ಒಟ್ಟು 698 ಕಡೆಗಳಲ್ಲಿ , 99 ದಾಸರು , 616 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೇಗ ನೀಗಿಸು ದುರ್ಭೋಗದ ಸೆರೆಯ ನಾಗಶಯನ ಬಾಗಿ ಬೇಡುವೆ ಪ ನೀತಿಗೆಡಿಸಿ ಮಂಗನೆನಿಸಿ ಮಾತುಮಾತಿಗೆ ಭಂಗಬಡಿಸಿ ಪಾತಕನೆನಿಸಿ ದಂಗು ಹಿಡಿಸಿ ಘಾತಮಾಳ್ಪ ಹೊನ್ನಿನಾಸೆ 1 ಕುನ್ನಿಯಂದದಿ ಕುಣಿಸಿ ಕುಣಿಸಿ ಬನ್ನ ಬಡಿಸಿ ಬನ್ನಂಗನೆನಿಸಿ ಉನ್ನತ ಸುಖಗೆಲಿಪ ಹೇಸಿ ಗನ್ನಗತಕ ಹೆಣ್ಣಿನಾಸಿ 2 ಮೋಸಪಾಶದೊಳಗೆ ಮುಳುಗಿಸಿ ದೋಷದೆಳಸಿ ಮುತಿಯಕೆಡಸಿ ನಾಶ ಯಮನ ಕೊಲೆಗೀಡೆನಿಸಿ ಘಾಸಿ ಮಾಳ್ಪ ಹೆಣ್ಣಿನಾಸಿ 3 ಇಷ್ಟೆ ಜಗದ ಸುಖವಿದನು ಎಷ್ಟುನಂಬಿ ಫಲವೇನು ಅಷ್ಟು ಮಾಯವೆನಿಸಿ ಎನ್ನನು ನಷ್ಟಗೊಳಿಪ ಕೆಟ್ಟಾಸಿಯನು 4 ಮೀರಿ ಮಹ ಘೋರಬಡಿಸಿ ಸಾರಸುಖದ ಮಾರ್ಗ ಕೆಡಸಿ ಧೀರ ಶ್ರೀರಾಮ ನಿನ್ನ ಮರೆಸಿ ಗಾರುಮಾಳ್ಪ ಪಾಪರಾಸಿ 5
--------------
ರಾಮದಾಸರು
ಬೇಡ ಬೇಡ ಹೋಗೆಂದು ಕಾಡದಿರು ಕೃಪೆಯೊಂದ ಬೇಡದಿರಲಾರೆ ಮಾಂಗಿರಿಯರಂಗ ಪ ಬೇಡುವನ ಕೈ ಕೀಳು ನೀಡುವನ ಕೈ ಮೇಲು ಬೇಡಿದಲ್ಲದೆ ಕೃಪೆಯ ಮಾಡನೈರಂಗಾ ಅ.ಪ ಗಾನಕೆ ನಲಿಯುವೆಯೋ ಧ್ಯಾನಕೆ ಒಲಿಯುವೆಯೋ ಜ್ಞಾನಕೆ ಸಿಗುವೆಯೋ ನಾನರಿಯೆನು ಗಾನದರಿವೆನಗಿಲ್ಲ ಧ್ಯಾನಮಾಡುವನಲ್ಲ ಜ್ಞಾನಾನುಭವವಿಲ್ಲ ಆಧಾರವಿಲ್ಲ 1 ನೀನೆನ್ನ ಕಡೆಗಣಿಸಿ ಹೀನ ಹೋಗೆಂದೆನಲು ನಾನಳುವೆನನವರತ ಶ್ವಾನದಂತೆ ಸೂನು ಬಾ ಬಾರೆಂದು ಸಾನುರಾಗದಿ ರಮಾದೇವಿ ಸಂತೈಪಳು 2 ಎನ್ನಮ್ಮ ಕೃಪೆಯಿಂದ ನಿನ್ನ ಕಾಲ್ವಿಡಿಯೆಂದು ಎನ್ನ ಕಳುಹುತ ನಿನಗೆ ಎನ್ನ ತೋರ್ದು ಎನ್ನನತಿಕೃಪೆಯಿಂದ ಮನ್ನಿಸೆನ್ನುವಳಾಗ ನಿನ್ನ ಕೃಪೆ ಯೆನಗುಂಟು ಮಾಂಗಿರೀಶಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬೇಡಿಕೆಗೆ ಮಿತಿಯಿಲ್ಲ ಬೇಡಿಕೆಗೆ ಕೊನೆಯಿಲ್ಲ ಬೇಡಿ ಬದುಕುವುದೊಂದು ರೋಗವಯ್ಯ ಪ ರೂಢಿಗೊಡೆಯನ ದಿವ್ಯನಾಮಗಳ ಕೊಂಡಾಡಿ ಹಾಡುವವಗೆ ರೋಗಭಯವಿಲ್ಲವಯ್ಯಾ ಅ.ಪ ಬೇಡುವವ ಮನೆಮನೆಗೆ ಓಡೋಡಿ ನಿಲಬೇಕು ನಾಡಿಗರ ನೋಡಿ ಕೈ ನೀಡಬೇಕು ನೋಡಿದರೆ ಕಟ್ಟಾಳು ಬೇಡುವೆ ಹೋಗತ್ತ ದುಡಿ ಗೇಡಿ ಎಂದಾಗ ಗೋಳಾಡಲೇಕಯ್ಯ 1 ಕಂಡ ಕಂಡವರಿಗೆಲ್ಲ ಕೈಮುಗಿದು ಮಂಡೆಯ ಬಾಗಿ ಭಂಡನೆಂದೆನಿಸುವುದು ಮಾನಭಂಗ ಪುಂಡರೀಕಾಕ್ಷ ಗೋವಿಂದ ನಾಮವ ಹಾಡಿ ಕೊಂಡಾಡಲೊದಗುವನು ಮಾಂಗಿರಿಯರಂಗ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬೇಡಿಕೊಂಬೆಗೋಪಾಲ ಬೇಡುವೆನೈ ದಯ ಪ ಮಾಡಿ ಎನ್ನೊಳು ಬೇಗ ಗಾಢ ಮಹಿಮ ವರ ನೀಡೋ ಕೃಪಾಂಬುಧೇ ಅ.ಪ ಮರುಳನಾಗಿ ನಾನು ತಿರುಗುವೆ ಧರೆಯೊಳು ಸಿರಿವರ ನಿಮ್ಮಯ ಚರಣವ ಸ್ಮರಿಸದೆ ಪರಿ ನರಕಕ್ಕೆ ಗುರಿಯಾದೆ ಮುರಹರ ಕರುಣದಿಂ ಮನ್ನಿಸಿ ಪೊರೆ ಸುರವರ 1 ದೀನದಯಾಪರ ಜಾನಕೀ ಮನೋಹರ ನೀನೆ ಗತಿಯೆಂದು ಧ್ಯಾನಿಸಿ ಬೇಡುವೆ ಹೀನನ ಮಾಡದೆ ಧ್ಯಾನಿಪ ಭಕ್ತನಂ ಮಾನದಿಂ ರಕ್ಷಿಸು ವೇಣುಧರಹರಿ2 ಸುರುಪರೀಶ ಹರಿ ಚರಣದಾಸರ ಮೊರೆ ಕರುಣದಿ ಆಲಿಸಿ ಕರಪಿಡಿದು ಪೊರೆ ನೆರೆನಂಬಿದೆ ನಿಮ್ಮ ಚರಣವ ಪರಿಪರಿ ಪರಮಪಾವನ ಮಾಡು ಸಿರಿವರ ಶ್ರೀರಾಮ 3
--------------
ರಾಮದಾಸರು
ಬೇಡುತಿರ್ದೆನು ಕರುಣದಿ ನೋಡು ವರವನು ನೀಡು ಪ ಅನ್ನಪೂರ್ಣೆ ಸುಗುಣಪೂರ್ಣೆ ನಿನ್ನನು ಹೊರತು ಅನ್ಯರ ಕಾಣೆ 1 ಶರ್ವಜಾಯೆ ಶುಭ್ರಕಾಯೆ ಸರ್ವಮಂಗಳೆ ಗುಹ ಗಣಪರ ತಾಯೆ 2 ಮಾರ ಜನನಿ ಪ್ರಿಯನ ಭಗಿನಿ ಸಾರಿದ ಶರಣರ ಪೊರೆವ ಭವಾನಿ 3
--------------
ಲಕ್ಷ್ಮೀನಾರಯಣರಾಯರು
ಬೇಡುವರೊ ಸುಖ ಬೇಡರೊ ದುಃಖವ | ಮಾಡಾರೋ ಅವರ ಉಪಾಯವ | ಜನ | ಬೇಡುವರೋ ಪ ಇಟ್ಟಿಕಲ್ಲನು ತಂದು ಕಿಟ್ಟಿ ಬೀಸುವರೊ | ಕುಟ್ಯಾರೋ ರಂಗವಲ್ಲಿಯಾ | ಜನ 1 ಸಾಲು ಸಾಲೆಮ್ಮೆಯ | ಸೋಲದೆ ತೊಳೆವರು | ಸಾಲಿಗ್ರಾಮಕ್ಕ ಹಾಲೆರೆಯರೊ | ಜನ | 2 ತ್ರಿಜಗವಂದಿತ ನಮ್ಮ ವಿಜಯವಿಠ್ಠಲನ | ಭಜನೆಯಾ ಮಾಡದೆ ಸೋಲ್ವರೋ | ಜನ | 3
--------------
ವಿಜಯದಾಸ
ಬೇಡುವರೋ ಬೇಡುಣುತಿಹ್ಯರೋ ಬೇಡಿ ಬೇಡದಂತೆ ನಾಡೊಳ್ಹರಿದಾಸರು ಪ ಕೊಟ್ಟರೆ ಶ್ಲಾಘನೆ ಮಾಡರೊ ಕೊಡದಿದ್ದರೆ ಸಿಟ್ಟಿಗೆ ಬಾರರೊ ಕೊಟ್ಟಕೊಡವದರೆಲ್ಲ ಅಷ್ಟೆಯೆಂದೆನ್ನುತ ಸೃಷ್ಟಿಗೀಶನ ಘಟ್ಟ ತಿಳಿದಿಹ್ಯರೂ 1 ಸಂಚಿತದಿಂ ಜನ್ಮ ತಾಳಿಹ್ಯರೂ ವಿ ರಂಚಿಪಿತಗೆ ಭಾರಹೊರಿಸಿಹ್ಯರೊ ಹಂಚಿಕಿಯಿಂದ ನಿರ್ವಂಚಿತರಾಗಿ ಬಂದ ಸಂಚಿತಾದಡಾಗಮ ಗೆಲಿಯುವರೊ 2 ಕಾಮಿತಗಳೆಲ್ಲ ಕಡೆದಿಹ್ಯರು ಈ ಭೂಮಿಸುಖಕೆ ಮನಮೋಹಿಸರೊ ನೇಮದಿಂದ ಮಹ ಕ್ಷೇಮವಾರಿಧಿ ಸ್ವಾಮಿ ಶ್ರೀರಾಮ ಪಾದಕ್ಹೊಂದಿಹ್ಯರೊ 3
--------------
ರಾಮದಾಸರು
ಬೇಡುವುದಿಲ್ಲನ್ಯ ನಾನೇನು ನಿನ್ನ ನೋಡಿ ಕರುಣದಿ ಬಾರೋ ಭಜಕನ ತ್ರಾಣ ಪ ಬೇಡುತಕ್ಕುದನೆ ನಾ ಬೇಡುವೆನೆಲೆ ಸ್ವಾಮಿ ನೀಡುತಕ್ಕುದನೆ ನೀ ನೀಡಿ ಕಾಪಾಡಯ್ಯ ಮೃಡಮಿತ್ರ ಜಡಜಾಕ್ಷ ಒಡೆಯ ವೈಕುಂಠ ಅ.ಪ ಎನ್ನಮನೆ ಬಾಗಿಲವ ಕಾಯೆನ್ನದಿಲ್ಲ ಎನ್ನುಳಿಸು ತಂದೆಯನು ತರಿದೆನ್ನದಿಲ್ಲ ಅಣ್ಣನ್ನ ಕೊಲ್ಲಿರಾಜ್ಯಕೊಡು ಎನ್ನದಿಲ್ಲ ಎನ್ನ ಮನೆಯಾಳಾಗಿ ದುಡಿಯೆನ್ನದಿಲ್ಲ ನಿನ್ನ ದಾಸರ ಸಂಗವನ್ನು ಕರುಣಿಸಿ ಎನ್ನನನ್ಯರಿಗೆ ಬಾಗಿಸೆ ಮನ್ನಿಸಿ ಸಲಹೆಂಬೆ ಭಿನ್ನವೇನಿದರೊಳು ಉನ್ನತಮಹಿಮ 1 ಲಲನೆಯಳ ಕೊಡಿಸಣ್ಣನ್ಹೊಡಿದೆನ್ನದಿಲ್ಲ ಬಲವಾಗೆನ್ನಯ್ಯ ಬಂಧುಗಳ ನಾಶಕೆನ್ನೊದಿಲ್ಲ ಬಲಿದೆನ್ನಿಂ ತವ ಭಕ್ತ ನೋಡಿಸೆನ್ನದಿಲ್ಲ ಸುಲಭದೆನ್ನಿಂದ್ಹೆಡಮುರಿ ಕಟ್ಟಿಸಿಕ್ಕೆನ್ನದಿಲ್ಲ ಎಲೆದೇವ ತವಪಾದನಳಿನ ನಿರ್ಮಲಧ್ಯಾನ ನಿಲಿಸು ಸ್ಥಿರವಾಗೆನ್ನ ನಾಲಗೆಯೊಳನುದಿನ ಇಳೆಭೋಗದಳಸದೆ ಸಲೆ ಸುಖದಿ ಸಲಹೆಂಬೆ 2 ಭಿನ್ನವಿಲ್ಲದೆ ಬಾ ನೀ ಕರೆದಲ್ಲಿಗೆನೆನು ಎನ್ನ ಹೊಡೆತದ ಪೆಟ್ಟು ಸೈರಿಸೆಂದೆನೆನು ಉನ್ನತ ಕುಲಗೆಡು ಎನ್ನೊಳುಂಡೆನೆನು ಅನ್ಯಮಾತೊಂದು ನಿನ್ನ ಬಯಸಿ ಬೇಡೆನು ನಾನು ಅನ್ಯರನು ಬೇಡದಂತುನ್ನತ ಪದ ನೀಡಿ ನಿನ್ನ ಮೂರುತಿಯೆನ್ನ ಕಣ್ಣೊಳು ನಿಲ್ಲಿಸಿ ಬನ್ನಬಡಿಸದೆ ಕಾಯೊ ಎನ್ನಯ ಶ್ರೀರಾಮ 3
--------------
ರಾಮದಾಸರು
ಬೇಡುವುದೂ ಬಲು ಕಷ್ಟ ಪ ನೀಡದಿದ್ದವನೇ ನಷ್ಟ ಅ.ಪ. ನಾಚಿಕೆ ಎಲ್ಲನು ತೊರೆದು ಮಹಾ ನೀಚರಿಗೆ ಬಾಯ್ತೆರದು 1 ಕೊಟ್ಟಾರೆಂಬ ದುರಾಶಾ ಕ್ರಿಯಾ ಭ್ರಷ್ಟರರಿಯರೂ ಕ್ಲೇಶಾ 2 ಚಿತ್ತವೃತ್ತಿಯನು ಕಂಡೂ ಅಧಮರ ಹೊತ್ತುಹೊತ್ತಿಗೆ ಕಾಣಿಸಿಕೊಂಡು 3 ಗುಣಹೀನರ ಕೊಂಡಾಡೀ ಬಂದು ಕ್ಷಣಕ್ಷಣಕವರನು ನೋಡೀ 4 ಶ್ರೀದವಿಠಲನ ಬಿಟ್ಟೂ ಅಧಮಾಧಮರಿಗೆ ದೈನಬಟ್ಟು 5
--------------
ಶ್ರೀದವಿಠಲರು
ಬೇಡುವೆ ಇದನಾ ಜೀಯ್ಯಾ ವೆಂಕಟಾರಾಯ ಮಾಡು ಕರುಣವ ಫಲದಾಯ ಪ ಯತಿರತುನತಿ ದಶಮತಿ ಮತದಲಿ ಸ ನ್ನತಿ ಹಿತ ಭಕುತಿಲಿ ಪ್ರತಿದಿನ ಸ ಪಥ ಚತುರತೆ ತತುವೇಷ ತತಿಸಮ್ಮತ ಹಿತವಾಗಿಪ್ಪ ಸುಖಮತಿಯನೀಯೋ 1 ಬಲಬಲ ಬಲರಿಪು ವೊಲಿದೊಲಿದು ಗಿರಿಯಲಿ ಬಲುವೊಲಿಮೆಲಿ ವೊಲಿಸಬಾರದೇ ಕಳವಳಿಸಲು ಬಲಗುಂದಿ ನಲವು ನಿ ಶ್ಚಲವಾಗಿ ಬಲವಾಗಿ ಗಿರಿಯೆಳದೆಲೊ ಸಲಹಿದಿ 2 ತ್ರಿಜಗವೀರ ಧ್ವಜ ಸುಜನರ ನಿಜಪದ ರಜರಜವಾದರು ಭಜಿಸುವ ಸರ್ವದ ವ್ರಜಗಳ ಸಂಗ ದ್ವಿಜನರವಿ ಈ ಮತದಿ ಸಿರಿ ವಿಜಯವಿಠ್ಠಲರೇಯಾ 3
--------------
ವಿಜಯದಾಸ
ಬೇಡುವೆ ತವ ಪಾದವಾ ಪ ಪಾದ ಮಾಡಿ ದಯವನು ಹೋ-ಗಾಡಿಸು ಬವಣೆಯ ನೀಡು ಮನೋದಯ ಅ.ಪ ವಾಹನ ವಿಶ್ವಪಾಲ ಸದ್ಗುಣ ಮಾಲ 1 ಕೇಸರಿ ಮದಹರ ಶರಜನ್ಮ 2 ನಿತ್ಯ ಅನುಜ ಸರ್ವೇಶ ಭವಾನಿಜ 3
--------------
ಬೆಳ್ಳೆ ದಾಸಪ್ಪಯ್ಯ
ಬೇಡುವೆ ನಾ ಯಾದವಾ ಬÉೂೀತಿ ಮನದ ಮೋಹವಾ ಓಡಿಸುತಲಿ ಮಾಧವಾ ನಿನ್ನ ಸೇರಿಕೊಂಬುವಾ ನೀಡು ಇನಿತು ಭಾಗ್ಯವಾ ನಾನು ಇದುವೆ ನನ್ನದು ಮಾನವಗಿದು ಪಾಶವು ದೀನಬಂಧು ಇವನು ನೀ ಮಾಣದೆ ಬಿತಿಸೈ ಪ್ರಭೋ ಬೇಡಿಕೊಂಬೆ ಹೇ ವಿಭೋ ನೀನೆ ಪರಮಸದ್ಗುರು ಹೃದಯದಲ್ಲಿ ನೆಲೆಸಿದಾ ಆತ್ಮರೂಪವನು ಸದಾ ಮುದದಿ ತಿಳಿಯುವಂತೆ ನೀ ಸನ್ಮತಿ ದಯಪಾಲಿಸೈ ಸದಮಲಾತ್ಮಶಂಕರಾ ಬೇಡುವೆ ನಿನಗೀಶ್ವರಾ
--------------
ಶಂಕರಭಟ್ಟ ಅಗ್ನಿಹೋತ್ರಿ
ಬೇಡುವೆ ಪರಿಪಾಲಿಸೆನ್ನ ಪ ಅಗಣಿತ ಮಹಿಮ ಜಗವನುದ್ಧರಿಸುವ | ಘನ ಗುಣಧಾಮ 1 ಪಶುಪತಿ ಪ್ರೇಮ || ಕೌಶಿಕ ಮಖಪರಿ | ಪಾಲಕ ರಾಮ 2 ಪಾವನ ರಾಮ | ಶ್ರೀವರ ರಾಮ || ಪವನಜಸೇವಿತ| ರವಿಕುಲಸೋಮ 3 ದಶರಥರಾಮ | ವಸುಧೀಶ ರಾಮ || ಋಷಿಪತ್ನಿಯಹಲ್ಯೋ| ದ್ಧಾರಕ ರಾಮ 4 ಅಸುರಾರಿ ರಾಮ | ಬಿಸಜಾಕ್ಷ ರಾಮ || ದಶಮುಖಭಂಜನ | ಕೋದಂಡರಾಮ5
--------------
ವೆಂಕಟ್‍ರಾವ್
ಬೇಡುವೆನು ಇದನೊಂದ ಕರುಣಿಸೋ ಹರಿಯೇ ಬೇಡವೆಂಬುದನೆಲ್ಲ ಏಕೀವೆ ಹರಿಯೇ ಪ ಒಪ್ಪಿಡಿಯ ಅವಲಕ್ಕಿಗೊಲಿದವನು ನೀನಂತೆ ಒಪ್ಪದಿಂದೆಲೆಯ ತಿಂದು ತೇಗಿದೆಯಂತೆ ತಪ್ಪುನೂರೆಂಟುಗಳು ಮನ್ನಿಸಿದೆ ನೀನಲ್ತೇ ಸರ್ಪಶಯನನೆ ನಿನ್ನ ನಾಮಭಜನೆಯ ಮಾತ್ರ 1 ಘೋರ ಪಾಪಿಯು ಮಗನ ಕರೆದಾಗ ಕರುಣಿಸಿದೆ ನಾರಿ ಹೊರದೂಡಿದ ತರಳನನು ಕಾಯ್ದೆ ಭಾರಿ ಮಕರಿಯ ಸೀಳಿ ಕರಿಯನೊಂದನು ಕಾಯ್ದೆ ನೀರಜಾಸನಪಿತನೆ ನಿನ್ನ ಸ್ಮರಣೆಯ ಮಾತ್ರ 2 ನಿನ್ನ ನಾಮದ ಭಜನೆ ಎನ್ನ ರಸನೆಯೊಳಿರಲು ಇನ್ನಾವ ಭಾಗ್ಯಗಳ ಬೇಡಲಾರೆನೋ ದೇವ ಪನ್ನಗೇಂದ್ರ ವಿಭೂಷಣ ಪರಿಪಾಲಿಸೈ ಶ್ರೀಶಾ ನಿನ್ನ ಧ್ಯಾನವ ಮಾತ್ರ ಮಾಂಗಿರೀಶ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬೇಡುವೆನು ಉಡಿಯೊಡ್ಡಿ ನಾ ನಿನ್ನ ಭಜಿಸಿ ಮಾಡುದಯ ನಿನ್ನವರ ಒಡನಾಡ ಹರಿಯೆ ಪ ಇಡುವ್ಯೋ ಸಂಸಾರದಿ ಕೊಡು ಬಿಡದೆ ನಿರ್ಮೋಹ ನಡೆಸುವೆಯೊ ಹಿರೇತನದಿ ನುಡಿಸದಿರು ಪಕ್ಷ ಬಡತನದಿ ಇಡುವೆಯೋ ಕಡುಧೈರ್ಯ ಕೃಪೆಮಾಡು ಸಡಗರದ ಸಿರಿಕೊಡುವ್ಯೋ ಕಡುಶಾಂತಿ ನೀಡು 1 ಬೇನೆಯೊಳು ನೂಕುವೆಯೋ ತ್ರಾಣಕೊಡು ತಡೆವ ಬಹು ಮಾನ ಕೊಡುವೆಯೋ ಮೊದಲು ನಾನೆಂಬುದ್ಹರಿಸು ಕಾನನದಿ ತಿರುಗಿಸುವಿಯೋ ಜ್ಞಾನಪಾಲಿಸು ಅಪ ಮಾನವಿತ್ತರೆ ನಿನ್ನ ಧ್ಯಾನದೊಳಗಿರಿಸು 2 ತಿರಿದುಣಿಸಿ ಬದುಕಿಸುವ್ಯೋ ತೋರಿಸು ಜಗದಭಿಮಾನ ಪರಿಪಕ್ವಾನ್ನುಣಿಸುವೆಯೋ ಪರಪಂಕ್ತಿ ಬಿಡಿಸು ದೊರೆತನವ ಕರುಣಿಸುವ್ಯೋ ಕರುಣಗುಣ ವರ ನೀಡು ನರರೊಳಗೆ ಆಡಿಸುವ್ಯೋ ಮರೆಸು ಅನೃತವ 3 ಶರಣರ್ವರ್ತನದೆನ್ನ ನಿರಿಸುವೆಯೊ ಅನುಗಾಲ ನಿರುತು ಧರ್ಮಗಲದ ಸ್ಥಿರಬುದ್ಧಿ ನೀಡು ಮರೆವೆ ಮಾಯವ ತರಿದು ಅರಿವಿನೊಳಿರಿಸುವೆಯೊ ಹರಿಶರಣರಹುದೆನುವ ವರ್ತನವ ನೀಡು 4 ಹರಣಪೋದರು ನಿಮ್ಮ ಚರಣಕ್ಕೆರಗಿದ ಶಿರವ ಪರರಿಗೆರಗಿಸದಿರು ಶರಣಾಗತಪ್ರೇಮಿ ಜರಾಮರಣ ಪರಿಹರಿಸಿ ವರಮುಕ್ತಿ ಪಾಲಿಸಿ ವರದ ಶ್ರೀರಾಮ ನಿಮ್ಮ ಚರಣದಾಸೆನಿಸು 5
--------------
ರಾಮದಾಸರು