ಒಟ್ಟು 2054 ಕಡೆಗಳಲ್ಲಿ , 106 ದಾಸರು , 1350 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುವೇ ಸುರತರುವೇ ಹರಿಭಕ್ತಾಗ್ರೇಸರ ವಿಜಯರಾಯ ಪ ಪುರಂದರದಾಸರ ಕರುಣಕೆ ಪಾತ್ರನೆ ಮರುತ ಮತಾಬ್ಧಿಗೆ ಚಂದ್ರ ವಿಜಯರಾಯ ಅ.ಪ ವಿಷ್ಣು ಬ್ರಹ್ಮ ಶಿವರನುಪರೀಕ್ಷಿಸುತು ತ್ಕøಷ್ಟ ಹರಿಯೆನುತ ಶಿಷ್ಟರಿಗರುಹಿದ 1 ಜನುಮ ಜನುಮದಿಂದನುಸರಿಸುತಿಹ ಘನದುರಿತವ ದರುಶನ ಮಾತ್ರ ಕಳೆವ2 ಗುರುರಾಮ ವಿಠಲನ ಚರಣವ ತೋರಿಸು 3
--------------
ಗುರುರಾಮವಿಠಲ
ಗೋದೆ ಸಮಸ್ತಫಲದೆ ಸ್ನಾನ ಒದಗಿಮಾ-ದರೊಮ್ಮೆ ವೈಕುಂಠಪದವೀವೆ ಪ. ಬ್ರಹ್ಮಾದಿ ಶಿಖರದಿಂ ಪುಟ್ಟಿ ನೀನು ಬಲುಬ್ರಹ್ಮ ಋಷಿಯಾದ ಗೌತಮ ಮುನಿಯಬ್ರಾಹ್ಮರಿಂದಲಿ ಬಂದ ಗೋಹತ್ಯ ಪರಿಹರಿಸಿಅಮ್ಮಮ್ಮ ಸಪ್ತಮುಖದಿಂದ ಸಾಗರವ ಬೆರೆದೆ 1 ಆದಿಯಲಿ ತ್ರಿಯಂಬಕನ ಜ[ಡೆ]ಯಲುದಿಸಿದೆ ನೀನುಮುದದಿಂದ ಪಶ್ಚಿಮಕಾಗಿ ನಡೆಯೆ ಕಂಡುಒದಗಿ ಗೌತಮನು ಕುಶದಿಂದ ತಿರುಗಿಸÀಲು ನೀಸದಮಲ ಕುಶಾವರ್ತಳೆಂದೆನಿಸಿಕೊಂಡೆ 2 ಔದುಂಬರ ವೃಕ್ಷಮೂಲದಿಂದುದ್ಭವಿಸಿಉದಧಿಯನು ಕೂಡಬೇಕೆಂದು ಬೇಗಮೇದಿನಿಯಿಳಿದು ತಿರುಗುತಲಿ ನೀ ಮುದದಿಂದಆದರದಿ ಪೂರ್ವಾಬ್ಧಿಯನು ಕೂಡಿದೆ 3 ಸಿಂಹರಾಸಿಯಲಿ ಸುರಗುರು ಬಂದುದು ಕೇಳಿಅಂವ್ಹ ರಾಸಿಗಳು ಸಂಹಾರಕಾಗಿಬಂಹ್ವಾಯಾಸದಿ ಬಂದು ನಿಮ್ಮನು ಕಂಡೆಅಂವ್ಹಂಗಳು ಪರಿಹರಿಸಿ ಮುಕುತಿಯ[ಕೊಡು]ದೇವಿ 4 ವಿನಯದಲಿ ಸ್ನಾನಪಾನವನು ಮಾಡುವರಿಗೆವನಜಾಕ್ಷ ಹಯವದನ ಹರಿಯವನಜನಾಭನ ಲೋಕಸಾಧನವಾದಘನ ಭಕುತಿಯನಿತ್ತು ರಕ್ಷಿಸುದೇವಿ 5
--------------
ವಾದಿರಾಜ
ಗೋಪಗೋಪನೆಂಬಾ ಕೋಗಿಲೆ ನಮ್ಮಶ್ರೀಪತಿಯ ಕಂಡರೆ ಬರಹೇಳೆ ಕೋಗಿಲೆ ಪ . ಕೆಂಗಾವಳೆಯಾಲೆದಲಿ (?) ಪಾಂಡುರಂಗಮಂಗಳ ಮೂರುತಿಪ್ಪಶೃಂಗಾರವಾದ ಸುರತರುವಿನ ನೆರಳೊಳುರಂಗನಾಥನ ಕಂಡರೆ ಬರಹೇಳೆ ಕೋಗಿಲೆ 1 ಮಧುಮಾಸದಲಿ ಮಾಧವನಿರಲುಚದುರೆ ಗೋಪಿಯರಸ ಮೇಳದಲ್ಲಿಮುದದಿ ವನಂತರನಾಡುವ ಭರದಿಂದಪದುಮನಾಭನ ಕಂಡರೆ ನೀ ಬರಹೇಳೆ 2 ಅಟ್ಟಿ ಅರಸುವ ಶ್ರ್ರುತಿಗಳಿಂದ ಸುಖಬಿಟ್ಟೆವೆಂದರವ ಪರಬ್ರಹ್ಮಸೃಷ್ಟಿಯೊಳು ಉಡುಪಿನ ಹಯವದನ ಸ್ವಾಮಿಯದೃಷ್ಟಿಲಿ ಕಂಡರೆ ಬರಹೇಳೆ ಕೋಗಿಲೆ3
--------------
ವಾದಿರಾಜ
ಗೋಪಿ ಚಂದನದಿಂದ ಎ ನ್ನೊಡೆಯ ಮಧ್ವಾರ್ಯ ಹೃದಯವಾಸಾ ಕೃಷ್ಣ ಪ. ಮೃಡಸಖ ನಿನ್ನಯ ರೂಹವ ತೋರೆ ಕಡಲಿಂದೊಡನೆ ಬಂದೆ ಆನಂದತೀರ್ಥರ ಮುಂದೆ ನಿಂದೆ ಅ.ಪ. ಗೆಜ್ಜೆ ಕಾಲ್ ಕಡಗ ಸಜ್ಜಿನಿಂದಿಟ್ಟು ಮಜ್ಜಿಗೆ ಕಡಗೋಲು ನೇಣು ಸಹ ಸಜ್ಜನರ ಸಲಹಲು ಮಧ್ವಾರ್ಯರ ಮುಂದೆ ಗೆಜ್ಜೆ ಧ್ವನಿ ಮಾಡಿ ಕುಣಿಯುತ ಕೃಷ್ಣ 1 ಉಟ್ಟ ಪೀತಾಂಬರ ಉಡಿಗೆಜ್ಜೆ ವಡ್ಯಾಣ್ಯ ಇಟ್ಟು ಕೌಸ್ತುಭಹಾರ ತುಳಸಿಮಾಲಾ ಕೊಟ್ಟು ಅಭಯ ಹಸ್ತ ಸಲಹುವೆನೆಂಬಾ ಬಿರುದಿಟ್ಟು ಕಂಕಣ ತೊಟ್ಟು ಶ್ರೀ ಕೃಷ್ಣ 2 ಮಕರಕುಂಡಲ ಕಿರೀಟ ಶೋಭಿಸುತಲಿ ಅಕಳಂಕ ಚರಿತ ಶ್ರೀ ಶ್ರೀನಿವಾಸ ನಿಖಿಲ ಬ್ರಹ್ಮಾಂಡದೊಳೆಲ್ಲೆಲ್ಲು ಕಾಣೆ ಸಕಲ ದೇವರ ದೇವಾ ಶ್ರೀ ಕೃಷ್ಣ ಪ್ರಭುವೆ 3
--------------
ಸರಸ್ವತಿ ಬಾಯಿ
ಗೋಪಿ ನಿನಗೆ ದೂರ ಯಾರ ಮಾತ ಕೇಳವಲ್ಲಾ ರಂಗ ಚೋರ ಪ ದಿಕ್ಕಡದಿಮ್ಮಿಲೆ ಕೂಡಿಸುವ ಬ್ರಹ್ಮಾಂಡ ನೂರಾ ಇವನ ಮಹಿಮಾ ತಿಳಿಯದವ್ವಾ ಮಾಯಕಾರ ಅ.ಪ. ಕಳ್ಳನಾಗಿ ಕಂಣಮುಚ್ಚಿ ಗತಿಯವಲ್ಲನೆ ಭಾರ ನೆಗಿವ್ಯಾನೆ 1 ಕ್ವಾರಿಲೆ ಹಾದು ದೈತ್ಯನ ಕೊಂದಾನೆ ತರಳಗಾಗಿ ಖಂಬದಿಂದ ವಡದು ಬಂದಾನೆ 2 ಧಾರೂಣಿ ಅಳೆದು ಮೂರಡಿ ಮಾಡಿದ ಅಂಬೆಯ ಮಗನಾಗಿ ಎಂಥ ಕಾಡಿದ 3 ಅಂಬು ಹೂಡಿದ ನಂಬೀದ ವಿಭೀಷಣಗೆ ಪಟ್ಟಗಟ್ಟಿದ 4 ಗೋಕುಲದೊಳಗೆ ಪುಟ್ಟಿ ಬೆಣ್ಣೆ ಮೆದ್ದಾನೆ ವಸ್ತ್ರವಿಲ್ಲದಂತೆ ತಾ ಬತ್ತಾಲೆ ನಿಂತಾನೆ 5 ಕುದುರೆಯೇರಿ ಹಾರುತ ಬಂದಾನೆ ಬೆದರಬೇಡೆಂದು ಶ್ರೀದವಿಠಲ ಅಂದಾನೆ 6
--------------
ಶ್ರೀದವಿಠಲರು
ಗೋಪಿ ನೋಡಮ್ಮಾ ಪ ಗೋಪಿ ನೋಡಮ್ಮಾ ದೇವ ದೇವೋತ್ತಮನಾದ ಕೇವಲ ಪರಬ್ರಹ್ಮ| ದೇವಿಮಗನಾಗಿ ಬಂದಿಹನೆ ನರರಂದದಿ ನಮ್ಮಾ ಭಾವಿಸಿ ಬ್ರಹ್ಮನ ಜನಕನ ಶಿಶುವೆಂದು ಮುದ್ದಾಡಿಸುವಾ ಸಂಭ್ರಮಾ1 ಮುಖಸಾರಭೋಕ್ತನಿಗೆ ಮೊಲೆ ಹಾಲನುಣಿಸಿ| ಮಜ್ಜನ ಗೈಸಿ| ಪ್ರಕಟಿದಿ ಶೇಷಶಾಯಿಗೆ ತೊಟ್ಟಿಲದಿ ಮಲಗಿಸಿ| ಸುಖಯೋಗ ನಿದ್ರೆಯುಳ್ಳಂಗೆ ಮಲಗೆಂದು ಜೋ ಜೋ ಎಂಬಳಾಕೆ 2 ಆವ ಯೋಗ ಮಾಯದಲಿ ಮೂಜಗವಾಡಿಸುವ| ಆವ ಮುಂಜರಗ ಸಿಡಿದು ಬೆಣ್ಣೆ ಬೇಡುತ ಕುಣಿವಾ| ಗೋಪಿ ಕೈಯೊಳಾಡುವಾ| ಆವನಲಿ ಮಹಿಪತಿ-ಸುತ ಪ್ರಭು ಲೀಲೆಯ ಕಣ್ಣಲಿ ನೋಡಿ ಸುಖಿಸುವಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗೌತಮ ಗೊಲಿದನೆ ರಂಗನಾಥದಾತನೆ ನಮಿಸುವೆ ರಂಗನಾಥ ಪ ಕಾವೇರಿ ತೀರಗ ರಂಗನಾಥ ಮಾವಾರಿ ಸಲಹೆನ್ನ ರಂಗನಾಥ 1 ಭಕುತಾಭೀಷ್ಟ ಪ್ರದ ರಂಗನಾಥಮುಕುತರೊಡೆಯ ಶ್ರೀರಂಗನಾಥ 2 ವಕ್ಷದಿ ಲಕ್ಷ್ಮಿಯು ರಂಗನಾಥಕುಕ್ಷಿಯೊಳ್ಬ್ರಹ್ಮಾಂಡ ರಂಗನಾಥ 3 ರಂಗಧಾಮನೆ ಶಿರಿ ರಂಗನಾಥಮಂಗಳ ಮಹಿಮಾನೆ ರಂಗನಾಥ 4 ಅಜಭವ ಸುರವಂದ್ಯ ರಂಗನಾಥನಿಜ ಗುರು ಗೋವಿಂದ ರಂಗನಾಥ 5
--------------
ಗುರುಗೋವಿಂದವಿಠಲರು
ಗೌರೀಪ್ರಿಯ ಹರ ಗೌರೀಪ್ರೀಯ ಹರ ಗೌರೀಪ್ರಿಯ ಹರ ಗಂಗಾಧರ ಪ ನಿತ್ಯ ನಿರಾಮಯ ಪರ ಸ್ವಪ್ರಕಾಶ 1 ನಿರ್ಮಿತಚಿಚ್ಛಕ್ತಿ ಪರಿಣಾಮಬ್ರಹ್ಮಾಂಡ ನಿರ್ಮಲ ನಿಗಮಾಂತವೇದ್ಯ ಸ್ವಸಾಧ್ಯ 2 ಬಾಲೇಂದುಶೇಖರ ಭಕ್ತ ದುರಿತಹರ ಫಾಲಾಕ್ಷ ಫಣಿಹಾರಯುಕ್ತಶರೀರ 3 ಇನಕೋಟಿಸಂಕಾಶ ಕನಕಕುಂಡಲ ದೇವ ವಿನುತ ವಿರೂಪಾಕ್ಷ ವಿಬುಧೌಘ ಪಕ್ಷ 4 ದುರಿತ ದಿವಾಕರ ಭವ ಭಯ ಪರಿಹರ ಭವದೂರ ಧೀರ 5 ಪರಶು ಮೃಗಾಭಯ ವರದ ಚತುರ್ಭಜ ಪರಮ ಫವನ ಶೀಲ ಪುಣ್ಯ ವಿಶಾಲ 6 ಶರಣಾಗತ ತ್ರಾಣ ನಿಜಕರ್ಮ ನಿರ್ಲೇಪ ಚಾಪ ತ್ರಿಭುವನ ದೀಪ 7 ಮಂದರಗಿರಿ ವಾಸ ಮನ್ಮಥತನು ನಾಶ ನಂದಿವಾಹನ ಭೃಂಗಿನಾಟ್ಯ ವಿಲಾಸ 8 ಮುನಿವಂದ್ಯ ಮೃದುಪಾದ ಘನ ಕಕುದ್ಗಿರಿವಾಸವನಜಾಕ್ಷ ತಿರುಪತಿ ವೆಂಕಟರೂಪ 9
--------------
ತಿಮ್ಮಪ್ಪದಾಸರು
ಘಂಟಾನಾದವ ಕೇಳೋ ಮುಕ್ತಘಂಟಾನಾದವ ಕೇಳೋಘಂಟಾನಾದವು ಘಣ ಘಣವೆನಲುಅಂಟಿ ಕೊಳ್ಳದೆ ಲೌಕಿಕ ಸುಖಕೆ ಪ ಈಷಣ ತ್ರಯಗಳು ಎಲ್ಲವು ಕೆಟ್ಟುಪಾಶವೆಂಟನು ಎಲ್ಲವ ಸುಟ್ಟುವಾಸನೆ ಹದಿನೆಂಟನು ಕಳಚಿಟ್ಟುಕ್ಲೇಷ ಪಂಚಕಗಳು ಹುಡಿಯಿಟ್ಟು 1 ಅರಿಗಳು ಅರುವರ ತಲೆಯನೆ ಹೊಯ್ದುಕರಣ ನಾಲ್ವರ ಕಾಲನೆ ಕೊಯ್ದುಹರಿವಾ ಹತ್ತರ ನೆತ್ತಿಗೆ ಹೊಯ್ದುಮೆರೆವಾವರಣ ಏಳನೆ ಮೇದು 2 ಘಂಟಾನಾದದ ಇಂಪನಾಲಿಸುಎಂಟು ಮೂರ್ತಿಗಳೊಡೆಯನಹೆಕಂಟಕಹರ ಚಿದಾನಂದ ಬ್ರಹ್ಮವುತಾನಾಗಿಯೇ ನೀ ನಿಜ ವಿರುವೆ3
--------------
ಚಿದಾನಂದ ಅವಧೂತರು
ಚರಣದಾಸರ ಸದುಹೃದಯ ನಿವಾಸನೆ ಸಿರಿರಾಮ ಪರಮ ಪಾವನೆ ವರಜಾಹ್ನವೀ ಜನಕನೆ ಸಿರಿರಾಮ ಪ ಶರಣಜನರ ಮೇಲ್ನುಡಿಯೋಳ್ಸಂಚಾರನೆ ಸಿರಿರಾಮ ನೆರೆನಂಬಿ ಭಜಿಪರ ಭವಮಲಹರಣನೆ ಸಿರಿರಾಮ ಕರುಣದೊದೆದು ಯುವತಿಕುಲವನುದ್ಧರಿಸದನೆ ಸಿರಿರಾಮ ವರದ ವಾಸುಕಿಶಾಯಿ ಜಗದೇಕ ಬಂಧುವೇ ಸಿರಿರಾಮ 1 ಧುರಧೀರವಾಲಿಯ ಗರುವನಿವಾರನೆ ಸಿರಿರಾಮ ಮರೆಬಿದ್ದ ಸುಗ್ರೀವನ ದು:ಖಪರಿಹಾರನೆ ಸಿರಿರಾಮ ಪರಮಭಕ್ತ್ಹನುಮಗೆ ಕರವಶನಾದನೆ ಸಿರಿರಾಮ ಶರಣುಬಂದಸುರಗೆ ಸ್ಥಿರಪಟ್ಟವಿತ್ತನೆ ಸಿರಿರಾಮ 2 ಶರಧಿಮಥನಮಾಡಿ ಸುರರ ರಕ್ಷಸಿದನೆ ಸಿರಿರಾಮ ಹರನಕೊರಳ ಉರಿ ಕರುಣದ್ಹಾರಿಸಿದನೆ ಸಿರಿರಾಮ ವರಗಿರಿನಂದನೆಮನ ಸೂರೆಗೈದನೆ ಸಿರಿರಾಮ ಸರುವದೇವರದೇವ ಅದ್ಭುತಮಹಿಮನೆ ಸಿರಿರಾಮ 3 ಕರಿಯ ರಕ್ಷಣೆಗಾಗಿ ಕಾಸಾರಕ್ಕಿಳಿದನೆ ಸಿರಿರಾಮ ತರುಣಿಮೈಗಾವಗೆ ಚರನಾಗಿ ನಿಂತನೆ ಸಿರಿರಾಮ ಚರಣದಾಸರಮನೆ ತುರಗವ ಕಾಯ್ದನೆ ಸಿರಿರಾಮ ಪರಮಭಾಗವತರನರೆಲವ ಬಿಟ್ಟಿರನೆ ಸಿರಿರಾಮ 4 ಅನುಪಮ ವೇದಗಳಗಣಿತಕ್ಕೆ ಮೀರಿದನೆ ಸಿರಿರಾಮ ಸನಕಸನಂದಾದಿ ಮನುಮುನಿ ವಿನಮಿತನೆ ಸಿರಿರಾಮ ವನರುಹ ಬ್ರಹ್ಮಾಂಡ ಬಲುದರದಿಟ್ಟಾಳ್ವನೆ ಸಿರಿರಾಮ ಮನಮುಟ್ಟಿ ಭಜಿಪರ ಘನಮುಕ್ತಿ ಸಾಧ್ಯನೆ ಸಿರಿರಾಮ 5
--------------
ರಾಮದಾಸರು
ಚರಣವನೀಗ ಹೊಂದಬೇಡ ಕೇಡಿಗಗುರುವಿನ ಚರಣವನೀಗ ಹೊಂದಬೇಡ ಪ ಜಾರಣ ಮಾರಣ ಬೋಧಿಸಿ ಗುರುವಜೀವನ ನೀಗಲೆ ತಿನ್ನುವ ಗುರುವಕಾರಣಿಕವನೆ ನುಡಿಯುವ ಗುರುವಕಾಮಿತವನೆ ಹೇಳುವ ಗುರುವ ಕೇಡಿಗ ಗುರುವ 1 ಮಹಿಮೆ ಗಿಹಿಮೆ ತೋರುವ ಗುರುವಮರಳಿ ಜನ್ಮಕೆ ತರುವ ಗುರುವದಹಿಸಿ ಮನೆಯ ಹೋಹ ಗುರುವದಂಡಣೆಯ ಗುರುವ ಕೇಡಿಗ ಗುರುವ 2 ಹರಿದು ತಿನ್ನುವ ಮೋಸದ ಗುರುವಬರಕತವಿಲ್ಲದ ಗುರುವಕರಕೊಳ್ಳುತಲಿರುವ ಕರ್ಮಿತಾಗುರುವ ಕೇಡಿಗ ಗುರುವ 3 ಶಾಂತಿ ಶಮೆ ದಮೆಗಳು ದೊರಕದ ಗುರುವಸೈರಣೆ ಎಂದಿಗು ನಿಲುಕದ ಗುರುವಕರುಣೆಯ ತಾತೋರದ ಗುರುವ ದಯವಿಲ್ಲದಗುರುವ ಕೇಡಿಗ ಗುರುವ4 ಆಸೆಯನು ಬಿಡದಿಹ ಗುರುವಅಂಗದ ಹಸಿವನು ತಿಳಿಯದ ಗುರುವಬಾಸ ಚಿದಾನಂದನ ನರಿಯದ ಗುರುವಬ್ರಹ್ಮನಾಗದ ಕೇಡಿಗ ಗುರುವ 5
--------------
ಚಿದಾನಂದ ಅವಧೂತರು
ಚಿಂತೆ ಪರಿಹರ ಮಾಡೋ ಎನ್ನಯ್ಯ ಸಜ್ಜನರ ಪ್ರಿಯ ಪ ಚಿಂತೆ ಪರಿಹರ ಮಾಡೊ ಎನ್ನಯ ಚಿಂತೆ ಪರಿಹರ ಮಾಡಿ ಎನ್ನ ಅಂತರಂಗದಿ ನಿಮ್ಮ ನಿರ್ಮ ಲಂತ:ಕರುಣದ ಚರಣವಿರಿಸಿ ಸಂತಸದಿ ಪೊರೆ ಸಂತರೊಡೆಯ ಅ.ಪ ನಿಮ್ಮ ಪಾದವ ನಂಬಿಕೊಂಡಿರುವ ಈ ಬಡವನನ್ನು ಕಮ್ಮಿ ದೃಷ್ಟಿಯಿಂ ನೋಡದಿರು ದೇವ ನಿನ್ನ ಬಿಟ್ಟೆನ ಗ್ಹಿಮ್ಮತನ್ಯರದಿಲ್ಲ ಜಗಜೀವ ಭಜಕಜನ ಕಾವ ಮೂಡಿಮುಳುಗುತಿಹ್ಯದೈ ಸಮ್ಮತದಿ ಸಲಹೆನ್ನ ದಯಾನಿಧಿ ಬ್ರಹ್ಮಬ್ರಹ್ಮಾದಿಗಳ ವಂದ್ಯನೇ 1 ಆರುಮೂರರಿಕ್ಕಟ್ಟಿನೊಳು ಗೆಲಿಸೋ ಘನಪಿಂಡಾಕಾರ ಆರು ಎರಡರ ಸಂಗ ತಪ್ಪಿಸೋ ಮಹಬಂಧ ಬಡಿಪ ಘೋರ ಸಪ್ತಶರಧಿ ದಾಂಟಿಸೋ ತವದಾಸನೆನಿಸೊ ಗಾರುಮಾಡಿ ಕೊಲ್ಲುತಿರ್ಪ ದೂರಮಾಡೆನ್ನ ದುರಿತದುರ್ಗುಣ ಸೇರಿಸು ತ್ವರ ದಾಸಸಂಗದಿ ನಾರಸಿಂಹ ನಾರದವಿನುತ 2 ಪಾಮರತ್ವ ತಾಮಸವ ಬಿಡಿಸೋ ವಿಷಯಲಂಪಟ ಪ್ರೇಮ ಮೋಹ ಕಾಮ ಖಂಡ್ರಿಸೋ ಹರಲಿರುಳು ನಿಮ್ಮ ಭಜನಾನಂದ ಕರುಣಿಸೊ ಸುಚಿಂತದಿರಿಸೊ ಕಾಮಿತಜನಕಾಮಪೂರಿತ ನಾಮರೂಪರಹಿತಮಹಿಮ ಸ್ವಾಮಿ ಅಮಿತಲೀಲ ವರ ಶ್ರೀರಾಮ ಪ್ರಭು ತ್ರಿಜಗದ ಮೋಹ 3
--------------
ರಾಮದಾಸರು
ಚಿತ್ತದ ಕ್ಲೇಶವ ಭಂಜಿಸಿ ವಾಸುದೇವನೆ ದಯದಿ ಹರೆ ಪ ಇಂದಿರಾವದನಾರವಿಂದ ಭಾಸ್ಕರ ಕುಂದರದನ ವದನ ಹರೆ 1 ಪಾವನ ಮೂರುತಿಯೆ ಹರೆ 2 ಚಿನ್ಮಯ ರೂಪನೆ ಬ್ರಹ್ಮಕಾರಣಗುಣ ನಿರ್ಮಲ ನಿರ್ಗುಣನೆ ಹರೆ 3 ಭೋಗಿ ಭೂಷ ನುತನೆ ಹರೆ 4 ಧ್ಯಾನವ ಗೈಯುವೆನೈ ಹರೆ 5
--------------
ಬೇಟೆರಾಯ ದೀಕ್ಷಿತರು
ಚಿನ್ಮಯ ಚಿದಾನಂದ ನೀನೆ ಸನ್ನುತಾಂಗಿಯ ರಮಣ ಸಕಲ ಲೋಕಕೆ ಕರುಣ ಪ ದಿಗಳ ವೆಗ್ಗಳವ ನೋಡಲಿ ಬಂದ್ಯೋ ಮಿಗಿಲಾದ ಪರದೈವ ಹರಿಯೆಂದು ಕೊಂಡಾಡೆ ಗಗನ ವಾಸಿಗಳು ಪೂಮಳೆಗರಿಯೆ ಹರುಷದಲಿ 1 ಮಡುವಿನೊಳ್ ಕರಿರಾಜ ಸಿಕ್ಕಿ ಸಾವಿರದ ವರುಷ ಬಿಡದೆ ನಕ್ರನ ಕೂಡ ಕಾದಿ ಸೋತು ಒಡಿಯರಾರುಂಟೆ ತ್ರಿಮೂರ್ತಿಗಳೊಳಗೆನಲು ಮೃಡನಜರು ಬೆರಗಾಗಿ ಸಾಮಜನ ಪಾಲಿಸಿದೆ 2 ಸೃಷ್ಟಿಜಲ ಮುಸುಕಿ ಬ್ರಹ್ಮಾಂಡ ಪ್ರಳಯಕಾಲದಲಿ ಜಠರದೊಳು ಜಗಕರ್ತುನೆಂದೆನಿಸಿದೆ ವಟಪತ್ರಶಯನ ಸಿರಿವಿಜಯವಿಠ್ಠಲರೇಯಾ3
--------------
ವಿಜಯದಾಸ
ಚೋದ್ಯ ಚೋದ್ಯ ಸರ್ವದ ವೇದ ವೇದ್ಯ ನಂಬಿದ ಭಕ್ತ ಜನರಿಗಾಗುವ ಸುಖಸಾಧ್ಯ ಪ. ಶ್ರೀ ಮಹೀಶ ಸತ್ಯಭಾಮೆಯರರಸ ಸು- ಧಾಮ ತಂದವಲಕ್ಕಿ ಪ್ರೇಮದಿಂದಲಿ ಮೆದ್ದ 1 ಅಂಡಜವಾಹ ಬ್ರಹ್ಮಾಂಡಗಣಾತತ ಪಾಂಡುಕುವರನಿಗಾದನು ಭಂಡಿಸೂತ 2 ಆದರೀ ಕೃತಮಾಯ ಕೃತ್ಯಕದಂಡ ಸ- ನ್ಮುದದಿಂದ ವಿದುರನ ಮನೆಯ ಪಾಲುಂಡ 3 ಶ್ರೀವರೀವರಿಯಿಂದ ಸರಸಮಾಡುತಲಿರೆ ಗೋಪಿಯರಿಗೆ ಮೆಚ್ಚಿ ಗೋವುಗಳ ಕಾಯ್ದ 4 ಗೊಲ್ಲರ ಹುಡುಗರ ಪೆಗಲೇರಿ ಮೆರೆದ 5 ಘೋರ ಸಂಸಾರಪಹಾರಿ ನಾರದ ವಂದ್ಯ ಜಾರ ಚೋರ ಕೃತ್ಯ ತೋರಿದ ವರದ 6 ಮಾನವ ದೈತ್ಯ ಗಣರಿಗಾಧಾರ ಮ- ತ್ತಾವ ಕಾಲಕು ಭೇದಭೇದವ ಸೇರಾ 7 ತೇಜಸ್ತಿಮಿರಾದಿ ಸೋಜಿಗ ಶಕ್ತಿಮ- ಹೋಜಸನೀತ ಪರಾಜಯ ರಹಿತಾ 8 ಪರದೇಶಿಯ ಮೇಲೆ ಕರುಣ ಕಟಾಕ್ಷದಿ ಸಿರಿಯೊಡಗೂಡಿ ಬಂದಿರುವ ಶೃಂಗಾರ 9 ಸರ್ವಕಾಲದಿ ತನ್ನ ನೆನವಿತ್ತು ದುಷ್ಕøತ ಪರ್ವತಗಳ ಪುಡಿ ಮಾಡುವ ಧೀರ 10 ತನಯನ ಕಲಭಾಷೆ ಜನನಿ ಲಾಲಿಸುವಂತೆ ಸಾರ 11 ಪೋರಭಾವವ ಶುಭವೇರಿಸುವನು ತುಷ ವಾರಿಯು ಗಂಗೆಯ ಸೇರುವಾಕಾರ 12 ವಿದ್ಯ ಬುದ್ಧಿಗಳಿಲ್ಲದಿದ್ದರು ದಾಸರ ನಿರವದ್ಯ ಬೇಗದಲಿ 13 ಸನ್ನುತ ಕರ್ಮವ ಮನ್ನಿಸನೆಂದಿಗು ಮುರನರಕಾರಿ 14 ಚಿಂತಾಕ್ರಾಂತಿಗಳಿರದಂತೆ ಸರ್ವದ ನಿ- ರಂತರ ಪೂಜೆಗೊಂಬರ ಚಕ್ರಧಾರಿ 15 ನಿರುಪಮಾನಂದ ನಿರ್ಭರ ಪುಣ್ಯಮೂರ್ತಿ ಶ್ರೀವರ ಶೇಷ ಭೂಧರವರನ ಸತ್ಕೀರ್ತಿ 16
--------------
ತುಪಾಕಿ ವೆಂಕಟರಮಣಾಚಾರ್ಯ