ದಾಸರೆಂದರೆ ಪುರಂದರದಾಸರಯ್ಯ ಪ
ವಾಸುದೇವ ಕೃಷ್ಣನ್ನ ಸೂಸಿ ಪೂಜಿಸುವಅ.ಪ
ಗ್ರಾಸಕಿಲ್ಲದೆ ಪೋಗಿ ಪರರ ಮನೆಗಳ ಪೊಕ್ಕುದಾಸನೆಂದು ತುಲಸಿ ಮಾಲೆ ಧರಿಸಿಬೇಸರಿಲ್ಲದೆ ಅವರ ಕಾಡಿ ಬೇಡಿ ಬಳಲಿಸುತಕಾಸುಗಳಿಸುವ ಪುರುಷನವ ದಾಸನೇ 1
ಡಂಭಕದಿ ಹರಿಸ್ಮರಣೆಮಾಡಿ ಜನರಾ ಮುಂದೆಸಂಭ್ರಮದಿ ತಾನುಂಬ ಊಟ ಬಯಸಿಅಂಬುಜೋದ್ಭವ ಪಿತನ ಆಗಮಗಳರಿಯದಲೆತಂಬೂರಿ ಮೀಟಲವ ಹರಿದಾಸನೇ 2
ಯಾಯವಾರವ ಮಾಡಿ ವಿಪ್ರರಿಗೆ ಮೃಷ್ಟಾನ್ನಪ್ರೀಯದಲಿ ತಾನೊಂದು ಕೊಡದ ಲೋಭಿಮಾಯ ಸಂಸಾರದಲಿ ಮಮತೆ ಹೆಚ್ಚಾಗಿಟ್ಟುಗಾಯನವ ಮಾಡಲವ ದಾಸನೇನೈಯ3
ಪಾಠಕನ ತೆರದಲ್ಲಿ ಪದಗಳನೆ ತಾ ಬೊಗಳಿಕೂಟ ಜನರ ಮನವ ಸಂತೋಷಪಡಿಸಿಗೂಟ ನಾಮಗಳಿಟ್ಟುಕೊಂಡ್ಹಿರಿಯ ತಾನೆನುತ,ತೂಟಕವ ಮಾಡಲವ ದಾಸನೇನೈಯ4
ಪುರಂದರ ದಾಸರಿವರೈಯ 5