ಒಟ್ಟು 17313 ಕಡೆಗಳಲ್ಲಿ , 134 ದಾಸರು , 7747 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂಧನ ಬಿಡಿಸು ಶ್ರೀಶಾ ಇಂದಿರೇಶಾ ಪ. ಇಂದು ಈ ಭವದಲ್ಲಿ ನೊಂದು ನೊಂದೆನೊ ದೇವಾ ಗೋವಿಂದಾ ಪಾಲಿಸಬೇಕಯ್ಯಾ ಗೋಗಳರಾಯ ಅ.ಪ. ಇಂದಿರೇಶನೆ ನಿನ್ನ ಒಂದಿನಾದಿ ನಾನು ದೈನ್ಯದಿ ಭಜಿಸದೆ ಸುಂದರ ಮೂರುತಿ ನೀನು ಯನ್ನ ಹೃದಯ ಮಂದಿರದಲ್ಲಿ ಸಂದರುಶನ ಕೊಡೊ ಇಲ್ಲಿ 1 ಸದೋಷಿಯು ನಾನು ದೋಷರಹಿತ ನೀನು ಶೇಷಶಯನ ನಿಮ್ಮ ನಾಮವೇ ಭೂಷಣ ಸ್ವರಮಣನೀ ನಿನ್ನ ಸ್ಮರಣೆಯಾ ಮಾಡದೆ ಹಾಳು ಮಾತುಗಳಿಂದ ಹೊತ್ತುಗಳದೆ ಮುಕುಂದಾ 2 ಮತ್ಗ್ಯಾದ್ಯನಂತವತಾರ ನೀನು ತುಚ್ಛದೈತ್ಯಸ ಸಂಹಾರ ಇಚ್ಛಾದಿಂದಲಿ ನೀನು ಸುರರಿಗಾಧಾರ ಕಾಳಿಯಮರ್ದನ ಕೃಷ್ಣಧೀರ ಗಂಭೀರಾಸುತಸುಕುಮಾರಾ 3
--------------
ಕಳಸದ ಸುಂದರಮ್ಮ
ಬಂಧುಗಳದಾರಿಗಾರಿದ್ದರೇನು - ಇಷ್ಟಬಂಧು ತ್ರೈಜಗಕೆ ಶ್ರೀಹರಿಯಲ್ಲದೆ - ಮಿಕ್ಕಬಂದುಗಳದಾರಿಗಾರಿದ್ದರೇನು ಪ ಬ್ರಹ್ಮೇತಿ ಬಂದು ಕಾಡಲಾಗಿ ರುದ್ರಾದಿಗಳೇನ ಮಾಡುತಿರ್ದರಾ ಶೈಲದೊಳಗೆ 1 ಪತಿ ಏನ ಮಾಡುತಿರ್ದನುಮಿಂಡಿ ಪೆಣ್ಣನು ಸಭೆಯಲ್ಲಿ ಸೀರೆ ಸುಲಿಯಲುಗಂಡರೈವರು ನೋಡಿ ಏನ ಮಾಡುತಿರ್ದರಯ್ಯ 2 ಮೃಗಚಕ್ರವರ್ತಿ ಬಹುವರನಾಗಿ ಪೋಗುತ್ತಿರೆಮಿಗೆ ಸತಿಸುತರೇನ ಮಾಡುತಿರ್ದರುಮೃಗಮಾನವಾಕಾರ ಕಾಗಿನೆಲೆಯಾದಿಕೇಶವನಲ್ಲದೆಮಿಗು ಬಂಧುಗಳದಾರಿಗಾರಿದ್ದರೇನು 3
--------------
ಕನಕದಾಸ
ಬನ್ನ ಪರಾಕು ಭಾಗ್ಯದ ನಿಧಿಯೆ ಪ. ನಿನ್ನ ನಂಬಿದೆ ನೀರಜಾಕ್ಷ ಪರಾಕು ನಿನ್ನ ರನ್ನೆಯ ಒಲುಮೆ ಬೇಕು ಪರಾಕು ಅನ್ಯರ ಸಂಗವನೊಲ್ಲೆ ಪರಾಕು ಪರಾಕು 1 ಶೇಷಶಯನ ಶ್ರೀನಿವಾಸ ಪರಾಕು ಸಾಸಿರನಾಮದ ಒಡೆಯ ಪರಾಕು ದೋಷ ದುರಿತಹರ ಸ್ವಾಮಿ ಪರಾಕು ವಾಸುದೇವ ಪರಾಕು 2 ರತಿಪತಿಪಿತ ಮಾಧವನೆ ಪರಾಕು ಅತಿರೂಪ ಎನ್ನಯ್ಯನೆ ಪರಾಕು ಹಿತ ವಿರಹಿತರ ಕಾಯೊ ಪರಾಕು ಪರಾಕು 3
--------------
ಹೆಳವನಕಟ್ಟೆ ಗಿರಿಯಮ್ಮ
ಬನ್ನ ಮಂದ ಸಿಂಧು ವಕ್ತ್ರ ಭಾಗವತ ಸಿರಿ ಪಾದ ಕರ ಕಮಲ ಭಾರತೀಶ ಭವ ಕಾಲ ವಜ್ರ ವಿಧಿ ಸಖನೋ ಗುರುರಾಜ ವಾದಿಗಳ ಕುಲವದ್ದು ದಶರಥ ಹೇಯನೆನಿಸಿದ ಬೌದ್ಧದೇವನ ಗುರುರಾಜ ಶ್ರದ್ಧೆಯಿಂದಲಿ ಸಿದ್ಧಪಡಿಸುವದೆಂದು ಗುರುರಾಜ ಜನರ ಬುದ್ಧಿ ಭೇದವ ಮಾಡಿ ದಿವದಿ ಕದ್ದು ದೇವನಭಾವದಿಂದಲಿ ಪೂಜಿಸಲು ನೀ ಗುರುರಾಜಅದು ಬಲು ಸುದ್ದಿಯ ತಿಳಿಯಲು ಸದ್ದು ಇಲ್ಲದೆ ಬೌದ್ಧ ಜನರು ಬಂದು ನೋಡೆ ಗುರುರಾಜ ತಿದ್ದಿ ವಿಗ್ರಹ ತೋರಿ ಸರ್ವ ಸುರರನು ಸಲಹಿ ಅಸುರರ ವದ್ದ ಪಲ್ಗಳ ಮುರಿದು ಮೆರೆದೇ ಗುರುರಾಜ ನೀ ಪದ್ಮಜಾತನ ಪದವಿ ಪೊಂದುವಿ ಎಂದು ನಿನ್ನಯಪದ್ಮಪಾದಕೆ ಬಿದ್ದೆನಾ ಗುರುರಾಜ ನೀ ಗುರು ಮಧ್ವವಲ್ಲಭನಿಂದ ರಮಣವ ಕೊಂಡು ಭಜಿಸುವೆ ಗುರುರಾಜ ಸಿದ್ಧ ಶೇಖರ ಸೋಮ ವಂದ್ಯನೊ ನೀ ಗುರುರಾಜ ಹರುಷದಿಂದಲಿ ನಿನ್ನ ದರುಶನವಾದ ದಿನದಾರಭ್ಯ ಗುರುರಾಜ ಮನದಲಿ ಮಿಂಚಿನಂತೆ ಪೊಳೆವೊ ಸುಂದರ ಸುಂದರಾಂಗಿಯ ಸಹಿತ ವಂದಿಪೆನೊ ಗುರುರಾಜ
--------------
ಗುರುತಂದೆವರದಗೋಪಾಲವಿಠಲರು
ಬನ್ನವನಾ ನೀಗಿದೆ ಜವದಿ ಧನ್ಯನಾದೆ ಶ್ರೀ ಗುರುವೆ ಧನ್ಯನಾದೆ ಸದ್ಗುರುವೇ ಧನ್ಯನಾದೆ ಪ ಭವಸಾಗರವಾ ದಾಟಿದೆ ಜವನ ಬಾಧೆಯ ನೀಗಿದೆ ಜೀವಭಾವವು ಸಟಿಯೆಂದೆನಿಸಿ ದೇವನಾದೆ ಪಾವನನೆ ಧನ್ಯನಾದೆ 1 ಅರಿತೆನೆನ್ನಯ ನಿಜರೂಪವನಾ ದುರಿತವ ನೀಗಿದೆ ಅರಿವಿನ ಬಲದಿ ದೊರಕಿತು ಮುಕುತಿ ಧನ್ಯನಹುದು ನಾ ನೀನೆ ನಾನೈ ಶಂಕರನೇ ಧನ್ಯನಾದೆ 2
--------------
ಶಂಕರಭಟ್ಟ ಅಗ್ನಿಹೋತ್ರಿ
ಬನ್ನಿ ಮಹಂಕಾಳಿ ಜಯವ ನೀಡಮ್ಮ ಮನ್ನಿಸಿ ಬಾಲಗೆ ಪ ನಿನ್ನ ನಂಬಿಕೊಂಡು ಕೆನ್ನೆಯೋಳ್ಮುಡಿವರ ಬನ್ನ ಕಳೆದು ಜಯವನ್ನು ಕೊಟ್ಟು ನೀ ಭಿನ್ನವಿಲ್ಲದೆ ಮನ್ನಿಸಿ ಸಲಹು ಪನ್ನಂಗವೇಣಿಯೆ ಉನ್ನತ ಕರುಣಿ 1 ಪರಮ ಪವಿತ್ರಳೆಂದು ಪರಮ ಪ್ರೀತಿಯಿಂದ ಹರನು ಬಿಡದೆ ನಿನ್ನ ಶಿರದಿ ಧರಿಸಿಕೊಂಬ ಪರಮಮಹಿಮ ನಿನ್ನನರಿನು ಪೇಳುವೆನಾ ತರಳನ ಮೊರೆ ಕೇಳೆ ಕರುಣಿ ಶುಭಕರಿ2 ನೇಮದಿ ಭಜಿಪೆ ನಿಸ್ಸೀಮೆ ನಿರಾಮಯೆ ಕ್ಷೇಮಶರಧಿ ತ್ರಿಭೂಮಿಜಯಂಕಾರಿ ಈ ಮಹಭವನಿಧಿ ಕ್ಷೇಮದಿ ಗೆಲಿಸು ಶ್ರೀ ರಾಮನಾಮ ಪ್ರಿಯೆ ಕೋಮಲಹೃದಯೆ 3
--------------
ರಾಮದಾಸರು
ಬನ್ನಿರಿ ದಾಸರೇ ಪೋಗುವಾ ನಮ್ಮ ಚನ್ನಕೇಶವನೆಂಬ ಹರಿಮಂದಿರಕೇ ಪ ಬನ್ನಿರಿ ಪೋಗುವಾ ಗುಡಿಯೊಳು ತಿನ್ನುವಾ ಚನ್ನಗೆ ಅರ್ಪಿಸಿ ತಂದ ಪಕ್ವಗಳ ಅ.ಪ. ನಾ ತಂದಿರುವೆನು ಪರಮಾನ್ನವನ್ನು ತಾತನ ನಾಮಕ್ಕೆ ಬೆರಿಸಿ ಮಾಡಿದೆನು ನೀತಿಯೊಳಾಭಕ್ತಿ ಮಧುಕ್ಷೀರವನ್ನು ಸತ್ಯದಿ ಕೂಡಿಸಿ ಸೇವಿಸುವಾ 1 ಪರಹಿತವೆನ್ನುವ ಸಕ್ಕರೆ ತಂದು ನಾ ಬೆರಿಸುವೆ ಧರ್ಮಗಳೆಂಬ ಪಾಯಸಕೇ ಹರಿಯ ಕೀರ್ತನೆಗಳ ಅಮೃತವ ಸೇರಿಸಿ ಪರಮಾನ್ನವೀ ರೀತಿ ಮಾಡಿರುವೆನಯ್ಯ 2 ಹರಿಭಕ್ತಿಯೆಂಬುವ ತಂಡುಲವನೆ ತಂದು ಹರಿಯ ಸ್ಮರಣೆಯೆಂಬ ವುದಕದಿ ತೊಳೆದು ಹರಿಯ ಭಜನೆಯೆಂಬ ಬೆಂಕಿಯ ಮೇಲಿಟ್ಟು ಸರಸದಿ ನಾ ಪಾಕವ ಮಾಡಿರುವೆ 3 ಸನ್ನುತ ದೂರ್ವಾಪಟ್ಟಣದಿ ನಿತ್ತಿರುವಂಥ ಪನ್ನಗಶಯನ ಶ್ರೀ ಹರಿಯ ನೆನೆಯುತ್ತ ಉನ್ನತ ಸೇವೆಯಿಂದಾತನ ಮೆಚ್ಚಿಸಿ ತಿನ್ನುವಾ ಕೇಶವ ನೀಯುವ ವರವಾ 4
--------------
ಕರ್ಕಿ ಕೇಶವದಾಸ
ಬನ್ನಿರಿ ಬನ್ನಿರಿ ದಾಸರೊಂದಾಗಿ ಚನ್ನ ಕೇಶವನರಮನೆಗೆ ಮುಂದಾಗಿ ಪ ಬನ್ನಿರಿ ಹರುಷದಿ ಪೋಗುವಾ ಬೇಗದಿ ಸನ್ನುತ ತಾತನ ಮೆನೆಯೊಳಗಿರುವಾ ಅ.ಪ. ನಿತ್ಯ ನೀಲಾಂಜನೆ ಪರಮ ಪಾವನನ ಭೃತ್ಯರ ಸಲಹುವ ಬರ ಶ್ರೀಧರನ ಪ್ರತ್ಯುಪಕಾರವ ಬೇಡದೆ ಸಲಹುವ ಸತ್ಯನಾರಾಯಣ ದೇವರ ಗುಡಿಗೆ 1 ನಗಧರ ರಂಗನ ಖಗವಾಹನನ ಜಗದೊಳು ಮೆರೆಯುವ ಗೋವಳ ಹರಿಯ ಅಗಣಿತಮದನನ ಸನಕ ವಂದಿತನ ಭೃಗಕುಲ ಶ್ರೇಷ್ಠನ ದೇವರ ಗುಡಿಗೆ 2 ತರಳರ ಸಲಹುವ ಭಜಕರ ಪೊರೆಯುವ ಪರಿಪರಿ ರೂಪದಿ ಮೆರೆಯುವ ಪರಿಯ ಪರಮಾತ್ಮನನ್ನು ಭಕ್ತಿಯಲಿ ಕೀರ್ತಿಸಲಾಗ ಸರಸದಿ ದಾಸರಿಗೊಲಿವ ಕೇಶವನ 3
--------------
ಕರ್ಕಿ ಕೇಶವದಾಸ
ಬಯಸಿ ಕರೆದರೆ ಬರುವರೇನಯ್ಯಾ ನರಹರಿಯ ದಾಸರು ಬಯಸಿ ಕರೆದರೆ ಬರುವರೇನಯ್ಯಾ ಪ ಬಯಸಿಕರೆದರೆ ಬರುವರೇನೋ ಜಯಶ್ರೀ ಮುರಹರಿಯ ನಾಮ ಓದಿ ಕಳೆದುಕೊಂಡ ಶೂರರು ಅ.ಪ ಮಹ ವಿಷಯಲಂಪಟ ಬಿನುಗು ತ್ರಿಗುಣೆಂಬ್ಹೇಸಿಕೆಯ ಬಳಿದು ಸುಸ್ಸಂಗಶ್ರವಣ ಮನನದಿಂ ನಿಜಮೂಲ ಮರ್ಮರಿದು ಆಸನವ ಬಲಿದು ಲೇಖ್ಯದಮೇಲೆ ಘನ ಅನಂದದಿರುವರು 1 ಆರು ದ್ವಯಗಜ ಇಕ್ಕಡಿಯ ಗೈದು ಬಿಡದ್ಹಾರಿಬರುವ ಆರು ಹುಲಿಗಳ ತಾರ ಸೀಳೊಗೆದು ಬಲುಘೋರಬಡಿಪ ಆರುನಾಲ್ಕು ಶುನಕಗಳು ತುಳಿದು ಸತ್ಪಥವ ಪಿಡಿದು ಸಾರಾಸಾರ ಸುವಿಚಾರಪರರಾಗಿ ಮಾರನಯ್ಯನ - ಪಾರಮಹಿಮೆಯ ಅಮೃತ ಪೀರುವವರು 2 ತಾಸಿನ ಜಗಮಾಯವೆಂದರಿದು ಇದು ಸತ್ಯವಲ್ಲೆಂದು ಬೇಸರಿಲ್ಲದೆನುಭವದಿ ದಿನಗಳೆದು ಸುಚಿಂತದನುದಿನ ದಾಸದಾಸರ ಸಾಕ್ಷಿಗಳ ತಿಳಿದು ನಿಜಧ್ಯಾಸದ್ಹುಡಿಕ್ಹಿಡಿದು ನಾಶನಭವದ್ವಾಸನೆಯ ನೀಗಿ ಸಾಸಿರನಾಮದೊಡೆಯ ನಮ್ಮ ಶ್ರೀಶ ಶ್ರೀರಾಮಚರಣಕಮಲದಾಸರಾಗಿ ಸಂತೋಷದಿರುವರು 3
--------------
ರಾಮದಾಸರು
ಬರಡು ಕಣ್ಗಳಿದ್ದರೇನು ಮನದ ಕಣ್ಣ ತೆರೆಯದ ಪ. ತರಳಗೊಲಿದ ವರದರಾಜದೊರೆಯ ನಿಜವನರಿಯದ ಅ.ಪ. ನಾರದಾದಿ ಮೌನಿವರರು ಸಾರಿಬಂದು ಸೇವಿಸಿ ಸಾರಸಾಕ್ಷನ ಮನವನೊಲಿಸಿ ಸಾರಭೂತರೆನಿಸಿದರು ಮನದ ಕಣ್ಣ ತೆರೆಯದಿಂತು 1 ತರಳಗೊಲಿದು ಕಂಬದಿಂದ ಬಂದು ಹಿರಣ್ಯನುರವ ಬಗೆದು ಕರುಳಮಾಲೆ ಧರಿಸಿ ಮೆರೆವ ನರಹರಿಯ ಕಾಣದ 2 ಈ ಕಳಂಕವೆಲ್ಲ ತೊಳೆದು ಶ್ರೀಕಟಾಕ್ಷಕೆ ಪಾತ್ರನಾಗಲು 3 ಶರಧಿಶಯನ ಪರಮಪಾವನೆ ಶರಣರಕ್ಷಕನೀತನ ವರದ ಶೇಷಶೈಲಧಾಮನ ವರದಿ ಪಡೆವೆ ಮನದಕಣ್ಗಳಂ 4
--------------
ನಂಜನಗೂಡು ತಿರುಮಲಾಂಬಾ
ಬರಬಾರದಾಗಿತ್ತು ಬಂದೆನಯ್ಯಾ ಪ ಕರೆತರಲು ಬಂದುದಕೆ ಫಲವೇನೊ ದೇವಾಅ.ಪ ತರಳತನದಲ್ಲಿ ಎನ್ನ ಕರಣಗಳು ಮಾಡಿದ ಪರಿಪರಿಯ ಕ್ರೀಡೆಗಳ ಫಲವೇನೊ ಎನಗೆ ದುರುಳ ಸಂಗದೊಳಿದ್ದು ಹರುಷದಿಂದಲಿ ಎನ್ನ ಆಯುವನು ಕಳೆದೆ1 ಸತಿಸುತರು ಹಿತರಿವರು ಎನಗೆಂದು ಉಬ್ಬುಬ್ಬಿ ಮಿತಿ ಇಲ್ಲದಾ ಕಾರ್ಯಗಳನೆ ಮಾಡೀ ಗತಿಯೇನು ಮುಂದು ಹಿತವು ಯಾವುದು ಎಂದು ಮತಿಗೆಟ್ಟಮೇಲೆನಗೆ ಗೊತ್ತಾಗುವುದೆಂತೋ 2 ಶ್ವಾನ ಸೂಕರಗಳು ಸ್ವೇಚ್ಛೆಯಿಂದಲಿ ಚರಿಸಿ ತನ್ನ ಪರಿವಾರವನೆ ತಾ ಪೊರೆಯುತಿಹವೋ ಎನ್ನ ಸತಿಸುತರುಗಳ ಉದರಪೋಷಣೆಗಾಗಿ ಹೀನಸೇವೆಯಿಂದ ಉಪಜೀವಿಸಲು ಬಹುದೆ 3 ತನುಬಲವು ಇದ್ದಾಗ ಕೋಣನಂದದಿ ತಿರುಗಿ ಜ್ಞಾನ ಕರ್ಮಗಳನ್ನು ಆಚರಿಸದೇವೆ ಧನ ವನಿತೆ ಮೋಹಕೆ ಕೊನೆಮೊದಲು ಇಲ್ಲದೆ ಮನವೆಲ್ಲವನು ನಾನು ಹೊಲೆಗೆಡಿಸಿದಮೇಲೆ4 ವಿಕಳಮತಿಯನು ಹರಿಪ ಅಕಳಂಕ ಹರಿಭಕ್ತ- ರಕುಟಿಲಾಂತಃತರಣ ದೊರೆತು ಎನ್ನ ಸಕಲಾಪರಾಧಗಳ ಕ್ಷಮಿಸುವರ ಸಂಗ ನೀ ಕರುಣಿಸದಿದ್ದ ಮೇಲೆ ಶ್ರೀ ವೇಂಕಟೇಶಾ 5
--------------
ಉರಗಾದ್ರಿವಾಸವಿಠಲದಾಸರು
ಬರಬೇಕು ಇಂದಿಲ್ಲಿಗೆ ಇಂದಿರೆರಮಣಾ ಪಬಾರಯ್ಯಾ ಶ್ರೀಹರಿ 'ಠ್ಠಲ ವೆಂಕಟರಮಣಾಉಡುಪಿಯ ಶ್ರೀಕೃಷ್ಣಾ ಬದರಿನಾರಾಯಣಾ ಅ.ಪಕರಿರಾಜ ಕರೆಯಲು ಕರುಣಸಾಗರ ನೀನುಗರುಡವಾಹನನಾಗಿ ಭರದಿಂದ ಬಂದಂತೆ 1ಭಕ್ತ ಬಾಲನ ಮಾತು ಸತ್ಯಮಾಡಲು ನೀನುತತ್ಕ್ಷಣ ಸ್ತಂಭದಿಂ ಪುಟಿದು ನೀ ಬಂದಂತೆ 2ಸಚ್ಚಿದಾನಂದಾತ್ಮ ಸರ್ವತ್ರ ಪರಿಪೂರ್ಣಭಕ್ತವತ್ಸಲ ಶ್ರೀ ಭೂಪತಿ'ಠ್ಠಲ ಸ್ವಾ'ು 3
--------------
ಭೂಪತಿ ವಿಠಲರು
ಬರಬೇಕು ಬರಬೇಕು ಸಕಲ ಸಜ್ಜನಭಕ್ತರುಗುರುಸಾರ್ವಭೌಮರ ಆರಾಧನೆಗೆ ಗಲಗಲಿಗೆ ಪಪಂಚರಾತ್ರೋತ್ಸವವು ವೈಭವದಿ ನಡೆಯುವದುಚಂಚ'ುತ ಸುಪ್ರಸಾದವು ಇರುವದುವಂಚಿಸದೆ ಸೇವೆಯನು ಮಾಡಿದರೆ ಗುರುರಾಯವಾಂಛಿತಾರ್ಥವನಿತ್ತು ಸಂತೋಷಪಡಿಸುವನು 1ನಿತ್ಯ ಅಷ್ಟೋತ್ತರ ಅಲಂಕಾರ ಮಹಾಪೂಜೆಕ್ಷೇತ್ರ ಭೋಜನ ಕೀರ್ತನೆ ಪುರಾಣನೃತ್ಯಗೀತಗಳಿಂದ ಪಲ್ಲಕ್ಕಿ ಸೇವೆಯುಉತ್ತರಾರಾಧನೆಗೆ ರಥೋತ್ಸವದ ವೈಭವವು 2ಸಹಸ್ರಕುಂಭಾಭಿಷೇಕೋತ್ಸವವು ಕೊನೆಯದಿನಸತ್ಯನಾರಾಯಣನ ಮಹಾಪೂಜೆಯುಪವಮಾನಹೋಮ ಸಂಭಾವನಾ 'ತರಣೆಮುಕ್ತಾಯವಾಗುವದು ಪಂಚರಾತ್ರೋತ್ಸವವು 3ಕೃಷ್ಣವೇಣಿಯ ಪುಣ್ಯಕ್ಷೇತ್ರ'ದು ಗಲಗಲಿಯುಪ್ರಲ್ಹಾದವರದ ಶ್ರೀನರಹರಿಯ ಕ್ಷೇತ್ರವುಶ್ರೀವೆಂಕಟೇಶ'ಠ್ಠಲ ದತ್ತ, ಎಲ್ಲಮ್ಮ 'ೀರಮಾರುತಿ ಪರ್ವತೇಶ್ವರನ ಕ್ಷೇತ್ರ4ಗಾಲವ ಮರ್'ಗಳು ತಪವಗೈದಿಹ ಕ್ಷೇತ್ರಎಲ್ಲದರಲ್ಲಿಯೂ ಮುಂದಿರುವ ಕ್ಷೇತ್ರದೇವ ಭಕ್ತರ ಕ್ಷೇತ್ರ ದೇಶಭಕ್ತರ ಕ್ಷೇತ್ರಭೂಪತಿ'ಠ್ಠಲನ ಪ್ರೀತಿಯ ಕ್ಷೇತ್ರ5
--------------
ಭೂಪತಿ ವಿಠಲರು
ಬರಿದೆ ಆಯುಷ್ಯ ಸಲುವದು ನೋಡಿಕೊಳ್ಳೀ ಪ ದುರಿತ ಹರಿ ಸ್ಮರಣೆಯನ್ನು ಮರೆಯದೆ ಜಪಿಸಿ ಕೊಳ್ಳೀ ಅ.ಪ ಭಕ್ತರನು ಕರುಣದಿಂದೆತ್ತಿ ಸಲಹುವನೂ 1 ಭವ ಬಂಧು ಶ್ರೀ ಪರಮಾತ್ಮನನ್ನು ನೆನನೆನದೂ 2 ಪ್ರೀತಿಯೊಳು ಕಾಯ್ವ ಜಗದ್ಗುರು ಕೃಪೆಯ ಪಡೆದೂ 3
--------------
ಸದಾನಂದರು
ಬರಿದೆ ಚಿಂತಿಸಿ ನೀನು ಬಳಲುವದೇಕೆ ಮನವೆ ಹರಿನಾಮ ಸ್ಮರಣೆಯು ಹರುಷದಲಿ ಸ್ಮರಿಸಿ ಧರ್ಮಾರ್ಥ ಕಾಮ ವರಮೋಕ್ಷ ಫಲಗಳು ಕರುಣಾ ಕಟಾಕ್ಷದಿಂದ ಶ್ರೀಧರ ನಿರುತ ಕೊಡುವ ಪ ಅರಿಷಡ್ವರ್ಗಕೆ ಸಿಲ್ಕಿ ಅರಿಯದೆ ಭವಸಾಗರದೊಳು ಮುಣುಗಿ ಮೈಮರೆದು ಶ್ರೀನರಹರಿ ಶರಣರ ಪೊರೆವ ಬಿರುದುಳ್ಳಂಥ ಗರುಡವಾಹನ ಸಿರಿಯರಸ ಪರಮಾತ್ಮನ ಕಮಲ ಅನುದಿನ 1 ನೆಚ್ಚಿ ನೀ ಮಂದಾಂಧನಾಗಿ ಅಂದು ಪ್ರಹ್ಲಾದ ಪರಮಾನಂದದಿ ಕರೆಯಲು ದ್ವಂದ್ವರೂಪತಾಳಿ ಬಂದು ಕಾಯಿದಾ ವೃಂದಾರ ಕೇಂದ್ರನುತ ಮಂದರಧರ ಮುಚುಕುಂದ ವರದನ್ನ ಸಲಹೆಂದು ಮೊರೆಯ ಹೋಗದೆ 2 ನರಜನ್ಮ ತಾಳಿ ಸುಖಸ್ಥಿರ ಮಾರ್ಗ ಕಾಣದೆ ಸತ್ಪುರುಷರ ಜರಿದು ಗರ್ವ ಭರಿತನಾಗಿ ಮುರನರಕಾಂತಕ ಮುಕ್ತಿದಾಯಕ ಶುಭಕರ ಸ್ಮರಜನಕ ಶ್ರೀಧರ ಮಾಧವ ತ್ವರದಿ ರಕ್ಷಿಸೋಯನ್ನ ಹರಿಸರ್ವೋತ್ತಮ ನೆನದೆ 3
--------------
ಹೆನ್ನೆರಂಗದಾಸರು