ಒಟ್ಟು 8803 ಕಡೆಗಳಲ್ಲಿ , 129 ದಾಸರು , 4024 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೊಯ್ಯಾಲೊ ಡಂಗುರವ - ಜಗ - |ದಯ್ಯನಯ್ಯ ಶ್ರೀಹರಿ ಅಲ್ಲದಿಲ್ಲವೆಂದುಪ.ಅಷ್ಟೈಶ್ವರ್ಯದ ಲಕುಮಿಯ ಅರಸೆಂದು |ಸೃಷ್ಟಿ - ಸ್ಥಿತಿ - ಲಯಕರ್ತನೆಂದು ||ಗಟ್ಟಿಯಾಗಿ ತಿಳಿದುಹರಿ ಎನ್ನದವರೆಲ್ಲ |ಭ್ರಷ್ಟರಾದರು ಇಹ - ಪರಕೆ ಬಾಹ್ಯರು ಎಂದು 1ಹರಿಯೆಂಬ ಬಾಲನ ಹರಹರ ಎನ್ನೆಂದು |ಕರುಣವಿಲ್ಲದೆ ಪಿತ ಬಾಧಿಸಲು ||ತರಳನ ಮೊರೆಕೇಳಿ ನರಮೃಗರೂಪದಿ |ಹರಿಯ ನಿಂದಕನ ಸಂಹರಿಸಿದ ಮಹಿಮೆಯ 2ಕರಿ ಆದಿಮೂಲನೆ ಕಾಯೆಂದು ಮೊರೆಯಿಡೆ |ಸುರರನು ಕರೆಯಲು ಬಲ್ಲದಿರೆ ||ಗರುಡನನೇರದೆ ಬಂದು ಮಕರಿಯ ಸೀಳ್ದು |ಕರಿರಾಜನ ಕಾಯ್ದ ಪರದೈವ ಹರಿಯೆಂದು 3ಸುರಪಗೊಲಿದು ಬಲಿಯ ಶಿರವನೊದ್ದಾಗಲೇ |ಸುರಸವು ಉದಿಸೆ ಶ್ರೀ ಹರಿಪಾದದಿ ||ಪರಮೇಷ್ಟಿ ತೊಳೆಯಲು ಪವಿತ್ರೋದಕವೆಂದು |ಹರ ತನ್ನ ಶಿರದಲ್ಲಿ ಧರಿಸಿದ ಮಹಿಮೆಯ 4ಮಾನಸಲಿಂಗಪೂಜೆಗೆ ಮೆಚ್ಚಿ ಶಿವ ಬಂದು |ಬಾಣನ ಬಾಗಿಲ ಕಾಯ್ದಿರಲು |ದಾನವಾಂತಕ ಸಾಸಿರ ತೋಳ ಕಡಿವಾಗ |ಮೌನದಿಂದೊಪ್ಪಿಸಿಕೊಟ್ಟ ಶಿವನು ಎಂದು 5ಭಕ್ತಗೊಲಿದು ಭಸ್ಮಾಸುರಗೆ ಶಿವ ವರವಿತ್ತು |ಭಕ್ತನ ಭಯದಿಂದ ಓಡುತಿರೆ ||ಯುಕ್ತಿಯಿಂದಸುರನ ಸುಟ್ಟು ಶಿವನ ಕಾಯ್ದ |ಶಕನು ಶ್ರೀಹರಿ ಅಲ್ಲದಿಲ್ಲವೆಂದು 6ಗರಳಜ್ವಾಲೆಗೆ ಸಿರಿರಾಮ - ರಾಮನೆಂದು |ಸ್ಮರಿಸುತಿರಲು ಉಮೆಯರಸನಾಗ ||ಕೊರಳು ಶೀತಲವಾಗೆ ಸಿತಿಕಂಠ ತನ್ನಯ |ಗಿರಿಜೆಗೆ - ರಾಮಮಂತ್ರವ ಕೊಟ್ಟ ಮಹಿಮೆಯ 7ಹರಬ್ರಹ್ಮ ಮೊದಲಾದ ಸುರರನುದಶಶಿರ |ಸೆರೆಹಿಡಿದು ಸೇವೆಯ ಕೊಳುತಿರಲು ||ಶರಧಿಯ ದಾಟಿ ರಾವಣನ ಸಂಹರಿಸಿದ |ಸುರರ ಲಜ್ಜೆಯ ಕಾಯ್ದ ಪರದೈವ ಹರಿಯೆಂದು 8ಜಗದುದ್ಧಾರನು ಜಗವ ಪೊರೆವನೀತ |ಜಗ ಬ್ರಹ್ಮಪ್ರಳಯದಿ ಮುಳುಗಲಾಗಿ ||ಮಗುವಾಗಿ ಜಗವನುದ್ಧರಿಸಿ ಪವಡಿಸಿ ಮತ್ತೆ |ಜಗದ ಜನಕಪುರಂದರವಿಠಲನೆಂದು9
--------------
ಪುರಂದರದಾಸರು
ಹೊಲೆಯ ಹೊಲತಿ ಇವರವರಲ್ಲಹೊಲಗೇರಿಯೊಳು ಹೊಲೆಯ ಹೊಲತಿಯಿಲ್ಲ ಪ.ಸತಿಯಳ ವಶನಾಗಿಜನನಿ - ಜನಕರಿಗೆಅತಿ ನಿಷ್ಟುರ ನುಡಿವವ ಹೊಲೆಯಸುತರ ಪಡೆದು ವಾರ್ಧಿಕ್ಯ ಮದವೇರಿಪತಿದ್ಟೇಷ ಮಾಡುವಳೆ ಹೊಲತಿ 1ಗುರುಗಳಲ್ಲಿ ವಿದ್ಯೆಗಳನು ಕಲಿತುಹಿರಿಯರ ಬಳಲಿಸುವವ ಹೊಲೆಯಪರಪುರಷಗೊಲಿದು ತನ್ನ ಪುರುಷನವಿರಸವ ಮಾಡುವ ಕುಲಕೇಡಿತೆ ಹೊಲತಿ 2ಒಡೆಯನನ್ನವನುಂಡು ಅಡಿಗಡಿಗೆ ಬಾಯ್ಬಿಡದೆ ತರ್ಕಿಸುವ ಜಡ ಹೊಲೆಯಬಡತನ ಬಂದರೆ ಪುರುಷನ ರಚ್ಚೆಗೆಬಿಡದೆ ತಹಳೆ ಶುದ್ಧ ಹೊಲತಿ 3ನೂರೊಂದು ಕುಲ ಕುಂಬಿಪಾಕಕಟ್ಟುವಪರನಾರಿಯಲ್ಲಿ ವೀರ್ಯವಿಟ್ಟವ ಹೊಲೆಯಆರೊಳು ಕಲಹಾಪಸ್ಮಾರಿ ದುರ್ಮುಖಿಯು - ಕಠೋರಕುಮತಿ ಶುದ್ಧ ಹೊಲತಿ 4ಅಜನುತ ಪುರಂದರವಿಠಲನ ದಾಸರಭಜನೆಯ ದಾರಿಯ ಬಿಟ್ಟವ ಹೊಲೆಯನಿಜವರ್ಯರಾದ ಸಜ್ಜನರ ಪಾದಪದ್ಮವಭಜಿಸದಿರುವಳೆ ಶುದ್ಧ ಹೊಲತಿ 5
--------------
ಪುರಂದರದಾಸರು
ಹೋಯಿತಲ್ಲಾಯುಷ್ಯ ಹೋಯಿತಲ್ಲಯ್ಯಸಾಯಸಬಟ್ಟೆನು ಭವದಿ ಶ್ರೀಯರಸನ್ನ ನಂಬದೆ ಪ.ಪಶ್ಚಿಮ ಜಾಗರದಿ ಕಾಕುತ್ಸ್ಸ್ಥನ ಪ್ರೀತಿಗೋಸುಗದುಶ್ಚಿತ್ತ ವೃತ್ತಿಯನೀಗಿನಿಶ್ಚಿತನಾಗಿಸಚ್ಚಿದಾನಂದಕಾಯನ ಆಶ್ಚರ್ಯಕರ ನಾಮವಉಚ್ಚರಿಸದೆ ನಿದ್ರೇಲಿ ಮೆಚ್ಚಿ ಘುರುಘುರಿಸುತ 1ತುಲಸಿ ಮಂಜರಿ ಪುಷ್ಪ ಅಲಸದೆ ತಂದು ಶ್ರೀನಳಿನನೇತ್ರನ್ನ ನಾಮಾವಳಿಗಳಿಂದಸಲೆ ಅವನಂಘ್ರಿಕಮಲಕರ್ಪಿಸದೆ ಸದಾಲಲನೆಸಂಪದಾಬ್ಧಿಲಿ ಮುಳುಗಿ ದುರಾಶೆಯಲ್ಲಿ2ಸತತ ಶಕ್ತ್ಯಾನುಸಾರ ವ್ರತಧರ್ಮಾಚರಿಸದೆಅತಿಥÀರೊಳೀತನ ನಂಟನೆಂದರೆಅತಿಸ್ನೇಹ ಬಳಸುತ ಹಿತಬಿಟ್ಟೆ ವೃಥಾ ಕೆಟ್ಟೆಗತಿಕಾಣಿಸಿನ್ನಾರೆ ಶ್ರೀಪತಿ ಪ್ರಸನ್ವೆಂಕಟಯ್ಯ3
--------------
ಪ್ರಸನ್ನವೆಂಕಟದಾಸರು
ಹ್ಯಾಂಗೆ ಶೋಭಿಸುವ ನೋಡೆ ಯಾದವ ಕೃಷ್ಣಹ್ಯಾಂಗೆ ಶೋಭಿಸುವ ನೋಡೆ ಪಮಂಗಳ ಮಹಿಮ ಶ್ರೀರಂಗ ತನ್ನವರಿಗೆ ಅ.ಪಘಲುಘಲು ಘಲುರೆನ್ನುತ ಕಾಲ್ಗಡಗ ನೂ-ಪುರಗೆಜ್ಜೆ ಸರಪಣಿಯುಸರಿಗೆಳೆಯರ ಕೂಡಿ ಮುರಳಿಯ ಧರಿಸುತಹರುಷದಿಂದಲಿ ಸಪ್ತಸ್ವರಗಳ ನುಡಿಸುತ್ತ 1ಉಟ್ಟ ಪೀತಾಂಬರವು ನಡುವಿಗೆ ಜರದಪಟ್ಟೆಯ ಚಲ್ಲಣವುಗಟ್ಟಿ ಕಂಕಣ ಕೈಗಳಿಟ್ಟು ಕಟಿಯ ಮೇಲೆಭಕ್ತವತ್ಸಲ ಸ್ವಾಮಿ ಸೃಷ್ಟಿಪಾಲಕ ಕೃಷ್ಣ 2ಎಳೆ ತುಳಸಿಯ ಮಾಲೆಯು ಕಂಠದಿ ಮೆರೆವಪದಕಕೌಸ್ತುಭಮಣಿಯುನಳಿನಲೋಚನೆಯ ಉರದಲ್ಲಿ ಧರಿಸಿಕೊಂಡುಚಲುವ ಚನ್ನಿಗನಾಗಿ ಹೊಳೆಯುವ ದೇವನು 3ಕೋಟಿ ಸೂರ್ಯರ ಸೋಲಿಪ ಮುಖಕಾಂತಿಯಸಾಟಿಯಾರುಂಟವಗೆನೀಟಾಗಿ ಕರ್ನಕುಂಡಲ ಕಿರೀಟವು ಹೊಳೆಯೆಲಲಾಟದಿ ಕಸ್ತೂರಿ ತಿಲುಕವು ಹೊಳೆಯುತ್ತ 4ಕಂಗಳ ಕುಡಿನೋಟದಿ ಸಜ್ಜನರ ಪಾ-ಪಂಗಳ ಪರಿಹರಿಸಿಮಂಗಳ ಮಹಿಮ ಶ್ರೀರಂಗ ಮೂರುತಿ ಸಾಧುಸಂಗ ವಂದಿತಸಿರಿಕಮಲನಾಭ ವಿಠ್ಠಲ5
--------------
ನಿಡಗುರುಕಿ ಜೀವೂಬಾಯಿ