ಒಟ್ಟು 572 ಕಡೆಗಳಲ್ಲಿ , 70 ದಾಸರು , 484 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸ್ವಾಮಿ ನಿನಗೆ ಶರಣನೆಂಬೆ ಸೋಮನಾಥಾ ಸಕಲ ಕಾಮಿತಾರ್ಥವಿತ್ತು ಸಲಹೊ ಸೋಮನಾಥಾ ಪ. ಹರಿಯ ಕರುಣಾ ಬಲದಿ ನೀನು ಸೋಮನಾಥಾ ಸರ್ವ ಸುರರಿಗೆಲ್ಲ ಧೊರೆಯಾಗಿರುವಿ ಸೋಮನಾಥ ಪಾದ ನಂಬಿ ಸೋಮನಾಥ ಮೊರೆಯ ಹೊಕ್ಕೆ ನಿಂದು ಬಂದು ಸೋಮನಾಥ 1 ವಿಘ್ನರಾಜ ನಿನ್ನ ಮಗನು ಸೋಮನಾಥಾ ಬೇಗ ಭಸ್ಮಗೈಸು ವೈರಿಗಳನು ಸೋಮನಾಥಾ ಮಗ್ನನಾದೆ ಮಹಾಂಬುಧಿಯೊಳ್ ಸೋಮನಾಥಾ ಸರ್ವ ವಿಘ್ನವೋಡಿಸೈ ಕೃಪಾಳೊ ಸೋಮನಾಥ 2 ಶಂಕರ ಕೈಪಿಡಿಯೊ ತ್ರಿಪುರ ಬಿಂಕವಾರಿ ಶ್ರೀ- ವೆಂಕಟಾದ್ರಿನಾಥನ ಮನೋನುಸಾರೀ ಕಿಂಕರನೆಂದೆನಿಸೆನ್ನ ಮೃಗಾಂಕಧಾರೀ ಪಾದ- ಪಂಕಜವ ನೀಡು ಸರ್ವಾತಂಕಹಾರೀ 3
--------------
ತುಪಾಕಿ ವೆಂಕಟರಮಣಾಚಾರ್ಯ
ಸ್ವಾಮಿ ನೃಸಿಂಹ ಸರಸ್ವತಿಗೆ ಮಂಗಳಾ |ಕಾಮಿತ ಕಾಮ ಫಲ ತೃಪ್ತಿಗೆ ಮಂಗಳಾ ಪ ನಿತ್ಯ ನಿರ್ಮಾಯಗೆ ಮಂಗಳಾ |ನಿರ್ವಾಣ ಸುಖ ಯತಿರಾಯಗೆ ಮಂಗಳಾ 1 ಭಕ್ತಜನರ ಕಲ್ಪವೃಕ್ಷಗೆ ಮಂಗಳಾ |ಭಕ್ತಿಯಿಂದ ಭಜಿಸುವ ಮೋಕ್ಷಗೆ ಮಂಗಳ |ಭೀಮಾ ಗಂಧರ್ವಪುರ ವಾಸಗೆ ಮಂಗಳಾ |ಶ್ರೀ ಭೀಮಾಶಂಕರ ಗುರು ಈಶಗೆ ಮಂಗಳಾ 3
--------------
ಭೀಮಾಶಂಕರ
ಹರತನ್ನ ಕರದಲಿ ಪ್ರಾಣಲಿಂಗವನು ಧರಿಸಿಪ್ಪನೆಂಬುದ ಕೇಳಿ ರಾವಣನು ತರುವೆನೆನುತ ಪೋಗಿ ಭಜಿಸೆ ಶಂಕರನ ಕರುಣಿಸಲಾತನ ಮನದಭೀಷ್ಟವನು ದುರುಳ ಖಳತಾ ಕೊಂಡು ಲಿಂಗವ ಪುರಕೆ ಗಮಿಸುವ ವ್ಯಾಳ್ಯದಲಿ ವಿಧಿ ಸುರಪ ಮುಖ್ಯ ಅಮರರು ನಿಮ್ಮಯ ಸ್ಮರಿಸೆ ಮೆಚ್ಚಿದ ಪಾರ ಮಹಿಮನೆ ಮೊರೆ ಹೊಕ್ಕೆ ನಿಮ್ಮ ಪಾದವನು ವಿಘ್ನೇಶ 1 ಕರುಣಿಸೋ ಎನ್ನ ವಾಂಛಿತವ ಸರ್ವೇಶ ಪರಮ ಪಾವನ ವೇಷ ಮುನಿ ಜನರ ಪೋಷಾ ನಿರುತ ಭಕ್ತ ವಿಲಾಸ ನಿರೂಪ ಮಹೇಶ ಹರಿ ಮುಂತಾದವರೆಲ್ಲ ನುತಿ ಸುತ್ತಲಿಂದು ಕರಿವಕ್ತ್ರ ನೀ ಕೇಳು ಪರಮೇಶನಂದು ಕರದ ಲಿಂಗವ ನಿತ್ತನಾ ದಶಶಿರಗೆ ವರ ದೈವ ದ್ರೋಹಿ ರಕ್ಕಸನಾತನಿಂಗೆ ವರ ಮಹಾಲಿಂಗವದು ಸೇರಲು ತಿರುಗಿಡುವಯತ್ನವನು ಪೇಳಿಯೋ ಪೊರೆಯ ಬೇಕೆನಲ ಭಯನಿತ್ತ ನಾ ಮೊರೆಹೊಕ್ಕೆ 2 ಇವಗೆ ಚಕ್ರವನಾಗಹರಿ ಪಿಡಿದಿರಲು ಧನುಜೇಶ ಸಂಧ್ಯಾವಂದನೆಗೆ ಯೋಚಿಸಲು ಘನ ಮಹಿಮನೆ ನೀನು ವಟುರೂಪಿನಿಂದ ಮಣಗುತ್ತಿರಲು ಕಂಡು ಖಳ ಕರದಿಂದ ಅಣುಗನಿಮ್ಮಯ ಮಹಿಮೆಯರಿಯದೆ ಪೇಳೆ ವಿನಯದಿಂ ಲಿಂಗವನು ಖಳಬರುವ ತನಕ ಕರದಲಿ ಪಿಡಿದಂತಹ ಪರಮ ಮಹಿಮನೆ 3
--------------
ಕವಿ ಪರಮದೇವದಾಸರು
ಹರನ ಪಟ್ಟದ ರಾಣಿ ಪರಮ ಕಲ್ಯಾಣಿಕರುಣದಲಿ ಕರ್ಣೇರದು ನೋಡು ಪನ್ನಗವೇಣಿ ಪಮತಿಪ್ರೇರಕಳು ನೀನು ಪತಿಯ ಮನದ ಅಭಿಮಾನಿಸುತರು ಷಣ್ಮುಖನು ಗಜಮುಖ ಈರ್ವರುಪತಿಯು ನೆತ್ತಿಯಮೇಲೆ ಗಂಗೆಯನ್ನು ಹೊತ್ತಿಹನುಅತಿ 'ಚಿತ್ರವು ನಿನ್ನ ಸಂಸಾರಸೊಬಗು 1ತಂದೆಯ ಅಪಮಾನಹೊಂದಿ ಸ'ಸದೆ ಯಜ್ಞಕುಂಡದೊಳಗೆ ಹಾರಿ ನೀ ದೇಹಬಿಟ್ಟೆಗಂಡನಿಗೆ ಈ ಸುದ್ದಿ ಮುಟ್ಟಿದಾಕ್ಷಣ ನಿನ್ನತಂದೆಯ ರುಂಡವನು ಚೆಂಡಾಡಿದನು ಶಿವನು 2ಶಿವಶಂಕರನು ಅವನು ಬನಶಂಕರಿಯು ನೀನುಭಸಿತ ಭೂತನವನು ಶಶಿಮುಖಿಯು ನೀನುರಾಮಭಕ್ತನು ಅವನು ಪೇಮಪುತ್ಪಳಿ ನೀನುಕಮಲಾಕ್ಷಿ ಭೂಪತಿ 'ಠ್ಠಲಗೆ ಅತಿಪ್ರಿಯರು ನೀವು 3ಶ್ರೀ ದತ್ತಾತ್ರೇಯ
--------------
ಭೂಪತಿ ವಿಠಲರು
ಹರನಮಃ ಪಾರ್ವತೀ ಪತೆಯೇ ನಮೋ ಹರನಮಃ ಪಾರ್ವತೀ ಪತೆಯೇ ಪ ಹರಹರ ಶಂಕರ ಶಂಭೋ ಮಹಾದೇವ ಹರನಮಃ ಪಾರ್ವತೀ ಪತೆಯೇ ಅ.ಪ ಹರಿಯ ಪಾದೋದಕ ಶಿರದಲಿ ಧರಿಸಿದ ಪರಮ ವೈಷ್ಣವ ನಿನ್ನ ಚರಣಗಳಿಗೆ ನಮೋ 1 ಅತ್ರಿಯ ಪತ್ನಿಯ ಉದರದಿ ಜನಿಸಿದ ದತ್ತನಾಮಕ ಹರಿ ಭ್ರಾತ ದೂರ್ವಾಸನೆ 2 ಹರಿಯು ಪ್ರಸನ್ನನಾಗುವ ತೆರದಲಿ ಮನ ಕರುಣಿಸೋ ಉರಗಭೂಷಣ ಗಿರಿಜಾಪತೆ 3
--------------
ವಿದ್ಯಾಪ್ರಸನ್ನತೀರ್ಥರು
ಹರನರಾಣಿ ಉರಗವೇಣಿ ಸ್ಮರಿಪೆ ನಿನ್ನನಾ ಪ ಚರಣಸೇವೆ ಇತ್ತು ನಿರತ ಪೊರೆವುದೆಮ್ಮ ನೀಂ ಅ.ಪ ಸುರನರೋರಗವಿನುತೆ ಶೋಭನಚರಿತೆ 1 ಸರ್ವಮಂಗಳೆ ಪಾರ್ವತಿ ಮದಗರ್ಮದಿಮೆರೆವ ದು- ರ್ವಿನೀತರ ಛೇದಿಸುತ ಸುಪರ್ವರ ಪೊರೆವೆ 2 ಮನದದುವ್ರ್ಯಸವ ಬಿಡಿಸೆ ಜನನಿ ಶಂಕರಿ ವನಜನಯನೆ ಗುರುರಾಮ ವಿಠಲನ ಸೋದರಿ | ಗೌರಿ 3
--------------
ಗುರುರಾಮವಿಠಲ
ಹರಿಯೆ ಸ್ವತಂತ್ರ ಚತುರದಶ ಭುವನಕೆ | ಪರಮೇಷ್ಠಿ ಶಿವಾದ್ಯರಾತಗೆ ದಾಸರೆನ್ನು ಪ ಹರಿಹರರ ಒಂದೇ ಸ್ಥಾನದಲಿ ಕಾಣುವೆನೆಂದು | ಪರಮ ಭಕುತಿಯಿಂದ ಕ್ರೋಧಮುನಿಪ || ಧರಣಿಯೆಲ್ಲ ತಿರುಗಿ ಶುಕ್ಲವತೀ ತೀರಕೆ ಬರಲು | ವಸಂತ ಕಾಲದಂತೆ ಪೊಳಿಯೇ1 ತಪಸಿ ತಪವನೆ ಮಾಡುತಿರಲು ಖರಾಟಖಳ | ಉಪಹತಿ ಕೊಡುತಿಪ್ಪ ವರಬಲದಿ || ವಿಪುಳದೊಳಗಿವಗೆಲ್ಲಿ ಎದುರಾರು ಇಲ್ಲದಿರೆ | ಸುಪರ್ಣಾದಿ ಮೊರೆ ಇಡಲು ಬೊಮ್ಮಗೆ2 ಪರಮೇಷ್ಠಿ ಹರಿಯ ಬಳಿಗೆ ಬಂದು | ಖಳನ ಕೋಲಾಹಲವ ಬಿನ್ನೈಸಲು || ಪುಲಿತೊಗಲಾಂಬರನ ಸಹಿತ ಸರ್ವೋತ್ತಮನ | ಒಲಿಮೆಯಿಂದ ಬಂದು ಸುಳಿದರಾಗಂದು 3 ದಾನವನ ಕೊಂದು ದೇವತೆಗಳ ಸುಖಬಡಿಸಿ | ಜ್ಞಾನಕ್ರೋಢಮುನಿ ಮನಕೆ ಪೊಳೆದು || ಆನಂದದಿಂದಲಿ ನಿಂದು ಮೆರೆದ ಲೀಲೆ | ಏನೆಂಬೆನಯ್ಯ ಹರಿಹರ ವಿಚಿತ್ರಾ 4 ಪ್ರವಿಷ್ಠ ಕೇ| ಶವನು ತಾನೆ ಕಾಣೊ ಸ್ವಾತಂತ್ರನು || ಇವರು ಶಂಕರನಾರಾಯಣನೆಂಬೊ ಪೆಸರಿನಲಿ | ಅವನಿಯೊಳು ಪ್ರಖ್ಯಾತರಾಗಿ ನಿಂದಿಹರೋ 5 ಎರಡು ಮೂರುತಿಗಳು ನೋಳ್ಪರಿಗೆ | ಶ್ರೀ ನಾರಾಯಣಗೆ ಈಶ ಸಮನೇ 6 ಚಕ್ರ ಶಂಖ ಗದೆ ಪದುಮ ಹರಿಗೆ ನೋಡು | ಮುಕ್ಕಣ್ಣಗೆ ಡಮರುಗ ತ್ರಿಶೂಲವು || ಮುಖ್ಯ ದೇವತಿ ಹರಿ ಅವಾಂತರ ಶಿವನು | ಶಕ್ರಾದ್ಯರೊಲಿದು ಭೇದವನು ಪೇಳುವರು 7 ಸತ್ಯಂ ವದವೆಂಬ ಶ್ರುತಿವರದು ಪೇಳುತಿದೆ | ಭೃತ್ಯ ರುದ್ರನು ಕಾಣೊ ಲಕುಮಿವರಗೆ || ಸತ್ಯದಲಿ ಸಿದ್ಧವಯ್ಯ ಎಂದು ತಿಳಿದು | ಸ್ತೌತ್ಯ ಮಾಡಿದವಗೆ ವೈಕುಂಠ ಪದವಿ 8 ಕ್ರೋಢ ಪರ್ವತವಿದೆ ತೀರ್ಥ ಪಾವನಕರ | ನಾಡೊಳಗೆ ಕ್ಷೇತ್ರ ಉತ್ತಮ ಮಾನವಾ || ಪಾಡಿದರೆ ವಿಜಯವಿಠ್ಠಲರೇಯ ಒಲಿದು |ಕೂಡಾಡುವನು ದೃಢ ಭಕುತಿಯಿತ್ತು ಅನುದಿನಾ 9
--------------
ವಿಜಯದಾಸ
ಹರುಷದಿ ತಾರೆ ಆರುತಿಪುರವೈರಿ ಗೌರೀಶಾ ಧವಳಾಂಗಗೆ ಪ ಅಶುಭನೇತ್ರ ಶಶಿಧರಗೆ | ವೃಷಭೇಂದ್ರ ಶ್ಯಂದನಗೆಕುಸುಮಬಾಣ ಮದಹರಗೆ ಬಿಸಜಾಕ್ಷಗೆ 1 ಭುಜಗಮಾಲಾ ಖಳಕಾಲಾ | ವಿಜಿತ ಗೋ ಶಂಕರಗೆರಜತ ಶೈಲ ಮಂದಿರಗೆ | ಕಮಲಾಂಬಿಕೆ 2 ಮಣಿ 3
--------------
ಶಾಮಸುಂದರ ವಿಠಲ
ಹರೇ ಶಂಕರ ಪಾರ್ವತೀವರ ಪಾಲಿಸು ನೀ ಎನ್ನ ಪ. ದುರಿತರಾಶಿಗಳ ದೂರಮಾಡು ಗಿರಿ- ವರ ಮಹಾನುಭಾವ ಶಿವಶಿವ ಅ.ಪ. ತ್ರಿಗುಣಾತ್ಮಕ ತ್ರಿದಶಾಲಯ ಪೂಜಿತ ನಿಗಮಾಗಮವಿನುತ ಅಗಜಾಲಿಂಗಿತ ಆಶೀವಿಷಧರ ಮೃಗಧರಾಂಕ ಚೂಡ ಹೃದ್ಗೂಢ 1 ಸರ್ವೋತ್ತಮ ಹರಿಯಹುದೆಂಬ ಜ್ಞಾನವ ಸರ್ವಕಾಲಕ್ಕೀಯೊ ದುರ್ಮತಗಳನೆಲ್ಲ ದೂರ ಮಾಡೊ ಕರಿ- ಚರ್ಮಾಂಬರಧರ ಪ್ರವೀರ 2 ಸಂಜೀವನ ಲಕ್ಷ್ಮೀನಾರಾಯಣ ಮಣಿ- ರಂಜಿತ ನಿರ್ಲೇಪ ಮಂಜುಳಕದಿರೆಯ ಮಂಜುನಾಥ ಭವ- ಭಂಜನ ಹರಿಪ್ರಿಯ ಜಯ ಜಯ 3
--------------
ತುಪಾಕಿ ವೆಂಕಟರಮಣಾಚಾರ್ಯ
ಹಲವಂಗದವನಿಗೆ ಬಲುವಂಗ ಮಾಲಿಗೆ | ಗುಲ್ಲು ಗುಲ್ಲಿಸಿದ ಎಲ್ಲರಿಗೆ | ಬಲ್ಲ ಮಹಾತ್ಮಗೆ ಬಲಸೀದ ಅಯ್ಯಗೆ ಶುರದರ ಸದ್ಗುರುನಾಥಗೆ ಪ ಶುಭ ಮಂಗಳಾ ಮಹಾ ಮಂಗಳ ಭೃಂಗವಳ್ಳಿಯ ಸದ್ಗುರುನಾಥಗೆ 1 ಯೋಗಿ ಜನರ ಹೃತ್ಕಮಲವಾಸಿಪಗೆ | ಭೋಗ ಮೂರು ಸದ್ಗುರುನಾಥಗೆ 2 ಅಗಣಿತ ಗಣಿತಗೆ | ನಿಗಮಕೆನಿಲುಕದ ನಿರ್ಲೇಪಗೆ | ಭೃಂಗವಳ್ಳಿಯಲ್ಲಿ ನಿಂತಮಹಾತ್ಮಗೆ | ಮಗ ಭೀಮಾಶಂಕರನ ಪಾಲಿಪಗೆ 3
--------------
ಭೀಮಾಶಂಕರ
ಹಾರಶೋಭಿತ ಮುಖ ಸಾರಸ ಲೋಚನ ಪ ತೋರ್ಪ ಸುಂದರ ಬಾಹುಯುಗ ಬಂದು ಕಂದನ ಪೊರೆಯೈ 1 ಪಂಕಜಾಸನ ಮುಖ್ಯ ಶಂಕರಪೂಜಿತ ಸಂಕಟ ಪರಿಹರಿಸೈ ಶಂಕೆಯಿಲ್ಲದೆ ಸ್ಥಿರ ಲಂಕಾ ರಾಜ್ಯವನಿತ್ತೆ 2 ಜನನ ಮರಣಗಳ ಘನಪರಿವಾಹದಿ ನೆನೆದು ಶೋಕಿಪೆ ದೇವನೆ ವಿನಯದೊಳೀವುದೈ ಧೇನು ಪುರಪತೆ 3
--------------
ಬೇಟೆರಾಯ ದೀಕ್ಷಿತರು
ಹಾಸ್ಯದ ಮಾತಿದು ಮಾನವಗೆ ವಿಷಯೇಚ್ಛೆಯ ಜೀವನವೆಂಬುದು ಶಾಶ್ವತ ಶಾಂತಿಯ ನೀಡುವ ನಿನ್ನಯ ಪದವನೆ ಮೆರೆತಿಹದು ಗುರುವೇ ಈಶ್ವರನೀತನೆಂದು ಸಾರಿತು ಶೃತಿ ಇದ ಕೇಳುತ ನಾ ಕರುಣಾ ನಿಧಿಯೇ ನಿನ್ನ ಹೊರತಿ ನ್ನನ್ಯರು ಗತಿಯಿಲ್ಲೆನ್ನುತ ನಾ ಚರಣಕಮಲಕೆ ಮೊರೆಹೊಕ್ಕೆ ಪರಮಾನಂದಾತ್ಮ ಸ್ವರೂಪದಾ ಅರಿವನು ನೀಡಿ ಪೊರೆವುದು ಎನ್ನಶಂಕರ ಗುರುದೇವಾ
--------------
ಶಂಕರಭಟ್ಟ ಅಗ್ನಿಹೋತ್ರಿ
ಹಿಮಾಚಲೇಂದ್ರನ ಕುಮಾರಿ ಶಂಕರಿ ಉಮಾಂಬೆ ಬಾರಮ್ಮ ಪ ಕುಮಾರ ಶಕ್ರಾದಿ ಸಮಸ್ತ ಸುರಗಣ ಸಮರ್ಚಿತಾಂಘ್ರಿಯೆ ನಮೋನಮೋ ಎಂಬೆ ಅ.ಪ. ಬುದ್ಧ್ಯಾಭಿಮಾನಿಯೆ ಸದ್ಯೋಜಾತನ ರಾಣಿ ಹೃದ್ಧ್ಯೋಮದಲಿ ಪೊಳೆದು ವಿದ್ಯಾ ಬುದ್ಧಿಯನಿತ್ತು ಶುದ್ಧಾತ್ಮನನು ಮಾಡಿ ಸದ್ಭಕ್ತಿ ಪಂಥದ ಸಿದ್ಧಾಂತ ತಿಳಿಸಮ್ಮ 1 ಘೋರ ಭವಾಬ್ಧಿಯ ತಾರಿಪ ಸುಲಭದ ದಾರಿಯ ತೋರೆನುತ ಮುರಾರಿಯನು ಬೇಡಿ ಶ್ರೀ ರಾಮ ನಾಮದ ರುಚಿ ಬೀರಿದೆ ಜಗದೊಳು 2 ಲಕ್ಷಾಘ ಧ್ವಂಸಿನಿ ದಾಕ್ಷಾಯಿಣೀ ಗಣಾ ಧಕ್ಷನ ವರ ಜನನಿ ಲಕ್ಷ್ಮೀಕಾಂತನ ಅಪರೋಕ್ಷದಿ ಕಾಂಬುವ ಸೂಕ್ಷ್ಮವನೊರೆದೆನ್ನ ರಕ್ಷಿಸು ಅಮ್ಮಯ್ಯ 3
--------------
ಲಕ್ಷ್ಮೀನಾರಯಣರಾಯರು
ಹೃದಯಾಧಿವಾಸಾ ಚಿನ್ಮಂiÀi ಪಾವನ ಅವನೆ ದೇವಾಧಿದೇವ ಮೂರು ಕಾಲದ ಸಾಕ್ಷಿ ಪರಮಾತ್ಮನೇ ಅವನೇ ಜಗದಾಧಿವಾಸ ಪ ಆಕಾರದೊರ ಏಕಾಂತಪೂರ ಏಕಾಂತಘನಪೂರ ತಾ ನಿರ್ವಿಕಾರ ಮನೋವಾಣಿದೂರ ಮನೋವಾಣಿಗೆದೂರ ಜಗಕೆಲ್ಲ ಆಧಾರ ತಾನಾಗಿಹ ಇವನೆ ಪರಮಾತ್ಮ ಈಶ ಹೃದಯಾಧಿವಾಸ 1 ಮನವೆಲ್ಲ ಉಡುಗಿ ಅನಿಸಿಕೆಯಡಗಿ ಅನಿಸಿಕೆ ತಾನಡಗಿ ತನಿನಿದ್ರೆಯಲ್ಲಿ ಇವು ಎಲ್ಲ ಮುಳುಗಿ ತಾನೇ ತಾನಾಗಿರ್ದ ಚಿನ್ಮಾತ್ರನೆ ಅವನೆ ಆನಂದರೂಪ ಹೃದಯಾಧಿವಾಸ 2 ಅವನೇ ನಾನೆಂದು ತಿಳಿ ಈಗ ನಿಂದು ಜಗವೆಲ್ಲ ಕನಸೆಂದು ಪರಮಾರ್ಥ ಸತ್ಯ ಶ್ರೀನಾರಾಯಣ ಇವನೇ ಗುರುಶಂಕರೇಶ ಹೃದಯಾಧಿವಾಸ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಹೊನ್ನು ಹೆಣ್ಣು ಮಣ್ಣು ಮಾಯೆಯದು ಮೂರು ರೂಪಗಳ ನಾನು ಪೇಳುವೆನು ಹೊನ್ನು ಹೆಣ್ಣು ಮಣ್ಣು ಎಂಬ ಮೂರವುಗಳ್ ಅವುಗಳನು ಹಂಬಲಿಸಿ ಕೆಡಬೇಡ ಮರುಳೆ ನೀನ್ ಅವುಗಳೇ ಮೃತ್ಯುವಿನ ಕಡೆಗೊಯ್ಯುವವುಗಳ್ 52 ಕಷ್ಟದಿಂ ಸೃಷ್ಟಿಯಲಿ ನಗ್ನತೆಯೆ ಸುಂದರವು ಕಷ್ಟದಿಂ ಮರಣದಲಿ ನಗ್ನತೆಯ ದೇಹ ಕಷ್ಟವಿಕ್ಕ್ಕೆಡೆಗಳಲಿ ನಾಸ್ತಿಸುಖ ಮಧ್ಯದಲಿ ಕನಕ ಕನಕವದೆಂದು ಹೊನ್ನ ಪೇಳುವರು53 ಮೋಹಿನಿಯು ತಾನಾಗಿ ದ್ಯೆತ್ಯರನು ವಂಚಿಸಿದ ಮೋಹಿನಿಯು ತಾನಾಗಿ ರುದ್ರ ವಂಚಿತನು ಮೋಹಿನಿಯು ತಾನಾಗಿ ಸುಂದೋಪಸುಂದ ವಧೆ ಮೋಹಿನಿಯು ಪೆಣ್ಣು ಮೋಸವದಲ್ತೆ ಮನುಜ? 54 ಮಣ್ಣಿನಿಂದಲೆ ಹರಿಯು ದೇಹವನು ಸೃಷ್ಟಿಸುವ ಮಣ್ಣೆ ಅನ್ನವದಾಗೆ ಪಾಲಿಸುವ ನಮ್ಮ ಮರಣಕಾಲದಲದುವೆ ಮಣ್ಣನಪ್ಪುವದು ತಿಳಿ ಮಣ್ಣಿಗಾಗಿಯೇ ನೀನು ಹಂಬಲಿಪೆಯೇಕೆ 55 ಪ್ರಾಣದೇವರೆ ನಿನ್ನ ಉಸಿರಾಟ ಕಾರಣರು ಪ್ರಾಣನುಸಿರಾಟವದು ಯಾರಿಂದಲಹದು? ಅವನೆ ಪರಮಾತ್ಮ ತಿಳಿ ದೇವಾಧಿದೇವನವ ನಿನ್ನ ಬಾಳಿಗೆ ಕಾರಣರು ಇಬ್ಬರಹರು56 ಸೂರ್ಯದೇವನು ನೇತ್ರತತ್ವಕ್ಕೆ ಒಡೆಯನವ ಸೂರ್ಯನದು ಕಣ್ಣು ಯಾರಿಂದ ತೋರುವುದು? ಅವನೆ ಪುರುಷೋತ್ತಮನು ಪರಮಾತ್ಮ ಹರಿಯವನು ಆ ವಿಶ್ವರೂಪಿಯೇ ವಿಶ್ವಧಾರಕನು57 ವಾಸದಿಂ ಬೆಳಗಿಸುವ ಕಾರಣದಿ ಭಗವಂತ ವಾಸುದೇವಾತ್ಮಕನು ಸೃಷ್ಟಿಮೂಲನವ ವಸುದೇವಪುತ್ರನಾಗವತರಿಸಿ ಸಿರಿವರನು ಉಡುಪಿಯಲಿ ಪೂಜೆಗೊಂಬನು ನಿಜವ ಪೇಳ್ವೆ 58 ಕೃತಯುಗದ ಭಾರ್ಗವನು ತ್ರೇತೆಯಲಿ ದಾಶರಥಿ ದ್ವಾರಪದ ಕೃಷ್ಣ ನೀನೇಯಿರುವೆ ದೇವಾ ಮಧ್ವವರದನು ನೀನು ಭಾರ್ಗವನ ನೋಡಲ್ಕೆ ಉಡುಪಿಗೇ ಬಂದಿರುವೆ ಪರಮಾತ್ಮ ನೀನು 59 ಪರಶುರಾಮ ಕ್ಷೇತ್ರ ಶ್ರೀಕೃಷ್ಣನ ಕ್ಷೇತ್ರ ಪದ್ಮನಾಭಕ್ಷೇತ್ರ ಶಂಕರಕ್ಷೇತ್ರ ಹಲವಾರು ದೇವತೆಗಳಿಲ್ಲಿ ನೆಲೆಗೊಳ್ಳುತ್ತ ಪಾವನವ ಗೈಯುವರು ಭೂಮಿಯನ್ನಿದನು 60 ತುಲೆಯಲ್ಲಿ ತೂಗಿದಾಗುತ್ತಮವದದರಿಂದ ತುಲು ದೇಶವಿದು ಜಗದಿ ವಿಖ್ಯಾತವಹುದು ತುಲು ಲಿಪಿಯೆ ಸರ್ವಮೂಲ ಗ್ರಂಥ ಲೇಖನಕೆ ವೇದಾದ್ರಿಯಾಯಿತಿದು ವೇದಾಂತಭೂಮಿ 61 ಮಧ್ಯಗೇಹದ ಭಟ್ಟರಿಂ ಸೇವೆಯ ಪಡೆದು ವಾಯುದೇವೋತ್ತಮನ ಮಗನಾಗಿ ಕೊಡಿಸಿ ಸಜ್ಜನರ ಹೃದಯದಲಿ ಮುಖ್ಯ ತತ್ವವ ತಿಳಿಸೆ ಸರ್ವಜ್ಞ ಮೂರ್ತಿಯನು ತಂದಿರುವೆ ದೇವಾ62 ಪರಶುರಾಮನ ರೂಪದಿಂ ನೀಂ ತಪಗೈದ ಪಾಜಕ ಕ್ಷೇತ್ರದಲಿ ಭಕುತನವತರಿಸೆ ಜ್ಞಾನರೂಪದ ನೀನು ಅವನ ಹೃದಯವ ಪೊಕ್ಕು ಮಧ್ವಮತವನು ನೀನು ಪಸರಿಸಿದೆ ಹರಿಯೆ 63
--------------
ನಿಡಂಬೂರು ರಾಮದಾಸ