ಒಟ್ಟು 615 ಕಡೆಗಳಲ್ಲಿ , 86 ದಾಸರು , 499 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನುದಿನಭವಾಬ್ಧಿಯಲ್ಲಿ ಭವತರಂಗ ರಾಶಿಯಲ್ಲಿಮುಳುಗುತಿಹೆ ಕೈಯ ಪಿಡಿಯೊ ಜನಕ ಕೃಷ್ಣಯ್ಯ ಪ.ಶ್ರೀನಿವಾಸ ನಿನ್ನ ಭಕ್ತಿ ಮಾಡದ ಅಘವಂತನೆಂದುಹೀನ ಜನರ್ಪಾಳಕಿಟ್ಟರೇನ ಹೇಳಲೊನೀನು ಪಾಲಿಪ ರಾಜ್ಯದಲ್ಲಜ್ಞಾನಿ ದೇಶಿಗನೊಬ್ಬ ಕೆಡಲುಹಾನಿ ಹೆಚ್ಚಳ ನಿನ್ನದಲ್ಲೆ ದೀನದಯಾಳು 1ಚಿತ್ತವೇಗಕ್ಕವಧಿ ಇಲ್ಲ ಹೊತ್ತುಕೊಂಡು ಕಂಡ ಕಡೆಗೆಸುತ್ತುತಿದೆ ತನ್ನ ದಳವ ಕೂಡಿ ರಂಗಯ್ಯಕರ್ತನಿನ್ನ ಪಾದದೆಡೆಯೆ ಒತ್ತಿ ನೀನಿದನಾಳಬೇಕುಹೆತ್ತ ತಾಯಿ ನೀನೆ ಗಡಾನೆತ್ತಿಕೊಳ್ಳಯ್ಯ 2ಹಳುವಗಳು ದಾರಿಕಾಣೆ ಸೆಳವಿನೊಳಾಶ್ರಯ ಕಾಣೆನಳಿನನೇತ್ರ ನೀನೆ ಕಾಯೊ ಸುಲಭರೊಡೆಯನೆಲೆಯ ತೋರಾತಂಕಹಾರಿ ಒಲಿದು ವರಾಭಯವ ಬೀರಿಒಲಿಯೊ ಪ್ರಸನ್ವೆಂಕಟಾದ್ರಿನಿಲಯ ಉದಾರಿ 3
--------------
ಪ್ರಸನ್ನವೆಂಕಟದಾಸರು
ಉತ್ಥಾನ ದ್ವಾದಶಿಯ ದಿವಸ(ಕಾರ್ತೀಕ ಶುದ್ಧ ದ್ವಾದಶಿಯ ಉತ್ಸವ)ರಂಭೆ : ಮಾನಿನೀ ಈತನಾರೆಂದೆನೆಗೆ ಪೇಳೆ ಮಾನಿನೀ ಪ.ಮಾನಿನೀಮಣಿ ಈತನ್ಯಾರೆ ಕರುಣಾನಿಧಿಯಂತಿಹ ನೀರೆ ಹಾ ಹಾಭಾನುಸಹಸ್ರ ಸಮಾನಭಾಷಿತ ಮ-ಹಾನುಭಾವನು ಸುಪ್ರವೀಣನಾಗಿಹ ಕಾಣೆ 1ಭಯಭಕ್ತಿಯಿಂದಾಶ್ರಿತರು ಕಾಣಿ-ಕೆಯನಿತ್ತುನುತಿಸಿಪಾಡಿದರು ನಿರಾ-ಮಯ ನೀನೇ ಗತಿಯೆಂದೆಲ್ಲವರು ಹಾ ಹಾಭಯನಿವಾರಣ ಜಯ ಜಯವೆಂದು ನುತಿಸೆ ನಿ-ರ್ಭಯಹಸ್ತತೋರುತ ದಯಮಾಡಿ ಪೊರಟನೆ2ಭೂರಿವಿಪ್ರರ ವೇದ ಘೋಷದಿಂದಸ್ವಾರಿಗೆ ಪೊರಟ ವಿಲಾಸ ಕೌಸ್ತು-ಭಾರತ್ನ ಹಾರ ಸುಭಾಸ ಹಾ ಹಾಚಾರುಕಿರೀಟಕೇಯೂರಪದಕಮುಕ್ತಾಹಾರಾಲಂಕಾರ ಶೃಂಗಾರನಾಗಿರುವನು 3ಸೀಗುರಿ ಛತ್ರ ಚಾಮರದ ಸಮವಾಗಿ ನಿಂದಿರುವ ತೋರಣದ ರಾಜಭೋಗನಿಶಾನಿಯ ಬಿರುದ ಹಾ ಹಾಮಾಗಧಸೂತ ಮುಖ್ಯಾದಿ ಪಾಠಕರ ಸ-ರಾಗ ಕೈವಾರದಿ ಸಾಗಿ ಬರುವ ಕಾಣೆ 4ಮುಂದಣದಲಿ ಶೋಭಿಸುವ ಜನಸಂದಣಿಗಳ ಮಧ್ಯೆ ಮೆರೆವ ತಾರಾವೃಂದೇಂದುವಂತೆ ಕಾಣಿಸುವ ಹಾಹಾಕುಂದಣಖಚಿತವಾದಂದಣವೇರಿ ಸಾ-ನಂದದಿ ಬರುವನು ಮಂದಹಾಸವ ಬೀರಿ 5ತಾಳ ಮೃದಂಗದ ರವದಿಶ್ರುತಿವಾಲಗಭೇರಿರಭಸದಿ ಜನಜಾಲಕೂಡಿರುವ ಮೋಹರದಿ ಹಾಹಾಸಾಲು ಸಾಲಾಗಿ ಬೊಂಬಾಳ ದೀವಟಿಗೆ ಹಿ-ಲಾಲು ಪ್ರಕಾಶದಿ ಲೋಲನಾಗಿಹ ಕಾಣೆ 6ಊರ್ವಶಿ: ಈತನೆ ಭಾಗ್ಯನಿಧಿ ನೋಡೆ ನೀ ಮುದದಿ ಪ.ಈತನೆ ಈರೇಳು ಲೋಕದದಾತನಾರಾಯಣ ಮಹಾ ಪುರು-ಹೂತ ಮುಖ್ಯಾಮರವಿನುತನಿ-ರ್ಭೀತ ನಿರ್ಗುಣ ಚೇತನಾತ್ಮಕ ಅ.ಪ.ಮೀನ ರೂಪವೆತ್ತಾಮಂದರಪೊತ್ತಭೂನಿತಂಬಿನಿಯ ಪ್ರೀತಮಾನವಮೃಗಾಧಿಪ ತ್ರಿವಿಕ್ರಮದಾನಶಾಲಿ ದಶಾನನಾರಿ ನ-ವೀನ ವೇಣುವಿನೋದ ದೃಢ ನಿ-ರ್ವಾಣ ಪ್ರವುಢ ದಯಾನಿಧಿ ಸಖಿ 1ವಾರಿಜಾಸವಾನವಂದಿತ ಶ್ರೀಪಾದಯುಗ್ಮವತೋರಿಕೊಂಬುವ ಸಂತತಕೇರಿಕೇರಿಯ ಮನೆಗಳಲಿ ದಿ-ವ್ಯಾರತಿಯ ಶೃಂಗಾರ ಭಕ್ತರ-ನಾರತದಿ ಉದ್ಧಾರಗೈಯಲುಸ್ವಾರಿ ಪೊರಟನು ಮಾರಜನಕನು 2ಮುಗುದೆ ನೀ ನೋಡಿದನು ಕಾಣಿಕೆಯ ಕ-ಪ್ಪಗಳ ಕೊಳ್ಳುವನು ತಾನುಬಗೆಬಗೆಯ ಕಟ್ಟೆಯೊಳು ಮಂಡಿಸಿಮಿಗಿಲು ಶರಣಾಗತರ ಮನಸಿನಬಗೆಯನೆಲ್ಲವ ಸಲ್ಲಿಸಿ ಕರುಣಾಳುಗಳ ದೇವನು ಕರುಣಿಸುವ ನೋಡೆ 3ರಂಭೆ : ದೃಢವಾಯಿತೆಲೆ ನಿನ್ನ ನುಡಿಯು ಸುರಗಡಣಓಲಗಕೆ ಇಮ್ಮಡಿಯು ಜನ-ರೊಡಗೂಡಿ ಬರುತಿಹ ನಡೆಯು ಹಾ ಹಾಮೃಡಸರೋಜ ಸುರಗಡಣ ವಂದಿತಕ್ಷೀರಕಡಲ ಶಯನ ಜಗದೊಡೆಯನಹುದು ಕಾಣೆ 1ಮದಗಜಗಮನೆ ನೀ ಪೇಳೆ ದೇವಸದನವ ಪೊರಡುವ ಮೊದಲೇ ಚಂದ-ನದಪಲ್ಲಂಕಿಯ ತಂದು ಮ್ಯಾಲೆ ಹಾ ಹಾಮುದದಿಂದ ಬಾಲಕರೊದಗಿ ಸಂತೋಷದಿಚದುರತನದಿ ಪೋಗುವನು ಪೇಳೆಲೆ ನೀರೆ 2ಊರ್ವಶಿ: ನಾರೀಮಣಿ ನೀ ಕೇಳೆ ಚಕ್ರೋತ್ಸವಶ್ರೀರಮಾಧವನ ಲೀಲೆಘೋರದೈತ್ಯಕುಠಾರ ಲಕ್ಷ್ಮೀನಾರಾಯಣನ ಬಲಕರ ಸರೋಜದಿಸೇರಿ ಕುಳಿತ ಗಂಭೀರ ದಿನಪನಭೂರಿತೇಜದಿ ಮೆರೆವುದದು ತಿಳಿ 1ದೊರೆಯು ಬರುವನು ಎಂದು ಎಲ್ಲರಿಗೆ ಗೋ-ಚರಿಸುವನೊಲಿದುಇಂದುತರ ತರದ ಆರತಿಗಳನು ನೀವ್ಧರಿಸಿ ನಿಂದಿರಿಯೆಂದು ಜನರಿಗೆ-ಚ್ಚರಿಗೆಗೋಸುಗ ಮನದ ಭಯವಪ-ಹರಿಸಿ ಬೇಗದಿ ಪೊರಟು ಬಂದುದುರಂಭೆ :ಸರಸಿಜನಯನೆ ನೀ ಪೇಳೆಸೂರ್ಯಕಿರಣದಂತಿಹುದೆಲೆ ಬಾಲೆ ಸುತ್ತಿಗೆರಕವಾಗಿಹುದು ಸುಶೀಲೆ ಆಹಾಹರಿಯ ವೈಕುಂಠ ನಗರದಂತೆ ಜ್ಯೋತಿ ವಿ-ಸ್ತರವಾಗಿ ಸುತ್ತಿನೊಳ್ ಮೆರೆವುದಿದೇನೆಲೆ 1ಊರ್ವಶಿ : ಸಾದರದಲಿ ನೀ ಕೇಳೆ ಕಾರ್ತಿಕ ಶುದ್ಧದ್ವಾದಶಿಯೊಳಗೆ ಬಾಲೆಮಾಧವನ ಪ್ರೀತ್ಯರ್ಥವಾಗಿ ಶು-ಭೋದಯದಿ ಸಾಲಾಗಿ ದೀಪಾರಾಧನೆಯ ಉತ್ಸಹದ ಮಹಿಮೆಯಸಾದರದಿ ನೀ ನೋಡೆ ಸುಮನದಿ 1ನಿಗಮಾಗಮದ ಘೋಷದಿ ಸಾನಂದ ಸು-ತ್ತುಗಳ ಬರುವ ಮೋದದಿಬಗೆ ಬಗೆಯ ನರ್ತನ ಸಂಗೀತಾದಿಗಳ ಲೋಲೋಪ್ತಿಯ ಮನೋಹರದುಗುಮಿಗೆಯ ಪಲ್ಲಂಕಿಯೊಳು ಕಿರು 2ನಗೆಯ ಸೂಸುತ ನಗಧರನು ಬಹಚಪಲಾಕ್ಷಿ ಕೇಳೆ ಈ ವಸಂತ ಮಂ-ಟಪದಿ ಮಂಡಿಸಿದ ಬೇಗಅಪರಿಮಿತ ಸಂಗೀತ ಗಾನ ಲೋ-ಲುಪನು ಭಕ್ತರ ಮೇಲೆ ಕರುಣದಿಕೃಪೆಯ ಬೀರಿ ನಿರುಪಮ ಮಂಗಲಉಪಯಿತನು ತಾನೆನಿಸಿ ಮೆರೆವನು 3ಪಂಕಜಮುಖಿನೀ ಕೇಳೆ ಇದೆಲ್ಲವುವೆಂಕಟೇಶ್ವರನ ಲೀಲೆಶಂಕರಾಪ್ತನು ಸಕಲ ಭಕ್ತಾತಂಕವನು ಪರಿಹರಿಸಿಕರಚಕ್ರಾಂಕಿತನು ವೃಂದಾವನದಿ ನಿಶ್ಯಂಕದಿಂ ಪೂಜೆಯಗೊಂಡನು 4ಕಂತುಜನಕನಾಮೇಲೆ ಸಾದರದಿ ಗೃ-ಹಾಂತರಗೈದ ಬಾಲೆಚಿಂತಿತಾರ್ಥವನೀವ ಲಕ್ಷ್ಮೀಕಾಂತ ನಾರಾಯಣನು ಭಕುತರತಿಂಥಿಣಿಗೆ ಪ್ರಸಾದವಿತ್ತೇ-ಕಾಂತ ಸೇವೆಗೆ ನಿಂತಮಾಧವ5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಎನ್ನ ಮನದ ಡೊಂಕ ತಿದ್ದಿ-ಚರಣದಲ್ಲಿ ಸೇರಿಸೋ |ನಿನ್ನ ಸೇವಕನಾದ ಮೇಲೆಇನ್ನು ಸಂಶಯವೇಕೆ ಕೃಷ್ಣ ಪಉದಯವಾದರೆ ಊಟದ ಚಿಂತೆ ಅದರ ಮೇಲೆ ಭೋಗದ ಚಿಂತೆ |ಹದಿನಾಲ್ಕು ಲೋಕಂಗಳನಾಳಬೇಕೆಂಬ ಚಿಂತೆ ||ಇದು ಪುಣ್ಯ ಪಾಪವೆಂದು ಹೃದಯದಲಿ ಭಯವಿಲ್ಲದಲೆ |ಮದ ಮೋಹಿತನಾದೆ ನಿನ್ನ ಪದವ ನಂಬದೆ-ದಯಾಳೊ 1ನೆರೆಮನೆಗಳ ಭಾಗ್ಯವ ನೋಡಿ-ತರಹರಿಸುತ ಅಸೊಯೆಯಿಂದ |ಹರಿಯ ಸ್ಮರಣೆಗೆ ವಿಮುಖನಾದೆ - ನರರಸ್ತುತಿಯ ನಾ ಮಾಡಿದೆ ||ಪರರ ಸತಿಗೆ ಪರರನ್ನಕೆ ತಿರುಗಿ ತಿರುಗಿ ಚಪಲನು ಆದೆ |ಗುರುಹಿರಿಯರ ದೂಷಿಸುತಲಿ ಮರುಳನಾದೆ ದೀನಶರಣ್ಯ 2ಅಗಣಿತಸುಖ ಬಂದರೆ ನಾನು -ಅಗಣಿತದುಃಖಕೆ ಹರಿಯೆನ್ನುವೆನು |ಜಗದೊಳಾವ ಲಾಭವು ಬಂದರು ಧನಿಯು ನಾನೆ ಎಂಬೆ ||ಮಿಗೆ ಹಾನಿಗೆ ಹರಿಯನು ದೂಷಿಸಿನೆಗೆದು ಪತಂಗವು ಕಿಚ್ಚಲಿ ಬೀಳುವ |ಬಗೆ ನಾನಾದೆನುಪುರಂದರವಿಠಲನಖಗರಾಜಸುವಾಹನ ಶ್ರೀ ಕೃಷ್ಣ 3
--------------
ಪುರಂದರದಾಸರು
ಎಲೆ ಮನವೆ ನೀ ತಿಳಿಹರಿ ಸರ್ವೋತ್ತಮನೆಂದು |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಸುಲಲಿತಾತ್ಮನ ಭಜಿಸಿ ಸುಖಿಯಾಗೊ ಮನವೆ ಪ.ಇಕ್ಷುದಂಡಗಳಿರಲು ಇಂಧನವ ಮೇಲೇಕೆ |ಅಕ್ಷಯ ಪಾತ್ರೆಯಿರಲು ಹಸಿವೆಯೆನಲೇಕೆ |ನಿಕ್ಷೇಪ ನಿಧಿಯಿರಲು ನಿರುತ ದಾರಿದ್ರ್ಯವೇಕೆ |ಪಕ್ಷಿವಾಹನನಿರಲು ಪರದೈವವೇಕೆ 1ಸುರಧೇನು ಕೈಸೇರಿ ಸುಖವಿಲ್ಲವೆನಲೇಕೆ |ಗರುಡ ಮಂತ್ರವ ಜಪಿಸಿ ಗರಳಭಯವೇಕೆ ||ತರಣಿಕಿರಣಗಳಿರಲು ಹಲವು ಜ್ಯೋತಿಗಳೇಕೆ |ಮುರಹರನ ಪೂಜಿಸದೆ ಮುಂದುಗೆಡಲೇಕೇ 2ಭಾವಶುದ್ಧಿಗಳಿರಲು ಬಯಲಡಂಬರವೇಕೆ |ದೇವತಾ ಸ್ತುತಿಯಿರದ ದೇಹವೇಕೆ ||ಆವಗಂ ಹರಿಯೆನದೆ ಅನ್ಯಚಿಂತೆಗಳೇಕೆ |ದೇವ ಪುರಂದರವಿಠಲನಿರಲು ಭಯವೇಕೆ 3
--------------
ಪುರಂದರದಾಸರು
ಏಕೆ ಚಿಂತಿಪೆ ಬರಿದೆ ನೀ -ವಿಧಿಬರೆದ - |ವಾಕುತಪ್ಪದು ಪಣೆಯೊಳುಪಹುಟ್ಟುವುದಕೆ ಮೊದಲೆ ತಾಯ್ಮೊಲೆಯೊಳು |ಇಟ್ಟಿದ್ದೆಯೊ ಪಾಲನು ||ತೊಟ್ಟಿಲೊಳಿರುವಾಗಲೆ - ಗಳಿಸಿ ತಂ - |ದಿಟ್ಟು ಕೊಂಡುಣುತಿದ್ದೀಯಾ 1ಉರಗವೃಶ್ಚಿಕಪಾವಕ-ಕರಿಸಿಂಹ |ಅರಸು ಹುಲಿ ಚೋರ ಭಯವು ||ಹರಿಯಾಜೆÕಯಿಂದಲ್ಲದೆ - ಇವು ಏಳು - |ಶರಧಿಪೊಕ್ಕರು ಬಿಡವೊ- ಮರುಳೆ2ಇಂತು ಸುಖ - ದುಃಖದೊಳ್ಸಿಲುಕಿ - ಮರುಗಿ ನೀನು - |ಭ್ರಾಂತನಾಗಿ ಕೆಡಬೇಡವೊ ||ಸಂತೋಷದಿಂದ ಅರ್ಚಿಸಿ - ಭಜಿಸೋ ನೀ - |ಸಂತತಪುರಂದರವಿಠಲನ - ಮರುಳೆ3
--------------
ಪುರಂದರದಾಸರು
ಏನಿದ್ದೀತೇನಿದ್ದೀತೋ ಈ ನಾಮದಲ್ಲೇನಿದ್ದೀತೇನಿದ್ದೀತೋ ಪಏನಿದ್ದೀತೇನಿದ್ದೀತೇನ ಪೇಳಲಿ ನಾಜಾನಕೀಶನ ನಾಮ ಹಾನಿಮಾಡದೆ ಕಾಯ್ವುದೇ ಅ.ಪಜ್ಞಾನ ಕೊಡುವುದಲ್ಲೋ ಅಜ್ಞಾನ ಖೂನಕ್ಕುಳಿಸದಿರೆಲೋಸಾನುರಾಗದಿ ನಿಜಜ್ಞಾನ ಬೋಧಿಸಿ ಮಹಹೀನ ಬವಣೆಕಳೆದಾನಂದ ಕೊಡುವುದು 1ನರಕಕ್ಹೋಗುವನನ್ನು ಭರದಿಕರುಣಿಸಿ ಪದವನ್ನುಕರುಣದಿತ್ತು ಹರಿಶರಣರೊಳಾಡಿಸಿಪರಮಪರತರವೆನಿಪ ಸ್ಥಿರಸುಖ ಪಾಲಿಸಿತು2ಜರಮರಣಳಿಯುವುದು ಅದರೊಳ್ಕರುಣವೆ ತುಂಬಿಹ್ಯದುದುರಿತದಿ ಸಿಲ್ಕೆಲ್ಲಿ ಕರೆದರು ಅಲ್ಲಿಗೆತ್ವರಿತದೊದಗಿ ಬಂದು ನಿರುತದಿಂ ಸಲಹುವುದು 3ಭವಬಾಧೆ ಕಳೆಯುವುದುಜವನ ಭಯವೆ ತಪ್ಪಿಸುತಿಹ್ಯದುದಿವರಾತ್ರಿ ಎನ್ನದೆ ನಯದಿ ಭಜಿಪರೊಳುದಯದಿ ನಿಂತು ತಾನೆ ಜಯವ ನೀಡುವುದು 4ಅಂತ್ಯಪಾರಿಲ್ಲ ಕಾಣೋ ಶ್ರೀರಾಮನಾಮದ್ದೆಂಥ ಶಕ್ತಿಯೇನೋಚಿಂತಿಪ ಭಕ್ತರ ಅಂತರಂಗವನರಿತುಸಂತಸ ನೀಡಿ ಮುಕ್ತಿಸಂಪದ ಕೊಡುವುದು 5
--------------
ರಾಮದಾಸರು
ಏನು ಭ್ರಮೆ ಮನುಜ ನಿನಗ್ಯಾಕೆ ಹರಿಭಟರಹಗೆಪರಮಾನಿನಿಯ ಸಂಗ ನರಕದೊಳು ಬಲುಭಂಗಪ.ಮಬ್ಬು ಮುಸುಕಿದ ಪರಿಯ ನಿಜಸತಿಯ ನೋಡದೆ ಮತ್ತೊಬ್ಬಳ ಕುಚಕೆ ಕಮಲವ ಹೋಲಿಸಿಕೊಬ್ಬು ಮೈಯವಳ ಸಖವಿಡಿದರದು ಮಹಾಶೋಕತಬ್ಬಿಬ್ಬುಗೊಳುತ ನಿರಯಂಗಳುಂಬೆ 1ಇಂದುಮುಖಿಯಳ ಸಂಗ ಎನಗಿಂದು ಕೈಗೂಡಲೆಂದೊಬ್ಬ ಕುಂಟಣಿಗೆ ಧನವಿತ್ತೆ ನಿನ್ನಸಂದುಗಳ ಕಡಿದು ವೈತರಣಿ ಸಲಿಲದಿ ದೇಹಹೊಂದಿಸುವರುಂಟು ಕಾಲನ ಕುಂಟಣಿಗರು 2ಚಿಕ್ಕಬಲೆಯರ ಕಂಡು ಚಂಚಲಿತನಾಗ್ಯವರವಕ್ರನೋಟದಿ ಹಲವು ಸನ್ನೆಯಿಂದತರ್ಕೈಸಬೇಕೆಂಬ ಲಂಪಟದಿ ತಪ್ತಾದಶರ್ಕರಾಯಸ ಸ್ತಂಭವಪ್ಪಿ ಪೊರಳೇಳುವೆ 3ಹರಿದಾಸರಾಚಾರ ಕೇಳಲಸಿ ಪಳಿದೊರೆದುಒರಟು ಮಾತಿನ ಸರಕಲಾಯುಗಳಿದೆವಿರತಿಜ್ಞಾನಾನ್ವಿತರ ವೆರಸದಂಧಕನಾದೆತರಣಿಯೊಳು ಹೊಂಬುಳವು ಗರುವಿಸಿದ ತೆರದಿ 4ಜಂಬುಕವು ಹರಿಯೊಡನೆ ಸರಸವಾಡಿದ ಪರಿಯೊಳಂಬುಜಾಕ್ಷನ ದಾಸನಿಂದೆ ಮಾಡಸಲ್ಲಕುಂಭಿಪಾಕಿನಿಯಲ್ಲಿ ಮರಳಿಸುವ ಭಯವರಿತುನಂಬು ಪ್ರಸನ್ವೆಂಕಟೇಶನಂಘ್ರಿಯ 5
--------------
ಪ್ರಸನ್ನವೆಂಕಟದಾಸರು
ಏನೊ ರಂಗ ನಿನ್ನ ವನಿತೆಯೊಳಪರಾಧಧ್ಯಾನಿಸಲು ದೊರಕೊಂಬುದೆನೀನಗಲಬೇಡ ತರಳೆಗಭಯವ ಕೊಟ್ಟುಮೌನದಲಿ ನಡೆಯೊ ಮನೆಗೆ ಬೇಗ ಪ.ಸ್ಮರನ ದಾಳಿಗೆ ಕಂದಿ ಕುಂದಿ ಬಳ್ಕಡಿಯಿಡುತವಿರಹಾಗ್ನಿಗನ್ನತೊರೆದು ಸ್ಮರಿಸುವಳುನಿರುತ ನಿನ್ನಯ ಗುಣಾವಳಿಗಳನುಕರಿಸೋತರಳೆಯ ಕೂಡೊ ಕೋಪ ಬೇಡೊ ನೋಡೊ 1ಪರಮಪುರುಷ ನೀ ಅವಳ ಜರಿದ ಕಾರಣಸೋಮಕಿರಣ ವಿಷಸಮ ಝಳದಪರಿತೋರಿ ಬಳಲುವಳು ಸಖಿಭೃಂಗ ಕಳಕಕೆತರಳೆ ಕೂಡೊ ಕೋಪ ಬೇಡೊ ನೋಡೊ 2ನಲ್ಲ ನಿನ್ನ ಸಂಗ ಬಯಕೆಗೆ ಕಣ್ಣ ತೇಲಿಸುವಳಲ್ಲೊ ತೊದಲ್ಲು ನುಡಿವಳಲ್ಲೊಮೆಲ್ಲನೆದೆ ನೋಡಿ ಸುಯಿಗರೆವಳು ಖಗಾಂಕಜನಬಿಲ್ಲಿಗೆಬಲಿಕೊಡಲಿ ಬಾರೊ ತೋರೊ3ಪಯನಿಧಿ ಒಡೆಯನ್ಯಾಕೆ ಬಾರನೆಂದವಳು ತನ್ನಯ ಸುದತಿಯರ ಬೈವಳುನಯನಧsರವಿರಸಿ ಕಂಬನಿದುಂಬುವಳು ಗಡಪ್ರಿಯಳರಸೆಜಾರವಿರಸಹರಿಸೊ4ನಿನ್ನ ನಂಬಿದಳಿಗಿಂತಾಗುತಿರೆ ಸುಮ್ಮನಿಹೆಎನ್ನ ಹೇಯ ಬಾರದೆನಲುಉನ್ನತ ಹಯವನೇರಿ ಬಂದವಳ ನೆರೆದ ಪ್ರಸನ್ನ ವೆಂಕಟನಾಯಕರಸಿಕ5
--------------
ಪ್ರಸನ್ನವೆಂಕಟದಾಸರು
ಒಂದೇ ನಾಮವು ಸಾಲದೆ - ಶ್ರೀಹರಿಯೆಂಬಒಂದೇ ನಾಮವು ಸಾಲದೆ ಪಒಂದೇ ನಾಮವು ಭವಬಂಧನ ಬಿಡಿಸುವು |ದೆಂದು ವೇದಂಗಳಾನಂದದಿ ಸ್ತುತಿಸುವ ಅ.ಪಉಭಯರಾಯರು ಸೇರಿ ಮುದದಿ ಲೆತ್ತವನಾಡಿ |ಸಭೆಯೊಳು ಧರ್ಮಜ ಸತಿಯ ಸೋಲೆ ||ನಭಕೆ ಕೈಯೆತ್ತಿ ದ್ರೌಪದಿ ಕೃಷ್ಣಾ ಎನ್ನಲು |ಇಭರಾಜಗ ಮನೆಗಕ್ಷಯವಸ್ತ್ರವನಿತ್ತ 1ಹಿಂದೊಬ್ಬ ಋಷಿಪುತ್ರನಂದು ದಾಸಿಯ ಕೂಡೆ |ಸಂದೇಹವಿಲ್ಲದೆ ಹಲವುಕಾಲ||ದಂದುಗದೊಳು ಸಿಲುಕಿ ನಿಂದಂತ್ಯ ಕಾಲದಿ |ಕಂದನಾರಗನೆಂದು ಕರೆಯಲಭಯವಿತ್ತ 2ಕಾಶಿಯ ಪುರದೊಳು ಈಶ ಭಕುತಿಯಿಂದ |ಸಾಸಿರನಾಮದ ರಾಮನೆಂಬ ||ಶ್ರೀಶನನಾಮದ ಉಪದೇಶ ಸತಿಗಿತ್ತ |ವಾಸುದೇವಶ್ರೀಪುರಂದರ ವಿಠಲನ 3
--------------
ಪುರಂದರದಾಸರು
ಔತುಕೊಂಡಿ ಯಾಕೊ ನರಹರಿಪ್ರಾರ್ಥನೆಯನ್ನು ಕೇಳೊ ಸ್ವಾಮಿ ಪವೇದ ತಂದುಭಾರಪೊತ್ತುಕೋರೆ ತೋರಿ ಕರುಳ ಬಗೆದುಬೇಡಿ ಭೂಮಿ ದೂಡಿನೃಪರಸಾಗರವ ಬಂಧಿಸಿದ ಭಯವೋ 1ಕದ್ದು ಬೆಣ್ಣೆ ಕಳ್ಳನೆನಿಸಿವದ್ದು ತ್ರಿಪುರಾಸುರರ ಸದೆದುಹದ್ದನೇರುವುದನೆ ಬಿಟ್ಟುಹಯವನೇರಿದ ಭಯವೋ ಸ್ವಾಮಿ 2ತರಳಗೊಲಿದು ಬರಲು ನಿನ್ನಇರಿಸಿ ಸ್ನಾನಕೆನುತ ಪೋಗಿತ್ವರದಿ ಬಂದು ನೋಡಲು ಅದ್ಭುತದಿ ಬೆಳೆದ ಭಯವೋ ದೇವ 3ನಿಲುಕದಿರಲು ನಿನ್ನವದನಯುವಕ ನೋಡಿ ಮೊರೆಯನಿಡಲುತವಕಿಸುವಿ ಬಾಲಕನೆ ನಿನ್ನಸಮಕೆ ಎನ್ನ ಮಾಡಿಕೊ ಎಂದು 4ಸಿರದಿ ಕರವನಿಡುತ ತನ್ನಸಮಕೆ ಬರುವ ತೆರದಿ ನಿನ್ನಸಿರವ ಪಿಡಿದು ಬಿತ್ತಿ ಸ್ತುತಿಸೆಕುಳಿತೆ ಕೂಡಲಿಯ ತೀರದಲಿ 5ಭಕ್ತರೆಲ್ಲ ನೆರೆದು ನಿನ್ನಭಕ್ತಿಪಾಶದಿಂದ ಬಿಗಿದುಇಚ್ಛೆ ಬಂದ ತೆರದಿ ಕುಣಿಸೆಮೆಚ್ಚಿಅವರಪೊರೆವೆÀ ದೇವ6ಬಂದ ಜನರು ಛಂದದಿಂದತುಂಗಭದ್ರೆ ಸಂಗಮದಲಿಮಿಂದು ನಿನ್ನ ವಂದಿಸುವರೊತಂದೆ ಕಮಲನಾಭವಿಠ್ಠಲ 7
--------------
ನಿಡಗುರುಕಿ ಜೀವೂಬಾಯಿ
ಕಾಯಬೇಕೆನ್ನ ಗೋಪಾಲ ಬಂದು |ಪಾಯವನರಿಯೆನು ಭಕುತರ ಪಾಲಪಹಲವು ಜನ್ಮಗಳೆತ್ತಿ ಬಂದೆ-ಮಾಯಾ-|ಮಲವೆಂಬುದರಿಯದೆ ಭವದೊಳು ನೊಂದೆ ||ಬಲು ಭಯವಾಯಿತು ಮುಂದೆ-ನೀನು-|ಸುಲಭನೆಂದುಕೇಳಿಶರಣೆಂದೆ ತಂದೆ1ವಿತ್ತದೊಳಗೆ ಮನವಿಟ್ಟು-ನಿನ್ನ-|ಉತ್ತಮ ನಾಮದ ಸ್ಮರಣೆಯ ಬಿಟ್ಟು ||ಮತ್ತನಾದೆನು ಮತಿಗೆಟ್ಟು-ಇದ-|ಚಿತ್ತದಲಿ ತಿಳಿದಿ ಬಲು ದಯವಿಟ್ಟು 2ಜರುಗಿದ ಪಾಪಂಗಳೆಲ್ಲ-ಅನ್ಯ-|ನರರೇನ ಬಲ್ಲರು ಯಮಧರ್ಮ ಬಲ್ಲ ||ನರಕಕೆ ಒಳಗಾದೆನಲ್ಲ-ಸಿರಿ-|ವರನಾರಾಯಣ ಪುರಂದರವಿಠಲ 3
--------------
ಪುರಂದರದಾಸರು
ಕಾಯೋ ಕೃಷ್ಣಭವತೋಯದಿ ಮುಳುಗಿ ಉ- |ಪಾಯವ ಕಾಣದೆ ಬಾಯ ಬಿಡುವೆನೋ ಕಾಯೋ ಕಾಯೋ ಪಭಾಗವತರ ಪ್ರಿಯ ನಾಗಭೂಷಣಸಖ|ನೀಗಿಭಯವಕರಬೇಗನೆ ಪಿಡಿಯೊ 1ಇಂದಿರೆಯರಸ ಮುಕುಂದ ಯಶೋದೆಯ |ನಂದನ ಕರುಣಿಸೊ ಇಂದೀವರಾಕ್ಷ2ಸಿಂಧುಶಯನ ಪೊರೆಯೆಂದು ಕರೆಯಕರಿ|ಬಂದು ಸಲಹಿದೆಯೋಮಂದದಯಾಳು3ಕುರುಪ ಪಿಡಿಯಲುದ್ಧರಿಸಿದೆ ತರುಣಿಯ |ನರಕಹ ನಿನಗೆ ನಾ ಪರಕೀಯನಲ್ಲೋ 4ಜಾನಕೀವಲ್ಲಭನೀನೇ ಮರೆದುಬಿಡೆ |ಕಾಣೆನೊ ಒಬ್ಬರ ನಾನವನಿಯೊಳು5ಭಕುತರಿಗೋಸುಗ ಹತ್ತವತಾರವ |ಅರ್ತಿಂದಲಿ ಕೊಂಡುತ್ತಮ ಶ್ಲೋಕ6ದ್ವೇಷಿಗಳೆನ್ನನು ಘಾಸಿಸದಂದದಿ |ಪೋಷಿಸುವುದು ಪ್ರಾಣೇಶ ವಿಠ್ಠಲನೇ 7
--------------
ಪ್ರಾಣೇಶದಾಸರು
ಕಾಳೀ ದ್ರೌಪದಿ ಭಾರತೀನಿನ್ನಪಾದಕೀಲಾಲಜನುತಿಪೆಪ್ರತಿ||ವೇಳೆಯೊಳಗೂ ಲಕ್ಷ್ಮೀಲೋಲನ ಚರಣಾಬ್ಜ |ವಾಲಗವೀಯೇ ಸುಶೀಲೆ ಸ್ವಯಂಭುಜೆ ಪಇಂದ್ರಸೇನಾ ನಳನಂದಿನಿ ಶಿವಕನ್ಯಾ |ನಂದಪೂರಿತಳೆ ಚಂದ್ರಾ |ನಿಂದಕರಿಪುಜ್ಞಾನಸಾಂದ್ರೆ ಸುಪತಿವ್ರತೆಕಂದುಗೊರಳ ವಾರುಣೀಂದ್ರ ಅಂಡಜಾಧಿಪ ||ಇಂದ್ರನಿರ್ಜರವೃಂದ ಮುನಿಗಣವಂದಿತ ಪದಾರವಿಂದೆ ಭವದಲಿನೊಂದೆ ಭಯವಾರೆಂದು(ನಿನ್ನೊಡಿವೆಂದದಲಿ ನಿನ್ನಡಿ ಪೊಂದಿ ಬೇಡುವೆ ನಂದದಲಿ)ಕೊಡೆ (ಅ)ಮಂದಕರುಣೆ 1ತರಣಿಯಾನಂದ ಭಾಸೆ |ಪ್ರದ್ಯುಮ್ನ ದೇವರ ಸುತೆಕ್ಲೇಶಹರಿಸೆ |ಹರಹಿ ಯನ್ನಯ ಮೇಲೆ ಕರುಣಾಪಾಂಗದ ದೃಷ್ಟಿ |ದುರುಳಮತಿ ಪರಿಹರಿಸಿತವಕಹರಿ-ಗೆರಗೊ ಮನ ಕೊಡುಪರಮಧಾರ್ಮಿಕೆಕರೆವೆ ಬಂದೀಗಿರೆ ಹೃದಯಾಬ್ಜದಿ |ಉರು ಪರಾಕ್ರಮೆಪರತರಳೆ ಸದಾಪೊರೆಯೆ ಬಿಡದಲೆಕರಮುಗಿವೆ 2ವಾಣೀ ಸುಂದರಿ ವರದೆ ಸಾಧ್ವೀ |ವೀಣಾಪಾಣಿ ಪೇಳುವೆನೆ ಇದೇ |ಹೀನ ವಿಷಯವಲ್ಲೆ ಪೋಣಿಸಿ ಸುಮತಿ ಶ್ರೀಪ್ರಾಣೇಶ ವಿಠಲನ ಧ್ಯಾನದೊಳಿಹ ಮ-ಹಾನುಭಾವರ ಸಂಗ ಪಾಲಿಸೇ ||ಮಾನಿನೀ ಕುಲಮೌಳಿಮಣಿಚಂ |ದ್ರಾನನೆ ಮದಗಜಗಮನೆ ಸು-ಶ್ರೋಣಿ ಅಷ್ಟಾಪದ ಸುಕಾಂತೆ 3
--------------
ಪ್ರಾಣೇಶದಾಸರು
ಕೆಂಡಕ್ಕೆ ಗೊರಲಿ ಮುತ್ತುವುದುಂಟೆಪಾಂಡುರಂಗನ ದಾಸರಿಗೆ ಭಯವುಂಟೆ ? ಪ.ಆನೆ ಸಿಂಹನ ಕೂಡ ಅಣಕವಾಡುವುದುಂಟೆಶ್ವಾನಗೆ ಹುಲಿಯೊಳು ಸರಸವುಂಟೆ ?||ಏನೆಂಬೆ ಎರಡಿಲ್ಲದಿರುಳು ಹಗಲು ನಿನ್ನಧ್ಯಾನ ಮಾಡುವರಿಗೆ ನರಕವುಂಟೆ ? ಸ್ವಾಮಿ ? 1ಕತ್ತಲೆ ರವಿಯನು ಕವಿದು ಮುಚ್ಚುವುದುಂಟೆಹತ್ತಿ ಸರ್ಪನ ಕಪ್ಪೆ ನುಂಗುವುದುಂಟೆ ? ||ಅತ್ತಿತ್ತ ಮನವನು ಹರಿಬಿಡದಲಿ ಏಕಚಿತ್ತದಿ ನೆನೆವಗೆ ನರಕವುಂಟೆ ಸ್ವಾಮಿ 2ಆ ಮಾರುತನ ಗುದ್ದಿ ಹದ್ದು ನೋಯಿಸಲುಂಟೆಹೇಮಗಿರಿಗೆವಜ್ರ ಸಿಡಿಯಲುಂಟೆ ?ಸ್ವಾಮಿ ಶ್ರೀ ಪುರಂದರವಿಠಲರಾಯನೆ ನಿನ್ನನಾಮಧಾರಿಗಳಿಗೆ ನರಕವುಂಟೆ ಸ್ವಾಮಿ ? 3
--------------
ಪುರಂದರದಾಸರು
ಕೈಗೂಡಿಸು ಬಯಕೆ ರಂಗಾಕೈಗೂಡಿಸು ಬಯಕೆ ಪ.ಸಂತೆಯ ಬಳಗದ ಸಂಗತಿನೀಗಿಸಂತರ ಪದಪಲ್ಲವ ನೆಳಲಾಗಿಚಿಂತನೆ ಮೂರುತಿ ಚಿಂತನೆಗೊದಗಿಪ್ರಾಂತದ ಪಯಣ ಮನೋರಮವಾಗಿ 1ಚೆನ್ನಿಗ ಮೈಸುಟ್ಟರಿವ್ಯೆಂತಾಗಿಛಿನ್ನಾಗುವ ಮೈಯಂಜಿಕೆನೀಗಿನನ್ನ ರೂಹು ನನಗಿದ್ದಂತಾಗಿಚಿನ್ಮಯ ಬಿಂಬದ ಒಲುಮ್ಯೆನಗಾಗಿ 2ಬಯಲಿಗೆ ಬಿನ್ನಹವ ಮಾಡ್ಯೇನುಬಯಸುವಪರಿನೀಡುವ ದೊರೆ ನೀನುಭಯವಿಲ್ಲದೆ ಮೊರೆ ಹೊಕ್ಕೆನು ನೀಡಾಭಯವರದ ಪ್ರಸನ್ವೆಂಕಟ ಪ್ರೌಢಾ 3
--------------
ಪ್ರಸನ್ನವೆಂಕಟದಾಸರು