ಒಳಿತು ಈಶಕುನ ಫಲವಿಂದು ನಮಗೆಜಲಜನಾಭನ ಸಂಗ ದೊರಕುವುದೆ ರಮಣಿ ಪ.ವಾಮಗರುಡನನೋಡು ವಾಯಸದ ಬಲವನ್ನುಕೋಮಲಾಂಗಿಯರೈದು ಪೂರ್ಣಕುಂಭ ||ಸಾಮಾನ್ಯವೇಗೌಳಿ ಬಲಕಾಗಿ ನುಡಿಯುತಿದೆಪ್ರೇಮದಲಿ ಮಧುರ ವಚನವ ಕೇಳು ರಮಣಿ 1ಮೊಳಗುತಿವೆಭೇರಿದುಂದುಭಿ ಘಂಟೆ ವಾದ್ಯಗಳುಫಲ ಪುಷ್ಪ ದಧಿಗಳಿದಿರಾಗುತಿದೆಕೊ ||ಚೆಲುವ ಭಾರದ್ವಾಜ ಪಕ್ಷಿ ಬಲವಾಗುತಿದೆಬಲುಹಂಗಎಡವಾಗುತಿದೆನೋಡುಕೆಳದಿ2ನೋಡು ದ್ವಯ ಬ್ರಾಹ್ಮಣರು ಇದಿರಾಗಿ ಬರುವುದನುಕೂಡಿದುವು ಮನದ ಸಂಕಲ್ಪವೆಲ್ಲ ||ಬೇಡಿದ ವರಗಳೀವ ಪುರಂದರವಿಠಲನನೋಡಿ ಸಂತೋಷದಲಿ ನೆನೆವೆನೆಲೆ ರಮಣಿ 3