ಒಟ್ಟು 37 ಕಡೆಗಳಲ್ಲಿ , 21 ದಾಸರು , 34 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬರಿಯ ಮಾತಲಿಲ್ಲ ಶ್ರೀಹರಿಯ ಪ್ರೀತಿರಣ್ಣ ಮಧ್ವಾಚಾರ್ಯರುಪದೇಶವೆ ಮುಕ್ತಿಪುರದೊಳು ಖ್ಯಾತಿರಣ್ಣ ಪ.ರಂಗನ ಪ್ರತಿಮೆಯನು ಬಿಡದೆ ಬಹಿರಂಗದಿ ಪೂಜೆಯ ಮಾಡಿಕಂಗಳುತುಂಬಲು ಮೆಲ್ಲನೆ ಅಂತರಂಗದಿ ಪೀಠದಿ ನೋಡಿಹಿಂಗದೆ ಗುರುಶಿಕ್ಷಾಕ್ರಮದಲಿ ಧ್ಯಾನಂಗತನಾಗ್ಯೊಲಿದಾಡಿಲಂಘಿಸಿ ಜನ್ಮಾಯುಷಗಳ ತುದಿಯಲಿಮಂಗಳ ಬಿಂಬವ ನೋಡದೆ ನೋಡಿ 1ಒಮ್ಮಿಂದೊಮ್ಮೆ ಹೃದಯದದ್ದಕೆಧರ್ಮವ ಜರಿದರೆ ಹೀನನಿರ್ಮಳ ಶೌಚಾಚಮನವೆ ಗಳಿಸಿದಸಮ್ಯಕ್‍ಜ್ಞಾನ ನಿಧಾನತಮ್ಮವಗುಣ ರೋಗಕೆ ಔಷಧವುಕರ್ಮದ ಮೂಲವೆ ಸ್ನಾನಹಮ್ಮಿಲಿ ಸನ್ಮಾರ್ಗಕೆ ಕುಂದಿಡದೆಇಮ್ಮಡಿ ಸಾಧಿಸಿ ನವನವೀನ 2ಸದ್ವ್ವ್ರತ ದೀಕ್ಷೆಯು ಧ್ರುವಪದ ಮುಕ್ತಿಯುಸುದ್ವಾರವ ಬಿಡಬಹುದೆಮಧ್ವೇಶನ ಮಹಿಮೆಯ ಕೇಳದೆ ರಕ್ಷಾಧ್ವರ ಕಥೆ ಕೇಳಬಹುದೆವಿಧ್ವಂಸಿಸುವ ಚೋರರು ಹೇಳ್ಯಾಡುವಸದ್ವಚನದಿ ಸುಖವಾಹುದೆಅದ್ವಯ ಪ್ರಸನ್ವೆÉಂಕಟೇಶನ ಪಾದಕಮಲದ್ವಯ ಬಿಟ್ಟಗೆ ತಮಸಹುದಹುದೆ 3
--------------
ಪ್ರಸನ್ನವೆಂಕಟದಾಸರು
ವೈದ್ಯ ಬಂದ ನೋಡಿ - ವೆಂಕಟನೆಂಬ |ವೈದ್ಯ ಬಂದ ನೋಡಿ ಪ.ವೈದ್ಯ ಬಂದನು ವೇದವೇದ್ಯ ನೋಡೀಗಲೇಶ್ರೀದೇವಿರಮಣನು ಶ್ರೀನಿವಾಸನೆಂಬ ಅಪಎಷ್ಟು ದಿನದ ರೋಗಗಳೆಂಬುದ ಬಲ್ಲ |ಗಟ್ಟಿಯಾಗಿ ಧಾತುರಸಗಳನು ಬಲ್ಲ ||ಕಷ್ಟ ಬಡಿಸದಲೆನ್ನ ಭವರೋಗ ಬಿಡಿಸುವ |ಶಿಷ್ಟವಾದ ದೇಹ ಕೊಟ್ಟು ಕಾಯುವನಿವ 1ಹೊನ್ನು - ಹಣಂಗಳ ಅನ್ನವ ಅನುಸರಿಸಿ |ತನ್ನ ದಾಸನೆಂಬ ನಿಜವ ನೋಡಿ ||ಚೆನ್ನಾಗಿ ಜಿಹ್ವೆಗೆ ಸ್ವಾದವಾಗಿರುವಂಥ |ತನ್ನ ನಾಮಾಮೃತ ದಿವ್ಯ ಔಷಧವೀವ 2ಈತ ದಿಟ್ಟಿಸಿ ನೋಡೆ ಎಳ್ಳಷ್ಟು ರೋಗವಿಲ್ಲ |ಈ ತನುವಿಗೆಂದೆಂದು ರೋಗಬರಲರಿಯದು ||ಈತ ಅನಂತರೂಪದಿ ಜೀವರಿಗೆ ಮುನ್ನ |ಪ್ರೀತಿಯಿಂದಲಿ ಭವರೋಗ ಬಿಡಿಸುವ 3ಧರ್ಮವೈದ್ಯನಿವ ಜಗಕ್ಕೆಲ್ಲ ಒಬ್ಬನೆ |ಮರ್ಮಬಲ್ಲ ರೋಗಜೀವಂಗಳ ||ನಿರ್ಮಲವಾಗಿಹ ತನ್ನ ನಾಮಸ್ಮರಣೆ |ಒಮ್ಮೆ ಮಾಡಲು ಭವರೋಗ ಬಿಡಿಸುವ 4ಅನ್ಯ ವೈದ್ಯನೇಕೆ ಅನ್ಯ ಔಷಧವೇಕೆ ? |ಅನ್ನ ಮಂತ್ರ - ತಂತ್ರ - ಜಪವೇತಕೆ ? ||ಚೆನ್ನ ಪುರಂದರವಿಠಲನ್ನ ನೆನೆದರೆ |ಮನ್ನಿಸಿ ಸಲಹುವ ವೈದ್ಯ ಶಿರೋಮಣಿ 5
--------------
ಪುರಂದರದಾಸರು
ಶ್ರೀ ಸೌಭಾಗ್ಯ ಸಪ್ತತ್ರಿಂಶತಿ71ಶರಣುವಿಧಿವಾಣೀಶ ಶರಣು ಧೃತಿ ಶ್ರಧ್ದೇಶ |ಶರಣು ಋಜುವರ್ಯರಲಿ ಶರಣು ಶರಣಾದೆ ಪಮೀನಕೂರ್ಮಕ್ರೋಡನರಸಿಂಹ ವಟುರೂಪರೇಣುಕಾತ್ಮಜ ರಾಮ ಶ್ರೀ ಕೃಷ್ಣ ಜಿನಜ ||ವಿಷ್ಣು ಯಶಸ್ಸುತ ಅಜಿತ ಶ್ರೀಶನಿಗೆ ಪ್ರಿಯತಮ |ಅನುಪಮ ಜೀವೋತ್ತಮರ ಚರಣಕಾನಮಿಪೇ 1ಪುರುಷವಿಧಿ ಕಾಲವಿಧಿ ವಾಸುದೇವೋತ್ಪನ್ನ |ವಿರಿಂಚ ಮಹತ್ತತ್ವತನು ಅನಿರುದ್ಧ ಜಾತ ||ನಾರಾಯಣ ನಾಭಿ ಕಮಲಜ ಚತುರ್ಮುಖನು |ಸರಸ್ವತೀಪತಿ ರುದ್ರ ತಾತನಿಗೆ ನಮಿಪೆ 2ಈ ನಾಲ್ಕು ಬ್ರಹ್ಮನ ಅವತಾರದಲಿ ಶುಕ್ಲ |ಶೋಣಿತಸಂಬಂಧ ಇಲ್ಲವೇ ಇಲ್ಲ ||ಜ್ಞಾನಾದಿ ಐಶ್ವರ್ಯದಲಿ ಯಾರು ನಾಲ್ಮುಗಗೆ |ಎಣೆ ಇಲ್ಲ ಹದಿನಾಲ್ಕು ಲೋಕದಲಿ ಎಲ್ಲೂ 3ಭಯವು ಅಜ್ಞಾನವು ಸಂಶಯವು ಇವಗಿಲ್ಲಸತ್ಯ ಲೋಕಾಧಿಪನ ಸುರರ ಅಧ್ಯಕ್ಷ ||ಹಯಮುಖ ತ್ರಿವೃತ್ತುರೀಯ ಹಂಸ ಇತರಾಸೂನು |ತೋಯಜಾಕ್ಷಕೇಶವನ ಪ್ರಥಮ ಪ್ರತಿಬಿಂಬ4ಜಗಜ್ಜನ್ಮಾದ್ಯಷ್ಟಕ ಕರ್ತನ ನಿಯಮನದಿ |ಜಗವ ಪಡೆದಿಹ ಬ್ರಹ್ಮಸತ್ವವಿಗ್ರಹನು ||ಖಗಪ ಭುಜಗಪ ಶಿವಾದ್ಯನಂತ ಜೀವೋತ್ತಮನು |ಅಘರಹಿತತಾರಕಗುರುಶತಾನಂದ5ಅವನಿಯಲಿ ಅವತಾರ ಬ್ರಹ್ಮದೇವನಿಗಿಲ್ಲ |ಭಾವಿ ಬ್ರಹ್ಮನು ಮುಖ್ಯವಾಯುದೇವ ||ದೇವೀಜಯಾ ಸಂಕರುಷಣಾತ್ಮಜನು ಈ |ಭುವಿಯಲ್ಲಿ ತೋರಿಹನು ಹರಿಯಪ್ರಥಮಾಂಗ6ಧೃತಿಪ್ರಭಂಜನವಾಯುಸ್ಮರಭರತ ಗುರುವರನು |ಮಾತರಿಶ್ವನುಸೂತ್ರಪವಮಾನ ಪ್ರಾಣ ||ಎದುರು ಸಮರಿಲ್ಲ ಈ ಬ್ರಹ್ಮ ಧಾಮನಿಗೆಲ್ಲೂ |ಸದಾ ನಮೋ ಭಾರತೀರಮಣ ಮಾಂಪಾಹಿ 7ರಥನಾಭಿಯಲಿ ಅರವೋಲ್ ಪ್ರಾಣನಲಿ ಸರ್ವವೂ |ಪ್ರತಿಷ್ಠಿತವೂ ಜೀವರ ದೇಹಕಾಧಾರ ||ತ್ರಾತಪೋಷಕ ಸರ್ವವಶಿ ಪ್ರಜ್ಞಾಶ್ರೀದನು |ತತ್ವಾದಿ ದೇವ ವರಿಷ್ಠ ಚೇಷ್ಟಕನು 8ಶ್ರೀಶ ಹಂಸಗೆ ಪ್ರಿಯಶ್ವಾಸಜಪ ಪ್ರವೃತ್ತಿಸುವ |ಬಿಸಜಜಾಂಡವ ಹೊತ್ತು ಕೊಂಡು ಇರುತಿಹನು ||ಅಸಮ ಸಾಮಥ್ರ್ಯದಿ ಸರ್ವ ಕ್ರಿಯೆ ಮಾಡಿಸುವ |ಶಾಸ್ತನಾಗಿಹ ಪಂಚಅವರಪ್ರಾಣರಿಗೆ9ಬಲ ಜ್ಞಾನಾದಿಗಳಲ್ಲಿ ಹ್ರಾಸವಿಲ್ಲವು ಇವಗೆ |ಎಲ್ಲ ಅವತಾರಗಳು ಸಮವು ಅನ್ಯೂನ ||ಶುಕ್ಲಶೋಣಿತಸಂಬಂಧ ಇಲ್ಲವೇ ಇಲ್ಲ |ಇಳೆಯಲಿ ಜನಿಸಿಹ ಹನುಮ ಭೀಮ ಮಧ್ವ 10ವಾಯುದೇವನ ಒಲಿಸಿಕೊಳ್ಳದ ಜನರಿಗೆ |ಭಯ ಬಂಧ ನಿವೃತ್ತಿಯು ಸದ್ಗತಿಯು ಇಲ್ಲ ||ಮಾಯಾಜಯೇಶನಪರಮಪ್ರಸಾದವು |ವಾಯು ಒಲಿದರೆ ಉಂಟು ಅನ್ಯಥಾ ಇಲ್ಲ 11ಶ್ರೀರಾಮಚಂದ್ರನು ಒಲಿದ ಸುಗ್ರೀವಗೆ |ಮಾರುತಿಯ ಒಲಿಸಿಕೊಂಡವನವನೆಂದು ||ಮಾರುತಿಯ ಒಲಿಸಿಕೊಳ್ಳದ ವಾಲಿ ಬಿದ್ದನು |ಕರ್ಣನೂ ಹಾಗೇವೇ ಅರ್ಜುನನು ಗೆದ್ದ 12ರಾಮನಿಗೆ ಸನ್ನಮಿಸಿ ವನದಿ ದಾಟುತ ಹನುಮ |ಶ್ರಮರಹಿತನು ಸುರಸೆಯನು ಜಯಿಸೆಸುರರು||ಪೂಮಳೆ ಕರೆಯಲು ಸಿಂಹಿಕೆಯನು ಸೀಳಿ |ಧುಮುಕಿದ ಲಂಕೆಯಲಿ ಲಂಕಿಣಿಯ ಬಡಿದ 13ರಾಮ ಪ್ರಿಯೆಗುಂಗುರವ ಕೊಟ್ಟು ಚೂಡಾರತ್ನ |ರಾಮಗೋಸ್ಕರ ಕೊಂಡು ವನವ ಕೆಡಹಿ ||ಶ್ರಮ ಇಲ್ಲದೆ ಅಕ್ಷಯಾದಿ ಅಧಮರ ಕೊಂದು |ರಾಮ ದೂತನು ಹನುಮ ಲಂಕೆಯ ಸುಟ್ಟ 14ಶ್ರೀರಾಮನಲಿ ಬಂದು ನಮಿಸಿ ಚೂಡಾಮಣಿಯ |ಚರಣದಿ ಇಡೆ ರಾಮ ಹನುಮನ ಕೊಂಡಾಡಿ ||ಸರಿಯಾದ ಬಹುಮಾನ ಯಾವುದು ಇಲ್ಲೆಂದು |ಶ್ರೀರಾಮ ತನ್ನನ್ನೇ ಇತ್ತಾಲಿಂಗನದಿ 15ಮೂಲ ರೂಪವನೆನೆದ ಲಕ್ಷ್ಮಣನ ಎತ್ತಲು |ಕೈಲಾಗದೆ ರಾವಣನು ಸೆಳೆಯೆ ಆಗ ||ಲೀಲೆಯಿಂದಲಿ ಎತ್ತಿ ರಾಮನಲಿ ತಂದನು |ಬಲವಂತ ಹನುಮ ಶೇಷಗುತ್ತಮತಮನು 16ಮೃತ ಸಂಜೀವಿನಿಯಾದಿ ಔಷಧಿ ಶೈಲವನು |ತಂದು ಸೌಮಿತ್ರಿ ಕಪಿಗಳಿಗೆಅಸುಇತ್ತ ||ಮುಂದಾಗಿ ಪೋಗಿ ಶ್ರೀರಾಮ ಬರುವುದು ಪೇಳಿ |ಕಾಯ್ದ ರಾಮಾನುಜನ ಅಗ್ನಿ ಮುಖದಿಂದ 17ಇತರರು ಮಾಡಲು ಅಶಕ್ಯ ಸೇವೆ ಹನುಮ |ಗೈದಿ ಮೋಕ್ಷವು ಸಾಲ್ದು ಏನು ಕೊಡಲೆನ್ನೆ ||ಸದಾ ಸರ್ವ ಜೀವರಿಂದಧಿಕ ಭಕ್ತಿ ಒಂದೇ |ಕೇಳ್ದ ಶ್ರೀರಾಮನ್ನ ವೈರಾಗ್ಯ ನಿಧಿಯು 18ಗಂಡು ಶಿಶು ಬೀಳಲು ಗುಂಡು ಪರ್ವತ ಒಡೆದು |ತುಂಡು ನೂರಾಯಿತು ಕಂಡಿಹರು ಅಂದು ಬೋ - ||ಮ್ಮಾಂಡದಲಿ ಪ್ರಚಂಡ ಭೀಮಗೆ ಸಮ |ಕಂಡಿಲ್ಲ ಕೇಳಿಲ್ಲ ನೋಡಿ ಭಾರತವ 19ಉಂಡು ತೇಗಿದಗರಳತಿಂಡಿಯ ಭೀಮನು |ಉಂಡು ಹಾಲಾಹಲವ ಹಿಂದೆ ಈ ವಾಯು ||ಹಿಂಡಿ ಸ್ವಲ್ಪವ ಮುಕ್ಕಣ್ಣಗೆ ಕೊಟ್ಟನು |ಬಂಡುಮಾತಲ್ಲವಿದುಕೇಳಿವೇದವನು20ಅರಗು ಮನೆಯಿಂದ್ಹೊರಟು ಸೇರಿ ವನವನು ಅಲ್ಲಿ |ಕ್ರೂರ ಹಿಡಿಂಬನ ಕೊಂದವನ ಸೋದರಿ ||ಭಾರತೀ ಯಕ್ಸ ್ವರ್ಗ ಶಿಕಿಯು ಹಿಡಿಂಬಿಯಕರಪಿಡಿದ ಭೀಮನು ಅನುಪಮ ಬಲಾಢ್ಯ 21ಬಕ ಕೀಚಕ ಜರಾಸಂಧಾದಿ ಅಸುರರು |ಲೋಕ ಕಂಟಕರನ್ನ ಕೊಂದು ಬಿಸುಟು ||ಲೋಕಕ್ಕೆ ಕ್ಷೇಮವ ಒದಗಿಸಿದ ಈ ಅಮಿತ |ವಿಕ್ರಮಭೀಮನಿಗೆ ಸಮರಾರು ಇಲ್ಲ22ಕಲಿಕಲಿಪರಿವಾರ ದುರ್ಯೋಧನಾದಿಗಳ |ಬಲವಂತ ಭೀಮನು ಬಡಿದು ಸಂಹರಿಸಿದ ||ಕಲಿಹರ ಸುಜನಪಾಲ ಭೀಮ ಸಮ್ರಾಟನ |ಕಾಲಿಗೆ ಎರಗುವೆ ದ್ರೌಪದೀ ಪತಿಗೆ 23ಮಾಲೋಲ ಕೃಷ್ಣನ ಸುಪ್ರೀತಿಗಾಗಿಯೇ |ಬಲ ಕಾರ್ಯಗಳ ಮಾಡಿ ಅರ್ಪಿಸಿದ ಭೀಮ ||ಕಲಿಯುಗದಿ ಈ ಭೀಮ ಅವತಾರ ಮಾಡಿಹನು |ಕಲಿಮಲಾಪಹ ಜಗದ್ಗುರು ಮಧ್ವನಾಗಿ 24ಹನುಮಂತನ ಮುಷ್ಠಿ ಭೀಮಸೇನನ ಗದೆ |ದಾನವಾರಾಣ್ಯವ ಕೆಡಹಿದ ತೆರದಿ ||ಆಮ್ನಾ ಯಸ್ಮøತಿ ಯುಕ್ತಿಯುತ ಮಧ್ವ ಶಾಸ್ತ್ರವು |ವೇನಾದಿಗಳ ಕುಮತ ತರಿದು ಸುಜನರ ಕಾಯ್ತು 25ಇಳೆಯ ಸುಜನರ ಭಾಗ್ಯಶ್ರುತಿಪುರಾಣಂಗಳು |ಪೇಳಿದಂತೆಕೊಂಡಯತಿರೂಪ ವಾಯು ||ಮೇಲಾಗಿ ಇದ್ದ ನಮ್ಮ ಅಜ್ಞಾನ ಕತ್ತಲೆಯ |ತೊಲಗಿಸಿದನು ಈ ಮಧ್ವಾಖ್ಯಸೂರ್ಯ26ದುರ್ವಾದ ಕುಮತಗಳು ಸಜ್ಜನರ ಮನ ಕೆಡಿಸೆ |ತತ್ವವಾದವ ಅರುಪಿ ಸಜ್ಜನರ ಪೊರೆದ ||ಮೂವತ್ತು ಮೇಲೇಳು ಗ್ರಂಥ ಚಿಂತಾಮಣಿ |ಸುವರ್ಣಕುಂದಣಪದಕ ಯೋಗ್ಯರಿಗೆ ಇತ್ತ27ದುಸ್ತರ್ಕ ದುರ್ಮತ ಬಿಸಿಲಿಲ್ಲಿ ಬಾಡುವ |ಸಸಿಗಳು ಸಾತ್ವಿಕ ಅಧಿಕಾರಿಗಳಿಗೆ ||ಹಸಿ ನೀರು ನೆರಳು ಈ ಮಾಧ್ವ ಮೂವತ್ತೇಳು |ಸಚ್ಛಾಸ್ತ್ರಪೀಯೂಷಗೋಕಲ್ಪ ತರುವು28ಮೂಢ ಅಧಮರ ದುಷ್ಟ ಮತಗಳ ಸಂಪರ್ಕದಿ |ಈಡಿಲ್ಲದ ಮೋದಪ್ರದ ಜ್ಞಾನ ಕಳಕೊಂಡು ||ಬಡತನದಿ ನರಳುವ ಸಜ್ಜನರ ಪೋಷಿಪುದು |ನೋಡಿ ಈಸುರಧೇನುಮಾಧ್ವ ಮೂವತ್ತೇಳ29ಬಿಲ್ವಪ್ರಿಯ ಶಿವ ಈಡ್ಯ ಸಾರಾತ್ಮ ಕೃಷ್ಣನ |ಚೆಲ್ವಉಡುಪಿಕ್ಷೇತ್ರದಲಿ ನಿಲ್ಲಿರಿಸಿ ||ಎಲ್ಲ ಭಕ್ತರಕಾವಸುಖಮಯ ಜಗತ್ಕರ್ತ |ಮೂಲ ರಾಮನ ಸಾಧು ಜನರಿಗೆ ಕಾಣಿಸಿದ 30ಮಹಿದಾಸ ಬೋಧಿಸಿದ ತತ್ವವನು ವಿವರಿಸುತ |ಮಹಂತಪೂರ್ಣಪ್ರಜÕಬದರೀಗೆ ತೆರಳಿ ||ಮಹಿಶಿರಿಕಾಂತ ಶ್ರೀ ವ್ಯಾಸನ ಬಳಿ ಇಹನು |ಅಹರಹ ಪ್ರೇಮದಿಂಸಂಸ್ಮರಿಸೆತೋರ್ವ 31ರಾಮ ಕೃಷ್ಣವ್ಯಾಸ ಜಾನಕೀಸತ್ಯಾ |ರುಕ್ಮಿಣೀಅಂಭ್ರಣಿಪ್ರಿಯತಮ ಹನುಮ ||ಭೀಮ ಮಹಾ ಪುರುಷೋತ್ತಮ ದಾಸರಿಗೆ |ನಮಿಪೆ ವಿಪಶೇಷ ಶಿವಾದ್ಯಮರ ಸನ್ನತರ್ಗೆ 32ಚತುರ್ಮುಖ ವರವಾಯು ಸರಸ್ವತಿ ಭಾರತಿಗೆ |ಸದಾ ಶ್ರೀಹರಿಯಲ್ಲಿ ಭಕ್ತಿ ಅಚ್ಛಿನ್ನ ||ಅತಿರೋಹಿತ ಜ್ಞಾನ ಪ್ರಾಚುರ್ಯರಾಗಿಹರು |ಸಾಧಾರಣವಲ್ಲ ಋಜುಗಳ ಮಹಿಮೆ 33ಋಜುಗಳರಾಜೀವಚರಣಗಳಿಗಾ ನಮಿಪೆ |ಭುಜಗಶಯ್ಯನಲಿ ಭಕ್ತಿ ಸಹಜ ಇವರಲ್ಲಿ ||ಭುಜಗಭೂಷಣಾದಿಗಳಿಗಧಿಕತಮ ಬಲಜ್ಞಾನ |ತ್ರಿಜಗಮಾನ್ಯರು ತ್ರಿಗುಣ ತಾಪವರ್ಜಿತರು 34ಅಪರೋಕ್ಷಋಜುಗಣಕೆ ಅನಾದಿಯಾಗಿಯೇ ಉಂಟು |ತಪ್ಪದೇ ಶತಕಲ್ಪ ಸಾಧನವ ಗೈದು ||ಶ್ರೀಪನಅಪರೋಕ್ಷಇನ್ನೂ ವಿಶೇಷದಿ |ಲಭಿಸಿ ಕಲ್ಕ್ಯಾದಿಸುನಾಮಧರಿಸುವರು35ಕಲ್ಕ್ಯಾದಿ ಪೆಸರಲ್ಲಿಪ್ರತಿಒಂದು ಕಲ್ಪದಲು |ಅಕಳಂಕ ಇವರು ಬಹು ಸುವಿಶೇಷ ಸಾಧನದಿ ||ಭಕ್ತ್ಯಾದಿ ಗುಣಕ್ರಮದಿ ಅಧಿಕ ಅಭಿವ್ಯಕ್ತಿಯಿಂ |ಮುಖ್ಯ ವಾಯು ಬ್ರಹ್ಮಪದವ ಪೊಂದುವರು 36ಈ ಬ್ರಹ್ಮಾದಿಗಳೊಳು ಇದ್ದು ಕೃತಿಮಾಡಿಸುವ |ಶಿರಿಸಹ ತ್ರಿವೃನ್ನಾಮ ಪ್ರಸನ್ನ ಶ್ರೀನಿವಾಸ ||ಸುಹೃದ ಸೌಭಾಗ್ಯದಗೆ ಜಯ ಜಯತು ಅರ್ಪಿತವು |ಹರಿವಾಯು ನುಡಿಸಿದಿದು ಜಯತು ಹರಿವಾಯ 37
--------------
ಪ್ರಸನ್ನ ಶ್ರೀನಿವಾಸದಾಸರು
ಸಾಕು ಸಾಕಿನ್ನು ಸಂಸಾರಸುಖವು |ಶ್ರೀಕಾಂತ ನೀನೊಲಿದು ಕರುಣಿಸೈ ಹರಿಯೆ ಪಉದಿಸಿದುವು ಪಂಚಭೂತಗಳಿಂದ ಔಷಧಿಗ-|ಳುದಿಸಿದುವು ಔಷಧಿಗಳಿಂದನ್ನವು ||ಉದಿಸಿದುವು ಅನ್ನದಿಂ ಶುಕ್ಲ-ಶೋಣಿತವೆರಡು |ಉದಿಸಿದುವು ಸ್ತ್ರೀ-ಪುರುಷರಲ್ಲಿ ಹರಿಯೆ 1ಸತಿಪುರುಷರೊಂದಾಗಿ ರತಿಕ್ರೀಡೆಗಳ ಮಾಡೆ |ಪತನವಾದಿಂದ್ರಿಯವು ಹೊಲೆ-ರುಧಿರವು ||ಸುದತಿಯುದರದೊಳೆರಡು ಏಕದಲಿ ಸಂಧಿಸಲು |ಬುದಬುದನೆ ಮಾಸಪರ್ಯಂತರದಿ ಹರಿಯೆ 2ಮಾಸವೆರಡರಲಿ ಶಿರಮಾಸಮೂರರಲಂಗ |ಮಾಸನಾಲ್ಕರಲಿ ಚರ್ಮದ ಹೊದಿಕೆಯು ||ಮಾಸವೈದರೊಳುನಖರೋಮ ನವ ರಂಧ್ರಗಳು |ಮಾಸವೇಳಲಿ ಧಾತು ಹಸಿವು ತೃಷೆಯು 3ತಿಂಗಳೆಂಟರಲಿ ಪೂರ್ವಾನುಭವ ಕರ್ಮಗಳ |ಭಂಗವನು ಪಡಲಾರೆ ಭವಭವದೊಳು ||ಅಂಗನೆಯ ಉದರಕಿನ್ನೆಂದಿಗೂ ಬರೆನೆಂದು |ಹಿಂಗದಲೆ ಧ್ಯಾನಿಸುತ ಕಳೆದೆನೈ ದಿನವ 4ಇನಿತು ಗರ್ಭದೊಳು ನವಮಾಸ ಪರಿಯಂತರದಿ |ತನು ಸಿಲುಕಿ ನರಕದಲಿ ಆಯಾಸಗೊಂಡು ||ಘನಮರುತವೇಗದಿಂ ಅರುಹನಲ್ಲಿಯೆ ಮರೆತುಜನಿಸುವಲಿ ಮೃತಭಾವದೊಳು ನೊಂದೆ ಹರಿಯೆ 5ಧರೆಯಮೇಲುದಿಸಿ ಬಹು ವಿಷ್ಣುಮಾಯೆಗೆ ಸಿಲುಕಿ |ಪರವಶದೊಳಿರಲು ನೀರಡಿಸಲಾಗ ||ಹೊರಳಿ ಗೋಳಿಡುತ ಕಣ್ದೆರೆಯ ಹರಿಯನು ಮರೆವ |ದುರಿತರೂಪದ ತನುವ ಧರಿಸಿದೆನೊ ಹರಿಯೆ 6ಶಿಶುತನದೊಳಿರಲು ನೊಣ ಮುಸುಕಲಂದದಕಳಲು |ಹಸಿದನಿವನೆಂದು ಹಾಲನೆ ಎರೆವರು ||ಹಸು-ತೃಕ್ಷೆಗಳಿಂದಳಲು ಹಾಡಿ ತೂಗುವರಾಗ |ಪಶುವಂತೆ ಶಿಶುತನದೊಳಿರಲಾರೆ ಹರಿಯೆ 7ನಡೆಯಲರಿಯದ ದುಃಖ ಮನಸಿನೊಳು ಬಯಸಿದುದ |ನುಡಿಯಲರಿಯದ ದುಃಖ ವಿಷಮದಿಂದ ||ಅಡಿಯಿಡುತ ಮೆಲ್ಲನೇಳುತ ಬೀಳುತಲಿ ತೊದಲು-|ನುಡಿಯೊಳಿಹ ಬಾಲ್ಯದೊಳಗಿಲಾರೆ ಹರಿಯೆ 8ಬಾಲ್ಯದೊಳು ಕೆಲವು ದಿನ ಬರಿದೆ ಹೋಯಿತು ಹೊತ್ತು |ಗೋಳಿಡುತವಿದ್ಯೆಕರ್ಮಗಳ ಕಲಿತು ||ಮೇಲೆ ಯೌವನದುಬ್ಬಿನೊಳು ಮದುವೆಯಾಗಿ ನಾಬಾಲೆಯರ ಬಯಸಿ ಬಹು ಮರಳಾದೆ ಹರಿಯೆ | 9ಜ್ವರದ ಮೇಲತಿಸಾರ ಬಂದಂತೆ ಯೌವನದಿ |ತರುಣಿಯೊಡನಾಡಿಕೂಡಿದವಿಷಯದಿ ||ತರುಣಿ-ಸುತರ್ಗನ್ನ ವಸ್ತ್ರಾಭರಣವೆಂದೆನುತ |ಪರರ ಸೇವೆಯಲಿ ನಾ ಕಡುನೊಂದೆ ಹರಿಯೆ 10ನೆತ್ತರವು ತೊಗಲು ಮಾಂಸದ ಹುತ್ತು ಜೊತ್ತುಗಳ |ಹತ್ತು ಇಂದ್ರಿಯದ ಬಹುರೋಗದಿಂದ ||ಮತ್ತೆ ಕಾಲನ ಬಾಯತುತ್ತು ಬಹುವಿಧ ಕರ್ಮ-||ಕತ್ತಲೆಯೊಳೀ ದೇಹ ಕರಕಾಯ್ತು ಹರಿಯೆ 11ದಿಟ್ಟತನದಲಿ ಗಳಿಸಿ ತರುವಾಗ ಸತಿಸುತರು |ಕಟ್ಟಿಕಾದಿಹರು ಮುಪ್ಪಡಸಲಾಗ ||ತಟ್ಟನೇ ಕೆಟ್ಟನುಡಿಗಳ ಬಯ್ಯುತಳಲುವರು |ಮುಟ್ಟಿನೋಡರು ಸರಕುಮಾಡರೈ ಹರಿಯೆ 12ಎಷ್ಟವಜೆÕಯ ಮಾಡೆ ಮತ್ತವನಿಗಳಲುತಿರೆ |ಕಟ್ಟಳೆಯ ದಿನತುಂಬಿಮೃತನಾಗಲು ||ಕುಟ್ಟಿಕೊಂಡಳುತ ಹೋಯೆನುತ ಬಂಧುಗಳೆಲ್ಲ |ಮುಟ್ಟದಲೆ ಹೆಣನೆಂದು ದೂರದೊಳಗಿಹರು 13ಸತ್ತ ಹೆಣಕಳಲೇತಕೆಂದು ಬಂಧುಗಳೆಲ್ಲ |ಸುತ್ತಿರ್ದು ಹೊತ್ತು ಹೋಯಿತು ಎನ್ನುತ ||ಹೊತ್ತು ಕೊಂಡಗ್ನಿಯಲಿ ತನುವ ಬೀಸಾಡುವರು |ಮತ್ತೆ ಧರಣಿಯಲಿ ನಾ ಜನಿಸಬೇಡವೊ ಹರಿಯೆ 14ಇನ್ನು ಈ ಪರಿಪರಿಯ ಯೋನಿಮುಖದಲಿ ಬಂದು |ಬನ್ನವನು ಪಡಲರೆ ಭವಭವದೊಳು ||ಜನ್ಮ-ಮರಣಾದಿ ಕ್ಲೇಶಗಳನ್ನು ಪರಿಹರಿಸಿ |ಸನ್ಮತಿಯೊಳಿರಿಸೆನ್ನ ಪುರಂದರವಿಠಲ 15
--------------
ಪುರಂದರದಾಸರು