ಒಟ್ಟು 6145 ಕಡೆಗಳಲ್ಲಿ , 127 ದಾಸರು , 3945 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿನ ದಿನವೇ ಶುಭದಿನವು | ಇಂದಿರೇಶನ ಕೀರ್ತಿಯ ಕೊಂಡಾಡಿದೆವೆಂದು ಪ ಮುನ್ನ ಮಾಡಿದ ಜನ್ಮಾಂತರದ ದುಷ್ಕ್ರತವೆಂಬ | ಘನ್ನ ಕೆಸರಸೋಸಿ ಹೃದಯ ಶುದ್ದಾಯಿತೆಂದು 1 ತರಣಿ ಉದಯವಾಗಿ | ಪರಿಹಾರಾಯಿತು ಅಜ್ಞಾನವೆಂಬ ಕತ್ತಲೆಯಿಂದು 2 ಕಂದ ನೊಡೆಯ ತನ್ನ ಸ್ಮರಣೆ ಕೊಟ್ಟನೆಂದು3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇಂದಿರಾ ಕಾಂತನೆ ಪೊರೆ ಶ್ರೀ ಹರೇ ಪ ನಂದ ನಂದನ ದಿವ್ಯ ಸುಂದರ ಮಂದಾರ ಅ.ಪ. ವಲ್ಲವೀ ಕುಚತಟ ಪಲ್ಲವ ಕುಂಕುಮ ಚೆಲ್ವಕಪೋಲನೆ ಸಲ್ಲಲಿತಾಂಗನೆ 1 ಮನ್ನಿಸು ಭಾಸುರ ರೂಪನೆ 2 ಬಾಲಕ ಧ್ರುವನುತ ಲೀಲಾವಾಮನ ರೂಪ ಬಾಲ ಗೋಪಾಲ ಭೂಲೀಲಾ ವಿಹಾರಿಯೆ 3 ಚಾಪಾ ಪಾಪಾಳಿ ಖಂಡನ ಭೂಪ ನಿರ್ಲೇಪನೆ 4 ಕಂಸವಂಶಾಂತಕ ವಂಶವಿನೋದಿಯೆ ಅಂಶುಕ ಭಾಸುರ ಧೇನುಪುರಾಧೀಪಾ 5
--------------
ಬೇಟೆರಾಯ ದೀಕ್ಷಿತರು
ಇಂದಿರಾ ರಮಣ ಗೋವಿಂದನಾ ಜ್ಞೆಯ ಪಡೆದು ಬಂದಿರುವ ದಾಸರಿವರು ಪ ಇಂದು ಧರ್ಮದಿ ಹರಿಯ ಬಾಂಧವರ ಗೃಹ ಸ್ವರ್ಣ ಮಂದಿರವಾಗುವುದೆಂದು ಸಂದೇಶ ಕಳಿಸಿರುವ ಅ.ಪ ಸತ್ವ ರಜ ತಮ ಭೇದವಿಹುದು ದಾನಗಳಲ್ಲಿ ಕರ್ತವ್ಯವೆಂದರಿತು ಭಕ್ತಿಯಿಂದ ಉತ್ತಮೋತ್ತಮ ದೇಶ ಪಾತ್ರ ಕಾಲಗಳರಿತು ಪ್ರತ್ಯುಪಕೃತಿಯ ಗಣಿಸದಿತ್ತ ದಾನವೇ ಶ್ರೇಷ್ಠ 1 ಶ್ರಾವಣದ ಶನಿವಾರ ಶ್ರೀ ವ್ಯಾಸರಾಜರ ಮಾಧವ ದೇಶಕಾಲ ಪಾತ್ರ ಈ ವಿಧದ ಯೋಗವಿನ್ಯಾವ ಜನಗಳಿಗುಂಟು ನೀವು ನೀಡುವ ದಾನ ಕಾವುದಾಪತ್ತಿನಲಿ 2 ಒಂದು ಹಿಡಿಯವಲಕ್ಕಿ ತಂದಿತಾ ಬ್ರಾಹ್ಮಣಗೆ ಎಂದೂ ಕೇಳದ ಸಕಲ ಸೌಭಾಗ್ಯವ ಇಂದು ನೀಡಿರಿ ಮಿತ್ರ ಬಾಂಧವರೆ ದೇವಕಿಯ ಕಂದನ ಪ್ರಸನ್ನತೆಯ ಬಂದು ಪಡೆಯಲಿಬಹುದು 3
--------------
ವಿದ್ಯಾಪ್ರಸನ್ನತೀರ್ಥರು
ಇಂದಿರಾದೇವಿಯ ರಮಣ ಬಾ ವೃಂದಾರಕ ಮುನಿವಂದ್ಯ ಬಾ ಸಿಂಧುಶಯನ ಗೋವಿಂದ ಸದಮಲಾ ನಂದ ಬಾ ಮಾವನ ಕೊಂದ ಬಾ ಗೋಪಿಯ ಕಂದ ಬಾ ಹಸೆಯ ಜಗುಲಿಗೆ ಶೋಭಾನೆ 1 ಕೃಷ್ಣವೇಣಿಯ ಪಡೆದವನೆ ಬಾ ಕೃಷ್ಣನ ರಥ ಹೊಡೆದವನೆ ಬಾ ಕೃಷ್ಣೆಯ ಕಷ್ಟವÀ ನಷ್ಟವ ಮಾಡಿದ ಕೃಷ್ಣ ಬಾ ಯದುಕುಲ ಶ್ರೇಷ್ಠ ಬಾ ಸತತ ಸಂ ತುಷ್ಟ ಬಾ ಉಡುಪಿಯ ಕೃಷ್ಣ ಬಾ ಹಸೆಯ ಜಗುಲಿಗೆ ಶೋಭಾನೆ 2 ಎಲ್ಲರೊಳು ವ್ಯಾಪಕನಾಗಿಪ್ಪನೆ ಬಲ್ಲಿದ ಧೊರೆಯೇ ಜ್ಞಾನಿಗಳರಸನೆ ಎಲ್ಲಿ ನೋಡಲು ಸರಿಗಾಣೆ ವಿಜಯವಿ- ಠ್ಠಲ ಬಾ, ಅಪ್ರತಿಮಲ್ಲ ಬಾ ನೀ- ಹಸೆಯ ಜಗುಲಿಗೆ ಶೋಭಾನೆ 3
--------------
ವಿಜಯದಾಸ
ಇಂದಿರೆ ನಿನ್ನೊಳ್ ದೇವ ಶ್ರೀಹರಿಗಿಪ್ಪ ಪ್ರೇಮವ ಬಣ್ಣಿಸಲಸದಳ ಕಂಡ್ಯ ಪ ಜಕ್ಕ ಜವ್ವನ ಪೋಗಬಾರದೆಂದೆನುತಲಿ ಮಕ್ಕಳ ನಿನ್ನೊಳು ಜನಿಸನು ಕಂಡ್ಯ ಅಕ್ಕರೆಯನು ಶ್ರೀದೇವಿ ನೀ ಕಂಡ್ಯ 1 ಉರದೊಳು ತೊಡೆಯೊಳು ಕೊಳಲೊಳಾಭರಣದೊಳು ಕರಗಳಿಂದಲಿ ಪಾಶ್ರ್ವದೊಳಗಾಲಿಂಗಿಸಿದಾ ನೀರೊಳಕ್ರೂರಗೆ ಒಲಿಯುವಾಗಲು, ಮಹಾ ನೀರೊಳು ಪ್ರಳಯದಿ ನಿನ್ನನು ಬಿಡನು 2 ರಾಜಾಧೀರಾಜರು ಬಹುದಾರರೆಂಬರು ರಾಜೀವಾಕ್ಷನಿಗೆ ನೀನೊಬ್ಬಳೆ ಕಂಡ್ಯ ರಾಜೇಶಹಯಮುಖನಂಥ ಪ್ರೇಮಿಗಳುಂಟೆ ರಾಜೇಶ ಶ್ರೀರಾಮನರಸಿಯೊಬ್ಬಳೆ ಕಂಡ್ಯ 3
--------------
ವಿಶ್ವೇಂದ್ರತೀರ್ಥ
ಇಂದಿರೆ ಪತಿ ಭಂಗಬಡುವ ವಿಷಯಂಗಳಿಗೆರಗದೇ ರಂಗ ನಿನ್ನಯ ಮಂಗಳಂಗುಟರ್ಚಿಸುವಂತೆ 1 ಉದರ ಪೋಷಣೆಗಾಗಿ ಸದೆಬಡಿಗನಾಗದೇ ಸದಮಲ ನಿನ್ನೂಳಿಗದವನಾಗುಳಿವಂತೆ 2 ಶರೀರ ಸಂಬಂಧಿಗಳಲ್ಲಿರುವ ಪ್ರೇಮವ ತಂದು ಗುರು ಮಹಿಪತಿ ಪ್ರಭು ಸ್ಮರಣೆಯೊಳಿರುವಂತೆ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇಂದಿರೆ ರಮಣಾ ಪಬಂದನೋಡು ಆನಂದದಿಂದ ಗೋ'ಂದಗೋಕುಲಾನಂದ ಮುಕುಂದಾ ಅ.ಪಶ್ರೀ ಕೇಶವ ನಾರಾಯಣಮಾಧವಶ್ರೀಧರ ಗಿರಿಧರ ಗೋವರ್ಧನಧರಶ್ರೀ ದಾಮೋದರ ಪದ್ಮನಾಭಮುಚಕುಂದವರದ ಮುರಹರ ಶ್ರೀಕೃಷ್ಣ 1ಸರ್ವೋತ್ತಮ ಸರ್ವಜ್ಞ ಶಿಖಾಮಣಿಸರ್ವಪ್ರೇರಕ ಸರ್ವವ್ಯಾಪಕಸರ್ವಾಧಾರಕ ಸರ್ವ ನಿಯಾಮಕಸರ್ವತಂತ್ರ ಸ್ವತಂತ್ರ ಸಮರ್ಥಾ 2ಗೋಪಾಲಾಚ್ಯುತ ಗೋಪ ಕಿಶೋರಾಗೋಪಿ ಜನಮನ ಚಂದ್ರ ಚಕೋರಾಆಪದ್ಬಾಂಧವ ಭೂಪತಿ'ಠ್ಠಲಕೈಪಿಡಿದೆಮ್ಮನು ಕಾಪಾಡಲು ಬಾ 3ಪಾದ ಮ'ಮೆ
--------------
ಭೂಪತಿ ವಿಠಲರು
ಇಂದಿರೆ ಇಂದೀವರಾಕ್ಷಿ- ಸುಂದರಿ ಅರ- ವಿಂದ ಮಂದಿರೆ ಪೂರ್ಣೆ | ಪ ಇಂದುವದನೆ ಅಮರೇಂದ್ರ ವಂದಿತೆ | ಸಿಂಧುಸುತೆ ಆನಂದ ಫಲದೆ ಅಪ ರಾರರಮಣನ ಸೋಲಿಪ ನಖದಕಾಂತಿ | ಚಾರು ಚರಣತಳ ವಾರಿಜಾಂಕುಶ ಧ್ವಜ | ವಾರಣ ಕನಕ ಮಂಗಳರೇಖೆವೊಪ್ಪೆ | ನೂ- ಪುರ ಕಡಗ ಪೆಂಡ್ಯೆ ಪರಡೆ ಜಾನು ಜಂಘೆ | ಕಟಿ ನಾಭಿ ಉದರ ತ್ರಿವಳಿ | ಧಾರ ಶೋಭನವಾದ ಹೊನ್ನುಡಿ | ಧಾರ ಕಿಂಕಿಣಿ ತೋರಮುತ್ತಿನ- ಹಾರ ಉರವಿಸ್ತಾರ ಗುಣವಂತೆ 1 ಕಂಬು - ಗ್ರೀವ ಸರಿಗೆ ದಿವ್ಯಚಂದನ ಲೇಪಿಸಿ | ಕಂಚುಕ ಹಸ್ತಕಡಗ ಮುದ್ರೆ ಪ್ರವಳಮಣಿಯು ಕೇಯೂರ ದಂಡೆಯ ಸರ | ಬೇವಿನೆಸಳಂತೆ ಪುಬ್ಬು ಢಾಳಿಪ | ತಾವರೆಯ ಫಣೆಯೂ ಸಂಪಿಗೆ | ನಾಸಿಕ ವೇಣಿ | ಹಾವಿನಂದದಿ ಒಪ್ಪುತಿರೆ ದೇವಿ 2 ವಾಲೆಮೂಗುತಿ ಹೊನ್ನಹೂವು ತೂಗುವ ತುಂಬು | ಕದಪು ಮುಂಗೂದಲು | ಮೇಲೆ ರ್ಯಾಕಟೆ ಚೌರಿ ಮುಡಿದ ಕುಸುಮವು | ಸಾಲು ಮುತ್ತಿನ ಜಾಳಿಗೆ ಗೊಂಡ್ಯ ಶಿರದಲ್ಲಿ | ಪಾಲ ಸಾಗರ ಶಾಯಿ ವಿಜಯವಿ- ಠ್ಠಲರೇಯನ ಉತ್ಸಾಹದಲಿ | ತೋಳಿನಲ್ಲಿ ಬಿಗಿದಪ್ಪಿ ಪವಳಿಪ | ಶ್ರೀ ಲಕುಮಿ ತ್ರೈಲೋಕ್ಯ ಮಾತೆ 3
--------------
ವಿಜಯದಾಸ
ಇಂದಿರೆ ಚಂದಿರವದನೆ ಮಂದಗಮನೆ ಕಂದರ್ಪ ಕೋಟಿ ಲಾವಣ್ಯೆ ಪ ಮಂದನಾಗಿ ಭವಸಿಂಧುವಿಲಿ ಪೊಂದಿದೆ ಬಂದು ನೀ ಕರಪಿಡಿದು ಮುಂದಕೆ ಕರೆಯೆ ಅ.ಪ. ನಾಗವೇಣಿಯೆ ಸುರಶ್ರೇಣಿ ಅಗಣಿತಗುಣಮಣಿಯ ಹೊಗಳುವ ಮತಿ ನೀಡೆ ಕಲ್ಯಾಣಿ ಹಗಲಿರುಳು ನಡೆಯುವ ಬಗೆ ಬಗೆ ಕ್ರಿಯೆಗಳು ನಗಧರನೆ ಮಾಳ್ಪಾನೆಂಬ ಮಿಗೆ ಜ್ಞಾನ ಪಾಲಿಸೆ 1 ಸರಸಿಜೋದ್ಭವ ಮಾತೆ ವಿಖ್ಯಾತೆ ನಿಕರ ಸನ್ನುತೆ ಕಂಕಣಾಭರಣ ಭೂಷಿತೆ ಕರೆ ಕರೆಗೊಳಿಸುವ ಅಹಂ ಮಮತೆ ಶರಧಿಯು ತೆರೆಯಂತೆ ಬರುವುದು ಮರೆಸಿ ನೀ ಪೊರೆಯೆ 2 ಹರಿಗುಣ ಮಣಿಯೆಣಿಸುವ ಧೀರೆ ಪರಿಪರಿ ಅಲಂಕಾರೆ ಸ್ಮರಿಸದವರಿಗೆ ದೂರೆ ಅರಿದೂರ ವಿಜಯ ರಾಮಚಂದಿರವಿಠಲನ ನಿರುತ ಧೇನಿಸುವಂತೆ ಮರೆಯದೆ ಮಾಡೆ ತಾಯೆ 3
--------------
ವಿಜಯ ರಾಮಚಂದ್ರವಿಠಲ
ಇಂದಿರೆ ನಿನ್ನ ಪೂಜೆ ಛೆಂದಾಗಿ ಮಾಡುವೆ ನಾನು ಪ ಮಂದಹಾಸದಿ ಮೋದದಿಂದಲೇ ನೋಡು ದಯದಿ ಅ.ಪ. ಜರದ ಪೀತಾಂಬರ ಕರದೊಳು ಧರಿಸಿರುವೆನೆಎರಕೋ ಹರಿಯ ಕೂಡ ಸರಸಿಜದಳ ನೇತ್ರಿಯೇ 1 ಮಂದಾರ ಮಲ್ಲಿಗೆ ಕುಂದದ ಚಂಪಕ ಜಾಜಿತಂದು ನಿಂತಿಹೆ ಹರಿಸುಂದರಿ ಸರಸದಿ ಮುಡಿಯೇ 2 ಭುಂಜಿಸು ಬೇಗ 3 ಹರಡಿ ಕಂಕಣ ದುಂಡು ಹೆರಳು ಭಂಗಾರಗಳನುಹರುಷದಿಂದಲಿ ಕೃಷ್ಣನರಸಿ ತಂದಿಹೆ ನಿನಗೆ4 ಚಂದ್ರಶೇಖರ ಸುರವೃಂದಾದಿ ವಂದಿತ ಚರಣೆಇಂದಿರೇಶನ ಸಹ ಬಂದಿಲ್ಲಿ ತೋರಿಸು ಮುಖವಾ 5
--------------
ಇಂದಿರೇಶರು
ಇಂದಿರೇಶ ದಯದಿಂದಲಿ ತ್ವರಿತದಿ ಬಂದು ಒದಗಿ ಸಲಹೊ ಸುಧೆಯಾನಂದ ಉಣಿಸಿದ ಪ. ಇನ್ನು ನಿರೀಕ್ಷಿಸಲೆನಗೆ ಸಾಧ್ಯವಿಲ್ಲ ಅನ್ಯ ಸಾಧನವಿಲ್ಲ ಮುನ್ನಿನ ಮಾರ್ಗದ ರೀತಿಯ ನೋಡಲು ಮನ್ನಿಪ ಜನರಿಲ್ಲ ಧನ್ಯ ವಿಬುಧ ಗಣ ಮಾನ್ಯ ಮುಕುಂದನೆ ಮಾಧವ 1 ದಾರು ನೀನಲ್ಲದೆ ಮಾರಮಣನೆ ನಿನ್ನ ಸೇರಿದ ಬಳಿಕೀ ಧಾರುಣಿ ಒಳಗೆ ನಿವಾರಣೆಯದೇನೊ ಮೂರು ದೊರೆಗಳಲಿ ವಾರಿಜನಾಭ ನೀ ಪ್ರೇರಕನಾಗಿರೆ ಘೋರವಾವರಿಸುವುದೆ 2 ತಪ್ಪುಗಳೆಲ್ಲವ ಒಪ್ಪಿಕೊಳ್ಳೊಯೆನ್ನಪ್ಪ ನೀ ಕರುಣದಲಿ ಒಪ್ಪಿಸಿ ಪಡದನು ತಪ್ಪದೆ ಮನದೊಳಗಿಪ್ಪ ವ್ಯಸನ ಬಿಡಿಸೊ ಸರ್ಪ ಗಿರೀಂದ್ರನೊಳೊಪ್ಪುವ ಸತ್ಯ ಸಂ- ಕಲ್ಪ ಭಜಕ ನಿಜ ಕಲ್ಪತರುವೆನಿಪ 3
--------------
ತುಪಾಕಿ ವೆಂಕಟರಮಣಾಚಾರ್ಯ
ಇಂದಿರೇಶ ನಿನ್ನ ಚರಣದ್ವಂಧ್ವವನ್ನು ಬಿಡೆನೊ ಕರುಣಾ ನೊಂದಿರುವೆನೊ ಮನದಿ ಬಹಳ ಹಿಂದುಮುಂದು ತೋರದಿಹುದು ಬಂಧು ಬಳಗವೆಲ್ಲ ನೀನೆ ಎಂದಿಹೆನೊ ಅರವಿಂದಲೋಚನ ಅ.ಪ ಊರು ಊರು ಸುತ್ತಿ ದಣಿದು ಸಾರರಹಿತ ಶಾಸ್ತ್ರಗಳ ವಿ ಕಾಲ ಕಳೆದೆನೋ ಉದಾರಚರಿತ ಭೂರಿ ಕರಣದಿಂದ ನಿನ್ನ ಚಾರುಚರಣ ಸೇವೆ ರುಚಿಯು ತೋರಿ ಮನಕೆ ಸಂತಸದಿ ಮುರಾರಿ ಎನಗೆ ಗತಿಯೆನುತಲಿ 1 ದುರಿತ ಸ್ತೋಮಗಳಲಿ ಮುಳುಗಿ ಬಳಲಿದೆನೊ ನಿಸ್ಸೀಮ ಮಹಿಮ ನಾಮಸ್ಮರಣ ಮಾತ್ರದಿಂದ ಪಾಮರ ಜನರುಗಳ ಯೋಗ ಕ್ಷೇಮ ವಹಿಸಿ ಪೊರೆಯುವಂಥ ಕಾಮಧೇನು ನೀನೆಂದರಿತು 2 ಮಾತಿನಲ್ಲಿ ಮಲ್ಲರೆಂದು ಖ್ಯಾತಿ ಪಡೆದ ಜನಗಳಿರಲು ಯಾತರವನು ಇವನು ಎನ್ನದಿರು ದೂತ ಪ್ರಸನ್ನನೇ ಸೋತು ವಿವಿಧ ಕಾರ್ಯಗಳಲಿ ಆತುರದಲಿ ನಿನ್ನ ಪರಮ ಪ್ರೀತಿಯ ಪಡೆಯುವುದೇ ದೊಡ್ಡ ನೀತಿಯೆಂದು ಅರಿತು ಸತತ 3
--------------
ವಿದ್ಯಾಪ್ರಸನ್ನತೀರ್ಥರು
ಇಂದಿರೇಶ ಭವಬಂಧನ ಬಿಡಿಸೊ ನಿನ್ನಾನಂದದೊಳಿರಿಸೊ ಪ ಸಿಂಧುಶಯನ ಗೋವಿಂದ ಮುರಾರೆ ಅಚಿಂತ್ಯಾದ್ಭುತ ಶೌರೆ ಅ.ಪ. ತಾಳಲಾರೆನೊ ಈ ತಾಪತ್ರಯ ಹರಿಸೊ ನಿನ್ನವನೆನಿಸೊ ಕಾಲಕರ್ಮ ಕೋಟಲೆ ತಪ್ಪದಲ್ಲ ನೀ ಕೇಳೆನ್ನ ಸೊಲ್ಲ ವಾಕು ಪಾಲಿಸಿ ಎನ್ನನು ಪಾರುಗಾಣಿಸೊ ಫಣಿರಾಜಶಯ್ಯ 1 ಪರಿಪರಿಯಿಂದಲಿ ಜನ್ಮ ಧರಿಸಿ ಕರೆದುತಂದೆ ಈ ಜನ್ಮದಿ ನಿಂದೆ ಅರಿಯದವರಂತಿರುವರೆ ಕಾಯುವ ಕರುಣಿ ನೀನು ದೀನಜನ ಸುರಧೇನು 2 ಅಂಬರ ಮಣಿಯಂತೆ ಬಿಂಬ ಮೊಳಗ್ಹೊಳೆದು ದುರಂತ ಕರ್ಮಂಗಳ ಕಳೆದು ಹಂಬಲಿಸುವ ಭಕುತರ ಬೆಂಬಲಿಗನೆನಿಸಿ ಸಂತತ ನಿನ್ನ ಸುಖಸಿರಿಯ ಸುರಿಸೊ 3 ಬಿಂಬವು ಒಲಿದರೆ ಪ್ರತಿಬಿಂಬ ಫಲಸುವದುಂಟು ಈ ಮಾತು ನಿಘಂಟು ಬಾಂಬೊಳೆ ಹರಿಸಿದ ಹರಿ ಮಾನಿಧಿವಿಠಲ ನೀನಲ್ಲದಿನ್ಯಾರೋ ದೇವರ ದೇವಾ 4
--------------
ಮಹಾನಿಥಿವಿಠಲ
ಇಂದಿರೇಶ ಭಾಗವತ ಎಂದು ಬರುವನು ಇಲ್ಲೆ ಮಂದಸೂನನುನಮಗೆ ಮುಂದೆ ಗತಿಯೇನುದ್ಧವಾಒಂದು ಕಾರ್ಯವು ಬಾರದಂದಿನಾದಿಈಶ ಸುರಸುಂದರನು ಪೋದನಲ್ಲೋ ಉದ್ಧವಾ ಪ ಪತಿ ಸುತರ ಪರಿಚರಿಸುತಿಹ ನಮ್ಮಮರುಳು ಮಾಡಿದನುದ್ಧವಾ 1 ತೊರೆದು ಮನೆ ಧನಗಳನೆ ಬರಲು ಬಳಿಯಲಿ ಭಾಳತರಲಿ ಮಾಡಿದನುದ್ಧವಾಅರಿಯಲಿಲ್ಲವೊ ನಾವು ಸಿರಿಯರಸ ಇವನೆಂದುಪರಿಮೋಹಿಸಿದೆವುದ್ಧವಾ 2 ಮರುಗ ಮಲ್ಲಿಗೆ ಜಾಜಿ ಸುರಗಿ ಸೇವಂತಿಗೆತುರುಬಿನೊಳಗಿಟ್ಟುದ್ಧವಾಸರಸ ಸೌಂದರ್ಯಕ್ಕೆ ಮರುಳಾದನಿವನೆಂದುಗರುವ ಮಾಡಿದೆವುದ್ಧವಾಅಂತು ನಮ್ಮನು ಬಿಟ್ಟು ಮರೆಯಾಗಿ ರೋಧಿಸಲುಭರದಿ ಬಂದನುದ್ಧವಾ 3 ಕೋಲು ಕುದುರೆಯನೇರಿ ಬಾಲಕರಕೂಡಿ ತಾ ಕೇಳಿ ಮಾಡಿದನುದ್ಧವಾಲೀಲೆ ಚತುರರ ಸದೃಶ ಬಾಲೆಯರಕೂಡಿ ತಾ ಕೋಲನಾಡಿದನುದ್ಧವಾ4 ದಧಿ ಬೆಣ್ಣೆ ನಮ್ಮಾಲಯದೊಳುತಿಂದು ಭಾಳ ಮೋಹಿಸಿದನುದ್ಧವಾ 5 ಗರಳ ಹರಿಸಿನುದ್ಧವಾಉರಿಯ ನುಂಗುತ ಮುಖದಿ ಬೆರಳೊಂದುಹತ್ತೊಂದು ವರುಷ ಇಲ್ಲಿದ್ದುದ್ಧವಾಅರಿಯಲಿಲ್ಲವೊ ನಾವು ಸಿರಿಯರಸ ಇವನೆಂದುಪರಿಮೋಹಿಸಿದೆವುದ್ಧವಾ 6 ಒಂದಿನಾದರೂ ಒಮ್ಮೆ ಮನದಿ ಗೋಕುಲದವರಇಂದು ಸ್ಮರಿಪನೆ ಉದ್ಧವಾಚಂದ್ರ ವದನೇರ ಸ್ನೇಹ ಕೂಡಿ ಪುರದೊಳು ನಮ್ಮನಿಂದು ಮರೆತನೆ ಉದ್ಧವಾ 7 ಬಂದು ಬಳಗವ ಬಿಟ್ಟು ಮಧುರೆಗೆಲ್ಲರುನಿನ್ನ ಹಿಂದೆ ಬರುವೆವೊ ಉದ್ಧವಾಕಂದರ್ಪ ಪಿತನಿವನ ಸ್ಮರಿಸುತಲೆ ದೇಹದಿಪ್ರಾಣವೊಂದೇ ಉಳಿದಿಹುದುದ್ಧವಾ8 ಪರಮ ವೈಕುಂಠನು ಸರತಿಯಲೆ ತೋರಿಸುತಮರುಳು ಮಾಡಿದನುದ್ಧವಾಗಿರಿಗಿರಿ ಝರಿಯೊಳಗೆ ಚರಿಸಿ ಚಿನ್ನದ ಚರಯಗುರುತು ಮಾಡಿದನುದ್ಧವಾಅರಿಯಲಿಲ್ಲವೋ ಸಿರಿಯರಸ ಇವನೆಂದುಪರಿಮೋಹಿಸಿದೆವುದ್ಧವಾ 9
--------------
ಇಂದಿರೇಶರು
ಇಂದಿರೇಶನ ಪದದ್ವಂದ್ವಕಮಲ ಭಜಿಪ ಶ್ರೀ ಗುರುವರ ಭೂಪ ಪ. ಬಂದೆನು ನಿಮ್ಮ ಪದ ಸಂದರುಶನಕೀಗ ನೀಗಿರಿ ಭವರೋಗ ಅ.ಪ. ಬಂದವರಯೋಗ್ಯತೆ ಅರಿತಂಕಿತವೀವ | ಕರುಣಾಳುವೆ ದೇವ ನೊಂದೆನೀಗ ಈ ಅಜ್ಞಭವದಿ ಬಿದ್ದು | ಎಂದಿಗೆ ನಾ ಗೆದ್ದು ಇಂದಿರೇಶನ ಹೃತ್ಕಮಲದಲಿ ಕಾಂಬೆ | ಗುರುವೆ ತೋರೆಂಬೆ ಬಂದ ಬಂದ ಕಷ್ಟ ಹಿಂದು ಮಾಡಿ ಪೊರೆದು | ಕೃಪೆಗೈಯ್ಯಲಿ ಬೇಕಿಂದು 1 ಮುಖ ಕಮಲದಿ ಹೊರಡುವ ವಾಕ್ಸರಣಿಗಳು | ಗಂಗಾ ಪ್ರವಾಹಂಗಳು ಅಕಳಂಕದ ತತ್ವಾರ್ಥದಿ ನಾ ಮುಳುಗಿ | ದುರಿತದ ಭವನೀಗಿ ಸುಖ ಸಾರೂಪ್ಯದ ಮುಕುತಿ ಮಾರ್ಗ ಕಂಡೆ | ಭವ ತುಂಡೆ ಭಕುತಿ ಭಾಗ್ಯವ ನಿತ್ಯದಿ ಕರುಣಿಪುದು | ಸುಜ್ಞಾನವ ನೀಡುವುದು 2 ಇಳೆಯೊಳಿಲ್ಲ ಈ ಚರ್ಯೆ ತೋರುವವರು | ಉದ್ಧರಿಪರಿನ್ಯಾರು ಪರಿ ಕರುಣಿಪುದು | ನ್ಯಾಯವೆ ನೂಕುವುದು ಪೊಳಲೊಡೆಯನ ಪರಿಪರಿ ಮಹಿಮಾದಿಗಳ | ರೂಪ ಜಾಲಗಳ ತಿಳಿದಾನಂದಪಡುವ ಗುರುವರೇಣ್ಯ | ಪೊರೆಯ ಬೇಕೀಗೆನ್ನ 3 ಕರಿಗಿರಿ ನರಹರಿ ಪದಕಮಲಗಳನ್ನು | ಹೃದ್ವನಜದೊಳಿನ್ನು ಪರಿಪರಿ ಪೂಜಿಸಿ ಪರಮಾದರದಲ್ಲಿ | ಸಂಕರ್ಷಣನಲ್ಲಿ ಇರಿಸಿಹ ಮನವನು ನರರಿಗೆ ತೋರದಲೆ | ಚರಿಸುವ ಈ ಲೀಲೆ ಅರಿತು ಪೇಳೆ ಈ ಪಾಮರಳಿಗೆ ಅಳವೇ | ಆನಂದದಲಿರುವೆ 4 ತಂದೆ ಮುದ್ದು ಮೋಹನವಿಠಲ ದೇವ | ಹೃದ್ವನಜದಲಿ ಕಾವ ಸುಂದರ ಗೋಪಾಲಕೃಷ್ಣವಿಠ್ಠಲ ನಿಮ್ಮೊಳು | ರಮಿಸುವ ನಿತ್ಯದೊಳು ಮಂದಬುದ್ಧಿಗೆ ಇಂತು ಮತಿಯನಿತ್ತು | ಸಲಹಲಿ ಬೇಕಿಂತು ತಂದೆ ಧರೆಯೊಳು ಮತ್ತೊಬ್ಬರ ಕಾಣೆ | ಕಾಪಾಡಬೇಕೆನ್ನಾಣೆ 5
--------------
ಅಂಬಾಬಾಯಿ