ಒಟ್ಟು 1099 ಕಡೆಗಳಲ್ಲಿ , 104 ದಾಸರು , 827 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾರೊ ಬಾರೊ ಭಜಕರ ಪೋಷನೆ ಪ ವಾರಿಶಯನ ಮಮ ಘೋರ ದುರಿತಹರ ನಾರಾಯಣ ನಿನ್ನ ನಂಬಿದೆ ನೀ ಬೇಗಾ1 ಭಜಕರ ಪೋಷನೆ ಭಜನ ವಿಲಾಸನೆ ನಿಜಮಣಿಯಾದ ನಮ್ಮ ವಿಜಯಸಾರಥಿಯೆ ನೀ 2 ಸಾಧುಜನರ ನುತಾ ಸರ್ವಶರಣ್ಯನೆ ಮಾಧವನೆ ನೀ ಬಾರೋ ಮದನಜನಕ 3 ವಾಸವನುತ ಹರಿ ಹಾನಸದೊಡೆಯನೆ ದೇಶಿಕ ತುಲಸಿ ನಿನ್ನ ದಾಸಾನು ನಾನಾದೆ 4
--------------
ಚನ್ನಪಟ್ಟಣದ ಅಹೋಬಲದಾಸರು
ಬಾರೊ ಬೇಗ ನೀರಜಾಕ್ಷದೂರು ಇದು ಯಾತಕೊ ಪ ಮೊಸರು ಮಾರುವ ಗೊಲ್ಲತಿಯರಅಸವಳಿಸಿ ಕೈಯ ಪಿಡಿದುವಶನಾಗು ಎಂದು ಪೇಳಿನಸುನಗುತಲಿದ್ದೆಯಂತೆ 1 ಕುಸುಮಶರನ ಪೆತ್ತವನೆಬಸವನಾದೆ ಊರೊಳಗೆಶಶಿಮುಖೇರ ದೂರು ಬಹುಪಸರಿಸಿತು ಪೇಳಲಾರೆ2 ಕಂದಕೇಳು ಇಂದುಮುಖಿಯರಹೊಂದಿ ಆಡಲೇಕೆ ಈಮಂದಿರದೊಳಾಡಿ ಸಲಹೊತಂದೆ ಉಡುಪಿ ಸಿರಿಕೃಷ್ಣ 3
--------------
ವ್ಯಾಸರಾಯರು
ಬಾರೊ ಮನಕೆ ಮುರಾರಿ ಗೋಪಾಲಕೃಷ್ಣ ಬಾರೊ ಬೇಗ ಹದಿ- ನಾರು ಸಾವಿರದ ನೂರೆಂಟು ನಾರೇರ ಮನೋಹರ ಪ. ನೀಯೆನಗಿಂಬೆಂದರಸುತ ನಂಬಿಹೆನು ಸಂಬಾಳಿಸುತಿಹ ದೊರೆ ನೀನು ತುಂಬಿದ ದುರಿತಾಡಂಬರ ಓಡಿಸಿ ಬೆಂಬಲನಾಗಿರು ಕಂಬ್ವರಧರನೆ1 ಬಲೆಯನು ಕೆಡವುತ ಬೇಗದಲಿ ಕಳದನುಗಾಲವು ಕಾವುತಲಿ ಸುಲಲಿತ ವಕ್ಷಸ್ಥಳದಲಿ ಭಾರ್ಗವಿ ಲಲನೆಯನಿರಿಸಿದ ನಳಿನಜ ಜನಕಾ 2 ಮಾನ್ಯ ಪರಾಪರ ಮೂರುತಿಯೆ ಚಿನ್ಮಯ ನಿನಗಿದು ಕೀರುತಿಯೆ ಪನ್ನಗ ಗಿರಿವರ ಪದಯುಗ ಪದ್ಮಗ- ಳೆನ್ನ ಶಿರದೊಳಿಸುನ್ನತ ಕರುಣದಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಬಾರೊ ಶ್ರೀವೆಂಕಟರಮಣ ತವಪಾ- ದಾರಾಧಕರನು ಪೊರೆಯಲು ಕರುಣಾಪೂರ್ಣ ಪ ಬಾರೋ ನಮಿಸುವೆ ಪೂರ್ಣ ಕೃಷ್ಣಾ ತೀರದಲಿ ಮಾಂಡವ್ಯ ಋಷಿಗಳ ಘೋರ ತಪಸಿಗೆ ಒಲಿದು ಗುಡೆಬಲ್ಲೂರು ಮಂದಿರನೆಂದು ಕರೆಸುತ ಅ.ಪ ಎಲ್ಲ ಕಡೆಗೆ ನೆಲೆಸಿರುವ ಸಿರಿ ನಲ್ಲನೊಲಿಸಲು ತಪವನು ಗೈವ ಬಲ್ಲಿದ ಮಾಂಡವ್ಯರಿರವ ಕಂಡು ಗೊಲ್ಲರು ಮಾಡಿದರನು ದಿನ ಶೇವಾ ಪುಲ್ಲನಾಭನು ದರುಶನವ ಮುನಿ ವಲ್ಲಭಗೆ ತೋರಿಸಲು ಬೇಡಿದ ಗೊಲ್ಲರೆನ್ನಯ ಭಕುತರವರಿಂದಲ್ಲಿ ಪೂಜೆಯಗೊಳ್ವದೆಂದನು 1 ಬಾರೊ ಬೇಗನೆ ದ್ವಿಜರಾಜ ಧ್ವಜ ವೇರಿ ಪೊರೆದೆಯೊ ಬಂದು ಕರಿಯೆ ಕರಿ ರಾಜ ತೋರೋ ಚವತರಣ ಸರೋಜಯುಗ್ಮ ಸಾರಿ ಭಜಿಸುವ ಭಕುತರ ಕಲ್ಪ ಭೂಜ ಮಾರಜನಕನೆ ಚಾರುಕನಕ ಕಿ ರೀಟ ಕುಂಡಲಹಾರಪದಕ ಕೇಯೂರ ಸಾಲಂ- ಕಾರ ವಪು ಶೃಂಗಾರದಲಿ ರಥವೇರಿ ಮೆರೆಯುತ 2 ವೇದವೇದ್ಯನೆ ನಿನ್ನ ಪ್ರೇಮಾ ಪಡೆದ ಪಾದ ಮಹಿಮೆಯ ವರ್ಣಿಸಿದ ದೇವ ಶರ್ಮಾ ಬೋಧಾದಿ ಸದ್ಗುಣಧಾಮ ಪಾಹಿ ಮೇದಿನಿ ವಿಬುಧ ಪೂಜಿತ ಪೂರ್ಣಕಾಮ ಮೇದಿನಿಯೊಳು ಶ್ರೀದ ನಿನ್ನಯ ಪಾದಯುಗಳವ ಕಂಡು ಹರುಷದಿ ಪಾದುಕೆಯ ರಚಿಸಿದಗೆ ಒಲಿದ ಅಗಾಧ ಮಹಿಮನೆ ಮೋದಗರೆಯಲು 3 ಒಂದಿನ ನಿಶಿಯೊಳುತ್ಸವದಿ ದಣಿ ದಂದು ಮಲಗಿರಲರ್ಚಕರು ದೇವಾಲಯದಿ ಬಂದು ಚೋರರು ಅತಿಜವದಿ ನಿನಗೆ ಪೊಂದಿಸಿದೊಡವೆ ಗಳನು ಚೌರ್ಯತನದಿ ಮಂದ ಮತಿಗಳು ಒಯ್ಯುತಿರೆ ಖಳ ವೃಂದಕಂಗಳು ಪೋಗೆ ತುತಿಸಲು ಚಂದದಿಂ ಬರೆ ಹೇಮನಾಮವ ಕುಂದದಲೆ ಮಾಡಿಸಿದರಾಕ್ಷಣ 4 ನೀರಜಾಸನ ಮುಖ್ಯ ತ್ರಿದಶ ಗಣದಿಂ- ಪಂಕಜ ಭಕ್ತಪೋಷ ಸೂರಿಜನರ ಸಹವಾಸ ಕೊಡು ಧಾರುಣಿಯೊಳು ಕೃಷ್ಣ ತೀರನಿವಾಸ ಬಾರೊ ನಿನ್ನನು ಶೇರಿದವರW ವಾರಿವಾಹ ಸಮೀರ ಕಾರ್ಪರ ನಾರ ಶಿಂಹಾತ್ಮಕನೆ ಯನ್ನಯ ಭವ ಭಯ ದೂರಮಾಡಲು 5
--------------
ಕಾರ್ಪರ ನರಹರಿದಾಸರು
ಬಾರೊ ಸುದಾಮ ಬಾರೆನ್ನ ಮಿತ್ರ ದಾರಿ ನಮ್ಮಲ್ಲಿಗೆ ತೋರಲಿಲ್ಲೇನೊ ಪ ನಿನ್ನಯ ಪತ್ತೆಯು ಸಿಕ್ಕಲಿಲ್ಲೆನಗೆ ಎನ್ನಯ ಪತ್ತೆಯು ನಿನಗತಿ ಸುಲಭ ಎನ್ನತ್ತಿಗೆ ಕ್ಷೇಮದಿಂದಿರುವಳೆ ಪೇಳೊ ನಿನ್ನತ್ತಿಗೆ ಕ್ಷೇಮದಿರುವಳು ಕೇಳು 1 ಸತಿಸುತರನು ಕಾಣದುಂಟೇನೊ ಚಿಂತೆ ಸತಿಸುತರನ್ನಿಲ್ಲಿ ಕರೆಸುವೆ ಕಾಣೊ ನೀ ತಂದ ಒಡವೆಗಳೇನೇನು ತೋರೊ ಪೃಥುಕದ ಗಂಟನೆ ಬಿಚ್ಚೊ ನೀ ಬೇಗ 2 ಪೃಥುಕೈಕÀ ಮುಷ್ಟಿಯ ತಿಂದಾಗುತಿರಲು ಕ್ಷಿತಿಪತಿ ಕರವನೆ ಪಿಡಿದಳು ಭೈಷ್ಮೀ ಪೃಥುಕದ ಮುಷ್ಟಿಗೆ ಮೋಕ್ಷವ ಕೊಡುವಿ ಮತ್ತಿನ್ನು ತಂದರೆ ಕೊಡುವುದೇನರಸ 3 ತಟ್ಟಿ ಮುದ್ದಾಡಿ ಸುದಾಮನ ಬಿಡನು ಪುಟ್ಟಾದ ಮಕ್ಕಳ ಬಿಟ್ಟು ಬಂದಿರುವಿ ಕಷ್ಟವು ನಿನಗೇನೊ ಮಿತ್ರ ನಾನಿರಲು 4 ರಾಜೇಶ ಹಯಮುಖ ಚರಣಾಬ್ಜಗಳನು ಭಜಿಸುತ್ತ ನೀ ಪೋಗು ಮರೆಯದೆ ಮಿತ್ರನ ಮೂಜಗದೊಳಗಿಂಥ ಮಿತ್ರನೆಲ್ಲಿಹನು 5
--------------
ವಿಶ್ವೇಂದ್ರತೀರ್ಥ
ಬಾರೊ ಹನುಮ ಬಾರೊ ಭೀಮ ಬಾರೊ ಮಧ್ವಮುನಿಪ ಪ. ಬಾರೊ ರಾಮಕೃಷ್ಣ ವೇದವ್ಯಾಸರ ಪ್ರಿಯ ಭಕ್ತ ಅ.ಪ. ಅಂಜನೇಯ ಸುತನು ಆಗಿ ಸಂಜೀವನ ಗಿರಿಯ ತಂದೆ ಕಂಜಲೋಚನೆಯ ವಾರ್ತೆ ಮಂಜುಭಾಷಣ ರಾಮನಿಗರುಹಿದೆ 1 ಪಾಪಿ ಕೌರವ ಕುಲವ ಕೊಂದು ದ್ರೌಪದಿಯ ಕಾಯ್ದ ಮಹಿಮ ಶ್ರೀಪತಿ ಶ್ರೀ ಕೃಷ್ಣನ ಭಜಿಸಿದ ಭೂಪ ಭೀಮಸೇನ ಬೇಗ 2 ಭೂಸುರ ಜನ್ಮದಲಿ ಬಂದು ಆಸೆಯಿಂದ ಆಶ್ರಮ ಕೊಂಡು ದೋಷಿ ಅನ್ಯಮತವ ಮುರಿದು ಭೂಸುರರ ಕಾಯ್ದ ಮಧ್ವ 3 ಸಕಲ ಸುಜನರ ಸೇವೆ ಕೊಂಡು ಮುಕುತಿಮಾರ್ಗಪ್ರದ ನೀನಾಗಿ ಭಕುತಿಮಾರ್ಗವ ತೋರಿ ಎನ್ನ ಹೃತ್ಕಮಲ ಮಧ್ಯದಲಿ ನಿಲ್ಲೊ 4 ಗೋಪಾಲಕೃಷ್ಣವಿಠ್ಠಲನ ರೂಪ ನೋಡುವ ಕೃಪೆಯ ಮಾಡೊ ಶ್ರೀಪತಿ ಶ್ರೀ ಶ್ರೀನಿವಾಸಗೆ ನೀ ಪ್ರೀತಿಕರನೆಂದು ನಮಿಪೆ 5
--------------
ಅಂಬಾಬಾಯಿ
ಬಾರೊ ಹರಿ ಬಾರೊ ದೊರಿ ಬಾಬಾ ಮುರಾರಿ ನೀ ಪ. ನಾರಿಯೇರು ಕರಿಯುವರು ಹೀರಾದ ಪೀಠಕೆ ಬೇಗಾ ಅ.ಪ. ಪದ್ಮಪಾದ ಪೊಳೆಯುತಲಿ ಪದ್ಮಾಕ್ಷಿಯ ಕೂಡುತಲಿ ಪದ್ಮಾದ ಪೀಠಕೆ ಬೇಗ ಶೌರಿ 1 ಪೀತಾಂಬರ ಧರಿಸುತಲಿ ಪೀತ ವಸ್ತ್ರ ವಲಿಯುತಲಿ ಜಾತಿ ಮುತ್ತಿನ್ಹಾರ ಹಾಕಿ ಸೀತಾಪತಿ ಶ್ರೀ ಕೃಷ್ಣನೆ 2 ಚಂದ್ರ ಸದೃಶಾನನ£ É ಇಂದಿರೇಯ ಪೊಂದಿದನೆ ಮಂದರಾದ್ರಿ ಎತ್ತಿದನೇ ಸುಂದರ ಶ್ರೀ ಶ್ರೀನಿವಾಸ 3
--------------
ಸರಸ್ವತಿ ಬಾಯಿ
ಬಾರೋ ಕ್ಷೀರೋದಧಿಶಯನ ಹರೆ ನಿನ್ನ ಕರುಣವ ಎನ್ನೊಳು ತೋರೊ ಪ ನಂದನಂದನ ಹೃನ್ಮಂದಿರಕೆ ನೀ ಬೇಗ ಬಾರೊ ಅ.ಪ ಶೌರೇ ನಿಂಗೆ ಸೇರಿದಾವನಾಗಿ ಇನ್ಯಾರಿಗೆ ಬೇಡಲೊ ಮುರಾರೆ ಕರುಣಿಸಿ ಬಾರೊ 1 ಕೃಷ್ಣಾಮೂರ್ತೆ ಸೃಷ್ಟಿಪಾಲನಾಗಿ ಪರಮೇಷ್ಠಿ ಜನಕ ನಿಂಗಿಷ್ಟೂಪೇಕ್ಷೆ ಯಾಕೋ 2 ಇಂದಿರೇಶ ಚಂದಿರವದನ ಮುಚುಕುಂದವರದ ಗೋವಿಂದ ಕರುಣಿಸಿ ಬಾರೊ 3 ಮಂಗಳಾಂಗ ಅಂಗಜ ಜನಕ ಯದುಪುಂಗವ ಕೈಬಿಡದಾಂಗೆ ಪಾಲಿಸು 4 ನಾಮಗಿರಿಸ್ವಾಮಿ ನಾರಸಿಂಹ ಬಲರಾಮ ಸೋದರ ಪ್ರಣಾಮ ಮಾಡುವೆ ಬಾರೊ 5
--------------
ವಿದ್ಯಾರತ್ನಾಕರತೀರ್ಥರು
ಬಾರೋ ಬಾರೋ ಸುಂದರನೆ ಬರ ಹೇಳಿದಳೊ ನಿನ್ನ ರಮಣಿ ಪ ಶುಕಪಿಕರವದಿಂದ ವಿಕಳಿತಳಾಗಿ ಧೈರ್ಯ ಕಕವಿಕಳಾಗಿಹಳಿವಳು ನೀ ಬೇಗನೆ 1 ಸಾರ ಸುಗುಣೆ ನಿನ್ನ ದಾರಿಯ ನೋಡಿ ನೋಡಿ ಸರಸಿಜಮುಖಿ ನೀ ಪೋಗಿ ಬಾರೆಂದಳು 2 ಶ್ರೀ ವಾಸುದೇವವಿಠಲ ನಿನ್ನಯ ಸಖಿ ಭಾವಜನ ರೂಪವ ತೋರು ತೋರಿಸೆಂದಳು 3
--------------
ವ್ಯಾಸತತ್ವಜ್ಞದಾಸರು
ಬಾರೋ ಬೇಗ ತೋರೋ ಮುಖವನು ನಿನ್ನ ಬಾರಿಗೆ ಬಿದ್ದೆನು ಪಾರಗಾಣಿಸೊ ಪ ಅಂಗಜನಯ್ಯಾ ಭುಜಂಗ ಶಯನಾ ಶ್ರೀ ರಂಗ ಎನ್ನಾ ಅಂತರಂಗಕ್ಕೆ ನೀ 1 ಕಂಜಲೋಚನ ನಾ ನಿನಗಂಜಲಿ ಮುಗಿಯುವೆ ಕುಂಜರೇಶ ವರದ ಭುಜಂಗ ಶಯನ2 ಘನ್ನಮಹಿಮ ಸನ್ಮತಿಯ ಪಾಲಿಸು ಪ್ರ ಸನ್ನ ಪ್ರಾಣನಾಥ ವಿಠಲರಾಯನೆ 3
--------------
ಬಾಗೇಪಲ್ಲಿ ಶೇಷದಾಸರು
ಬಾರೋ ಬೇಗ ಬಾರೋ ರಾಮ ಬಾರೋ ನೀ ಮೊಗದೋರೋ ರಾಮ ಪ ಅಗಣಿತ ಮಹಿಮ ರಘುಕುಲೋದ್ಧಾಮ ನಿಗಮಾಗಮ ಪೂಜಿತ ಶ್ರೀರಾಮ 1 ನಿಕರ ದುರಿತಾರಿ ರಾಮ 2 ಹರಣ ರಮಾಪತಿ ಚರಣ 3
--------------
ಅನ್ಯದಾಸರು
ಬಾರೋ ಬೇಗನೆ ರಾಮಾ ನೀ ಬಾ ಪ ಏಕೆ ಪಂತರ ಮನೆಯೊಳು ನೀರ ತಂದೆ | ಲೋಕದೊಳಗೆ ನಿನ್ನ ಮಹಿಮೆಗೆ ಕುಂದೇ1 ಅಂದು ಕಬೀರನ ಸತಿಗಾಗಿ ಹಿಂದೆ |ಛಂದಾಗಿ ಕೊತವಾಲನಾಗಿ ಬಂದೆ 2 ಗುರು ಭವತಾರಕ ಎನ್ನ ತಂದೆ |ಆರು ಮುನಿದರೂ ಏನಿಲ್ಲ ಮುಂದೆ 3
--------------
ಭಾವತರಕರು
ಬಾರೋ ಬೇಗನೆ ಶ್ರೀಧರ ಗುಣಾಕರ ಪ ಬಾರೋ ಬೇಗನೆ ಪಾದವಾರಿಜಕೆರಗುವೆ ಚಾರು ಪರಿಯಂಕಕ್ಕೆಅ.ಪ ಶೌರಿ ಅಗ್ರಜನಾಗಿ ಕ್ರೂರರ ಸದೆದು ಭೂ ಭಾರವನಿಳುಹಿದ ಶೌರ್ಯದ ಮಂಚಕೆ1 ರಾಮನ ಶೇವಿಸಿ ಪ್ರೇಮವನು ಪಡೆದಂಥ ಸೌಮಿತ್ರಿಯೆಂಬ ಸುನಾಮದ ಹಾಸಿಗೆಗೆ 2 ಸಾಸಿರವದನದಿ ಶ್ರೀಶನೆ ತವಗುಣ ಲೇಶ ವರ್ಣಿಸುವಂಥ ಭಾಸುರ ತಲ್ಪಕೆ 3 ಇಂದಿರದೇವಿಯು ನಿಂದಿರುವಳು ತವ ಸುಂದರ ಚರಣಾರವಿಂದವ ತೋರಿಸು 4 ಶರಣರ ಪೊರೆವ ಕಾರ್ಪರನರಶಿಂಹನೆ ಹರಗೆ ಭೂಷಣವಾದ ಉರಗಪರ್ಯಂಕಕೆ5
--------------
ಕಾರ್ಪರ ನರಹರಿದಾಸರು
ಬಾರೋ ಭವದೂರಾ ರಂಗಾ ನಾರಾಯಣಪ ಆ ರಾವಣ ಭೀಕರ ಜಯ ಸರೋಜದಳಾಂಗ ಅ.ಪ ಚರಣಶ್ರಿತ ಪರಿಪಾಲಿತ ಮರಳೀಧರ ದೇವ ಪರಮಾತ್ಮನೆ ಪಾಂಡವಮಣಿ ತರವೇ ನಿರುತರಕೇಂದ್ರ 1 ಉಭಯ ವೇದಾಂತಾರ್ಯನೆ ಅಭಯಾಕರ ಶೌರೀ ಅಭಿಮಾನಯೇನದು ಕಾರಣ ಶುಭದಾಯಕನಾಗಿ ಬೇಗಾ 2 ಪರತಂತ್ರನೆ ಪಾಪಾಂತಕ ನರವೇಷ ಭಾಷೆ ಸುರನಾಯಕವಿನುತನಾಗುರು ಭರತಾಗ್ರಜ ತುಲಶೀರಾಮಾ3
--------------
ಚನ್ನಪಟ್ಟಣದ ಅಹೋಬಲದಾಸರು
ಬಾರೋ ಮನ ಮೋಹನ ಭಾಮೆ ರುಕ್ಮಿಣಿ ಸತ್ಯಭಾಮೆಯರಸ ಬೇಗ ಪ ಯಮುನಾ ತೀರದಿ ಮುರಳಿಯ ನುಡಿಸಲು ಪ್ರಮದೇರು ಗೋವ್ಗಳು ಮರುಳಾಗಿರಲು ಮಮತೇಲಿ ಸಲಹಿದ ಚಲುವ ಕೃಷ್ಣನೆ ಬೇಗ 1 ಗೋಪಿಯ ಕಂದ ಶ್ರೀ ಗೋಪಾಲನೆ ಗೋವರ್ಧನೋದ್ಧಾರಿ ಶ್ರೀ ಕೃಷ್ಣನೆ ಗೋಪಿಕಾಲೋಲ ಶ್ರೀ ಗೋಪಾಲ ಕೃಷ್ಣ ಬೇಗ 2 ಕಮಲ ಸಂಭವನಯ್ಯ ಕಮಲಾಪತೆ ಕಮಲಜಾತೆಯ ಪ್ರಿಯ ಪೊರೆ ಶ್ರೀಪತೆ ಕಮಲ ಪತ್ರಾಕ್ಷ ಶ್ರೀ ಕಮಲನಾಭ ವಿಠ್ಠಲ 3
--------------
ನಿಡಗುರುಕಿ ಜೀವೂಬಾಯಿ