ಮೋಹನ ಕೃಷ್ಣವಿಠಲ | ಸಲಹ ಬೇಕಿವಳಾ ಪ
ದೇಹ ಮಮತೆಯ ಕಳೆದು | ವೈರಾಗ್ಯವಿತ್ತೂ ಅ.ಪ.
ವನಧಿ ಉತ್ತರಿಪ | ನವಪೋತ ಹರಿಯಾ |ಸ್ತವನ ಗೈಯುವ ಭಕ್ತಿ | ಪ್ರವಹ ಕೊಟ್ಟಿವಳಿಗೆಹವಣಿಸೋ ಸಾಧನವ | ಶ್ರೀವರನೆ ಕೃಷ್ಣಾ 1
ಭಾರತೀ ಪತಿಯಾದ | ಮಾರುತದ ಮತದಲ್ಲಿಸಾರತತ್ವವ ತಿಳಿಸಿ | ತೋರೋ ಸುಜ್ಞಾನ |ಮಾರುತಾಂತಾರ್ಗತನೆ | ಧೀರ ಸುಜನರ ಸಂಘಸಾರುವಂತೆಸಗೊ ಹರಿ | ಕಾರುಣ್ಯ ಮೂರ್ತೇ 2
ಪತಿಸುತರು ಹಿತರಲ್ಲಿ | ವ್ಯಾಪ್ತ ಶ್ರೀ ಹರಿಯೆಂಬಗುಪ್ತ ಮಹಿಮೆಯ ತಿಳಿದು | ಸೇವೆ ಸಲ್ಲಿಸುತಾ |ಅತಿಶಯದ ಆನಂದ | ಗತಿಯ ಸೇರುವ ಹವಣೆಕೃತಿಪತಿಯ ತೋರೆಂದು | ಪ್ರಾರ್ಥಿಸುವೆ ಹರಿಯೇ 3
ಗುರುಕರುಣವಿಲ್ಲದಲೆ | ಹರಿಯೊಲಿಯನೆಂದೆಂಬವರತತ್ವ ಸಾರವನೆ | ಕರುಣಿಸುತ ಹರಿಯೇ |ಹರಿಗುರು ಸೇವೆಯನು | ಕರಣತ್ರಯದಲಿ ಮಾಳ್ದವರಮತಿಯ ಪಾಲಿಸುತ | ಪೊರೆಯ ಬೇಕಿವಳಾ 4
ಸೃಷ್ಠಿ ಸ್ಥಿತಿ ಲಯ ಕರ್ತ | ವಿಷ್ಣು ಲೀಲಾಮೃತವಸುಷ್ಟುಸಂತತ ಸವಿವ | ಶ್ರೇಷ್ಠ ಸಾಧನವಾಕೊಟ್ಟು ಪಾಲಿಪುದೆಂಬ | ಇಷ್ಟವನೆ ಸಲಿಸೆಂದುಕೃಷ್ಣ ಗುರು ಗೋವಿಂದ | ವಿಠಲ ಪ್ರಾರ್ಥಿಸುವೇ 5