ಅಂಬಾ ತ್ರಿಪುರ ಸುಂದರೀ ಅದ್ವೈತಕಾರೀ
ಸಾಂಬೆ ಪರಬ್ರಹ್ಮಣಿ ಪ
ಶುಂಭಾಸುರ ಮರ್ದಿನೀ ಸಹಜಾನಂದೆಕ್ಯವಾಣಿ
ತುಂಬುರಗಾನ ಪ್ರಿಯೆ ಮಹಾಮಾಯೆ
ಸುಖದಾಯೆ ಸರಸಿಜದಳಾಯೆ ಅ.ಪ.
ತ್ರಿದಶ ವಂದಿತೆ ತ್ರಿಮೂರ್ತಿ ತ್ರೈಲೋಕ್ಯಗಾತ್ರಿ
ತ್ರಿಗುಣರಹಿತೆ ಪಾರ್ವತಿ ತ್ರಿಪುರ ಪ್ರಹಾರೆ
ದೇವೀ ತ್ರಿಶೂಲಧರ ಸಂಜೀವಿ
ತ್ರಿಗುಣ ಸೋಮ ಸೂರ್ಯಗ್ನಿ ನೇತ್ರೆ
ಶುಭಗಾತ್ರೆ ಸುಚರಿತ್ರೆ ಸನ್ಮುನಿಸ್ತೋತ್ರೆ 1
ಪರತರದೇವಿ ಪರಮಪಾವನ ಪ್ರಭಾವಿ
ಪರಮಾತ್ಮ ಸ್ವರೂಪಿಣಿ ಪರಮಾನಂದೆಕ್ಯವಾಣಿ
ಪರಿಪೂರ್ಣಭರಿತೆ ಶರ್ವಾಣಿ
ಶಿವರಾಣಿ ಫಣಿವೇಣಿ ನಿತ್ಯಕಲ್ಯಾಣಿ 2
ವರಕೊಡಶಾದ್ರಿ ನಿವಾಸೆ ವರÀಸುಪ್ರಕಾಶೆ
ವರ ಸಿಂಹಾ ರೂಢೆ ಮಹೇಶೇ
ವರದೇ ಶ್ರೀ ಮೂಕಾಂಬಿಕೇ
ವಿನುತಾನಂದೈಕ್ಯರೂಪಿ ಗುರುವಿಮಲಾನಂದ ಸ್ವರೂಪಿ
ಸುಪ್ರತಾಪಿ ಸ್ತುತಿ ದೀಪಿ ಮಂತ್ರಕಲಾಪಿ 3