ಒಟ್ಟು 18204 ಕಡೆಗಳಲ್ಲಿ , 138 ದಾಸರು , 7712 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂಗಳಾರತಿ ಎತ್ತಿರೆಲ್ಲ ಮಹಾತ್ಮರೆಲ್ಲ ಮಂಗಳಾರತಿ ಎತ್ತಿರೆಲ್ಲಮಂಗಳರೂಪಗೆ ಮಂಗಳ ಮಹಿಮಗೆ ಮಂಗಳಕರಗೆ ಮಂಗಳಪ್ರದಗೆ ಪ ಘೃತ ನೀಡಿಮುದದಿಂ ಚಿಜ್ಯೋತಿಯನೆ ಮುಟ್ಟಿಸಿಸದಮಲ ಸರ್ವ ಬ್ರಹ್ಮವೆ ಎಂದು 1 ತುಂಬಿ ಉಳಿವು ಇನ್ನು ಎಂಬೆಬಲುಪ್ರಭೆ ತಿಳಿಯೆ ಥಳಥಳ ಹೊಳೆಯೆ ತೊಳಗಿ ತೊಳಗಿ ಬೆಳಗಿ ಬೆಳಗಿ 2 ನಾನಾ ವರ್ಣವೆ ಪೊಳೆಯಲು ಅತ್ತಲಿತ್ತಲುನಾನಾ ವರ್ಣವ ತಾಳುತ್ತ ಎತ್ತಾಲೆತ್ತಲುತಾನು ಚಿದಾನಂದ ಗುರು ಬೇರಾಗದೆತಾನೆ ತಾನೆಯಾಗಿ3
--------------
ಚಿದಾನಂದ ಅವಧೂತರು
ಮಂಗಳಾರತಿ ಎತ್ತುವೆ ಮಾರಮಣಗೆ ಪ ಅಂಗಜ ಜನಕ ಶುಭಾಂಗ ಶ್ರೀರಂಗಗೆ ಅ.ಪ ವೈರಾಜ್ಯ ಸ್ಯಾರಾಜ್ಯ ಮಹ ಪರಮೇಷ್ಠಿ ರಾಜ್ಯ ಸಾರ್ವಭೌಮ ನೀನೆಂದು 1 ವೇದೋಕ್ತ ಮಂತ್ರ ಪುಷ್ಪಾಂಜಲಿಯಿಂದ ನಿನ್ನಯ ಪಾದಕ್ಕೆರಗಿ ಪುನಃ ಪ್ರಾರ್ಥನೆಗೆಯ್ಯುತ 2 ಪಾಪಿಗಳೊಳಗತಿ ಪಾಪಿಯು ನಾನೆನ್ನ ತಾಪತ್ರಯವ ಬಿಡಿಸಿ ಕಾಪಾಡು ನೀನೆಂದು 3 ಪದಜಾನುಕರಗಳಿಂ ಉದರ ಹೃದಯದಿ ಶಿ- ರದಿ ದೃಷ್ಟ್ಯಮನಸವಚನಸಾಷ್ಟಾಂಗದಿಂ ಮಣಿದು 4 ಕಂದರ್ಪ ಕೋಟಿ ಲಾವಣ್ಯ ಸರ್ಪಶಯನ ನಮ್ಮಪ್ಪಾ ತಿಮ್ಮಪ್ಪನೆಂದು 5 ವಾಹನ ವಸ್ತೂಗಳರ್ಪಿಸಿ ಸರ್ವೋತ್ತಮ ನೀನೆಂದ್ಹೊಗಳಿ 6 ಅಪರಾಧವೆಮ್ಮಿಂದಲಾಗುವುದೆಲ್ಲ ಕ್ಷಮಿಸು ಕಪಟನಾಟಕ ಸೂತ್ರಧಾರೀ ಗುರುರಾಮವಿಠಲ 7
--------------
ಗುರುರಾಮವಿಠಲ
ಮಂಗಳಾರತಿ ನಮ್ಮ ರಂಗನಾಥನಿಗೆ ಜಂಗಮಾರ್ಚಿತಪಾದ ಕಲುಷವಿಭಂಗರಂಗನಿಗೆ ಪ ಜಾಜಿಯ ಪುಷ್ಪಂಗಳಂ ದಿವ್ಯ ಸ ಭಾಜ ಭಜಂತ್ರಿಗಳಿಂ ಮೂಜಗದೊಯನೆ ಮುಕ್ತಿಕೃಪಾಕರ ಶ್ರೀಜಯವೆನ್ನುತಲಿ 1 ವಾರುಧಿ ಶಯನನಿಗೆ ದಿವ್ಯ ಸು ಚಾರುಸನಯನಗೆ ನಮ್ಮ ನಾರಿಯರೆಲ್ಲರು ನಮಿಸುವ ಲಕ್ಷ್ಮೀ ನಾರಾಯಣನಿಗೆ 2 ರಾಧಾರುಕ್ಮಿಣಿ ಜಯಪತಿಗೆ ಸಂತೆ ಸರಗೂರೊಳಗಿಹ ನಮ್ಮಯ ಶ್ರೀ ಗುರು ತುಳಸೀರಾಮನಿಗೆ 3
--------------
ಚನ್ನಪಟ್ಟಣದ ಅಹೋಬಲದಾಸರು
ಮಂಗಳಾರತಿ ಮಾಡಿ ಭಾವದಿಂದ ಮಂಗಳ ಮಹಿಮನಾದ ದೇವಾದಿ ಶ್ರೀದೇವಗೆ ಧ್ರುವ ನೋಡಿರೋ ಬ್ರಹ್ಮಾನಂದ 1 ಕಂಗಳದೆರೆದು ನೋಡಿ ಮಂಗಳಾರತಿ ಪಾಡಿ 2 ಆರ್ತ ಭಾವದಾರತಿ ಅರ್ತು ಮಾಡಿ ನಿತ್ಯಪ್ರತಿ 3 ಸೇವೆ ಇದೆ ಬಲು ಸುಖ ಪಾವನೆಗೈಸುವ ಕೌತುಕ 4 ದೀನ ಮಹಿಪತಿ ಸ್ವಾಮಿ ಭಾನುಕೋಟಿ ತೇಜಗಿನ್ನು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಂಗಳಾರತಿ ಮಾಡಿ ಮಂಗಳ ಮಹಿಮಾನಂಗಜನಕ ಹರಿ ತುಂಗವಿಕ್ರಮಗೆ ಮಂಗಳಾರತಿಯ ಧ್ರುವ ಅಗಣಿತಗುಣ ಅಗಮ್ಯಗೋಚರ ಸುಗಮದಲಾಡುವ ನಿಗಮೋದ್ಧಾರಗೆ 1 ಬಗೆದು ಬೆನ್ನಿಲಿ ಭಾರವ ನೆಗೆದಿಹ ನೋಡಿ ಭಗತವತ್ಸಲ ಸ್ವಾಮಿ ನಗಧರಗೆ 2 ಜಗತಿಯ ಕದ್ದೊಯ್ದ ಸುರನ ಸೀಳಿದ ಜಗದೋತ್ತಮನಾದ ಜಗದೋದ್ಧಾರಗೆ 3 ದುರುಳದೈತ್ಯನ ಬೆರಳುಗುರಿಲಿ ಸೀಳಿದ ತರಳ ಪ್ರಹ್ಲಾದಗೊಲಿದ ನರಹರಿಗೆ 4 ಬಲಿಯ ದಾನವ ಬೇಡಿ ನೆಲೆಗೆ ಅಳೆದುಕೊಂಡು ಬಲಿಯ ಬಾಗಿಲ ಕಾಯ್ದ ಶ್ರೀನಿಧಿಗೆ 5 ಪರಶುಪಿಡಿದು ಕ್ಷತ್ರಿಯರ ಸಂಹರಿಸಿದ ಪರಮಪುರುಷನಾಗಿಹ ತಪೋನಿಧಿಗೆ 6 ದೇವತಿಗಳ ಸೆರೆಯ ಬಿಡಿಸಿದ ದೇವನು ಪಾವನಮೂರುತಿ ಅಹಲ್ಯೋದ್ದಾರಗೆ 7 iÀುದುಕುಲತಿಲಕ ವಿದುರವಂದಿತನಾದ ಬುಧಜನಪಾಲ ಮದನಮೋಹನಗೆ 8 ಸುಳಿದು ತ್ರಿಪುರದಲಿ ಹಳಿದು ನಾರೆರ ವ್ರತ ಹೊಳೆವದೋರಿದ ಚಲುವಿಲಿ ಮಹಾಮುನಿಗೆ 9 ಮುದ್ದು ತೇಜಯನೇರಿ ತಿದ್ದಿ ರಾವುತನಾದ ಮಧ್ವಾಂತ್ರದ ಮಹಿಪತಿ ಪ್ರಾಣಪತಿಗೆ 10
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಂಗಳಾರತಿ ಮಾಡಿರೇ ಶೃಂಗಾರದ ಸಿರಿಗೇ ಪ ಮಂಗಳ ಮುಖಪದದಿಂದ ಪಾಡುತಲೆಪೊಂಗೊಳಲೂದುವನಂಗ ಜನಕಗೇ ಅ.ಪ. ವೈರಿ ಭೃಂಗ ಕೂಪ ಜಂಗುಳೇಂದ್ರಯದೋಪಾಂಗ ವೇದ ಮದಗಂಗ ಜನಕ ವೃಜಭಂಗ ಮಾತುಳನ ಮುಂಗುರುಳ್ಹಿಡಿದೆಳೆದನು ಸಂಗರದೊಳಗೇ 1 ಮಣಿ ಕರ್ಣ ನಾಸಿಕ ಧರ ಉಪವಳ ಗೋಕುಲಧರಗಿಳಿಗೇ 2 ವಿನುತ ನಾರದ ಮುನಿನುತಗಂಧರ್ವರಪ್ಸರದಿಂದ ನರ್ತನಾದಿಂದ ಸಂಸ್ಕøತಮಂದ ಸುಗುಣಸಿಂಧು ಪಾಂಡವರ ಗೋ-ವಿಂದ ಸಚ್ಚಿದಾನಂದಮೂರ್ತಿ ಮುಚುಕುಂದ ವರದಗೇ 3
--------------
ಇಂದಿರೇಶರು
ಮಂಗಳಾರತಿಎತ್ತಿ ಮಾಮನೋಹರನಿಗೆ ಪ ಅಂಗನೆಯರೆಲ್ಲ ಬಂಗಾರದ ತಟ್ಟೆಯಲ್ಲಿ ಅ.ಪ ವೇದಚೋರನ ಕೊಂದು ಭೂಧರವನು ಪೊತ್ತು ಮೇದಿನಿಯನು ಎತ್ತಿ ಕಂಬದಿ ಬಂದವಗೇ 1 ಭೂಮಿದಾನವ ಕೇಳಿ ಭೂಮಿಪರನು ಸೀಳಿ ಭೂಮಿಜಾತೆಯನಾಳಿ ಭೂ ಭಾರವಳಿದವಗೆ 2 ಮುದ್ದುಕುದುರೆಯ ಏರಿದ ಗುರುರಾಮ ವಿಠಲಗೆ 3
--------------
ಗುರುರಾಮವಿಠಲ
ಮಂಗಳಾರತಿಯ ಪಾಡಿರೆ ಮಾನಿನಿಯರು ಪ ಅಂಧಕನನುಜನ ಕಂದನ ತಂದೆಯಕೊಂದನ ಶಿರದಲಿ ನಿಂದವನಚಂದದಿ ಪಡೆದವನ ನಂದನೆಯಳ ನಲವಿಂದ ಧರಿಸಿದ ಮುಕುಂದನಿಗೆ 1 ರಥವನಡರಿ ಸುರ ಪಥದಲಿ ತಿರುಗುವನಸುತನಿಗೆ ಶಾಪವನಿತ್ತವನಖತಿಯನು ತಡೆದನ ಸತಿಯ ಜನನಿ ಸುತನಸತಿಯರನಾಳಿದ ಚತುರನಿಗೆ 2 ಹರಿಯ ಮಗನ ಶಿರ ತರಿದನ ತಂದೆಯಹಿರಿಯ ಮಗನ ತಂದೆಯ ಪಿತನಭರದಿ ಭುಜಿಸಿದವನ ಶಿರದಲಿ ನಟಿಸಿದವರ ಕಾಗಿನೆಲೆಯಾದಿಕೇಶವಗೆ 3
--------------
ಕನಕದಾಸ
ಮಂಗಳಾರತಿಯ ಬೆಳಗೆ ಮಧುಸೂದನಗೆ ದಿವ್ಯ ಮಂಗಳಾರತಿಯ ಬೆಳಗೆ |ಪ|| ಮಂದರ ಕೃಷ್ಣ ಮಚ್ಛನಾಗಿ ವೇದವ ತಂದಿಟ್ಟು ಅಮೃತ ಬೀರಿದಂಥ ಹರಿಗೆ1 ಎತ್ತಿ ತಂದು ಹರವಿ ಕೃಷ್ಣ ಸುತ್ತಿ ಒಯ್ದ ಸುರುಳಿಭೂಮಿ ಸುತ್ತಿ ಒಯ್ದ ಸುರುಳಿ ಭೂಮಿ ಹೊಟ್ಟೆ ಬಗೆದು ಕರುಳ ತನ್ನ ಕುತ್ತಿಗ್ಯಲ್ಲಿ ಧರಿಸಿದಾತಗೆ 2 ಕೂಸಿನಂತೆ ಬಂದು ಬೆಳೆದಾಕಾಶವ್ಹಿಡಿಯದೆ ಕೃಷ್ಣ ಕೂಸಿನಂತೆ ಬಂದು ಬೆಳೆದ ನಾಶಮಾಡಿ ಕ್ಷತ್ರಿಯರ ಪರಶುರಾಮನೆನಿಸಿದಾತಗೆ 3 ಕುಂಭಕರ್ಣನಣ್ಣ(ನ) ಹತ್ತು ರುಂಡ ಹಾರಿಸಿ ಕೃಷ್ಣ ಕುಂಭಕರ್ಣನಣ್ಣ(ನ) ಚೆಂಡನಾಡುತಲಿ ಕಾಳಿಂಗನ್ಹೆಡೆಯ ತುಳಿದ ಹರಿಗೆ4 ಬಟ್ಟೆ ತೊರೆದು ಬೌದ್ಧನಾಗಿ ಹತ್ತಿ ಹಯವನೇರಿ ಕೃಷ್ಣ ಬಟ್ಟೆ ತೊರೆದು ಬೌದ್ಧನಾಗಿ ದುಷ್ಟಕಲಿಯ (ಕೊಂದ) ಭೀಮೇಶಕೃಷ್ಣನಂಗ ಪೂಜಿಸುತಲಿ5
--------------
ಹರಪನಹಳ್ಳಿಭೀಮವ್ವ
ಮಂಗಳಾರತಿಯ ಮಾಡಿರೊ ಶ್ರೀನಿವಾಸಗೆ ಪ. ಸಂಗಸುಖದ ಭಂಗವೆಲ್ಲ ಹಿಂಗಿತೆಂದು ಹೊಂಗಿ ಮನದಿ ಅ.ಪ. ಘಟ್ಟಿಹೃದಯ ತಟ್ಟೆಯಲ್ಲಿ ಕೆಟ್ಟ ವಿಷಯ ಬತ್ತಿ ಮಾಡಿ ಶ್ರೇಷ್ಠ ಜ್ಞಾನ ತೈಲವೆರೆದು ವಿಷ್ಣುನಾಮ ಬೆಂಕಿ ಉರಿಸಿ 1 ಶ್ರದ್ಧೆಯಿಂದ ಎತ್ತಿ ಮನದ ಬುದ್ಧಿಪ್ರಕಾಶಗಳು ತೋರಿ ಎದ್ದ ಕಾಮಕ್ರೋಧಗಳನು ಅದ್ದಿ ಪಾಪಗೆದ್ದು ಮನದಿ 2 ತತ್ತ್ವಪ್ರಕಾಶಗಳ ತೋರಿ ಚಿತ್ತಮಾಯಕತ್ತಲೆಯನು ಕಿತ್ತುಹಾಕಿ ಹರಿಯ ಮೂರ್ತಿ ಸ್ವಸ್ಥ ಚಿತ್ತದಿಂದ ನೋಡಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮಂಗಳಾರತಿಯು ನಮ್ಮ ಲಿಂಗವಿನುತಗೇ ನಮ್ಮ ಪ ಅಂಗನೆಯರೆಲ್ಲ ಕೂಡಿ ಅಚ್ಯುತಾಯೈ ನಮಃ ಎನ್ನಿ ಅ.ಪ ವೇದಕಾದಿಪ್ರಣವವೆಂದು ಬೋಧಿಸಿದನುಶಿವನುಉಮೆಗೆ ನಾದಬಿಂದುಕಳೆಯಗೂಡಿನ ನಾರಾಯಣನಿಗೆ ಮಂಗಳಂ 1 ಸುರರೂ ನರರೂ ಮುಖ್ಯಮಾದಾ ಗರುಡ ವಿಶ್ವಕ್ಸೇನರೆಲ್ಲ ಪರಮತತ್ವಮಹುದಿದೆಂದು ಯಿರುವೋತದ್ವಿಪಾದಗಳಿಗೆ2 ನಿರ್ವಿಕಲ್ಪ ನಿಶ್ಚಲಾತ್ಮ ಸರ್ವಲೋಕಸಾಕ್ಷಿಭೂತ ಗರ್ವಕಲನುಯೆಂಬೊ ನಾಮ ಉರ್ವಿಯೊಳಗೆ ವಹಿಸಿರುವಗೆ 3 ತತ್ವಗುರುವು ತುಲಶಿರಾಮ ಚಿತ್ಸುಖಾಂಶ ಶಿವಪ್ರಿಯನಿಗೆ 4
--------------
ಚನ್ನಪಟ್ಟಣದ ಅಹೋಬಲದಾಸರು
ಮಂಗಳಾರುತಿ ತಂದು ಬೆಳಗಿರೆ | ಅಂಗನೇಯರು ರಂಗಗೇ ||ಅ|| ತುಂಗ ಮಹಿಮ ಶುಭಾಂಗ ಕರುಣಾ | ಪಾಂಗ ಶ್ರೀನರಸಿಂಗಗೇ ಅ.ಪ. ಪ್ರಳಯ ಜಲಧಿಯೊಳಾಲದೆಲೆಯಲಿ | ಮಲಗಿ ಬೆರಳು ಸವಿದಗೇಶ್ರೀಲತಾಂಗಿಯು ಸ್ತೋತ್ರ ಗೈಯ್ಯಲು |ಒಲಿದು ಜೀವರ ಸೃಜಿಸಿದವಗೆ 1 ಮೂಲಕಾರಣ ಮಾಡಿ ಪ್ರಕೃತಿಯ | ನಾಲಕ್ಕಿಪ್ಪತ್ತು ತತ್ವದಾಲೀಲೆಯಿಂದಲಿ ಸೃಜಿಸಿ ಬೊಮ್ಮನ ಚೆಲುವ ತನುವನೆ ಮಾಡ್ದಗೇ2 ಮತ್ತೆ ವಾರಧಿ ಶಯ್ಯನಾಗುತ | ತತ್ವಮಾನಿ ಬೊಮ್ಮನಪೆತ್ತು ತನ್ನಯ ಪೊಕ್ಕಳಿಂದಲಿ | ಕೀರ್ತಿಯನು ಪಡೆದಾತಗೇ 3 ನೀರೊಳಾಡಿ ನಗವ ನೆಗಹಿ | ಕೋರೆದಾಡೆಯ ತೋರ್ದಗೇನರಸಿಂಹಗೆ ದಾನ ಬೇಡ್ದಗೆ | ಧೀರ ಪರಶುರಾಮ ರಾಮಗೇ 4 ಗಿರಿಯ ನೆಗಹಿ ನಗಗಳ್ವೈರಿಯ | ಮರುಳು ಮಾಡಿದ ಚೆಲುವಗೇಬರಿಯ ಮೈಯ್ಯಗೆ ತುರಗನೇರಿದ | ಗುರು ಗೋವಿಂದ ವಿಠಲಗೇ 5
--------------
ಗುರುಗೋವಿಂದವಿಠಲರು
ಮಂಗಳೆಂದು ಬೆಳಗಿರಾರುತಿ ರಂಗಗೇ ನೀಲಾಂಗಗೆ ಪ ತುಂಗವಿಕ್ರಮನಿಮಗಿ ಭೂವರದಗೆ ನರಮೃಗನಿಗೆ ಅ.ಪ ಬಾಲ ಭಾರ್ಗವ ರಾಮ ಮಾತುಳಕಾಲ ವೀತಚೈಲಗೆ | ಶೀಲ ಮೂರುತಿಯಾದ ಕಲ್ಕಿರೂಪಗೆ | ರಮೆಯರಸಗೆ 1 ಧುರದಿ ರವಿಸುತ | ಉರುಗಗಳವನು ಭರದಿ ಬಿಡೆ ಕಡು ಕರುಣದಿ ನರನರಧ ಧರೆಗೊತ್ತಿ ಸಲಹಿದ ಶೌರಿಗೆ ಮುರವೈರಿಗೆ 2 ವಟದ ವೃಕ್ಷದಿ ವಟುರೂಪಿಯಲಿ ಪವಳಿಸಿದ ಪರಮಾತ್ಮಗೆ | ತಟತಸನ್ನಿಭ ಶಾಮಸುಂದರವಿಠಲಗೆ ವಿಪಗಮನಗೆ 3
--------------
ಶಾಮಸುಂದರ ವಿಠಲ
ಮಗಳೆಂದು ಬೆಳಗಿರೆ ಕುರಂಗಕೇತು ವದನೆಯರೆ ಪ ಕುಂಡಲಿಶಯನ ಶ್ರೀಧವಗೆ | ಕೋದಂಡಪಾಣಿ ವಾವನಗೆ | ಪಾಂಡವಪಕ್ಷ ಪಿಡಿದವಗೆ | ಪಂಢರಿಪುರ ನಿವಾಸನಿಗೆ 1 ಸುರೇಶಮದವಿಭಂಜನಗೆ | ಪುರಾರಿ ಹರನ ಪೊರೆದವಗೆ | ದರಾರಿ ಪದುಮಗದಾಧರಗೆ | ಧರಾಮರಾರ್ಚಿತಾಂಘ್ರಿಗೆ 2 ಚಟುಲ ಶಾಮಸುಂದರಗೆ | ವಿಠಲವೀಶವಾಹನಗೆ | ಕುಟಿಲ ಚÀದುರೆಯರು ಬೇಗ | ಕುಠಾರಿಧರ ನರಮೃಗಗೆ 3
--------------
ಶಾಮಸುಂದರ ವಿಠಲ
ಮಗುವ ತಡೆಯಬಾರದೆ ಮಾನಿನಿಯರುಸುಗುಣ ಚೆನ್ನಿಗನೆಂಬ ಸೊಬಗುಳ್ಳ ಮಗುವ ಪ ನೀರೊಳಗೆ ಪೊಕ್ಕು ತಾ ಬೀರುತಿದೆ ಮಾತುಗಳಧರಣಿಧರ ತಳಕಿಳಿದು ಬಾರದಿದೆಕೊಘೋರ ಪಾತಕವೆಂಬ ಬೇರ ಮೆಲ್ಲುತಲಿದೆಕೊಬಾರಯ್ಯ ಎನೆ ಕೋಪವೇರುತಿಹ ಮಗುವ 1 ಬೇಡುತಿದೆ ದಾನವನು ನೀಡುತಿದೆ ಪಾದವನುರೂಢಿಪಾಲರ ಕಂಡು ಕೊಲ್ಲುತಿದೆಕೊಓಡುತಿದೆ ಮೃಗದೊಡನೆ ಆಡುತಿದೆ ಕಪಿಗಳೊಳುನೋಡಲ್ಕರಿನಾಗರ ಹಾವ ತುಳಿಯುತಿದೆಕೊ 2 ಇತ್ತ ಬಾರೆಂದೆನಲು ಬತ್ತಲೆ ನಿಲ್ಲುತಿದೆಕೊಮತ್ತೆ ತೇಜಿಯನೇರಿ ನಲಿಯುತಿದೆಕೊಹತ್ತೆ ಬಂದವರಿಗೆ ಅರ್ತಿಯನು ನೀಡುತಿಹನಿತ್ಯ ವೈಕುಂಠದಲಿ ನಲಿವ ಮಗುವ 3
--------------
ಕನಕದಾಸ