ಒಟ್ಟು 885 ಕಡೆಗಳಲ್ಲಿ , 89 ದಾಸರು , 776 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭೀಮ ಲಾಲಿ ಭಾರತ ಕುಲಾಂಬುಧಿ ಸೋಮ ಗುಣನೆ ಲಾಲಿ ಪ ಲಾಲಿ ಯಾದವ ಪದಾಂಭೋಜ ಮಧುಕರನೆಲಾಲಿ ಮುನಿವರತನಯ ಸುತನ ಗೆಲಿದವನೆಲಾಲಿ ಕರೆವೆನು ಬಾರೋ ಮಧ್ವ ಮುನಿವರನೆ ಲಾಲಿ ಅ.ಪ. ಲಾಲಿ ಕಾಲ್ಗಡಲರುಳಿ ಕುಣಿತ ನಿಜಚರಣಾಲಾಲಿ ಮಧ್ಯದೊಳುಟ್ಟ ಕನಕಮಯ ವಸನಾಲಾಲಿ ಕೊರಳೊಳಗಿಟ್ಟ ಹಾರಗಳ ಸದನಾಲಾಲಿ ಕಿವಿಯೊಳು ಹೇಮಕುಂಡಲಾಭರಣಾ ಲಾಲಿ 1 ಲಾಲಿ ಕರಯುಗ ಶೋಭಿತ ಕಂಕಣಾಭರಣಾಲಾಲಿ ಲೋಕವ ಮೋಹಿಸುವ ಮಂದಹಾಸನಾಲಾಲಿ ತರುಣಿರೂಪ ಶೃಂಗಾರ ಸದನಾಲಾಲಿ ತಾಂಬೂಲರಸಭಾಸ ನಿಜವದನಾ ಲಾಲಿ 2 ಲಾಲಿ ನರ್ತನಾ ಕೃತಾಲಯ ಚರಣಗಮನಾಲಾಲಿ ನಿಜ ಕಾಮಿನಿ ಸಂಕಟ ಹರಣಾಲಾಲಿ ಕೀಚಕಲಾಲಿ ಇಂದಿರೇಶ ಮಾಧವನ ತೋರಿದನ ಲಾಲಿ 3
--------------
ಇಂದಿರೇಶರು
ಭೀಷ್ಟದಾಯಕ ಕರುಣದಿ ಪಿಡಿ ಕೈಯಾ ಪ ರಾಮಕೃಷ್ಣ ಪವನಾತ್ಮಜನಂಘ್ರಿ ತಾಮರಸವ ಧೇನಿಸು ಪರಿವ್ರಾಜಾ ಭೀಮತೀರ ಪಿಪ್ಪಲ ಭೂಜ ಮೂಲ ಸೀಮೆಯೊಳಗೆ ರಾಜಿಸುವ ಯತಿರಾಜ 1 ಭೇದ ಮತಾಂಬುಧಿ ಚಂದಿರಾ ಗುರು ವೇದವ್ಯಾಸ ಮುನಿವರ ಸುಕುಮಾರಾ ಸಾಧು ಸದ್ಗುಣಗಣ ಗಂಭೀರನಾದ ಬಾದರಾಯಣನಾಮದಲಿಪ್ಪ ಧೀರಾ 2 ದೇವ ಜಗನ್ನಾಥ ವಿಠಲನ್ನ ಪಾದ ಸೇವಕ ಭೇಡುವೆ ಹರಿಮೂರ್ತಿ ಧ್ಯಾನ ಕೇವಲ ಭಕುತಿ ನಿರ್ಮಲ ಜ್ಞಾನ ವಿತ್ತು ಪಾವನ್ನ ಮಾಡಿ ಪಾಲಿಸೋ ಪ್ರತಿದಿನ 3
--------------
ಜಗನ್ನಾಥದಾಸರು
ಭೇದವ ಮರೆಸಿದ ನಮ್ಮಯ್ಯ ಸು ಸಾಧನ ತಿಳಿಸಿದ ಪ ಭೇದ ಮರೆಸುತ ವಾದನೀಗಿಸಿ ಪರ ಸಾಧನದ ನಿಜಹಾದಿಗೆ ಹಚ್ಚಿದ ಅ.ಪ ಮಂದಮತಿಯ ತರಿದ ಎನ್ನಯ ಭವ ಬಂಧ ಪರಿಹರಿಸಿದ ಕುಂದುವ ಜಗಮಾಯದಂದುಗ ಗೆಲಿಸಿದ ಕಂದನೆಂದುದ್ಧಾರಗೈದ ತಂದೆ ಸಿಂಧುಶಾಯಿ 1 ಜ್ಞಾನಕೆ ಹಚ್ಚಿದ ಎನ್ನದೆ ನಿಜ ಧ್ಯಾನವ ಪಾಲಿಸಿದ ನಾನಾಯೋನಿಯೊಳು ಜನಿಸಿ ಜನಿಸಿ ಬಹ ಹಾನಿಯಿಂದುಳಿಸಿದ ದಾನವಕುಲಹರ 2 ಏನೆಂದು ಬಣ್ಣಿಸಲಿ ನಮ್ಮಯ್ಯನ ಆನಂದದ ಕೀಲಿ ತಾನೆ ಒಲಿದಿತ್ತೆನ್ನಗಾನಂದಮಯಾಂಬುಧಿ ದೀನಜನಾಪ್ತ ಮಮಪ್ರಾಣ ಶ್ರೀರಾಮಯ್ಯ 3
--------------
ರಾಮದಾಸರು
ಭೋಗಿವರನೇ ಪಾಲಿಸೋ ಪ ಆಗಸದೊಳು ನೀನಾಗಮಿಸುತಲಿ ಸ-ದಾಗತಿ ಭೋದವ ಭೋಗಿಸಿ ನಿಂದೇ ಅ.ಪ. ಪರಿ ಪ್ರಾ |ರಬ್ಧವ ಭೋಗವ | ನಾದರದನುಭವಸಾಧನವೀವುದು | ಹೇ ದಯವಂತ 1 ಹೃದಯಾಬ್ಜಾಮಲ | ಸದನದಿ ಸುರತರುಹದುಳ ದೊಳಾಶ್ರಿತ | ಬದಿಗನಿನಾದೆಯೊ |ಸದಮಲ ಶಯ್ಯನೆ | ಇದಿರಾವನು ತವಪದವಿಗೆ ಸುರರೊಳು | ಬುಧಜನ ವಂದ್ಯ 2 ಪತಿ ಗುರುಗೋವಿಂದ ವಿಠಲನ | ಭಾವದಿ ಕಾಣಿಸಿ 3
--------------
ಗುರುಗೋವಿಂದವಿಠಲರು
ಮಗಟಖಾನ ಹುಬ್ಬಳ್ಳಿ ಶ್ರೀಯಾದವಾರ್ಯರ ಕರಾರ್ಚಿತ ಶ್ರೀನರಸಿಂಹ ಸ್ತೋತ್ರ ಕರುಣವೆಂತುಂಟೋ ನಿನಗೆ | ಶ್ರೀನಾರಸಿಂಹಾ ಪ ವರತಟನಿ ಮಲಪ್ರಭೆಯ | ತೀರಸ್ಥನೆನಿಸೀ ಅ.ಪ. ಪೂರ್ವದಲಿ ಋಷಿ ಚ್ಯವನ | ರಿಂದರ್ಚಿತವು ಎನೆಓರ್ವ ಶಿಲೆಯಲಿ ನಿಂದು ಯಾದವಾರ್ಯಾ |ಪಾರ್ವ ಯೋಗೀಶ ರಚಿ | ತಾಕಾರ ಗಂಧದಲಿಆಹ್ವಾನಿತನು ಆಗಿ ನೀನಿಲ್ಲಿ ಇರುವೇ 1 ಆದಿ ವ್ಯಾಧಿಲಿನೊಂದ | ಬುಧರಿಂದ ಬಹುಸೇವ್ಯಯಾದವಾರ್ಯಾಂತಸ್ಥ | ಶ್ರೀ ನಾರಸಿಂಹಾ |ಬಧಿರ ಮೂಕರು ತಮ್ಮ | ವ್ಯಾಕುಲವ ಕಳೆಯುತ್ತಮುದವಾಂತು ತವ ಮಹಿತಿ ಕೀರ್ತಿಸುತ್ತಿಹರೋ 2 ಮಾಸ ನಿಶಿ ಜೇಷ್ಠದಲಿಮತ್ತೆ ಹರಿದಿನದಲ್ಲಿ | ಮಂದವಾರದಲೀ |ಮತ್ಸರಾದ್ವಿರಹಿತರು | ಸತ್ಸುಜನರಿಂದ ಕೂಡಿಉತ್ಸಹದ ಜಾಗರವ | ನೀ ಮಾಡಿ ಮಾಡಿಸಿದ್ಯೊ 3 ಬೆಟ್ಟದಾಚಾರ್ಯರೆನೆ | ಸುಷ್ಠು ಕೀರ್ತನೆಗೊಂಡಶ್ರೇಷ್ಠ ಹುಚ್ಚಾಚಾರ್ಯ | ರಿಲ್ಲಿ ನೆಲೆಸುತಲೀಇಷ್ಟ ಸಿದ್ಧಿಗಾಗಿ ಶ್ರೇಷ್ಟ | ತಪವನೆ ಗೈದುಇಷ್ಟಾರ್ಥ ಪೊಂದಿತಾ | ಬೆಟ್ಟಕ್ಕೆ ತೆರಳಿದರೋ 4 ಮೋದ ಪಡಿಸುತ ಬುಧರಯಾದವೇಶನ ನೊಲುಮೆ | ಸಂಧಿಸುತ ಮೆರೆದೂ |ಆದರಿಸಿ ಮಂಗಳ ಸು | ಭೋದಗಳ ಬೀರುತಲಿಮೋದ ಬಡಿಸಿದ ಹರಿಯ | ಭೂದೇವ ಆರ್ಯ 5 ಪ್ರೇರ್ಯ ಪ್ರೇರಕರಾಗಿ | ಬೆಳಗಾವ್ಕರು ಎಂಬಪಾರ್ವನಲಿ ನೀ ನಿಂತು | ಅಚ್ಚರಿಯನೆಸಗೀಭಾರ್ಯೆ ತವ ಕೊಲ್ಲಾಪುರ | ಮ್ಮ ಸತ್ಯವ್ರತರಆರ್ಯಗೊಡ ದರ್ಶಿಸುವ | ಯೋಗ ನೀನಿತ್ತೇ 6 ಸೃಷ್ಠ್ಯಾದಿ ಅಷ್ಟಕವ | ದೃಷ್ಟಿ ಮಾತ್ರದಿಗೈವಇಷ್ಟ ಭಕುತಿಗೆ ಮೆಚ್ಚಿ | ಘಟ್ಟಿ ಕಂಬದಿ ಜಿಗಿದೂದುಷ್ಟನ್ನ ಸಂಹರಿಸಿ | ಕಷ್ಟಗಳ ಕಳೆದಂಥಕೃಷ್ಣ ಗುರು ಗೋವಿಂದ ವಿಠಲಾ ಗಾನಮಿಪೇ 7
--------------
ಗುರುಗೋವಿಂದವಿಠಲರು
ಮಂಗಲಂ ಮಂಗಲಂ ಕುಮಾರಗೆ ಮಂಗಲಂ ಪ ವಾಹನ ಗುಣಸಾರ ಕುಮಾರಗೆ1 ಅಂಬರ ಮಣಿ ಸುಗುಣಾಂಬುಧಿ ಗುಹನಿಗೆ 2 ಕೋವಿದನಿಗೆ ದಾಸ ಜನರ ರಕ್ಷಕಗೇ 3
--------------
ಬೆಳ್ಳೆ ದಾಸಪ್ಪಯ್ಯ
ಮಂಗಲಂ ಮಂಗಲಂ ಭವತು ತೇ ಮಂಗಲಂ ಮಂಗಲಂ ಪ. ಅಂಗಜ ರೂಪಗೆ ಅಖಿಲ ಲೋಕೇಶಗೆ ಶೃಂಗಾರಮೂರ್ತಿಗೆ ಶ್ರೀಕಾಂತಗೆ ಸಂಗೀತ ಲೋಲಗೆ ಸಾಮಜವರದಗೆ ಬಂಗಾರಗಿರಿವಾಸ ಭವಭವ ಹರಗೆ 1 ಕೃತ್ರಿಮ ರಕ್ಕಸ ಮೊತ್ತ ಸಂಹರಗೆ ಭಕ್ತರ ಹೃದಯದಿ ಬೆಳಗುವಗೆ ಸತ್ಯಾತ್ಮಕನಿಗೆ ಸತ್ಯನೇತ್ರನಿಗೆ ಚಿತ್ತಜಪಿತ ಚಿನುಮಯ ಮೂರ್ತಿಗೆ 2 ಉತ್ತಮ ಗೌಡಸಾರಸ್ವತ ವಿಪ್ರರಿಂ ನಿತ್ಯ ಪೂಜೆಯಗೊಂಬ ನೀಲಾಂಗಗೆ ಛತ್ರಾಖ್ಯಪಟ್ಟಣ ಮಸ್ತಕ ಮಕುಟಗೆ ಕರ್ತ ಲಕ್ಷ್ಮೀನಾರಾಯಣ ಗುಣಾಂಬುಧಿಗೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮಂಗಲಂ ಮಹಾಲಿಂಗ ದೇವನಿಗೆ ಗಂಗೋತ್ತಮಾಂಗಗೆ ಪ. ತುಂಗಬಲ ಭದ್ರಾಂಗ ಸದಯಾ- ಪಾಂಗ ಭಕ್ತಜನಾಂಗರಕ್ಷಗೆ ಅಂಗಜಾರಿ ಕುರಂಗಹಸ್ತಗೆ ಸಂಗೀತ ಪ್ರೇಮಾಂತರಂಗ ನಿಸ್ಸಂಗಗೆ 1 ವಾಮದೇವಗೆ ವಾಸವಾದಿ ಸು- ಧಾಮ ವಿಬುಧಸ್ತೋಮ ವಿನುತಗೆ ವ್ಯೋಮಕೇಶಗೆ ಸೋಮಚೂಡಗೆ ಭೀಮವಿಕ್ರಮಗೆ ಹೈಮವತಿಪತಿಗೆ 2 ಪ್ರಾಣಪತಿ ಲಕ್ಷ್ಮೀನಾರಾಯಣ- ಧ್ಯಾನಪರಗೆ ಪಾವಂಜೆಗ್ರಾಮ ಪ್ರ- ಧಾನಪುರುಷಗೆ ದೀನಜನಸಂ- ತಾನಗೀಶಾನಗೆ ಜ್ಞಾನಿ ಜಗದ್ಗುರುವಿಗೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮಂಗಳ ಇಂದಿರಾವರನಿಗೆ ಜಯ ಮಂಗಳ ವೃಂದಾವನಶಾಯಿಗೆ ಪ. ಆಷಾಢ ಶುಕ್ಲೈಕಾದಶಿಯಾರಂಭಿಸಿ ನಾಲ್ಕು ಮಾಸವು ನೆಲೆಗೊಂಡ ನಳಿನಾಕ್ಷಗೆ ದಾಸ ಮನೋರಥದಾಯಿ ವೃಂದಾವನ ವಾಸಿ ದಾಮೋದರ ಶ್ರೀಶನಿಗೆ 1 ಹಲವು ವಿಧದ ಪುಷ್ಪಗಳಿಕಿಂತ ಅಧಿಕ ಶ್ರೀ ತುಳಸಿ ಎಂದು ಎಲ್ಲ ತಿಳಿಯಿರೆಂದು ನೆಲೆಯದೋರಿ ಮೂಲದಲಿ ಪವಡಿಸಿದಂಥ ನಳಿನಾಕ್ಷ ಗೋಪಾಲ ಕೃಷ್ಣನಿಗೆ 2 ವಿಧಿಭವ ಶಕ್ರಾದಿ ಬುಧರು ಪರಾಕೆಂದು ವಿವಿಧ ವಿಧ ಸ್ತುತಿಸುತ ಕಾದಿರಲು ಮುದದಿಂದಲೆದ್ದು ಮುಖಾಬ್ಜ ತೋರುವ ನಮ್ಮ ಪದುಮನಾಭ ವೆಂಕಟರಾಯನಿಗೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮಂಗಳ ಮಂಗಳ ಜಯಮಂಗಳ ಶುಭಮಂಗಳ ಸುರಗುರು ಮೂರುತಿಗೆ ಸಹಸ್ರ ಮಂಗಳ ಶ್ರೀನಿಧಿ ಶ್ರೀಪತಿಗೆ ಧ್ರುವ ವಿದುರವಂದಿತ ವಿಶ್ವಪಾಲಗ ಮಂಗಳ ಬುಧಜನ ಸಹಕಾರಗ ಮಂಗಳ ಯದುಕುಲೋತ್ತಮ ಶ್ರೀಧರಗ ಮಂಗಳ ಮದನಮೋಹನ ಮೂರುತಿಗೆ ಮಂಗಳ 1 ಕಸ್ತುರಿಯ ತಿಲಕ ಕಾರುಣ್ಯಗ ಮಂಗಳ ಮಸ್ತಕಲಿಹ್ಯ ಮಣಿಮುಗಟಗ ಮಂಗಳ ಕೌಸ್ತುಭಧರ ಭೂಷಣಗ ಮಂಗಳ ಹಸ್ತಿಗೊಲಿದು ಸುವಸ್ತುಗ ಮಂಗಳ 2 ಭಾಸ್ಕರಕೋಟಿ ಪ್ರಕಾಶಗ ಮಂಗಳ ಭಾಸುವ ಭಾವಭೋಕ್ತಗ ಮಂಗಳ ವಾಸವಾಗಿ ಹ್ಯ ಸದೋದಿತಗ ಮಂಗಳ ದಾಸ ಮಹಿಪತಿ ಸ್ವಾಮಿಗ ಮಂಗಳ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಂಗಳಂ ಮಂಗಳಂ ಪ ಮಂಗಳಂ ಮಂಗಳಂ | ಪರಿಮಾಳಾರ್ಯರಿಗೆ ತುಂಗೆ ತೀರಗ ಯತಿ | ಪುಂಗರೀಗೇ ಅ.ಪ. ವೈರಿ ಭೃಂಗ | ಸುಧೀಂದ್ರ ಚರಣಾಬ್ಜಮಧುಕರರೆನಿಸುತ್ತ | ಸುಧೆಯ ಸೌರಭವ |ಬುಧ ಜನ ಕುಣಿಸುತ್ತ | ವಿಧ ವಿಧ ಮೆರೆಯುವತ್ರಿದಶ ಭೂರುಹವೆನಿಸಿ | ಸದಯದಿ ಪೊರೆವಗೇ 1 ಮಧ್ವ ಮತಾಬ್ಧಿಗೆ | ಶುದ್ಧ ಪೂರ್ಣೇಂದ್ವಿಗೆಅದ್ವೈತ ಕಲಿಮಲ | ದಾವಾಗ್ನಿಗೇ |ಸದ್ವೈಷ್ಣ್ವ ಕುಮುದೇಂದು | ವಿದ್ವಾಂಸನತ ಪಾದಶೌದ್ಧೋದನಿಯ ಮತ | ವಿಧ್ವಂಸಕಗೇ 2 ಕರದೆಡೆ ಬರುವಂಥ | ಪರಮ ದಯಾಳುಗೆಧರೆಯೊಳೆಲ್ಲೆಲ್ಲೂ | ಮೆರೆಯುತಿಹಗೇ |ಶರಣರ ಹೃತ್ಕಮಲ | ವರ ಮಿತ್ರನೆಂದೆನಿಸಿಗುರು ಗೋವಿಂದ ವಿಠಲ | ಚರಣಾಬ್ಜಧೇನಿಪಗೇ 3
--------------
ಗುರುಗೋವಿಂದವಿಠಲರು
ಮಂಗಳಂ ಮಂಗಳಂ ಭವತು ತೇ ರಮಾಪತೆ ಪ. ಮಧುವೈರಿ ಮಾರಜನಕ ದಿವ್ಯಸಾರ ಸುಂದರದೇಹವಾರಿಜದಳನೇತ್ರ ಕಾರುಣ್ಯಗುಣನಿಧೆ 1 ಮಣಿಮಯ ಶುಭಕರ ಕನಕಕುಂಡಲಧರಮಿನುಗುವ ಮಕುಟಶೋಭನಕರಮೂರ್ತೆ2 ವೇದವಿಬುಧವಂದ್ಯ ಗೋಪಾಲವಿಠಲಸಾಧುಸಜ್ಜನಪಾಲ ಶ್ರೀದೇವಿಲೋಲ 3
--------------
ಗೋಪಾಲದಾಸರು
ಮಂಗಳಂ ಮಧುಕೈಟ ಭಾರಿಗೇ - ಜಯಮಂಗಳ ಯದುಕುಲಾಂಬುಧಿ ಚಂದ್ರಗೇ ಪ ಗೋಕುಲದೊಳು ಪುಟ್ಟಿ ಗೋಗಣಂಗಳ ಕಾಯ್ದುರಾಕೇಂದು ವದನೇರ ಕೂಡಿದ ಸರಸಿಗೇ 1 ಪಾಲನ ಲಯ | ಒಟ್ಟಾಗಿ ಮಾಳ್ಪಂಥಕೃಷ್ಣೆ ಗಕ್ಷಯಫಲ ಕೊಟ್ಟಂಥ ಹರಿಗೇ2 ಬೃಹತೀ ಸಹಸ್ರನ್ನ ಬಹುವಾಗಿ ಉಂಡಗೇಮಹ ಋಷಿಗ್ವರವಿತ್ತ | ಶ್ರೀ ಉಪೇಂದ್ರಗೆ 3 ಲಕ್ಕುಮಿಯನು ತಾನು | ಲೆಕ್ಕಿಸದಲೆ ವೇಗಪೊಕ್ಕುಳಿಂದಲಿ ಅಜನ | ಪಡೆದ ಶ್ರೀಹರಿಗೇ 4 ಗರುಡ ಗಮನನಾಗಿ | ಕರಿಯ ಕಾಯಲಿ ಬಂದುಹರುಷವ ಪಡಿಸೀದ | ಗುರು ಗೋವಿಂದ ವಿಠಲಗೇ 5
--------------
ಗುರುಗೋವಿಂದವಿಠಲರು
ಮಂಗಳಂ ಸುಗುಣಾಭಿರಾಮಗೆ ಮಂಗಳಂ ಶ್ರೀರಾಮಗೆ ಪ ಮಂಗಳಂ ಲೋಕಾಭಿರಾಮಗೆ ಮಂಗಳಂ ಗುಣಧಾಮಗೆ ಅ.ಪ. ದಶರಥನ ಸುತನಾಗಿ ಮುನಿವರ ಕುಶಿಕಯಜ್ಞವ ಪಾಲಿಸಿ ಶಶಿಮುಖಿಯ ಸೀತೆಯನು ಒಲಿಸಿದ ದಿಶಿಸುಭಾಸುರ ನಾಮಗೆ 1 ತಂದೆಯಾಜÉ್ಞಯ ಪೊಂದುತಾಗಲೆ ಬಂದು ವನದಲಿ ನೆಲಸಿದ ಛಂದದಿಂದಲಿ ಕಂದಭರತನಿಗಂದು ಪಾದುಕೆ ಇತ್ತಗೆ 2 ದಂಡಕಾವನದಲ್ಲಿ ನೆಲಸುತ ಖಂಡಿಸುತ ರಾಕ್ಷಸರನು ಭಂಡರಾವಣ ಹರಿಸೆ ಸೀತೆಯ ಚಂಡ ಹನುಮನ ಕಂಡಗೆ 3 ವೀರ ವಾಲಿಯ ಕೊಂದು ರಾಜ್ಯವ ಸೂರ್ಯಸುತನಿಗೆ ಪಾಲಿಸಿ ವಾರಿಜಾಕ್ಷಿಯ ಪುಡುಕಲೋಸುಗ ವೀರರನು ಕಳುಹಿಸಿದಗೆ 4 ಮಾರುತಾತ್ಮಜನಿಂದ ಸೀತಾ ನೀರಜಾಕ್ಷಿಯ ವಾರ್ತೆಯಂ ಸಾರಿ ಮದನು ಪೊಂದಿ ದಯದಿಂ ವೀರ ಕಪಿವರಗೊಲಿದಗೆ 5 ಧೀರರಾವಣನನ್ನು ಕೊಂದು ನಾರಿ ಸೀತೆಯನೊಲಿಸುತ ಸಾರಿ ಸಾಕೇತವನು ಮುದದಿಂ ವೀರ ಪಟ್ಟವನಾಳ್ದಗೆ 6 ಜಾನಕೀ ಲಕ್ಷ್ಮೀ ಸಮೇತಗೆ ಮೌನಿವರಗಣ ಸೇವ್ಯಗೆ ಮಾನವಾಂಬುಧಿ ಪೂರ್ಣ ಚಂದ್ರಗೆ ಧೇನುಪುರ ಶ್ರೀರಾಮಗೆ 7
--------------
ಬೇಟೆರಾಯ ದೀಕ್ಷಿತರು
ಮಂಗಳಾರತಿ ಮಾಡಿ ಮಂಗಳ ಮಹಿಮಾನಂಗಜನಕ ಹರಿ ತುಂಗವಿಕ್ರಮಗೆ ಮಂಗಳಾರತಿಯ ಧ್ರುವ ಅಗಣಿತಗುಣ ಅಗಮ್ಯಗೋಚರ ಸುಗಮದಲಾಡುವ ನಿಗಮೋದ್ಧಾರಗೆ 1 ಬಗೆದು ಬೆನ್ನಿಲಿ ಭಾರವ ನೆಗೆದಿಹ ನೋಡಿ ಭಗತವತ್ಸಲ ಸ್ವಾಮಿ ನಗಧರಗೆ 2 ಜಗತಿಯ ಕದ್ದೊಯ್ದ ಸುರನ ಸೀಳಿದ ಜಗದೋತ್ತಮನಾದ ಜಗದೋದ್ಧಾರಗೆ 3 ದುರುಳದೈತ್ಯನ ಬೆರಳುಗುರಿಲಿ ಸೀಳಿದ ತರಳ ಪ್ರಹ್ಲಾದಗೊಲಿದ ನರಹರಿಗೆ 4 ಬಲಿಯ ದಾನವ ಬೇಡಿ ನೆಲೆಗೆ ಅಳೆದುಕೊಂಡು ಬಲಿಯ ಬಾಗಿಲ ಕಾಯ್ದ ಶ್ರೀನಿಧಿಗೆ 5 ಪರಶುಪಿಡಿದು ಕ್ಷತ್ರಿಯರ ಸಂಹರಿಸಿದ ಪರಮಪುರುಷನಾಗಿಹ ತಪೋನಿಧಿಗೆ 6 ದೇವತಿಗಳ ಸೆರೆಯ ಬಿಡಿಸಿದ ದೇವನು ಪಾವನಮೂರುತಿ ಅಹಲ್ಯೋದ್ದಾರಗೆ 7 iÀುದುಕುಲತಿಲಕ ವಿದುರವಂದಿತನಾದ ಬುಧಜನಪಾಲ ಮದನಮೋಹನಗೆ 8 ಸುಳಿದು ತ್ರಿಪುರದಲಿ ಹಳಿದು ನಾರೆರ ವ್ರತ ಹೊಳೆವದೋರಿದ ಚಲುವಿಲಿ ಮಹಾಮುನಿಗೆ 9 ಮುದ್ದು ತೇಜಯನೇರಿ ತಿದ್ದಿ ರಾವುತನಾದ ಮಧ್ವಾಂತ್ರದ ಮಹಿಪತಿ ಪ್ರಾಣಪತಿಗೆ 10
--------------
ಕಾಖಂಡಕಿ ಶ್ರೀ ಮಹಿಪತಿರಾಯರು