ಒಟ್ಟು 19041 ಕಡೆಗಳಲ್ಲಿ , 136 ದಾಸರು , 7982 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕ್ತಿ ಪಾಶದಿ ಕಟ್ಟುತ ಹರಿಯನು ನಿತ್ಯದಲಿರು ಮನವೇ ಪ. ಭಕ್ತಿಗೆ ಮೆಚ್ಚುತ ಅಚ್ಚುತ ತಾನೆ ಬಹ ನಿಶ್ಚಯವಿದು ಮನವೆ ಅ.ಪ. ಅನುದಿನ ನಾರಾಯಣನೆಂದಣುಗಗೆ ಕ್ಷಣದಿ ಕಂಬದಿ ಬಂದ ದನುಜನ ಮುರಿದ ಗುಣನಿಧಿಯನು ನೀ ಕ್ಷಣ ಬಿಡದನುದಿನ ನೆನೆ ಮನವೇ 1 ಕಲ್ಲಾಗಿದ್ದಹಲ್ಲೆ ಪೊರೆದು ಶಿವ ಬಿಲ್ಲ ಮುರಿದ ರಾಮನ ನಲ್ಲೆ ಕುಬ್ಜೆಯ ಡೊಂಕನೆ ತಿದ್ದಿದ ಖುಲ್ಲ ಕಂಸನ ಗೆದ್ದಾ ಕೃಷ್ಣನ 2 ಅಂಬರೀಷ ದ್ವಾದಶಿ ವ್ರತವನು ಮಾಡೆ ಮುನಿ ಪುಂಗವ ಜರಿಯುತಿರೆ ರಂಗನ ಚಕ್ರದಿಂದ್ಹುಟ್ಟಿದನರಿಯ ದೇವ ಈ ಅಂಗ ಭಂಗರಕೆ ಚಾಟಿ ಶ್ರೀ ಶ್ರೀನಿವಾಸನು 3
--------------
ಸರಸ್ವತಿ ಬಾಯಿ
ಭಕ್ತಿ ಭಾವಗಳು ಸ್ವಲ್ಪಮಾತ್ರವಿಲ್ಲವಾಯಿತು ಪ ಗುರುಗಳಿವರು ಹಿರಿಯರಿವರು ಶರಣರೆಂದು ತಾರತಮ್ಯದಿ ರವನರಿತು ಅರಿಯದಂತೆ ಸಿರಿಯ ಮದದಲಿ ಶುನಕ ನಂಕೆನೋಡಿ ಮರಳುತಿಹರು ಏನನೆಂಬೆ ನೆಲವ ನೋಡದೆ 1 ನಿಟ್ಟಿಸದೆ ಸಾದುಗಳನು ಪ್ರಾಯ ಮದದ ಹಮ್ಮಿನಿಂದ ಭ್ರಷ್ಟ ಜನರು ಪುಣ್ಯ ಪಾಪಗಳನು ತಿಳಿಯದೆ ಅಷ್ಟದಿಕ್ಕು ತಮ್ಮದೆಂದು ಸರ್ವಗಿರಿಯನೇರಿ ತಾವೆ ಶ್ರೇಷ್ಠರೆಂದು ತಮ್ಮ ತಾವೆ ಕೊಂದು ಕೊಂಬರೋ 2 ನೂತನದಾಭರಣ ವಸ್ತ್ರ ಜಾತಿಯನ್ನು ಉಟ್ಟು ಕೊಟ್ಟು ಪ್ರೀತಿಯಿಂದ ತಮ್ಮ ತಾವೆ ನೋಡಿ ಹಿಗ್ಗುತಾ ಧಾತು ತಪ್ಪಿ ನಡೆವ ಜನರ ವಾತಸುತನ ಕೋಣೆಲಕ್ಷ್ಮೀ ನಾಥ ಬಲ್ಲ ನಮಗೆ ಅವರ ಮಾತಿನ್ನೇತಕೋ 3
--------------
ಕವಿ ಪರಮದೇವದಾಸರು
ಭಕ್ತಿಗಭಿಮಾನಿ ಭಾರತೀದೇವಿ ಪ ಶಕ್ತಿ ಕೊಟ್ಟು ಶುದ್ಧ | ಭಕ್ತಿ ಮಾರ್ಗದಲಿರಿಸೇ ಅ.ಪ. ಕೃತ್ತಿವಾಸನ ತಾಯೆ | ಶಕ್ತಿ ನಿರ್ಭಯ ವೀಯೆಎತ್ತು ಭವದಿಂದೆನ್ನ | ಇತ್ತು ಜ್ಞಾನಾನ್ನ |ಉತ್ತಮೋತ್ತಮ ಹರಿಯ | ಚಿಂತೆ ಮಾಡುವ ಪರಿಯಬಿತ್ತರಿಸಿ ಮನದಲ್ಲಿ | ಹರಿಯ ತೋರಲ್ಲೀ 1 ಸತಿ ನಿನ್ನ | ಪಾದಕಮಲಗಳನ್ನಸಾಧು ಸಮ್ಮತವೆನಿಪ | ಮಾರ್ಗದಲಿ ಭಜಿಪ |ಹಾದಿ ತೋರಿಸು ತಾಯಿ | ವೆಸೂೀದ ಮುನಿ ಮತದಾಯಿಕಾದು ಕೋ ನೀ ನಿನ್ನ | ಕಂದ ನೆಂದೆನ್ನ 2 ಅಪರೋಕ್ಷ ಮಾನಿ |ಭಾವ ಜನಯ್ಯ ಗುರು | ಗೋವಿಂದ ವಿಠಲನಪಾವನವು ಪದ ದ್ವಂದ್ವ | ತೋರು ಆನಂದ 3
--------------
ಗುರುಗೋವಿಂದವಿಠಲರು
ಭಕ್ತಿಗೆ ಮೂರು ಗುಣಗಳು ಬೇಕು ಯುಕ್ತಿವಂತರು ಕೇಳಿ ಮುಕ್ತಿಶೀಲವು ತಿಳಿದು ನಿಜವಿರಕ್ತತನದಲಿ ಬಾಳಿ ಧ್ರುವ ಪ್ರೇಮ ಪ್ರೀತಿ ರತಿ ನೇಮದಲಿ ಶ್ರೀಸ್ವಾಮಿ ಚರಣದಲಿಡಬೇಕು ಸೌಮ್ಯ ಸಮಾಧಾನದಲಿ ತಾನಮೃತವನು ಹಿಡಿಯಬೇಕು ನಿರ್ಮಳದಲಿ ನಡಿಬೇಕು ಪಡೆದು ಸಮದೃಷ್ಟಿಗುಡಬೇಕು 1 ನಿತ್ಯ ವಿವೇಕವು ತಿಳಿದು ಪಥ್ಯದಲಿ ನಡಿಯಬೇಕು ಚಿತ್ತವೃತ್ತಿ ಸವೃತ್ತಿಯ ಮಾಡಿ ಸತ್ಯದಲಿ ನುಡಿಯಬೆಕು ಉತ್ತಮೋತ್ತಮ ವಸ್ತುದ ನಿಜಸುಖ ಹೃತ್ಕಮಲದಲಿಡಬೇಕು ಭಕ್ತಿಗೆ ಭಾವನೆ ಬಲಗೊಂಡು ವೈರಾಗ್ಯದ ಸುಖ ತೊಡಬೇಕು 2 ಸೋಹ್ಯ ಸೋನ್ನಿಯ ಸೂತ್ರವ ತಿಳಿದು ಸ್ಥಾಯಿಕನಾಗಿರಬೇಕು ಧ್ಯೇಯಧ್ಯಾತಧ್ಯಾನವ ತಿಳಿದು ಮಾಯದ ಮೊನೆ ಮುರಿಬೇಕು ನ್ಯಾಯ ನೀತಿಯ ನೆಲೆನಿಭವನು ಉಪಾಯದಲಿ ಅರಿಯಬೇಕು ಪಾಯಕನಾಗನುದಿನ ಮಹಿಪತಿ ಗುರುಪಾದದಿ ಸ್ಥಿರವಿರಬೇಕು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಕ್ತಿಯನು ಪಾಲಿಸುತ ಭಕ್ತರನು ಪಾಲಿಸುವ ಮುಕ್ತಿದಾಯಕ ಹರಿಯ ಸೇವೆಯನು ಮಾಳ್ಪೇ ಪ ಪಂಚೇಂದ್ರಿಯವ ಗೆದ್ದು ಪಂಚಾಮೃತಗಳಿಂದ ಕಂಚಿಪುರ ವಾಸಿಯ ಕಾಯವನು ತೊಳೆದೂ 1 ಆರು ಅಂಗಳ ಜೈಸಿ ಆರು ಶಾಸ್ತ್ರಗಳಿಂದ ಧಾರೆ ಪುರವಾಸಿಗೇ ಗಂಧ ಲೇಪಿಸುತಾ 2 ಚಾರು ವೇದಗಳಿಂದ ನಿತ್ಯ ಪುಷ್ಪವೇರಿಸುತ 3 ಎಂಟ ಕೀಳರ ಗೆದ್ದು ತುಂಟರೈವರ ಕೊಂದು ಬಂಟನಾಗುತ ಹರಿಯ ಮಹಿಮೆಯನು ಭಜಿಸಿ 4 ಶಾಪ ತಾಪವ ಕಳೆದು ತ್ರಿಪುರಾರಿ ವದ್ಯನಿಗೆ ಧೂಪದೀಪಗಳಿಂದ ಆರತಿಯ ಬೆಳಗೀ 5 ಅನುಮಾನವನು ತ್ಯಜಿಸಿ ಶ್ರೀ ಚೆನ್ನಕೇಶವನಿಗೆ ತನುಮನ ಧನದಿಂದ ಆತ್ಮವರ್ಪಿಸುವೇ 6
--------------
ಕರ್ಕಿ ಕೇಶವದಾಸ
ಭಕ್ತಿಯಲಿ ನಡೆವರಿವರೇ ಸುಗುಣರೊ ಮುಕ್ತಿಯನು ಬಯಸಿ ಮುರಾರಾತಿಯ ಚರಣದಲ್ಲಿ ಪ ಉದಯದಲೆದ್ದು ಉನ್ನತ ಸ್ವರದಿಂದ ಹರಿ ಪದವೇ ಗತಿ ಎನುತಾ ಎಲ್ಲ ಕಾಲಕೆ ಉದರ ಚಿಂತಿಯ ಮರೆದು ಮನ ಉಬ್ಬಿ ಉತ್ಸವದಿ ಪದೋಪದಿಗೆ ಮಂಗಳಾವಾರ್ತಿ ಪೇಳುತ ನಿತ್ಯಾ 1 ಭಾಗವತ ಮಿಕ್ಕ ಪುರಾಣಾದಿ ನುಡಿಗೆ ಕಿವಿಗೊಟ್ಟು ಹಾಹಾ ಎನತಲಿ ಒಡನೊಡನೆ ಹರಿ ಮಹಿಮೆಯಲಿ ಇದ್ದು ಮಾರಿಗಳ ಅಡಿಮಾಡಿ ಆದ್ಯಂತಕಾಲ ಸುಖಿಸುವ ನಿತ್ಯಾ 2 ಈ ದೇಹ ತ್ಯಾಗ ಮಾಡದೆ ಆಗಲಿ ಪಂಚ ಭೇದ ಪೇಳುವದು ಬಿಡೆನೆಂಬೊ ಸೊಲ್ಲು ಆದಿತ್ಯ ಲೋಕಕ್ಕೆ ಮುಟ್ಟುವಂತೆ ಕೂಗಿ ಸಾಧನ ಮಾಡುತಲಿಪ್ಪ ಶುಭಮಾರ್ಗದಲಿ ನಿತ್ಯಾ 3 ಅವಾವ ಮೋಹಕವು ಶಾಸ್ತ್ರದಲ್ಲಿದ್ದರೂ ಭಾವದಲಿ ಗುಣಿಸದೆ ನಿಕ್ಕರಿಸೀ ದೇವದೇವೇಶನೆ ಬ್ರಹ್ಮಾದಿಗಳು ವಂಚಿಪ ಕಾವ ಕೊಲ್ಲುವನೀತನೆಂದು ತಿಳಿದು ನಿತ್ಯಾ 4 ಅನ್ಯಶಬ್ದವು ಅನ್ಯಸ್ಪರಿಶ ರೂಪಕ ರಸಾ ಅನ್ಯಗಂಧಗಳಿಗೆ ಇಂಬುಗೊಡದೇ ಧನ್ಯರಾಗಿದ್ದವರ ಕರುಣ ಸಂಪಾದಿಸಿ ಪುಣ್ಯಭೂಮಿಯನು ಹಾರೈಸುವ ನಿತ್ಯಾ 5 ಅವೈಷ್ಣವನು ಹರಿ ಎಂದು ನುಡಿವಡೆ ತಾನು ಅವನಂತೆ ಸ್ಮರಿಸದೇ ಸುಮ್ಮನಿದ್ದೂ ಭವವದ್ದು ಭಾಗ್ಯವನು ಅಪೇಕ್ಷಿಸದೇ ಮುಂದೆ ನಿತ್ಯ 6 ಭೂಸುರರ ಪಾದದಲಿ ವಿಶ್ವಾಸ ಇಟ್ಟು ದು ರಾಶೆಯನು ಮಾಡಿ ನರರಾಶ್ರೈಸದೆ ಏಸೇಸು ವಿಪತ್ತು ಗುಣ ಮೇಲಟ್ಟಿದರು ನಿತ್ಯ 7 ಕಾಲ ಮೃತ್ಯು ಬಂದು ಹುಂಕರಿಸಿ ನಿಂದು ಮಹ ಜ್ವಾಲೆಯನು ತೋರಿ ಕಠಿಣೋಕ್ತಿಯಲ್ಲೀ ಏಳೇಳು ಎನುತ ಎಬ್ಬಿಸಿದ ಕಾಲಕೆ ತನ್ನ ನಾಲಿಗೆಲಿ ಹರಿ ಕೃಷ್ಣ ಕೇಶವನೆನುತ ನಿತ್ಯಾ 8 ಸಕಲ ಚೇಷ್ಟಾದಿಗಳು ಹರಿಮಾಡಿಸಲು ಉಂಟು ಮುಕುತಿ ನರಕವೆಂಬ ಯೋಚನ್ಯಾಕೆ ಸಿರಿ ವಿಠ್ಠಲನಲ್ಲಿ ಸುಖ ದು:ಖವಿತ್ತದು ಸಮ್ಮತವೆನುತ ನಿತ್ಯಾ 9
--------------
ವಿಜಯದಾಸ
ಭಕ್ತಿಯು ಸುಲಭ ತಾನಲ್ಲ ನಿಜಭಕ್ತಿ ದೊರಕಲವಗಾಗುವುದು ಎಲ್ಲ ಪ ಎಲ್ಲ ಸಂಗವ ಬಿಡಬೇಕು ತಾನುಬಲ್ಲ ಗುರುವ ಸೇವೆ ಮಾಡಬೇಕುಎಲ್ಲಕೆ ತಾನಿರಬೇಕು ಭಕ್ತಿಬಲ್ಲವನಿಂದ ನಿತ್ಯದಿ ಹೆಚ್ಚಬೇಕು 1 ಹೇಳಿದಲ್ಲಿಗೆ ಹೋಗಬೇಕು ಮನಕೇಳದಿರಲು ಬುದ್ಧಿಯ ಹೇಳಬೇಕುಕಾಳರಾತ್ರೆಯೆನ್ನದಿರಬೇಕು ನಿತ್ಯಬಾಲಕನಂತೆ ತೋರುತಲಿರಬೇಕು 2 ಹಸಿವು ತೃಷೆಯ ಬಿಡಬೇಕು ತಾನುಎಸಗಿ ಗುರುಸೇವೆ ಮಾಡಬೇಕುಬಿಸಿಲು ಮಳೆ ಎನ್ನದಿರಬೇಕು ಧೈರ್ಯವೆಸಗಿ ಭಯಕೆ ಬೆಚ್ಚದಲಿರಬೇಕು 3 ಗುರುವಿನನಡೆ ನೋಡಬೇಕು ಆಗುರುವಿನ ನಡೆಯ ಕಂಡಂತಿರಬೇಕುಕರಣ ವಿಷಯ ಹೋಗಬೇಕು ನಿತ್ಯಭರಿತವಾನಂದವಾಗಿರಬೇಕು 4 ಕರವ ನೀಡುವನು ಏ-ನೆಂತು ಪೇಳಲಿ ತನ್ನೊಳೆರಕ ಮಾಡುವನು 5
--------------
ಚಿದಾನಂದ ಅವಧೂತರು
ಭಕ್ತಿಯೆಂಬ ಹೆಣ್ಣ ಶಕ್ತಿಯನ್ನು ನೋಡಿ ಮುಕ್ತಾಶ್ರಯ ಲಕ್ಷ್ಮೀಪತಿಯನ್ನು ಪಾಡಿ ಪ. ಸ್ವಾನಂದ ಪರಿಪೂರ್ಣ ಪರಮ ಮಂಗಲಮೂರ್ತಿ ಶ್ರೀನಿವಾಸಗೆ ಸರ್ವ ಸಂಗವ ಬಿಡಿಸಿ ತಾನಿರುವಲ್ಲಿಗೆ ಹಿಡಿದೆಳತರಿಸಿ ಸಾನುರಾಗದಿ ತನ್ನ ಸಂಗಡಲಿರಿಸಿ 1 ಅಣುರೇಣು ತೃಣಕಾಷ್ಠ ಪರಿಪೂರ್ಣ ಸರ್ವೇಶ ಗಣನೆಯಿಲ್ಲದ ದಿವ್ಯ ಗುಣಗಳುಳ್ಳವನು ಎಣಿಸಲು ಇವಳ ಜನರ ದೋಷಗಳನು ಕ್ಷಣ ಬಿಟ್ಟಗಲದೆ ಇವಳ ಕೂಡಿಹನು 2 ಭೂಧರ ಗಿರಿವರ ಶೋಭಿತ ಮೂರ್ತಿ ಮಾಧವ ಪರಿಹರಿಸುವನು ಭವಾರ್ತಿ ಪಾದ ಪಲ್ಲವಗಳ ನಂಬಿದವರಿಗರ್ಥಿ ಸಾಧಿಪ ಕರುಣಾಳು ಹರಿಯ ಶ್ರೀಕೀರ್ತಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಭಕ್ತಿಲೇಸು ಮುಕ್ತಿಗಿಂತಲಿ ಪ ಭಕ್ತಿಲೇಸು ಮುಕ್ತಿಗಿಂತಲಿ | ಭಕ್ತಜನರಾ ಪಾಲಿಸುವನಾ | ಭಕ್ತಿಗೊಲಿದು ಫಣಿಗಣ ಲೋಕದಿ | ಯುಕ್ತಬಲಿಯ ಬಾಗಿಲಲೊಳಿಹ ರಂಗಯ್ಯನಾ | ಸುರಪ್ರೀಯನಾ ಮುನಿಧ್ಯೇಯನಾ 1 ಸರಸಿಭವನ ಕಠಾರದಿಂದ ಲೋಗದನಾ | ಅರಸೆನಿಪನಾ ತನುಭವನಾ | ಧರಿಸಿದನಾ | ಅರಸಿಯ ಜನಕನ ಕುಲರಿಯನಿಪನಾ | ಕುವರನ ಸ್ಯಂದನ ವಾಜಿಯನು ಪೊರೆದನಾ | ಗೆಲಿಸಿದನಾ | ಮೆರಿಸಿದನಾ 2 ವನರುಹಸಖನ ಪೊಂದೇರ ನಡೆಸುತಿಹನಾ | ಅನುಜನಾ ಅರಿಗಳಾ ಹರಿಯ ನಂದನನಾ | ಘನವಾಲದಿಂದ ನೊಂದಿಹ ಪುರದರಸನಾ | ಅನುಜನಾ ಸ್ಥಿರಪದವಿತ್ತು ನುಳುಹಿದನಾ | ನಿಲಿಸಿದನಾ | ಕಾಯ್ವನಾ 3 ಸಿರಿಯ ಮದನಳಿದು ಗುರುಚರಣಕೆ ಹೊಂದಿ | ದೊರಕಿ ನಿತ್ಯದಲಿ ಸಂತುಷ್ಟವಿರುತಾ | ಗುರುವರ ಮಹಿಪತಿ ಸ್ವಾಮಿಯ ಷೋಡಶ | ಪರಿಯಲಿ ತುಳಸಿಯ ತಂದು ಪೂಜೆ ಮಾಡುವ | ಪಾದ ನೋಡುವಾ | ಪಾಡುವಾ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭಗವಂತನ ಸಂಕೀರ್ತನೆ ಇಂಥಾವಗ್ಹ್ಯಾಂಗೆ ಮನಸೋತೆ ಬಲು ಪಂಥವಾಡಿದ ಜಗನ್ಮಾತೆ ಪ. ಆವಾಗ ನಾರುವ ಮೈಯ್ಯ ಬಿಚ್ಚಿ ತೋರಿ ನಲಿಯುವ ಕಾಲು ಕೈಯ್ಯ ಕೋರೆಯ ಮಸೆಯುತ ಕೊಸರಿಕೊಂಡಸುರನ ಕರುಳನು ಬಗೆದಂಥ ಅದ್ಭುತ ಮಹಿಮಗೆ 1 ಬಡಬ್ರಾಹ್ಮಣನಾಗಿ ತಿರಿದ ತನ್ನ ಹಡೆದ ತಾಯಿಯ ಶಿರವರಿದ ಮಡದಿಗಾಗಿ ದೊಡ್ಡಡವಿಯೊಳ್ಮನೆ ಕಟ್ಟಿ ಬಿಡದೆ ಸ್ತ್ರೀಯರ ಗೋಕುಲದಲ್ಲಿ ಮೆರೆದ 2 ಬತ್ತಲೆ ನಿಂತಿದ್ದನೀಗ ತೇಜಿ ಹತ್ತಿ ಮೆರೆವದೊಂದು ಯೋಗ ಉತ್ತಮ ಹೆಳವನಕಟ್ಟೆ ಶ್ರೀರಂಗ ಭಕ್ತವತ್ಸಲ ಸ್ವಾಮಿ ದೇವಕೃಪಾಂಗ 3
--------------
ಹೆಳವನಕಟ್ಟೆ ಗಿರಿಯಮ್ಮ
ಭಗವನ್ನಾಮ ಅಂಬುಜ ಮುಖಿಯರು ಕಂಬುಕಂಠೆಯರು ಅಂಬರದಲಿ ನಾಟ್ಯವಾಡಿದರು ಪ ಪತಿ ಶ್ರೀ ಕೃಷ್ಣನರಥ ಬರೆ ಸಂಭ್ರಮದಿಂದಲಿ ಪಾಡಿದರು ಅ.ಪ. ಬಾಜ ಬಜಂತ್ರಿಯ ವಾದ್ಯರಭಸದೊಳು ಮೋಜಿನಿಂದಲಿ ಹರಿ ಬರುತಿರಲು ಸೋಜಿಗ ಪಡುತಲಿ ರಾಜ ವದನೆಯರು ಜಾಜಿಮಲ್ಲಿಗೆ ಹೂವ ಬೀರಿದರು 1 ವೇದ ಘೋಷಗಳಿಂದ ಮೋದಪಡುತ ಹರಿ ಸಾಧುಜನರ ಕೂಡಿ ಸರಸದಲಿ ಬೀದಿಯೊಳ್ ಬರುತಿರೆ ಮಾಧವರಾಯಗೆ ಸೂಜಿಮಲ್ಲಿಗೆ ಹೂವ ಬೀರಿದರು 2 ಕನ್ನಡಿ ಮಂಟಪ ಮಧ್ಯದೊಳಗೆ ಹರಿ ರನ್ನೆಯರೊಡಗೊಡಿ ಬರುತಿರಲು ಸನ್ನುತಾಂಗ ಶಿರಿ ಪ್ರಾಣನಾಥ ವಿಠಲನ ಸಂಭ್ರಮದಿಂದಲಿ ಸಾರಿದರು 3
--------------
ಬಾಗೇಪಲ್ಲಿ ಶೇಷದಾಸರು
ಭಂಗಿ ಹತ್ತಿದೆ ಜ್ಞಾನ ಭಂಗಿ ಹತ್ತಿದೆನುಂಗಿ ಕಾಮ ಕ್ರೋಧಗಳನ್ನುಅಂಗ ಮೆರೆವ ಮರವೆನಿಕ್ಕಿ ಪ ನಿತ್ಯತೃಪ್ತನು ನಿರಾಕಾರ ನಿರ್ಲಿಪ್ತನುಪ್ರತ್ಯಗಾತ್ಮ ಅತ್ಯಾಧಿಕಸತ್ಯಸಂಧನು ತಾನೆ ಎಂಬ 1 ವಿಶ್ವ ನಾಟಕ ಮಹಾವಿಶ್ವದಾಧಾರವಿಶ್ವದೊಳ ಹೊರಗೆಲ್ಲವಿಶ್ವತೃಪ್ತ ತಾನೆ ಎಂಬ2 ಏನ ಕೇಳುವಿರೋ ನೀವೇನ ಹೇಳುವಿರೋಜ್ಞಾನ ಮೂರುತಿ ಚಿದಾನಂದತಾನೆ ತಾನೆ ಎಂಬ3
--------------
ಚಿದಾನಂದ ಅವಧೂತರು
ಭಜತಿ ಭುಜಗಶಯನಂ ಸದಾಹೃದಿ ಪ ಶಿಖರಾಲಯಮನಿಶಂಅ.ಪ ಕರುಣಾಯಾತ್ರಾಗತಮೀಶ 1 ಮಕಳಂಕ ಚರಿತ್ರಂ 2 ಪುಂಡರೀಕ ದಿವ್ಯಾದ್ರಿವಿಹಾರಂ 3 ಮಂಡಜಾತಾವರವಾಹನ ಗಮನಂ 4 ವರದ ವಿಠಲ ಮನುಚಿಂತಯದಾದ್ಯಂ 5
--------------
ಸರಗೂರು ವೆಂಕಟವರದಾರ್ಯರು
ಭಂಜನ ಶರಣು ತ್ರಿಭುವನ ರಂಜನ ಶರಣು ರವಿಕುಲವರ್ಧನ ಶರಣು ಪ ಪರಮಭಕ್ತ ಸರೋಜ ಭಾಸ್ಕರ ಪಾಹಿ ಪಾಹಿ ಕೃಪಾಕg À 1 ಪಾವಕ ದುರಿತಹರ ರಘುನಾಯಕ 2 ವಾಸುದೇವ ಜನಾರ್ಧನÀ ವಾಸವನುತ ವನಜಲೋಚನ ವಂದಿತಾಖಿಲ ಬುಧಜನ 3 ಬ್ರಹ್ಮಪಿತ ಪ್ರಹ್ಲಾದವರದ ನೃಸಿಂಹದೇವ ನಮೋಸ್ತುತೇ 4 ಎನುತ ಭಜಿಸುವ ಭಕ್ತ ಜನರಿಗೆ ಮನದಭೀಷ್ಟವ ಪಾಲಿಪ ಜನವರನೆ ಗುರುರಾಮವಿಠ್ಠಲ ಜಾನಕೀ ಪ್ರಾಣವಲ್ಲಭ 5
--------------
ಗುರುರಾಮವಿಠಲ
ಭಜನಗೈವ ನಿನ್ನ ದÉೀವಿ ಭುಜಗಭೂಷರಾಣಿಯ ಪ ಭುಜಗಭೂಷರಾಣಿಯೆ ಭೂಜಗತಾಲವೇಣಿಯೆ ಅ.ಪ. ಕಾಲಕಾಲ ಚಿತ್ತ ಕುಮುದ ಬಾಲ ಚಂದ್ರಮಂಡಲೆ ಬಾಲ ಚಂದ್ರಮಂಡಲೆ ವಿಲೋಲ ನೀಲಕುಂಡಲೆ 1 ಚಂಡಶೂಲ ಖಂಡನೈಕ ಚಂಡಶೂಲಧಾರಿಣಿ ಚಂಡಶೂಲಧಾರಿಣಿ ಪ್ರಚಂಡ ಪ್ರಾಣಹಾರಿಣಿ 2 ದೇವಿ ದೇವಿ ಸುಪ್ರಸನ್ನೇ ಭಾವನೈಕ ಗೋಚರೆ ಭಾವನೈಕೆ ಗೋಚರೆ ಸ್ವಭಾವ ಭಾವಿ ಭಾಸುರೆ 3 ಪಂಕಸಕ್ತ ಭಕ್ತಚಿತ್ತ ಸಂಕಟ ಪ್ರಮಾಥಿನೀ ಸಂಕಟ ಪ್ರಮಾಥಿನೀ ಶುಭಕರಾರ್ತಿ ನಾಶಿನೀ4 ಮಾನಿನಿ ಧೇಪುರ ನಿವಾಸಿನೀ 5
--------------
ಬೇಟೆರಾಯ ದೀಕ್ಷಿತರು