ಬಾರೋ ನನ್ಮ ಸ್ವಾಮಿ ಗುರು ಅಂತರ್ಯಾಮಿ
ಕರುಣಸಾರ ಬೀರುತಿಹ್ಯ ಶರಣಜನಪ್ರೇಮಿ 1
ಬೇಡಿ ನಿನ್ನ ಕೊಂಬೆ ನಿನ್ನ ನೋಡಿ ಬಲಗೊಂಬೆ
ಕಡಿಯುಗಾಣಿಸುವ ನೀನೆ ಒಡಿಯ ನನಗೆಂಬೆ 2
ಪಾದಪೂಜೆ ಮಾಡೆ ಸಾಧಿಸಿನ್ನು ನೋಡೆ
ಭೆದಿಸನುದಿನ ನಿಜಬೋಧ ಬೆರದಾಡೆ 3
ಕಾಣಲಿಕ್ಕೆ ಉಬ್ಬೆ ನೆನದು ನಿಮ್ಮ ಕೊಬ್ಬ್ಯ
ನಾನು ನೀನೆಂಬಹಂಭಾವ ಇದೆ ಧಬೆ 4
ನಿತ್ಯ ಪ್ರತಿಗೆ ದೀನ ಮಹಿಪತಿಗೆ
ಭಾನುಕೋಟಿತೇಜ ನೀನೆ ಬೇಕು ಸುಭಗುತಿಗೆ 5