ಒಟ್ಟು 33 ಕಡೆಗಳಲ್ಲಿ , 16 ದಾಸರು , 33 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂದಗಮನೆ, ಇವನಾರೆ ಪೇಳಮ್ಮ |ಮಂದರಧರಗೋವಿಂದ ಕಾಣಮ್ಮಪಕೆಂದಳಿದನಖಶಶಿಬಿಂಬ ಪಾದಪದ್ಮ |ಅಂದುಗೆಯಿಟ್ಟವನಾರು ಪೇಳಮ್ಮ ||ಅಂದು ಕಾಳಿಂಗನ ಪೆಡೆಯ ತುಳಿದ ದಿಟ್ಟ |ನಂದನ ಕಂದ ಮುಕುಂದ ಕಾಣಮ್ಮ 1ಉಡುಗೆ ಪೀತಾಂಬರ ನಡುವೀಣೆ ಉಡುದಾರ |ಕಡಗ-ಕಂಕಣವಿಟ್ಟವನಾರಮ್ಮ ||ಮಡದಿ ಕೇಳ್ ಸಕಲಲೋಕಂಗಳ ಕುಕ್ಷಿಯೊಳ್ |ಒಡನೆ ತೋರಿದ ಜಗದೊಡೆಯ ಕಾಣಮ್ಮ 2ನೀರದನೀಲದಂತೆಸೆವ ವಕ್ಷದಿ ಕೇ-|ಯೂರ-ಹಾರಗಳನಿಟ್ಟವನಾರಮ್ಮ ||ನೀರೆ ಕೇಳು ನಿರ್ಜರರಾದವರಿಗೆ |ಪ್ರೇರಿಸಿ ಫಲವಿತ್ತು ದಾರಿ ಕಾಣಮ್ಮ 3ಶಂಖ ಚಕ್ರವ, ಗದೆ-ಪದ್ಮ ಕೈಯೊಳಗಿಟ್ಟ-|ಲಂಕೃತನಹನೀತನಾರಮ್ಮ ||ಪಂಕಜಮುಖಿಶ್ರೀಭೂದೇವಿಯರರಸನು |ಶಂಕೆಇಲ್ಲದೆ ಗೋಪೀತನಯ ಕಾಣಮ್ಮ4ಕಂಬುಕಂಧರಕರ್ಣಾಲಂಬಿತಕುಂಡಲ|ಅಂಬುಜಮುಖದವನಾರೆ ಪೇಳಮ್ಮ ||ರಂಭೆ ಕೇಳೀತ ಪುರಂದರವಿಠಲ |ನಂಬಿದ ಭಕ್ತಕುಟುಂಬಿ ಕೇಳಮ್ಮ 5
--------------
ಪುರಂದರದಾಸರು
ಮಾಯೆಯು ಎಂತಿಹುದೆಂಬೆಯ ಮಗನೆಮಾಯೆಯು ಸ್ತ್ರೀಯೇಮಾಯೆಮಾಯೆಯಗುರುಕರುಣದಿ ತಾಗೆ ಅದರೆಮಾಯೆಯೆಲ್ಲವೂ ನಿರ್ಮಾಯೆಪಎಸಳಿನ ಕಂಗಳ ಓರೆನೋಟಕೆಎದೆಗುಂದುವುದೇಮಾಯೆಮುಸುಕನೇ ಹಾಕಿ ಹಲ್ಲನು ತೆರೆಯಲುಮುಂದುಗೆಡಿದುವುದೇಮಾಯೆಕುಸುಮದ ಸೂಡಿದ ಮುಡಿಯಾಭಾವಕೆಕುಸಿಯುತಲಿಹುದೇಮಾಯೆಮುಸಿ ಮುಸಿ ನಗುತ ಮುದ್ದು ಮಾತಾಡಲುಮರುಳಾಗುವುದೇಮಾಯೆ1ಚೆಳ್ಳು ಪುಳ್ಳು ಎಂದೆಂಬ ಅಂದುಗೆಗೆಚಿತ್ತುಡುಗುವುದದೇಮಾಯೆಬಳ್ಳಿಯ ತೆರದಲಿ ಬಳುಕುವ ತನುವಿಗೆಬಾಯಿ ಬಿಡುವುದೇಮಾಯೆಮೆಲ್ಲನೆ ಹೆಜ್ಜೆಗೆ ಜಗ್ಗುವ ನಡಿಗೆಗೆಮರುಗುತಲಿಹುದೇಮಾಯೆಗಲ್ಲದ ನುಣುಪಿಗೆ ಚಿಬುಕದ ಸಿರಿಗೆವಶವಾಗುವುದೇಮಾಯೆ2ಮೋರೆಯ ಮುರುಕಿಸೆ ಹುಬ್ಬನು ಏರಿಸೆಮುಳುಗಿಹೋಗುವುದೇಮಾಯೆತೋರ ಹರಡಿಯ ತಿರುಹುವ ಬಗೆಗೆದೃಢಗೆಡುವುದೆಮಾಯೆಸೀರೆ ಸಿಂಗಾರಕೆ ಒಲವು ಒಯ್ಯಾರಕೆಸಿಕ್ಕಿಹೋಗುವುದೇಮಾಯೆಹಾರವ ಎತ್ತಿ ಎದೆ ಬದಿ ತೋರಿಸೆಹುಚ್ಚನಾಗುವುದೇಮಾಯೆ3ಕಂಚುಕಿ ತೆರೆದು ನಡುವನು ಸಡಿಲಿಸೆಕಾಲುಡುಗುವುದೇಮಾಯೆಚಂಚಲ ದೃಷ್ಟಿಯ ಆಲಿಯ ಹೊರಳಿಸೆಚೇತನಗುಂದುವುದುಮಾಯೆಗೊಂಚಲ ನಾಗೋತ್ತರ ಚಳತುಂಬಿಗೆ ಮಾರುಹೋಗುವುನೇಮಾಯೆಮಿಂಚುವ ಮೋರೆಯ ಮೀಟಿನ ಬಣ್ಣಕೆಮುಳುಗಿಯಾಡುವುದೇಮಾಯೆ4ಸತಿಯಿಂದಲಿಸುತ ಸುತನಿಂದಲಿ ಸೊಸೆಸರಗೊಳಿಸುವುದೇಮಾಯೆಮಿತಿಯಿಲ್ಲದೆ ವಾಸನೆಯಲಿ ಜನ್ಮವಮುಂದುವರಿಸುವುದೇಮಾಯೆಪಥಗಾಣದೆ ಅನಂತ ಯೋನಿಯಲಿಪುಡಿಯಾಗುವುದೇಮಾಯೆಚಿದಾನಂದನ ತಿಳುವಿಗೆ ಮುಳುಗಿಸಿಪಸರಿಸಿ ಇಹುದೆಮಾಯೆ5
--------------
ಚಿದಾನಂದ ಅವಧೂತರು
ಹರಿಯೆಂಬ ನಾಮಮೃತ ರುಚಿಕರವೆಲ್ಲಪರಮಭಕ್ತರಿಗಲ್ಲದೆ - ಮಿಕ್ಕ -|ಅರಿಯದ ಕಡುಮೂರ್ಖ ಮನುಜರಿಗೆಲ್ಲತಾಹರುಷವಾಗಬಲ್ಲದೆ? ಪಅಂದುಗೆಅರಳೆಲೆಯಿಟ್ಟರೆಕೋಡಗಕಂದನಾಗಬಲ್ಲದೆ? |ಹಂದಿಗೆ ತುಪ್ಪ-ಸಕ್ಕರೆ ತಿನ್ನಿಸಲು ಗ-ಜೇಂದ್ರನಾಗಬಲ್ಲದೆ? ||ಇಂದುಪೂರ್ಣಕಳೆಯೊಳು ತಾನು ತೋರಲುಪರಿಪರಿ ಬಂಗಾರವಿಟ್ಟರೆ ದಾಸಿ ತಾಅರಸಿಯಾಗಬಲ್ಲಳೆ? |ಭರದಿಂದ ಶ್ವಾನನ ಬಾಲವ ತಿದ್ದಲುಸರಳವಾಗಬಲ್ಲದೆ? ||ಉರಗಗೆ ಕ್ಷೀರವನೆರೆಯಲು ಅದು ತನ್ನಗರಳವ ಬಿಡಬಲ್ಲದೆ? ||ಭರದಿಂದ ನೀಲಿಯ ಕರದಿಂದ ತೊಳೆಯಲುಕರಿದು ಹೋಗಬಲ್ಲದೆ? | 2ಮೋಡಕೆ ಮಯೂರ ಕುಣಿವಂತೆ ಕುಕ್ಕುಟನೋಡಿ ಕುಣಿಯಬಲ್ಲದೆ? |ಗೋಡೆಗೆ ಎದುರಾಗಿ ನಾಟ್ಯವಾಡಲುನೋಡಿ ಸುಖಿಸಬಲ್ಲದೆ? ||ಹಾಡಿನ ಕುಶಲತೆ ಬಧಿರನು ತಾ ಸವಿ-ಮಾಡಿ ಕೇಳಬಲ್ಲನೆ? |ರೂಢಿಗೊಡೆಯ ನಮ್ಮಪುರಂದರವಿಠಲಮೂಢಜಾÕನಿ ಬಲ್ಲನೆ3
--------------
ಪುರಂದರದಾಸರು