ಮಂಗಳಾರತಿಯು ನಮ್ಮ ಲಿಂಗವಿನುತಗೇ ನಮ್ಮ ಪ
ಅಂಗನೆಯರೆಲ್ಲ ಕೂಡಿ ಅಚ್ಯುತಾಯೈ ನಮಃ ಎನ್ನಿ ಅ.ಪ
ವೇದಕಾದಿಪ್ರಣವವೆಂದು ಬೋಧಿಸಿದನುಶಿವನುಉಮೆಗೆ
ನಾದಬಿಂದುಕಳೆಯಗೂಡಿನ ನಾರಾಯಣನಿಗೆ ಮಂಗಳಂ 1
ಸುರರೂ ನರರೂ ಮುಖ್ಯಮಾದಾ ಗರುಡ ವಿಶ್ವಕ್ಸೇನರೆಲ್ಲ
ಪರಮತತ್ವಮಹುದಿದೆಂದು ಯಿರುವೋತದ್ವಿಪಾದಗಳಿಗೆ2
ನಿರ್ವಿಕಲ್ಪ ನಿಶ್ಚಲಾತ್ಮ ಸರ್ವಲೋಕಸಾಕ್ಷಿಭೂತ
ಗರ್ವಕಲನುಯೆಂಬೊ ನಾಮ ಉರ್ವಿಯೊಳಗೆ ವಹಿಸಿರುವಗೆ 3
ತತ್ವಗುರುವು ತುಲಶಿರಾಮ ಚಿತ್ಸುಖಾಂಶ ಶಿವಪ್ರಿಯನಿಗೆ 4