೆನುತಲಿ 4ಹಸುವಿಗೆ ಇಟ್ಟಲು ಹಾಲುಓಗರ |ಬಿಸಿಮಡ್ಡಿಯ ಗಂಡಗೆ ಚಾಚಿ ||ಸೊಸೆಯನು ಅಟ್ಟಿಸಿ ತೊತ್ತನು ಪಾಲಿಸಿಮೊಸರ ಕಾಸಿ ಹೆಪ್ಪ ಹಾಕಿದೊಳೊಬ್ಬಳು 5ಗಿಳಿಗೆ ಹಾಸಿದಳು ಹಾಸು ಮಂಚವನು |ಅಳಿಯನ ಪಂಜರದೊಳಗಿರಿಸಿ ||ತಳಿಗೆಯಲ್ಲಿ ತಮ್ಮನ ಮಲಗಿಸಿ ತೊಟ್ಟಿ - |ಲೊಳಗೆ ಎಡೆಯನು ಮಾಡಿದಳೊಬ್ಬಳು 6ಅಟ್ಟವೆಂದು ಹತ್ತಿ ಅಗಳಿಯ ಮೇಲೇಇಟ್ಟಳು ಸಾದೆಂದು ಸಗಣಿಯನು ||ಕಟ್ಟಬಾಯಿಗೆ ಕಾಡಿಗೆಹಚ್ಚಿ |ಕೃಷ್ಣನ ಸ್ಮರಿಸುತ ಹೊರಗೆ ಹೊರಟಳು 7ಅಂಗನೆ ಚೌರಿಯು ಕಾಲಿಗೆ ತಗುಲಿಸಿ |ಮುಂಗೈಯಲಿ ತಾಳಿಯ ಬಿಗಿದು ||ಸಿಂಗರ ಸರವನು ನಡುವಿಗೆಕಟ್ಟಿ |ರಂಗನ ಸ್ಮರಿಸುತ ಹೊರಟಳೊಬ್ಬಳು 8ಕಟ್ಟಿ ಮುತ್ತಿನೋಲೆ ಮೊಣಕಾಲ್ಗಳಿಗೆ |ಗಟ್ಟಿ ಕಂಕಣವ ಕಿವಿಗಿಟ್ಟು ||ತೊಟ್ಟಿಲೊಳಗೆ ಶಿಶು ಅಳುವುದ ಕಂಡು |ಕಟ್ಟಿದ ನೆಲುವನು ತೂಗಿದಳೊಬ್ಬಳು 9ತರುಣಿಯೊಬ್ಬ ಸಂನ್ಯಾಸಿಯ ಕಂಡು |ನೆರೆಮನೆ ಕೂಸೆಂದೆತ್ತ ಬರಲು ||ಅರಿದಾವ ಗಾಳಿ ಸೋಕಿತೆನುತಲಿ |ಪುರಂದರವಿಠಲನು ನಗುತಿದ್ದನು ಸಖಿ 10
--------------
ಪುರಂದರದಾಸರು
ಮಂದಗಮನೆ, ಇವನಾರೆ ಪೇಳಮ್ಮ |ಮಂದರಧರಗೋವಿಂದ ಕಾಣಮ್ಮಪಕೆಂದಳಿದನಖಶಶಿಬಿಂಬ ಪಾದಪದ್ಮ |ಅಂದುಗೆಯಿಟ್ಟವನಾರು ಪೇಳಮ್ಮ ||ಅಂದು ಕಾಳಿಂಗನ ಪೆಡೆಯ ತುಳಿದ ದಿಟ್ಟ |ನಂದನ ಕಂದ ಮುಕುಂದ ಕಾಣಮ್ಮ 1ಉಡುಗೆ ಪೀತಾಂಬರ ನಡುವೀಣೆ ಉಡುದಾರ |ಕಡಗ-ಕಂಕಣವಿಟ್ಟವನಾರಮ್ಮ ||ಮಡದಿ ಕೇಳ್ ಸಕಲಲೋಕಂಗಳ ಕುಕ್ಷಿಯೊಳ್ |ಒಡನೆ ತೋರಿದ ಜಗದೊಡೆಯ ಕಾಣಮ್ಮ 2ನೀರದನೀಲದಂತೆಸೆವ ವಕ್ಷದಿ ಕೇ-|ಯೂರ-ಹಾರಗಳನಿಟ್ಟವನಾರಮ್ಮ ||ನೀರೆ ಕೇಳು ನಿರ್ಜರರಾದವರಿಗೆ |ಪ್ರೇರಿಸಿ ಫಲವಿತ್ತು ದಾರಿ ಕಾಣಮ್ಮ 3ಶಂಖ ಚಕ್ರವ, ಗದೆ-ಪದ್ಮ ಕೈಯೊಳಗಿಟ್ಟ-|ಲಂಕೃತನಹನೀತನಾರಮ್ಮ ||ಪಂಕಜಮುಖಿಶ್ರೀಭೂದೇವಿಯರರಸನು |ಶಂಕೆಇಲ್ಲದೆ ಗೋಪೀತನಯ ಕಾಣಮ್ಮ4ಕಂಬುಕಂಧರಕರ್ಣಾಲಂಬಿತಕುಂಡಲ|ಅಂಬುಜಮುಖದವನಾರೆ ಪೇಳಮ್ಮ ||ರಂಭೆ ಕೇಳೀತ ಪುರಂದರವಿಠಲ |ನಂಬಿದ ಭಕ್ತಕುಟುಂಬಿ ಕೇಳಮ್ಮ 5
--------------
ಪುರಂದರದಾಸರು
ಮಾರಿಯನು ತೋರುತಿಹೆನು ಅದನೀಗನಾರಿ ಎಂದೆಂಬರಯ್ಯಪಸೀರೆ ಕುಪ್ಪಸವನುಟ್ಟುಸಿಂಗರದಿ ತೋರ ಕಂಕಣವನಿಟ್ಟು ಅಯ್ಯಮೂರಳೆಯಕಟ್ಟಾಣಿಕಟ್ಟಿಯೇಮೋರೆ ಮುರಕಿಸುತಿಹುದು ಅಯ್ಯ1ಚಳ್ಳತುಂಬುಗಳಿಂದಚವುರಿ ಬೆಳ್ಳಿಯ ಬಳೆಗಳಿಂದ ಅಯ್ಯಮುಳ್ಳು ಗಜ್ಜೆಗಳ ಧರಿಸಿ ಮನೆಯೊಳಗೆಹಲ್ಲು ಕಡಿಯುತಲಿಹುದು ಅಯ್ಯ2ಓಲೆ ಮಾಡಿಸು ಎಂಬುದುವರಹಕೆ ಬಾಳುವೆ ನೋಡಿರಿ ಎಂಬುದಯ್ಯಹೇಳುವುದು ಕಿವಿಯೊಳಗೆ ಲೋಭಕಾಲು ಕೈ ತಿರುಹುವುದು ಅಯ್ಯ3ಕರೆಕರೆಯ ಮಾಡುತಿಹುದು ತಾಯಿಯಹೊರಡಿಸು ಮನೆಯಿಂದಲೆಂಬುದಯ್ಯಹರನ ಚಿಂತೆಗೆ ಹಾನಿಯು ಇದರಿಂದನರಕ ಬಹಳವ ತಿರುಗುವೆ ಅಯ್ಯ4ನಾರಿಯೆನಿಸಿಹುದೆ ಮೃತ್ಯುಇದನೀಗ ದೂರ ಮಾಡಿದನಾದರೆ ಅಯ್ಯಸೇರುವುದು ಸರ್ವಮುಕ್ತಿಚಿದಾನಂದನಿರೆ ತಾನೆಯಹುದು ಅಯ್ಯ5
--------------
ಚಿದಾನಂದ ಅವಧೂತರು
ಮುಯ್ಯಕ್ಕೆ ಮುಯ್ಯ ತೀರಿತು - ಜಗ |ದಯ್ಯವಿಜಯಸಹಾಯ ಪಂಢರಿರಾಯಪಸಣ್ಣವನೆಂದು ನಾ ನೀರು ತಾಯೆಂದರೆ |ಬೆಣ್ಣೆಗಳ್ಳ ಕೃಷ್ಣ ಮರೆಯಮಾಡಿ ||ಚಿನ್ನದ ಪಾತ್ರೆಯ ನೀರ ತಂದಿತ್ತರೆ |ಕಣ್ಣ ಕಾಣದೆ ನಾನು ಟೊಣೆದೆ ಪಂಢರಿರಾಯ - 1ಎನ್ನ ಪೆಸರ ಪೇಳಿ ಸೂಳೆಗೆ ಕಂಕಣ |ವನ್ನು ನೀನು ಕೊಟ್ಟು ನಿಜವಮಾಡೆ ||ಎನ್ನ ನೋಯಿಸಿ ಅಪರಾಧ ಭಂಡನ ಮಾಡಿ |ನಿನ್ನ ಮುಯ್ಯಕೆ ಮುಯ್ಯ ತೋರಿದೆ ಪಂಢರಿರಾಯ - 2ಭಕ್ತವತ್ಸಲನೆಂಬ ಬಿರುದು ಬೇಕಾದರೆ |ಕಿತ್ತು ಈಡಾಡೊ ಇನ್ನೊಂದು ಕಂಕಣವ ||ಮುಕ್ತಿಗೆ ನೀನಲ್ಲದಾರನು ಕಾಣೆನು |ಮುಕ್ತೀಶ ಪುರಂದರವಿಠಲ ಪಂಢರಿರಾಯ - 3
--------------
ಪುರಂದರದಾಸರು
ಹಿಡಿರಂಗ ಜವಳಿಕೊಡು ಉಡುಗೊರೆಪಾಲ್ಗಡಲ ಶಯನಭೂಪತಿ ಗುಡುಗೊರೆ ಪ.ತಟಿತ್ತಾ ಸರಸವುಳ್ಳಪಟ್ಟಾವಳಿಧೋತರದಟ್ಟಿತ ವಾಗಿದ್ದ ಬಿಡಿಮುತ್ತುದಟ್ಟಿತವಾಗಿದ್ದ ಬಿಡಿ ಮುತ್ತು ಮುತ್ತಿನಕಂಠಿಮಠದವರಿಗೆ ಕೊಟ್ಟ ಉಡುಗೊರೆ 1ಬಟ್ಟು ಗೋಲಂಚಿನಧಿಟ್ಟಾದ ಧೋತರಬಟ್ಟಿಗುಂಗುರ ಉಡದಾರಬಟ್ಟಿಗುಂಗುರ ಉಡದಾರ ಶೂರಪಾಲಿಕಟ್ಟಿಯವರಿಗೆ ಕೊಟ್ಟ ಉಡುಗೊರೆ 2ಹತ್ತು ಬಟ್ಟಿಗೆ ತಕ್ಕಮುತ್ತಿನ ಉಂಗುರಮತ್ತೆ ಎಲೆ ಅಡಕೆ ನಡುವಿಟ್ಟುಎಲೆ ಅಡಕೆ ನಡುವಿಟ್ಟು ಇವರಮನೆಜೋಯಿಸರಿಗೆ ಕೊಟ್ಟ ಉಡುಗೊರೆ 3ಅಕ್ಕ ಕೊಲ್ಹಾಪುರಮುಖ್ಯ ಪಂಢರಾಪುರಚಿಕ್ಕ ಸಾತಾರೆ ಪುಣೆಯವಚಿಕ್ಕ ಸಾತಾರೆ ಪುಣೆಯವ ಪೈಠಣ ಶಾಲುಮುಖ್ಯ ಗಲಗಲಿಯವರಿಗೆ ಉಡುಗೊರೆ 4ಕಂಕಣವಾಡಿ ಮುಂದೆಡೊಂಕಾಗಿ ಹರಿದಾಳುವಂಶಿಯ ಜೋಡು ನಡುವಿಟ್ಟುವಂಶಿಯ ಜೋಡು ನಡುವಿಟ್ಟು ಗಲಗಲಿಯಮುತೈದೆಯರಿಗೆಲ್ಲ ಉಡುಗೊರೆ 5ಅಧ್ಯಾಪಕ ಜನರೊಳುವಿದ್ವಾಂಸರಿಗೆಲ್ಲಶುದ್ಧ ರತ್ನದಲಿ ರಚಿಸಿದಶುದ್ಧ ರತ್ನದಲಿ ರಚಿಸಿದ ಉಂಗುರವಿದ್ವಾಂಸರಿಗೆಲ್ಲ ಉಡುಗೊರೆ 6ನಾಲ್ಕು ಸಾವಿರ ಉಂಗುರಅನೇಕ ಬಗೆ ಶಾಲುಈ ಕಾಲದಲೆ ತರಿಸೇವಈ ಕಾಲದಲೆ ತರಿಸೇವ ರಮಿಯರಸುಕೊಟ್ಟ ಅನೇಕ ಜನರಿಗೆ ಉಡುಗೊರೆ 7
--------------
ಗಲಗಲಿಅವ್ವನವರು