ಹರಿ ಹರಿ ಹರಿ ಹರಿಯಂದು ನೆನೆದವನೆ ಧನ್ಯ |
ಹರಿಯ ಮರದವನೇ ಮೂರು ಲೋಕದೋಳಾಮಾನ್ಯ ಪ
ಹರಿಯ ಬಲಗೊಂಡಾ ಪ್ರಹ್ಲಾದಾ ಸುಖಿಯಾದಾ |
ಹರಿಯ ಕೂಡ ಮರೆತು ಹಿರಣ್ಯಕನು ದುಃಖಿಯಾದಾ 1
ಹರಿಶರಣನಾಗಿ ವಿಭೀಷಣನು ನೆಲೆಗೊಂಡಾ |
ಹರಿಗೆ ಬಾಗದವೆ ದಶಾನನನು ಕಲುಷವುಂಡಾ 2
ಹರಿಯ ನಂಬಿದ ಪಾಂಡವರು ಕೀರ್ತಿ ಧರಿಸಿದರು |
ಹರಿಯನ್ನದೆ ವ್ಯರ್ಥ ಕೆಟ್ಟರು ನೋಡು ಕೌರವರು 3
ಗುರು ಮಹಿಪತಿ ಸ್ವಾಮಿ ಭಕ್ತ ಸಹಕಾರಿ |
ದುರುಳ ದುರ್ಮಾರ್ಗದಲಿ ನಡೆದ ದುಷ್ಟ ಜನವಿದಾರಿ 4