ಒಟ್ಟು 35 ಕಡೆಗಳಲ್ಲಿ , 20 ದಾಸರು , 33 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸತ್ಸಂಗ ಮಾಡೊ ಮನವೆ ಚಿತ್ಸುಖ ನೋಡಲಿಕೆ ಅತಿಸೂಕ್ಷ್ಮಾನಂದ ಸುಪಥ ಅತಿಶಯಾನಂದ ಸದ್ಗತಿ ಸುಮೋಕ್ಷದಾಯಕ ಹಿತದೋರಿಕೊಡುವ ಸದ್ಗುರುನಾಥ ಧ್ರುವ ತೊಡಕಿ ಮಿಡುಕಬ್ಯಾಡ ಹಡಕಿ ವಿಷಯದೊಳು ಗಡಕವಾಗಿ ಕೆಡುಕ ಬುದ್ಧಿಯಿಂದ ಕೆಡುದೇನ ಬಡದ ಭವಣೆ ಬಟ್ಟು ತಾವು ಕೊಡುವರೇನ ಹಾಕಿ ವೈವಯಮನ ಬ್ಯಾಗೆ ಗುರುದಯಕರುಣ 1 ಸಿಲ್ಕಿಮಾಯ ಮಲ್ಕಿನೊಳು ಅಳ್ಕಿ ಆಲಪರಿಯಬ್ಯಾಡ ಬಲ್ಕಿ ಮಾಡಿಕೊಳ್ಳಿ ನೀ ಸುಜ್ಞಾನ ಕ್ಷುಲ್ಲಕ ಬುದ್ಧಿಗಾಗಿ ನಿನ್ನ ತನುವಿನೊಳಗೆ ಖೂನ ನುಲ್ಕಿ ಸುಟ್ಟ ಮಲ್ಕಿನಂತೆ ಜನಕಾಲಂಬ ತೋರಿ ನೀನು ಜಲಕಮಲದಂತಿರನುದಿನ ನಿಲ್ಕಿ ನೆಲೆಗೊಂಬುದಿದು ತಳಕು ತನ್ನೊಳಗದೆಯೆಂದು ನಾಲ್ಕುವೇದ ಸಾರುತಿದೆ ಪೂರ್ಣ2 ಮಾನವ ಜನ್ಮ ನಿರ್ತದಿಂದ ಅರ್ತು ಕೂಡಿ ಕರ್ತು ನಿಜಾನಂದ ಗುರುಬೋಧ ಥರಥರದಿ ತೋರಿ ಪೂರ್ಣ ಸಾರ್ಥಕ ಮಾಡುವದಿದು ತೀರ್ಥಪುಣ್ಯ ಸರ್ವಕ್ಷೇತ್ರವಾದ ಅರ್ಥಿಯಿಂದವಿಡಿದು ಗುರು ಪಡಿಯೊ ನಿನ್ನ ಸ್ವಹಿತದ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ಮಾರ್ತರು ನಾಮವ ಧರಿಸಿ ಯಥಾರ್ಥವು ಹರಿನಾಮವ ಬಹಳ ವಿಸ್ತರಿಸಿ ಪ ಕಣ್ಣಿಗೆ ಕಾಣದೆ ಪೂರ್ಣವಾಗಿಹ ನಾಮ ಚನ್ನಕೇಶವ ರಾಯನೆಂದೆಂಬ ನಾಮ ಉನ್ನತವಾಗಿಹ ನಾರಾಯಣ ನಾಮ ಮಾಧವ ನಾಮವ 1 ಅಂತರಂಗದಿ ಗೋವಿಂದನ ನಾಮವ ಸಿರಿ ನಾಮವ ಸಂತತ ಮಧುಸೂದನನೆಂಬ ನಾಮವ ಪಂಥವಿಡಿದು ತ್ರಿವಿಕ್ರಮ ನಾಮವ 2 ಅನುದಿನ ವಾಮನ ನಾಮವ ವನಜಾಕ್ಷ ಶ್ರೀಧರ ಗುಣ ನಾಮವ ವಿನಯದಿ ಹೃಷಿಕೇಶನೆನುತಿಹ ನಾಮವ ತನುವಾದ ಪದುಮನಾಭನ ನಾಮವ 3 ಅಂದದೊಳು ಧರಿಸಿರುವ ದಾಮೋದರ ನಾಮ ಚಂದದಿ ವಾಸುದೇವನ ನಾಮವ ಕುಂದದೆ ಸಂಕರ್ಷಣನೆಂಬ ನಾಮವ ಬಂಧನ ಪರಿಹಾರ ಪ್ರದ್ಯುಮ್ನ ನಾಮವ 4 ಅರ್ಥಿಯಿಂದಲೆ ಅನಿರುದ್ಧನ ನಾಮವ ಉತ್ತಮ ಪುರುಷೋತ್ತಮ ನಾಮವ ಭಕ್ತಿಯಿಂದಲೆ ಅಧೋಕ್ಷಜನೆಂಬ ನಾಮವ ಮೃತ್ಯುವು ಕಾಣದ ನರಹರಿ ನಾಮವ 5 ಅಚ್ಯುತ ನಾಮವ ನಿಶ್ಚಯಿಸಿ ಜನಾರ್ದನ ನಾಮವ ಬಚ್ಚಿಡಬೇಡ ಉಪೇಂದ್ರನ ನಾಮವ ಸಿರಿ ನಾಮವ 6 ದುಷ್ಟನಿಗ್ರಹವಾದ ಕೃಷ್ಣನ ನಾಮವ ಬೆಟ್ಟದ ವರಾಹತಿಮ್ಮಪ್ಪನ ನಾಮವ ಅನುದಿನ ಘನ ನಾಮವ ಸೃಷ್ಟಿಯೊಳು ಉತ್ತಮ ಸ್ಮಾರ್ತನೆ ವೈಷ್ಣವ 7
--------------
ವರಹತಿಮ್ಮಪ್ಪ
ಮಾವಗೆ ನೀ ಮತ್ತೆ ಮಾವನಾದೆಯೊ ರಂಗ |ಮಾವನ ಮಗಳ ನೀ ಮದುವೆಯಾದೆಯೊ ರಂಗ ||ಭಾವಗೆ ನೀ ಮತ್ತೆ ಭಾವನಾದೆಯೊ ರಂಗ |ಭಾವಜವೈರಿಗೆ ಸಖನಾದೆಯೊ ರಂಗ 2ಅತ್ತೆಯ ಅರ್ಥಿಯಿಂದಾಳಿದೆಯೋ ರಂಗ |ಅತ್ತೆಯ ಮಗಳ ನೀ ಮದುವೆಯಾದೆಯೊ ರಂಗ ||ಮತ್ತೊಬ್ಬರಿಗುಂಟೆ ಈಪರಿಮಹಿಮೆಯು |ಕರ್ತೃ ಶ್ರೀ ಪುರಂದರವಿಠಲನಿಗಲ್ಲದೆ3
--------------
ಪುರಂದರದಾಸರು