ನಂಬು ನಂಬು ನಾರಾಯಣನ ಈಮಿಕ್ಕ ದೈವಗಳು ಕಾಯಬಲ್ಲವೆ ಪ.
ಅಂಬರದಿ ಧ್ರುವನ್ನ ನೋಡು ಈ ಭಕ್ತಿಮೌಳಿಯೆಂಬೊ ಪ್ರಹ್ಲಾದನ್ನ ನೋಡುಕುಂಭಿಣಿಯೊಳು ವಿಭೀಷಣಗೆ ಶ್ರೀರಾಮ ಕೊಟ್ಟತುಂಬಿದ ಭಾಗ್ಯವ ನೋಡಯ್ಯ 1
ಹಿರಣ್ಯಾಕ್ಷನೆಂಬೊ ದೈತ್ಯನ ಆ ಸಿರಿಯೆಲ್ಲಕರಗಿ ಹೋದದ್ದು ನೋಡಯ್ಯದುರುಳರಾವಣ ಏನಾದ ಆ ದುಃಖವನ್ನುಪಾರಂಪರ್ಯದಿಂದ ಕೇಳಯ್ಯ 2
ನ್ಯಾಯಕ್ಕಾಗಿ ಮನೆಗೆ ಬಂದ ಶ್ರೀಕೃಷ್ಣನ[ಕಟ್ಟೆಂದ] ಖಳನೇನಾದಹಯವದನನ್ನ ನಂಬಿದ ನಮ್ಮ ಧರ್ಮ-ರಾಯನ ಭಾಗ್ಯ ನೋಡಯ್ಯ3