ಒಟ್ಟು 35 ಕಡೆಗಳಲ್ಲಿ , 20 ದಾಸರು , 34 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾಲವನು ಕೊಳುವಾಗ ಸಡಗರದ ಸಿರಿಯೋ ಸಾಲಿಗನು ಬಂದು ಕೆಳಲಾಗಡರಿತುರಿಯೋ ಪ ಡಬ್ಬುಗೈದಿದ್ದವನೊಳ್ ಎಬ್ಬಿಸಿ ಹಣತಂದು ಉಬ್ಬುಬ್ಬಿ ಸತಿಮುಂದೆ ಹೆಬ್ಬುಲಿಯ ತೆರದಿ ಒಬ್ಬರೀಡಿಲ್ಲೆನಗೆಂದಬ್ಬರಿಸುತ್ಹೇಳುವನು ತಬ್ಬಲು ಧಣಿಬಂದು ಮಬ್ಬಿನೊಳೆದ್ದೋಡ್ವ 1 ಹಣತಂದ ದಿನ ಅವನ ಮನೆಯೊಳಗೆ ಹಬ್ಬೂಟ ವನಿತೆಯೊಳೆನುತಿಹ್ಯನು ನನಗಾರು ಸರಿಯೆ ಹಣಕೊಟ್ಟ ಧಣಿಬಂದು ಮನೆಮುಂದೆ ಕುಳ್ಳಿರಲು ಹೆಣಇರುವ ಮನೆಗಿಂತ ಘನದು:ಖಕೇಳೊ 2 ಕಡುಹಿಗ್ಗಿನಿಂದೊಸನ ಒಡವೆ ಉದ್ದರಿತಂದು ಬಡಿವಾರ ಬಿಂಕ ಕೊಡುವ ವಾಯಿದೆ ಕಳೆದು ಬಡಿಗೆಯು ಬರಲಾಗ ಮಡದಿ ಸತ್ತವನಂತೆ ಇಡುವ ತಲಿ ಬುವಿಗೆ 3 ಅಕ್ಕಿಬೇಳೆ ಬೆಲ್ಲತಂದು ಅಕ್ಕರದಿಂ ಸತಿಸುತರಿ ಗಿಕ್ಕುವಾಗ ನೋಡವನವಕ್ಕರಂಗಳನು ಮಕ್ಕಮಾರಿಯಂದದಿ ತಿಕ್ಕುವಾಗಕೊಟ್ಟವರು ಸಿಕ್ಕದೆ ತಿರುಗುವನು ಬಿಕ್ಕೆ ಬೇಡುಣುತ 4 ಮನೆಮುರಿದು ಹೋಗಲಿ ವನಿತೆಯರು ಜರಿಯಲಿ ಎನಗೆಡರು ಬಂದೊದಗಿ ಅನ್ನ ಸಿಗದಿರಲಿ ಘನಮಹಿಮ ಶ್ರೀರಾಮ ಮಣಿದುಬೇಡುವೆ ನಿನಗೆ ಋಣದ ಬಾಳುವೆ ಬೇಡ ಜನಮಜನುಮಗಳಲಿ 5
--------------
ರಾಮದಾಸರು
ಸುಂದರ ಕಾಂಡ ರಾಮಾಯಣ ಸಿರಿ ಸಿರಿ ಹನುಮನಾ ||ಮೆರೆವ ಸಚ್ಚರಿತೆ ಮಮ | ಗುರುವೆ ನುಡಿಸೀದಷ್ಟುಒರೆವೆ ಕೇಳ್ಪುದು ಸಜ್ಜನಾ ಪ ಗೃಹ ಮೇಧಿ ಇರುವ ಬಗೆ | ಬಹು ಪರೀಯಲಿ ತೋರಿಗುಹ ವನಂಗಳನೆ ಚರಿಸೀ |ಗೃಹಿಣಿಯನು ಕಾಣದಲೆ | ಬಹು ನಟಸಿ ನರರಂತೆಮಹ ಮಹಿಮ ರಾಮ ಬರಲೂ 1 ಪತಿ ದಶರಥನ | ಸುತನ ಕಂಡೆರಗಿ ರವಿಸುತಗೆ ರಾಜ್ಯವನೆ ಕೊಡಿಸೀ 2 ರಾಮನಾಣತಿ ಪೊತ್ತು | ಭೂಮಿಜೆಯ ವಾರ್ತೆಯನುನೇಮದಲಿ ತರುವೆ ನೆನುತಾ ||ಆ ಮಹಾ ಶರಧಿಯನು | ಧೀಮಂತ ಲಂಘಿಸುತಭೂಮಿಜೆಯ ಕಂಡು ಎರಗೀ 3 ಪತಿ | ರಾಮನ್ನ ಕಂಡ ಪರಿಆಮೋದದಲ್ಲಿರುತಿರೇ 4 ಶ್ರೀ ಲೋಲ ರಾಮನಿಗೆ | ಆಳಾಗಿ ಇರಲೊಂದುವಾಲುಳ್ಳ ಕಪಿಯು ಬಂದೂ ||ಕೇಳುವರು ಇಲ್ಲದಲೆ | ಪೋಲಾಗಿ ಹೋಯ್ತೆಂಬಕೀಳು ನುಡಿಗವಕಾಶ ಕೊಡದೇ 5 ವಂದೆರಡು ಹಣ್ಣಾನು | ತಿಂದ್ಹೋಗುವೇನೆಂದುಇಂದೀವರಾಕ್ಷಿಯ ಬೇಡುತಾ ||ನಂದೀಸಿ ಅಶೋಕ | ನಂದನ ವನವ ಮದಸಿಂಧೂರ ನಂತೆಸಗಿದೇ 6 ಕೋಟ್ಯಶೀತಿಯು ನಿ | ಶಾಟ ಯೂಥಪ ಸಹಸಾಷ್ಟ ಕಾಯುತ ಮುಖ್ಯರಾ ||ಖೇಟ ರಾವಣ ಸೇನೆ | ಕೂಟ ಮೂರರಲೊಂದುರೋಟಿಸುತ ನೀ ಮೆರೆದೆಯೋ 7 ಅಕ್ಷೋಹ್ಣಿ ಬಲ ಸಹಿತ | ರಾಕ್ಷಸಾಧಿಪ ಸುತನುಅಕ್ಷಯ್ಯ ಕುವರ ಬರಲೂ ||ಪಕ್ಷೀಂದ್ರ ತೆರ ಪಿಡಿದು | ಈ ಕ್ಷಿತಿಗೆ ಅಪ್ಪಳಿಸೆತಕ್ಷಣದಲಸು ನೀಗಿದಾ 8 ಮಂದಜಾಸನ ವರದಿ | ಇಂದ್ರಜಿತು ಮದವೇರಿಬಂದೆಸೆಯೆ ಬ್ರಹ್ಮಾಸ್ತ್ರವಾ ||ಛಂದದಲ್ಯೋಚಿಸುತ | ಬಂಧನಕೆ ನೀನಾಗಿನಂದದ ಲ್ವೊಳಗಾದೆಯೋ 9 ತೆತ್ತೀಸ ಕೋಟಿ ದೇ | ವತ್ತೀಗಳಿಗೆಲ್ಲಾಉತ್ತೂಮನಾದ ನೀನೂ ||ಸುತ್ತೀಸಿ ಬಾಲವನು | ಹತ್ತೂತಲೆಯವನನೆತ್ತೀಯ ಮೇಲ್ ಕುಳಿತೆಯೋ 10 ನಾರೀಯ ಚೋರ ನಿ | ನ್ನಾರೆಂದು ಕೇಳಾಲುಮಾರುತ್ತರವಿತ್ತು ಜರಿದೇ ||ಮಾರೀಚ ಮೊದಲಾದ | ನೂರಾರು ರಕ್ಕಸರದೂರೋಡಿಸೀದವನ ದೂತಾ 11 ಕೋಟಲೆಗಳ ಕೊಟ್ಟ | ತಾಟಕಾದೀ ದೈತ್ಯಕೂಟಗಳ ಸಂಹರಿಸಿದಾ ||ಕೂಟಸ್ಥ ಲೋಕಗಳ | ನೋಟದಲಿ ದಹಿಪ ವೈರಾಟ ಪ್ರಭುವಿನಾಳೂ 12 ಕೇಳೆಲೋ ರಾವಣನೇ ತಿಳಿಯಯಾ ನೀನು ನಿನ್‍ಹುಳುವೆಂದು ನಿಜ ಬಾಲದೀ |ಸಿಲುಕಿಸಿ ಜಲನಿಧಿ | ನಾಲಕ್ಕು ಮುಳುಗಿದವಾಲಿ ಪೆಸರನು ಮರೆತೆಯಾ 13 ತಾಲಮರಗಳ ಶೀಳಿ | ವಾಲೀಯನೆ ಕೊಂದರ್ಕಬಾಲಗೇ ರಾಜ್ಯ ಕೊಡಿಸೀ ||ಕೋಲಿನಿಂ ನಿಮ್ಮೆಲ್ಲ | ಹೂಳುವ ರಾಮನಆಳು ನಾನೆಂದು ತಿಳಿಯೋ 14 ರಕ್ಕಸ ಪತಿಯಾಜ್ಞೆ | ಇಕ್ಕಿ ತಲೆಯಾ ಮೇಲೆರಕ್ಕಸರೆಲ್ಲ ತವ ಪುಚ್ಛ ||ಕಿಕ್ಕಲೂ ಉರಿ ಲಂಕೆ | ಪೊಕ್ಕು ಪುರವನೆ ದಹಿಸಿಅಕ್ಕರದಿ ವನದಿ ಹಾರೀ 15 ಕಾಯ ಸಹಿತರ ನೋಡಿಪ್ರೀಯ ದ್ವಾರ್ತೆಯ ನರುಹಲೂ ||ಗೇಯ ಹನುಮನ ತುತಿಸಿ || ರಾಯಗೆರಗುವ ವನದಿಕಾಯ ಕುಪ್ಪಳಿಸುತಿರಲೂ 16 ಕಾತುರತೆಯ ಕಪಿ | ಜಾತೆಗಳ ಸಂತೈಸಿಪ್ರೀತಿಯಿಂ ಮಧುವನವನಳಿದ ||ಸೀತೆಯನು ಕಂಡಂಥ | ವಾರ್ತೆಯನು ಪೇಳೆ ರಘುಜಾತ ನಿನ್ನನು | ಅಪ್ಪಿದಾ 17 ಎರಡೇಳು ಭುವನದೊಳು | ಇರುವರೇ ನಿನ್ಹೊರತುಹರಿಗೆ ಪ್ರೀತ್ಯಾಸ್ಪದನು ಎನಿಸೀ ||ಮೆರೆವ ಭಕ್ತಾಗ್ರಣಿಯೆ | ಎರಗುವೆನು ತ್ವತ್ವದಕೆಹರಿಭಕ್ತಿ ಕರುಣಿಸಯ್ಯಾ 18 ಉದಯಕಾಲದಲೆದ್ದು | ಮುದದಿಂದಲೀ ಪದವಸದಯ ಹೃದಯರು ಪಠಿಸಲೂ ||ಬದಿಗ ಗುರು ಗೋವಿಂದ | ವಿಠಲನೋಳ್ ಸದ್ಭಕ್ತಿವದಗಿ ಪಾಲಿಪ ಹನುಮನೂ 19
--------------
ಗುರುಗೋವಿಂದವಿಠಲರು
ಹರಿಸೇವೆ ಕೈಂಕರ್ಯ ಪರಮ ನಿಷಾತೆ |ಪರಿಹರಿಸು ಭವತಾಪ ಜಾಂಬುವತಿ ಮಾತೇ |5 ಭೃತ್ಯ ಜಾಂಬುವಂತನ ತನುಜೆಶ್ರೀ ಮಹಿಳೆಯಂದದಲಿ ಕೃಷ್ಣ ಪ್ರಿಯಳಾದೇ 1 ಮಿಕ್ಕ ಮಹಿಳೆಯರಿಂದ ಲಕ್ಕುಮಿಯ ಆವೇಶಪೊಕ್ಕು ನಿನ್ನಲಿ ಅಧಿಕ ಸರ್ವಕಾಲದಲೀ |ಅಕ್ಕರದಿ ಇದಕೆ ಮಿಗೆ ಲಕ್ಕುಮಿಯು ಇರಲಾಗಚೊಕ್ಕ ಮಾತೆಯು ನೀನು ಶೇಷ ಸಮಳೆನಿಪೇ 2 ಆವೇಶ ನಿನ್ನಲ್ಲಿ ಇಲ್ಲದಿಹ ಸಮಯದಲಿದೇವಿಯರು ಮಿಕ್ಕೈದು ಮಂದಿ ಸಮ ನೀನು |ದೇವಿ ಶಿರಿ ಆವೇಶ ಅಲ್ಪವಿಹ ಸಮಯದಲಿದೇವ ಕಾಮಾದಿಗಳಿಗಧಿಕ ವಿಂಶತಿ ಗುಣದೀ 3 ನಿರ್ಮಲೈ ಕಾಂತಿತ್ವ ವಿಮಲ ಭಕ್ತ್ಯಾದಿಗುಣಅಮಮ ನಿನ್ನಲಿ ಇಹುದು ನೈಜರೂಪಾ |ವಿಮಲ ಸಚ್ಚಾರಿತ್ರೆ ಈ ಮಹಿಯ ಸಂಚಾರನಿರ್ಮಮದಿ ಗೈದಿರ್ಪೆ ಬಧಿರಾಂಧರಂತೇ 4 ದೇಹ ಮಮತೆಯಲಿಂದ ಮನಸೋತು ಕಷ್ಟಕ್ಕೆವಾಹನಾದಿಗಳೇರಿ ತೀರ್ಥಯಾತ್ರೆಗಳಾ |ಬಹುವಾಗಿ ಗೈದಾಗ್ಯು ಪುಣ್ಯ ಹೀನವು ಎಂದುಮಹಿಳೆ ನೀ ವರ್ಣಿಸಿಹೆ ಭಕುತರುಪಕಾರೀ 5 ಪಾದ ದರ್ಶನವೆಂದುಸಾರ್ವಕಾಲದಿ ನೀನು ಚಿಂತಿಸುತಲಿರಲೂ 6 ಕಂಡು ಶ್ರೀಹರಿಯನ್ನು ಅಪರೋಕ್ಷದಲಿ ನೀನುಬಂಡುಣಿಯು ಹರಿಪಾದ ಕಮಲಕ್ಕೆ ಆಗೀ |ಹಿಂಡು ದೈವರ ಗಂಡ ಪಾಂಡುರಂಗನೆ ಎಂದುಮಂಡಿಸಿದೆ ಪರತತ್ವ ತೊಂಡರುಪಕಾರೀ 7 ಕರದಲ್ಲಿ ಧನ್ವಂತ್ರಿ ಪಿಡಿದಮೃತ ಕಲಶದಲಿಹರಿನಯನ ಆನಂದ ಜಲಬಿಂದು ಉದರೇ |ತುರರೂಪಿಯಾದ ಶ್ರೀ ತುಳಸಿಯಲಿ ನೀನರಲುಹರಿ ನಿನ್ನ ಅಗಲದಿಹ ಸರ್ವ ಪೂಜೆಯಲೀ 8 ಶಾಂಭವಿಯುನುತೆ ದೇವಿ ಜಾಂಬುವತಿ ಶ್ರೀ ಹರಿಯಕಾಂಭಂಥ ಸುಜ್ಞಾನ ಭಕುತಿ ವೈರಾಗ್ಯ |ಹಂಬಲದಿ ನಿನ್ನಂಘ್ರಿ ನಮಿಪೆ ತೋರ್ವುದು ಹೃದಯಅಂಬರದಲಿಹ ಗುರು ಗೋವಿಂದ ವಿಠ್ಠಲನ 9
--------------
ಗುರುಗೋವಿಂದವಿಠಲರು
ಪೂರ್ಣಿಮೆಯ ದಿನ(ಗರುಡ ದೇವರನ್ನು ಕುರಿತು)ರಂಭೆ : ಮಂದಗಮನೆ ಪೇಳಿದಂದವನೆಲ್ಲ ಸಾ-ನಂದದಿ ತಿಳಿದೆನೆ ಬಾಲೆಇಂದಿದು ಪೊಸತು ಮತ್ತೊಂದುವಾಹನವೇರಿಮಂದರಧರಬಹನ್ಯಾರೆ1ಅಕ್ಕ ನೀ ಕೇಳಲೆ ರಕ್ಕಸವೈರಿಯಪಕ್ಕದ ಮೇಲೇರಿಸುತಅಕ್ಕರದಿಂದ ಕಾಲಿಕ್ಕಿ ಬರುವನೀತಹಕ್ಕಿಯಂತಿಹನೆಲೆ ಜಾಣೆ 2ಘೋರನಾಸಿಕದ ಮಹೋರಗ ಭೂಷಣಧಾರಿವನ್ಯಾರೆಂದು ಪೇಳೆಮಾರಜನಕಗೆ ವಾಹನನಾಗುವನೀತಕಾರಣವೇನೆಂದು ಪೇಳೆ 3ಊರ್ವಶಿ : ಈತನೆ ಮಹಾತಿಬಲ ಕಾಣೆ ಶ್ರೀವಿಷ್ಣುವಿಂಗೆಕೇತನನಾದ ಪುನೀತನೆಲೆ ಜಾಣೆಭೀತಿರಹಿತವಿಖ್ಯಾತಿ ಸರ್ಪಾ-ರಾತಿ ಸೂರ್ಯಾನ್ವಯನ ಬಲಗಳಚೇರಿಸಿದ ನಿಷ್ಕಾತುರನಹರಿಪ್ರೀತ ವಿನತಾ ಜಾತ ಕಾಣಲೆ 4ಗಂಡುಗಲಿ ಮಾರ್ತಾಂಡತೇಜಮಖಂಡಬಲನಿವನು ಮಾತೆಯಲಂಡಲೆಯ ಪರಿಖಂಡನಾರ್ಥದಿಚಂಡವಿಕ್ರಮನು ನೇಮವಗೊಂಡು ಬಳಿಕಾಖಂಡಲಾದ್ಯರತಂಡವೆಲ್ಲವನು ಕೋಪದಿಗಿಂಡುಗೆದರಿಯಜಾಂಡವೆಲ್ಲವನಂಡಲೆದು ಕರದಂಡನಾಭನಕಂಡು ಮೆಚ್ಚಿಸಿ ಅಮೃತಕುಂಭವಕೊಂಡುಬಂದವನಂಡಜಾಧಿಪ 5ವಾರಿಜಾಸನೆ ವಾಸುದೇವನುಭೂರಿವೈಭವದಿ ಗರುಡನನೇರಿ ಪೂರ್ಣಮಿವಾರದಲಿ ಸಾಕಾರವನುದಯದಿ ತೋರುತಸ್ವಾರಿ ಬರುತ ಶೃಂಗಾರಮೂರುತಿ ಭೇರಿಗಳರವದಿಸನಕಸ-ನಾರದಾದಿಮುನೀಂದ್ರವಂದಿತಚಾರುಚರಣವ ತೋರಿ ಭಕ್ತರಘೋರದುರಿತವ ಸೊರೆಗೊಳ್ಳಲುಶ್ರೀರಮಾಧವ ಮಾರಜನಕನು 6
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ