ಒಟ್ಟು 1703 ಕಡೆಗಳಲ್ಲಿ , 109 ದಾಸರು , 1221 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾಳಬೇಕು ಭಕ್ತಿಯೇಳಬೇಕು ಪ ತಾಳಬೇಕಾದವನು ಮೇಳದಲಿ ಬಾಳಬೇಕು ಅ.ಪ ಹಾಡಲು ತಾಳಬೇಕು ಬೇಡಲು ತಾಳಬೇಕು ಓಡಾಡಿ ಕುಳಿತು ಮಾತಾಡಲು ತಾಳಬೇಕು ನೋಡಬೇಕಾದವನು ನೋಡಲು ತಾಳಬೇಕು ಮಾಡಿ ಮುಳುಗುವ ಜನ್ಮಬೇಡೆಂದು ತಾಳಬೇಕು 1 ತಾಳರಿತಮೇಲಂತರಾಳವನು ಕಾಣಬೇಕು ತಾಳದವ ಬಾಳುವನೇ ಮೇಳದೊಳಗೇ ತಾಳ ನೋಡುವರೆಲ್ಲ ಹೂಳನೋಡಲಿಬೇಕು ತಾಳಿ ಮಾಂಗಿರಿರಂಗನೂಳಿಗಕ್ಕೆ ನುಗ್ಗಬೇಕು 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ತಾಳಲಾರೆನಮ್ಮಾ ಬಾಲಕನಟ್ಟುಳಿ ಗೋಪೀಘನವಮ್ಮ ಕೇಳಿದುಳವಿಲ್ಲಾ ಕೇಳಿದುಳವಿಲ್ಲಾ ಕಾಲಕಾಲದಲಿಟ್ಟ ಬೆಣ್ಣೆ ಮೂಲವಿರಲಿಕ್ಕಿಲ್ಲಾ ಪ ಅತ್ತನೋಡ ಲಿಹಾ ಇತ್ತ ನೋಡಲಿಹಾ ಸುತ್ತಸೂಸುತ ಬಾಲೆಯರಾ ಚಿತ್ತಮೋಹಿಸುತಿಹಾ1 ಹಿಡಿದೇನೆಂದರೆ ಸಿಕ್ಕಾ ತುಡುಗ ಬಲುದಕ್ಕಾ ಹಿಡಿದು ನಿಲ್ಲಿಸುವರಿಲ್ಲಾ ಪೊಡವಿಲಿವನ ತುಕ್ಕಾ2 ಆರಿಗೇ ವಿಚಾರಾ ಸಾರಬೇಕು ದೂರಾ ಸೂರೆಹೋಗುತಿದೆ ಸಂಸಾರಾ ಸುಖಸಾರ 3 ತಂದೆಮಹಿಪತಿ ನಂದನ ಸಾರಥಿ ಇಂದು ನಮ್ಮ ಕಾಡಿದರ ಮುಂದಾರುಗತಿ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ತಾಳಲಾರೆನೆ ಜಗದಿ ಬಾಳಲಾರೆನೆ ನಾಗೇಶಾಂಗಶಯನನ ಸುಖಭೋಗ ಪ ಎಂದಿಗೆ ಆಗದಿರ್ದೊಡೆ ತಾಳಲಾರೆನೆ ಜಗದಿ ಬಾಳಲಾರೆÀನೆ ಅ.ಪ ಸವತಿ ರುಗ್ಮಿಣಿ ಭವನದಿ ಮು ದವನೆ ತಾ ಮರೆತು ಕುಳಿತಾ 1 ಇಂದಿರೇಶ ನಂದಧೀಶ ಮಂದಿರದೀಗ ಬಾರದಿರಲು 2 ನರಸಿಂಹ ವಿಠಲನೀಗ ಭರದಿ ಮೊಗವ ತೋರದಿರಲು 3
--------------
ನರಸಿಂಹವಿಠಲರು
ತಾಳು ತಾಳೆಲೊ ಕೋಪ ಜಾಲಮಾಡದೆ ಭೂಪ ಕೇಳಿಕೊಂಬೆನು ನಿನ್ನ ಕಾಲಪಿಡಿವೆನೊ ಪ. ಫಾಲಲೋಚನನುತ ಶ್ರೀಲೋಲ ನಿನ್ನನೇ ಕೇಳಿಕೊಂಬೆನು ಮಾತಕೇಳೋ ಕಾಳುಮಾಡದೆ ಮಾತ 1 ದುರುಳತನದಲಿ ನಿನ್ನ ತೆರೆದಕಣ್ಣಳನೆಂದು ಜರಿದು ಪೇಳಿದೆನೋ ತಿರುಗಿ ನಾ ನಿನ್ನ ಗಿರಿಯ ಬೆನ್ನೊಳು ಪೊತ್ತು ಮೆರೆಯುವ ದಡ್ಡನೆಂದೊರೆದ ಕಾರಣದಿಂದ 2 ಕೋರೆಯೊಳ್ ಕೊರೆದು ಕೊನ್ನಾರಿಗೆಡ್ಡೆಯ ತಿಂದು ಳೀರಡಿ ಮಾಡಿದೆ ಘೋರವಿಕ್ರಮನೆಂದು ದೂರಿದೆನದರಿಂದ3 ಹೆತ್ತತಾಯಿಯ ಕೊಂದು ಮತ್ತೆ ಕಪಿಗಳ ಕೂಡಿ ಚಿತ್ತವಸೆರೆಗೈದ ಮತ್ತನೆಂದೆನಲಾಗಿ 4 ಉತ್ತಮಸತಿಯರ ಚಿತ್ತವ ಕಲಕಿದ ಮತ್ತನೆಂದಾಡಿದೆನೋ ಮತ್ತೆ ಕುದುರೆಯನೇರಿ ಕತ್ತಿಯ ಪಿಡಿದೆತ್ತಿ ಸುತ್ತುವನಿವನುನ್ಮತ್ತನೆಂದುದರಿಂದ 5 ಪಿತ್ತವು ತಲೆಗೇರಿ ಮತ್ತೆ ಮತ್ತೆ ನಾನಿನ್ನ ಒತ್ತೊತ್ತಿಜರಿದೆನೊ ಚಿತ್ತಜಪಿತನೆ ಮತ್ತೊಮ್ಮೆ ಬೇಡುವೆ ಗತಿನೀನೆ ನಮಗೆಂದು ಪತಿಕರಿಸೆನ್ನಪರಾಧವ ಮನ್ನಿಸಿ 6 ಕಂದನಿವಗೈದ ಕುಂದುಗಳೆಣಿಸದೆ ತಂದೆ ಸಲಹಯ್ಯ ಶ್ರೀ ಶೇಷಗಿರಿವರ 7
--------------
ನಂಜನಗೂಡು ತಿರುಮಲಾಂಬಾ
ತಿರುಮಣಿ ಧರಿಸಿದ ತೀರ್ಥರ ಕಂಡರೆ ತಿರುವಡಿಗಳಿಗೇ ಮಣಿಯುವುದು ಪ ಗುರುತರ ಶ್ರೀಪಾದತೀರ್ಥಸೇವನ ದುರಿತ ಹರವು ತಾ ಪಾವನವು ಅ.ಪ ದೇವರ ಕಡೆಯವರಿವರೆಂದೆನ್ನುತ ಕಾವನ ಕತೆಗಳ ಕೇಳುವುದು ಭಾವಿಸಿ ಭಾಗವತರ ಸಹವಾಸವು ಶ್ರೀವರನೊಲಿಯುವ ಕಾರಣವು1 ಇವರ ದರ್ಶನವು ಪುಣ್ಯಪ್ರದವು ಪವಿತ್ರರಿರುವೆಡೆ ವೈಕುಂಠ ಭುವಿಸುರಪೂಜನ ಹರಿಗಾನಂದವು ಸುವಿಮಲ ಚರಿತರು ಶುಭಕರರು 2 ಶಂಖ ಚಕ್ರಗಳ ಭುಜದಲಿ ಧರಿಸಿ ಪಂಕಜ ತುಳಸೀಮಣಿ ಕೊರಳೊಳ್ ವೇಂಕಟ ಶ್ರೀರಂಗ ವರದ ನಾರಾಯಣ ಕಿಂಕರರೈ ಜಾಜೀಶನಿಗೆ 3
--------------
ಶಾಮಶರ್ಮರು
ತಿಳಿದು ಕೊಳ್ಳಿರಿ ಜಾಣರೆಲ್ಲಾ ಅಹಂ ಅಳಿದು ನಿಂತಿರುವಂತ ಸತ್ಯಾತ್ಮ ಬಲ್ಲಾ ಪ ಆದ್ಯಂತ ವಿಸ್ತಾರಮೆಲ್ಲಾ ಇದನು ಕೇ ಳೀದರ್ಜುನÀಗೇಳಿದ ಕಳ್ಳಗೊಲ್ಲ ಅ.ಪ ಎಂಟಾರುಗಳ ನೀನು ಕಂಡೂ ಅಲ್ಲಿ ಟಂಟಣಿಸುವದೇನನುಭವದಿ ನೀನುಂಡೂ ತುಂಟರೈವರಕಡೆಗೊಂಡು ಜ್ಞಾನ ಮಂಟಪದೊಳಗೆ ಆಡುವ ಬಾರೊ ಚೆಂಡೂ 1 ನಾರದಾದಿಗಳೆಲ್ಲ ಬಂದೂ ಆಹ ಮೀರಿದ ಶ್ರೀರಂಗಧಾಮನೊಳು ನಿಂದೂ ಸಾರಿದರು ನಿಜನಾಮವೆಂದೂ ಇದನು ಯಾರಾದರು ಭಜಿಸಿ ಗೋಪ್ಯದೊಳಗೆಂದು 2 ಪರದೊಳಗೆ ನೀ ಬೆರೆದಾಡೊ ಸತ್ಯ ಶರಣರಿಗೊಲಿವ ಹರಿಯಹುದಿದು ನೋಡೋ ನರಹರಿ ಭಜನೆಯ ಮಾಡು ನನ್ನ ಗುರುವೆ ತುಲಸಿ ನಿನ್ನೊಳಿಹುದೈನೆ ನೋಡೋ 3
--------------
ಚನ್ನಪಟ್ಟಣದ ಅಹೋಬಲದಾಸರು
ತಿಳಿದು ನೋಡಿ ತನುವಿನೊಳು ತಮ್ಮ ನಿಜಖೂನ ಸುಳುಹು ದೋರಿಕುಡುವ ನೋಡಿ ನಿಜಾನಂದ ಘನ ಧ್ರುವ ತಮ್ಮ ಶುದ್ಧಿ ತಮಗಿಲ್ಲವೊ ಹೆಮ್ಮೆ ಬಹಳ ಘಮ್ಮ ಆದರೆ ಎಲ್ಲ ನೋಡಿ ಹೊಕ್ಕು ಮೃಗಜಲ ನಮ್ಮ ನಿಮ್ಮದೆಂದು ಹೊಡೆದಾಡಿ ಬಿತ್ತು ಬೀಳ ಸಮ್ಯಗ್ ಜ್ಞಾನದಿಂದ ತಿಳಿದವನೆ ವಿರಳ 1 ತನ್ನ ತಾ ತಿಳಿದವಗೇನು ಭಿನ್ನಭೇದವಿಲ್ಲ ಉನ್ಮನವಾಗಿ ಪೂರ್ಣ ತಿಳಿದವನೆ ಬಲ್ಲ ಧನ್ಯವಾದ ಮಹಿಮರಿನ್ನು ಮನಿಮನಿಗೆ ಇಲ್ಲ ಕಣ್ಣಾರೆ ಕಾಣುತಿಹ್ಯ ಗುಪ್ತಗುಹ್ಯವೆಲ್ಲ 2 ತಿಳುಹದೋರಿಕೊಟ್ಟ ಗುರು ಎನ್ನೊಳÀಗೆ ಪೂರ್ಣ ಹೊಳೆಹುತಿಹ್ಯಾನಂದ ಘನಸದ್ಗುರು ಪೂರ್ಣ ಥಳಥಳಿಸುತಿಹದು ಸದ್ಗತಿ ಸಾಧನ ಕಳೆದ ಮಹಿಪತಿ ನೋಡಿ ಜನನ ಮರಣ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಿಳಿಯೊ ಮನವೆ ನಿಜವಸ್ತು ಖೂನ ಅಳಿಯೊ ದೇಹ ನಾನೆಂಬುವಭಿಮಾನ ಹೊಳಿಯೊ ಸದ್ಗುರು ಪಾದದಲಿ ನೀ ಪೂರ್ಣ 1 ಹುಟ್ಟಿ ಬಂದೇನು ಪುಣ್ಯ ಪುರುಷಾರ್ಥ ಘಟ್ಟಿಗೊಳ್ಳದೆ ನಿಜ ಸುಹಿತಾರ್ಥ ನಿಷ್ಠೆ ಹಿಡಿಯದನ ಜನ್ಮ ವ್ಯರ್ಥ ಮುಟ್ಟಿ ತೋರುವ ಶ್ರೀ ಗುರು ಪರಮಾರ್ಥ 2 ಗುರ್ತು ತಿಳಿಯೊ ಜನುಮಕೆ ಬಂದ ಮ್ಯಾಲೆ ಮರೆತು ಮೈಮರೆವದೇನು ತಾ ಮೇಲೆ ಅರ್ತು ನಡೆವದು ನಿನಗೇನು ಸೋಲು ಕರ್ತು ಸದ್ಗುರು ಸ್ಮರಿಸೋ ಆವಾಗಲೂ 3 ಎಲ್ಲಾರಂಥ ತಾನಲ್ಲೊ ಗುರುನಾಥ ಸುಲ್ಲಭದಿಂದ ದೋರುವ ಸುಪಥ ಅಲ್ಲೆ ದೋರ್ವದು ಸಕಲ ಹಿತಾರ್ಥ ಬಲ್ಲ ಮಹಿಮರೆ ತಿಳಿವರೀ ಮಾತ 4 ಭಾಸುತದೆ ಭಾಸ್ಕರ ಕೋಟಿ ಕಿರಣ ಲೇಸಾಗಿ ಹೋಗೊ ಗುರುವಿಗೆ ಶರಣ ದಾಸಮಹಿಪತಿ ಸ್ವಾಮಿ ದೀನೋದ್ಧಾರಣ ಭಾಸಿ ಪಾಲಿಸುವ ತಾ ಸುಕರಣ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತುಂಗಭದ್ರ ನದಿ ತೀರದಿ ನೆಲಸಿಹನ್ಯಾರೆ ಪೇಳಮ್ಮಯ್ಯ ಪ. ರಂಗ ತಾನು ಇಲ್ಲಿರುತಿಹನಮ್ಮ ಅ.ಪ. ಶಂಖ ಚಕ್ರ ತ್ರಿಶೂಲವ ಧರಿಸಿಹನ್ಯಾರೇ ಪೇಳಮ್ಮಯ್ಯ ಶಂಕಿಸದಂದದಿ ತೋರುವನಮ್ಮ 1 ಈ ಪರಿರೂಪವ ಧರಿಸಲು ಕಾರಣವೇನೇ ಪೇಳಮ್ಮಯ್ಯ ಈ ಪರಿರೂಪವ ಧರಿಸಿಹನಮ್ಮ 2 ಪರಿ ಶುದ್ಧ ಸಾತ್ವಿಕರಿಗೆ ಹ್ಯಾಗೇ ಪೇಳಮ್ಮಯ್ಯ ಶುದ್ಧ ಜ್ಞಾನವನಿತ್ತು ಸಲಹುವನಮ್ಮ 3 ವಿಷ್ಣು ಭಕ್ತರ ಮನಸಿಗೆ ತೋರುವ ಮತಿ ಏನೇ ಪೇಳಮ್ಮಯ್ಯ ಬಿಟ್ಟಿರಲಾರದ ಗುಟ್ಟು ಕಾಣಮ್ಮ 4 ಪರಿ ಲೀಲೆ ಇದೇನೆ ಪೇಳಮ್ಮಯ್ಯ ಹರಿಯು ತಾನು ಒಲಿಯನು ಕಾಣಮ್ಮ 5 ಪರಿ ಹ್ಯಾಗೇ ಪೇಳಮ್ಮಯ್ಯ ಪರಿ ಧರಿಸುವದೊಂದರಿದೇನಮ್ಮ 6 ಹರಿಹರ ಕ್ಷೇತ್ರದಿ ನೆಲಸಿಹ ಸ್ವಾಮಿಯ ಭಜಿಸುವದ್ಹ್ಯಾಗೇ ಪೇಳಮ್ಮಯ್ಯ ಕರಕರೆ ಭವವನು ಕಳೆಯಬೇಕಮ್ಮ 7 ಶ್ರೀಸತಿ ಪಾರ್ವತಿ ಸಹಿತದಿ ನೆಲಸಿಹನ್ಯಾರೇ ಪೇಳಮ್ಮಯ್ಯ ಶೇಷಭೂಷಣ ಸಹ ಶ್ರೀನಿವಾಸ ಕಾಣಮ್ಮ 8
--------------
ಅಂಬಾಬಾಯಿ
ತುರು ಮನವಾರ್ತೆಯಹರಿಬಲೆಯೊಳುಬಿದ್ದು ಹಲುಗಿರಿವುದ ನೋಡಿಪರಮವೈರಾಗ್ಯ ಖಡ್ಗದಿ ಮೋಹ ಪಾಶವಪರಿದು ಜ್ಞಾನಾಮೃತ ಪಾನಗೈಯೆಂದೆನು 1ಪರಧನವನು ಕಳಬೇಡ ಕೊಲ್ಲುವರೆಂದುವರದರು 'ುೀರಿಕದ್ದೊಡನೆ ಕೊಳದಿ ಸಿಕ್ಕಿಕೊರಗುತೆಲ್ಲರಿಗೆ ಪಲ್ಗಿರಿವಂತೆ ಬಯಲಿಗೆಬೆರತು ನೀ ಮುಂಗೆಡಬೇಡೆಂದು ಪೇಳಿದೆ 2ತಿರಿದುಂಬ ಪಾಪಿಗೆ ತುಪ್ಪ ಸಕ್ಕರೆ ಪಾಲುಬೆರೆದ ಮೃಷ್ಟಾನ್ನ ತಾ ಬರೆ ಸುಖದಿಂದುಂಡುುರದನ್ಯರೆಂಜಲಿಗೆರಗುವಂದದಿ ಪೂರ್ವದಿರವ ಬಯಸಿ ನೀನೀತೆರದಲಿ ಕೆ[ಡದೆ] 3ಹರಿಸ್ಮರಣೆಯ ಮಾಡು ಹರಿಕಥೆಗಳ ಕೇಳುಹರಿಯನರ್ಚಿಸಿ ನೋಡಿ ಹರುಷದಿಂ ಕುಣಿದಾಡುಹರಿ ಸರ್ವೋತ್ತಮನೆಂದು ಹಸನಾಗಿ ಬಾಳುವೆ'ರಿಯರೊಪ್ಪುವ ಮಾರ್ಗ 'ೀಗಿರು ನೀನೆಂದೆ 4ದೂಸುವವನಿಂದ ದೋಷ ಪೋಪುದು ನಿನ್ನಪೋಸುವವನಿಗೆ ಪುಣ್ಯ ಕೈಸಾರ್ವುದುರೋಷ ಹರ್ಷಗಳ ದೂರದಿ ಬಿಟ್ಟುಶ್ರೀಹರಿದಾಸರ ದಾಸರದಾಸ ನೀನಾಗೆಂದೆ 5ಶ್ರವಣಸುಧಾಪಾನ ರುಚಿಯ ಕಂಡರೆ ನೀನುಭವದುಃಖವೆಂಬ ಬಾಡಿದಗಂಜಿಗುಡಿವೆಯಾಸು'ವೇಕತನ ತಾನು ಸುಮ್ಮನೆ ದೊರೆವದೆಅ'ವೇಕತನವ ಬಿಟ್ಟಾನಂದಬಡುಯೆಂದೆ 6ಸಾರಿಗೆ ಸಾರಿಗೆ ಸಾರಿದರೆಯು ನಿನ್ನದಾರಿಯ ಬಿಡೆಯಲ್ಲ ದುಕ್ಕ ತೊಲಗದಲ್ಲಹೊರಲಾರೆನು ನಿನ್ನ ಹತ್ತಿರೆ 'ಧಿ ನನ್ನಸೇರಿಸಿ ಪೇಳಿದೆ ಸುಖಿಯಾಗಿ ಬಾಳೆಂದು 7ಸಾರಿದೆ ಸಾರಿದೆ ಕೆಡಬೇಡ ಭವಸುಖಹಾರುವದಿದು ನಿಜವಲ್ಲ ಸನ್ಮುಕ್ತಿಗೆದಾರಿಗೊಡದು ಸತ್ಸಂಗವ ಮಾಡಿ 'ಚಾರಿಸಿ ನಿನ್ನ ನೀ ಸುಖಮಯನಾಗೆಂದೆ8ಆಶೆಯ ಬಿಡಲೊಲ್ಲೆ ಆನಂದಬಡಲೊಲ್ಲೆಪೊಸದೆ 'ಷಯದ ಪೇರಡ'ಯೊಳಗೆಮೋಸಗೈವಳು ಮೃತ್ಯುವದರಿಂದ ಶ್ರೀಹರಿದಾಸರ ಜೊತೆಯ ಬಿಟ್ಟೊರ್ವ ಪೋಗದಿರೆಂದೆ 9ಬಲ್ಲೆಯ ಬಲ್ಲೆಯ ಗುರುಪದ ಸೇವೆಗೆಬಲ್ಲೆಯ ಬಲ್ಲೆಯ ಹರಿಕಥೆಗೇಳ್ಪರೆಬಲ್ಲೆಯ ಬಲ್ಲೆಯ ಹರಿನಾಮ ಸ್ಮರಣೆಯಕೊಲ್ಲುವೆ ಸಟೆಯಲ್ಲಿ ಕೇಳು ನೀ ನೀ ಮೇಲು 10ಗುರುಕರುಣವದೆಂಬ ಘಾಳಿ ಬೀಸಲಿ ತಾಳುತರಗೆಲೆಯಂತ್ತೆತ್ತಿ ತಂದು ಜ್ಞಾನಾಗ್ನಿಯೊಳ್‍ಉರು' ನಿನ್ನಯರೂಪನಡಗಿಸದಿಪ್ಪೆನೆವರಟು ಮಂಡೆಯದೆ ನಿನ್ನೊಡನೇಕೆ ಹಾರಲಿ 11ಬರಡು ಮನದೊಳೆ ಬರಿಜಗಳ'ದೆಂದುಗುರುವಾಸುದೇವಾರ್ಯ ಗುಪಿತದಿಂ ಚಿಕನಾಗಪುರದಿ ಜ್ಞಾನಾಮೃತಪಾನ ಗೈಸಿದುದರಿಂಬೆರೆದೆನಾತನೊಳು ನೀನಿರು ಪೋಗು ಬಯಲಾಗು 12
--------------
ವೆಂಕಟದಾಸರು
ತೆರಳಿ ಪೋದರಿಂದು ಪರಮ ಪದವನರಸುತ ಪ ಸಿರಿ ಶೇಷದಾಸಾರ್ಯರು ಅ.ಪ. ಸಿರಿಯುಕ್ತ ರಕಾಕ್ಷಿ ವರುಷ ಭಾದ್ರಪದಸಿತ ವರಪೌರ್ಣಿಮಾ ಸಹಿತವಾದ ಕವಿವಾರದಿ ಸರು ನಿಶಿಯೊಳು ಶತತಾರ ನಕ್ಷತ್ರ ಬರುತಿರೆ ನರಹರಿಯ ಚರಣಕಾಂಬ ಕಡು ತವಕದಿಂದ 1 ತಂದೆ ಮುದ್ದುಮೋಹನ ದಾಸವರ್ಯರಿಂದ ಕುಂದುರಹಿತನಾದ ಪ್ರಾಣನಾಥವಿಠಲ- ನೆಂದು ಅಂಕಿತೋಪದೇಶವನು ಕೈಕೊಂಡು ಬಂಧುರವಾದನೇಕ ಪದಗಳನು ರಚಿಸಿ 2 ದಾಸವೃತ್ತಿಯ ಕಂಡು ದೇಶ ದೇಶವ ಸುತ್ತಿ ಕರವ ನೀಡದೆ ಲೇಸು ಮಾಡುತಲಿ ಸಚ್ಛಿಷ್ಯರಿಗೆ ತತ್ತ್ವೋಪ- ದೇಶವನು ಪರಮ ಸಂತೋಷದಿಂದಗೈದು 3 ಆಶಪಾಶವ ತೊರೆದು ಮೀಸಲು ಮನರಾಗಿ ವಾಸುದೇವನ ನಾಮ ಸೋಸಿನಿಂದ ಭಜಿಸಿ ಸಾಸುವೆಯಷ್ಟಾದರಾಯಾಸವನುಪಡದೆ ಈ ಶರೀರ ವಿಶ್ವೇಶನಾಧೀನವೆಂದು 4 ಅಂಗೋಪಾಂಗವ ಮರೆದು ನಿಸ್ಸಂಗಯುತರಾಗಿ ಕಂಗಳನು ಮುಚ್ಚುತ ಭಂಗವಿಲ್ಲದ ಸುಖವ ಹಿಂಗದೆ ಕೊಡುವಂಥ ಮಂಗಳನ ಶ್ರೀ ರಂಗೇಶವಿಠಲನಂತರಂಗದಿ ನೋಡುತ5
--------------
ರಂಗೇಶವಿಠಲದಾಸರು
ತೇಲಿದೆ ಅಯ್ಯಾ ತೇಲಿದೆ ಪ ತೇಲಿಬಾರದಂಥ ಸುಳಿಯ ಮಡುವುಮುಳುಗಿ ನೀಲಶಾಮನ ಪಾದಕಮಲಕರುಣದಿಂದ ಅ.ಪ ಪಾರಾವಾರಿಲ್ಲದ ಮಡುವು ಕಾಲು ಜಾರಿ ಬಿದ್ದಿದ್ದೆ ತಪ್ಪಿದಡವು ಬಲು ಮೇರೆದಪ್ಪಿದ ತೆರೆ ಸೆಳವು ಉಲಿ ದ್ಹಾರಿಬರುವ ಜಲಚರವು ಆಹ ಮೀರಿದಂಧಕಾರ ನೀರಿನ ಸುಳಿಯೊಳು ಘೋರಬಡುತಲಿರ್ದೆ ಮುಳುಮುಳುಗೇಳುತ 1 ತಂಡತಂಡದಿ ಒದಗುವ ಬಲು ಗಂಡಸುಳಿಯು ತಿರುಗುವ ಒಳ ಗೊಂಡ ಮತ್ಸ್ಯಮಕರಿಭಯವ ಆಹ ಕಂಡು ಕಾಣದೆ ಬಿದ್ದು ಗುಂಡಿಗೊಡೆದು ನಾನು ಬೆಂಡಾದೆ ಕಂಗೆಟ್ಟು ಮುಳುಮುಳುಗೇಳುತ 2 ಹಿಂದಕ್ಕೆ ಏನಾದದ್ದಾಯ್ತು ಶ್ರೀಶ ಮುಂದೆ ಎನ್ನಗೆ ಇಂಥ ಹೊತ್ತು ಈಶ ಎಂದೆಂದು ತರದಿರು ಮತ್ತು ಕೇಶ ಕಂದನ ಸನ್ಮಾರ್ಗಕ್ಹೊತ್ತು ಆಹ ಸಿಂಧುಶಯನ ಎನ್ನ ತಂದೆ ಶ್ರೀರಾಮ ನಿನ್ನ ಬಂಧುರಂಘ್ರಿಯ ಕೃಪೆಯಿಂದ ನಾ ಉಳಕೊಂಡೆ 3
--------------
ರಾಮದಾಸರು
ತೊಂಡ ನೆನಿಸ ಬೇಡ ಹರಿಯೇ ಪ ಪುಂಡರೀಕಾಕ್ಷನೆ ಕಾವ ತೊಂಡರ ತೊಂಡನೆನಿಸೋ ಅ.ಪ. ಹೆಂಡತಿಯ ಬಿಡಬಹುದು-ಕಾಡಿಗ್ಹೋಗಲಿ ಬಹುದು ಬಿಡದೆ ಜಪಿಸಲಿ ಬಹುದು-ಕಟುತಪವ ಮಾಡಲಿಬಹುದು ಒಡೆಯ ಕೃಷ್ಣನೆ ನಿನ್ನ ಅಡಿಯ ಕಾಡಲಿಬಹುದು ಕಂಡವರ ಊಳಿಗದಿ ಕೀರ್ತಿ ಪಡೆಯಲಾಗದೊ ದೇವ 1 ಆಶೆಯ ತೊರೆದು ನಿಜ ದಾಸನಾಗಲಿಬಹುದು ದೇಶ ದೇಶವ ತಿರುಗಿ ಕಾಸುಗಳಿಸಲಬಹುದು ಕೇಸರಿಯ ಹಿಡಿತಂದು ಪಾಶದಲಿ ಕಟ್ಟಬಹುದು ಶ್ರೀಶನಿನಗಲ್ಲದವರ ಸಂಗ ಏಸೇಸು ಜನ್ಮಕ್ಕು ಬ್ಯಾಡೋ 2 ಹೀನ ಜನರಾ ಸಂಗ ಮಾನವಂತರಿಗಲ್ಲ ದೀನಜನಮಂದಾರ ಕೊಡಬೇಡ ಇದು ಎನಗೇ ಮಾನಾಭಿಮಾನವನು ನಿನಗೆ ಒಪ್ಪಿಸಿದೆನೋ ಇನ್ನಾದರೂ ಸಲಹೋ ಶ್ರೀನಿವಾಸ ಕೃಷ್ಣವಿಠ್ಠಲನೆ ಜೀಯಾ 3
--------------
ಕೃಷ್ಣವಿಠಲದಾಸರು
ತ್ರಾಣಿ ಶ್ರೀ ಕೃಷ್ಣವೇಣಿ ಪ್ರಾಣಪತಿ ಪದಕಮಲ ಕಾಣಿಸು ಹೃದಯದಿ ತ್ರಾಣಿ ಶ್ರೀ ಕೃಷ್ಣ ವೇಣಿ ಪ ಯಮಧರ್ಮತನಯೆ ಶ್ರೀ ಕೃಷ್ಣ ಸಂಗದಿ ಜನಿಸಿ ಕಮಲ ಸಂಭವನ ಲೋಕದಲಿ ಮೆರೆದೆ ಸುಮನಸರ ನುಡಿಗೇಳಿ ಲೋಕಗಳ ದುರಿತೋಪ ಶಮನ ಗೊಳಿಸಲು ಬಂದೆ ತುಮಲ ಹರುಷದಲಿ 1 ಭೂತನಾಥನ ಜಟಾಜೂಟದಿಂದುದ್ಭವಿಸಿ ಶ್ವೇತಪಿಂಗಳ ಶೈಲಶಿಖರಕಿಳಿದೇ ಭೂತಳಕೆ ಭೂಷಣಳೆನಿಸಿ ಪೂರ್ವವನಧಿ ನಿ ಕೇತನವನೈದಿ ಸುಖಿಸಿದಿ ನಿನ್ನ ಪತಿಯೊಡನೇ 2 ಪ್ರಾಣಿಗಳು ನಿನ್ನ ಜಲಪಾನವನು ಗೈಯೆ ನಿ ತ್ರಾಣ ಸಂಹಾರ ವ್ಯಾಧಿಗೆ ಭೇಷಜಾ ಪ್ರಾಣ ಪ್ರಯಾಣ ಪಾಥೇಯವೆಂದರಿಯೆ ನಿ ರ್ವಾಣಪದವಿತ್ತು ಕಲ್ಯಾಣವಂತರ ಮಾಳ್ಪೆ 3 ಜನಪದಗಳಾಗಿ ಕಾನನವಾಗಿ ಮನ್ವಾದಿ ದಿನಗಳಲ್ಲಾಗಿ ಮತ್ತೇನಾಗಲೀ ಮನುಜ ಮಜನಗೈಯೆ ವಾಜಪೇಯಾದಿ ಮಖ ವನುಸರಿಸಿದಕೆ ಫಲವೇನು ತತ್ಪಲವೀವೆ 4 ಅರವತ್ತು ಸಹಸ್ರ ವರುಷಂಗಳಲ್ಲಿ ನಿ ರ್ಜರ ತರಂಗಿಣಿಯ ಮಜ್ಜನದ ಫಲವು ಗುರುವು ಕನ್ಯಸ್ಥನಾಗಿರಲು ಒಂದಿನ ಮಿಂದ ನರರಿಗಾ ಪುಣ್ಯಸಮನೆನಿಸಿ ತತ್ಫಲವೀವೇ 5 ಮನನಶೀಲ ಸುಯೋಗಿಗಳಿಗಾವ ಗತಿಯು ಇಹ ವನುದಿನದಿ ನಿನ್ನ ತೀರದಲಿ ಇಪ್ಪಾ ಮನುಜೋತ್ತಮರಿಗೆ ಆ ಗತಿಯಿತ್ತು ಪಾಲಿಸುವೆ ಅನುಪಮ ಸುಕಾರುಣ್ಯಕೆಣೆಗಾಣಿ ಜಗದೊಳಗೆ 6 ತಾಯೆ ಎನ್ನನುದಿನದಿ ಹೇಯ ಸಂಸಾರದೊಳ ಗಾಯಾಸ ಗೊಳಿಸದಲೆ ಕಾಯಬೇಕೊ ವಾಯುಪಿತ ಶ್ರೀ ಜಗನ್ನಾಥ ವಿಠ್ಠಲ ಹೃ ತ್ತೋಯಜದೊಳಗೆ ಕಾಂಬುಪಾಯ ಮಾರ್ಗವ ತೋರೆ 7
--------------
ಜಗನ್ನಾಥದಾಸರು
ತ್ರಾಹಿ ತ್ರಾಹಿ ತ್ರಾಹಿ ಎನ್ನಬೇಕು ಧ್ರುವ ಕಡ್ಡಿಮರೆಯಲ್ಯದ ನೋಡಿರೊ ಗುಡ್ಡ ಗುಡ್ಡಕಾಣಲರಿಯದವನ ಹೆಡ್ಡ ಹೆಡ್ಡನಾದರ ವಸ್ತುಕಾಗೇದಡ್ಡ ಅಡ್ಡಾಗಡ್ಡೇರಿಸಿದ ಶ್ರೀಗುರುದೊಡ್ಡ 1 ಅಡ್ಟಾUಡೆÀ್ಡಂಬುಕ ಅನುಮಾನ ಗುಡ್ಡವೆÀಂಬುವೆ ವಸ್ತು ತಾ ನಿಧಾನ ವಡ್ಡಗೊಂಡಿಹುದು ಕಾಣದ ಮನ ಅಡ್ಡಮರಿ ಬಿಡಿಸುವ ಗುರುಙÁ್ಞನ2 ಕಡ್ಡಿಮರೆಯು ಆಗಿಹ್ಯ ತಾ ಕಾರಣ ಅಡ್ಡ ಬಿದ್ದೆನಯ್ಯ ಗುರುವಿಗೆ ಶರಣ ದೊಡ್ಡ ಸ್ವಾಮಿ ನಮ್ಮ ಸದ್ಗುರು ಕರುಣ ವಡ್ಡುಗಳಿಸಿದ ಮಹಿಪತಿಗೆ ಪೂರ್ಣ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು