ಒಟ್ಟು 15641 ಕಡೆಗಳಲ್ಲಿ , 133 ದಾಸರು , 7446 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂಗಳಂ ನರಹರಿಗೆ ಜಯ ಜಯ ಮಂಗಳ ಮುರಹರಗೆ ಪ ಮಂಗಳ ಮದನಗೋಪಾಲ ಶ್ರೀಕೃಷ್ಣಗೆ ಮಂಗಳ ಮಾಧವಗೆ ಅ.ಪ ವಸುದೇವ ಸುತನಾಗಿ ಗೋಕುಲದೊಳು ಮೊಸರು ಬೆಣ್ಣೆಯ ಕದ್ದು ಶಶಿಮುಖಿಯರ ಕೂಡಿ ನಿಶಿರಾತ್ರಿಯಲಿ ರಾಸ ಕ್ರೀಡೆಯಾಡಿದ ಹರಿಗೆ 1 ನಳಿನಮುಖಿಯರೆಲ್ಲ ನೀರೊಳಗಾಡಿ ಬಳಲಿ ಮೇಲಕೆ ಬರಲು ಲಲನೆಯರ ಕಂಡು ಪರಿಹಾಸ್ಯ ಮಾಡಿದ ಚೆಲುವ ಗೋಪಾಲಕೃಷ್ಣಗೆ2 ಬೆಟ್ಟವ ಬೆರಳಿನಲಿ ಎತ್ತಿದ ಭಕ್ತವತ್ಸಲ ಹರಿಗೆ ಮಿತ್ರೆಯರಿಗೆ ಮೊಸರು ಬುತ್ತಿಯ ಭುಕ್ತಿಯನೆವದಲಿ ಮುಕ್ತಿ ತೋರಿದ ದೊರೆಗೆ 3 ಪುಟ್ಟಬಾಲಕನಾಗಿ ಗೋವ್ಗಳನೆಲ್ಲ ಅಟ್ಟಿಯ ಮನೆಗೆ ಪೋಗಿ ದುಷ್ಟ ಕಾಳಿಂಗನ ಮೆಟ್ಟಿ ತುಳಿದ ಹರಿಗೆ ರತ್ನದಾರತಿ ಎತ್ತಿರೆ 4 ಕೊಂದು ಕಂಸನÀ ಬೇಗ ಮಧುರೆಲಿ ನಿಂತ ಮಹಾನುಭಾವಗೆ ತಂದೆ ಶ್ರೀ ಕಮಲನಾಭವಿಠ್ಠಲಗೆ ಕುಂದಣದಾರತಿಯ 5
--------------
ನಿಡಗುರುಕಿ ಜೀವೂಬಾಯಿ
ಮಂಗಳಂ ನಿಜಭಕ್ತ ಪರಿಪಾಲಗೆ ಪ ಕೇಸರಿ ತನಯಗೆ ಮಂಗಳ ಕಂಜಾಪ್ತಜನ ಕಾಯ್ದಗೆ ಮಂಗಳ ಅಂಜನಾದ್ರಿ ತಂದಾತಗೆ ಮಂಗಳ ಸಂಜಯವಂತ ಶ್ರೀ ಹನುಮಂತಗೆ 1 ಕುಂತಿ ಪಾಂಡವಜನಾಗಿ ಕುವಲಯದೊಳು ಬಲ ವಂತ ರಾಯರಾ ತರಿದಗೆ ದಂತಿಪುರವ ಬೇಡಿ ಕೊಡದಿರೆ ಕೌರವರ ಸಂತತಿ ಸವರಿದ ಸುಖ ಪೂರ್ಣಗೆ 2 ಮೂರವತಾರ ಮಾಡಿದಗೆ ಮಂಗಳ ಮೂರೇಳು ಮತಗಳ ಮುರಿದವಗೆ ಮಂಗಳ ಸಿಂಧು ಜಗನ್ನಾಥ ವಿಠಲನ ಆರಾಧಿಸಿದ ಮಧ್ವ ಮುನಿರಾಯಗೆ 3
--------------
ಜಗನ್ನಾಥದಾಸರು
ಮಂಗಳ ಪದ್ಯಗಳು ಜಯ ಜಯ ಶ್ರೀ ಮಹಾಕಾಳಿ ಗೋಕರ್ಣೆ ಮಹಾಬಲ ಪೂಣ್ಯವಧು ಭಯವಿರಹಿತ ಭವನಾಶಿನಿ ಸುಲಲಿತೆÀ ಭಕ್ತ ಜಿಹ್ವಾಗ್ರ ಮಧು ಪ ಪರಮೇಶ್ವರಿ ಪರಿಪೂರ್ಣಾಂಬಿಕ ನಿಜ ಪರಮಾನಂದ ಪರೇ ಪರತರವಸ್ತು ಪರಾತ್ಪರ ಶಾಂಭವಿ ಸುರಮುನಿ ಅಭಯಕರೇ ಜಯಜಯ 1 ವೀಣಾ ಪುಸ್ತಕಧಾರಿಣೆ ಅಗಣಿತ ಪಾನಪಾತ್ರಪ್ರಿಯೇ ವಾಣಿನಿತ್ಯಕಲ್ಯಾಣಿ ವಂದಿತಗುಣ ಶ್ರೇಣಿ ಮುನೀ ಸಾಹ್ಯೇ ಜಯಜಯ 2 ಹರಿಮೋಹಿನಿ ಹರಿವಾಹಿನಿ ಗಿರಿಸುತೆ ಹರಿಣಾಂಕಿಣಿ ಭವ್ಯಮುಖೆ ಹರಿಸಖ ಪ್ರಾಣಸಖೇ ಜಯಜಯ 3 ಸರ್ವಗುಣನಿಲಯೇ ಸರ್ವಾತ್ಮಕಿ ಸರ್ವಯಂತ್ರರೂಪೇ ಶರ್ವಾಣೆ ಸರ್ವೇಶ್ವರಿ ಸದಾಶಿವೇ ಸರ್ವ ಮಂತ್ರರೂಪೇ ಜಯಜಯ 4 ಮೂಲಾಧಾರೇ ಮುಕುಂದಾರ್ಚಿತ ಪದ ಬಾಲಾ ತ್ರಿಪುರಹರೇ ಮಾಲಿನಿ ಮಂತ್ರಾತ್ಮಕಿ ಮಹಾದೇವಿ ತ್ರಿ ಶೂಲಿನಿ ಶಶಿಶಿಖರೇ ಜಯಜಯ 5 ನಿತ್ಯಾರ್ಚನಿ ಸುಖಭೋಗಿನಿ ಸುಲಲಿತೇ ನಿತ್ಯಾನಂದಮಯೇ ನಿತ್ಯಾನಿತ್ಯ ಸ್ವರೂಪಿಣಿ ನಿರ್ಗುಣೆ ಸತ್ಯ ಸಾಧು ಹೃದಯೇ ಜಯಜಯ 6 ಶಂಭಾಸುರಮಹಿಷಾ ಸುರಮೇಕ್ಷಕ ದಂ¨ ಮುಕುಟಧರೇ ಅಂಬಾ ಶ್ರಿ ಮಹಾಕಾಳಿ ವಿಮಲಾನಂದ ಸುಖ ಶರೀರೇ ಜಯ ಜಯ 7 ಇತಿ ಶ್ರೀ ಮಹಾಕಾಳ್ಯಷ್ಟಕ ಸ್ತೋತ್ರಂ ತ್ರಿಕಾಲಪಠತೆ ನಿತ್ಯಂ ನಿತ್ಯಂ ನತಿಸುತಧನ ಪೌತ್ರಾದಿ ಕೃತಾರ್ಥಂ ಭವತಿ ಸತ್ಯಂ ಸತ್ಯಂ ಜಯಜಯ 8
--------------
ಭಟಕಳ ಅಪ್ಪಯ್ಯ
ಮಂಗಳ ಪದ್ಯಗಳು ಜಯತು ಕರಿಕಾನೇಶ್ವರಿ ಜಯತು ನೀಲ್ಕೋಡೇಶ್ವರಿ ಪ ಜಯತು ಪರಮೇಶ್ವರಿ ಜಯತು ಶ್ರೀ ಮಹೇಶ್ವರಿ ಜಯತು ಶ್ರೀ ಭುವನೇಶ್ವರಿ ಜಯತು ಶ್ರೀ ವಜ್ರೇಶ್ವರಿ 1 ಜಯತು ಶ್ರೀ ಕಮಲಾಕ್ಷಿದೇವಿ ಜಯತು ಶ್ರೀ ಮಹಾಲಕ್ಷಿದೇವಿ ಜಯತು ಶ್ರೀ ಗಾಯಿತ್ರಿ ದೇವಿ ಜಯತು ತ್ರೈಪುರ ಭೈರವಿ 2 ಜಯತು ತಾರಾ ಕಾಳಿದೇವಿ ಜಯತು ಶ್ರೀ ಮಹಾಕಾಳಿದೇವಿ ಜಯತು ಛಿನ್ನಮಸ್ತದೇವಿ ಜಯತು ಶ್ರೀ ಮಾತಂಗಿದೇವಿ 3 ಜಯತು ಷೋಡಶಿ ಶಕ್ತಿದೇವಿ ಜಯತು ಬಹುಚರಾ ಶಾಂಭವಿ ಜಯತು ಪೀತಾಂಬರ ಸುದೇವಿ ಜಯತು ಮಹಾಮಾಯಿ ದೇವಿ 4 ಜಯತು ಶ್ರೀ ಲಲಿತಾಂಬಿಕಾ ಜಯತು ಶ್ರೀ ದುರ್ಗಾಂಬಿಕಾ ಜಯತು ಶ್ರೀ ಮೂಕಾಂಬಿಕಾ ಜಯತು ಶ್ರೀ ಜಗದಾಂಬಿಕಾ 5 ಜಯತು ಶ್ರೀ ಧೂಮಾವತಿ ಜಯತು ಮಹಾಸರಸ್ವತಿ ನಿತ್ಯ ಕಲಾವತಿ ಜಯತು ಮಾತಾ ಪಾರ್ವತಿ 6
--------------
ಕರ್ಕಿ ಕೇಶವದಾಸ
ಮಂಗಳ ಪಾಡಿರೆ ಭಾವೆಯರೇ ರಂಗನ ರಮಣಿಯ ಭಾವಿಸಿರೇ ಪ ಅಂಗಜಜನನಿಯ ಕೃಪೆಯಿ ಸ- ತ್ಸಂಗತಿ ಪಡೆದೆವು ನಿಶ್ಚಯಂಅ.ಪ ಭೋಗವತೀಪತಿಶಾಯಿಯೊಳು ಅನು ರಾಗಗೊಂಡಿಹ ದೇವಿಯಿವಳ್ ಭಾಗ್ಯಲಕ್ಷ್ಮಿಯ ಪಾದದೊಳು ಬಾಗುತ ಶಿರವನು ರಾಗದೊಳು 1 ವೇದಸಾರದ ವಾಕ್ಯದಲಿ ಮಾಧವಿಯಂ ಸ್ತುತಿ ಮಾಡುತಲಿ ಭೇದವೆಣಿಸದೆ ಸಲಹೆನ್ನುತಲಿ ಮಾಧವನಂ ಕೊಂಡಾಡುತಲಿ 2 ತಾಪತ್ರಯಗಳ ಪರಿಹರಿಸಿ ಆಪತ್ತುಗಳಿಂದುದ್ಧರಿಸಿ ಕಾಪಾಡುವಳಿವಳೆಂದೆನಿಸಿ ಶ್ರೀಪದ್ಮಿನಿಯನು ಸಂಸ್ಮರಿಸಿ 3 ಶರಣಾಗತ ಸಂರಕ್ಷಕಿಗೆ ವರಶೇಷಗಿರಿನಿಲಯನಿಗೆ ಕರುಣಾರೂಪಿಣಿ ಪದ್ಮಿನಿಗೆ ಕರಗಳ ಮುಗಿಯುತೆ ಮಾಧವಿಗೆ 4
--------------
ನಂಜನಗೂಡು ತಿರುಮಲಾಂಬಾ
ಮಂಗಳಂ ಮಂಗಳಂ | ಜಯ | ಮಂಗಳಶ್ರೀ ಶ್ರೀನಿವಾಸನರ್ಧಾಂಗಿ ಪ ಭೃಗುಕಾಲಿಲೊದಿಯಲು | ಅಗಲಿ ಬಂದಳು ಎಂಬೋ ||ಬಗೆ ತೋರಿ ಮೋಹಿಸಿ ಇಗಡ ಜನರ ನಾ || ಮಂಗಳಂ 1 ಪರಮ ಧಾರ್ಮಿಕನಾದ | ವರನಾರಾಯಣ ಋಷಿ ಗೊರವಿತ್ತು ನಡೆತಂದೆ | ಮೆರೆವ ಸನ್ನತಿಗೆ || ಮಂಗಳಂ2 ಕೋಲಾಸುರನ ಕೊಂದು | ಪಾಲಿಸಿ ಪುರವನ್ನು |ಶೀಲೆ ಚಂದ್ರಾದೇವಿ ಆಳಿದಗೊಲಿದೆ || ಮಂಗಳಂ 3 ಪಾತಕ ಕಳದೆ || ಮಂಗಳಂ 4 ಗುರುಪ್ರಾಣೇಶ ವಿಠಲಾ | ಇರುವ ನೀನಿದ್ದಲ್ಲಿಎರವಿಲ್ಲೀ ಮಾತಿಗೆ ಸುರರ ಸಮ್ಮತವೂ || ಮಂಗಳಂ 5
--------------
ಗುರುಪ್ರಾಣೇಶವಿಠಲರು
ಮಂಗಳ ಮಂಗಳ ಜಯಮಂಗಳ ಶುಭ ದೇವದೇವೋತ್ತಮಗೆ ಧ್ರುವ ಕೇಶವ ನಾರಾಯಣಗೆ ಮಂಗಳ ವಾಸುದೇವ ವಾಮನಗೆ ಮಂಗಳ ಹೃಷೀಕೇಶ ಪುರುಷೋತ್ತಮಗೆ ಮಂಗಳ ವಸುದೇವಸುತ ಶ್ರೀಕೃಷ್ಣಗೆ ಮಂಗಳ 1 ಅಚ್ಯುತ ಜನಾರ್ಧನಗೆ ಮಂಗಳ ಮತ್ಸ್ಯಕೂರ್ಮ ವರಾಹಿಗೆ ಮಂಗಳ ಸಚ್ಚಿದಾನಂದ ಶ್ರೀಧರಗೆ ಮಂಗಳ ಮುಚುಕುಂದವರದ ವಿಷ್ಣುಗೆ ಮಂಗಳ2 ಮಾಧವ ಮಧುಸೂದನಗೆ ಮಂಗಳ ಸಾಧು ಹೃದಯುವಾಸಗೆ ಮಂಗಳ ಅಧೋಕ್ಷಜ ಅನಿರುದ್ಧಗೆ ಮಂಗಳ ಪದ್ಮನಾಭ ಪ್ರದ್ಯುಮ್ನಗೆ ಮಂಗಳ 3 ಗರುಡವಾಹನ ಗೋವಿಂದಗೆ ಮಂಗಳ ಉರಗಶಯನ ಉಪೇಂದ್ರಗೆ ಮಂಗಳ ಹರಿ ದಾಮೋದರ ಸಂಕರುಷಣಿಗೆ ಮಂಗಳ ನಾರಸಿಂಹ ತ್ರಿವಿಕ್ರಮಗೆ ಮಂಗಳ 4 ಪರಮ ಪಾವನ ಭಾರ್ಗವಗೆ ಮಂಗಳ ಕರುಣಾಕರ ಶ್ರೀ ರಾಮಗೆ ಮಂಗಳ ಧರಿಯೊಳು ಭೌದ್ಧ ಕಲ್ಕಿಗೆ ಮಂಗಳ ತರಳ ಮಹಿಪತಿಸ್ವಾಮಿಗೆ ಮಂಗಳ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಂಗಳಂ ಮಂಗಳಂ ದಯಾನಿಧೆಮಂಗಳಂ ಮಂಗಳಂ ಪ. ದೇವ ದೇವೇಶ ದೇಹಿ ಕಲ್ಯಾಣಂಶ್ರೀವರ ಶ್ರಿಂಗರ ಶ್ರೀ ಶ್ರೀನಿವಾಸ 1 ನಂದನಂದನ ದಿವ್ಯಾನಂದ ಸುತೇಜಇಂದಿವರಾಕ್ಷ ಮುಕುಂದ ಮುರಾರೆ 2 ರಾಜರಾಜಿತ ಗೋಪಾಲವಿಠಲ ಮಹಾ ರಾಜ ಭೋಜ ಕಲ್ಪರಾಜ ಸುತೇಜ 3
--------------
ಗೋಪಾಲದಾಸರು
ಮಂಗಳಂ ಮಂಗಳಂ ಪ ಮಂಗಳಂ ಮಂಗಳಂ | ಪರಿಮಾಳಾರ್ಯರಿಗೆ ತುಂಗೆ ತೀರಗ ಯತಿ | ಪುಂಗರೀಗೇ ಅ.ಪ. ವೈರಿ ಭೃಂಗ | ಸುಧೀಂದ್ರ ಚರಣಾಬ್ಜಮಧುಕರರೆನಿಸುತ್ತ | ಸುಧೆಯ ಸೌರಭವ |ಬುಧ ಜನ ಕುಣಿಸುತ್ತ | ವಿಧ ವಿಧ ಮೆರೆಯುವತ್ರಿದಶ ಭೂರುಹವೆನಿಸಿ | ಸದಯದಿ ಪೊರೆವಗೇ 1 ಮಧ್ವ ಮತಾಬ್ಧಿಗೆ | ಶುದ್ಧ ಪೂರ್ಣೇಂದ್ವಿಗೆಅದ್ವೈತ ಕಲಿಮಲ | ದಾವಾಗ್ನಿಗೇ |ಸದ್ವೈಷ್ಣ್ವ ಕುಮುದೇಂದು | ವಿದ್ವಾಂಸನತ ಪಾದಶೌದ್ಧೋದನಿಯ ಮತ | ವಿಧ್ವಂಸಕಗೇ 2 ಕರದೆಡೆ ಬರುವಂಥ | ಪರಮ ದಯಾಳುಗೆಧರೆಯೊಳೆಲ್ಲೆಲ್ಲೂ | ಮೆರೆಯುತಿಹಗೇ |ಶರಣರ ಹೃತ್ಕಮಲ | ವರ ಮಿತ್ರನೆಂದೆನಿಸಿಗುರು ಗೋವಿಂದ ವಿಠಲ | ಚರಣಾಬ್ಜಧೇನಿಪಗೇ 3
--------------
ಗುರುಗೋವಿಂದವಿಠಲರು
ಮಂಗಳಂ ಮಂಗಳಂ ಮಾರಮಣಗೆ ಪ ಕುಂಡಲಿ ಶಯನಗೆ ಗುಣನಿಧಿಗೆ ಪುಂಡರೀಕಾಕ್ಷ ಶ್ರೀ ಪುರುಷೋತ್ತಮಗೆ 1 ಸರ್ವಪ್ರಾಣಿಗಳ ಹೃತ್ಕಮಲನಿವಾಸಗೆ ಉರ್ವಿಭಾರವ ಪರಿಹರಿಸಿ ಭಕ್ತರ ಕಾಯ್ವ ಸಾರ್ವಭೌಮ ಹರಿಸರ್ವೋತ್ತಮಗೆ 2 ಭಾಗ್ಯವಲ್ಲಿ ಹನುಮನೊಡೆಯನಮ್ಮ ಗುರುರಾಮ ವಿಠಲ ಶ್ರೀ ಕೃಷ್ಣಮೂರುತಿಗೆ3
--------------
ಗುರುರಾಮವಿಠಲ
ಮಂಗಳಂ ಮಂಗಳಂ ರಂಗನಿಗೇ | ಜಯಮಂಗಳವೆನ್ನಿ ಶ್ರೀ ವೆಂಕಟಗೇ ಪ ಪತಿ ಮಾಧವ ಹರಿಗೇ 1 ನೀರಜಜ ಗೋರೂಪಿ | ಸಾರಿ ಪುತ್ತಾಶ್ರಿತಗೆಕ್ಷೀರಾಭಿಷೇಚಿಸಿ | ಸಾರುತಿರೆ ನೃಪ ಗೃಹ |ಮಾರನೆ ದಿನ ಗೋ | ಚಾರ ಕೊಡಲಿ ಹತಿಗೆದೂರ ಸರಿಸಿ ಗೋವ | ಶಿರವನೊಡ್ಡಿದಗೇ 2 ನಗ ವೆಂಕಟಾದ್ರೀಲಿಅಘಹರ ಲೀಲೆಗಳ್ | ಸೊಗಸಾಗಿ ತೋರ್ವಗೇ 3 ಆವಾವ ಬಗೆಯಿಂದ | ಜೀವನಧ್ಯಾತ್ಮದಿಓಧಿ ಸಾಧನೆಗೈದು | ದೇವನ ಪದ ಸಾರುವಭಾವವನರುಹುಲು | ಊರ್ವಿಯೊಳವತರಿಸಿಮಾವಾರಿ ನಟಿಸುತ್ತ | ಜೀವರ ಪೊರೆವಗೇ 4 ದೇವ ದೇವ ನಮ್ಮ | ಗೋವ ಪರಿಪಾಲಕಮಾವಿನೋದಿಯು ಗುರು | ಗೋವಿಂದ ವಿಠಲಭೂವೈಕುಂಠಸ್ಥನು | ಕಾವ ಭಕ್ತರನೆಲ್ಲ ಈ ವಿದಧಿ ತುತಿಪರ್ಗೆ | ಭಾವದಿ ಒದಗುವಗೇ5
--------------
ಗುರುಗೋವಿಂದವಿಠಲರು
ಮಂಗಳಂ ಮಹಿಜಾತಗೆ ಇಂಗಡಲ ಮಂದಿರಗೆ ಪ ಬಂಗಾರದೊಡಲ ಮುಖ್ಯ ಪದಂಗಳನೆಲ್ಲ ಕಂಗಳ ಭ್ರೂಭಂಗಾದಿ ಕರುಣಿಪ ದೇವಿಗೆ 1 ರಂಗು ಮಾಣಿಕದಾಭರಣಂಗಳನಿಟ್ಟು ಡಿಂಗರೀಕರಂತರಂಗದಿ ನಲಿಯುವ ದೇವಿಗೆ 2 ರಂಗೇಶವಿಠಲನರ್ಧಾಂಗಿಯೆನಿಸಿಕೊಂಡು ಹಿಂಗದೆ ಭಜಿಪರ್ಗೆ ಶುಭಗಳ ನೀಡುವ ದೇವಿಗೆ 3
--------------
ರಂಗೇಶವಿಠಲದಾಸರು
ಮಂಗಳ ಮಾಧವಗೆ ಮಾರಮಣಗೆ ಮಂಗಳ ಶ್ರೀಧರಗೆ ಪ ಭಂಗ ಭವಗಜ ಸಿಂಗ ಕರುಣಾಪಾಂಗ ಶ್ರೀಶಗೆ ಗಂಗಾಜನಕಗೆ ತುಂಗ ಮಹಿಮಗೆ ಭಂಗರಹಿತಗೆ ಅನಂಗಪಿತನಿಗೆ 1 ಭುವನ ಮೋಹನ ಸುಮನಸರ ಪ್ರಿಯ ಕವಿಜನರ ಹೃದ್ಗøಹ ನಿವಾಸಗೆ ನವನವ ಲೀಲೆಗಳ ತೋರ್ದಗೆ ನವರತುನದಾರತಿಯ ಬೆಳಗಿರೆ 2 ಗರುಡಗಮನಗೆ ಉರಗಶಯನಗೆ ಪರಮಪುರುಷಗೆ ಪುಣ್ಯಚರಿತಗೆ ಉರಗಗಿರಿವಾಸನಿಗೆ ದೇವಗೆ ಸುರರೊಡೆಯ ಶ್ರೀ ಶ್ರೀನಿವಾಸಗೆ3 ಸೌಮ್ಯನಾಮ ಸಂವತ್ಸರದಂದು ನೇಮದಿಂದ ಭಜಿಪ ಭಕುತರ ಕಾಮ್ಯಕರ್ಮವ ತರಿದು ಪೊರೆಯುವ ಕಮಲನಾಭ ವಿಠ್ಠಲನ ಪ್ರತಿದಿನ4
--------------
ನಿಡಗುರುಕಿ ಜೀವೂಬಾಯಿ
ಮಂಗಳ ಮಾರುತಿ ನಂದನಿಗೆಮಂಗಳ ಭಾರತಿ ಸುಂದರಗೆ ಪ ಮಂಗಳ ಮಾಧವನನು ದಿನ ಪಾಡುವಾನಂದತೀರ್ಥ ಸುರವಂದ್ಯನಿಗೆಅ.ಪ. ತರುಣಿ ರೂಪದಿ ಮೋಹಿಸುತಗರಡಿ ಮನೆಯೊಳು ಬಾರೆನುತದುರುಳನ ಮುಂದಲೆಗುರುಳನು ಪಿಡಿದುಧರೆಯೊಳು ಕೆಡಹಿದಿ ನೀ ತ್ವರಿತಾ 1 ಎಲ್ಲರು ಬಂದರು ಕೀಚಕರುಫುಲ್ಲಾಕ್ಷಿಯ ಚಿತಿಕ್ಹಾಕಿದರುವಲ್ಲಭೆ ಚೀರುವ ಕೇಳುತಕ್ಷುಲ್ಲಕರ ಹೆಡೆ ಖಂಡಿಸಿ ನೂರಾರು 2 ಸೈಂಧವ ವೇಷದಿಯನು ಪಿಡಿಯೆಸುಂದರಿ ನಿನ್ನಗೆ ಅಲ್ಪರಿಯೆತಂದು ಅವನ ಅವಳಿಂದ ವಧಿಸಿದೆಇಂದಿರೇಶನ ಪ್ರಿಯ ಸುರದೊರೆಯೆ 3
--------------
ಇಂದಿರೇಶರು
ಮಂಗಳ ಮುಖ್ಯ ಪ್ರಾಣೇಶಗೆ ಪ ಜಯ ಮಂಗಳ ಶುಭಮಂಗಳ ವಾಯುಕುಮಾರನಿಗೆ ಅ.ಪ ಅಂಜನಾದೇವಿಯ ಕಂದಗೆ ಮಂಗಳಕಂಜಾಕ್ಷ ಹನುಮಂತಗೆ ಮಂಗಳಸಂಜೀವನವ ತಂದಾತಗೆ ಮಂಗಳಸಜ್ಜನ ಪರಿಪಾಲಗೆ ಮಂಗಳ1 ಅತಿ ಬಲವಂತ ಶ್ರೀಭೀಮಗೆ ಮಂಗಳಪ್ರತಿಮಲ್ಲರ ಗೆಲಿದಗೆ ಮಂಗಳಸತಿಯ ಸೀರೆಯ ಸೆಳೆದ ದೈತ್ಯನ ಕೊಂದುಪೃಥ್ವಿ ಮೇಲೆ ಚೆಂಡನಾಡಿದಗೆ 2 ಸೀತಾದೇವಿಯ ಬಾಲಗೆ ಮಂಗಳಶ್ರೀರಾಮನ ಭಂಟಗೆ ಮಂಗಳಗೋಪಾಲ ಕೃಷ್ಣನ ಪೂಜೆಯಮಾಡುವಗುರು ಮಧ್ವ ಮುನಿರಾಯಗೆ ಮಂಗಳ3
--------------
ವ್ಯಾಸರಾಯರು