ಒಟ್ಟು 37131 ಕಡೆಗಳಲ್ಲಿ , 139 ದಾಸರು , 11109 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನರಹರಿ ತೀರ್ಥಯತಿವರ್ಯ ಇಷ್ಟೆಂದೊ ಚರಿಯ ಪ ಸುರವಿನುತ ಪದಹರುಷತೀರ್ಥರ ಕರಕಮಲ ಸಂಜಾತರೆನಿಸುತ ಧರೆಯೊಳಗೆ ಸಿರಿಸಹಿತರಾ ಮನ ಕರೆದು ಧರೆಸುರ ಜನಕೆ ತೋರಿದ ಅ.ಪ ಚರಿಸುತ ಬರಲು ಗಜಪುರದಿ ಪುರ- ದರಸನಿಲ್ಲದಿರೆ ಯೋಚಿಸುತ ಕರಿಕರದಿ ವರಮಾಲಿಕೆಯ ಕೊಡಲಾಕ್ಷಣದೀ ಯತಿ ವರರ ಕಂಠದಲಿ ಹಾಕಲು ಜನ ಸಭದಿ ಪುರಜನದ ಪ್ರಾರ್ಥನದಿ ದ್ವಾದಶ ವರುಷ ಪ್ರಜರನು ಪೊರೆದು ಕೋಶದೊಳಿ- ರುವ ಧರಿಜಾಸಹಿತ ರಾಮನ ತರಿಸಿ ಪೊರಟರು ಕುದುರೆಯೇರುತ1 ಆ ಮಹಾಮುನಿಪರು ತ್ವರದಿ ಬಂದು ಶ್ರೀ ಮದಾನಂದ ತೀರ್ಥರ ಪದಯುಗದಿ ಪ್ರೇಮವಂದನ ಪೂರ್ವಕದಿ ಸೀತಾ ರಾಮಮೂರ್ತಿಯ ನೊಪ್ಪಿಸಿದರು ಕರದೀ ಶ್ರೀ ಮನೋಹರ ನಂಘ್ರಿಯುಗಲವ ಪ್ರೇಮದಿಂದಲಿ ಪೂಜಿಸುತಲಿರೆ ಈ ಮಹಾತ್ಮರ ಕರೆದು ಕೊಟ್ಟರು ನೇಮದಿಂದರ್ಚಿಸಿರಿ ಎನುತಲಿ 2 ಭಾಸುರ ಹೇಮಮಂಟಪದಿ ನಿತ್ಯಾ ಶ್ರೀಸೀತಾರಾಮನರ್ಚಿಪರು ವೈಭವದೀ ಭೂಸುರ ಕೃತ ವೇದಘೋಷದಿ ಮತ್ತೆ ವ್ಯಾಸಸೂತ್ರಗಳ ನಾಮಾವಳಿ ಪಠಣ ದಿ ದೇಶ ದೇಶಗಳಲ್ಲಿ ಚರಿಸುತ ತೋಷತೀರ್ಥರ ಮತವ ಬೋಧಿಸಿ ಸಿರಿ ನರ ಕೇಸರಿಗೆ ಪ್ರಿಯದಾಸರೆನಿಸಿದ 3
--------------
ಕಾರ್ಪರ ನರಹರಿದಾಸರು
ನರಹರಿ ಶರಣರಸುರತರು ಶ್ರೀಕರ ಹರಿ ನಿಮ್ಮ ಪಾದಸ್ಮರಣೆ ಮರೆಯಲಾರೆನೆಂದೆಂದು ಪ ಹರಿ ನೀನೆ ಗತಿಯೆಂದು ಮೊರೆಯಿಟ್ಟು ಸ್ಮರಿಪರ ಅರಲವ ಬಿಡದವರ ಸ್ಮರಣೆಯೋಳ್ನೆಲೆಗೊಂಡು ತೆರೆದು ಕರುಣಚಕ್ಷು ಪೊರೆವೆ ಎವೆಯಿಕ್ಕದೆ 1 ವೇದವೇದಾದಿ ನಮಿತ ಸಾಧುಸಜ್ಜನ ವಿನುತ ಪಾದದಾಸರ ಭವಬಾಧೆಗೆಲಿಸಿ ಸು ಹಾದಿ ತೋರಿಸಿ ಬಹು ಮೋದದಿಂ ಸಲಹುವಿ 2 ನೀ ಮಾಡಿದುಪಕಾರ ನಾ ಮರೆಯಲಾರೆ ದೇವ ಈ ಮಹಭವದು:ಖ ಕ್ಷೇಮದಿಂ ಗೆಲಿಸಿದಿ 3
--------------
ರಾಮದಾಸರು
ನರಹರಿಯ ಗುಣ ಕೊಂಡಾಡುವುದೇ ಲೇಸು ಮುರಲೀಧರನೊಲಿಸಿ ಪರಗತಿ ಸುಖವ ಬಯಸು ಪ ಸುಳ್ಳುಮಾತಾಡಿ ಧನಗಳಿಸುವುದಕಿಂತಲಿ ಒಳ್ಳೆಯವನೆನಿಸುವ ಬಡತನವೇ ಲೇಸು ಕಳ್ಳತನದಿಂದಲಿ ಕದ್ದು ತಿಂಬುವುದಕಿಂತ ಕೇಳಿ ಸಿಕ್ಕಷ್ಟುಂಡು ಇರುವುದೇ ಲೇಸು 1 ಸಾಲದಿಂದರಮನೆಯ ಕಲ್ಪಿಸಿರುವುದಕಿಂತಾ ಸಾಲಿಲ್ಲದ ಮನೆಯಲ್ಲಿಹುದೇ ಲೇಸು ಕಾಲನ ದೂತರಿಂದೆಳೆಸಿಕೊಳ್ಳದೇ ಲಕ್ಷ್ಮೀ ಲೋಲನಾ ಪಾದದಲ್ಲಿರುವುದೇ ಲೇಸು 2 ಅನ್ಯ ಸ್ತ್ರೀಯರ ಸುಖವ ಬಯಸಿ ಕೆಡುವುದಕಿಂತ ತನ್ನವಳ ಕೂಡ ಬಡಿದಾಡುವುದೇ ಲೇಸು ಹೊನ್ನು ಹೆಣ್ಣು ಮಣ್ಣಿಗಾಸೆ ಮಾಡದೇ ಮನಸನ್ನ ಸಿರಿಪತಿಗೆ ಒಪ್ಪಿಸುವುದೇ ಲೇಸು 3 ತಾನು ಮಾಡಿದೆನೆಂಬುದಕಿಂತ ಹರಿಯ ಆಧೀನವೆಂದರಿಯುವುದು ಪರಮ ಲೇಸು ಶ್ವಾನಗೆ ಮಾಂಸವನು ತಿನಿಸಿ ಸಲಹುವುದಕಿಂತ ಜ್ಞಾನಿಯಾದವನ ಸಲಹುವುದೇ ಲೇಸು 4 ದುಷ್ಟ ಮನುಜನು ಮಾಡುವ ಕೃಪೆಗಿಂತಲೂ ಶ್ರೇಷ್ಠ ನರರಿಂದ ಬೈಸಿಕೊಳ್ಳವುದೇ ಲೇಸು ಕೆಟ್ಟ ಸಂಸಾರ ಸುಖ ಬೇಡುವುದಕಿಂತ ಹನುಮೇಶ ವಿಠಲನ ಧ್ಯಾನದ ಸುಖವೇ ಲೇಸು 5
--------------
ಹನುಮೇಶವಿಠಲ
ನರಹರಿಯ ಹೊರತಿನ್ನಾರಿಗಿಲ್ಲವೋ ಸ್ವತಂತ್ರದಾವುದು ಇಲ್ಲವೊ ನರರಿಗೆ ಸ್ವತಂತ್ರ ಪ ಗಳಿಸಿದ ಧನವು ನಳಿನಾಕ್ಷೀಯರಿಗೀವ ಸೆಳೆದು ವಯ್ಯುವಾಗುಳೀವರಿಲ್ಲವೋ 1 ನಾನು ನನ್ನದೆಂಬುವ ಈ ದೇಹವು ಹಾನಿಯಾಗುವಾಗದನ್ನುಳಿಸುವ ಸ್ವತಂತ್ರ 2 ಜೀವವು ಕಾಯವ ತ್ಯಜಿಸಿ ಪೋಗುವಾ ಗಾವಾಪ್ತರಿಗವನ್ನುಳಿಸಿಕೊಳ್ಲುವ ಸ್ವತಂತ್ರ 3 ಮಾಡಿದ ಧರ್ಮಾಕರ್ಮವೆಜೀವನ ಕೂಡ ಮಂತ್ರ ಸಂಗಡ ಬಾಹುದು 4 ದೋಷ ರಹಿತ ಹನುಮೇಶವಿಠಲನೇ ಈಶನೆಂದು ನಿಜ ದಾಸನಾಗೋ ಸ್ವತಂತ್ರ 5
--------------
ಹನುಮೇಶವಿಠಲ
ನರಹರಿಯೆ ಪಾಲಿಸೈ ಪ ನರಹರಿಯೆ ಪಾಲಿಸೈ ಕರಿವರದನೆ ಕಲುಷಾಂತಕವರ ಅ.ಪ ಕರಚರಣಗಳೆರಡರ ಪರಮೊದಗಿರೆ ಹರಿಹರಿ ನಿನಗಿದ ನೊರೆವೆಹುದೊ 1 ಭಜಿಪ ಭಜಕ ನಿಜದ್ವಿಜಗುಣಮಣಿ ಹಯಧ ಸಾರಥಿ 2 ಸಿರಿಧರ ಮುರಹರ ಮುನಿಜನ ಭಯ ಹರ ಕರುಣ ತುಲಸೀರಾಮಾ ಗುರುವೆ ತಾನಾದ 3
--------------
ಚನ್ನಪಟ್ಟಣದ ಅಹೋಬಲದಾಸರು
ನರಹರಿಯೆನಬಾರದೇ ನಾಲಿಗೆಯೊಳೂ ಪ ಕರ ಶಂಕು ಚಕ್ರ ಶ್ರೀಧರ ನಾರಾಯಣನೊಳ ಗಿರಲಿಕ್ಕೇನು ದೊರಕಾದೆ ನಾಲಿಗೆಯೊಳು1 ದಶರಥ ಸುತನಾಗಿ ವಸುಧೆ ಪಾಲಕನಾದಾ ಅಸಮೆನಂದೆನ ಭಾರದೆ ನಾಲಿಗೆಯೊಳೂ 2 ಕಾಮಜನಕ ರಂಗಾ ಪ್ರೇಮದಿಂದಲಿ ಕಾಯ್ವೊ ಸ್ವಾಮಿಯೆಂದೆನೆಬಾರದೆ ನಾಲಿಗೆಯೊಳು3 ಭರತ ಪುರೀಶ ಮತ್ಪರ ಮಾರ್ಯನೊಳು ಬಂದೂ ಬೆರೆಯಲೆನ್ನುತ ಸಾರಿದೆ ನಾಲಿಗೆಯೊಳು 4
--------------
ಚನ್ನಪಟ್ಟಣದ ಅಹೋಬಲದಾಸರು
ನರಿತಿಹರಾರಿಹರು || ಪರತರಪಾವನನು ಪ ಭಗವದ್ರೂಪನು| ತ್ರಿಗುಣಾತ್ಮಕನು| ಜಗದಾಧಾರಕನು || ಜಗನ್ನಿವಾಸನು| ಜಗದಾನಂದನು| ಜಗದೀಶನು ನೀನು 1 ಜಗನಿಯಾಮಕ | ಜಗದುದ್ಧಾರಕ | ತ್ರಿಜಗವಿರಾಜಿತನು|| ಅಗಣಿತಮಹಿಮನು| ನಿಗಮಗೋಚರ | ತ್ರಿಜಗದ್ವಂದಿತನು2 ಭಕ್ತಾನಂದನು| ಭಕ್ತಾಧೀನನು| ಭಕ್ತಪರಾಯಣನು 3 ಶರಣಾಗತಪರಿ | ಪಾಲಕ | ನೀನು| ಕರುಣಾಸಾಗರನು|| ಪರಬ್ರಹ್ಮನು | ಪರಂಜ್ಯೋತಿಯು | ಪರಮಾತ್ಮನು ನೀನು4 ನಿನ್ನಯ ನಾಮೋ| ಚ್ಚರಿಸಿದ ಪಾಮರ | ಪಾವನನಾಗುವನು|| ನಾಮಾಮೃತವನು | ಸೇವಿಸೆ ಬ್ರಹ್ಮಾ| ನಂದವ ಪೊಂದುವನು5
--------------
ವೆಂಕಟ್‍ರಾವ್
ನರಿಯುವುದಸದಳವು ಪ ಪರಿಪರಿವಿಧದೊಳು| ರೂಪವ ಧರಿಸುತ್ತ || ಧರಣಿ ಭಾರವನ್ನೆಲ್ಲ| ಪರಿಹಾರ ಮಾಡುವ ಅ.ಪ ಕೂರ್ಮರೂಪವ ತಳೆದೆ || ವರಹನು ನೀನಾದೆ | ನರಹರಿಯಾದೆ ನೀ|| ಮೂರಡಿ ಭೂಮಿಯ | ವಟುವಾಗಿ ಬೇಡಿದೆ 1 ಕಾಕುಸ್ಥ ರಾಮನಾದೆ || ಕಲ್ಕಿರೂಪದಿ ಬಂದು | ಧರೆಂiÀiನುದ್ಧರಿಸಿದೆ 2 ಜಗದಾದಿ ದೇವ ನೀನು | ಏನನ್ನುವೆ | ಜಗದೇಕನಾಯಕನು || ಜಗವನÀುದ್ಧರಿಸುವ | ಜಗನ್ನಿಯಾಮಕ ನೀನು || ಅಗಣಿತ ಮಹಿಮನು 3 ಪ್ರಣವ ಸ್ವರೂಪ ನೀನು || ಅಣುರೇಣು ತೃಣಕಾಷ್ಠ | ಭರಿತನಾಗಿಹ ನೀನು || ಜನನಮರಣವಿರ | ಹಿತನಾದ ದೇವನು 4
--------------
ವೆಂಕಟ್‍ರಾವ್
ನರ್ತನಗೋಪ ಕೃಷ್ಣ | ವಿಠಲ ಪೊರೆ ಇವನಾ ಪ ಅರ್ತು ನಿನ್ನಂಘ್ರಿಯಲಿ | ದಾಸ್ಯ ಕಾಂಕ್ಷಿಪನಾ ಅ.ಪ. ಪತಿ ಸುಪ್ರೀಯ | ಮಧ್ವಾಂತರಾತ್ಮಸದ್ಧರ್ಮರತಿಯಿತ್ತು | ತಿದ್ದಿ ಸಂಸ್ಕತಿಗಳನುಶ್ರದ್ಧಾಳು ವೆಂದಿನಿಸು | ಸಿದ್ಧಾಂತ ಸಥದೀ 1 ಬೋಧ ಓದಗಿಸಿಕಾಯೋ | ಬಾದರಾಯಣದೇವಮೋದದಿಂ ಪ್ರಾರ್ಥಿಸುವೆ | ಹೇ ದಯಾಪೂರ್ಣ 2 ಧ್ಯಾನುಪಾಸನವಿತ್ತು | ಶ್ರೀನಿವಾಸನಮನದಿಕಾಣುವ ಸುವಿಜ್ಞಾನ | ನಿನಾಗಿ ಕೊಡುತಾಮೌನಿಕುಲ ಸನ್ಮಾನ್ಯ | ಜ್ಞಾನದಾಯಕ ಹರಿಯೆದೀನಜನ ಮಂದಾರ | ನೀನಾಗಿ ಪೊರೆಯೊ 3 ಪಿತೃ ಮಾತೃ ಪರಿವಾರ | ವ್ಯಾಪ್ತ ಹರಿಮೂರ್ತಿಯನುಅರ್ಥಿಯಿಂದಲಿ ಭಜಿಪ | ಮತಿಯ ಪಾಲಿಸುತಾಕರ್ತೃತ್ವ ಭ್ರಾಂತಿಯನು | ಹತಮಾಡಿ ಶ್ರೀಹರಿಯೆಕೀರ್ತಿವಂತನ ಗೈಯ್ಯೋ | ಆರ್ತರುದ್ಧರಣಾ 4 ಮುನ್ನವೇ ತ್ಯೆಜಸನು | ನನ್ನೆಯಿಂ ಸೂಚಿಸಿಹಚೆನ್ನ ಅಂಕಿತವನ್ನೆ | ಇನ್ನು ಸ್ಥಿರಪಡಿಸೀಘನ್ನ ಉಪದೇಶವನು | ಚಿತ್ಗಾನಿಗೆ ಇತ್ತಿಹೆನೋಮನ್ನಿಸೀಕೃತ್ಯ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ನಲಿ ನಲಿದು ಒಲಿದು ಮೊಗವ ತೋರೆ ಬಾ ಪ ಜಲಜಾಕ್ಷ ನಾರಾಯಣ ಪ್ರೀಯೆ 1 ಸಾಕವ್ವ ನೀ ಬಂದು ಬೇಗನೇ 2 ಪ್ರೀತೆ ನೀನೆಮಗೊಲಿದು ಬಾ | ಬೇಗನೆ 3
--------------
ಸದಾನಂದರು
ನಲಿದಾಡಿದಳ್ ನಳಿನಾಂಬಕಿ ಒಲಿದೆಮ್ಮನು ಸಲಹಲೋಸುಗ ಪ. ಸುಲಲಿತ ವೀಣಾಪಾಣಿ ಮಣಿ ಸುಗುಣಿ ಅ.ಪ. ಕೃತೀಶಸುತೆ ಕೃಪಾನ್ವಿತೆ ಶ್ರುತಿಸಮ್ಮತಗೀತೆ ಪ್ರತಿರಹಿತೆ ಸತಿಪೂಜಿತೆ ರತಿಯಾಮಿತ ಶೋಭಿತಳೆ ಧೃತಿ ಸಂಭೃತೆ ಮತಿದಾಯಕಿ 1 ಇಭೇಂದ್ರಗಮೆ ವಿಧುಮಂಡಲ- ನಿಭಮುಖಿ ಶಿಖಿಯಾನೆ ಅಭಯಪ್ರದೆ ಅಖಿಳೇಶ್ವರಿ ಸುಭಜೆ ಶುಭದೆ ವಿಬುಧೆ ಅಭವೆ ಸದ್‍ವಿಭವಾಸ್ಪದೆ 2 ಪರಾಂಬರಿಸು ಪದಾಶ್ರಿತನ ಪ್ರಭಾಕರಶತಾಭೆ ಹರಿ ಲಕ್ಷ್ಮೀನಾರಾಯಣ- ಶರಣೆ ರತುನಾಭರಣೆ ಕರುಣಾರಸವರುಣಾಲಯೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ನಲಿದಾಡು ಬಾರೊ ಗರುಡತುರಂಗಾ ಪ ದುರುಳ ಭಸ್ಮಾಸುರ ಉರಿಹಸ್ತ ಪಡೆದಂದು ತರುಣಿರೂಪದೆ ನಲಿದು ಹರನ ಪೊರೆದೆಯಲ್ತೆ 1 ಲೋಲ ಲೋಚನೆಯರ ಆಲಯಗಳ ಪೊಕ್ಕು ಹಾಲು ಬೆಣ್ಣೆಯ ಮೆದ್ದ ಗೋಪಾಲ ವಿಠಲನೇ 2 (ಭವ ಬಂಧವು ನಾಮಪ್ರಿಯ ಪರಂಧಾಮನೇ) 3 ಆವ ಬಂಧವನ್ನೂ ಬಿಡಿಸಿ ನವನೀತವೀವನೇ ಕಾವರಿಲ್ಲವೋಯೆನ್ನ ಮಾವಿನ ಕೆರೆರಂಗಾ 4 ಕಾಮಿತಂಗಳ ದೇವ ಶಾಮಲಾಂಗನೆ ನಿನ್ನ ನಾಮವ ನೆರೆಸಾರು ರಾಮದಾಸಾರ್ಚಿತ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಲಿದೈತಾರೆಂಬೆ ಹೇ ಜಗದಂಬೆ ನಾಂ ಬೇಡಿಕೊಂಬೆ ಪ. ಒಲಿದೈತರೆ ನೀ ನಲವೇರುತ ನಾ ನಲಿದಾರಾಧಿಪೆ ಎನ್ನೊಲಿದಂಬೇ ಅ.ಪ. ಸಿಂಧುನಂದನೆ ಅರವಿಂದನಯನೆ ಇಂದುಸೋದರಿ ಸಿಂಧುರಗಮನೆ ಸುಗುಣಾಭರಣೆ ವಂದಿಪೆ ಶರದಿಂದುವದನೆ ಸುರ ವಂದಿತಚರಣೆ 1 ಅಂದಿಗೆ ಕಾಲುಂಗುರ ಘಲಿರೆನೆ ಇಂದಿರೆ ತವಪದದ್ವಂದ್ವವ ತೋರಿ ವಂದಿಸುವೆನ್ನೀಮಂದಿರ ಮಧ್ಯದಿ ಎಂದೆಂದಿಗು ನೆಲೆಸಿರು ನಂದಿನೀ ಜನನೀ 2 ಕ್ಷೀರಾಂಬುಧಿ ತನಯೆ ಸೌಭಾಗ್ಯದ ನಿಧಿಯೆ ಕ್ಷೀರಾಬ್ಧಿಶಯನನ ಜಾಯೆ ಸಾರಸನಿಲಯೆ ವಂದಿಪೆ ತಾಯೆ ಬಾರೆಂದು ಕೈಪಿಡಿದೆಮ್ಮನು ಕಾಯಿ 3 ಸರಸಿಜಾಸನೆ ಸ್ಮರಮುಖ ಜನನಿಯೆ ಸುರನರಪೂಜಿತೆ ನಾರದ ಗೇಯೆ ಸಾರಗುಣಭರಿತೆ ಸರಸಿಜಪಾಣಿಯೆ ಶ್ರೀರಮಣೀ ಪರಿಪಾಲಿಸು ಜನನಿ 4 ಸೆರಗೊಡ್ಡಿ ಬೇಡುವೆ ಶ್ರೀನಾರೀ ನಿನ್ನೆಡೆ ಸಾರೀ ಪರತರ ಸುಖ ಸಂಪದವನು ಕೋರೀ ಪೊರೆ ಮೈದೋರಿ 5 ಪರಿಪರಿ ವಿಧದಾ ಸಿರಿಸಂಪತ್ತಿಯೋಳ್ ಗುರುದೈವಂಗಳ ಸೇವಾವೃತ್ತಿಯೋಳಿರೆ ಕರುಣಿಸು ದೃಢತರ ಭಕ್ತಿಯನೆಮಗೀಗಳ್ ವರಶೇಷಗಿರೀಶನ ಮಡದಿಯೆ ಮುದದೋಳ್ 6
--------------
ನಂಜನಗೂಡು ತಿರುಮಲಾಂಬಾ
ನಲಿನಲಿದರು ದ್ವಾರಕಾಪುರದಿ ನಳಿನನಾಭ ಶ್ರೀ ರುಕ್ಮಿಣಿ ಕಲ್ಯಾಣದಿ ಪ. ಜಲರುಹಲೋಚನೆ ಚೆಲುವೆ ಶ್ರೀ ರುಕ್ಮಿಣಿ ಸಲಲಿತಾಂಗನ ನೋಡಿ ವಲುವಿನಲಿ ಕುಳಿತಿರೆ ಅ.ಪ. ಅಂಬರದಲಿ ಭೇರಿ ವಾದ್ಯಗಳೆಸಗೆ ತುಂಬುರು ನಾರದರು ಗಾನವ ಪಾಡೆ ಸಂಭ್ರಮದೊಳು ಮಾಂಗಲ್ಯ ಬಂಧನ ಮಾಡೆ ಅಂಬುಜೋದ್ಭವ ರುಕ್ಮಿಣಿ ಕಂಠದೊಳು 1 ವಿಪ್ರರು ವೇದ ಮಂತ್ರವ ಪಠಿಸೆ ಸ್ವ ಪ್ರಕಾಶ ರುಕ್ಮಿಣಿ ಕರಪಿಡಿಯೆ ಕೃಷ್ಣಾ ಅಪ್ರಮೇಯನೆಂದು ಸ್ತುತಿ ಪಾಠಕರು ಪೊಗಳೆ ಕ್ಷಿಪ್ರದಿ ವಿಪ್ರರಿಗೆ ದಕ್ಷಿಣೆ ತಾಂಬೂಲವೀಯೆ 2 ದೇವಕಿ ವಸುದೇವನಿಗ್ಹರುಷವನಿತ್ತು ದೇವ ಶ್ರೀ ಶ್ರೀನಿವಾಸ ಭಕ್ತ ಜನಾಶ್ರಿತ ಕಾವ ಸಕಲ ಜೀವರ ಹೃದಯನಿವಾಸ ದೇವ ಯಶೋದೆ ನಂದ ಕಂದನ ನೋಡಿ 3
--------------
ಸರಸ್ವತಿ ಬಾಯಿ
ನಲಿನಲಿದು ಬಾ ತ್ರಿಜಗದಾಂಬೆ ಪ. ಮಾನಸದೊಳು ಸುಜ್ಞಾನಬೋಧಳಾಗಿ ಆತನದೇವಕದಂಬೆ ಅ.ಪ. ವಿದ್ಯಾ ಬುದ್ಧಿ ವಿನಯ ಮಂಗಳಗಳ ಸಾಧ್ವಿ ನಿನ್ನಲಿ ಬೇಡಿಕೊಂಬೆ 1 ನಲಿದೆನ್ನಯ ಜಿಹ್ವಾಗ್ರದಿ ನೆಲಸುತ ಸುಲಭದೋರೆಯೆ ಸುಲಲಿತವ ಶಿವೆ 2 ಧೀರ ಲಕ್ಷ್ಮೀನಾರಾಯಣಾಶ್ರಿತೆ- ಪರಮೇಷ್ಠಿಪರಿರಂಭೆ 3
--------------
ತುಪಾಕಿ ವೆಂಕಟರಮಣಾಚಾರ್ಯ