ಒಟ್ಟು 5788 ಕಡೆಗಳಲ್ಲಿ , 92 ದಾಸರು , 4690 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಗಾಭೋಗ ಚಿಕ್ಕ ಮಗುವಾದ ಪ್ರಹ್ಲಾದ ದೇವನನು ರಕ್ಕಸನು ಪಿಡಿದತಿ ಹಿಂಸೆಪಡಿಸುವದ ನೋಡಿ ಉಕ್ಕಿಬರುತಿಹ ಕೋಪದಿಂ ಕಿಡಿಕಿಡಿಯಾಗಿ ಉಕ್ಕಿನ ಕಂಬದಿಂ ಉರಿಯ ಕಾರುತ ಬಂದು ಪಕ್ಕಿದೇರನು ಹಿರಣ್ಯಕಶಿಪನ ಪಿಡಿದು ತಾ ಉರ ಬಗೆದು ಕರುಳ ಮಾಲೆಯ ಗಕ್ಕನೆ ಗಳಕಿಕ್ಕಿಕೊಂಡು ಆರ್ಭಟಿಸಿದಂದು ಲಕ್ಕುಮಿಯಾದಿಯಾಗಿ ಮುಕ್ಕೋಟಿ ದೇವತೆಗಳು ಬೆದರಿ ದಿಕ್ಕೆಟ್ಟು ಗಡ ಗಡ ನಡುಗುತಿರಲಾಗ ಅಕ್ಕರದ ಭಕುತ ಪ್ರಹ್ಲಾದ ಬರೆ ಬಿಗಿಯಪ್ಪಿ ತಕ್ಕೈಸಿ ಮುಂಡಾಡಿ ಪ್ರಸನ್ನನಾದನು ತನ್ನ ಭಕ್ತರೊಳಿನ್ನೆಷ್ಟು ಪ್ರೀತಿಯೋ ರಂಗೇಶವಿಠಲಗೆ
--------------
ರಂಗೇಶವಿಠಲದಾಸರು
ಉಗಾಭೋಗ ದಾಸ ಭಾಗ್ಯವೆ ಭಾಗ್ಯ ಹರಿಕೊಟ್ಟ ಸೌಭಾಗ್ಯ ದಾಸ ಭಾಗ್ಯಕ್ಕೆ ಜಗದಿ ಸರಿಮಿಗಿಲಿಲ್ಲವೆಂದು ದಾಸತ್ವವೇ ಮಧ್ವಮತ ಸಾರತತ್ವವೆಂದು ವ್ಯಾಸರಾಯರು ಜಗದಿ ದಾಸರ ನಿಲ್ಲಿಸಿದರು ದಾಸರಿಗಂಕಿತ ಇರಲೇಬೇಕೆನುತಲಿ ದಾಸ ಪುರಂದರವಿಠ್ಠಲನಿಗೆನಿಸಿದರು ಈ ಸುಮಾರ್ಗವ ತಂದೆ ಮುದ್ದುಮೋಹನ ಗುರು ಮಾಸದಂತೀಗ ಮತ್ತೆ ಬಿತ್ತಿ ಬೆಳೆಸಿದರು ದಾಸ ಜನಪ್ರಿಯ ಗೋಪಾಲಕೃಷ್ಣವಿಠ್ಠಲ ತಾ ಸುಮ್ಮನೀವ ತನ್ನ ನಿಜದಾಸರಿಗೆ ಮುಕ್ತಿ
--------------
ಅಂಬಾಬಾಯಿ
ಉಗಾಭೋಗ ಪದ್ಮಾಲಯೆ ಪದ್ಮೆ ಪದ್ಮ ಸಂಭವೆ ಲಕುಮಿ ಪದ್ಮಾಕ್ಷಿ ಪದ್ಮ ಹಸ್ತೆ ಪದ್ಮಾಸನನ ಜನನಿ ಪದ್ಮಮುಖಿಯೆ ನಿನ್ನ ಪದಪದ್ಮ ಧ್ಯಾನ ನೀಡೆ ಪದ್ಮನಾಭನ ಹೃದಯ ಪದ್ಮಸದನ ನಿಲಯೆ ಪದ್ಮಿನಿ ಎನ್ನ ಹೃದಯ ಪದ್ಮ ಮಧ್ಯದಿ ಸತತ ಪದ್ಮಾಕ್ಷ ಗೋಪಾಲಕೃಷ್ಣವಿಠಲನ ಪದ
--------------
ಅಂಬಾಬಾಯಿ
ಉಗಾಭೋಗ ಪರಿಪರಿ ದೇಹ ಧರಿಸಿ ನರ ಜನ್ಮದಲಿ ಬಂದು ಕರಕರೆ ಪಡುತಲಿ ಇರುವ ಮಾನವರೊಳು ಅರಿತು ಸಾತ್ವಿಕರನು ಕರದು ಬುದ್ಧಿಯ ಪೇಳೆ ಹರಿಯ ಪಾದವ ತೋರ್ವ ಗುರುವು ಒಬ್ಬರು ಬೇಕು ಪರಮಪ್ರಿಯರು ಇವರು ಅರಿವರು ಸಾತ್ವಿಕರ ಕರದು ಉಪದೇಶವಿತ್ತು ಉದ್ಧಾರ ಮಾಡುವರು ಚರಿತೆಯ ವರ್ಣಿಸಲು ನರರಿಗೆ ಸಾಧ್ಯವಲ್ಲ ನರಹರಿಯೆ ಬಲ್ಲ ಉರಗಾಖ್ಯರ ಮಹಿಮೆ ವರಭಕ್ತರಾಗಿ ಹರಿಗೆ ಶರಣು ಹೊಕ್ಕವರನು ಕರುಣೆಯಿಂ ಸ್ವರೂಪವರಿತು ಉದ್ಧರಿಪರು ಪರತರ ಗೋಪಾಲಕೃಷ್ಣವಿಠ್ಠಲನ ಚರಣವ ತೋರುವರು ವರ ತಂದೆ ಮುದ್ದುಮೋಹನರು
--------------
ಅಂಬಾಬಾಯಿ
ಉಗಾಭೋಗ ಪ್ರಪಂಚದೊಳಗಿದ್ದು ಪ್ರಪಂಚವನೆ ಮೆದ್ದು ಪ್ರಪಂಚವನೆ ಗೆದ್ದು ಪ್ರಪಂಚವನೆ ಒದ್ದು ಪ್ರಪಂಚಾತೀತ ನಮ್ಮ ಗೋಪಾಲಕೃಷ್ಣವಿಠ್ಠಲನ ಪ್ರಪಂಚದೊಳು ಸುಖವ ಪೊಂದುವನೆ ಧನ್ಯ
--------------
ಅಂಬಾಬಾಯಿ
ಉಗಾಭೋಗ ಬಡವನಾದವನ ಭವಮಡುವಿನೊಳಗೆನೂಕಿ ಮಿಡುಕಿಸೀನೋಡುವುದು ಥರವೇನೋ ಒಡಲಿಗೋಸುಗ ನಿನ್ನ ಬೇಡ ಬಂದವನಲ್ಲ ದೃಢಭಕ್ತಿ ಜ್ಞಾನಕೊಟ್ಟು ರಕ್ಷಿಸೋಧೊರಿಯೆ ಕಡಲಶಯನ ನಮ್ಮ ಮುದ್ದುಮೋಹನವಿಠಲ ಗಾಢರತಿಯ ಪಾಲಿಸು ಸುಲಭದಿಂದಾ
--------------
ಮುದ್ದುಮೋಹನವಿಠಲದಾಸರು
ಉಗಾಭೋಗ ಭಕ್ತಿದಾಯಕ ಕೇಳೊ ನಿನ್ನನು ಒಲಿಸಲು ಶಕ್ತಿ ಎನಗೆ ಇಲ್ಲ ಸರ್ವೇಶ್ವರ ಭಕ್ತಿಪಾಶದಿ ನಿನ್ನನುಕ್ತಿಯಿಂದಲಿ ಬಿಗಿವೆ ಮುಕ್ತಿಗೊಡೆಯ ಹೃದಯ ಮಧ್ಯದಿ ಬಂಧಿಸುವೆ ಶಕ್ತಿ ನಿನಗಿಲ್ಲ ಬಿಡಿಸಿಕೊಳ್ಳಲು ಇನ್ನು ಯುಕ್ತಾಯುಕ್ತ ತಿಳಿಸಿ ಉದ್ಧರಿಸಬೇಕಿನ್ನು ಶಕ್ತನಿಲ್ಲವೊ ನಿನಗೆ ಸರಿ ಜಗದೊಳು ಮಹ ಸಿರಿ ಗೋಪಾಲಕೃಷ್ಣವಿಠ್ಠಲಾ
--------------
ಅಂಬಾಬಾಯಿ
ಉಗಾಭೋಗ ಮಕ್ಕಳ ಮಾಣಿಕ್ಯ ಮಧುರೆ ಗೋಕುಲ ಬಿಟ್ಟು ಚಿಕ್ಕಯತಿಗಳಿಂದ ಪೂಜೇಯ ಕೈಕೊಂಡು ರಕ್ಕಸಾಂತಕ ತನ್ನ ಭಕ್ತರ ಕಾಯುತ್ತ ಅಜ ಶಿವ ಇಂದ್ರಾದಿ ವರದನು ಚೊಕ್ಕ ಚಿನ್ನದ ಬೊಂಬೆಯಂತೆ ನಿಂತಿರುವನು ಮುಕ್ತಾಮುಕ್ತರ ಬಿಂಬ ಗೋಪಾಲಕೃಷ್ಣವಿಠಲ
--------------
ಅಂಬಾಬಾಯಿ
ಉಗಾಭೋಗ ಮಾಡಿದೆ ಯಾಕೆ ಫಲಗಳ ಮೆದ್ದೆಯಾಕೆ ಒಕ್ಕುಡಿತೆ ಪಾಲ ಕುಡಿದೆಯಾಕೆ ಅವಲ ಮೆದ್ದೆಯಾಕೆ ಕುರೂಪಿ ಕುಬುಜೆಗೆ ಮನಸೋತೆಯಾಕೆ ಅಖಿಲಾಂಡಕೋಟಿ ಬ್ರಹ್ಮಾಂಡನಾಯಕನಾದವ ಪಾಂಡವರೋಲೆಕಾರನಾದೆಯಾಕೆ ನಿನಗಾಗಿ ನೀನು ಬವಣೆಪಡಲಿಲ್ಲವೊ ದೇವ ನಿನ್ನ ಭಕುತರ ಪೊರೆಯಲೋಸುಗವೆಂಬುದ ನಾ ಬಲ್ಲೆ ನಿನ್ನ ದಯಕೆಣೆಯುಂಟೆ ಎನ್ನಪ್ಪ ರಂಗೇಶವಿಠಲ
--------------
ರಂಗೇಶವಿಠಲದಾಸರು
ಉಗಾಭೋಗ ವಿಕ್ರಮ ಸಂವತ್ಸರದಲ್ಲಿ ನಿನ್ನ ನಿಜ ದಾಸಕೂಟ ಜನಕೆ ಪ- ರಾಕ್ರಮ ಹೆಚ್ಚಲಿ ಅಚ್ಚುತಾನಂತ ಕೃಷ್ಣ ಶಕ್ರಾನುಜನೆ ನಿನ್ನ ದೂತ ಹನುಮನ ಸೇವೆ ವಕ್ರವಿಲ್ಲದೆ ನಡೆದು ನಿನ್ನ ಕೃಪೆಯಾಗಲಿ ಅಕ್ರೂರವರದ ತಂದೆ ಮುದ್ದುಮೋಹನ್ನರ ವಿಕ್ರಮೌದಾರ್ಯ ದಶ ದಿಕ್ಕುಗಳ ಬೆಳಗಲಿ ಶಕ್ರಾನುಜನೆ ಉದರ ಬಗೆದು ತರಳನ ಕಾಯ್ದ ವಕ್ರನಖನೆ ನಮ್ಮ ನೀತ ಶ್ರೀ ಗುರುಗಳಿಗೆ ವಿಕ್ರಮ ಶಾಂತಿ ಆಯುರಾರೋಗ್ಯ ಭಾಗ್ಯವಿತ್ತು ಚಕ್ರಧರನೆ ನಿನ್ನ ಸೇವೆ ಕೈಕೊಂಡೆಮ್ಮ ಭವ- ಚಕ್ರ ತೊಡಕು ಬಿಡಿಸಿ ದಾಸ ಜನರ ಕಾಯೋ ಉ- ರು ಕ್ರಮದೇವ ಜಗಚ್ಚಕ್ರವರ್ತಿಯೆ ನಮೋ ಶಕ್ತಾದ್ಯಮರ ನುತ ಗೋಪಾಲಕೃಷ್ಣವಿಠಲಾ
--------------
ಅಂಬಾಬಾಯಿ
ಉಗಾಭೋಗ ವೈಕುಂಠಗಿರಿಯ ವಾಸ ಲೋಕೈಕನಾಥ ಶ್ರೀಶ ಏಕಮನಸು ನಿನ್ನ ಪಾದಧ್ಯಾನದಿ ಕೊಡು ನಾ ಕೇಳಲಿನ್ನೇನು ನಾಕ ಜನರ ನಾಥ ಬೇಕೊ ನಿನ್ನ ಭಕ್ತರ ಏಕಾಂತ ಸಹವಾಸ ನೀ ಕರುಣಿಸು ಇದನಾ- ನೇಕ ಜನ್ಮಗಳಲ್ಲಿ ಶ್ರೀಕಳತ್ರ ಶ್ರೀಶ ಗೋಪಾಲಕೃಷ್ಣವಿಠಲ
--------------
ಅಂಬಾಬಾಯಿ
ಉಗಾಭೋಗ ಶ್ವೇತ ದ್ವೀಪವಾಸಿ ಗೋಪಾಲ ವಿಠಲಸಾರ್ವಭೌಮ ಪರಮ ಪುರುಷ
--------------
ಗೋಪಾಲದಾಸರು
ಉಗಾಭೋಗ ಹತ್ತಾವತಾರದಿಂದ ಹರಿಯೆ ಕೊಂಡಾಡು ಪಾಡು ಚಿತ್ತಾಭಿಮಾನಿ ಮುನಿಗೆ ವಲಿದು ಬಂದವನೆನ್ನು ನಿತ್ಯ ಉಡುಪಿಲಿ ನಿಂದು ನಿಜ ಜನರನ್ನು ಕಾಯ್ವ ಸ್ತುತ್ಯ ಗೋಪಾಲಕೃಷ್ಣವಿಠ್ಠಲನಿವನೆನ್ನೊ
--------------
ಅಂಬಾಬಾಯಿ
ಉಗಾಭೋಗ ಹಿಂದಿನ ಊರಿಗೆ ಹಿಂತಿರುಗುವುದಿಲ್ಲ ಮುಂದಿನ ಊರಿನಾನಂದವ ಕಂಡಿಲ್ಲ ಇದ್ದಿದ್ದ ಊರೊಳು ಇರುವ ಹಾಗೆ ಇಲ್ಲ ನಂದ್ಯಾವ ಊರೆಂಬೊದನ್ಯರಿಗಳವಲ್ಲ ಸಂದಗ್ಧವಾದಂಥ ಇದರ ಅರ್ಥಗಳನು ತಂದೆ ಮುದ್ದುಮೋಹನರ ಬಿಂಬಶ್ರೀ ಸುಂದರ ಗೋಪಾಲಕೃಷ್ಣವಿಠ್ಠಲ ಬಲ್ಲ
--------------
ಅಂಬಾಬಾಯಿ
ಉಡಿಯ ತುಂಬಿದರು ಮೋದದಿ ಮಡದಿಯರು ಜನಕನ ಸುಕುಮಾರಿಗೆ ಪ ಸಡಗರದಲಿ ಹುರಿಗಡಲೆ ಕುಬುಸ ಕ- ಕದಳಿ ಖರ್ಜೂರ ದ್ರಾಕ್ಷಿಗಳನೂ-ಜನಕನ ಸುಕುಮಾರಿಗೆ ಅ.ಪ ಸರಸಿಜಾಕ್ಷಿಯರು ಕೊಬ್ಬರಿ ಬಟ್ಲುಗಳು ಚಂದ- ದರಸಿನ ಕುಂಕುಮ ಹಣಿಗೆಗಳನು-ಜನಕನ ಸುಕುಮಾರಿಗೆ 1 ಮುತ್ತು ಮಾಣಿಕ ನವರತ್ನಗಳನು ಬಹು ಕಿತ್ತಳೆ ದಾಡಿಮ ಮುಖ್ಯಫಲಗಳ-ಜನಕನ ಸುಕುಮಾರಿಗೆ 2 ಪರಿಪರಿ ವಸ್ತುಗಳನು ಮಾನಿನಿಯರು ಗುರುರಾಮವಿಠಲನರಿಸಿಯಾದ-ಜನಕನ ಸುಕುಮಾರಿಗೆ 3
--------------
ಗುರುರಾಮವಿಠಲ