ಒಟ್ಟು 37131 ಕಡೆಗಳಲ್ಲಿ , 139 ದಾಸರು , 11109 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೀನ ಬಂಧು ಕರುಣಾಸಿಂಧು ನೀನೆ ಬಂದು ರಕ್ಷಿಸೆಂದು ಪ. ನಿತ್ಯ ಮಂಗಳಾತ್ಮ ನಿಜ ಭೃತ್ಯಪೋಷಣ ಪರಾತ್ಮ ನಿತ್ಯ ಕಾರುಣ್ಯ ಚಿತ್ತಜನಯ್ಯನೆ ಈ ಜಗತ್ತಿನೊಳು ನಿನ್ನ ಪೋಲ್ಪ ಉತ್ತಮ ವಸ್ತುವ ಕಾಣೆ ಸತ್ಯಭಾಮಾ ವರ ನಿನ್ನಾಣೆ 1 ಸರಸಿಜಾಸನ ತಾನು ಪರಮ ಭಕುತಿಯಿಂದ ಸಿರಿವರ ನಿನ್ನ ನಾನಾ ಪರಿಯಿಂದಲಿ ಶರದೃತುವಿಲಿ ಬಹುಧರವಾಗಿ ಪೂಜಿಸುವ- ದರಿತು ಪಾಡುವೆನೀಗ ಕರುಣಿಸೆನ್ನ ನೀ ಬೇಗ 2 ಮತ್ಸಕೇತುಪಿತ ಭಕ್ತವತ್ಸಲ ವೆಂಕಟನಾಥ ತತ್ಸದೆಂಬೋ ಮಂತ್ರಾಗಮ್ಯ ಕುತ್ಸಿತಾಗಮ್ಯ ಉತ್ಸವ ಕಾಲದಲಿ ಸಿರಿವತ್ಸ ಬೆನ್ಹಾನಿನ್ನನು ನಿ- ರ್ಮತ್ಸರದಿ ನಂಬಿದೆ ಗೋವತ್ಸವೈದುವಂತೆ ಬಾರೊ 3
--------------
ತುಪಾಕಿ ವೆಂಕಟರಮಣಾಚಾರ್ಯ
ದೀನ ಬಂಧು ದೀನ ದಯಾಳ ದೀನಾನಾಥ ನೀನೆವೆ ಕೃಪಾಲ ಧ್ರುವ ಮನೋಹರ ಮಾಡುವ ನೀನೆ ಸಹಕಾರಿ ಅನುದಿನ ಲೆವಕಲ (?) ನೀನೆ ಮುರಾರಿ1 ಪರಿ ನೀನೆ ಉದಾರಿ ಅನಾಥರಿಗೊಲುವ ನೀನೆ ಶ್ರೀ ಹರಿ 2 ಪತಿತಪಾವನ ಪೂರ್ಣ ನೀನೆ ನಿಶ್ಚಯ ಹಿತದಾಯಕ ನೀನಹುದೊ ಮಹಿಪತಿಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದೀನಜನ ಮಂದಾರನೇ ಪ ಮಂದಭಾಗ್ಯವ ಕೂಡ ಮಂದಹಾಸವೇಅ.ಪ. ಸರ್ವತ್ರದಲಿ ನೀನಿದ್ದು ಸಲಹುವಿ-ಸ್ಮøತಿ ಕೊಡುವುದುಚಿತವೇ 1 ಪಾಪದೊಳು ಶಿಲ್ಕಿಸಿ ಮಹಾಪಾಪಿ ಎಂದೆನಿಸಿ ವಳಹೊರಗೆ ಪರಿಪೂರ್ಣನಾಗಿ2 ಮಂದರನು ಪೊರೆವದಕೆ ಸಂಧಿಕಾಲವು ಬಂದೊದಗಿದೆ ತಂದೆವರದಗೋಪಾಲವಿಠ್ಠಲನ ಪ್ರೀಯಾ 3
--------------
ತಂದೆವರದಗೋಪಾಲವಿಠಲರು
ದೀನದಯಾಪರ ಜಾನಕೀನಾಥ ನೀನೆ ದಯಾರ್ಣವಅನಾಥಜನಾಪ್ತ ಪ ಘನತರ ಭವತಾಪವನು ಪರಿಹರಿಸೊ ಕನಿಕರಯುತ ನೀನೆ ಮನುಮುನಿವಿನುತ 1 ಲಾಖಚೌರೈಂಸಿಜನ್ಮ ಸಾಕಾದೆ ತಿರುತಿರುಗಿ ಕಾಕುಬವಣೆ ಸಾಕೋ ಲೋಕೇಶ ಕೃಪಾ ದೇ 2 ಭಕುತಾಭಿಮಾನಿ ನೀ ನಿಖಿಲಜಗಸೂತ್ರ ಭಕುತನ ಮೊರೆ ಕಾಯೊ ಭಕುತಾಭಿರಾಮ 3
--------------
ರಾಮದಾಸರು
ದೀನನ ಸೇರಿದರೇನು ಫಲ ರಾಮ ಗುಣ ಹೀನನ ಸೇರಿದರೇನು ಫಲ ಪ ಮಕ್ಕಳು ಜನಿಸದರೇನು ಫಲ ಒಕ್ಕಲುತನದಿಂದೇನು ಫಲ 1 ಜನನೀ ಜನಕರಿಗೇನು ಫಲ ಮನುಜರಿಗೇನು ಫಲ 2 ಅರಿಯದೆ ಕೊಂಡವಗೇನು ಫಲ ಹರಿಯವನಾಗಿರಲೇನು ಫಲ 3 ಹೆಂಡತಿಯಿರಲೇನು ಫಲ ಗಂಡಸುತದಿಂದೇನು ಫಲ 4 ತೆರದಲಿ ಸಿಂಗರಸಿದರೇನು ಫಲ ಪರಿಪರಿ ಪುಣ್ಯದಿಂದೇನು ಫಲ5
--------------
ವೆಂಕಟವರದಾರ್ಯರು
ದೀನನಾಥ ನೀನೆ ಪ್ರಭು ಧ್ಯಾನಮಾಳ್ಪೆ ಕಾಯೊ ಕರುಣಿ ಪ ಜಾಹ್ನವೀಜನಕ ಜನಾರ್ದನ ಜಾನಕೀಪ್ರಿಯ ಜಗದೊಡೆಯ ವೇಣುಗೋಪಾಲ ನಿನ್ನ ಧ್ಯಾನಾನಂದ ಪಾಲಿಸಭವ 1 ಕವಿದುಕೊಂಡು ದಹಿಸುತಿರುವ ತಾಪ ಭಯವ ತರಿದು ಸುವಿಚಾರ ಸುಜನಸಂಗ ಜವದಿ ನೀಡಿ ದಯದಿ ಪೊರೆ 2 ವಿಷಯದ್ವಾಸನೆ ಪರಿಹರಿಸಿ ಅಸಮಜ್ಞಾನ ಸೌಖ್ಯವಿತ್ತು ಒಸೆದು ನಿಮ್ಮ ವಿಮಲಚರಣ ಕುಸುಮದಾಸನೆನಿಸು ಶ್ರೀರಾಮ 3
--------------
ರಾಮದಾಸರು
ದೀನಪಾಲನ ನಾರಿಮಾನರಕ್ಷಣ ಸಿರಿ ಪ್ರಾಣರಮಣ ಹರಿ ನಾರಾಯಣ ಪ ಸೋಮಕಾಸುರಹರ ಕಾಮಿತ ಪರಿಹರ ಭೂಮಿಜೆಜನಕಜಯ ಜನಾರ್ದನ ಸ್ವಾಮಿ ಗೋವಿಂದ ಮೇಘಶ್ಯಾಮ ಮುಕ್ಕುಂದ ಭಕ್ತ ಪ್ರೇಮ ಆನಂದ ಹರಿ ನಾರಾಯಣ 1 ಪಾಷಾಣಪಾವನ ದೋಷನಿವಾರಣ ನಾಶರಹಿತ ಸುಪ್ರಕಾಶನೆ ಶೇಷಶಯನ ಗಿರಿವಾಸ ದಾಸರ ಪ್ರಾಣೇಶ ಕೇಶವ ಹರಿ ನಾರಾಯಣ 2 ವಾರಿಧಿಮಥನ ನಾರದವಂದನ ಕಾರುಣ್ಯನಿಧಿ ಕರುಣಾಂತರ್ಗತ ನಾರಸಿಂಹ ದಿವ್ಯಾಪಾರಮಹಿಮ ಸುರ ಘೋರನಿವಾರ ಹರಿ ನಾರಾಯಣ 3 ಶಾಂತ ಶಾಂತಾಕಾರ ಶಾಂತಜನಾಧಾರ ಶಾಂತಿ ಸದ್ಗುಣಧಾಮ ಶುಕ್ಲಾಂಬರ ಶಾಂತಮೂರುತಿ ಭೂಕಾಂತ ಪರಮವೇ ದಾಂತಾತೀತ ಹರಿ ನಾರಾಯಣ 4 ನಾಥ ಜಾನಕೀಪ್ರಾಣ ಭೂತಳಪಾವನ ದಾಥ ಜಗನ್ನಾಥ ವಿಶ್ವಾಂಬರ ಪಾತಕಹರ ವಿಧಿತಾತನೆ ನಿಜಸುಖ ದಾತ ಶ್ರೀರಾಮ ಹರಿ ನಾರಾಯಣ 5
--------------
ರಾಮದಾಸರು
ದೀನಬಂಧು ನೀ ದಯಾಸಿಂಧು ಪ ಆಪನ್ನ ಜನರನು ಮನ್ನಿಸಿ ಸಲಹಿ ಪ್ರಸನ್ನನಾಗುವೆ 1 ಕಂಜಲೋಚನ ನಿನಗಂಜಲಿ ಮುಗಿಯುವೆ ಕುಂಜರ ವರದ ಭುಜಂಗ ಶಯನ 2 ಘನ್ನಮಹಿಮ ಪ್ರಾಣನಾಥ ವಿಠ್ಠಲರಾಯ ಮನ್ನಿಸಿ ಪ್ರಸನ್ನನಾಗಿ ಎನ್ನಸಲಹೋ ಸ್ವಾಮಿ 3
--------------
ಬಾಗೇಪಲ್ಲಿ ಶೇಷದಾಸರು
ದೀನರಕ್ಷಕ ದೈತ್ಯ ಶಿಕ್ಷಕ ಏನ ಪೇಳಲಿ ಎಂತು ತಾಳಲಿ ಪ. ಹಗಲು ರಾತ್ರೆಯು ಹಲವು ಚಿಂತೆಯು ದ್ವಿಗುಣವಾಯಿತು ಧೈರ್ಯ ಕುಂದಿತು ನಗುವ ವಿಧಿಯನು ನೆನೆಯದಾಸೆಯ ಬಿಗುವಿನಿಂದ ಬೆಂಡಾದೆ ಕೇಶವ 1 ಸಂದ ಕಾಲವು ಸುಮ್ಮಗ್ಹೋಯಿತು ಮುಂದಿನವಧಿಯ ಮರವು ಮುಸುಕಿತು ಸುಂದರ ಸ್ಮಿತಾನಂದ ಮೂರುತಿ ಇಂದಿರೇಶ ನೀ ಎಂದು ತೋರುತಿ 2 ಗಣನೆಯಿಲ್ಲದಗಾಧ ತಪ್ಪನು ಎಣಿಸಲಾರೆನು ಎಂತು ನುಡಿವೆನು ವನಜನಾಭ ನೀನಾವ ಯುಕ್ತಿಯ ನೆನಸಿ ಸಲಹುವೆ ಎಂಬುದರಿಯೆನು 3 ಅಂತವಿಲ್ಲದಾ ಚಿಂತೆ ಎನ್ನನು ಭ್ರಾಂತಿಗೊಳಿಪುದು ಭಂಡು ಮಾಳ್ಪುದು ಕಂತುಜನಕ ಭೂಕಾಂತ ಕರುಣಿಸು ಸ್ವಾಂತರಂಗದಿ ನಿಂತು ನಿಯಮಿಸು 4 ನಿತ್ಯ ಸಲಹುವ- ನೆಂಬ ಬಿರುದ ನಾನರಿತು ನುಡಿದೆನು ಶಂಭುವಂದ್ಯ ಶೇಷಾದ್ರಿನಾಥ ಪಾ- ದಾಂಬುಜಾಶ್ರಿತನೆನಿಸು ಎನ್ನನು 5
--------------
ತುಪಾಕಿ ವೆಂಕಟರಮಣಾಚಾರ್ಯ
ದೀನರಿಗೆಲ್ಲಾ ಬಂಧು ಕೇಶವ ತಂದೆ ದೀನರಿಗೆಲ್ಲಾ ಬಂಧು ಪ ದಾನವಾಂತಕÀ ನಿನ್ನ ನೇಮಾನುಯಾಯಿಗೆ ಮಾನವ ಕೊಟ್ಟು ರಕ್ಷಿಪ ಬಂಧು ನೀನೇ ಅ ದೀನ ದ್ರೌಪದಿ ದೇವಿಗೇ ಅಕ್ಷಯವಿತ್ತು ಮಾನವ ಕಾಯ್ದೆ ನೀನೇ ಪ್ರಾಣವು ಹಾರುವಾಗ ಜಮಿಳ ಸ್ಮರಿಸಲು ಯೇನನ ಸಲಹೆ ಮೋಕ್ಷವನಿತ್ತ ಹರಿಯೇ 1 ದೀನ ದೇವಿಕಿ ದೇವಿಯ ಗರ್ಭದಿ ಬಂದು ದೈನ್ಯಳ ಸಲಹಿತಿದೆಯೋ ಹೀನ ವಾಲ್ಮೀಕನು ನಾಮವ ಭಜಿಸಲು ಹೀನನಿಗೊಲಿದು ಬುದ್ಧಿಯನಿತ್ತ ಹರಿಯೇ 2 ಸನ್ನುತ ನಮಿಸುವಂಥ ದಾಸರಿಗೆಲ್ಲ ಸನ್ನುತ ಸ್ಮರಿಸುವಂಥ ನಿತ್ಯ ಭಜಿಪ ದೀನರಿಗೆಲ್ಲ ಚನ್ನಕೇಶವ ಸ್ವಾಮಿ ಪೊರೆವಂಥ ಬಂಧೂ 3
--------------
ಕರ್ಕಿ ಕೇಶವದಾಸ
ದೀನಶರಣ ಮಾಮನೋಹರಾ ಕೃಪಾಪೂರಾ ಪ ಗಾನಲೋಲ ತರಣಿರುಚಿರ ನೀಲಗಾತ್ರ ಅ.ಪ ನೀರಜಾಕ್ಷ ನೀರಜಭವ ನಾರದಾದಿನುತಚರಣಾ ಚಾರುಚರಿತಾ ನಿಗಮವಿದಿತಾ | ವಾರಣೀಶನಮಿತಾ 1 ಸುಗುಣ ಭರಿತ ಮಾಂಗಿರೀಶ ಪಾರ್ಥಸೂತ್ರ [ಅಗಣಿತಗುಣಚರಿತ ಕಾಯೋ ನಾ ಶರಣಾಗತ] 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ದೀಪ ಮುಟ್ಟಿಸಿ ಅಕ್ಕ ದೀಪ ಮುಟ್ಟಿಸಿ ಅಕ್ಕದೀಪ ಮುಟ್ಟಿಸೆ ಮನೆಗೆ ಈಗ ದೇವರು ನಿನಗೆ ಕಾಣಬಹುದು ಪ ದೇಶಿಕ ಕರುಣೆಂಬೆ ಅಕ್ಕ ದಿಟ್ಟದ ಬೆಂಕಿಯು ಅಕ್ಕನಾಸಿಕ ಕೊನೆ ಭ್ರೂಮಧ್ಯದ ಒಲೆಯುನಂದದ ತೆರದಲಿ ವೈನದಲಿಟ್ಟೆ 1 ಕಾಮ ಕ್ರೋಧವೆಂಬುವ ಅಕ್ಕ ಕರಡನೆ ಹಾಕಿ ಅಕ್ಕಸೋಮ ಸೂರ್ಯಸ್ವರ ಕೊಳವಿಯಲೂದಿಸೂರಿಯ ಕೋಟಿ ಎಂಬ ಉರಿಯನೆ ಮಾಡಿ 2 ಜ್ಞಾನ ಜ್ಯೋತಿಯು ಅಕ್ಕ ಘನವಾಗಿ ಮುಟ್ಟಿಸೆ ಅಕ್ಕತಾನು ತಾನಾದ ಮನೆಮನೆ ಹೊಕ್ಕುತಾನಾದ ಚಿದಾನಂದ ಬ್ರಹ್ಮವ ಕಾಣುವ 3
--------------
ಚಿದಾನಂದ ಅವಧೂತರು
ದು:ಖರೂಪಿನ ರೊಕ್ಕ ದಕ್ಕಗೊಡದಖಿಲರನು ತಿಕ್ಕಾಡುತಿಹ್ಯದಕಟ ಒಕ್ಕಲಿಕ್ಕಿ ಬಿಡದೆ ಪ ಇದ್ದರುಣಗೊಡದಿಲ್ಲದಿದ್ದರು ಸುಖಕೊಡದು ಶುದ್ಧಪದ್ಧತಿಯವರರ ಬದ್ಧರೆನಿಸುವುದು 1 ಮರಿಯಾದೆ ತಗಿತಿಹ್ಯದು ಮರಿಯಾದೆಲಿರಗೊಡದು ಜರಜರಕೆ ನರರಿಗೆ ಶಿರವ ಬಾಗಿಸುವುದು 2 ಸತಿಸುತರ ತರಿಸುವುದು ಹಿತದಿಂದ ಇರಗೊಡದು ಮತಿಗೆಡಿಸಿ ಸತತ ದುರ್ಗತಿಗೆ ಎಳಸುವುದು 3 ವಂದನೆಯ ಕೊಡಿಸುವುದು ಕುಂದು ನಿಂದ್ಹೊರಿಸುವುದು ಒಂದುಸ್ಥಿರಮಿಲ್ಲದರ ಅಂದಮೇನಿಹ್ಯದು 4 ಕಲ್ಪಿಸಿದರಾರಿದನು ಅಲ್ಪಮತಿಯಿಂ ಬಯಸಿ ಕಲ್ಪತರುಶ್ರೀರಾಮನಾಲ್ಪರಿದು ಒಲಿಸಿ 5
--------------
ರಾಮದಾಸರು
ದುಃಖವನೆಷ್ಟೆಂದು ಹೇಳಲಿ ಸಂಸಾರ ಶರಧಿಯಿದುದುಃಖದ ಶರಧಿಯಿಂದ ಪರಮಾತ್ಮನ ಸ್ಮರಣೆಗೆ ವಿಘ್ನವಹುದು ಪ ಮಗ ಬುದ್ಧಿವಂತನಾಗಲಿಲ್ಲವೆಂದೆಂಬಮಗಳಿಗೊದಗಲಿಲ್ಲ ಅಳಿಯ ಎಂದೆಂಬಹಗರಣವಾಯಿತು ಮನೆಯೀಗ ಎಂದೆಂಬ ದುಃಖವೊಂದುಜಗಳಗಂಟಿಯು ಎನ್ನ ಹಿರಿಯ ಸೊಸೆ ಎಂದೆಂಬ ದುಃಖವೊಂದು1 ಹೆಂಡತಿ ವ್ಯಭಿಚಾರಿಯಾದಳು ಎಂದೆಂಬ ದುಃಖವೊಂದುಉಂಡೆನೆಂದರೆ ಅನ್ನವಿಲ್ಲ ಎಂದೆಂಬ ದುಃಖವೊಂದುಕಂಡಕಡೆಗೆ ಹೋಗೆ ಕೈ ಹತ್ತದೆಂದೆಂಬ ದುಃಖವೊಂದುಮುಂಡೆಯಾದಳು ಎನ್ನ ಮೊಮ್ಮಗಳು ಎಂದೆಂಬ ದುಃಖವೊಂದು 2 ನೆಂಟರಿಗೆ ಮಾಡಲೆನ್ನೊಳಿಲ್ಲವೆಂದೆಂಬ ದುಃಖವೊಂದುಒಂಟಿ ಬಯಲಿನ ಹೊಲವು ಬೆಳೆಯದು ಎಂದೆಂಬ ದುಃಖವೊಂದುಕಂಟಕಿ ನಾದಿನಿ ಹಡೆಯಲಾರಳು ಎಂದೆಂಬ ದುಃಖವೊಂದುಎಂಟು ವರಹ ಎಮ್ಮೆ ಸತ್ತಿತು ಎಂದೆಂಬ ದುಃಖವೊಂದು3 ಎದೆ ಮೇಲೆ ಕುಳಿತಿಹರು ದಾಯಾದಿಗಳೆಂದೆಂಬ ದುಃಖವೊಂದುಮುದುಕಿಗೆ ಗೆಲುವು ತಾನಿಲ್ಲವೆಂದೆಂಬ ದುಃಖವೊಂದು ಮದುವೆಗೆ ಹಾದಿಲ್ಲ ಹಾವಳಿ ಎಂದೆಂಬ ದುಃಖವೊಂದುಸದನ ಒಳ್ಳೇದಲ್ಲ ಏಳು ಮಕ್ಕಳ ತಾಯಿ ಎಂಬ ದುಃಖವೊಂದು 4 ಜೋಡಿಪೆ ಧೈರ್ಯವೆಂದರೆ ನಿಶ್ಚಯಾಗಲಿಕೆ ಕೊಡದು ಒಂದುನೋಡುವೆ ಚಿಂತಿಸಿ ಎನೆ ಚಿಂತೆ ಹರಿಯಲು ಕೊಡದು ಒಂದುಮಾಡುವೆ ಮಂತ್ರ ಪೂಜನ ಪೂಜೆ ಮಾಡಲು ಕೊಡದು ಒಂದುಕೊಡುವೆ ಗುರು ಚಿದಾನಂದನೆನೆ ಕೂಡಗೊಡದು ಎಂದು 5
--------------
ಚಿದಾನಂದ ಅವಧೂತರು
ದುಗ್ಗಾಣಿಯು ದೊಡ್ಡದಲ್ಲಾ ನಿನ್ನ ಪೆಗ್ಗೆಗೆ ಯವiನಾಳು ಹೊರಿಸ್ಯಾರು ಕಲ್ಲಾ ಪ ಬಗ್ಗಿಸಿ ಆರೆಂಟು ನುಗ್ಗಿ ನೋಡಿ ಬರುವ ಪೆಗ್ಗೆಯನಳಿದವರ ಅಗ್ಗದಿಂದಾಡಿದರು ಅ.ಪ ಒಂದೆರಡು ಮೂರೆಂಬ ಅಂದವು ಗುರುವಿನೊಳು ಚಂದದಿಂ ಕೇಳಿಕೊಳ್ಳೆಲೊ ಮಂಕುಜೀವಿ ಮುಂದೀಗ ಬರುವಂಥ ದುಂದುಗಾರರ ಕಂಡು ಕೊಂದುಹಾಕಲು ಚಂದ್ರಾಯುಧವ ಹಿಡಿದವಗೆ 1 ಒಂಬತ್ತು ಗೇಟಿನಾ ಮೋಟದೊಳು ನೋಡಯ್ಯ ಅಂಬಿಹರುಳುವಂತ ದುಂಬಿಗಳ ಕಾಟಾ ಅಂಬಾರಿಯೇರಲು ನಂಬೀಗೆ ಕೊಟ್ಟಿರ್ಪ ಶಂಭುನುತ ಶ್ರೀ ತುಲಸಿ ಕಂಬವ ಹಿಡಿದವಗೆ2
--------------
ಚನ್ನಪಟ್ಟಣದ ಅಹೋಬಲದಾಸರು