ಒಟ್ಟು 19041 ಕಡೆಗಳಲ್ಲಿ , 136 ದಾಸರು , 7982 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಾವಜಾರಿವಿನುತ ಮಹಿತ ದಯಿತಾ ಸಮೇತಅ.ಪ ಶ್ರೀಭೂನೀಳಾ ಸಮೇತ ಸತತ ವಿಭವಯುತ ತ್ರಿಭುವನ ಸುಖದಾತ ಶುಭಚರಿತ 1 ರಾಜೇಂದ್ರಪುರಿಧಾಮ ರಘುರಾಮ ಘನಶ್ಯಾಮ ರಾಜಶೇಖರನುತನಾಮ ಜಗದಭಿರಾಮ ಪಾವನಗುಣಧಾಮ2
--------------
ನಂಜನಗೂಡು ತಿರುಮಲಾಂಬಾ
ಭಾವದ ಬಯಲಾಟ ಭಾವಿಕ ಬಲ್ಲನಿದರ ನೋಟ ಧ್ರುವ ತೋರಿ ಕೊಡುವುದಲ್ಲ ತೋರಿಸಿ ತಾ ಕೊಂಬುವದಲ್ಲ ತೋರಿಕೆಗೆರಡಿಲ್ಲ ತೋರಿ ತೋರದದರೊಳಾಡುವದೆಲ್ಲ 1 ಬಯಲಿಗೆ ನಿರ್ಬೈಲು ಬಯಲಿಲಿದ್ದವ ಬಲ್ಲಿದರ್ಹೋಯಿಲು ಶ್ರೇಯ ಸುಖದ ಕೀಲು ಜೈಸಿಹ ಮನದವಗಿದು ಮೇಲು 2 ಜ್ಞಾನರಹಿತ ಕೂಟ ಮನೋನ್ಮಕಾಗಿಹ್ಯ ಮುಗುಟ ಅನುದಿನ ಮಹಿಪತಿ ಸುಖದೂಟ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಾವನೆ ಬಲಿದನಕಾ ಒಣಭಕ್ತಿಯ ಮಾಡಿದರೇನು | ದೇವದೇವೋತ್ತಮನಾಪಾದ ಸುಮ್ಮನೆ ಸಿಲ್ಕುವದೇನು ಪ ಸಂಜಿವನಿಲ್ಲದಲೇ ಸಾವಿರ ಗಿಡ ಮೂಲಿಕಿದ್ದೇನು | ರಂಜಕ ತಾನಿಡದೇ ಯಂತ್ರದಿಗುರಿವಡ್ಡಿರಲೇನು 1 ಸೂರಿಯನುದಯಿಸದೇ ಕನ್ನಡಿ ಕಣ್ಣುಗಳಿದ್ದೇನು | ಗುರುರಾಯನ ಕರುಣಾ ಪಡಿಯದೆ ಮಂತ್ರ ಕಲಿತೇನು 2 ಅನುಭವಿಸದೇ ಸುಖವಾ ಜ್ಞಾನದ ಮಾತಾಡಿದರೇನು | ಘನಗುರು ಮಹಿಪತಿ ಸ್ವಾಮಿಯ ನೆನಯದೆ ಜನುಮವೇನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭಾವಭಕ್ತಿಗೊಲಿವ ತಾಂ ಶ್ರೀಹರಿ ಕಾವ ಕರುಣದಲಿ ಪರೋಪರಿ ಧ್ರುವ ಕಂದ ಪ್ರಹ್ಲಾದನ ಸದ್ಭಾವಕಾಗಿ ಸಂಧಿಸೊದಗಿ ಬಂದ ನರಸಿಂಹನಾಗಿ ತಂದೆ ತಾಯಿ ಬಂಧು ಸಮಸ್ತವಾಗಿ ಬಂದು ರಕ್ಷಿಸಿದ ಪ್ರತ್ಯಕ್ಷವಾಗಿ 1 ಭಾವದಿಂದ ದ್ರೌಪದಿಗಾಗ್ಯಧ್ಯಕ್ಷ ಠಾವಠಾವಿಲಿ ಕಾಯಿದೆ ಪ್ರತ್ಯಕ್ಷ ಭುವನದೊಳಾಗಿ ಪಾಂಡವಪಕ್ಷ ಜೀವ ಪ್ರಾಣಾಗಿ ಮಾಡಿದ ಸಂರಕ್ಷ 2 ಭಾವದಿಂದಾಗುವ ಭಕ್ತರಾಧೀನ ದೇವೋತ್ತಮದ ಬಿಟ್ಟು ಹಿರಿಯತನ ದಾವದೊಂದೇಕಾಗಿ ತಾಂ ಸಾವಧಾನ ಈವ್ಹಾಭಕ್ತರ ಮನಿಲ್ಯನುದಿನ 3 ಭಾವದಿಂದುದಿಸುವ ಸ್ವಯಂಭಾನು ಭಾವಿಕರಿಗಾಗುವ ಶ್ರಯಧೇನು ಭಾವದಿಂದಾಗುವ ಸಫಲ ತಾನು ಭಾವದಿಂದ ಭಾವ ಪೂರಿಸಿದನು 4 ಭಾವವೆಂಬಂಜನ ಕಣ್ಣಿಲೂಡಿ ಭಾವದಲುಂಬುದನು ಒಡಮೂಡಿ ಭಾವದಿಂದ ಮಹಿಪತಿ ಕೈಯಗೂಡಿ ಜೀವ ಪಾವನ್ನಗೈಸÀುತಿಹ್ಯ ನೋಡಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಾವಯ ಭವಭಾವಿತ ಚರಣಂ ಭವಭಯಾಪರಿಹರಣಂ ಪ ಭಾವದಂ ಹೃದಿ ಅ.ಪ ವ್ಯಾಘ್ರಭೂಮಿಧರಾಗ್ರ ವಿಹರಣ ಮಗ್ರಜನಶರಣ್ಯಂ ಶೀಘ್ರಫಲದಮುದಗ್ರಪೌರುಷ ವಿಗ್ರಹಂ ಸುರಾಗ್ರಗಣ್ಯಂ 1 ಕುಂಡಲೀ ಫಣ ಮಂಡಲಾಶೃತ ಮಂಡಜಾತಗಮನಂ ಹಿಮಕರ ಮಂಡಲ ವದನಂ2 ರಾಮಮಿನಕುಲ ಸೋಮಮಾಶ್ರಿತ ಪ್ರೇಮಮಾಂಜಿಭೀಮಂ ಶ್ಯಾಮಜಲಧರ ಕೋಮಲಂ ಗುಣ ಧಾಮಮೀಸ ಪ್ರೇಮನಾಮಂ 3 ನಂದನಂದನ ಮಿಂದಿರಾ ಹೃದಳಿಂದ ಲೋಲ ಮಿಳಿಂದಂ ಕುಂದರದನ ಮಮಂದ ಕರುಣಾನಂದಿತಾ ಶಿಲಲೋಕವೃಂದಂ 4 ಸಾರನಿಗಮವಿಹಾರ ಕುಶಲಮುದಾರ ವರದ ವಿಠಲಂ ಭೂರಮಾಕುಚಕೊರ ಕಾಂಚಿತ ಚಾರುಮುಕ್ತಹಾರ ಪಟಿಲಂ 5
--------------
ಸರಗೂರು ವೆಂಕಟವರದಾರ್ಯರು
ಭಾವಯೆ ಭವಭಾವಿತಚರಣಂ ಭವಭಯಾಪರಿಹರಣಂ ಪ ಕೋವಿದಂ ನಿಜ ಭಾವದಂ ಹೃದಿಅ.ಪ ವ್ಯಾಘ್ರಭೂಮಿಧರಾಗ್ರವಿಹರಣಮಗ್ರಜನ ಶರಣ್ಯಂ ಶೀಘ್ರ ಫಲದಮುದಗ್ರಪೌರುಷವಿಗ್ರಹಂ ಸುರಾಗ್ರಗಣ್ಯಂ1 ಕುಂಡಲೀಫಣಮಂಡಲಾಕೃತಮಂಡಜಾತಗಮನಂ ಹಿಮಕರಮಂಡಲವದನಂ 2 ರಾಮಮಿನಕುಲಸೋಮಮಾಶ್ರಿತ ಪ್ರೇಮಮಾಜಿಭೀಮಂ ಶ್ಯಾಮಜಲಧರಕೋಮಲಂಗುಣಧಾಮಮೀಶಪ್ರೇಮನಾಮಂ3 ನಂದನಂದನಮಿಂದಿರಾ ಹೃದಳಿಂದ ಲೋಲಮಿಳಿಂದಂ ಕುಂದರದನಮಮಂದಕರುಣಾನಂದಿತಾಖಿಲಲೋಕವೃಂದಂ4 ಸಾರನಿಗಮವಿಹಾರ ಕುಶಲಮುದಾರ ವರದವಿಠಲಂ ಭೂರಮಾಕುಚಕೋರಕಾಂಚಿತ ಚಾರುಮುಕ್ತಾಹಾರ ಪಟಲಂ 5
--------------
ವೆಂಕಟವರದಾರ್ಯರು
ಭಾವವಿಲ್ಲದ ಬಯಲ ಭಜನೆಗೆ | ದೇವನೆಂದಿಗು ವಲಿಯನು | ಈ ವಿಷಯ ಫಲದಾಸೆ ಮನದೊಳು | ಭಾವಿಸುತ ವೃತ ತಪಗಳ್ಯಾತಕೆ ಪ ಮೀನು ನೀರೊಳಗಿದ್ದರೇನೈ | ಧ್ಯಾನವನು ಬಕ ಮಾಡಲು | ಮೌನದಲಿ ಕೋಗಿಲೆಯು ಇದ್ದರ | ದೇನು ವನವಾಶ್ರಯಿಸಿ ಮರ್ಕಟ 1 ಉರಗ ಪವನಾಹಾರ ಭಸ್ಮವ | ಖರ ವಿಲೇಪನ ಮಾಡಲು | ತರು ದಿಗಂಬರವಾಗಿ ಮಂಡುಕ | ಕೊರಳೊಳಕ್ಷರ ಜಪಿಸಲೇನದು 2 ಮೂಷಕ ಗುಹ್ಯಲಿರಲೇ | ನರಿತು ಗಿಳಿ ಮಾತಾಡಲು | ಗುರು ಮಹಿಪತಿ ಬೋಧವಾಲಿಸಿ | ಹರಿಯ ಭಾವದಿ ನಂಬಿ ಸುಖಿಸಿರೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭಾವೀ ಸಮೀರ ಶ್ರೀವಾದಿರಾಜರು ಕಾಯ ಕಾಯ ಬೇಕಯ್ಯ ಪ ಕಾಯ ಬೇಕೈ | ವಿಪ ಅಹಿಪ ಸುರಪಾದಿ ವಂದ್ಯವೆ |ವಿಪುಲ ಪಾಪಾಳಿಗಳ ಹರಿಸೀ | ಸುಪಥ ಸದ್ಗತಿಗೆನ್ನ ಒಯ್ದು ಅ.ಪ. ಗೌರಿದೇವಿಯ ಉದರಸಂಭವನೆ | ಹಯಾಸ್ಯನಂಘ್ರಿಸರಸಿರುಹದಲಿ ಮಧುಪ ನೆನಿಸಿದನೆ ||ದ್ವಾರಕಾದಿ ಕ್ಷೇತ್ರ ಚರಿಸುತ | ಥೋರ ಹಿಮಗಿರಿ ಸೇತುಯಾತ್ರೆಯಸಾರಿ ಸತ್ತೀರ್ಥ ಪ್ರಬಂಧವ | ಧೀರ ನೀ ರಚಿಸುತ್ತ ಮೆರೆದೆಯೊ 1 ಲಕ್ಷಿಸುತ್ತಲಿ ಮಾತೆ ಬಿನ್ನಪವ | ಮಹ ಭಾರತಸ್ಥಲಕ್ಷಪದ ಬಹು ಕ್ಲಿಷ್ಟವೆನಿಸೂವ ||ಲಕ್ಷಣದಿ ಸದ್ಯುಕ್ತ ಪದಗಳ | ಈಕ್ಷಿಸುತ ಅವಕರ್ಥ ಪೇಳುತಲಕ್ಷಸದ್ದಾಭರಣ ಮಾಲಿಕೆ | ಲಕ್ಷ್ಮಿಪತಿ ಹಯಾಸ್ಯಗರ್ಪಿತ 2 ಸೇವಿಸುತ್ತಿಹ ವಿಪ್ರನಾದವನ | ಕೌಟಿಲ್ಯ ಕಂಡುತೀವ್ರದಿಂದಲಿ ಶಾಪವಿತ್ತವನ ||ಭಾವ ತಿಳಿದು ಬೊಮ್ಮರಾಕ್ಷಸ | ಭಾವತಾಳೆಂದೆನುತ ಪೇಳಲುತೀವ್ರ ಯಾಚಿಸೆ ಕ್ಷಮೆಯ ಮಂತ್ರವ | ಆವ ಆಕಾಮ್ಮೈವ ನೊರೆದೆ 3 ಮರಳಿ ಉತ್ತರ ಯಾತ್ರೆಯಲ್ಲಿರಲು | ಗುರು ವಾದಿರಾಜರಅರಿಯದಲೆ ತನ್ಮಂತ್ರ ಪೇಳಲು ||ಒರೆದರೂ ರಂಡೇಯ ಮಗ ನೀ | ನಿರುತಿರುವೆನ ಸ್ನಾತ ಕಾರ್ತಿಕಮರಳಿ ಮಾಘಾಷಾಢ ವಿಶಿಖದಿ | ಹರಿಯಿತೂ ನಿನ ಶಾಪವೆಂದರು 4 ಆತುಗುರುಪದ ಕ್ಷಮೆಯ ಪ್ರಾರ್ಥಿಸಲು | ಗುರುರಾಜರಾಗಭೂತ ರಾಜನು ನೀನೆ ಎನ್ನುತಲು ||ಖ್ಯಾತಿ ಪೊಂದುತ ಭಾವಿರುದ್ರನೆ | ಪೊತ್ತು ಎನ್ನಯ ಮೇನೆ ಮುಂಗಡೆಕೌತುಕವ ತೋರುತ್ತ ಮೆರೆವುದು | ಪೋತ ಭಾವದಿ ತಮಗೆ ಎಂದರು 5 ಕಾಕು ಶೈವನ ಖಂಡಿಸುತ್ತಲಿಆಕೆವಾಳರ ಪೊರೆದು ದಶಮತಿ | ತೋಕನೆಂದೆನಿಸುತ್ತ ಮೆರೆದೇ 6 ಭೂವಲಯದೊಳು ಕಾರ್ಯ ಪೂರೈಸಿ | ಬದರಿಯಿಂದಲಿಭಾವಿ ಶಿವನಿಂ ಪ್ರತಿಮೆ ರಥತರಿಸೀ ||ದೇವ ಗೃಹ ಸಹ ವಿರುವ ವಿಗ್ರಹ | ತ್ರೈವಿಕ್ರಮನ ಸಂಸ್ಥಾಪಿಸುತ್ತಭಾವ ಭಕ್ತಿಯಲಿಂದ ಉತ್ಸವ | ತೀವರದಿ ರಚಿಸುತ್ತ ಮೆರೆದೆ 7 ಹಂಚಿಕಿಂದಲಿ ಪೂರ್ವರಚಿತೆನ್ನ | ವೃಂದಾವನಂಗಳುಪಂಚ ಸಂಖ್ಯೆಯಲಿಂದ ಮೆರೆವನ್ನೆ ||ಮುಂಚೆಯೇ ಸ್ಥಾಪಿತವು ಎನ್ನುವ | ಪಂಚರೂಪೀ ವ್ಯಾಸ ಸಮ್ಮುಖಸಂಚುಗೊಳಿಸೀ ಸ್ಥಾಪಿಸುತ್ತ | ಕೊಂಚವಲ್ಲದ ಕಾರ್ಯ ರಚಿಸಿದೆ 8 ಯುಕ್ತಿಮಲ್ಲಿಕೆ ರುಕ್ಮೀಣೀಶ ಜಯ | ಗುರ್ವರ್ಥ ದೀಪಿಕೆಮತ್ತೆ ಪರಿಪರಿ ಶಾಸ್ತ್ರ ಗ್ರಂಥಗಳ ||ವಿಸ್ತರಿಸಿ ಭುವನದಲಿ ಮೆರೆದೆ | ಉತ್ತಮೋತ್ತಮ ದೇವ ದೇವನುಕರ್ತೃ ಶ್ರೀಹಯ ಮುಖನು ಎನ್ನುತ | ವತ್ತಿ ಪೇಳುತ ವ್ಯಾಪ್ತಿಸಾರಿದೆ 9 ಶಿಷ್ಟ ಜನ ಸಂಸೇವ್ಯ ಧೀವರನೆ | ಶಮದಮಾನ್ವಿತಕಷ್ಟಹರ ಕಾರುಣ್ಯ ಸಾಗರನೇ ||ಕುಷ್ಟ ಅಪಸ್ಮಾರ ರೋಗದ | ಅಟ್ಟುಳಿಯ ಕಳೆಯುತ್ತ ಮೃತ್ತಿಕೆಸುಷ್ಠುಸೇವನೆಯಿಂದ ಭಕ್ತರ | ಇಷ್ಟವನೆ ಸಲಿಸುತ್ತ ಮೆರೆವೆ 10 ಹಯಾಸ್ಯ ವಾಹನ | ಬಿಡದೆ ಏರುತ ಸಾರ್ದೆ ಹರಿಯನು 11
--------------
ಗುರುಗೋವಿಂದವಿಠಲರು
ಭಾಸ್ಕರ ಗುರುವಿನ ಭಾಸನುದಿನವಿರೆ ಆಶಿನ್ನೊಬ್ಬರದ್ಯಾಕೆ ಲೇಸಾಗಿಹ್ಯ ಘನದಯದಾಸೈನಗಿರೆ ನಾಸ್ತ್ಯೆನಗೆಂಬುವದ್ಯಾಕೆ ಧ್ರುವ ಸೂಸುತ ನಿಜ ನಿಧಾನದ ರಾಶಿರೆ ಕಾಸಿನ ಕಳವಳಿಕ್ಯಾಕೆ ವಾಸವಾಗ್ಹೆಜ್ಜೆಜ್ಜಿಗೆ ಗುರುವಿನ ಆಶ್ರಿನ್ನೊಬ್ಬರದ್ಯಾಕೆ ಗ್ರಾಸಕೆದುರಿಡುತಿರೆ ಎನ್ನೊಡೆಯ ಸೋಸಿಲೆ ಬಯಸುವದ್ಯಾಕೆ 1 ಗುರುದೈವೇ ಗುರುತಾಗಿರಲು ತಾ ಪರದೈವಗಳಿನ್ಯಾಕೆ ಶಿಖಾಮಣಿ ಇರಲು ಶರಣು ಇನ್ನೊಬ್ಬರಿಗ್ಯಾಕೆ ಕರುಣಾಮೃತ ಸುರರಸ ಮಳೆಗರೆವುತಲಿರೆ ಪರರಂಡಲೆವದ್ಯಾಕೆ ಇರುಳ್ಹಗಲೆ ಗುರುದಯ ಕವಚೆನಗಿರೆ ದುರಿತಭವ ಭಯವ್ಯಾಕೆ 2 ಇಹ್ಯಪರಕೆ ಗುರು ನಾಮವೆನಗಿರಲು ಸಾಹ್ಯಮನುಜರದ್ಯಾಕೆ ಸಹಕಾರವೆ ಸದ್ಗುರು ಮೂರ್ತಿರಲು ಸಾಯಾಸವೆನಗ್ಯಾಕೆ ಮಹಿಪತಿಸ್ವಾಮಿ ಶ್ರೀಪತಿ ಸಮರ್ಥಿರೆ ದುರ್ಮತಿಗಳ ಹಂಗ್ಯಾಕೆ ಸಹಿತ ಗುರು ತಾಯಿತಂದೆನಗಿರೆ ಬಾಹ್ಯವಿಹಿತದವನ್ಯಾಕೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಾಸ್ಕರಗುರುದಯ ಭಾಸುತದೆ ವಿಜಯ ಧ್ರುವ ಕಂಗಳಿಗೆದುರಿಟ್ಟಾನಂದ ಮಂಗಳಕರದೋರುತಲ್ಯದೆ ಚೆಂದ ಸಂಗ ತೋರಿತು ನಿಜವಂದ ಹಿಂಗಿಸಿ ಭವಬಂಧ 1 ಮನಸಿಗೆ ತೋರಿತು ಊರ್ಜಿತ ನೆನೆವಿಗೆ ಕೈಗೊಟ್ಟಿತು ಆಯತ ಜನವನದೊಳುಗುದಿತಾ ಘನವೆ ಸಾಕ್ಷಾತ 2 ಸೋಹ್ಯದೋರಿ ಸಮರಸ ಸಾಹ್ಯಮಾಡಿದ ಸರ್ವೇಶಮಹಿಪತಿಗಿದೆ ಸಂತೋಷ ಇಹಪರ ಉಲ್ಲಾಸ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಿಕ್ಷವ್ಯಾತಕ್ಕೊ ಫಾಲಾಕ್ಷ ನಿನಗೆ ಪ ಲಕ್ಷುಮೀಪತಿಯಂಥ ಸಖನಿದ್ದ ಬಳಿಕ ಅ.ಪ. ರಜತಾದ್ರಿ ಅರಮನೆಯು ಹೇಮನಿಗಿಯೇ ಧನುವುಗಜಗಮನ ಸುರನಿಕರ ಪರಿವಾರವು |ಭುಜಗೇಂದ್ರ ಭೂಷಣ ನಿಜರಾಣಿ ಅನ್ನಪೂರ್ಣೇಗಜಮುಖನು ಕುಮಾರ ಗಂಡುಮಕ್ಕಳು ಇರಲು 1 ಬೇಡುವುದ ಬಿಟ್ಟು ನಿನ್ನೆತ್ತು ಯಮನಿಗೆ ಕೊಟ್ಟುಮಾಡಬಾರದೆ ಮುಯ್ಯ ಅವನ ಕೋಣ |ಜೋಡು ಮಾಡಿಕೊಂಡು ಬಾತಿ ಮುಟ್ಟು ತ್ರಿಶೂಲಬೇಡಿದ್ದು ಬೆಳೆಯದೆ ಬರಿದೆ ಧಾವತಿಗೊಂಬಿ 2 ರೊಕ್ಕ ರೂಪಾಯಿಗಳು ಬೇಕೆಂಬಿಯ ಸಾಲತಕ್ಕೊಬಾರದೆ ಗೆಳೆಯ ಧನಪನಲ್ಲಿ |ಶುಕ್ರ ಒಕ್ಕಣ್ಣ ಮೋಹನ ವಿಠಲ ಇಕ್ಕಣ್ಣಮುಕ್ಕಣ್ಣ ನೀನಾಗಿ ಮುಂಜಿ ಮಂತ್ರವ ಪಿಡಿದಿ 3
--------------
ಮೋಹನದಾಸರು
ಭಿಕ್ಷಾ ಭಿಕ್ಷಾ ಎಂದು ಅಮ್ಮ ನಿಮ್ಮನೆಗೊಬ್ಬ ಬಂದಿಹನೇನೆ ಎನಗಾಕ್ಷಣ ಹೇಳವ್ವ ನೀನೆ ಪ ನಿತ್ಯ ನಿರ್ಲೇಪ ಶೂಲದ ಸುಪ್ರತಾಪ ಮೂರುಕಣ್ಣೊಳಗೊಂದು ಕಿಡಿ ಸೂಸುತಿದೆ ಉರಿತಾಪ 1 ಕೆಂಜೆಡೆಗಟ್ಟಿದ ಮಂಜುಳವದನದಿ ರಂಜಿಸುತಿಹಕಪ್ಪುಕೊರಳು ನಿರಂಜನ ನವಪ್ರಚಂಡ ಮುಖದವ ಜಂಜಡವಿಲ್ಲೊಬ್ಬ ನುಳಿದವ ರಂಜಿಸುತಿಹಮೃಗಧರನವ 2 ತಾನಾಗಿಯೆ ತಾನು ನಲಿವಾತ ಗಣಂಗಳೊಡನೆ ಕುಣಿವಾತ 3 ಧರಿಸಿಹ ರುದ್ರಾಕ್ಷಿಮಾಲೆ ಕಿವಿಯೊಳಗೊಪ್ಪುವ ಜೋಲೆ ಪರಿಯಲಿ ತನಗೊಂದು ಲೀಲೆ ಬರುವನು ಎತ್ತಿನ ಮೇಲೆ 4 ನಿಶ್ಚಯವನು ಮಾಡಿ ಎನ್ನಪರಸಿಕೊಂಡೆ ಮಂದಿರವನು ಪೊಕ್ಕನೋಡಿ ಪೋದನು ಮಾರ್ಗಕೊಡಿ 5
--------------
ಕವಿ ಪರಮದೇವದಾಸರು
ಭಿಕ್ಷಾವ ನೀಡ್ವುದು ತಾಕ್ರ್ಯನ ಮಾತೇ | ಹರಿ ಭಕುತಿ ಎಂಬಭಿಕ್ಷಾವ ನೀಡ್ವುದು ತಾಕ್ರ್ಯನ ಮಾತೇ ಪ ತ್ರ್ಯಕ್ಷಸು ಸನ್ನುತೆ | ಮೋಕ್ಷದ ಶ್ರೀಹರಿಶಿಕ್ಷಿಸುಭಕುತಿಯ | ಪಕ್ಷಿಯ ಮಾತೇ ಅ.ಪ. ಪತಿ ಸಿರಿ | ವಸುದೇವ ಸುತನನಯಶವ ನುಡಿ ಪದ | ಬಿಸಜದಿ ಭಕುತಿಯ 1 ಮೂರ್ತಿ | ಕೇಳ್ವುದು ಶರಣಾರ್ತಿಮಾನಾಭಿಮಾನ ನಿನ್ನದು ಗಾಯತ್ರಿ | ನರಹರಿ ಗುರು ಭಕ್ತಿ ||ಕ್ಷೋಣಿಯೊಳಗೆ ಸ | ತ್ತ್ರಾಣಿ ಭಾರತಿಯೆಮಾಣದೆನಗೆ ಜಗ | ತ್ರಾಣನ ಭಕುತಿಯ 2 ಸತಿ ಕಾಳೀ||ಸಾರತ ಮನು ಗುರು | ಗೋವಿಂದ ವಿಠಲನಚಾರು ಚರಣ ಸ | ದ್ಭಕುತಿಯು ಎಂಬ 3
--------------
ಗುರುಗೋವಿಂದವಿಠಲರು
ಭಿಡೆ ಇನ್ನ್ಯಾತಕೆ ಹೊಡಿ ಹೊಡಿ ಡಂಗುರ ಪೊಡವಿ ತ್ರಯದಿ ಹರಿ ಅಧಿಕೆಂದು ಪ ಅಡಿಯ ದಾಸರ ಕರದ್ಹಿಡಿದು ಬಿಡದೆ ಬಲು ಸಡಗರದಾಳುವ ನಿಜಧಣಿಯೆಂದು ಅ.ಪ ನಂದಕಂದ ಗೋವಿಂದ ಮುಕ್ಕುಂದ ಭಕ್ತ ಬಂಧು ಎಂದು ಕೈತಾಳವಿಕ್ಕುತ ತಂದೆ ತನ್ನ ಪಾದನ್ಹೊಂದಿ ಭಜಿಪರ ಬಂಧ ಛಿಂದಿಪ ಪರದೈವವೆಂದು ನಲಿಯುತ 1 ಸ್ಮರಿಪ ಜನರ ಮಹದುರಿತಪರ್ವತವ ತರಿದು ಪೊರೆವ ಸಿರಿದೊರೆಯೆಂದೊದರುತ ನೆರಳುಯೆಂದು ಮೈಮರೆದು ಕೂಗುತ 2 ಶರಣಾಗತರ ತನ್ನ ಹರಣದಂತೆ ಕಾಯ್ವ ಕರ ಮೇಲಕೆತ್ತಿ ಮರೆಯ ಬಿದ್ದವರ ಪರಮ ಬಡತನವ ಭರದಿ ಕಳೆದನೆಂದು ಒರೆದು ಸಾರುತ 3 ಸಾಗರಶಾಯಿ ತನ್ನ ಬಾಗಿ ಬೇಡುವರ ಬೇಗ ಕ್ಷೇಮನೀಯ್ವ ಭಾಗ್ಯದರಸನೆಂದು ನೀಗದ ಕಷ್ಟದಿ ಕೂಗಲು ತಡೆಯದೆ ಸಾಗಿ ಬರುವ ಭವರೋಗವೈದ್ಯನೆಂದು 4 ಅಚ್ಯುತಗಿಂ ಭಕ್ತರಿಚ್ಛೆ ಪೂರೈಸಲು ಹೆಚ್ಚಿನವಿರಲ್ಲೆಂದು ಬಿಚ್ಚಿ ಹೇಳುತ ಇಚ್ಛಜಪಿತ ಮಹಸಚ್ಚಿದಾನಂದ ಸರ್ವಕ್ಹೆಚ್ಚು ಹೆಚ್ಚು ಶ್ರೀರಾಮನೆ ಎನ್ನುತ 5
--------------
ರಾಮದಾಸರು
ಭೀಮ ಲಾಲಿ ಭಾರತ ಕುಲಾಂಬುಧಿ ಸೋಮ ಗುಣನೆ ಲಾಲಿ ಪ ಲಾಲಿ ಯಾದವ ಪದಾಂಭೋಜ ಮಧುಕರನೆಲಾಲಿ ಮುನಿವರತನಯ ಸುತನ ಗೆಲಿದವನೆಲಾಲಿ ಕರೆವೆನು ಬಾರೋ ಮಧ್ವ ಮುನಿವರನೆ ಲಾಲಿ ಅ.ಪ. ಲಾಲಿ ಕಾಲ್ಗಡಲರುಳಿ ಕುಣಿತ ನಿಜಚರಣಾಲಾಲಿ ಮಧ್ಯದೊಳುಟ್ಟ ಕನಕಮಯ ವಸನಾಲಾಲಿ ಕೊರಳೊಳಗಿಟ್ಟ ಹಾರಗಳ ಸದನಾಲಾಲಿ ಕಿವಿಯೊಳು ಹೇಮಕುಂಡಲಾಭರಣಾ ಲಾಲಿ 1 ಲಾಲಿ ಕರಯುಗ ಶೋಭಿತ ಕಂಕಣಾಭರಣಾಲಾಲಿ ಲೋಕವ ಮೋಹಿಸುವ ಮಂದಹಾಸನಾಲಾಲಿ ತರುಣಿರೂಪ ಶೃಂಗಾರ ಸದನಾಲಾಲಿ ತಾಂಬೂಲರಸಭಾಸ ನಿಜವದನಾ ಲಾಲಿ 2 ಲಾಲಿ ನರ್ತನಾ ಕೃತಾಲಯ ಚರಣಗಮನಾಲಾಲಿ ನಿಜ ಕಾಮಿನಿ ಸಂಕಟ ಹರಣಾಲಾಲಿ ಕೀಚಕಲಾಲಿ ಇಂದಿರೇಶ ಮಾಧವನ ತೋರಿದನ ಲಾಲಿ 3
--------------
ಇಂದಿರೇಶರು