ನೀನೆ ನುಡಿಸಿದಂತೆ ನುಡಿಯುವೆನು ಮಿಕ್ಕ
ಜ್ಞಾನವಿಲ್ಲ ಎನಗೇನೇನು ಪ
ನೀನೆ ಜಗತ್ರಾಣ ಶ್ರೀಹರಿಯೆಂಬುದೊಂದೆ
ಖೂನಮಾಡಿ ಕೊಂಡಾಡುವೆನು ಅ.ಪ
ನೀ ನಡೆಸಲು ನಾ ನಡೆಯುವೆನು ಹರಿ
ನೀನಾಡಿಸಲು ನಾನಾಡುವೆನು
ನೀನೀಡದಿರೆ ಬಲು ಮಿಡುಕುತ ಬಳಲುವೆ
ನೀ ನುಣಿಸಲು ಉಂಡು ನಲಿವೆ ಪುಂಡನಾಗಿ 1
ಕಡುಪ್ರೇಮದಿ ಚರಾಚರಗಳನು ಕಾಯ್ವಿ
ಪೊಡವಿ ಈರೇಳುವ್ಯಾಪಕ ನೀನು
ಕೊಡುವ ಕರ್ತ ನೀನೆ ಮೂಲೋಕಕೆಂಬ ನುಡಿ
ದೃಢದಿ ನಂಬಿ ಗಟ್ಟಿಮಾಡಿಹೆನು 2
ಹೋಮ ಯಜ್ಞ ಯಾಗ ತಿಳಿಯೆ ನಾನು ಮತ್ತು
ನೇಮನಿತ್ಯದ ಗುರುತರಿಯೆನು
ಭೂಮಿಗಧಿಕ ಮಮಸ್ವಾಮಿ ಶ್ರೀ
ರಾಮನ ಪೂರ್ಣನಂಬಿಕೊಂಡಿಹೆನು 3