ಒಟ್ಟು 56123 ಕಡೆಗಳಲ್ಲಿ , 139 ದಾಸರು , 12212 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಂದೆ ಶ್ರೀನಿವಾಸ ನೀನು ಬಂದು ಕಾಯೊ ಎನ್ನ ಸ್ವಾಮಿ ನಿಂತು ಕಾಯೋ ಎನ್ನ ಪ. ಇಂದಿರೆ ರಮಣನೆ ಬಂಧನ ಬಿಡಿಸೆನ್ನ ತಂದೆ ಗೋವಿಂದ ಅ.ಪ. ಖಗವಾಹನ ದೇವಾ ಸ್ವಾಮಿ ನಗೆಮೊಗದೊಡೆಯನೆ ನಾಗಶಯನನೆ ಯೋಗಿಗಳರಸನೆ ಬೇಗದಿ ಬಂದು ಕಾಯೋ ಎನ್ನನು 1 ಶೇಷಾಚಲ ನಿವಾಸ ಸ್ವಾಮಿ ಆಸೆಯ ಬಿಡಿಸೆನ್ನಾ ವಾಸುದೇವ ನಿನ್ನ ಲೇಸು ಕರುಣವ ತೋರಿ ನಿನ್ನ ದಾಸರ ಸಂಗದೊಳು ಇರಿಸೋ ಎನ್ನ 2 ರಾಮ ರಾಮ ಎಂಬೋ ನಿನ್ನ ನಾಮನೇಮದಿ ನುಡಿಸೆನೆಗೆ ರಮಾವಲ್ಲಭವಿಠಲ ಭಾಮೆಯರರಸನೆ ಪ್ರೇಮವ ತೋರೋ 3
--------------
ಸರಸಾಬಾಯಿ
ತಂದೆತಾಯಿ ನೀನೆ ಬಾ ಬೇಗನೆ ಪ ಮಂದರೋದ್ಧಾರ ಮನ್ಮಥ ಜನಕ ಆ- ಮಾಧವ ವಾಸುದೇವ ಗೋವಿಂದ ಮಧುಸೂಧನ ದಾಶರಥೇ ಸಂಕರ್ಷಣ ತ್ರಿವಿಕ್ರಮ ಹೃಷಿಕೇಶ ನಾರಸಿಂಹ ಪರಬ್ರಹ್ಮ 1 ಪದ್ಮನಾಭಾಚ್ಯುತ ದಾಮೋದರ ಜ- ಪ್ರದ್ಯುಮ್ನಧೋಕ್ಷಜ ನಾರಾಯಣ ಅನಿ- ರುದ್ಧ ವಿಷ್ಣು ಭೂಧರ ಉಪೇಂದ್ರ 2 ಅರಿತು ಚತುರ್ವಿಂಶತಿ ನಾಮವ ಶರಣರದುರಿತವ ಪರಿಹರಿಸುವನಮ್ಮ ಗುರುರಾಮವಿಠಲನೆ ನಿನ್ನನೆ ನಾಂ 3
--------------
ಗುರುರಾಮವಿಠಲ
ತಂದೆಯಿಂದಲಿ ತಾಯಿ ಗರ್ಭಕೆ ನೂಕಿದ್ವಂದ್ವ ಜನ್ಮಕೆ ಕರ್ತ ಇಂದ್ರ ರಕ್ಷಿಪುದೆಂದೋ ಜನ್ಮದಿಂದ |ಇಂದ್ರಾದಿ ಪ್ರಾವರ್ತಕನಿಂದು ಪ್ರಲಯಾದಲ್ಲಿನಂದಕರ ಮುಕ್ತರಿಗೆ ಮಂದಿರವು ಸಿತ ದ್ವೀಪ ಗುರು ಗೋ-ವಿಂದ ವಿಠಲಾತ್ಮಕ ಸಂಕ್ಷೇಪ್ತø ಶರಣು ||ಹರಣ ಹೋಗದ ಮುನ್ನ | ಹರಿ ನಿನ್ನ ಹಂಬಲನ್ನಕರುಣಿಸಿ ಕಾವುದೆನ್ನ | ಕರುಣಾನಿಧಿಯೆ ಘನ್ನಸ್ವರ್ಣ ಗರ್ಭನನಯ್ಯ | ಅರ್ಣ ಸಂಪ್ರತಿಪಾದ್ಯಕರ್ಣರಹಿತ ಶಯ್ಯ | ವರ್ಣಿಸೆ ನಿನ್ನನಯ್ಯಮರುತನ ಮತದಲ್ಲಿ | ಕರೆ ತಂದು ಎನ್ನನುತರತಮ ಜ್ಞಾನವನ್ನ | ಅರುಹುವುದೊಳಿತಲ್ಲೆಹರಿಯೆ ಸರ್ವೋತ್ತಮ | ಮರುತ ಜೀವೋತ್ತಮಹರ ವೈಷ್ಣವೋತ್ತಮ | ವರ ಜ್ಞಾನ ಪಾಲಿಸಿಪನ್ನಗಾಚಲವಾಸ ಪ್ರ | ಸನ್ನ ರಘನಾಶಘನ್ನ ಗುರು ಗೋವಿಂದ ವಿಠಲಾ ಗೋ ಪ್ರಸನ್ನ ||
--------------
ಗುರುಗೋವಿಂದವಿಠಲರು
ತಂದೇ ಕಮಲಾಪತಿಯೇ ಕಂದನ ಬಂಧನವಳಿದ ಹರಿಯೇ ಪ ನಂದನ ಕಂದ ಗೋವಿಂದ ಮುರಾರೇ ಅ.ಪ ಜವನ ಬಾಧೆಗೆ ಪಕ್ಕಾದೆ ನಿನ್ನ ಚರಣವೆ ಗತಿಯೆಂದು ಬಂದೆ 1 ಶರಣರು ಕರೆಯಲು ಬರುವೆ ರಂಗ ತ್ವರಿತದಿ ಪಾಪವ ಕಳೆವೆ ಪರಮದಯಾಕರ ಮಣಿವೆ ಎನ್ನ ಮೊರೆಯ ಲಾಲಿಸದಿರೆ ತರವೆ 2 ಮಂಗಳದಾಯಕ ನೀನೆ | ತ್ರಿಲೋಕಂಗಳ ಸಲಹುವ ನೀನೇ ಮಾಂಗಿರಿರಂಗನು ನೀನೇ | ನಿನ್ನ ದಾಸರ ದಾಸನು ನಾನೇ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ತಂದೇ ಮುದ್ದು ಮೋಹನ್ನ ವಿಠಲ ದಾಸಾರ್ಯ ಪ ಇಂದಿರೆಯ ಪತಿಪಾದ | ಮನ್ಮನದಿತೋರುತಲಿಬಂಧುರಾತ್ಮ ಜ್ಞಾನ | ಛಂದದಲಿ ತಿಳಿಸೋ ಅ.ಪ. ಸಿರಿ ವೆಂಕಟನ | ನಂದದಲಿ ಭಜಿಸುವರಅಂದ ಸಹವಾಸವನು | ಸಂಧಿಸಿದೆ ದಯದೀ 1 ಸಾರ ಸುಖ ಸಾಂದ್ರಾ 2 ಕುಂಡಲ ಭೂಷ | ತೋರೊ ಹೃದ್ವಾರಿಜದಿಧೀರ ಗುರು ಗೋವಿಂದ | ವಿಠಲ ಪದಪದ್ಮಾ 3
--------------
ಗುರುಗೋವಿಂದವಿಠಲರು
ತನು ತೇರನಾಶ್ರಯಿಸುತ್ತ ನೀನುಮಾನಿಗಳಿಗಾಜ್ಞೆ | ಮಾಡಿ ನಡೆಸುತಾ ಪ ವಾಕು ಮಾನಿ | ರೋಹಿಣೀ ಶಕಾಂಕಕರ್ಣದೋಳು ತಾವು | ಪಾಶಪಾಣಿಯಾಗಿ ಅ.ಪ. ಸೂರ್ಯ ಸಂಜ್ಞೆದೇವಿಅಶ್ವಿನೇಯ ಸಮ | ಗಣಪತಾತ ಸೂತಅಶ್ವಮೊಗನು ತಾ | ಪ್ರಾಣ ನಾಮಕಾಅಶ್ವ ಐದು ಎರಡ | ಚೋದಿಸೂವ ಹರಿಯೇ 1 ಕರ್ಮಾಅನಾದಿಗನು | ಗುಣ್ಯವಾಗಿ ನೀನುಕಾರ್ಮಿಕನು ಆಗಿ | ಜೀವ ಋಣವನೂಧರ್ಮ ಮಾರ್ಗದಿಂದ | ತಿದ್ದಿ ಭೋಗವಿತ್ತುನಿರ್ಮಲನ್ನ ಗೈದು | ಪೇರ್ಮೆಯಿಂದ ಪೊರೆವೆ 2 ಕರ್ಮ ಮಾಡಿಶಾತ್ವೀಕರ ಸಹ | ಜೀವನಿಂದಲೂದೇವಗೈಸಿ ಗುರು | ಗೋವಿಂದ ವಿಠಲಶಾಶ್ವತದ ಸುಖ | ವೀವ ಕಾರುಣೀಕ 3
--------------
ಗುರುಗೋವಿಂದವಿಠಲರು
ತನು ನಿನ್ನದು ಜೀವನ ನಿನ್ನದು ರಂಗ ಪ ಅನುದಿನದಲಿ ಬಾಹೊ ಸುಖದುಃಖ ನಿನ್ನದಯ್ಯ ಅ ಸವಿನುಡಿ ವೇದ ಪುರಾಣ ಶಾಸ್ತ್ರಂಗಳಕಿವಿಗೊಟ್ಟು ಕೇಳುವ ಕಥೆ ನಿನ್ನದುನವಮೋಹನಾಂಗಿಯರ ರೂಪವನು ಕಣ್ಣಿಂದಎವೆಯಿಕ್ಕದೆ ನೋಡುವ ನೋಟ ನಿನ್ನದಯ್ಯ 1 ರುಚಿ ನಿನ್ನದಯ್ಯ 2 ಮಾಯಾ ಪಾಶದ ಬಲೆಯೊಳಗೆ ಸಿಲುಕಿರುವಕಾಯ ಪಂಚೇಂದ್ರಿಯಂಗಳು ನಿನ್ನವುಕಾಯಜಪಿತ ಕಾಗಿನೆಲೆಯಾದಿಕೇಶವರಾಯ ನೀನಲ್ಲದೆ ನರರು ಸ್ವತಂತ್ರರೆ 3
--------------
ಕನಕದಾಸ
ತನು ಮನ ಧನ ನಿನ್ನವಯ್ಯ ವನಜನಾಭ ಮಾರನಯ್ಯ ಪ ಮನಸು ನನಸು ನಿನ್ನವಯ್ಯ ಕನಸು ಕಿನಸು ನಿನ್ನವಯ್ಯ ದಿನ ದಿನ ದಿನ ಭಜಿಪೆನಯ್ಯ ಮನದಿ ನೆಲಸೋ ನೀ ರಂಗಯ್ಯ ಅ.ಪ ಸ್ನಾನ ಸಂಧ್ಯಾ ಜಪವು ತಪ ಧ್ಯಾನಪೂಜೆ ಧೂಪ ದೀಪ ದಾನ ಧರ್ಮ ನೇಮ ಲೋಪವೇನನರಿಯೆ ವಿಶ್ವರೂಪ 1 ಎನ್ನದೆಂಬುದಾವುದಿಲ್ಲ ಎನ್ನ ಕಾರ್ಯವೆನ್ನದಲ್ಲ ಎನ್ನ ಪೊರೆವರಾರು ಇಲ್ಲ ನಿನ್ನ ಬಿಟ್ಟರೇ ಗತಿಯಿಲ್ಲ2 ನಿನ್ನ ಸನ್ನಿಧಿ ಎನ್ನದೇಶ ನಿನ್ನ ಭಜನೆ ಎನ್ನ ಕೋಶ ನಿನ್ನ ಕೃಪೆಯೇ ಎನ್ನ ದೋಷನಾಶ ಸನ್ನುತಕಾಯೋ ಮಾಂಗಿರೀಶ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ತನು ಸದನದಿ ಪೀಠವಯ್ಯ | ಭಾನು ಕುಲೋದ್ಧೀಪಕ ಪ ಅನಿಲನೆ ಜೀವನಾ ಮಹಾ | ಮಂಚನವು ರಮಾ ಶಯ್ಯಕೆ ಬಾ ಅ.ಪ. ಸುನಾಮ ಮೂರ್ತಿ ಕರವ ಪಾದ 1 ಮಧು ವಿರೋಧಿ ವೇದಾಂತ | ವೇದ್ಯ ಸುಧಾ ಕಲಶ ಪಾಣಿವಿಧಿ ಭವಾದಿ ವಂದ್ಯ ಚರಣ | ಅದುಭುತ ಚರ್ಯ ಹರಿಯೆಪದದಿ ಸುರನದಿಯ ಪಡೆದವ | ನದಿಸುತ ಗೊಲಿದ ಮಹಿಮಯದುಕುಲೋತ್ತಮ ಶ್ರೀ ಕೃಷ್ಣನೇ ಹದುಳದಲಿ ಪೊರೆ ಬಾ 2 ತರಳ ದ್ರೌಪದಿಗೊಲಿದವನೆ | ಶೌರೀ ವರ ಅಹಲ್ಯಾ ವರದಗುರು ಮಡದಿ ತಾರಾವರದ | ಶರಣರ್ಗೆ ಸುರಧೇನು ||ಪರಮ ಪಾತಕಿಯಾದವರ | ಪೊರೆದ ಮಹಾದಯವಂತ ಪರಿಸರಾಂತರ್ಗತನೆ ಪೊರೆಯೊ | ಗುರು ಗೋವಿಂದ ವಿಠಲ 3
--------------
ಗುರುಗೋವಿಂದವಿಠಲರು
ತನು ಸಹ ಕಾಂಬುದೆ ಬ್ರಹ್ಮಸತ್ಯವು ಸತ್ಯವ ಕೇಳೆಲೋ ತಮ್ಮತನು ಸಹ ಕಾಂಬುದೆ ಬ್ರಹ್ಮತನುವನು ಬಿಟ್ಟು ಬೇರೇನೂ ತೋರದುನಿನಗೆ ಅರಿದು ನಿಮ್ಮಪ್ಪಗೆ ಅರಿದು ಪ ಹೂವನೆ ಮುಂದೆ ಮುಂದಿಟ್ಟುಕೊಂಡುಸರ ಕಟ್ಟಬಹುದು ದೊಡ್ಡ ಚೆಂಡುಹೂವನೆ ಮುಂದಿಟ್ಟಿಕೊಂಡುಹೂವನೆ ಬಿಟ್ಟು ಪರಿಮಳ ಕಟ್ಟೆನೆಅವ್ವಗೆ ಅರಿದು ಅವ್ವನವ್ವಗೆ ಅರಿದು1 ಮುತ್ತದು ಕೇವಲ ಜ್ಯೋತಿ ಕಿವಿಗೆಮುತ್ತಿಡುವರಿಗದು ನೀತಿಮುತ್ತದು ಕೇವಲ ಜ್ಯೋತಿಮುತ್ತದು ಬಿಟ್ಟು ಜ್ಯೋತಿಯ ಬಿಡು ಎನೆಮುತ್ತದು ಅಜಗೆ ಅರಿದು ಮಹೇಶ್ವರಗರಿದು2 ಬೆಲ್ಲದ ಮುದ್ದೆಯ ನೋಡುಹಲ್ಲಿನಿಂದಲೇ ತಿನಬೇಕು ಕಡಿದುಬೆಲ್ಲದ ಮುದ್ದೆಯ ನೋಡುಬೆಲ್ಲವನು ಬಿಟ್ಟು ಸಿಹಿಯನು ತಿನ್ನೆನೆಬಲ್ಲ ಚಿದಾನಂದ ಸದ್ಗುರುಗರುದು 3
--------------
ಚಿದಾನಂದ ಅವಧೂತರು
ತನುಮನದಲ್ಲಿ ಯೋಚನೆ ಮಾಡೀ ಎಣಿಸಿ ಗುಣಿಸಿ ಮನಸಿಜನ್ನ ಜನಕನ ಲೀಲೆ ಪ ನರನಾರಾಯಣನೀತ ಕೃಷ್ಣ ಹರಿ ಹೃದ್ಭಾನು ಕಪಿಲನೀತ ಹರಿನಾರಾಯಣೇನೀತ ಯೋಗೀ ಶ್ವರ ತಾಪಸ ವೈಕುಂಠನೀತ ಹರನಸಖ ಸ್ವಧಾಮನೀತ ಕರುಣಿ ಸಾರ್ವಭೌಮನನೀತಾ 1 ಅಜಿತಯಜ್ಞನಾಮನೀತ ಅಜಗೆ ಪೇಳಿದ ಹಂಸನೀತ ಸುಜನಪಾಲ ವ್ಯಾಸ ವೀ ರಜ ಮಹಿದಾಸ ದತ್ತನೀತ ನಿಜ ಮಹಿಮ ಧನ್ವಂತ್ರಿ ಈತ ತ್ರಿಜಗವಳೆದುಪೇಂದ್ರನೀತ ಭಜಕರೊಡಿಯ ವಿಷಕ್ಸೇನ ಭುಜಗಶಾಯಿವಿಭುವೆ ಈತ 2 ಚಲುವ ಧರ್ಮಶೇತು ಈತ ಬಲುವುಳ್ಳ ಶಿಂಶುಮಾರನೀತ ಮತ್ಸ್ಯ ಕೂರ್ಮವರಹ ಲಲಿತನರಸಿಂಹನೀತ ಬಲಿಗೊಲಿದ ವಾಮನ್ನನೀತ ಕುಲವೈರಿ ರಘರಾಮನೀತ ಕಲಕಿ ರೂಪನಾದನೀತಾ 3 ವಾಸುದೇವ ಜಯಪತಿ ಸುಂ ದರ ಪ್ರದ್ಯುಮ್ನ ಈತ ನಿರಂತರ ಅನಿರುದ್ಧನೀತ ಚ ತುರ ವಿಂಶತಿ ಮೂರುತಿಯೇ ಈತ ಮೆರೆವ ಅಜಾದಿ ನಾಮಕನೀತ ವರ ಪಂಚಮೂರುತಿಯೇ ಈತಾ ಎರಡೈದು ಮೇಲೊಂದನೀತ 4 ಪರಿಪರಿ ರೂಪ ಉಳ್ಳನೀತ ಹೊರಗೆ ಒಳಗೆ ವ್ಯಾಪ್ತನಾಗಿ ಸರಿಸರಿ ಬಂದ ತೆರದಿ ಜಗವ ಸರಸದಲಿ ಆಡಿಪನೀತ ಸ್ಮರಣೆ ಮಾಡಲು ಸಕಲ ಇಷ್ಟವ ಕರೆÀದು ಕೊಡವನೀತ ಮರಣ ಜನನರಹಿತ ನೀತ 5
--------------
ವಿಜಯದಾಸ
ತನುಮನಧವನೆಲ್ಲ ನಿನಗರ್ಪಿಸಿದೆನಿನ್ನು ಎನಗಾವುದಾಧೀನವಿನಿತಿಲ್ಲ ದೇವ ಪ ಜನಕ ನಾನು ಕ್ಷಣಕೆ ಕ್ಷಣಕೆ ಉಣವುದೆಲ್ಲವು ನಿನ್ನ ಪ್ರಸಾದ ಕನಸುಮನಸಿನೊಳಗೆ ನಾನು ಮಣಿವುದೆಲ್ಲವು ನಿನ್ನ ಚರಣ ಅ.ಪ ಮಡದಿಯಿಂ ಮಮತದಿ ಸಡಗರದಾಡ್ಯಾಡಿ ಕಡು ಆನಂದಿಪುದೆಲ್ಲ ಒಡೆಯ ನಿನ್ನಾಟ ಎಡೆಬಿಡದೆ ಅಡಿಗಡಿಗೆ ಕಡುಸಿರಿವಡೆದು ನಾ ಪೊಡವಿಯೋಳ್ಜೀವಿಪುದು ಕಡು ನಿಮ್ಮ ಪ್ರೇಮ ನುಡಿವುದೆಲ್ಲ ನಿನ್ನ ಮಂತ್ರವು ಕೊಡುವುದೆಲ್ಲವು ನಿನ್ನ ಅಧಿಕಾರ ನಡೆವುದೆಲ್ಲವು ನಾ ನಿನ್ನ ಯಾತ್ರೆಯು ಇಡುವತೊಡುವುದು ನಿನ್ನ ಬಿರುದು 1 ಗಳಿಸುವುದೆಲ್ಲ ನಾ ಚಲಿಸದ ತವಪಾದ ನಳಿನದಾಸರಸಂಗೀ ಇಳೆಯೊಳು ಪ್ರಭುವೇ ಬಳಸುವುದೆಲ್ಲ ನಾ ಅಳಕದ ತವಚರಿತ ಕಲಿಯುವುದೆಲ್ಲ ನಿಮ್ಮ ವಿಲಸಿತನಾಮಧ್ಯಾನ ಮಲಗುವುದೇ ನಿಮ್ಮ ಧ್ಯಾನ ಆನಂದ ನಲಿವುದಖಿಲ ನಿಮ್ಮ ಭಜನೆಯು ಅಳಿವುದೆಲ್ಲನುಭವದ ಗುಣಗಳು ತಿಳಿವುದೆಲ್ಲವು ನಿಮ್ಮ ಮಹಿಮೆ 2 ಅಮಿತ ತವಪ್ರೇಮವು ಗಮಿಸುವುದೆಲ್ಲ ನಾ ಸುಮನರ ಸಭೆಯು ಕ್ರಮದಿ ನಾ ಬೇಡುವುದು ವಿಮಲ ಸುಜ್ಞಾನವು ದಮೆ ದಯ ಭಕ್ತಿ ತವ ನಿರ್ಮಲಂಘ್ರಿಯ ಅರಿವು ನೇಮದಿಂ ನಾ ಬರುವುದೆಲ್ಲ ಸ್ವಾಮಿ ನಿಮ್ಮಯ ಮಹಿಮೆ ಖ್ಯಾತಿಯು ಕ್ಷೇಮನಿಧಿ ಶ್ರೀರಾಮ ನಿಮ್ಮೊಳು ಕಾಮಿಸುವುದೇ ನಾ ಮುಕ್ತಿಪದವು 3
--------------
ರಾಮದಾಸರು
ತನುಲಂಪಟಗೆ ಎಲ್ಲಿಹುದು ತನ್ನೊಳು ಖೂನ ಧ್ರುವ ದೆಸೆಗೆಟ್ಟವಗೆ ಎಲ್ಲಿಹುದು ಯುಕ್ತಿಯು ಮುಸುಕಿದ ಮಾಯದವಗೆಲ್ಲಿಹುದು ಮುಕ್ತಿಯು ಹುಸಿಯಾಡುವವಗೆಲ್ಲಿಹುದು ಋಷಿಭಕ್ತಿಯು 1 ತರಳಗುಂಟೆ ಭಯವು ಘಟಸರ್ಪದ ಎರಳೆಗುಂಟೆ ಖೂನ ಮೃಗಜಲವೆಂಬುವದ ಸೋರೆಗುಂಟೆ ಮಾತು ಚಾರ್ತುಯದ 2 ಕನಸು ಕಾಂಬವಗೆ ಎಲ್ಲಿಹುದು ತಾನಿಹ ಸ್ಥಾನ ಮನದಿಚ್ಛೆಯಿದ್ದವಗೆ ಎಲ್ಲಿ ಧ್ಯಾನ ದೀನಮಹಿಪತಿ ಸ್ವಾಮಿ ಕಾಣದವಗೆಲ್ಲಿ ಘನ ಅನುಭವಿಸಿಕೊಳದೆ ಜನ್ಮಕೆ ಬಂದಿದೇನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತನುವ ತೊಳೆದ ಮಾತ್ರದಿಂದ ಜನರು ಶುದ್ಧರೆನಿಪರೆ ಪ ಮನದ ಶುದ್ಧಿ ಆದ ಹೊರತು ವನಜನಾಭನೊಲಿವನೇ ಅ.ಪ ದಿನಪನುದಯ ಕಾಲದಿಂದ ದಿನಪನಸ್ತದನ್ನೆಗಾ ಧನವಗಳಿಸುವಾಸೆಯಿಂದ ಮನಸಿನಲ್ಲಿ ಯೋಚಿಸಿ ಮನಸಿಜಾತನಾಟಕೆ ಪರವನಿತೆಯರ ಬೆರೆಯುತುರುಳಿ ಕನಸಿನಲ್ಲಿ ಹರಿಯ ಕಂಡೆ ಎನುತ ಪೇಳ್ವ ಮಾನವಾ 1 ಪರರು ನೋಡಿ ಮೆಚ್ಚಲೆಂದು ಬೆರಳಿನಿಂದ ಮಣಿಯನೆಣಿಸಿ ಶಿರವನೊಮ್ಮೆತೂಗಿ ತೂಗಿ ತೆರೆದು ಮುಚ್ಚಿ ಕಂಗಳ ಹಿರಿಯ ಭಕ್ತನಂತೆ ನಟಿಸಿ ಪರರ ಮೋಸಗೊಳಿಸಿ ದಣಿಸಿ ಬರಿಯಡಾಂಭಿಕ ಮಾಂಗಿರೀಶ್ವರನ ಶರಣನೆನಲು ಸಾಧ್ಯವೇ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ತನುವೆನ್ನದು ಚೇತನವೆನ್ನದು ಎಂದು ಅನುದಿನ ಪೋಷಣೆಯನು ಮಾಡಿದೆ ಹರಿ ಪ ಚಿನುಮಯ ನಿನ್ನನು ನೆನೆವೆನೆಂದರೆ ಮನ ತನುಮಧ್ಯೆಯರ ತನುವಿನೊಳಿರುತಿಹುದು ಅನಘ ನಿನ್ನನು ನೋಡುವೆ ನಾನೆನ್ನಲು ದೃಷ್ಟಿ ಕನಕಾಂಗಿಯರ ಕುಂಭಸ್ತನದ ಮೇಲಿಹುದಯ್ಯ1 ಚರಣದ ಪೂಜೆಯೊಳಿರುವೆನೆಂದರೆ ಕರವರೆಡು ಕೋಮಲೆಯರನರಸುವುವು ಹರಿಕಥಾಶ್ರವಣದೊಳಿರೆ ಈ ಕಿವಿಗಳು ಹರಿಣಾಕ್ಷಿಯರ ಕಂಠಸ್ವರಕೆ ಮೋಹಿಪವಯ್ಯ 2 ದುರಿತದೂರನ ನಾಮ ಸ್ಮರಿಸದು ನಾಲಿಗೆ ಸರಸಿಜಾಕ್ಷಿಯರೊಳು ಸರಸೋಕ್ತಿ ಪಡೆದು ಚರಣಶ್ರೀತುಳಸಿಯನರಿಯದೆ ನಾಸಿಕ ತರುಣಿಯ ಮೈಗಂಪನರಸಿ ಹಿಗ್ಗುವದಯ್ಯ 3 ನಿನ್ನಂಘ್ರಿಗೆರಗದೆ ಕುನ್ನಿಶರೀರವಿ ದುನ್ನುತಸ್ತನವುಳ್ಳ ಕನ್ನೆಯರೊಳ್ ತನ್ನ ಸುರತಸುಖವನೆ ಚಿಂತಿಸುವದು ಎನ್ನಾಧೀನದೊಳಿಲ್ಲ ನೀನೆ ಬಲ್ಲೆ 4 ಎರವಿನ ಸಿರಿಯಂತೆ ಕರಣಕಳೇವರ ಬರಿದೆ ನನ್ನದು ಎಂದು ಮೆರೆದೆ ನಾನು ಹರಿ ನಿನ್ನದೇ ಸರಿ ದುರಿತಸುಕೃತಕೆನ್ನ ಗುರಿಮಾಡದೆ ಕಾಯೋ ವರದವಿಠಲ ಕೃಷ್ಣ 5
--------------
ವೆಂಕಟವರದಾರ್ಯರು