ಶುಕ ಮುನಿವಂದ್ಯ ಹರಿ
ಮುಖ ಪೀಠದಲಿ ಕುಳಿತೂ ಪ
ಸುಖದಿ ನೀ ಪವಡಿಸಯ್ಯಾ ಅ.ಪ
ಬೊಮ್ಮ ದಿವಿಜ ಭವರೋಗ ವೈದ್ಯ ನಿಂ ನವಸರದೂಳಿಗ
ನವಸುಂದರ ನಿದ್ದೆ ಪೊ
ತ್ತವನೇ ನೀ ಪವಡಿಸಯ್ಯಾ 1
ತುಂಬುರು ನಾರದನೆಂಬರು ವೀಣೆಯ
ಸಂಭ್ರಮದಿಂ ಮೇಳೈಸಿ
ಅಂಬುಜನಾಭ ನೀನೆಂಬ ಗೀತವ ಸವಿ
ದುಂಬಿ ಪಾಡಲು ಕೇಳುತಾ
ಟುಂಬ ನೀ ಪವಡಿಸಯ್ಯಾ 2
ಪೆಡೆದಲೆಗನ ಮೃದುವಡೆದ ಹಾಸಿನ ಮೇ
ಲಿಡಿಕಿರಿ ವಡಸಿಸುವಾ
ಯಡಕೆಲೆ ಸಂಭ್ರಮಿಸೇ
ಮಡದಿ ರನ್ನಳು ಸೌಮ್ಯನಾಯಕಿ
ಯೊಡನೈಗೂಡಿ ಮೃಡನುತನೆ ಪವಡಿಸಯ್ಯಾ 3