ಒಟ್ಟು 37131 ಕಡೆಗಳಲ್ಲಿ , 139 ದಾಸರು , 11109 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾವನು ಗುರುಸಹವಾಸಿ ಅವನಿದ್ದದ್ದೇ ಸ್ಥಳ ಕಾಶಿ ಧ್ರುವ ಕೂಡಿದವರ ತ್ರಿತಾಪಭಂಗಾ ರೂಢಿಗೆ ಮೆರೆವಳು ಙÁ್ಞನಗಂಗಾ ಮೂಡಿಹ ಆತ್ಮಜ್ಯೋತಿ ಲಿಂಗಾ ಕಂಡಿಹ ಗುಣರಾಸೀ 1 ವಿವರಿಸಿ ತಾರಕಮಂತ್ರದ ನೆಲಿಯಾ ಕಿವಿಯೊಳು ಹೇಳಲು ಗುರುರಾಯಾ ಭವ ಭಯಾ ಸ್ವಾನಂದವ ಬೆರೆಸೀ2 ಜನದಲಿ ನಾನಾ ಸಾಧನ ಜರಿದು ಮನದಲಿ ಒಂದೇ ನಿಷ್ಠಿಯ ಹಿಡಿದು ಅನುಮಾನದ ಸಿದ್ಧಾಂತಗಳದು ಸದ್ಭಾವನೆ ಒಲಿಸೀ 3 ಪ್ರೇಮಿಯ ನಿಜಸುಖ ಪ್ರೇಮಿಕ ಬಲ್ಲಾ ಈ ಮನುಜರಿಗಿದು ಭೇದಿಸುದಲ್ಲಾ ಶ್ರೀ ಮಹಿಪತಿ ಬೋಧಿಸಿದನು ಸೊಲ್ಲಾಪೂರಿಸಿ ಮನದಾಸಿ 4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದಾವನು ನಿತ್ಯನಿರಂಜನ ಜನ್ಮನು | ದೇವಕಿ ಗರ್ಭದಿ ಮೂಡೀ | ಅವನ ಮನಿ ಪಾಲ್ಗಡಲು ಯಶೋದೆಯ ಮೊಲೆವಾಲಿಗೆ ಬಾಯಿದೆರೆಯುವವ ನೋಡಿ | ಕೇವಲ ಜ್ಞಾನಮಯನು ಸಕಲೇಂದ್ರಿಯ ಖೂನಿಸಿ ತೋರುವ ಸನ್ನೆಯ ಮಾಡೀ | ಶ್ರೀ ವತ್ಸಾಂಕನು ಗುರುಮಹಿಪತಿ ಪ್ರಭು ಬಾಲಕನಾಗ್ಯಾಡುವ ನಲಿದಾಡೀ 1
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದಾವಲ್ಲಿ ಕೂತಿದ್ದೀಯೊ ರೋಗಿಷ್ಠ ಕಾಯ ಎನ್ನನು ಕಾಯ್ಕೊಂಡು ಪ ಜೀವಕಂಟಕನಾಗಿ ಹೇಯದಿಂದೊಡಗೂಡಿ ಆವಕಾಲದಿ ರೋಗದ್ಹೊರಳುತ ಎಲೆ ಖೋಡಿ ಅ.ಪ ಏನು ಕರ್ಮವ ಮಾಡಿದ್ದೋ ಪಾಪಾತ್ಮ ನೀ ಹೀನಸ್ಥಿತಿಯ ಪೊಂದಿದಿ ನಾನಾವಿಧದಿ ಮಹಬೇನೆಯಿಂ ನರಳುತ ನೀನೆನ್ನ ಜತೆಗೂಡಿ ಬನ್ನಬಡಿಸುವಿ ಪಾಪಿ1 ಹೊಲಸಿನ ದ್ವಾರದಿಂದ ಇಹ್ಯಕೆ ಬಂದಿ ಮಲಮೂತ್ರ ತುಂಬಿಕೊಂಡು ತೊಳೆಯದಿರಲು ನಿಮಿಷ ಹೊಲಸಿಕ್ಕಿನಾರುವಿ ತಿಳಿದುನೋಡಲು ನಿನ್ನ ಸಲಿಗೆಯಿಂ ನಾ ಕೆಡುವೆ 2 ಎನ್ನ ಜೊತೆಯ ಪೊಂದಿರ್ದ ಕಾರಣದಿಂ ನಾ ನಿನ್ನ ಕ್ಷೇಮವ ಬಯಸುವೆ ಎನ್ನಯ್ಯ ಶ್ರೀರಾಮನುನ್ನತಡಿಗಳ ನಂಬಿ ಸನ್ನುತಿಯಿಂ ಕ್ಷಮೆಬೇಡಿ ಧನ್ಯನಾಗೆಲೋದೇಹ್ಯ3
--------------
ರಾಮದಾಸರು
ದಾಸ ಜನರ ಹೃತ್ ತೋಷನೆ ಪುರಂದರದಾಸರಾಯ ಪರಿಪೋಷಿಸೋ ಪ ಅಂಡಜವಾಹ ಬ್ರ | ಹ್ಮಾಂಡ ದೊಡೆಯನಪಿಂಡಾಂಡದಿ ಕಂ | ಢಿಗ್ಗುವ ಮೂರ್ತೇ 1 ಮಹತಿ ನಾಮಕ ವೀಣಾ | ಧರಿಸಿ ಶ್ರೀಹರಿಮಹಿಮೆ ಪೊಗಳಿ ಲೋಕ | ತಿರುಗುವನೇ 2 ಅನ್ನಂತ ಗುಣ ಗುರು | ಗೋವಿಂದ ವಿಠಲಎನ್ನಂತ ರಂಗದೀ | ಕಾಣಿಸೋ 3
--------------
ಗುರುಗೋವಿಂದವಿಠಲರು
ದಾಸ ದಾಸರ ಮನೆಯ ದಾಸಿಯರ ಮಗ ನಾನುಸಾಸಿರ ನಾಮದೊಡೆಯ ರಂಗಯ್ಯನ ಮನೆಯ ಪ ಶಂಕು ದಾಸರ ಮನೆಯ ಮಂಕುದಾಸನು ನಾನುಮಂಕುದಾಸನು ನಾನು ಮರುಳುದಾಸಸಂಕೀರ್ತನೆಯ ಮಾಡಿ ನೆನೆವ ಭಕ್ತರ ಮನೆಯ ಬಿಂಕದಿ ಬಾಗಿಲ ಕಾಯ್ವ ಬಡ ದಾಸ ನಾನಯ್ಯ 1 ಕಾಳಿದಾಸರ ಮನೆಯ ಕೀಳುದಾಸನು ನಾನುಆಳುದಾಸನು ನಾನು ಮೂಳದಾಸಫಾಲಾಕ್ಷ ಸಖ ನಿನ್ನ ಭಜಿಪ ಭಕ್ತರ ಮನೆಯಆಳಿನಾಳಿನ ದಾಸ ಅಡಿದಾಸ ನಾನಯ್ಯ 2 ಹಲವು ದಾಸರ ಮನೆಯ ಹೊಲೆಯ ದಾಸನು ನಾನುಕುಲವಿಲ್ಲದ ದಾಸ ಕುರುಬ ದಾಸಛಲದಿ ನಿನ್ನ ಭಜಿಪರ ಮನೆಯ ಮಾದಿಗ ದಾಸಸಲೆ ಮುಕ್ತಿ ಪಾಲಿಸೆನ್ನೊಡೆಯ ಕೇಶವನೆ 3
--------------
ಕನಕದಾಸ
ದಾಸ ದಾಸರು ಪೇಳುತಿಹರಲ್ಲಾ ಕೇಶವಾ ಎಂದು ತಾಸು ತಾಸಿಗೆ ಪೇಳುತಿಹರಲ್ಲಾ ಪ ರಾಮನೆಂಬರು ನಿಮಿಷ ನಿಮಿಷಕೆ ನೇಮದಿಂದಲಿ ಹರಿಯ ಭಜಿಪರು ರಾಮನಾಮವ ಹಲವು ವಿಧದಲಿ ಪ್ರೇಮದಿಂದಲಿ ಸ್ಮರಿಸುತಿಹರು 1 ಮಾತು ಮಾತಿಗೆ ಕೃಷ್ಣಯೆಂಬರು ನೀತಿ ನೀತಿಗೆ ವಿಠಲಯೆಂಬರು ಸೇತು ಬಂಧನ ಸ್ವಾಮಿ ನಾಮವ ನಿತ್ಯ ನುಡಿಯಲಿ ನೆನೆಯುತಿಹರು 2 ಕಾಲ ಕಾಲಕೆ ಶೇಷಶಾಯಿಯ ನೀಲರೂಪನ ನಾಮ ಸವಿಯುತ ಮೂರ್ತಿ ಕೀರ್ತನೆ ವೇಳೆ ವೇಳೆಗೆ ಮಾಡುತ 3 ನಿತ್ಯ ಮಾರ್ಗದಿ ನಾವೆ ರೂಪವ ಧರಿಸಿ ಭವದೊಳು ರಾವಣಾಂತ ಕನಡಿಯ ಸೇರುವ 4
--------------
ಕರ್ಕಿ ಕೇಶವದಾಸ
ದಾಸ ನಾನೆಂಬೇ ಗುರು ಭಕುತರಾ ಪ ಗುರುವೇ ಜನಕ ಘನ ಗುರುವೇ ಜನನಿಯ | ಗುರುವೇ ಗೆಳೆಯ ನಿಜ ಗುರುವೇ ಆತ್ಮನು | ಗುರುವೇ ಬಂಧುವು ಗುರುವೇ ಇಷ್ಟನು | ಗುರುವೇ ಗತಿಮತಿ ಗುರುವೆಂದವರಾ 1 ಗುರುವೇ ಚತುರ್ಮುಖ ಗುರು ಕಮಲಾಂಬಕ | ಗುರುವೇ ಸದಾಶಿವ ಗುರುವೇ ಸಂತರು | ಗುರುವೇ ಸುರಭಿಯ ಗುರು ಚಿಂತಾಮಣಿ | ಗುರು ಧನದ್ರವ್ಯನು ಗುರುವೆಂದವರಾ 2 ಗುರು ವಚನವೇ ಶೃತಿ ಗುರುದಯ ಮುಕ್ತಿಯು | ಗುರು ಗೃಹ ಕ್ಷೇತ್ರವು ಗುರು ನೋಟ ಪರಸವು | ಗುರು ಸ್ಮರಣೆಯೇ ಜಪ ಗುರು ಮಹಿಪತಿ ಪ್ರಭು | ಗುರು ಭಕ್ತಿಯೇ ತಪ ಗುರುವೆಂದವರಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದಾಸ ನಾನೆಲೊ ಹರಿದಾಸ ನಾನೆಲೊ ಶ್ರೀಶ ನಿಮ್ಮ ಶ್ರೀಪಾದಕಮಲ ಪ ಭವಭವದಿ ಜನಿಸಿ ಜನಿಸಿ ಬವಣಿಸಿದ್ದನುಭವಕ್ಕೆ ತಂದು ಭವಭೀತನಾಗಿ ನಿಮ್ಮ ಪಾವನಂಘ್ರಿ ಮರೆಯಹೊಕ್ಕೆ1 ಶರಧಿ ಈಸಿ ಪರಲೋಕ ಪಥದಿ ನಿಂತು ಪರಕೆ ಪರಮಪರತರನ ಪರಮಬಿರುದುಪೊಗಳುವಂಥ 2 ಶರಣಾಗತವತ್ಸಲ ನಿನ್ನ ಚರಣನಂಬಿ ಶರಣು ಮಾಳ್ಪೆ ತರಳನಾಲಾಪ ಕರುಣದಾಲಿಸಿ ಚರಣದಾಸಸೆನಿಸಿಕೊ ಶ್ರೀರಾಮ 3
--------------
ರಾಮದಾಸರು
ದಾಸ ಪಟ್ಟವೋ ಸನ್ಯಾಸ ಪಟ್ಟವೋ ಪ ಆಸೆಯಿಂದ ನೆಲೆಯಾದಿಕೇಶವನ್ನ ನೆನೆಯದವಗೆಅ ಮಂಡೆ ಬೋಳು ಮಾಡಿ ನಾಮದುಂಡೆಯನ್ನು ಬರೆದು ಕೆಡಿಸಿಕಂಡಕಂಡವರನು ಕೂಡಿಭಂಡ ಜನ್ಮ ಹೊರೆಯುವವಗೆ 1 ಅವರಿವರ ಕೈಯ ನೋಡಿ ಹ-ಲವು ಕೆಲವು ಮಾತನಾಡಿ ಹ-ಲವ ಹಂಬಲಿಸಿ ದಿ-ನವ ಕಳೆದು ಉಳಿದು ಬಾಳುವಗೆ 2 ಬೆಂದ ಸಂಸಾರವೆಂಬಬಂಧನದೊಳಗೆ ಸಿಲುಕಿಕೊಂಡುಚೆಂದಾದಿಕೇಶವನ್ನಒಂದು ಬಾರಿ ನೆನೆಯದವಗೆ 3
--------------
ಕನಕದಾಸ
ದಾಸಕೂಟ ವರ್ಣನೆ ಸಾಟಿಯುಂಟೆ ಶ್ರೀನಿವಾಸನ ದಾಸಕೂಟದ ಮ್ಯಾಳಕೆ ಬೂಟಕದ ಮಾತಲ್ಲ ಕೇಳಿರಿ ಭಜನೆ ಮಾಡುತ ತಾಳಕೆ ಪ. ವಾಸುದೇವನ ವರ್ಣಿಸಲು ಕಮಲಾಸನಾದಿ ಸುರೇಂದ್ರರು ದಾಸಜನರ ಸಮೂಹದೊಳಗಾವಾಸವಾಡುತ ನಲಿವರು ಸೂಸುತಿಹ ಗಂಗಾದಿನದಿಗಳು ಬ್ಯಾಸರದೆ ಬಂದಿರುವವು ಕೇಶವನ ಕೊಂಡಾಟ ಧರೆಯೊಳು ಮೀಸಲಳಿಯದೆ ಮಧುರವು 1 ಬಾರಿಸುತ ತಂಬೂರಿ ತಾಳವ ನಾರದರ ಸಂಸ್ಮರಿಸುತ ಭೂರಿ ಕಿಂಕಿಣಿ ಮದ್ದಳೆಯ ಶೃಂಗಾರ ರಸವನು ಸುರಿಸುತಾ ವಾರಿಜಾಕ್ಷನ ಪರಮಮಂಗಳ ಮೂರುತಿಯ ಮುಂದಿರಿಸುತ ಮಾರುತನ ಮತವರಿತು ಬಹುಗಂಭೀರ ಸ್ವರದಿಂದರುಹುತಾ 2 ಹಿಂದೆ ಗಳಿಸಿದ ಹಲವು ದುರಿತವು ಕುಂದುವುದು ನಿಮಿಷಾರ್ಧದಿ ಅಂದಿನಂದಿನ ದೋಷದುಷ್ಕøತವೊಂದು ನಿಲ್ಲದು ಕಡೆಯಲಿ ಇಂದಿರಾಧವ ಶೇಷ ಭೂಧರ ಮಂದಿರನು ಮಹ ಹರುಷದಿ ಮುಂದೆ ನಲಿವುತ ಮನಕೆ ಪೂರ್ಣಾನಂದವೀವನು ನಗುತಲಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ದಾಸಗುರೂ | ದಾಸಗುರೂ | ವಾಸವ ನಾಮಕ ಪ ಭೂಸುರರಿಗೆ ಧನರಾಶಿ ಸಮರ್ಪಿಸಿ ವ್ಯಾಸರಾಯರುಪದೇಶಗೊಂಡ ಹರಿ ಅ.ಪ ಜಲಜಭವನ ಪಿತನಾಜ್ಞೆಯಲಿ ಕಲಯುಗದಲಿ ಜನ್ಮ ತಾಳುತಲಿ ಅಲವ ಬೋಧಾಮೃತ ನೆಲೆಯನು ಸುಲಭದಿ ತಿಳಿಗನ್ನಡದಲ್ಲಿ ತಿಳಿಸಿ ಸಲುಹಿದ 1 ಪವನದೇವನ ಒಲಿಸುತಲಿ | ಮಾ ಧವನ ಸ್ತುತಿಸಿ ಸಲೆ ಕುಣಿಯುತಲಿ ಕವನದಿ ಭಕುತಿಯ ನವವಿಧ ಮಾರ್ಗವ ಅವನಿಗೆ ಬೀರಿದ ದಿವಜ ಮೌನಿವರ 2 ಕಾಮಿತ ಫಲಗಳ ಗರಿಯುತಲಿ ಬಲು ಪಾಮರ ಜನರನು ಸಲಹುತಲಿ ಶ್ರೀಮನೋವಲ್ಲಭ ಶಾಮುಂದರ ನಾಮಾಮೃತವನು ಪ್ರೇಮದಿಂದುಣಿದ 3
--------------
ಶಾಮಸುಂದರ ವಿಠಲ
ದಾಸಗೆ ಭಯವೆಲ್ಲಿ ದಾಸಗೆ ಭಯವೆಲ್ಲಿ ಪ ದಾಸನಾಗದವಗೆ ಭಯವೆಂದಿಗು ತಪ್ಪದು ದಾಸನಾಗಿಹಗೆ ಭಯವೆಂದಿಗು ಬಾರದು 1 ತರಳ ಪ್ರಹ್ಲಾದಗೆ ಭಯವೆಂದಿಗು ಸೋಂಕಲಿಲ್ಲ ತರಳನ ಪಿತಗೆ ಭಯವೆಂದಿಗು ತಪ್ಪಲಿಲ್ಲ 2 ಲಂಕೆಯೊಳಿದ್ದರೂ ದಶಕಂಠನಿಗತಿ ಭಯ ಲಂಕೆಯ ಬಿಟ್ಟ ವಿಭೀಷಣನಿಗಭಯ 3 ಹರನ ಪೀಡಿಸಿದಾ ಭಸ್ಮಾಸುರಗೆ ಭಯ ಹರಿಯ ಸ್ತುತಿಸಿದ ಮಹಾದೇವನಿಗಭಯ 4 ರಾಜೇಶ ಹಯಮುಖನೊಲಿದವನಿಗಭಯ 5
--------------
ವಿಶ್ವೇಂದ್ರತೀರ್ಥ
ದಾಸಜನಕೆ ಸಹಯನಾಗಬಾರದೆ ಪಾದ ಪ ಕಾಸಿನ ಋಣಕಂಜಿ ಆಶಿಸಿ ಪರರಿಂದಾ ಯಾಸದಿ ಬೇಡುವ ಭೋಗ ತಪ್ಪಿಸಲಿಕ್ಕೆ 1 ಎಂದಿಗಾದರಿದು ಒಂದಿನ ನಿಜವಾಗಿ ಕುಂದುವ ಈ ಭವಬಂಧ ತಪ್ಪಿಸಲಿಕ್ಕೆ 2 ಜ್ಞಾನಿಗಳಾಸ್ಪದ ಜ್ಞಾನಮೂರುತಿ ಮಮ ಪ್ರಾಣ ಶ್ರೀರಾಮ ನಿನ್ನ ಧ್ಯಾನ ನಿಲ್ಲಿಸಲಿಕ್ಕೆ 3
--------------
ರಾಮದಾಸರು
ದಾಸನ ಮೇಲಿಷ್ಟು ಬೇಸರವ್ಯಾಕೋ ಶೇಷಶಯನನೆ ನಿನ್ನ ಧ್ಯಾಸದೊಳಿರುವ ಪ ನಶಿಸಿಹೋಗುವ ಕಾಯದ್ವ್ಯಸನವನು ಪರಿಹರಿಸಿ ಹಸನಾದ ಮತಿಯೆನಗೆ ಒಸೆದು ನೀಡೆಂದು ನಿಶಿದಿವದಿ ನಿನ್ನಡಿಕುಸುಮಗಳನಂಬಿ ಮಾ ನಸದಿ ಭಜಿಸಲು ಎನಗೊಶನಾಗದಿರುವಿ1 ಜಡತನದ ಸಂಸಾರ ತೊಡರೆಡರು ಕಡಿದು ಗಡ ಜಡಮತಿಯ ತೊಡೆದೆನಗೆ ದೃಢ ನಿಶ್ಚಯವನು ಕೊಡುಯೆಂದು ದೃಢದಿ ನಿನ್ನಡಿಗೆರಗಿ ಬೇಡಿದರೆ ಒಡಲೊಳಗೆ ನಿಂದೆನ್ನ ಜಡತನಳಿವಲ್ಲಿ 2 ಶ್ರೀಶ ಶ್ರೀರಾಮ ನಿನ್ನ ಧ್ಯಾನಮಾಡಲು ಒಮ್ಮೆ ಅಘ ನಾಶನಲ್ಲೇನು ದಾಸಜನಕರುಣಾಬ್ಧಿ ದಾಸನೊಳ್ದಯವಾಗಿ ಪೋಷಿಸೈ ತವಪಾದ ನಿಜಧ್ಯಾಸವಿತ್ತು 3
--------------
ರಾಮದಾಸರು
ದಾಸನಾಗಬೇಕು ಮನದಲಿ ಆಸೆಯಿಂಗಬೇಕು ಪ ಮೋಸಮೆಂಬುದಂಕುರಿಸದ ಅದರ ವಾಸನೆಯಂಟದ ಮಾನಸದಲಿ ಹರಿಅ.ಪ ಅತಿಮಾತಾಡುವ ಸತಿಯಿರಬೇಕು ಖತಿಯಿಂತೆರಳುವ ನೆಂಟರು ಬೇಕು ಹಿತವನು ಬಯಸದ ಸುತರೂ ಬೇಕು ಸತತಮಿವೆಲ್ಲರ ಸಹಿಸಿ ಭಜನೆಗೈವ 1 ತಣಿವಿಲ್ಲದೆ ತಿಂಬ ಅಣುಗರು ಬೇಕು ಹಣವ ಕೊಡೆಂಬುವ ಅಳಿಯರು ಬೇಕು ಋಣಬಾಧೆಗಳೊಳು ಕೊರಗಲು ಬೇಕು [ಅಣು ಅಣು ಕಾಡುವ ಸಂಸಾರಕಂಟದೆ] 2 ಮಾನಸವ ಬಿಗಿಹಿಡಿದಿರಬೇಕು ಧ್ಯಾನದೊಳಾತ್ಮಶಾಂತಿಯು ಬರಬೇಕು ಶ್ರೀನಿವಾಸನೇ ಶರಣೆನಬೇಕು ಜ್ಞಾನದಿ ಮಾಂಗಿರಿರಂಗನ ಪಾದದ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್