ಒಟ್ಟು 29700 ಕಡೆಗಳಲ್ಲಿ , 137 ದಾಸರು , 8961 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾದಸೇವೆಯ ಪಾಲಿಸೋ ಪಂಕಜನಾಭ ಪ ಭೂಧರ ವಿಹರಣ ಶ್ರೀಧರ ಹರಿ ನಿನ್ನಪಾದ ಅ.ಪ. ತನು ಶೋಷಿಸಿ ತಪನವಿಶೇಷವಾಚರಿಸೆ ಶೇಷಪರ್ವತಶಿರೋ ಭೂಷಣವೆನಿಸಿದ ಪಾದಸೇವೆಯ 1 ಬಲು ಬಳಲಿಸಿ ರಾಜ್ಯವ ಛಲದಿಂದಾ ಕ್ರಮಿಸೆ ಪಾದ 2 ಕುಲಸತಿಗೊಲಿದು ನಿರ್ಮಲತಪೋವನಕೆ ಸುಳಿದು ಆ ಲಲನೆಯ ಕಲುಷವಖಂಡಿಸಿ ಲಲನಾರೂಪವನಿತ್ತು ಸಲಹಿದ ಪಾವನ ||ಪಾದಸೇವೆಯ|| 3 ಗರಳ ನರನುತ್ತಮಾಂಗಕ್ಕೆ ಗುರಿಯಾಗಿ ಬರಲು ಚರಣ ದುಂಗುಟದಿಂದ ಧರಣೀತಳವನೂರಿ ನರನ ಶಿರವಕಾಯ್ದ ನರನಾರಾಯಣ ನಿನ್ನ ||ಪಾದ|| 4 ಪಿಡಿದು ಬಾಧೆಗೊಳಿಸೆ ವೇಗದಲಿ ಪುಲಿಗೆ ಮೋಕ್ಷವನಿತ್ತು ಪುಲಿಗಿರಿಯಲಿ ಮುನಿ ಕುಲಜ ಮಾಂಡವ್ಯಗೆ ಒಲಿದ ವರದ ವಿಠಲ ||ನಾರಾಯಣ||5
--------------
ಸರಗೂರು ವೆಂಕಟವರದಾರ್ಯರು
ಪಾದಸೇವೆಯ ಪಾಲಿಸೋ ಪಂಕಜನಾಭ ಪ ಪಾದಸೇವೆಯ ತೋರೋ ವೇದಗೋಚರ ವ್ಯಾಘ್ರ ಭೂಧರ ವಿಹರಣ ಶ್ರೀಧರ ಹರಿ ನಿನ್ನ ಅ.ಪ ಶೇಷವಾಯುಗಳತಿದೋಷವರ್ಜಿಸಿ ತನು ಶೋಷಿಸಿ ತಪನ ವಿಶೇಷವಾಚರಿಸೆ ದೋಷರಹಿತ ಗುಣಭೂಷಾ ಶೇಷನಿಗೊಲಿದು ಶೇಷಪರ್ವತ ಶಿರೋಭೂಷಣನೆನಿಸಿದ 1 ಬಲಿಚಕ್ರವರ್ತಿಯು ಬಲವೈರಿಯನು ಬಲು ಬಳಲಿಸಿ ರಾಜ್ಯವ ಛಲದಿಂದಾಕ್ರಮಿಸೆ ನಲಿದು ವಾಮನನಾಗಿ ಬಲಿಯ ದಾನವ ಬೇಡಿ ನೆಲನ ಈರಡಿ ಮಾಡಿ ಬಲಿಯ ಮೆಟ್ಟಿದ ಧೀರ2 ಪಲಕಾಲ ಶಾಪದಿ ಶಿಲೆಯಾಗಿದ್ದ ಗೌತಮ ಕುಲಸತಿಗೊಲಿದು ನಿರ್ಮಲ ತಪೋವನಕೆ ಸುಳಿದು ಆ ಲಲನೆಯ ಕಲುಷವ ಖಂಡಿಸಿ ಲಲನಾರೂಪವನಿತ್ತು ಸಲಹಿದ ಪಾವನ 3 ತರಣಿತನಯನೆಚ್ಚ ಗರಳಶರವು ಬೇಗ ನರನುತ್ತಮಾಂಗಕೆ ಗುರಿಯಾಗಿ ಬರಲು ಚರಣದುಂಗುಟದಿಂದ ಧರಣೀತಳವನೂರಿ ನರನ ಶಿರವ ಕಾಯ್ದ ನರನಾರಾಯಣ ನಿನ್ನ 4 ಪುಲಿನಾಮದಸುರನು ಛಲದಿ ಮಾಂಡವ್ಯನ ಗಳವಪಿಡಿದು ಬಾಧೆಗೊಳಿಸೆ ವೇಗದಲಿ ಪುಲಿಗೆ ಮೋಕ್ಷವನಿತ್ತು ಪುಲಿಗಿರಿಯಲಿ ಮುನಿ ಕುಲಜ ಮಾಂಡವ್ಯಗೆ ಒಲಿದ ವರದವಿಠಲ ನಾರಾಯಣ5
--------------
ವೆಂಕಟವರದಾರ್ಯರು
ಪಾದಾ ಭಕ್ತರನ ಪೊರೆವ ಪಾದಾ ಪಾದಾ ಸಿರಿದೇವಿ ಉರದಲ್ಲಿ ಒಪ್ಪುವ ಪಾದಾ ಪ ಧರಣಿಪತಿ ಬಲಿಯನ್ನು ನೆಲಕೆ ಒತ್ತಿದ ಪಾದಾ ಸುರನದಿಯ ಹರುಷದಲಿ ಪಡೆದ ಪಾದಾ ಧುರದೊಳಗೆ ಪಾರ್ಥನ ಶಿರವ ಕಾಯ್ದ ಪಾದಾ ಸುರರು ಸನಕಾದಿಗಳು ವಂದಿಸುವ ಪಾದಾ 1 ಕೋಪದಲಿ ಉರಗನ ಪೆಡೆಯ ತುಳಿದ ಪಾದಾ ತಾಪಸರ ಮನಕೆ ನಿಲಕದ ಪಾದಾ ಭೂಪ ಕೌರವನ ತಲೆಕೆಳಗೆ ಮಾಡಿದ ಪಾದಾ ಕಾಪಾಲಿ ಪೂಜಿಸುವ ಕಡು ದಿವ್ಯ ಪಾದಾ2 ಹಸುಳೆತನದಲಿ ಶಕಟಾಸುರನನೊದೆದ ಪಾದಾ ಋಷಿಪತ್ನಿ ಶಾಪ ವಿಶ್ಶಾಪ ಪಾದಾ ಕರ್ತು ರಿಪು ವಿನಾಶ ಕರದಿ ಮೆರೆವ ಪಾದಾ ವಸುಧಿಯೊಳು ವಿಜಯವಿಠ್ಠಲನ ಪಾದಾ3
--------------
ವಿಜಯದಾಸ
ಪಾದಾವ ಕಂಡೆ ಕೇಶವ ಪಾದಾವ ಕಂಡೆ ಪ ಇಷ್ಟು ದಿನ ಕಷ್ಟಬಟ್ಟು ಶಿಷ್ಟ ಹೆಂಡತಿಯ ನೀಗಿ ಭ್ರಷ್ಟ ಮನಕೆ ತುಷ್ಟಿ ಇಲ್ಲದೆ ಇಷ್ಟ ಪುತ್ರರ ಕೂಡಿ ಬಂದು ಪಾದಾವ ಕಂಡೆ 1 ಬಡಲಾರದ ಭವಣಿ ಬಿಟ್ಟು ಕಡುಪಾಪಿ ಎಂದೆನಿಸಿಕೊಂಡು ಬಡತನದಲ್ಲೆ ಬಾಳಿಕೊಂಡು ಅಡಿಗಡಿಗೆ ನಿನ್ನನ್ನೆ ನೆನೆಯುತ ಪಾದಾವ ಕಂಡೆ 2 ಸರಿಬಂದದ್ದು ನೀನೇ ಮಾಡಿದಿ ಮರೆಯೆ ಹರಿ ನಿನ್ನುಪಕಾರ ಭರದಿ ಎನ್ನ ಕೈಯ ಪಿಡಿದು ಪೊರೆಯಯ್ಯ ನರಸಿಂಹ ವಿಠಲ ಪಾದಾವ ಕಂಡೆ 3
--------------
ನರಸಿಂಹವಿಠಲರು
ಪಾದುಕವೇ ಗುರು ಪಾದುಕವೇ | ಪಾದುಕವೇ ಗತಿ ದಾಯಕವೇ ಪ ಕಲ್ಪತರು ಬೇಡಿದಲ್ಪವ ಕೊಡುವದು | ಕಲ್ಪಿಸದೀವುದ ಕಲ್ಪಿತ ಫಲಗಳ 1 ದಾರುಶಿಲೆಯ ವಂದವಾರಿಸ ಲರಿಯದು | ತೋರುವಫಾದ್ರಿ ವಿದಾರಿಸಿ ನೂಕುವಾ 2 ತಂದೆ ಮಹೀಪತಿ ದ್ವಂದ್ವ ಪಾದಕ ಹೊಂದಿ | ವಂದ್ಯ ಸರ್ವರಿಗಾಗಿ ನಂದನ ಸಲಹುವ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪಾದುಕೆಗಳ ಭಾಗ್ಯಶ್ರೀಗುರುವು ಶ್ರೀರಂಗಪಟ್ಟಣಕಾಗಿ ಬಿಜಯಂಗೈದು ಮಠದಲಿಯೋಗಪೀಠದಲಿರ್ದ ಸಮಯದಿ 'ಪ್ರಕುಲ ಬಂದುಆಗ ಚಾತುರ್ಮಾಸ್ಯ ಒದಗಿರಲಾಗಿ ಪ್ರಾರ್ಥನೆಗೈದ ಕಾರಣರಾಗರ'ತನು ವಾಸುದೇವನು ನೆಲಸಿದನು ದಯದಿ 1ತೀರಿ ವ್ರತವನು 'ಶ್ವರೂಪದ ದಾರಿಯಲಿ ಸಂಚರಿಸಿ ಪುನರಪಿಮಾರಹರನಾಲಯದ ಮುಂದಣ ಮಠಕೆ ಬಂದಿರುತಾಸಾರಿ ಸಾಯಂಕಾಲದಲಿ ಕಾವೇರಿಯಲಿ ಸ್ನಾನವನು ಮಾಡಿಯೆನಾರೆಯಣನಾಮವನು ಸ್ಮರಿಸುತ ಬಹುದ ನಾಂ ಕಂಡೆಂ 2ಕಂಡ ಬಳಿಯಲೆ ಭಕ್ತಿಭಾವದಿ ದಂಡದಂತಾನೆರಗೆ ಕೃಪೆುಂಮಂಡೆಯೆತ್ತೇಳಾರು ನೀನೆಂದಾಗ ಮಂದಲಿಸಿಪುಂಡಾರೀಕಾಂಬಕನ ದಾಸನೆ ಗಂಡುಗಲಿಯಾಗಿಹೆಯ ಕ್ಷೇಮವೆಕಂಡೆ'ಂದಿಗೆ ಬಹುದಿವಸಕೆಂದಾಗ ನುಡಿಯುತಿರೆ 3ಆ ಬಳಿಯ ಮನೆುರಲು ಮಾಳಿಗೆ ಶೋಭಿಸುತ ಬೆಳುದಿಂಗಳಿಗೆ ಬಲುಗಾಬರಿಯ ಸಂದಣಿ ಮಹಾನವ'ುಯ ಮಹೋತ್ಸವದಾಕಾಬರಿದ ಮೇಲಿದ್ದ 'ಪ್ರನು ತಾ ಭುಜಿಸಿ ತಾಂಬೂಲಶೇಷವತೂಬಿರಿಯೆ ಮುಕ್ಕುಳಿಸಿ ಗುರುಶಿರದೊಳಗೆ ಬಿದ್ದುದದು4ಹರಹರಾಗುರುಕೃಪೆಯೆಕೋಪವುಬರಬಹುದುನಿನಗೆನುತನುಡಿಯಲು ಗುರುವು ಕಂಡಾ ಬಳಿಯ ಕೇಶವಮೂರ್ತಿಯೆಂಬವನುಅರಿಯದಾದೈ ಮೇಲೆ ಕುಳಿತೀ ಬರುವ ಯತಿಗಳ ನ್ಯಾಯವೇಯೆಂದರುಹಲಾ ದ್ವಿಜಬೆದರಿ ಧುಂ'ುಕ್ಕಿದನು ಭೂತಳಕೆ 5ತಪ್ಪಿದೆನು ದಮ್ಮೈಯ ಗರ್ವವನೊಪ್ಪಿಕೊಳಬೇಕೆನಗೆ ಗತಿಯೇನಪ್ಪುದೋ ಕಂಗಾಣದಾದೆನು ವಾಸುದೇವಾರ್ಯಾತಪ್ಪಿದೆನು ತಪ್ಪಿದೆನು ತಪ್ಪಿದೆ ತಪ್ಪಿದೆನು ತಪ್ಪಿದೆನೆನುತ್ತಲಿಧೊಪ್ಪನಡಗೆಡ'ದರ ತನುವನು ನೋಡ್ದ ಗುರುವರನು 6ತಂದೆ ಬಾ ಯನ್ನಯ್ಯ ಬೆದರದಿರೆಂದಭಯವನು ಕೊಡುತ ಕರುಣಾಸಿಂಧು ವಾಗಮೃತದಲಿ ನೆನಸಿದ ಪರಿಯನೇನೆಂಬೆಕಂದನಪ್ಪನು ಸುಗುಣವಂತನು ಮುಂದಣೀ ದಿವಸಕ್ಕೆ ನಿನಗೆನುತೆಂದು ಮತ್ತವರಾಡಿದುಕ್ತಿಯನೆಂತು ಬಣ್ಣಿಪೆನು 7ಸಹಜ ತಂಬುಲ ಶಿರದ ಮೇಲಕೆ ಬಹುದು ಗುರುಕೃಪೆ ರೂಪವೆತ್ತೀ''ತ ಪ್ರಾಯಶ್ಚಿತ್ತಗೈದುರು 'ರತಿಯನು ಕಲಿಸಿಸಹಜ ಸುಖಸಂ'ತ್ಪದ' ತಾ ಬಹುದುನೊದಗಿಸಿತಾಗಿ ಮುಂದೀಬಹು ಜನರ ಗ್ಠೋಯನು ಬಿಡಿಸಿದುದೆಂದರುತ್ತರವಾ 8ಇರುವುದನುಚಿತ ಜನಸಮೂಹದಿ ಬರುವುದನುಚಿತ ಬರದ ಮಾರ್ಗದಿಕರದು ಮನ್ನಿಸಿ ಜನರ ಕ್ಷೇಮವ ಕೇಳ್ವುದನುಚಿತವುಅರಿಕೆದಟ್ಟಿತು ಮನಕೆ ಗುರು ತಾನುರುಹು ಸಂನ್ಯಾಸವನು ಥೂಯೆಂದಿರದೆ ಮೋರೆಯ ಮೇಲೆ ತಾನುಗುಳಿದನು ಸಿದ್ಧ'ದೂ 9ಪ್ರೇಷೆ ತಾ ಜ್ಞಾನಕ್ಕೆ ಮಾತೃವು ಪ್ರೇಷೆಯೇ ಜ್ಞಾನಕ್ಕೆ ತಂದೆಯುಪ್ರೇಷೆ ಭವಸಾಗರವ ದಾಂಟಿಪ ನಾವೆ ಸುಖಕರವೂಪ್ರೇಷೆ ಸರ್ವೋತ್ಕರುಷವಪ್ಪುದು ಪ್ರೇಷೆಯನ್ನುಚ್ಚರಿಸಿ ಮತ್ತಭಿಲಾಷೆುಂ ಜನಸಂಗಗೈಯ್ಯಲ್ಕಾಯ್ತೆ ನಿಗ್ರಹವೂ 10ಭಲರೆ ಗುರುವರ ಧನ್ಯನಾದೆನು ಮರೆತೆ ತಪ್ಪಿದೆ ಮುಂದೆ ಜನರೊಳಗಿರೆನು ಗುಹೆಯನು ಪೊಕ್ಕು ಮೌನವ್ರತ ಸಮಾಧಿಯಲಿುರುವವೋಲ್ ವೈರಾಗ್ಯವನು ನೀ ಕುರುಣಿಸಿದೆಯೆಂದೆನುತ ನಗುತಲಿಹರುಷದಿಂ ಕಾವೇರಿಗೈತಂದನು ಗುರೂತ್ತಮನು11ಸಾ'ರದ ಸಂಖ್ಯೆಯಲಿ ಮೃತ್ತಿಕೆ ುೀವುದಕ್ಕೆನ್ನುವನು ನೇ'ುಸಿಭಾ'ಸುತ ಪ್ರಣವವನು ಸ್ನಾನವ ಮಾಡಿ ನಿಯಮದಲಿಭಾವವಳಿಸಿ ಕಮಂಡಲವ ಜಲಕೀವ ಸಮಯದಲುಗುಳ್ದ 'ಪ್ರನಭಾವದಲಿ ನಡುಗದಿರು ಸುತನಹನೆಂದ ಗುರುವರನು 12ಏನನೆನ್ನುವೆನಾ ದ್ವಿಜನು ಸುತ 'ೀನನತಿ ಯತ್ನಗಳ ಮಾಡುತಭಾನು'ಂಗೆರಗುತ್ತಲಿದ್ದನು ಪುತ್ರಕಾಮುಕನುಏನು ಕೃಪೆಯೋ ತಿಂಗಳೆರಡಕೆ ಮಾನಿನಿಯು ತಾ ಗರ್ಭದಾಳಿಯೆಸೂನುವನು ತಾ ಪಡೆದಳೀ ಗುರು ಪೇಳ್ದ ದಿವಸದಲಿ 13'ುಂದು ಕಾವೇರಿಯಲಿ ಗುರುವರ ಬಂದು ಮಠಕಾಕ್ಷಣವೆ 'ಪ್ರರಸಂದಣಿಯ ನೆರೆ ಕಳು'ಯೆನಗಪ್ಪಣೆಯ ಕೊಡಲಾಗಿಬಂದು ಮನೆಯೊಳಗಿದ್ದು ರಾತ್ರಿಯು ಸಂದ ಬಳಿಕಾನೈದಿ ನದಿಯೊಳು'ುಂದು ಗುರವರಗೆರಗಲೈದಿಯೆ ಕಾಣೆ ನಾನಲ್ಲಿ 14ಸ್ನಾನಕೈದಿದರೇನೊ ಬಂದರೆ ಕಾಣುವೆನು ನ'ುಸುವೆನುಯೆಂದೇನಾನು ನೋಡಿದೆ ಬಾರದಿರೆ ಮಧ್ಯಾಹ್ನ ಪರಿಯಂತಭಾನು'ಂಗಘ್ರ್ಯವನು ಕೊಟ್ಟು ಮಹಾನುಭಾವರ ನೆನನೆನದು ದುಂಮಾನದಿಂದಿರುತಿದ್ದೆ ಸಾಯಂಕಾಲ ಪರಿಯಂತ 15ಇರುಳಿಗೂ ಬರದಿರಲು ಪಾದುಕೆುರಲು ಪೂಜಿಸಿ ನ'ುಸಿಯಗಲಿದಪರಮ ತಾಪದಿ ಕುದಿದು ರೋದನಗೈದೆ ಪಂಬಲಿಸಿಗುರುವರನೆ ನಿನ್ನಂಘ್ರಿಕಮಲದ ದರುಶನವು ಮರೆಯಾಯ್ತೆ ದೀನನಕರೆದು ಮನ್ನಿಸಿ ಕಾಯ್ದೆಯಲ್ಲೈ ವಾಸುದೇವಾರ್ಯಾ 16ಏನು ಗತಿ ಮುಂದೆನಗೆ ಮಾರ್ಗವದೇನನುಗ್ರ'ಸಿಪ್ಪ ಮಂತ್ರ 'ದೇನು ಜಪಿಸುವ ಮಾನವೆಂತಿದರರ್ಥವೇನಹುದುನಾನರಿಯದವನೆಂಬುದನು ನೀ ಜ್ಞಾನದ್ಟೃಯೊಳರಿದು ರಕ್ಷಿಸುದೀನನನು ಕೈ'ಡಿದು ಬಿಡುವರೆ ವಾಸುದೇವಾರ್ಯಾ 17ಭವಸಮುದ್ರದಿ ಮುಳುಗುತೇಳುತ ಲವಚಿ ತೆಗೆವರ ಕಾಣದಳಲುತಕ'ದು ತಮ ಕಂಗಾಣದಿರೆ ನೀನಾಗಿ ದಯತೋರಿಭವಭವಾಂತರದುರಿತಗಳ ಪರಿಭ'ಸಿಯಭಯವನಿತ್ತು ಸಲ'ದದಿ'ಜವಂದ್ಯನೆಯಗಲಿದೈ ಶ್ರೀ ವಾಸುದೇವಾರ್ಯಾ 18ಅರಿಯೆ ಹೃತ್ಕಮಲದಲಿ ಭಾ'ಪ ಪರಿಯನಿದಿರಿಟ್ಟಿರಲು ನೀ ಶುಭಕರದ ಮೂರುತಿಯಾಗಿ ಗ್ರಂಥಾರ್ಥಗಳ ಶೋಧಿಸಿಯೆಅರಿಯಬೇಕೆಂಬಿಚ್ಛೆ ಬರಲಿಲ್ಲುರುವ ನಿನ್ನಯ ವಾಗಮೃತ ರಸಸುರಿಯೆ ತಾನೇ ಪಾನಗೈಯುತ ಮತ್ತನಾಗಿದ್ದೆ 19ಜೀ'ಸುವೆ ನಾನೆಂತು ಧರೆಯೊಳು ಪಾವನದ ಮೂರುತಿಯ ಕಾಣದೆಭಾವದಲಿ ಸುಖಗೊಳಿಪ ವಾಕ್ಸುಧೆಯರತ ಕಾರಣದಿಂದೇವ ಮರೆಯಪರಾಧ'ದ್ದರು ಕಾವ ಕರುಣೆಗೆ ಕೋಪವೇ ಸಂಜೀವ ನೀ ಭುವನಕ್ಕೆ ತೋರೈ ವಾಸುದೇವಾರ್ಯಾ 20ಮೊರೆುಡುತಲೀ ರೀತಿುಂದಿರುತಿರಲು ಪಾದುಕೆಗಳಿಗೆ ನ'ುಸುತಬರಲು ಪಲ್ಲವ ಬಾಯ್ಗೆ ಗುರುಕೃಪೆುಂದ ತಾನಾಗಿತಿರುಪತಿಯ ವೆಂಕಟನೆ ಮೂರ್ತಿಯ ಧರಿಸಿ ಯತಿವರನೆನಿಸಿದುದನಾಹರುಷದಿಂ ಪಾಡಿದೆನು ಕೀರ್ತನ ನೆವದಿ ಮೈಮರೆದೂ 21
--------------
ತಿಮ್ಮಪ್ಪದಾಸರು
ಪಾಪ ಹತ್ತಿದೆ ಜಗಕೆ ಪಾಪ ಹತ್ತಿದೆಪಾಪದೊಳಗೆ ಮಹಾಪಾಪ ಪುರುಷ ಬೀಜಕೆ ಬಂದಿದೆ ಮೃತ್ಯು ಪ ಅಂದು ಕೃತಯುಗದಿ ಪಾರ್ವತಿಯಾಯಿತು ಭಸ್ಮಾಸುರಗೆಮುಂದೆ ತ್ರೇತಾಯುಗದಿ ಸೀತೆಯಾಗಿ ಹಿಡಿಯಿತು ರಾವಣಂಗೆ ಮೃತ್ಯು1 ಹಿಂದೆ ದ್ವಾಪರಯುಗದಿ ದ್ರೌಪದಿಯಾಗಿ ದುರ್ಯೋಧನನ ಮುರಿಯಿತು ಮೃತ್ಯುಇಂದು ಕಲಿಯುಗದಿ ನೋಡಲು ಇದಕೋ ಮನೆಮನೆಗೆ ಮೃತ್ಯು 2 ಹೆಡಕತ್ತಲಿ ಕೂತು ಹಗಲು ಇರುಳು ಕಾಯಿತಿದೆ ಮೃತ್ಯುಬಿಡಿಸಿಕೊಂಡು ಸ್ವರ್ಗಕೆ ಹೋದರೆ ಬೆನ್ನ ಬಿಡದು ಅಲ್ಲಿ ಮೃತ್ಯುಅಡ ಶಿರೋಶಿ ಇಲ್ಲಿಗೆ ಬಂದರೆ ಅಡರಿ ಕೊಂಬುದು ಮೃತ್ಯು3 ಮೃತ್ಯುಭಯವ ಬಿಡಿಸಿ ಮುಂದೆ ಕಾವರಿಲ್ಲವೋಮೃತ್ಯುಂಜಯರು ಚಿದಾನಂದ ಭಕ್ತರುಂಟುನಂಬಿದರೆ ಮೃತ್ಯು ಮಗ್ಗುಲಲಿದ್ದರೇನು ಮೋಹವಿಲ್ಲದಂತೆ ಮಾಡುವುದು4
--------------
ಚಿದಾನಂದ ಅವಧೂತರು
ಪಾಪಾತ್ಮ ನಾನಲ್ಲ ಪಾಪವೆನದಿನಿತಿಲ್ಲ ಪ ಶ್ರೀಪತಿಯೆ ನಿನಗೆ ನೀನೇ ಮಾಡಿಕೊಂಡೆ ಅ ವರದನು ಕರದಲಿ ಉಷ್ಣಜಲ ಮೃತ್ತಿಕೆಯತರಲು ಕೈ ಸುಟ್ಟಾಗ ಪಣೆಯ ಠೊಣೆದು ಬೈದೆಮರಳಿ ನಾಚಿಕೆ ಇರದೆ ಚರಣಕೆ ಪಾವುಗೆ ತಂ-ದಿರಿಸಿದಪರಾಧ ಎನ್ನದೊ ನಿನ್ನದೊ ದೇವ 1 ಬಂದ ಭೃಗು ಮುನಿ ಎದೆಯನೊದೆಯೆ ಆತಗೆ ಪಾಪಅಂದು ಮೂದಲಿಸಿ ಬೈದವರಿಗೆ ದೋಷನಿಂದುದೇ ಹಣೆಯೊಳಗೆಸೆಯೆ ಭೀಷ್ಮಂಗಘವುಹೊಂದಿದಾ ಪಾಂಡವರಿಗೆ ಕುಂದು ಬಂದಿತೆ ದೇವ2 ಕುರುಡನಿಗೆ ದಾರಿಯನು ತೋರದೆ ಆತಗೆ ಮುನಿದುದರಿಗೆ ನೂಕಿದಡೆ ಅವನು ಏನು ಮಾಡುವನುಶಿರಕೆ ತಪ್ಪಾಗಿ ಗುರಿಯಿಡಲದು ಸರಳ ತಪ್ಪೆಅರಸನಾಳ ಕೊಂದಡೆ ಆರೇನು ಮಾಡುವರು 3 ಕುಣಿಸಿದರೆ ಆಡುವುದು ಬೊಂಬೆ ಸೂತ್ರಮುಖದಿಇನಿತುಂಟೆ ಕಪಟನಾಟಕ ಸೂತ್ರಧಾರಿಇನಿತಾಡಿಸಿದರಾಡುವೆ ಪಾಪ ಪುಣ್ಯಂಗಳಿಂದಎಣಿಕೆಗಾನಲ್ಲ ನೀನಲ್ಲದಿಲ್ಲ 4 ತಂದೆತಾಯಿಗಳು ತಮ್ಮ ಕಂದಗೆ ಸರ್ಪಮುಖದಿಂದ ಕಚ್ಚಿಸಲು ಆ ತಪ್ಪು ಕಂದನದೆಮುಂದರಿಯದಜ್ಞಾನಿಯೆಂದು ಕ್ಷಮಿಸೆಲ್ಲವನು ತಂದೆ ವೇಲಾಪುರದ ಆದಿಕೇಶವನೆ5
--------------
ಕನಕದಾಸ
ಪಾಪಾತ್ಮನಾನಲ್ಲ ಪಾಪವೆನಗಿನಿತಿಲ್ಲ ಶ್ರೀಪತಿಯೆ ನಿನಗೆ ನೀನೇ ಮಾಡಿಕೊಂಡೆ ಪ ಅಂದು ಭೃಗುಮುನಿಯೆದೆಯಲೊದೆಯಲವನಿಗೆ ಪಾಪ ಬಂದುದೇ ಮೂದಲಿಸಿ ಬೈದವನಿಗಾ ದೋಷವು ನಿಂದುದೇ ಹಣೆಯೊಡೆಯಲೆಸೆದ ಭೀಷ್ಮಂಗಘವು ಹೊಂದೀತೆ ಪಾಂಡವರ್ಗೆ ಕುಂದು ಬಂದೀತೆ ದೇವಾ 1 ವರದನಾಕಾರದೊಳಗುಷ್ಣಜಲ ಮೃತ್ತಿಕೆಯ ತರಲು ಕೈಸುಡಲು ಹಣೆಯನು ಟೊಣದು ಬೈದೇ ಮರಳಿ ನಾಚಿಕೆಯಿಲ್ಲದೆ ಚರಣಕ್ಕೆ ಪಾವುಗೆಯ ನಿರಿಸಿದಪರಾಧ ನಿನ್ನದೋ ಯೆನ್ನದೋ ದೇವಾ 2 ಕುರುಡನಿಗೆ ದಾರಿಯನು ತೋರುವಾಪ್ತನು ಮುಳಿದು ಜರಿದು ನೂಕಿದೊಡಾತನೇನ ಮಾಡುವನೂ ಗುರಿಯನಿಡುವವನು ತಪ್ಪೆಸೆಯೆ ಸರಳಿನದೇನು ಅರಸಾಳಕೊಂದಡವನೇನು ಮಾಡುವನೂ 3 ಕುಣಿಸಿದಂತಾಡುವುದು ಬೊಂಬೆಯು ಸ್ವತಂತ್ರವದ ಕಿನಿತುಂಟೆ ಕಪಟನಾಟಕ ಸೂತ್ರಧಾರೀ ಎನಿತಾಡಿಸಿದೊಡಾಡುವೆನು ಪಾಪಪುಣ್ಯವೆಂ ಬೆಣಿಕೆಗಾನಲ್ಲ ನೀನಲ್ಲದೆಲೆ ದೇವಾ4 ತಂದೆ ತಾಯ್ಗಳು ತಮ್ಮ ಕಂದನನು ಸರ್ಪಮುಖ ದಿಂದ ಕಚ್ಚಿಸಲು ತರಳನಲಿ ತಪ್ಪೇನೂ ಮುಂದರಿಯದಜ್ಞಾನಿಯೆಂದು ನೀಕ್ಷಮಿಸಿಕೋ ತಂದೆ ವೈಕುಂಠ ವೇಲಾಪುರಾಧೀಶಾ 5
--------------
ಬೇಲೂರು ವೈಕುಂಠದಾಸರು
ಪಾಪಿಯ ನೋಡೆ ಬಡಿಸುವ ಪಾಪಿಯ ನೋಡೆಪಾಪಿಯ ನೋಡೆ ಪಾಪದ ಪಿಶಾಚಿಪಾಪಿಯ ಮೋರೆಯ ನೋಡಬಾರದಕ್ಕೆ ಪ ಅನ್ನವನೀಗ ಇಷ್ಟಿಷ್ಟು ಹಾಕುವಳು ಅತ್ತಲಾಗಿ ಇಡುವಳುಏನು ಇಷ್ಟೆಂದು ಕೇಳಲು ಅರಿಯಿರಿ ಹೊಟ್ಟೆಯೆಂದು ಎದುರಿಗೆ ನಿಂತೆ ಮುಸಿ ಮುಸಿ ನಗುವಳು 1 ಆಜ್ಯವ ಹಾಕೆನೆ ಅಲ್ಲಾಡುತಲಿ ಅರಿಯಿರಿ ಬೇಸಗೆ ಸೆಖೆ ಎಂತೆಂಬಳುಮಜ್ಜಿಗೆ ಹಾಕೆನೆ ಮಂದಮತಿಗಳ ಮಹಾಶೈತ್ಯವು ಬೇಡವು ಎಂತೆಂಬಳು 2 ಉತ್ತಮರೆಂದರೆ ಒಳ್ಳೆಯದಿಕ್ಕಳು ಉಬ್ಬಿಸಹೋದರೆ ಉಬ್ಬದಿಹಳುನಿತ್ಯ ಚಿದಾನಂದ ಸತ್ಪುರುಷರಿಗೆ ನಿಶ್ಚಯವಾಗಿ ಉಣಬಡಿಸುವಳು 3
--------------
ಚಿದಾನಂದ ಅವಧೂತರು
ಪಾಪಿಯೆಂದೆನಲು ನಾ ತಗ್ಗೆ ಪುಣ್ಯ ರೂಪಿಯೆಂದೆನಲು ನಾ ಹಿಗ್ಗೆ ವ್ಯಾಪಿಸಿ ನೀ ಎನ್ನ ಕುಣಿಸಿದ ಮೇಲೆ ನಿ ಪರಿ ಜನರೆನ್ನ ಪ ನಡೆಸಿದಂತೆ ನಾ ನಡೆವೆ ಉಡಿಸಿದಂತೆ ನಾನುಡುವೆ ನೀ ತೊಡಿಸಿದಂತೆ ನಾ ತೊಡುವೆ ಎ ನ್ನೊಡೆಯ ಸೂತ್ರಧಾರ ನೀನೆಂದರಿಯದೆ ಪೊಡವಿ ಜನರು ಬಾಯಿ ಬಡಿಕ ತನದೊಳೆನ್ನ 1 ಬಿಂಬಕ್ಕೆ ಸ್ವತಂತ್ರವೇನು ತುತ್ತು ಗೊಂಬಾತ ಉಂಬಾತ ನೀನು ಗೊಂಬೆಯಂತಿರಲದಕೇನು ಬರಿಯ ಹಂಬಲಿಪರು ಬರಿ ಕುಂಭಿನಿ ಜನರೆನ್ನ 2 ಭಾಗ್ಯವುಂಟೆಂದು ನಾ ಮೆರೆಯೆ ವೈ ರಾಗ್ಯವುಂಟೆಂದು ನಾ ಜರಿಯೆ ಯೋಗಿಗಳಿಗೆ ನಾ ಸರಿಯೇ ಯಾ ವಾಗಲು ನಡಿಸಿದ ಪರಿಯೆ ಈಗ ಕಾಯದ ಬರಿಯ ಡಂಬವ ಕಂಡು ಭಾಗ್ಯವಂತನೆಂದು ಜನರು ಕೊಂಡಾಡಲು 3 ಬರಿಯ ಸುಖವ ನಾ ತೊಟ್ಟೆ ಸರ್ವ ಸಿರಿಯ ಹೆಡತಲೆಯೊಳಿಟ್ಟೆ ಅರಿತರಿತು ಮಾಯದ ಲೊಟ್ಟೆ ಕಂಡು ಬೆರಗಾಗಿ ನಂಬಿ ನಾ ಕೆಟ್ಟೆ ಗುರು ವಿಮಲಾನಂದವರ ಮಾಂಗೀರೀಶನು ಇರಿಸಿದ್ಹಾಗೆ ನಾನಿರಬೇಕಲ್ಲದೆ4
--------------
ಭಟಕಳ ಅಪ್ಪಯ್ಯ
ಪಾಪಿಯೊಳು ನಾ ಬಂದೆ ಪರದೇಶಿ ನಾನಾದೆ ಕಾಪಾಡುವರ ಕಾಣೆ ಕೈಪಿಡಿ (ದು) ಆಪತ್ತು ಬಂದ ಕಾಲಕ್ಕೆ ಆರಯ್ವರೊಬ್ಬರಿಲ್ಲ ಶ್ರೀಪತಿಯೆ ಕಡೆಹಾಯಿಸೊ ತಂದೆ ತಾಯೆಂಬುದನು ನಾ- ನೊಂದು ಗುರತನರಿಯೆ ನಿಮ್ಮ ಕಂದ -
--------------
ಹೆಳವನಕಟ್ಟೆ ಗಿರಿಯಮ್ಮ
ಪಾಪೇಂದ್ರಿಯಗಳಿಗೆರಗಿ ಪರಹಿತಾರ್ಥವ ಮರೆದು ವ್ಯಾಪಾರ ವಿಷಯಂಗಳಲ್ಲಿರೆ ಯಮನೊಯ್ದು ಕೋಪಾಟೋಪದಲಿಂದ ದಂಡಿಸಿ ತಮಸಿನ ಕೂಪದಲ್ಲಿ ಹಾಕದಲೆ ಬಿಡುವನೆ ಮರುಳೆ ಪ ಉಡಿಗೆ ತೊಡಿಗೆ ಇಡಲು ಮಡದಿಯಳ ಮುಖ ನೋಡಿ ಕಡು ಹಿಗ್ಗಿ ಹುಗ್ಗಿ ಪಡಗದಂತೆ ಹಿರ್ರನೆ ಪಿಡಿದು ಗಲ್ಲವ ಮುಟ್ಟಿ ಮುಡಿಗೆ ಮುಡಿವಾಳವನು ತಡಿಯದಲೆ ಮುಡಿಸುತ್ತಲಿ ಕಕ್ಕಸ ಕುಚ ವಡನೊಡನೆ ನೋಡಿ ಸುಖಬಡುತಾ ಬಿಡದೆ ಕಾಳ್ಯಾಡುವುದು ಸುಡುಸುಡು ಮಾಡಿದರಿನ್ನಾವ ಗತಿ ಮರುಳೇ 1 ನೆಂಟರು ಮನೆಗೆ ಬರಲು ವಂಟಿಯಂತೆ ಮೊಗವ ಸೊಂಟ ಮಾಡಿಕೊಂಡು ಕಂಠವನು ತರ್ಕೈಸಿ ಕುಂಟವಾರ್ತೆಯ ಕೇಳಿ ಬಂಟನು ನಾನೆಂದು ತೊಂಟತನ ಬಗೆ ತೋರುತಾ ಉಂಟಾದ ಗೋಧಿಯ ಸೊಂಟೆ ಬೆಲ್ಲನು ತಂದು ಹೆಂಟಿಯಂತೆ ಹದಿನೆಂಟು ಕಡುಬನೆ ಕೊರಿಸಿ ವಂಟಿಲಿ ಕುಳಿತು ಸುಂಡಿಗೆಯನ್ನು ಚಾಚುತ್ತಾ ಎಂಟು ಮಡಿಸದೆ ವಾರ್ತಿ ಪೇಳುತಲಿ ಮರುಳೇ 2 ಇಂದು ನಮ್ಮನೆ ಪ್ರಸ್ತÀವೆಂದು ಆರಾದರೂ ಬಂದು ಪೇಳಲು ಊರ ಹಂದಿಯಂತೆ ಕಾಯಿದು ಒಂದು ಕಾಳು ತಿನದೆ ಸಂದಿಗೊಂದಿ ಸುತ್ತಿ ಸಂಧ್ಯಾಕಾಲ ವಾನರಾಗುತ್ತ ಚಂದದಿಂದ್ಯುಕ್ತಿಯೊಳು ದ್ವಂದ್ವದಲಿ ಕುಳಿತಿವರು ತಂದೆ ತಾಯಿ ಕಡೆ ಬಂಧುಬಳಗವೆಂದೂ ಒಂದಿಷ್ಟು ಕಡಿಮೆ ತಿನ್ನದೆ ಪರರ ಒಡವೆಯನು ತಿಂದು ಡರ್ರನೆ ತೇಗಿ ನಸುವ ನಗುವ ಮರುಳೇ3 ನಾಡಾಡಿ ಚಾಡಿ ಮಾತಾಡಬೇಕಾದರೆ ಖೋಡಿ ನಾಲಿಗೆ ದೊಡತಾಗಿ ಬಾಹಿನೀ ನಿಡಿ ಲಟಲಟವೆನುತಾ ಕೋಡಗದಂತೆ ಕುಳಿತು ಹೇಡಿ ಪರನಿಂದೆಗಳಿಗೆ ಬಾಡದಲೆ ಬತ್ತದಲೆ ಮಾಡಿದ ಮಹಾಪುಣ್ಯ ಕಾಡಿಗೊಪ್ಪಿಸಿ ಕೊಟ್ಟ ಮೂಢ ಗಾರ್ಧಬನಂತೆ ಓಡಾಡಿ ಬಳಲಿ ನಾಡಾಡಿ ಸುದ್ದಿಗಳಿಗೆ ಬಿಡಿ ಬಿಡಿಂದಾ ತಿರುಗುವಾ ಹೀನ ಮರುಳೇ 4 ಸಂಸಾರವೆಂಬಾ ಸಾರಾ ಸಾಗರ ಮಧ್ಯ ಹಿಂಸನಾಗದೆ ಬಿಟ್ಟು ಇದರಂತೆ ಭಕುತಿ ಮರು ದಂಶ ಗುರು ಮಧ್ವಮುನಿರನ್ನನಾ ಶ್ರೀ ಚರಣ ಸಂಶಯವಿಲ್ಲದಲೆ ನಂಬಿ ಸಂಸಾರ ಉತ್ತರಿಸು ಸಂದೇಹ ಇದಕಿಲ್ಲ ಕಂಸಾಸುರನ ಪ್ರಾಣಹರ ಎನ್ನ ಮನಸ್ಸಾ ಹಂಸ ಶ್ರೀ ವಿಜಯವಿಠ್ಠಲನ್ನ ಪಾದದಾ ಪಾಂಶವೊ ಮಾಡಿ ಗತಿಯಲಿ ಬಾಳು ಮರುಳೇ5
--------------
ವಿಜಯದಾಸ
ಪಾಪೋಸು ಹೋದುವಲ್ಲಾ ಪ ಅಪಾರ ಜನ್ಮದಿಂದ ಆರ್ಜನ ಮಾಡಿದ ಅ.ಪ. ಉರುಗಾದ್ರಿಯಲ್ಲಿ ಸ್ವಾಮಿ ಪುಷ್ಕರಣಿ ಮೊದಲಾದಪರಿಪರಿ ತೀರ್ಥ ಸ್ನಾನಗಳ ಮಾಡಿಹರಿದಾಸರ ಕೂಡ ಶ್ರೀನಿವಾಸ ಮೂರ್ತಿದರುಶನದಲಿ ಮೈಮರೆತು ಇದ್ದೆನು ಎನ್ನ 1 ಪರಮ ಭಾಗವತರು ಹರಿಕಥೆ ಹೇಳಲುಪರಮ ಹರ್ಷದಿಂದ ಕೇಳುತಿದ್ದೆಪರಮ ಪಾಪಿಷ್ಠರ ಪಾಲಾಗಿ ಹೋದಾವುಪರಮಾತ್ಮನ ಚಿತ್ತಕೆ ಬಂದಿತೀಗೆನ್ನ 2 ಮಾಯಿ ಒಲಿದು ಎನಗೆ ಕೊಂಡು ಕೊಟ್ಟಿದ್ದಳುದಾಯಿಗಾರರು ನೋಡಿ ಸಹಿಸಲಿಲ್ಲಾಮಾಯಾರಮಣ ನಮ್ಮ ಮೋಹನ್ನ ವಿಠಲನ್ನಮಾಯದಿಂದಲಿ ಮಟ್ಟವಾಯಿತು ಎನ್ನ 3
--------------
ಮೋಹನದಾಸರು
ಪಾಮರ ಜನರಿಗೆಲ್ಲ ಪ ಕಾಮಮದ ಮತ್ಸರಗಳಿಂದಲಿ ತಾಮಸೌಘಕೆಅ.ಪ ಸ್ನಾನ ಮೌನ ಜಪತಪಗಳನರಿಯದೆ ಸ್ವಾಮಿ ನಿನ್ನನು ಮುಟ್ಟಿ ಪೂಜಿಸದೆ ಸೀಮೆಯರಿಯದ ಕಾಮಕರ್ಮದಿ ನೇಮವಿಲ್ಲದ ಕ್ಷುದ್ರಸ್ವಾರ್ಥದಿ ತಾಮಸರ ಸಂಸರ್ಗದಿಂದ ವಿ ರಾಮವರಿಯದ ಜನರ ಪಾಲಿಗೆ 1 ಜ್ಞಾನ ಭಕ್ತಿ ವೈರಾಗ್ಯಗಳರಿಯದೆ ಜ್ಞಾನಿಜನರ ಸಂಗವ ಬಯಸದೆ ಹೀನದುಷ್ಕರ್ಮಗಳ ಮಾಡುತ ನಾನು ತಾನೆಂಬ ಕೊಬ್ಬಿಲಿ ಜಾನಕೀಪತಿ ನಿನ್ನ ಮಹಿಮೆಯ ಕಾಣದಿಹ ದುಷ್ಕರ್ಮಿಜನರಿಗೆ 2 ಶ್ರೀನಿಧಿ ನೀ ಕರುಣಿಸಿ ರಕ್ಷಿಸದಿರೆ ದೀನಜನರ ಪಾಲಿಪರಾರೋ ಸಾನುರಾಗದಿ ಬೇಡಲರಿಯದ ಜ್ಞಾನಹೀನರ ತಪ್ಪನೆಣಿಸದೆ ನೀನೆ ಕೈಪಿಡಿದೆತ್ತಿ ರಕ್ಷಿಸು ಮಾನನಿಧಿ ರಘುರಾಮವಿಠಲ 3
--------------
ರಘುರಾಮವಿಠಲದಾಸರು