ಒಟ್ಟು 5968 ಕಡೆಗಳಲ್ಲಿ , 127 ದಾಸರು , 3551 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ಧನ್ಯನಾ ಪ ಇಂದು ಧನ್ಯನ ಇಂದಿರೇಶನಾ| ಇಂದುವದನವ ಕಂಡೇನಾ| ಕಂದರೊಳಗುದ್ಧಂಡನಾ| ಬಂದು ಪಾಲ್ಬೆಣ್ಣೆ ಉಂಡನಾ 1 ಅರ್ನವೊಪಮ ವರ್ಣಕಾಯಸು| ವಾಹನ ಕರುಣನಾ| ನಿರ್ನಸುವರಣ ನಿಪುಣನಾ| ಸ್ವರ್ಣವಸನಾ ವಿರ್ಣನಾ 2 ಮಹಿಯ ಭಾರವನಿಳುಹಲೋಸುಗ|ದಯ| ಗೃಹದೊಳಗ ತಾಬೆಳೆದನಾ| ಇಹಪರ ಜನ ಹೊರೆದನಾ| ಮಹಿಪತಿಸುತ ವರದನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇಂದು ಧರಿಯೊಳು ಬ್ರಹ್ಮಾನಂದವನು ತುಂಬಿ ತುಳುಕತಿಹ್ಯಾನಂದಮಯ ಕಾಯದೊಳು ಕೌತುಕವು ನಾದಬಿಂದು ಕಳಿಯಲಿ ಸ್ತುತಿಸಲೆನ್ನಳವಲ್ಲ ಕ್ಷಿತಿಯೊಳು ಘನಮಹಿಮೆ ಅತಿಹರುಷವನು ದೋರುತಿಹ್ಯ ಸದ್ಗತಿ ಸುಖವು ಗುರುದಾಸರು 1 ಓಂಕಾರ ಮೊದಲಾದ ಶ್ರುತಿವೇದ ಘೋಷಗಳು ಧಿಮಿಧಿಮಿಸುವ ಮಹಾಶಬ್ದಗಳು ವಾದ್ಯಗಳು ಕೇಳುವದು ನೀದೃಶ್ಯೆಲಿ ಗರ್ಜಿಸುವ ಭೃಂಗಿಶಂಖನಾದ ಧ್ವನಿಯಗಳು ಭೋರಿಡುವ ಭೇರಿ ಮೃದಂಗ ವೇಣಿಯಗಳು ಚಿಣಿ ಚಿಣಿ ತಂತ್ರ ಮೊದಲಾದ ಸಂಕಾರಗಳು ಕೇಳಿ ಪಾವನವಾದೆನು 2 ಬೆರೆದು ನೋಡಲು ಅಂತರಾತ್ಮದೊಳು ಪ್ರಭೆಯಗಳು ಥಳಥಳಿಸುವಾ ಮಹಾತೇಜಗಳು ಪುಂಜಗಳು ಹೇಳಲಿನ್ನೇನದ ಹೊಳವಗಳು ಸುಳವಗಳು ನೋಡುವದು ಅನಿಮಿಷದಲಿ ರವಿ ಶಶಿ ತಾರೆಗಳು ಸೂಸುತಿಹ್ಯ ಕಿರಣಗಳು ಭಾಸಿಸುವ ನಾನಾವರ್ಣಗಳು ಛಾಯಗಳು ಬೆರಗಾದೆÀನಿಂದ 3 ವರ್ತಿಸುತ್ತಲಿಹ ಪ್ರವೃತ್ತಿ ನಿವೃತ್ತಿಗಳು ಅಂತರಾತ್ಮದ ವಾಯುಸ್ತುತಿಯಗಳು ಗತಿಯಗಳು ತಿಳಿವದೀ ಪ್ರಣಮ್ಯಲಿ ಸೂಸುತಿಹ ಶ್ವಾಸವುಚ್ಛ್ವಾಸನಿಯ ಭಾಸಿಗಳು ಶೋಭಿಸುವ ಜೀವನದ ಮಂತ್ರ ಸರ ಮಾಲೆಗಳು ಪಾವನವಾದೆನು 4 ಕರದ್ವಯಂ ಮುಗಿದು ವರಗುರುಚರಣಕಮಲಕಿ ನ್ನೆರಗಿ ಪರಮಾನಂದ ಹರುಷದಿ ಶಿರಸದಿ ಶ್ರೀಗುರುಮೂರ್ತಿಯ ನೆನೆವೆನು ಸದ್ಭಾವದಿಂದ ಸದ್ಗುರು ಪಾದಮಂಪಿಡಿದು ಸದ್ಬ್ರಹ್ಮರಸದೊಳು ಮುಳುಗಿ ಸದ್ಭಕ್ತಿಯಲಿ ಸದ್ಗತಿ ಸಾಧನವು ಸಾಧಿಸಿಹ್ಯ ಮಹಿಪತಿಯು ] ಶ್ರೀ ಗುರುಕೃಪೆಯಲಿನ್ನು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಂದು ನಮ್ಮ ಮನಿಲ್ಯಾನಂದೋಬ್ರಹ್ಮಾ ತಂದೆ ಸದ್ಗುರು ದಯ ಏನೆಂದ್ಹೇಳಲಿ ಸಂಭ್ರಮ ಧ್ರುವ ಹರುಷ ತುಂಬೇದ ಬಹಳ ತೆರವಿಲ್ಲೆಳ್ಳಷ್ಟು ಸ್ಥಳ ಸಿರಿಯನಾಳ್ವ ದಯಾಳ ಹರಿ ಬಂದಾನೆ ಕೃಪಾಳ 1 ಸೂಸುತಲಿ ಸಂತೋಷ ಪಸರಿಸ್ಯದ ಉಲ್ಹಾಸ ಭಾಸುತಾನೆ ಸರ್ವೇಶ ಭಾಸ್ಕರ ಕೋಟಿ ಪ್ರಕಾಶ 2 ಪ್ರಾಣಕಾಗೇದ ಪ್ರಸ್ತ ಮನಕಾಗೇದ ತಾಂ ಸ್ವಸ್ತ ಸಅನುಭವದ ಸುವಸ್ತ ಖೂನಾಗಿ ಬಂದು ಸಾಭ್ಯಸ್ತ 3 ಹೇಳಲಿಕ್ಕಳವಲ್ಲ ಹೊಳವ ಸುಖದ ಸೊಲ್ಲ ತಿಳಿದ ಮಹಿಮೆ ಬಲ್ಲ ಸುಳವು ಸೂಕ್ಷ್ಮವೆಲ್ಲ 4 ಕರ್ತುತಾಂ ದಯಮಾಡಿ ಅರ್ತು ಬಂದೊಡಮೂಡಿಆರ್ಥಿಯಿಂದೆವೆ ನೋಡಿ ಬೆರ್ತು ಮಹಿಪತಿಕೂಡಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಂದು ನಮ್ಮನಿಯಲಿ ಆನಂದ ಬಂದ ನೋಡಿ ಮುಕುಂದ ಗುರುಕೃಪೆಯಿಂದ ಧ್ರುವ ಸದಮಲ ಸುಖಕಲ್ಲೋಳ ಬೆಳಗುದೋರುತಲ್ಯದೆ ಬಹಳ ಹೇಳಲಳವಲ್ಲದು ಬಲುಸೂಕ್ಷ್ಮ ತಿಳಿದವ ತಾ ವಿರಳ ಇಳೆಯೊಳು ನಿಜ ಆನಂದವು ದೋರಿತು ಸ್ವಾನುಭವಕ ಸುಕಾಲ 1 ಮಾಯವಗಂಡು ಧನ್ಯಧನ್ಯಗೈಯಿತು ಜೀವನ ತಾ ಸನ್ಮತ ಸುಖಸವಿಗೊಂಡು ಪುಣ್ಯರಥ ಪರಿಣಾಮದಲನುದಿನ ಮನಬೆರೆಯಿತು ನೆಲೆಗೊಂಡು ಸ್ಮರಣಿಯ ಸವಿದುಂಡು 2 ಸದ್ಗುರು ಎನ್ನೊಡೆಯ ಚಂದವಾಯಿತು ಆನಂದದ ಸುಖವಿದು ಮಹಿಪತಿಗೆಡೆಯಡಿಯ ಸಂದಹರೆವ ಜನ್ಮ ಮರಣದ ಹೇಳಿದ ತಾ ನಿಜನುಡಿಯ ಹೊಂದಿ ಹರುಷಬಡುವಾನಂದವುದೋರುತಿದೆ ಸಿಲುಕಡಿಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದು ನಿಜ ಮತವೇ ನಿಜ ಮತವೇ ಆವನ ಪದ ಜಲ ಮೌಳಿಯಲ್ಲಿಟ್ಟ ಮಹ ಪ ದೇವನು ಹರಿಸಮನೆಂತು ಪರಿ ಜಗದೊಳಾಡುವ ಶಕ್ತಿ 1 ಭುವನೇಶ ಸರಿಯೆ ಹೇಳೆಂತು ಅವನ ಗ್ರಂಥದ ಲೇಖಕ ಗಣಪನು 2 ಕಾವನಯ್ಯನ ಸಮನೆಂತು ಅವನ ತೇಜದಿ ಬೆಳಗುವ ದಿನಪನು ಗೋವಿಂದ ಸರಿಯನೆಂತು 3 ಗುರು ಮಹಿಪತಿ ಪ್ರಭು ಹರಿಪರವೆನ್ನದ ನರರಿಗೆ ಮುಕ್ತಿಯಹದೆಂತು4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇಂದು ನೋಡುವ ಇಂದಿರಾಪತಿ ಶ್ರೀಪಾದವ ಎಂದೆಂದು ಬಿಡದೆ ಮನದಲಿ ತಂದೆ ಮುಕುಂದನ ಹೊಂದಿ ಭಜಿಸುವ ಧ್ರುವ ಭಾವಭಕುತಿಗಳ ವಿಡಿವ ಭವಬಂಧನದ ಪಾಶ ಕಡಿವ ದಿವಾರಾತ್ರಿಯಲಿ ಹರುಷಬಡುವ ಕಾವಕರುಣನ ಕೃಪೆಯ ಪಡೆವ 1 ಮನಕರಗಿ ಮೈಯ್ಯಮರೆವ ಘನಸುಖದ ಸುಸ್ಮರಣಿಯಲಿರುವ ಆನಂದಮಯಸ್ವರೂಪದಿ ಬೆರೆಯುವ ತನುಮನವು ಶ್ರೀಹರಿ ಗೊಪ್ಪಿಸುವ 2 ಎರಗಿ ಏಕವಾಗಿ ನೊಡುವ ಹರಿಚರಣದಿ ಬೆರೆದು ಕೊಡುವ ಪರಮಗತಿ ಸಾಯೋಜ್ಯಪಡುವ ಧರೆಯೊಳು ನಲಿ ನಲಿದಾಡುವ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದು ಪರಬ್ರಹ್ಮದ ನೆಲೆಯು ಇಹಪರವೆಂಡನು ಗೆಲು ವದು ಗುರು ಕರುಣಾನಂದದ ಬೆಳಗಹುದÀಹುದು ಧ್ರುವ ಮಾತಿಗೆ ದೊರೆಯದಿದು ಅನುದಿನ ಭೇದಿಸದಲ್ಲದೆ ಕಾಣಿಸದು ಮುನ್ನಬಾರನು ಕಾಣಿಕಿಗೆಂದು ಅಳವಹುದೆ 1 ಸದ್ಗತಿಮೋಕ್ಷವು ಮಾರಗವು ಸಾಭ್ಯಸ್ತವಾಗದೆ ಸಾಕ್ಷಾತ್ಕಾರದಿ ಪ್ರತ್ಯಕ್ಷ ಪ್ರಮಾಣವಿವು ಇದು ಎಂದಿಗೆ ತಿಳಿಯದು ಭೇದಕನಲ್ಲದೆ ಸೋಹ್ಯ ಸೊನ್ನೆಯ ಮತಿಹೀನರಿಗಿದು ಅಳವಹುದೆ 2 ಲೋಲ್ಯಾಡುವ ನಿಜ ಮಂದಿರವು ಭೂಮಂಡಲದೊಡೆಯನ ಚರಣಕಮಲವಿದು ಒಡಿಯನ ಕೃಪಾದೃಷ್ಟಿಯಿದು ಕರವ ಮನದೊಳು ತ್ರಾಹಿ ತ್ರಾಹಿ ಎನುತಲಿನ್ನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಂದು ಬನ್ನಿ ಇಂದಿರೇಶಾ ಇಂದುವಾರದಲಿ ಬಲು | ಅಂದದಿಂದ ಮೆರೆವನಂದವ ನೋಡಾ ಪ ಮುತ್ತಿನ ಕಿರೀಟ ಮೇಲೆ ಸುತ್ತಿದ ಲತೆ ತಳಲು | ರತ್ನಗಂಬಳಿ ಕಲ್ಲಿಯ ಬುತ್ತಿ ಪೆಗಲೂ || ತೂತ್ತುತೂರಿ ಎಂದು ಸ್ವರ | ವೆತ್ತಿ ಊದುವ ಕೊಳಲು | ಉತ್ತಮ ಶೋಕ್ಲವನು ಮೆರೆಯುತ್ತಲಿಪ್ಪುದು 1 ಉಂಗುರಗೂದಲು ಪುಬ್ಬು ಸಿಂಗಾಡಿ ಅಂದದಿ ಒಪ್ಪೆ | ಅಂಗಾರ ಕಂಕಣ ಮಂಗಳಾಂಗ ನಿಸ್ಸಂಗ | ರಂಗ ತುಂಗ ಮಹಿಮ ತಾರಂಗ ಅಂಗುಲಿಲಿ ರತ್ನ | ದುಂಗುರವ ಯಿಟ್ಟ ಸುಖಂಗಳ ನೋಡಾ 2 ಉಂಗುರವ ನಡು ಮೇಲು ಕಂಗಳ ಕುಡಿನೋಟ | ಗೋಪಾಂಗನೇರ ಮನಕೆ ಮೋಹಂಗಳ ತೋರೆ | ಅಂಗಜನ್ನೆನೆಸಿ ತಾಪಂಗಳು ವೆಗ್ಗಳದಿಂದ | ಹಂಗೀಗರಾಗೆ ನಗುವ ಗಂಗಾಜನಕ 3 ಲೋಕ ಬೆಲೆಗೊಂಬ ಅಲೌಕೀಕ ಮಣಿನಾಸದಲ್ಲಿ | ರಾಕಾಬ್ಜಾನಂದದಿ ಮೊಗಾನೇಕ ಲೋಕೇಳಾ | ನಿತ್ಯ ಬೇಕೆಂದು ಜಪಿಸಲು ದೊರಕದ ದೊಂಬಲು ಬಾ ಯದುಕುಲಾಂಬರಾ4 ಕುಂಡಲ ಕರ್ಣ ಶ್ರೀಗಂಧ ಪೂಸಿದ ವಕ್ಷ | ಪೂಗೊಂಚಲು ಸಣ್ಣನಾಮ ಆ ಗೆಜ್ಜೆಧ್ವನಿ | ಆಗಮನ ಸೋಲಿಸೆ ನಾನಾ ಭೋಗಾದಲ್ಲಿಯಿಪ್ಪ | ಮಧ್ವ | ಯೋಗಿಪ್ರಿಯಾ ವಿಜಯವಿಠ್ಠಲಾ ಗುಣನಿಧಿ 5
--------------
ವಿಜಯದಾಸ
ಇಂದು ಭಕ್ತರು ಬಂದರೆಂದು ಗೋವಿಂದ ತಾ ನಲೆದಾಡಿದ ಗೋಪಾಲ ತಾ ನಲೆದಾಡಿದ ಪ. ಹರಿಯು ಆಡಿದ ಮಾತು ದೊರೆ ಧರ್ಮನು ಕೇಳಿಕರುಣಾಳು ನಿಮ್ಮ ಕೃಪೆಯಿಂದ ಕರುಣಾಳು ನಿಮ್ಮ ಕೃಪೆಯಿಂದಪರಮ ಆಶೀರ್ವಾದ ಇರಲುಂಟು1 ಮುತ್ತಿನ ಮಂಚದ ಹತ್ತಿಲೆ ಸಾಲಾಗಿಮತ್ತ ಪಾಂಡವರು ಕುಳಿತರುಮತ್ತ ಪಾಂಡವರು ಕುಳಿತರು ಹರುಷದಿಭಕ್ತವತ್ಸಲನ ಮುಖನೋಡಿ 2 ಹಸಿರು ಪಚ್ಚವ ಬಿಗಿದ ಕುಸುರು ಸಿಂಹಾಸನದೇಶಕೆಲ್ಲ ಬೆಳಕು ಎಸೆಯುತದೇಶಕೆಲ್ಲ ಬೆಳಕು ಎಸೆವೊ ಸಿಂಹಾಸನದಿವಸುಧಿಪಾಲಕರು ಕುಳಿತರು 3 ಇಂದ್ರಾದಿಗಳು ಮುನಿವೃಂದ ಸಹಿತಾಗಿ ಬಂದು ಒಂದೆ ಮನದಲೆ ಕುಳಿತರು ಒಂದೆ ಮನದಲೆ ಕುಳಿತರು ದೇವಕಿನಂದನ ನೋಡಿ ಹರುಷಾಗಿ 4 ರನ್ನ ಮಾಣಿಕ ಬಿಗಿದ ಹೊನ್ನಮಂಚಕೆಹೊಂದಿ ಕನಿ ಸುಭದ್ರೆ ದ್ರೌಪದಿಕನಿ ಸುಭದ್ರೆ ದ್ರೌಪದಿ ಕುಳಿತರುಚನ್ನ ಕೃಷ್ಣಯ್ಯನ ಮುಖನೋಡಿ5 ಚಿತ್ರ ವಿಚಿತ್ರದ ರತ್ನಗಂಬಳಿ ಮ್ಯಾಲೆಪುತ್ರರ ಸಹಿತ ಹರುಷದಿಪುತ್ರರ ಸಹಿತ ಹರುಷದಿ ಕುಳಿತರು ಭಕ್ತವತ್ಸಲನ ಮುಖ ನೋಡಿ 6 ಸಾಲು ದೀವಿಗೆಯಂತೆ ಬಾಲೆಯರುಕುಳಿತಾರೆ ಬಾಲರ ಸಹಿತ ಹರುಷದಿಬಾಲರ ಸಹಿತ ಹರುಷದಿ ರುಕ್ಮಿಣಿ ನಿಂತಿಹಳು ಲೋಲ ರಾಮೇಶನ ಮುಖನೋಡಿ7
--------------
ಗಲಗಲಿಅವ್ವನವರು
ಇದು ಯಾತರ ಜ್ಞಾನಾ ಪ ವೇದವನೋದಿ ವಿವಾದವ ಮಾಡಿ | ಸಾಧಿಸಿದ್ಯಭಿಮಾನಾ 1 ಬೆಟ್ಟವ ಶೋಧಿಸಿ ಕಷ್ಟದಿ ಇಲಿಯಾ | ನೆಟ್ಟನ ತೆಗೆದೇನಾ 2 ಘನಗುರು ಮಹಿಪತಿ ಸ್ವಾಮಿಯ ನೆನೆದು | ಅನುದಿನವಿಡೀ ಧ್ಯಾನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇದು ರಕ್ಷಿಸುವಂಥ ಕಾಲ ಚಿಕ್ಕ ಮುದನೂರ ಗೋಪಾಲ ಮುನಿಜನಲೋಲ ಪ ನಿತ್ಯಾನಂದ ಭಕ್ತಮಂದಾರ ಮೊರೆಹೊಕ್ಕೆ ಸಲಹೆನ್ನ ಮುದದಿಂದ ನೀ ಕರುಣಾತೋರಿ ತ್ವರ ಕಾಯೋ ಗೋವಿಂದ 1 ಸರ್ವೋತ್ತಮ ವೆಂಕಟರಮಣ | ಭವ ನಿಃಶ್ಯಂಕ ನಿರಾಮಯ 2 ವಿಠಲ ಹರ್ಷದಿ ಬಂದು ಶರಣೆಂಬೆ ದೀನ ದಯಾಪರ ಮುರಹರ ಮುರಲೀಧರ ಅಗಣಿತಾವತಾರ 3
--------------
ಹೆನ್ನೆರಂಗದಾಸರು
ಇದು ವಿವೇಕವಲ್ಲಾಪ ಸತ್ಸಂಗವಾರೇ ನೀ ಬಯಸುವಿ ಮದಾ | ಮತ್ಸರಗಳಿದಿಲ್ಲಾ 1 ಬೆಲ್ಲೊಳಗಿನ ಕಲ್ಲಿನಂತಂಗದೊಳಗೆ ಖುಳ್ಳತಣವೇವೆಲ್ಲಾ 2 ಮಹಿಪತಿಜನ ನುಡಿಮನ್ನಿಸಿನ್ನಾರೇ | ಅಹಿತವಗುಣ ಸಲ್ಲಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇಂದು ಶೇಖರ ರಕ್ಷಿಸೋ ಎನ್ನ ತಂದೆ ಶಂಕರ ಹಿಂದೆ ಪೊಂದಿದ ದೇಹದ ಮತ್ತಿಂದು ಹಿಡಿಯುತ ಪ ಹಿಂದೆ ಬಿಸುಟೊಡಲು ಮರು ಕೊಳಿಸಿ ಸಾರಿ ಬಂದುದು ತಂದೆ ತಾಯಿಯ ಗಣನೆ ಉರ್ವಿಸಿಕವನು ಮೀರಿತು ಅಂದು ಮೊದಲು ಜನನೀಸ್ತನವನುಂಡು ಪಾಲಸವಿದುದು ಇಂದು ಕಂದು ಗೊರಳನೆ 1 ಕಾಲ ಬಾಲವನಿತೆ ಬಾಳು ಬದುಕಿನೊಳಗೆ ತೊಳಲಿ ಬಳಲಲು ಕಾಯದೊಳಗೆ ಮುಸುಕಲು ಕೊಳುವೋದೆ ಯಮಗೆ ಶೂಲ ಪಾಣಿ ನೀಲಕಂಠನೆ 2 ಎನ್ನದಾನದೆಂಬ ಹಮ್ಮವಶದಿ ಸುಮ್ಮನೆ ಹೊನ್ನು ಹೆಣ್ಣು ಮಣ್ಣು ಮೂರು ತನ್ನದೆಂದು ನಂಬುತ ಬನ್ನ ಬಟ್ಟು ಸಾಯುತ ಭವದಶರಧಿ ಬೇಗೆಯನ್ನು ಈಸಲಾರೆನೋ 3 ಸಿಂಧು ತೆರೆಯೊಳು ಮಂದ ಗಜವು ಕುಣಿಯೋಳ್ ಬಿದ್ದು ಏಳಲಾರದಂದದಿ ಇಂದ್ರಜಾಲದೊಳಗೆ ಸಿಲುಕಿಮಂದಗೆಟ್ಟು ನೊಂದೆನೋ 4 ದುರಿತ ಮರಣ ಕಾಲದೊಳಗೆ ನಾಮಸ್ಮರಣೆ ಯಾದಗುವಂದದಿ ತರಣಿ ತಮವ ಕಡಿಸಿ ಧರೆಯ ಬೆಳಗುವಂತೆ ಹೃದಯದಿ ಕರುಣದಿಂದಲಿ ನಿರುತಸಲಹೋ ಇಕ್ಕೆರಿ ಅಘೋರೇಶಲಿಂಗನೆ 5
--------------
ಕವಿ ಪರಮದೇವದಾಸರು
ಇಂದು ಸೈರಿಸಿರಿ ಶ್ರೀಕೃಷ್ಣನ ತಪ್ಪ ಪ ಮುಂದಕೆ ನಿಮ್ಮ ಮನೆಗೆ ಬಾರನಮ್ಮಅ ಮಗುವು ಬಲ್ಲುದೆ ಇಷ್ಟು ಬೆಣ್ಣೆಯ ಕದ್ದರೆಬಿಗಿಯ ಬಹುದೇ ಶ್ರೀ ಚರಣವನುಅಗಣಿತ ಮಹಿಮನ ಅಂಜಿಸಲೇಕಮ್ಮಬಗೆಯ ಬಾರದೆ ನಿಮ್ಮ ಮಕ್ಕಳಂತೆ 1 ಹಸುಮಗುವನು ಕಂಡು ಮುದ್ದಿಸಲೊಲ್ಲದೆಹುಸಿಗ ಕಳ್ಳನೆಂದು ಕಟ್ಟುವಿರಿವಸುಧೆಯೊಳಗೆ ನಾನೊಬ್ಬಳೆ ಪಡೆದೆನೆ ನಿಮ್ಮಹಸು ಮಗುವಿನಂತೆ ಭಾವಿಸಬಾರದೆ 2 ಎಷ್ಟು ಸಾರಿಯು ನಾ ಬೇಡವೆಂದರೆ ಕೇಳದುಷ್ಟ ಮಕ್ಕಳ ಕೂಡೆ ಒಡನಾಟವಕಟ್ಟಿದ ನೆಲುವಿನ ಬೆಣ್ಣೆಯನೀವೆನುಬಿಟ್ಟು ಕಳುಹಿರಮ್ಮ ಆದಿಕೇಶವನ 3
--------------
ಕನಕದಾಸ
ಇದು ಹೊಂದಿಕೆಯಲ್ಲಾ ಭಕುತಿಗೆ ಪ ಗುರುವೆಂದಾಡುತ ನೆರೆನರನಂಬಿ | ಪರಗತಿ ಮಾರ್ಗವ ಎಂತು ನೀ ಕಾಂಬಿ 1 ಕಲ್ಲಿನೊಳಗ ಹರಿಭಾವಿಸಿ ನುಡಿವೀ | ಇಲ್ಲಿ ನೋಡೆಂದರ ಸಂಶಯ ಹಿಡಿವೀ 2 ನುಡಿಯಾಪಸಾರ ಸಂಗಡಿಯೊಳು ಬೆರೆದು | ಧೃಡಗೊಳ್ಳಲಿಲ್ಲ ವಿವೇಕದ ಸಂದು 3 ಹಮ್ಮಿಲಿ ಕೇಳದೇ ಜ್ಞಾನದ ಗುಟ್ಟು | ಧರ್ಮ ಜರಿದು ಜನ ಹೋಯಿತು ಕೆಟ್ಟು 4 ತಂದೆ ಮಹಿಪತಿ ಕರುಣಿಸದನಕಾ | ಎಂದಿಗೆ ದೊರೆಯದು ಸ್ವಾತ್ಮದ ಸುಖಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು